Tag: US Bridge Collapse

  • ಅಮೆರಿಕ ಸೇತುವೆ ಕುಸಿತ; 6 ಮಂದಿ ಸಾವು – ಭಾರತದ ಎಲ್ಲಾ ಸಿಬ್ಬಂದಿ ಸೇಫ್‌

    ಅಮೆರಿಕ ಸೇತುವೆ ಕುಸಿತ; 6 ಮಂದಿ ಸಾವು – ಭಾರತದ ಎಲ್ಲಾ ಸಿಬ್ಬಂದಿ ಸೇಫ್‌

    ವಾಷಿಂಗ್ಟನ್‌: ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ (US Bridge Collapse) ಹಡಗೊಂದು ಡಿಕ್ಕಿ ಹೊಡೆದು ನೀರಿನಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅವಘಡದಲ್ಲಿ ನಾಪತ್ತೆಯಾದವರು ಸಾವನ್ನಪ್ಪಿದ್ದಾರೆ ಎಂದು ಭಾವಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.

    ಕಂಟೈನರ್ ಹಡಗು ಡಾಲಿಯನ್ನು ಭಾರತೀಯ ಸಿಬ್ಬಂದಿ ನಿರ್ವಹಿಸುತ್ತಿದ್ದರು. ಸಿಬ್ಬಂದಿ ನಿಯಂತ್ರಣ ತಪ್ಪಿದ ಹಡಗು ಸೇತುವೆಗೆ ಡಿಕ್ಕಿ ಹೊಡೆದಿತ್ತು. ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ಸೇತುವೆಯ ಮೇಲೆ ರಿಪೇರಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾಣೆಯಾಗಿದ್ದಾರೆ. ಅವರು ಸೇತುವೆಯ ಮೇಲಿನ ಗುಂಡಿಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಕಾರ್ಗೋ ಹಡಗು ಡಿಕ್ಕಿ – ಮುರಿದು ಬಿತ್ತು ಅಮೆರಿಕದ ಪ್ರಸಿದ್ಧ ಸೇತುವೆ

    ನಾವು ಈಗಾಗಲೇ ಸಾಕಷ್ಟು ಸಮಯ ಹುಡುಕಾಡಿದ್ದೇವೆ. ನೀರಿನ ತಾಪಮಾನ ಹಾಗೂ ಪರಿಸ್ಥಿತಿ ಅವಲೋಕಿಸಿದರೆ ಅವರು ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಯುಎಸ್ ಕೋಸ್ಟ್ ಗಾರ್ಡ್ ರಿಯರ್ ಅಡ್ಮಿರಲ್ ಶಾನನ್ ಗಿಲ್ರೆಥ್ ತಿಳಿಸಿದ್ದಾರೆ.

    ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭೀಕರ ಅಪಘಾತಕ್ಕೆ ಸಂತಾಪ ಸೂಚಿಸಿದೆ. ಅಪಾಯದಲ್ಲಿದ್ದ ಭಾರತೀಯ ಸಿಬ್ಬಂದಿಗೆ ಅಗತ್ಯ ಸಹಾಯದ ಭರವಸೆ ನೀಡಿದೆ. ದುರಂತಕ್ಕೆ ಸಿಲುಕಿ ಕಣ್ಮರೆಯಾದವರಿಗೆ ಸಂತಾಪಗಳನ್ನು ಕಚೇರಿಯು ಸೂಚಿಸಿದೆ. ಇದನ್ನೂ ಓದಿ: ರಷ್ಯಾಕ್ಕೆ ಮತ್ತೆ ಪುಟಿನ್‌ – ಮುಂದಿರುವ ಸವಾಲುಗಳೇನು?

    ಮಂಗಳವಾರ ಮಧ್ಯರಾತ್ರಿಯ ಸುಮಾರಿಗೆ ಹಡಗು ತನ್ನ ದಿಕ್ಕನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಅಮೆರಿಕ ಸೇತುವೆಗೆ ಡಿಕ್ಕಿ ಹೊಡೆಯಿತು. ಅವಘಡದಲ್ಲಿ 1977 ರ ಸೇತುವೆಯು ಕುಸಿದು ಬಿದ್ದಿತು. ಸೇತುವೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಣ್ಮರೆಯಾಗಿದ್ದಾರೆ.