Tag: US Congress

  • 31 MQ-9B ಡ್ರೋನ್‌ ಖರೀದಿಗೆ ಅಮೆರಿಕ ಗ್ರೀನ್‌ ಸಿಗ್ನಲ್‌ – ಭಾರತಕ್ಕೆ ಆನೆ ಬಲ – ಡೆಡ್ಲಿ ಡ್ರೋನ್‌ ವಿಶೇಷತೆ ಏನು?

    31 MQ-9B ಡ್ರೋನ್‌ ಖರೀದಿಗೆ ಅಮೆರಿಕ ಗ್ರೀನ್‌ ಸಿಗ್ನಲ್‌ – ಭಾರತಕ್ಕೆ ಆನೆ ಬಲ – ಡೆಡ್ಲಿ ಡ್ರೋನ್‌ ವಿಶೇಷತೆ ಏನು?

    ನವದೆಹಲಿ: ಭಾರತಕ್ಕೆ 31 ʻMQ9B ಡ್ರೋನ್ʼ (MQ-9B Sea Guardian Drones) ಹಾಗೂ ಸಂಬಂಧಿತ ಮಿಲಿಟರಿ ಉಪಕರಣಗಳನ್ನು ಮಾರಾಟ ಮಾಡಲು ಅಮೆರಿಕ ಅನುಮೋದಿಸಿದೆ. US ರಕ್ಷಣಾ ಸಚಿವಾಲಯದ ಭದ್ರತಾ ಸಹಕಾರ ಏಜೆನ್ಸಿಯು ಸಂಭವನೀಯ ಉಪಕರಣಗಳ ಮಾರಾಟದ ಕುರಿತು ಅಮೆರಿಕ ಸಂಸತ್ತಿಗೆ (US Congress) ಸರ್ಕಾರ ತಿಳಿಸಿದೆ.

    ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ಭಾರತ 31 MQ-9B ಸ್ಕೈ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸಲು ಪ್ರಸ್ತಾಪಿಸಲಾಗಿತ್ತು. ಭಾರತ ಖರೀದಿಸಲಿರುವ 31 ಡ್ರೋನ್‌ಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಬಳಸಲಿದ್ದು, ಇದರ ಅಂದಾಜು ವೆಚ್ಚ 3.99 ಶತಕೋಟಿ ಡಾಲರ್‌ ನಷ್ಟು ಆಗಲಿದೆ. ಇದನ್ನೂ ಓದಿ: ಎಲೆಕ್ಷನ್ ಬಜೆಟ್‌ನಲ್ಲಿ ಪುಕ್ಕಟೆ ಯೋಜನೆಗಳಿಲ್ಲ – ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ? ಕಳೆದ ವರ್ಷ ಎಷ್ಟಿತ್ತು?

    ಭಾರತ ಸರ್ಕಾರವು 31 MQ-9B ಸ್ಕೈ ಗಾರ್ಡಿಯನ್ ಡ್ರೋನ್ ಖರೀದಿಸಲು ವಿನಂತಿಸಿದೆ. ಇದರೊಂದಿಗೆ 161 ಎಂಬೆಡೆಡ್ ಗ್ಲೋಬಲ್ ಪೊಸಿಷನಿಂಗ್ ಮತ್ತು ಇನರ್ಷಿಯಲ್ ನ್ಯಾವಿಗೇಷನ್ ಸಿಸ್ಟಮ್ಸ್ (EGIs), 35 L3 RIO ಗ್ರಾಂಡೆ ಕಮ್ಯುನಿಕೇಷನ್ಸ್ ಇಂಟೆಲಿಜೆನ್ಸ್ ಸೆನ್ಸರ್ ಸೂಟ್ಸ್‌, 170 AGM-114R ಹೆಲ್‌ಫೈರ್ ಕ್ಷಿಪಣಿಗಳು, 16 M36E9 ಹೆಲ್ಫೈರ್ ಕ್ಯಾಪ್ಟಿವ್ ಏರ್ ಟ್ರೈನಿಂಗ್ ಕ್ಷಿಪಣಿಗಳು (CATM), ಲೈವ್ ಫ್ಯೂಜ್‌ ಜೊತೆಗೆ 310 ಜಿಬಿಯು-39B/B ಲೇಸರ್ ಸಣ್ಣ ವ್ಯಾಸದ ಬಾಂಬ್‌ಗಳು (LSDB) ಸೇರಿದಂತೆ ಬಿಡಿ ಭಾಗಗಳು ಸೇರಿದಂತೆ ಹಲವು, ದುರಸ್ತಿ ಉಪಕರಣಗಳನ್ನ ಖರೀದಿಸಲು ಮುಂದಾಗಿದೆ. ಇದಕ್ಕೆ ಸರಿಸುಮಾರು 3.99 ಶತಕೋಟಿ ಡಾಲರ್‌ನಷ್ಟು ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ.

    ಈ ಉದ್ದೇಶಿತ ಮಾರಾಟವು ಯುಸ್‌ ಹಾಗೂ ಭಾರತೀಯ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸಲು ಸಹಾಯಕವಾಗಲಿದೆ ಹಾಗೂ ರಾಜಕೀಯ ಸ್ಥಿರತೆ ಕಾಯ್ದುಕೊಳ್ಳಬಹುದಾಗಿದೆ. ಯುನೈಟೆಡ್ ಸ್ಟೇಟ್ಸ್‌ನ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಉದ್ದೇಶಗಳನ್ನು ಬೆಂಬಲಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಸೀದಿ ಸಮಿತಿ

    ಆಕ್ರಮಣಕಾರಿ ಡ್ರೋನ್‌ ವಿಶೇಷತೆ ಏನು?
    ವಿಶ್ವದಾದ್ಯಂತ ಆಕ್ರಮಣಕಾರಿ ಕಾರ್ಯಾಚರಣೆಗೆ ಈ ಡ್ರೋನ್‌ ಹೆಸರು ವಾಸಿಯಾಗಿದೆ. ಲೇಸರ್-ನಿರ್ದೇಶಿತ ನಾಲ್ಕು ಹೆಲ್‌ಫೈರ್ ಕ್ಷಿಪಣಿಗಳು ಮತ್ತು 450 ಕೆಜಿ ಬಾಂಬ್‌ಗಳನ್ನು ಸಹ ಸಾಗಿಸಬಲ್ಲದು. ಭಾರತ ಮತ್ತು ಚೀನಾದ ಗಡಿ ರೇಖೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಜೊತೆಗೆ ಹಿಂದೂ ಮಹಾ ಸಾಗರ ಪ್ರದೇಶಗಳಲ್ಲಿ ಇದು ಸಮರ್ಥವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಶತ್ರು ಸೇನೆಗಳ ಆಕ್ರಮಣದ ಬಗ್ಗೆ ಎಚ್ಚರಿಸುತ್ತದೆ. ಸತತ 40 ಗಂಟೆ ಹಾರಾಡುವ ಸಾಮರ್ಥ್ಯ ಹೊಂದಿದೆ.

    ಭಾರತಕ್ಕೆ ಏನು ಪ್ರಯೋಜನ?
    MQ9B ಡ್ರೋನ್ ಖರೀದಿಯಿಂದ ಭಾರತ ತನ್ನ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲಿದೆ. ಸಮುದ್ರ ಮಾರ್ಗಗಳಲ್ಲಿ ಮಾನವ ರಹಿತ ಗಸ್ತು ಸಕ್ರೀಯಗೊಳಿಸುತ್ತದೆ. ಮಿಲಿಟರಿ ವ್ಯವಸ್ಥೆಯಲ್ಲಿ ಮತ್ತಷ್ಟು ಆಧುನಿಕತೆ ತರಲಿದೆ. ಸಶಸ್ತ್ರ ಪಡೆಗಳ ಬಲ ಮತ್ತಷ್ಟು ಹೆಚ್ಚಾಗಲಿದೆ.

    ಭಾರತೀಯ ನೌಕಾಪಡೆಯು, 2020 ರಲ್ಲಿ, ಹಿಂದೂ ಮಹಾಸಾಗರದಲ್ಲಿ ಕಣ್ಗಾವಲು ಕಾರ್ಯಾಚರಣೆಗಳನ್ನು ಕೈಗೊಳ್ಳಲು ಯುಎಸ್‌ನಿಂದ ಎರಡು MQ-9B ಸೀ-ಗಾರ್ಡಿಯನ್ ಡ್ರೋನ್‌ಗಳನ್ನು ಒಂದು ವರ್ಷಕ್ಕೆ ಗುತ್ತಿಗೆಗೆ ತೆಗೆದುಕೊಂಡಿತ್ತು. ನಂತರ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಯಿತು. MQ-9B ಡ್ರೋನ್‌ಗಳಲ್ಲಿ ಎರಡು ರೂಪಾಂತರಗಳಿವೆ ಸೀಗಾರ್ಡಿಯನ್ ಮತ್ತು ಸ್ಕೈಗಾರ್ಡಿಯನ್. ಇವು ಯುಎಸ್‌ನ ಜನರಲ್‌ ಅಟಾಮಿಕ್ಸ್‌ ಏರೊನಾಟಿಕಲ್‌ ಸಂಸ್ಥೆಯು ಈ ಡ್ರೋನ್‌ಗಳನ್ನು ತಯಾರಿಸಲಿದೆ. ಇದನ್ನೂ ಓದಿ: ಅಮೆರಿಕದಿಂದ ಇರಾನ್ ಸೇನಾಧಿಕಾರಿ ಹತ್ಯೆ- ಡೆಡ್ಲಿ ಡ್ರೋನ್ ವಿಶೇಷತೆ ಏನು? ಬೆಲೆ ಎಷ್ಟು?- ವಿಡಿಯೋ ನೋಡಿ

  • ಉಗ್ರರ ತವರು ನೆಲ ಪಾಕಿಸ್ತಾನಕ್ಕೆ ಅಮೆರಿಕದಿಂದ 3,500 ಕೋಟಿ ಸೇನಾ ನೆರವು

    ಉಗ್ರರ ತವರು ನೆಲ ಪಾಕಿಸ್ತಾನಕ್ಕೆ ಅಮೆರಿಕದಿಂದ 3,500 ಕೋಟಿ ಸೇನಾ ನೆರವು

    ವಾಷಿಂಗ್ಟನ್: ಭವಿಷ್ಯದ ಭಯೋತ್ಪಾದನಾ ಬೆದರಿಕೆಗಳನ್ನು ನಿಯಂತ್ರಿಸಲು ಎಫ್-16 ಫೈಟರ್ ಜೆಟ್ (F-16 fighter Jet) ಪಡೆಯ ಸುಸ್ಥಿರ ಕಾರ್ಯಕ್ರಮದ ಅಡಿಯಲ್ಲಿ ಪಾಕಿಸ್ತಾನಕ್ಕೆ (Pakistan) 3,500 ಕೋಟಿ (450 ಮಿಲಿಯನ್ ಡಾಲರ್) ಮೊತ್ತದ ಸೇನಾ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದೆ.

    2018ರಲ್ಲಿ ತಾಲಿಬಾನ್ (Taliban) ಮತ್ತು ಹಕ್ಕಾನಿ ಉಗ್ರ ಸಂಘಟನೆಗಳನ್ನು ಹತ್ತಿಕ್ಕಲು ವಿಫಲವಾದ ಪಾಕಿಸ್ತಾನಕ್ಕೆ ಅಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 15,000 ಕೋಟಿ ನೆರವನ್ನು ತಡೆಹಿಡಿದಿದ್ದರು. ಅದಾದ ಬಳಿಕ ಪಾಕ್‌ಗೆ ಅಮೆರಿಕ ನೀಡುತ್ತಿರುವ ಮೊದಲ ನೆರವು ಇದಾಗಿದೆ. ಇದು ಪಾಕಿಸ್ತಾನ ಅಮೆರಿಕ (US) ದ್ವಿಪಕ್ಷಿಯ ಸಂಬಂಧದ ಭಾಗವಾಗಿದ್ದು, ಭಯೋತ್ಪಾದನೆ ನಿಗ್ರಹಕ್ಕೆ ಎಫ್-16 ಸಹಾಯಕವಾಗಲಿದೆ. ಈ ನೆರವಿನ ಅಡಿಯಲ್ಲಿ ಯಾವುದೇ ಸಾಮರ್ಥ್ಯದ ಶಸ್ತ್ರಾಸ್ತ್ರ ಯುದ್ಧ ಸಾಮಗ್ರಿಗಳನ್ನು ಒಳಗೊಂಡಿಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

    2019ರಲ್ಲಿ ಬಾಲಾಕೋಟ್ ದಾಳಿಯ ನಂತರ ಭಾರತವನ್ನು ಗುರಿಯಾಗಿಸಲು ಪಾಕಿಸ್ತಾನ ಇದೇ ವಿಮಾನವನ್ನು ಬಳಲು ಮುಂದಾಗಿತ್ತು. ಜೊತೆಗೆ ಅಂದಿನ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮಿಗ್-21 ಅನ್ನು ಹೊಡೆದುರುಳಿಸಲು ಪಾಕಿಸ್ತಾನ AIM-120 C-5 AMRAAM (Advanced Medium-Range Air-to-Air Missile) ಬಳಸಿತ್ತು. ಅಮೆರಿಕ ಪಾಕಿಸ್ತಾನಕ್ಕೆ ಈ ಕ್ಷಿಪಣಿಯನ್ನು ಉಗ್ರರ ವಿರುದ್ಧ ಬಳಸಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಈ ಷರತ್ತು ಉಲ್ಲಂಘಿಸಿ ಭಾರತದ ವಿರುದ್ಧ ಪ್ರಯೋಗಿಸಿತ್ತು.

    ಸದ್ಯ ಪಾಕಿಸ್ತಾನ ವಾಯುಪಡೆಯು ಎಫ್-16 ಫೈಟರ್ ಜೆಟ್ ಹಾಗೂ ಸೇನಾ ಬೆಂಬಲ ಕೋರಿದ ನಂತರ ಯುಎಸ್ ಕಾಂಗ್ರೆಸ್ ಸಂಭವನೀಯ ಮಾರಾಟದ ಕುರಿತು ಬುಧವಾರ ಮಾತುಕತೆ ನಡೆಸಿದೆ. ಇದರಿಂದಾಗಿ ವಿಮಾನ, ಇಂಜಿನ್, ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ನ ಮಾರ್ಪಾಡುಗಳ ಬೆಂಬಲವನ್ನೂ ಪಾಕಿಸ್ತಾನ ಒಳಗೊಂಡಿರಲಿದೆ. ಜೊತೆಗೆ ಜೆಟ್‌ಗಳು ಹಾಗೂ ಅದರ ಇಂಜಿನ್ ಬಿಡಿ ಭಾಗಗಳ ದುರಸ್ತಿ ಮತ್ತು ವಾಪಾಸಾತಿ, ವರ್ಗೀಕರಿಸದ ತಂತ್ರಾಂಶಗಳ ಬೆಂಬಲವನ್ನೂ ಪಾಕ್ ಒಳಗೊಂಡಿರಲಿದೆ.

    Shehbaz Sharif

    ಪಾಕ್ ಎಫ್-16 ಹಿನ್ನೆಲೆ:
    ಪಾಕಿಸ್ತಾನವು 1980 ರಿಂದ ಎಫ್-16 ಜೆಟ್‌ಗಳನ್ನು ಮಾರಾಟ ಮಾಡುವ ಹಾಗೂ ನವೀಕರಿಸಿದ ನೀತಿಯ ಅಡಿಯಲ್ಲಿ ಯುಎಸ್ ಮಿಲಿಟರಿಯ ಸಹಾಯದ ಭಾಗವಾಗಿದೆ. 1981ರಲ್ಲಿ ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಆಕ್ರಮಣದ ನಂತರ ಎಫ್ -16 ಜೆಟ್‌ಗಳನ್ನು ಯುಎಸ್ ಪಾಕಿಸ್ತಾನಕ್ಕೆ ಮಾರಾಟ ಮಾಡಲು ಒಪ್ಪಿಕೊಂಡಿತು. ಇದನ್ನೂ ಓದಿ: ಮೋದಿ ಉತ್ತಮ ವ್ಯಕ್ತಿ; ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ – ಟ್ರಂಪ್‌ ಬಣ್ಣನೆ

    ವರದಿಗಳ ಪ್ರಕಾರ 1986 – 1990ರ ನಡುವೆ ಪಾಕಿಸ್ತಾನದ ಎಫ್-16 ಜೆಟ್‌ಗಳು ಕನಿಷ್ಠ 10 ಅಫ್ಘಾನ್ ಮತ್ತು ಸೋವಿಯತ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು ಹಾಗೂ ವಿಮಾನಗಳನ್ನ ಹೊಡೆದುರುಳಿಸಿವೆ. 1990ರ ದಶಕದಲ್ಲಿ ನಡೆದ ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಬೆಳವಣಿಗೆಯಿಂದಾಗಿ ಅಮೆರಿಕ ಅಸಮಾಧಾನಗೊಂಡಿತು. ಬಳಿಕ ಅಮೆರಿಕ ಎಫ್-16 ಜೆಟ್‌ಗಳ ವಿತರಣೆಯನ್ನು ತಡೆಹಿಡಿದಿತ್ತು.

    Live Tv
    [brid partner=56869869 player=32851 video=960834 autoplay=true]