Tag: US Goods

  • ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್‌

    ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್‌

    – ವರ್ಷಗಳ ಹಿಂದೆಯೇ ಭಾರತ ಈ ಹೆಜ್ಜೆಯನ್ನಿಡಬೇಕಿತ್ತು
    – ಭಾರತದೊಂದಿಗೆ ನೇರ ಯುದ್ಧಕ್ಕಿಳಿದ್ರಾ ಟ್ರಂಪ್‌?

    ವಾಷಿಂಗ್ಟನ್‌: ಭಾರತದ ಆಮದು ಸರಕುಗಳ ಮೇಲೆ 50% ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಇದೀಗ ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ʻಏಕಪಕ್ಷೀಯ ವಿಪತ್ತುʼ ಒನ್‌ ಡೈಡ್‌ ಡಿಸಾಸ್ಟರ್‌ (one-sided disaster) ಎಂದು ಕರೆದಿದ್ದಾರೆ.

    ಭಾರತದೊಂದಿಗಿನ ವ್ಯಾಪಾರ ಸಂಬಂಧಗಳ ಕುರಿತು ಸೋಮವಾರ ಟ್ರಂಪ್ ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಭಾರತವು ಅಮೆರಿಕಕ್ಕೆ ಹೆಚ್ಚಿನ ಸರಕುಗಳನ್ನು (Good) ರಫ್ತು ಮಾಡುತ್ತದೆ. ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ. ಇದು ಬಹಳ ಕಡಿಮೆ ಜನರಿಗೆ ತಿಳಿದಿದೆ. ಅವರು ನಮಗೆ ಬೃಹತ್‌ ಪ್ರಮಾಣದ ಸರಕುಗಳನ್ನು ರಫ್ತು ಮಾಡುವುದರಿಂದ ಭಾರತದ ಅತಿದೊಡ್ಡ ಕ್ಲೈಂಟ್‌ ನಾವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

    ಭಾರತ ನಮಗೆ ಬೃಹತ್‌ ಪ್ರಮಾಣದ ಸರಕು ರಫ್ತು ಮಾಡುತ್ತದೆ. ಆದ್ರೆ ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡುತ್ತೇವೆ. ಕಡಿಮೆ ಸರಕುಗಳನ್ನ ರಫ್ತು (US Goods) ಮಾಡುತ್ತೇವೆ. ಇಲ್ಲಿಯವರೆಗೆ ಸಂಪೂರ್ಣವಾಗಿ ಏಕಪಕ್ಷೀಯ ಸಂಬಂಧ ಇದಾಗಿದೆ. ಇದು ಹಲವು ದಶಕಗಳಿಂದ ನಡೆತ್ತಿರುವ ‘ಏಕಪಕ್ಷೀಯ ವಿಪತ್ತು’ ಎಂದು ಟ್ರಂಪ್ ಕರೆದಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

    ಭಾರತದ ಸುಂಕವು ವಿಶ್ವದಲ್ಲೇ ಅತ್ಯಧಿಕವಾಗಿದೆ
    ಅಲ್ಲದೇ ಇಲ್ಲಿಯವರೆಗೆ ಭಾರತವು (India) ವಿಶ್ವದಲ್ಲೇ ಅತ್ಯಧಿಕ ಆಮದು ಸುಂಕವನ್ನು (Tariffs) ವಿಶಿಸುತ್ತಿದೆ. ಆದ ಕಾರಣ ಅಮೆರಿಕದ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡಲು ಕಷ್ಟಕರವೆನಿಸಿದೆ. ಅಲ್ಲದೇ ಭಾರತವು ರಷ್ಯಾದಿಂದ ಬೃಹತ್‌ ಪ್ರಮಾಣದಲ್ಲಿ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತದೆ. ಆದ್ರೆ ಅಮೆರಿಕದಿಂದ ಕಡಿಮೆ ಖರೀದಿ ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ.

    ಮುಂದುವರಿದು.. ಭಾರತವು ಈಗ ಅಮೆರಿಕದ ಆಮದುಗಳ ಮೇಲಿನ ಸುಂಕ ಕಡಿಮೆ ಮಾಡಲು ಮುಂದಾಗಿದೆ. ಆದ್ರೆ ಇದು ತುಂಬಾ ತಡವಾಗಿದೆ. ಭಾರತ ಈ ಹೆಜ್ಜೆಯನ್ನು ವರ್ಷಗಳ ಹಿಂದೆಯೇ ತೆಗೆದುಕೊಳ್ಳಬೇಕಿತ್ತು ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಪುಟಿನ್‌, ಮೋದಿ, ಜಿನ್‌ಪಿಂಗ್‌ ಮಾತುಕತೆ – Video Of The Day ಎಂದ ರಷ್ಯಾ

    ಪಾಕ್‌ಗಿಂತಲೂ ಭಾರತಕ್ಕೆ ಸುಂಕ ಅಧಿಕ
    ಈ ಹಿಂದೆ 25% ಆಮದು ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌, ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಬಳಿಕ ಆಗಸ್ಟ್‌ 27ರಿಂದ ಅನ್ವಯವಾಗುವಂತೆ 50% ಸುಂಕ ವಿಧಿಸಿದ್ದಾರೆ. ಆದ್ರೆ ಪಾಕಿಸ್ತಾನದ ಆಮದಿನ ಮೇಲೆ ಟ್ರಂಪ್‌ 19% ಸುಂಕ ಮಾತ್ರ ವಿಧಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ ಸೋಮವಾರ ಷೇರುಪಟೆ ಚೇತರಿಕೆ ಕಂಡಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್‌ ಆಪ್ತನಿಂದ ಜಾತಿ ಅಸ್ತ್ರ

  • ಏ.10ರಿಂದ ಅಮೆರಿಕದ ಸರಕುಗಳ ಮೇಲೆ 34% ಆಮದು ಸುಂಕ – ಚೀನಾ ಪ್ರತೀಕಾರದ ಸುಂಕಕ್ಕೆ ದೊಡ್ಡಣ್ಣ ಗರಂ

    ಏ.10ರಿಂದ ಅಮೆರಿಕದ ಸರಕುಗಳ ಮೇಲೆ 34% ಆಮದು ಸುಂಕ – ಚೀನಾ ಪ್ರತೀಕಾರದ ಸುಂಕಕ್ಕೆ ದೊಡ್ಡಣ್ಣ ಗರಂ

    ಬೀಜಿಂಗ್‌/ವಾಷಿಂಗ್ಟನ್‌: ಅಮೆರಿಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿ ಸುಂಕ (China imposes tariffs) ವಿಧಿಸಿದ ಬೆನ್ನಲ್ಲೇ ವಿಶ್ವ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಇದರ ಬೆನ್ನಲ್ಲೇ ಚೀನಾ ಕೂಡ ಅಮೆರಿಕಕ್ಕೆ ಪ್ರತಿ ಸುಂಕ ವಿಧಿಸಿದೆ.

    ಇದೇ ಏಪ್ರಿಲ್‌ 10ರಿಂದಲೇ ಅಮೆರಿಕದ (USA) ಎಲ್ಲಾ ಆಮದುಗಳ ಮೇಲೆ 34% ಪ್ರತಿ ಸುಂಕ ವಿಧಿಸುವುದಾಗಿ ಚೀನಾ ಘೋಷಿಸಿದೆ. ಟ್ರಂಪ್‌ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಚೀನಿ ವಸ್ತುಗಳ ಮೇಲೆ ಶೇ.34 ಸುಂಕ ವಿಧಿಸಿದ ಬಳಿಕ ಚೀನಾದ ನಿರ್ಧಾರ ಹೊರಬಿದ್ದಿದೆ. ಈ ಮೂಲಕ ಅಮೆರಿಕದ ಬಳಿಕೆ ತೆರಿಗೆ ಹೆಚ್ಚಳ ಮಾಡಿದ ಮೊದಲ ದೇಶವಾಗಿದೆ. ಇದನ್ನೂ ಓದಿ: ಇದೇ ನೋಡಿ ಅಮೆರಿಕ ಪೌರತ್ವದ ಗೋಲ್ಡನ್ ಕಾರ್ಡ್ – 43 ಕೋಟಿ ರೂ. ಗೋಲ್ಡ್ ಕಾರ್ಡ್ ಫಸ್ಟ್ ಲುಕ್ ರಿಲೀಸ್

    Narendra Modi great friend of mine Donald Trump Announces 26 percentage Discounted Reciprocal Tariff On India

    ಇನ್ನು ಅಮೆರಿಕ ಮತ್ತು ಚೀನಾ ದೇಶಗಳ ತೆರಿಗೆ ಏರಿಕೆಯು ಜಾಗತಿಕ ವ್ಯಾಪಾರ ಯುದ್ಧವು ಮಾರುಕಟ್ಟೆಗಳನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಅಂದರೆ ಟ್ರಂಪ್ ಹೊಸ ತೆರಿಗೆ ಘೋಷಣೆ ಬೆನ್ನಲ್ಲೇ ಜಗತ್ತಿನಾದ್ಯಂತ ಷೇರುಮಾರುಕಟ್ಟೆಗಳು ತಲ್ಲಣಗೊಂಡಿವೆ. ಇದೀಗ ಚೀನಾ ಕೂಡ ಹೊಸ ಸುಂಕ ಘೋಷಣೆ ಮೂಲಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಚೀನಾ ಪ್ರತಿ ಸುಂಕ ಘೋಷಣೆ ಬೆನ್ನಲ್ಲೇ ಯೂರೋಪಿಯನ್ ಒಕ್ಕೂಟ ಕೂಡ ತನ್ನ ತೆರಿಗೆ ಪರಿಷ್ಕರಣೆ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿದೆ ಎಂದು ವರದಿಗಳು ತಿಳಿಸಿವೆ.

    ಇನ್ನೂ ಚೀನಾ ವಿಧಿಸಿರುವ ಸುಂಕದ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್‌, ಚೀನಾ ಹೆದರಿದೆ, ಅದಕ್ಕಾಘಿ ತಪ್ಪಾಗಿ ಆಡುತ್ತಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ನನ್ನ ಫ್ರೆಂಡ್‌ ಎನ್ನುತ್ತಲೇ ಭಾರತದ ವಸ್ತುಗಳಿಗೆ 26% ಪ್ರತಿ ಸುಂಕ ಘೋಷಿಸಿದ ಟ್ರಂಪ್‌

    ಕಳೆದ ಜನವರಿ 20 ರಂದು ಟ್ರಂಪ್‌ 2ನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಚೀನಿ ಆಮದು ವಸ್ತುಗಳ ಮೇಲೆ ಶೇ.10 ರಷ್ಟು ಪ್ರತಿಸುಂಕವನ್ನು 2 ಬಾರಿ ಹೆಚ್ಚಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ