Tag: US Elections

  • ಭಾರತದಲ್ಲಿ ಒಂದೇ ದಿನ 64 ಕೋಟಿ ಮತ ಎಣಿಕೆ – ಮಸ್ಕ್‌ ರಿಯಾಕ್ಷನ್‌ ಏನು?

    ಭಾರತದಲ್ಲಿ ಒಂದೇ ದಿನ 64 ಕೋಟಿ ಮತ ಎಣಿಕೆ – ಮಸ್ಕ್‌ ರಿಯಾಕ್ಷನ್‌ ಏನು?

    ವಾಷಿಂಗ್ಟನ್‌: ಈ ಹಿಂದೆ ಚುನಾವಣೆಗಳಲ್ಲಿ ಬಳಸುವ ಇವಿಎಂ (EVM) ಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ (Elon Musk) ಇದೀಗ ಭಾರತದಲ್ಲಿ ಮತ ಎಣಿಕೆಯ ಕುರಿತು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

    ನಿನ್ನೆಯಷ್ಟೇ ಜಾರ್ಖಂಡ್‌, ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಇದರೊಂದಿಗೆ 14 ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳು ಹಾಗೂ 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಏಣಿಕೆಯೂ ಒಂದೇ ದಿನ ಪೂರ್ಣಗೊಂಡಿದೆ. ಈ ಬೆನ್ನಲ್ಲೇ ಮಸ್ಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಇವಿಎಂ ಹ್ಯಾಕ್ ಮಾಡಬಹುದು – ಭಾರತದಲ್ಲಿ ಕಿಚ್ಚು ಹೊತ್ತಿಸಿದ ಮಸ್ಕ್!

    ಮತದಾನದ 19 ದಿನಗಳ ನಂತರವೂ ಕ್ಯಾಲಿಫೋರ್ನಿಯಾದಲ್ಲಿ (California) ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಅಧಿಕೃತವಾಗಿ ಪ್ರಕಟಿಸದ ಹಿನ್ನೆಲೆಯಲ್ಲಿ ಎಲಾನ್‌ ಮಸ್ಕ್‌ ವರದಿಯೊಂದನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅಮೆರಿಕ ಚುನಾವಣೆಯ ಮತ ಏಣಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಖಾತೆ ತೆರೆಯದ ʻಜನ್‌ ಸೂರಜ್‌ʼ – ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್‌ಗೆ ಮುಖಭಂಗ

    ಭಾರತವು ಒಂದೇ ದಿನ 64 ಕೋಟಿ ಮತಗಳನ್ನು ಎಣಿಕೆ ಮಾಡಿದೆ. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಎಣಿಕೆ ನಡೆಯುತ್ತಲೇ ಇದೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ತಲೆ ಬಡಿದುಕೊಳ್ಳುತ್ತಿರುವ (ಕರ್ಮ ಎನ್ನುವಂತೆ) ಎಮೋಜಿಯೊಂದನ್ನ ಹಂಚಿಕೊಂಡಿದ್ದಾರೆ.

    ಕ್ಯಾಲಿಫೋರ್ನಿಯಾದಲ್ಲಿ 98 ಪ್ರತಿಶತದಷ್ಟು ಮತ ಎಣಿಕೆ ಪೂರ್ಣಗೊಂಡಿದೆ ಆದ್ರೆ ಅಧಿಕೃತ ಪ್ರಕಟಣೆ ಇನ್ನೂ ಬಾಕಿಯಿದೆ. ಅಮೆರಿಕದ ಅತಿದೊಡ್ಡ ನಗರವಾಗಿರುವ ಕ್ಯಾಲಿಪೋರ್ನಿಯಾ ಸುಮಾರು 3.9 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಈ ಕೈಪಿ 1.6 ಕೋಟಿಗಿಂತಲೂ ಅಧಿಕ ಜನ ನವೆಂಬರ್‌ 5ರಂದು ಮತದಾನದಲ್ಲಿ ಭಾಗಿಯಾಗಿದ್ದರು.

    ಸದ್ಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈಗಾಗಲೇ ಡೊನಾಲ್ಡ್‌ ಟ್ರಂಪ್‌ 2ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಜನವರಿ ವೇಳೆಗೆ ಅಧಿಕೃತ ಘೋಷಣೆಯಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಎನ್‌ಡಿಎ ‘ಮಹಾ’ ಸುನಾಮಿ- ಕಾಂಗ್ರೆಸ್ ‘ಆಘಾಡಿ’ ಕೂಟ ಛಿದ್ರ ಛಿದ್ರ – ಯಾರಿಗೆ ಎಷ್ಟು ಸ್ಥಾನ?

    ಈ ಹಿಂದೆ ಚುನಾವಣೆಗಳಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಎಲಾನ್ ಮಸ್ಕ್ ಅನುಮಾನ ವ್ಯಕ್ತಪಡಿಸಿದ್ದರು. ಹ್ಯಾಕರ್‌ಗಳು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಇವಿಎಂಗಳನ್ನು ಹ್ಯಾಕ್ (Hacking) ಮಾಡಬಹುದು. ಹಾಗಾಗಿ, ಇವಿಎಂಗಳನ್ನು ಚುನಾವಣೆಯಲ್ಲಿ ಬಳಸಬಾರದು ಎಂದು ಮಸ್ಕ್ ಹೇಳಿದ್ದರು.

  • ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?

    ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಮ್ಮ ಕುಟುಂಬದ ಜೊತೆ ಅಮೆರಿಕ (USA) ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ (ಇಂದು) ಮಧ್ಯರಾತ್ರಿಯಿಂದಲೇ ಡಿಕೆಶಿ ಅವರು 7 ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ.

    ಡಿ.ಕೆ ಶಿವಕುಮಾರ್ ಅವರೊಂದಿಗೆ ಪತ್ನಿ ಉಷಾ, ಪುತ್ರಿಯರಾದ ಐಶ್ವರ್ಯ, ಆಭರಣ, ಪುತ್ರ ಆಕಾಶ್ ಅಳಿಯ ಅಮರ್ತ್ಯ ಸುಬ್ರಹ್ಮಣ್ಯ ಹೆಗ್ಡೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಗೆ ಪ್ರಾಯೋಜಕತ್ವ ನಿಲ್ಲಿಸಿದ್ರೆ ಪಾಕ್‌ ಜೊತೆ ಮಾತುಕತೆಗೆ ಭಾರತ ಸಿದ್ಧ: ರಾಜನಾಥ್‌ ಸಿಂಗ್‌

    ಪ್ರವಾಸದ ವೇಳೆ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (US Elections) ಸ್ಪರ್ಧಿಸಿರೋ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭೇಟಿಗೆ ಡಿಸಿಎಂ ಕಚೇರಿ ಸಮಯ ಕೇಳಿದೆ. ಇದುವರೆಗೂ ಭೇಟಿ ಬಗ್ಗೆ ಖಚಿತವಾಗಿಲ್ಲ. ಖಾಸಗಿ ಕಾರ್ಯಕ್ರಮಗಳ ನಡುವೆ ಭೇಟಿಗೆ ಅವಕಾಶ ಸಿಕ್ಕರೆ ಇಬ್ಬರನ್ನೂ ಭೇಟಿ ಮಾಡುವ ಸಾಧ್ಯತೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮಧ್ಯೆ ಡಿ.ಕೆ ಶಿವಕುಮಾರ್ ಅವರಿಗೆ ಕಮಲಾ ಹ್ಯಾರಿಸ್ (Kamala Harris) ಅವರಿಂದ ವಿಶೇಷ ಆಹ್ವಾನ ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ.

    ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌ ಎಕ್ಸ್‌ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ನನ್ನ ಮುಂಬರುವ ಭೇಟಿಗೆ ಸಂಬಂಧಿಸಿದಂತೆ, ಹಬ್ಬಿರುವ ವದಂತಿಯನ್ನು ಹೋಗಲಾಡಿಸಲು ನಾನು ಬಯಸುತ್ತೇನೆ. ನನ್ನ ಭೇಟಿಯು ಸಂಪೂರ್ಣವಾಗಿ ವೈಯಕ್ತಿಕ ಕಾರಣಗಳಿಗಾಗಿ ಆಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶಕ್ಕೆ ಸಂಬಂಧಿಸಿಲ್ಲ, ಜೊತೆಗೆ ರಾಜಕೀಯ ಆಹ್ವಾನದ ಕಾರಣದಿಂದಲೂ ಅಲ್ಲ. ಯಾವುದೇ ರೀತಿಯ ಊಹಾಪೋಹಗಳಿಗೆ ಒಳಗಾಗದಂತೆ ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದೇನೆ.

    ಅಲ್ಲದೇ ಸೆಪ್ಟೆಂಬರ್ 9 ಹಾಗೂ 12 ರಂದು ಸಿಎಂ ಪ್ರಾಸಿಕ್ಯೂಷನ್ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾಗೆ ತೆರಳುವ ಮುನ್ನ ಮುಖ್ಯಮಂತ್ರಿಗಳನ್ನು ಡಿಸಿಎಂ ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತದಿಂದ ಶೇಖ್ ಹಸೀನಾ ಗಡಿಪಾರಿಗೆ ಅಗತ್ಯ ಕ್ರಮ: ಬಾಂಗ್ಲಾ ಎಚ್ಚರಿಕೆ

    ಪ್ರಾಸಿಕ್ಯೂಷನ್ ವಿಚಾರ, ನಿಗಮ ಮಂಡಳಿಗೆ ನಿರ್ದೇಶಕರು ಹಾಗೂ ಸದಸ್ಯರ ನೇಮಕ ಪಟ್ಟಿಯನ್ನು ಅಂತಿಮ ಗೊಳಿಸುವ ಸಂಬಂಧ ಸಿಎಂ ಜೊತೆ ಡಿಸಿಎಂ ಚರ್ಚೆ ನಡೆಸಿದ್ರು ಯಾವುದೇ ಪ್ರತಿಕ್ರಿಯೆ ಕೊಡದೇ ಕೈಮುಗಿದು ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Duleep Trophy | ಕನ್ನಡಿಗ ರಾಹುಲ್‌ ಹೋರಾಟ ವ್ಯರ್ಥ – ಭಾರತ-ಬಿ ತಂಡಕ್ಕೆ 76 ರನ್‌ಗಳ ಭರ್ಜರಿ ಜಯ  

  • ಮುನ್ನಡೆಯಲ್ಲಿ ಬೈಡನ್‌ – ಟ್ರಂಪ್‌ ಸೋತರೆ ಏನು ಮಾಡಬಹುದು?

    ಮುನ್ನಡೆಯಲ್ಲಿ ಬೈಡನ್‌ – ಟ್ರಂಪ್‌ ಸೋತರೆ ಏನು ಮಾಡಬಹುದು?

    ವಾಷಿಂಗ್ಟನ್‌: ನಾಲ್ಕು ದಿನ ಕಳೆದರೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಮಾತ್ರ ಇನ್ನೂ ಪೂರ್ಣವಾಗಿ ಹೊರಬಿದ್ದಿಲ್ಲ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವಿನ ಅಂಚಿನಲ್ಲಿದ್ದರೂ, ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಫಲಿತಾಂಶ ಹೊರಬೀಳಬೇಕಿರುವ ಐದು ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರೆದಿದ್ದು, ಟ್ರಂಪ್-ಬೈಡನ್ ನಡುವೆ ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಟಫ್ ಫೈಟ್ ನಡೆಯುತ್ತಿದೆ.

    ನಿನ್ನೆಯವರೆಗೂ ನೆವಾಡದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದ್ದ ಜೋ ಬೈಡನ್ ಇಂದು ಜಾರ್ಜಿಯಾದಲ್ಲಿಯೂ ಮೇಲುಗೈ ಸಾಧಿಸಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಆದರೆ ಮತ ಎಣಿಕೆ ಮುಂದುವರಿದಂತೆ ಜೋ ಬೈಡನ್ ನಿಕಟ ಸ್ಪರ್ಧೆ ನೀಡ್ತಿದ್ದಾರೆ. ಇಲ್ಲಿಯೂ ಯಾವುದೇ ಕ್ಷಣದಲ್ಲಿ ಜೋ ಬೈಡನ್ ಮುನ್ನಡೆ ಸಾಧಿಸುವ ಸಂಭವ ಕಂಡು ಬರುತ್ತಿದೆ.

     

    ಅಲಸ್ಕಾ ಮತ್ತು ನಾರ್ತ್ ಕೊರೋಲಿನಾದಲ್ಲಿ ಮಾತ್ರ ಟ್ರಂಪ್ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಐದರಲ್ಲಿ ಅಲಸ್ಕಾ ಬಿಟ್ಟು, ಯಾವುದೇ ರಾಜ್ಯವನ್ನು ಗೆದ್ದರೂ ಬೈಡನ್ ಅಧ್ಯಕ್ಷೀಯ ಚುನಾವಣೆ ಗೆದ್ದಂತೆ ಆಗುತ್ತದೆ.

    ಅಮೆರಿಕದಲ್ಲಿ ಕಳೆದ 120 ವರ್ಷಗಳಲ್ಲೇ ಕಂಡು ಕೇಳರಿಯದ ರೀತಿ ಅಂದ್ರೆ ಶೇ.66ರಷ್ಟು ಮತದಾನ ನಡೆದಿದೆ. ಈ ಹಿಂದಿನ ಎಲ್ಲಾ ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಮೀರಿಸಿ ಬೈಡನ್ 7.10 ಕೋಟಿ ಮತ ಪಡೆದು ದಾಖಲೆ ಬರೆದಿದ್ದಾರೆ. ಇದು ಇನ್ನಷ್ಟು ಹೆಚ್ಚಾಗಲಿದೆ.

    ಫಲಿತಾಂಶದ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ಹೊಂದಿದ್ದಾರೆ. ಮತ ಎಣಿಕೆ ವೇಳೆ ಅಕ್ರಮ ನಡೆಯುತ್ತಿದೆ. ಕೌಂಟಿಂಗ್ ಕೇಂದ್ರಗಳಿಗೆ ನಮ್ಮ ಪಕ್ಷದವರನ್ನು ಬಿಟ್ಟುಕೊಳ್ತಿಲ್ಲ ಎಂದು ಟ್ರಂಪ್ ದೂರುತ್ತಿದ್ದಾರೆ. ಈ ಮಧ್ಯೆ ಅಮೆರಿಕಾದ ಬಹುತೇಕ ರಾಜ್ಯಗಳಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬೈಡನ್‍ಗೆ ಭದ್ರತೆ ಹೆಚ್ಚಿಸಲಾಗಿದೆ. 538 ಸ್ಥಾನಗಳ ಪೈಕಿ ಮ್ಯಾಜಿಕ್ ನಂಬರ್ 270 ಆಗಿದ್ದು ಜೋ ಬೈಡನ್ 264 ಡೊನಾಲ್ಡ್ ಟ್ರಂಪ್ 214 ಗೆದ್ದುಕೊಂಡಿದ್ದಾರೆ.

    ಟ್ರಂಪ್‌ ಏನು ಮಾಡಬಹುದು?
    ಒಂದು ವೇಳೆ ಜೋ ಬೈಡನ್ ಗೆದ್ದರೂ ಅಷ್ಟು ಸುಲಭಕ್ಕೆ ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂದು ಟ್ರಂಪ್ ಹೇಳಿದ್ದರು. ಚುನಾವಣೆಗೆ ಮೊದಲೇ ಪೋಸ್ಟಲ್‌ ವೋಟಿಂಗ್‌ನಲ್ಲಿ ಭಾರೀ ಅಕ್ರಮ ನಡೆಯಲಿದೆ ಎಂದಿದ್ದರು. ಈಗಲೂ ಈ ಮಾತನ್ನೇ ಹೇಳುತ್ತಿದ್ದಾರೆ. ಹೀಗಾಗಿ ಟ್ರಂಪ್ ಸೋತರೂ ಜನವರಿ 20ರವರೆಗೂ ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಿದೆ.

    ಈಗಾಗಲೇ ಟ್ರಂಪ್‌ ಚುನಾವಣಾ ಮತ ಎಣಿಕೆಯ ಅಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಬರೋಬ್ಬರಿ 76 ದಿನ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದು ಅಧಿಕಾರ ಚಲಾಯಿಸಬಹುದು. ಟ್ರಂಪ್ ಕೈಯಲ್ಲಿ ಅಧಿಕಾರ ಇರುವ ಕಾರಣ ಅವರು ಏನು ಬೇಕಾದರೂ ಮಾಡಬಹುದು. ವಿವಾದಾತ್ಮಕ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಉನ್ನತಾಧಿಕಾರಿಗಳ ವರ್ಗಾವಣೆಗಳನ್ನು ಮಾಡಬಹುದು .

    76 ದಿನಗಳ ಬಳಿಕವೂ ಟ್ರಂಪ್ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದೇನು ಎಂಬ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ. ನೂತನ ಅಧ್ಯಕ್ಷರು, ಸೀಕ್ರೆಟ್ ಏಜೇನ್ಸಿ ನೆರವಿನಿಂದ ಟ್ರಂಪ್‍ರನ್ನು ಶ್ವೇತಸೌಧದಿಂದ ಹೊರಗೆ ಕಳಿಸಬಹುದು. ಟ್ರಂಪ್ ಮಾಜಿ ಅಧ್ಯಕ್ಷರಾಗುವ ಹಿನ್ನೆಲೆಯಲ್ಲಿ ಪ್ರೋಟೋಕಾಲ್ ಕೂಡ ಇದಕ್ಕೆ ಅಡ್ಡ ಬರಬಹುದು.

  • ಆರಂಭದಲ್ಲಿ ಹಿನ್ನಡೆ, ಕೊನೆಗೆ ಟ್ರಂಪ್‌ ಮುನ್ನಡೆ – ಯಾರಾಗ್ತಾರೆ ಅಮೆರಿಕದ ಅಧ್ಯಕ್ಷ?

    ಆರಂಭದಲ್ಲಿ ಹಿನ್ನಡೆ, ಕೊನೆಗೆ ಟ್ರಂಪ್‌ ಮುನ್ನಡೆ – ಯಾರಾಗ್ತಾರೆ ಅಮೆರಿಕದ ಅಧ್ಯಕ್ಷ?

    ವಾಷಿಂಗ್ಟನ್‌: ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಿಪಬ್ಲಿಕನ್ ಪಕ್ಷದ ಡೋನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

    ವಿಜೇತರನ್ನು ನಿರ್ಣಯಿಸುವ ಎಲೆಕ್ಟೋರಲ್ ಮತಗಳಲ್ಲಿ ಬೈಡೆನ್ ಮುನ್ನಡೆ ಸಾಧಿಸಿದ್ದಾರೆ. ಬೆಳಗ್ಗೆ ತೀರಾ ಹಿಂದಿದ್ದ ಟ್ರಂಪ್ ಸಂಜೆ ಹೊತ್ತಿಗೆ ಭಾರೀ ಪೈಪೋಟಿ ನೀಡಿದ್ದಾರೆ. ಯಾವುದೇ ಕ್ಷಣದಲ್ಲೂ ಜೋ ಬೈಡನ್‍ರನ್ನು ಹಿಂದಿಕ್ಕುವ ಸಾಧ್ಯತೆಗಳೂ ಇವೆ.

    ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳು ಮಾಡಿ ಟ್ರಂಪ್ ಮುನ್ನುಗ್ಗುತ್ತಿದ್ದಾರೆ. ನಗರ ಮತದಾರರು ಬೈಡನ್ ಪರ ಇದ್ದರೆ ಗ್ರಾಮೀಣ ಮತದಾರರ ಟ್ರಂಪ್ ಬೆಂಬಲಕ್ಕೆ ನಿಂತಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಹೊರಹೊಮ್ಮಲು ಕನಿಷ್ಠ 270 ಎಲೆಕ್ಟೋರಲ್ ಕಾಲೇಜ್ ಮತಗಳ ಅಗತ್ಯತೆ ಇದ್ದು, ಸದ್ಯ ಬೈಡನ್ 238 ಮತ, ಟ್ರಂಪ್ 213 ಮತ ಪಡೆದುಕೊಂಡಿದ್ದಾರೆ.

    ಮತ ಎಣಿಕೆ ನಡೆಯುತ್ತಿರುವ ಮಿಚಿಗನ್, ಜಾರ್ಜಿಯಾದಲ್ಲೂ ಟ್ರಂಪ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿ ಇಬ್ಬರು ಅಭ್ಯರ್ಥಿಗಳ ನಡುವೆ ಅಂತರ ಇರೋದು ಸ್ವಲ್ಪ ಮಾತ್ರ. ಗಮನಿಸಬೇಕಾದ ವಿಚಾರ ಅಂದ್ರೆ, 20 ಎಲೆಕ್ಟೋರಲ್ ಮತಗಳಿರುವ ಪೆನ್ಸಿಲ್ವೇನಿಯಾದಲ್ಲೇ ಬೈಡನ್ ಹಿನ್ನಡೆ ಸಾಧಿಸಿದ್ದಾರೆ.

    ಮತ ಎಣಿಕೆ ಪೂರ್ಣಗೊಳ್ಳುವ ಮುನ್ನವೇ ತಾನು ಗೆದ್ದಿದ್ದೇನೆ ಎಂದು ಟ್ರಂಪ್ ಸ್ವಯಂ ಘೋಷಿಸಿಕೊಂಡಿದ್ದಾರೆ. ಕೆಲವು ಕಡೆ ಇನ್ನೂ ಮತದಾನಕ್ಕೆ ಅವಕಾಶ ನೀಡಲಾಗ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ. ಮುಖ್ಯವಾಗಿ ಪೋಸ್ಟಲ್ ಬ್ಯಾಲೆಟ್‍ಗೆ ಅನುಮತಿ ನೀಡಿರೋದನ್ನು ಟ್ರಂಪ್ ವಿರೋಧಿಸ್ತಿದ್ದು, ಸುಪ್ರೀಂಕೋರ್ಟ್ ಮೊರೆ ಹೋಗುವ ಎಚ್ಚರಿಕೆ ನೀಡಿದ್ದಾರೆ.

    ಟ್ರಂಪ್ ಕೈ ಹಿಡಿದ ರಾಜ್ಯಗಳು
    ಫ್ಲೋರಿಡಾ, ಟೆಕ್ಸಾಸ್, ನ್ಯೂಜೆರ್ಸಿ, ಒಹಿಯೋ, ವ್ಯೋಮಿಂಗ್, ಕನ್ಸಾಸ್, ಮಿಸೌರಿ, ಮಿಸಿಸಿಪ್ಪಿ, ಕೆಂಟುಕಿ, ಇಂಡಿಯಾನಾ, ಸೌತ್ ಕರೋಲಿನಾ, ಮೊಂಟಾನಾ, ಉತ್ತರ ಡಕೋಟಾ, ದಕ್ಷಿಣ ಡಕೋಟಾ, ಅರ್ಕಾನ್ಸಾಸ್, ಇದಾಹೋ, ನೆಬ್ರಾಸ್ಕಾ, ಓಕ್ಲಾಹಾಮಾ, ಇಂಡಿಯಾನಾ,

    ಟ್ರಂಪ್ ಮುನ್ನಡೆಯಲ್ಲಿರುವ ರಾಜ್ಯಗಳು:
    ಮಿಚಿಗನ್, ಪೆನ್ಸಿಲ್ವೇನಿಯಾ, ಅಲಸ್ಕಾ, ನೆವಾಡ, ಜಾರ್ಜಿಯಾ, ನಾರ್ತ್ ಕರೋಲಿನಾ

    ಜೋ ಬೈಡೆನ್ ಕೈ ಹಿಡಿದ ರಾಜ್ಯಗಳು:
    ವಾಷಿಂಗ್ಟನ್, ಟೆಕ್ಸಾಸ್, ನ್ಯೂಯಾರ್ಕ್, ಅರಿಜೋನಾ, ನ್ಯೂಜೆರ್ಸಿ, ಕ್ಯಾಲಿಫೋರ್ನಿಯಾ, ಕೊಲರಾಡೋ, ಒರೆಗಾನ್, ಮಿನ್ನಿಸೋಟಾ, ನ್ಯೂ ಮೆಕ್ಸಿಕೋ, ಇಲಿನಾಯ್ಸ್, ವರ್ಜೀನಿಯಾ, ಮ್ಯಾಸಚೂಸೆಟ್ಸ್, ಹವಾಯ್, ವೆರ್ಮೋಂಟ್, ಮೈನೆ, ನ್ಯೂ ಹ್ಯಾಂಪ್‍ಷೈರ್, ಮೇರಿಲ್ಯಾಂಡ್,

    ಬೈಡನ್ ಮುನ್ನಡೆಯಲ್ಲಿರುವ ರಾಜ್ಯಗಳು:
    ನೆವಾಡ, ವಿಸ್ಕಿನ್ಸನ್