Tag: US Army

  • ಅಮೆರಿಕ – ತರಬೇತಿ ವೇಳೆ ಯುವ ಕೆಡೆಟ್ ಸಾವು

    ಅಮೆರಿಕ – ತರಬೇತಿ ವೇಳೆ ಯುವ ಕೆಡೆಟ್ ಸಾವು

    ವಾಷಿಂಗ್ಟನ್‌: ಅಮೆರಿಕದ (America) ಫೋರ್ಟ್ ನಾಕ್ಸ್‌ನಲ್ಲಿ  (Fort Knox) ತರಬೇತಿಯ ಸಮಯದಲ್ಲಿ ರಿಸರ್ವ್ ಆಫೀಸರ್ಸ್ ಟ್ರೈನಿಂಗ್ ಕಾರ್ಪ್ಸ್ (ROTC) ಕೆಡೆಟ್ ಸಾವನ್ನಪ್ಪಿದ್ದಾರೆ.

    ನ್ಯೂಜೆರ್ಸಿಯ ರಿಡ್ಜ್‌ವುಡ್‌ನ ನೀಲ್ ಎಡರಾ (22) ಸಾವನ್ನಪ್ಪಿದ ದುರ್ದೈವಿ. ಜು.24 ರಂದು ಕೆಂಟುಕಿಯ ಮಿಲಿಟರಿ ನೆಲೆಯಲ್ಲಿ ಲ್ಯಾಂಡ್ ನ್ಯಾವಿಗೇಷನ್ ಸೈಟ್‌ನಲ್ಲಿ ಅವರು ಸಾವಿಗೀಡಾದರು ಎಂದು ಯುಎಸ್ ಆರ್ಮಿ ಕೆಡೆಟ್ ಕಮಾಂಡ್ (US Army Cadet Command) ತಿಳಿಸಿದೆ.

    ತರಬೇತಿಯ ಸ್ಥಳದಲ್ಲಿ ಅವರು ಎಚ್ಚರ ತಪ್ಪಿದ್ದರು. ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಮತ್ತು ಲೂಯಿಸ್‌ವಿಲ್ಲೆ ವಿಶ್ವವಿದ್ಯಾಲಯದ ಆಸ್ಪತ್ರೆಗೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಇದನ್ನೂ ಓದಿ: ಅಂದು ಇಂಡಿಯಾ ಔಟ್‌ – ಇಂದು ಸೇನಾ ಕಚೇರಿಯಲ್ಲೇ ದೊಡ್ಡ ಕಟೌಟ್‌ | ಇದು ಮೋದಿ ಮ್ಯಾಜಿಕ್‌

    ಎಡರಾ 9 ನೇ ರೆಜಿಮೆಂಟ್ ಅಡ್ವಾನ್ಸ್ಡ್ ಕ್ಯಾಂಪ್‌ನ ಭಾಗವಾಗಿ ಕೆಡೆಟ್ ತರಬೇತಿಗೆ ಹಾಜರಾಗಿದ್ದರು. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚುವರಿ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಯುಎಸ್ ಆರ್ಮಿ ಕೆಡೆಟ್ ಕಮಾಂಡ್ ಹೇಳಿದೆ.

    ಎಡರಾ ಬಗ್ಗೆ ಮಾತಾಡಿದ ಪ್ರಾಧ್ಯಾಪಕ ಲೆಫ್ಟಿನೆಂಟ್ ಕರ್ನಲ್ ತಿಮೋತಿ ಸೊರೆನ್ಸನ್, ಸಮರ್ಪಿತ ಮತ್ತು ಭರವಸೆಯ ಯುವ ನಾಯಕರಲ್ಲಿ ಕೆಡೆಟ್ ಎಡಾರ ಒಬ್ಬರು. ಅವರು ಶಾಂತಾ ಸ್ವಭಾವದವರು. ಅವರ ಕುಟುಂಬಕ್ಕಾಗಿ ನಾವು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.

    ಕೆಡೆಟ್ ತರಬೇತಿಯು ಯುಎಸ್ ಸೈನ್ಯದ ಅತಿದೊಡ್ಡ ವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದೆ. ದೇಶಾದ್ಯಂತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ 7,000 ಕ್ಕೂ ಹೆಚ್ಚು ROTC ಕೆಡೆಟ್‌ಗಳು ಅಡ್ವಾನ್ಸ್ಡ್ ಅಥವಾ ಬೇಸಿಕ್ ಕ್ಯಾಂಪ್‌ಗೆ ಹಾಜರಾಗುತ್ತಾರೆ. 35 ದಿನಗಳ ಅಡ್ವಾನ್ಸ್ಡ್ ಕ್ಯಾಂಪ್ ಆರ್ಮಿ ROTCಯ ಕ್ಯಾಪ್‌ಸ್ಟೋನ್ ಕೋರ್ಸ್, ಎರಡನೇ ಲೆಫ್ಟಿನೆಂಟ್ ಆಗಿ ನಿಯೋಜನೆಗೊಳ್ಳಲು, ಕೆಡೆಟ್‌ಗಳ ನಾಯಕತ್ವ ಮತ್ತು ಸೈನಿಕ ಕೌಶಲ್ಯಗಳಿಗೆ ಇದು ಅವಶ್ಯಕವಾಗಿದೆ. ಇದನ್ನೂ ಓದಿ: ಕಾಂಬೋಡಿಯಾ-ಥೈಲ್ಯಾಂಡ್‌ ಘರ್ಷಣೆ – ಗಡಿ ಪ್ರದೇಶಗಳಿಗೆ ತೆರಳದಂತೆ ಭಾರತೀಯ ಪ್ರಜೆಗಳಿಗೆ ಸಲಹೆ

  • ಅಮೆರಿಕದ ಬ್ಲಾಕ್‌ ಹಾಕ್‌ ಹೆಲಿಕಾಪ್ಟರ್‌ಗಳು ಡಿಕ್ಕಿ – ಘರ್ಷಣೆಯಲ್ಲಿ 9 ಯೋಧರು ಸಾವು

    ಅಮೆರಿಕದ ಬ್ಲಾಕ್‌ ಹಾಕ್‌ ಹೆಲಿಕಾಪ್ಟರ್‌ಗಳು ಡಿಕ್ಕಿ – ಘರ್ಷಣೆಯಲ್ಲಿ 9 ಯೋಧರು ಸಾವು

    ವಾಷಿಂಗ್ಟನ್‌: ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕದ (America) ಸೈನಿಕರ ಬ್ಲಾಕ್‌ ಹಾಕ್‌ ಹೆಲಿಕಾಪ್ಟರ್‌ಗಳು (Black Hawk Helicopters) ಪರಸ್ಪರ ಡಿಕ್ಕಿಯಾಗಿ ಪತನಗೊಂಡಿವೆ. ದುರಂತದಲ್ಲಿ 9 ಸೈನಿಕರು ಮೃತಪಟ್ಟಿದ್ದಾರೆ.

    ಹೆಲಿಕಾಪ್ಟರ್‌ಗಳು 101 ನೇ ವಾಯುಗಾಮಿ ವಿಭಾಗಕ್ಕೆ ಸೇರಿದ್ದವಾಗಿವೆ. ಫೋರ್ಟ್ ಕ್ಯಾಂಪ್‌ಬೆಲ್‌ನ ವಾಯುವ್ಯದಲ್ಲಿರುವ ಕೆಂಟುಕಿಯ ಟ್ರಿಗ್ ಕೌಂಟಿಯಲ್ಲಿ ಬುಧವಾರ ರಾತ್ರಿ 10:00 ಗಂಟೆಗೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವಕ್ತಾರ ಲೆಫ್ಟಿನೆಂಟ್ ಕರ್ನಲ್ ಆಂಥೋನಿ ಹೋಫ್ಲರ್ ತಿಳಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಭೀಕರ ಅಗ್ನಿ ದುರಂತ – 39 ಮಂದಿ ಸಾವು

    ಎರಡೂ ಹೆಲಿಕಾಪ್ಟರ್‌ಗಳು, ಪೈಲಟ್‌ಗಳ ತಪ್ಪಿನಿಂದ ಪರಸ್ಪರ ಘರ್ಷಣೆಯಿಂದ ಆಕಾಶದಲ್ಲೇ ಸ್ಪೋಟವಾಗಿ ನೆಲಕ್ಕಪ್ಪಳಿಸಿದವು. ಪರಿಣಾಮವಾಗಿ 9 ಯೋಧರು (US Army) ಸಾವನ್ನಪ್ಪಿದ್ದಾರೆ.

    101 ನೇ ವಾಯುಗಾಮಿ ವಿಭಾಗಕ್ಕೆ ಫೋರ್ಟ್ ಕ್ಯಾಂಪ್‌ಬೆಲ್ ನೆಲೆಯಾಗಿದೆ. ಇದು US ಸೈನ್ಯದ ಏಕೈಕ ವಾಯು ದಾಳಿ ವಿಭಾಗವಾಗಿದೆ. ‘ಸ್ಕ್ರೀಮಿಂಗ್ ಈಗಲ್ಸ್’ ಎಂಬ ಅಡ್ಡಹೆಸರಿನೊಂದಿಗೆ 1942ರ ಆಗಸ್ಟ್‌ನಲ್ಲಿ ಈ ವಿಭಾಗ ಚಾಲ್ತಿಗೊಂಡಿತ್ತು. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ – 20 ಹಜ್ ಯಾತ್ರಾರ್ಥಿಗಳ ಸಾವು

  • ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

    ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

    ಕಾಬೂಲ್: ತಾಲಿಬಾನಿಗಳು ನೀಡಿದ ಎಚ್ಚರಿಕೆಯಂತೆ ಅಮೆರಿಕ ಸೇನೆ ಸೋಮವಾರ ಕಾಬೂಲ್ ನಿಂದ ತೆರಳಿದ್ದಾರೆ. ಆದ್ರೆ ತೆರಳುವ ಮುನ್ನ ಕಾಬೂಲ್ ವಿಮಾನ ನಿಲ್ದಾಣದಲ್ಲಿ 73 ಏರ್ ಕ್ರಾಫ್ಟ್ ಗಳನ್ನು ಬಳಕೆ ಬರದಂತೆ ಮಾಡಿ ಹೋಗಿದ್ದಾರೆ. ಇತ್ತ ಅಮೆರಿಕ ಸೈನಿಕರ ವಿಮಾನ ಟೇಕಾಫ್ ಆಗುತ್ತಿದ್ದಂತೆ ತಾಲಿಬಾನಿಗಳು ಕಾಬೂಲ್ ಏರ್ ಪೋರ್ಟ್ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

    73 ಏರ್ ಕ್ರಾಫ್ಟ್ ಗಳನ್ನು ಹಮಿದ್ ಕರ್ಜಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಆದ್ರೆ ಇನ್ಮುಂದೆ ಈ ಏರ್ ಕ್ರಾಫ್ಟ್ ಬಳಕೆಗೆ ಬರದಂತೆ ನಿಷ್ಕ್ರಿಯಗೊಳಿಸಲಾಗಿದೆ. ಈ ವಿಮಾನಗಳು ಮುಂದೆ ಹಾರಾಡುವ ಸ್ಥಿತಿಯಲ್ಲಿಲ್ಲ. ಇವುಗಳನ್ನು ಮತ್ತೆ ರಿಪೇರಿ ಮಾಡಲು ಸಹ ಸಾಧ್ಯವಿಲ್ಲ ಎಂದು ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಕೆನೆಥ್ ಮೌಕೆಂಜಿ ಹೇಳಿದ್ದಾರೆ.

    ಅಮೆರಿಕ ಸೇನೆ ಸುಮಾರು 70 ಮೇನ್ ರಿಜಿಸ್ಟೆಂಟ್ ಆಂಬುಶ್ ಪ್ರೊಟೆಕ್ಷನ್ (MRAP) ವೆಹಿಕಲ್ ಗಳನ್ನು ಕಾಬೂಲ್ ವಿಮಾನನಿಲ್ದಾಣದಲ್ಲಿ ಬಿಟ್ಟು ತೆರಳಿದೆ. ಈ ವೆಹಿಕಲ್ ಗಳು ಐಇಡಿ ದಾಳಿ ಮತ್ತು ಶತ್ರುಗಳ ದಾಳಿ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿವೆ. ಒಂದು ವೆಹಿಕಲ್ ಬೆಲೆ ಸುಮಾರು 10 ಲಕ್ಷ ಡಾಲರ್ ಗೂ ಅಧಿಕವಾಗಿದೆ. ಆದ್ರೆ ಇವುಗಳನ್ನು ಸಹ ಅಮೆರಿಕ ಬಳಕೆ ಬಾರದಂತೆ ನಿಷ್ಕ್ರಿಯ ಮಾಡಿದೆ. ಇದನ್ನೂ ಓದಿ: ಕಾರಿನಿಂದ ರಾಕೆಟ್ ಉಡಾಯಿಸ್ತಿದ್ದ ಉಗ್ರರು- ಫೋಟೋಗಳು ಔಟ್

    ಅಮೆರಿಕ ಸೇನೆ ತೆರಳುತ್ತಿದ್ದಂತೆ ರಾತ್ರಿ 12 ಗಂಟೆಗೆ ಕಾಬೂಲ್ ವಿಮಾನ ನಿಲ್ದಾಣ ಪ್ರವೇಶಿಸಿದ ತಾಲಿಬಾನಿಗಳು, ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಇನ್ಮುಂದೆ ಸಂಪೂರ್ಣ ಅಫ್ಘಾನಿಸ್ತಾನ ನಮ್ಮದು. ಇದು ನಮ್ಮೆಲ್ಲರ ಗೆಲುವು, ಇದುವೆ ಸ್ವತಂತ್ರ ದಿನ. ಅಮೆರಿಕ ಸೇರಿದಂತೆ ಎಲ್ಲ ದೇಶಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳೋಣ ಎಂದು ತಾಲಿಬಾನಿಗಳು ಘೋಷಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್

  • ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

    ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

    – ಭಯೋತ್ಪಾದನೆಗೆ ಅಫ್ಘನ್ ನೆಲೆ ಬಳಸಲು ಬಿಡಲ್ಲ
    – ಮುಂದಿನ ವಾರ ಮಹತ್ವದ ನಿರ್ಧಾರ ಪ್ರಕಟ

    ವಾಷಿಂಗ್ಟನ್: ನಮ್ಮ ಸೈನಿಕರ ಮೇಲೆ ದಾಳಿಯಾದ ಮರುಕ್ಷಣವೇ ಪ್ರತಿದಾಳಿ ನಡೆಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಶುಕ್ರವಾರ ತಡರಾತ್ರಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಫ್ಘಾನಿಸ್ತಾನದ ವಿಷಯದ ಕುರಿತು ಮಾತನಾಡಿದ್ದಾರೆ. ಈ ವೇಳೆ ಇದು ಜಗತ್ತಿನಲ್ಲಿ ಅತಿ ದೊಡ್ಡ ಸಮಸ್ಯೆ. ಭಯೋತ್ಪಾದನೆಗೆ ಅಫ್ಘನ್ ನೆಲೆ ಬಳಸಲು ಬಿಡಲ್ಲ ಎಂದು ಹೇಳಿದ್ದಾರೆ.

    ಬೈಡನ್ ಭರವಸೆ:
    ನಾವು ಜುಲೈನಿಂದ ಇಲ್ಲಿಯವರೆಗೆ 18 ಸಾವಿರಕ್ಕೂ ಹೆಚ್ಚು ಮತ್ತು ಆಗಸ್ಟ್ 14ರ ನಂತರ 13 ಸಾವಿರ ಜನರನ್ನು ಕಾಬೂಲ್ ನಿಂದ ಸ್ಥಳಾಂತರ ಮಾಡಿದ್ದೇವೆ. ಇದು ಇತಿಹಾಸದಲ್ಲಿ ಕಂಡು ಕೇಳರಿಯದ ದೊಡ್ಡ ಸಮಸ್ಯೆಯಾಗಿದ್ದು, ದೊಡ್ಡ ಮಟ್ಟದಲ್ಲಿಯೇ ಜನರ ಏರ್ ಲಿಫ್ಟ್ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಕಾಬೂಲ್ ನಲ್ಲಿಯ ಜನರ ಏರ್ ಲಿಫ್ಟ್ ಮಾಡಲು ಅಮೆರಿಕದ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

    ನಾವು 20 ವರ್ಷ ಅಫ್ಘಾನಿಸ್ತಾನದ ಜೊತೆ ಕೆಲಸ ಮಾಡಿದ್ದೇವೆ. ಸದ್ಯ ಕಾಬೂಲ್ ನಲ್ಲಿ ಅಮೆರಿಕದ 6 ಸಾವಿರ ಸೈನಿಕರಿದ್ದಾರೆ. ಒಂದು ವೇಳೆ ಅಮೆರಿಕ ಸೇನೆಯ ಮೇಲೆ ತಾಲಿಬಾನಿಗಳು ದಾಳಿ ನಡೆಸಿದ್ರೆ ಪ್ರತ್ಯುತ್ತರ ನೀಡುತ್ತೇವೆ. ಅಫ್ಘಾನಿಸ್ತಾನದ ಕುರಿತು ಮುಂದಿನ ವಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗವುದು ಎಂದು ಹೇಳಿದರು.  ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣಕ್ಕೆ 5 ಸಾವಿರ ಅಮೆರಿಕ ಸೈನಿಕರ ನಿಯೋಜನೆ

    ಬೈಡನ್ ಭಾಷಣದ ಪ್ರಮುಖ ಅಂಶಗಳು
    * ಸದ್ಯ ನಮ್ಮ ಸೈನಿಕರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತೆ ನೀಡಿದ್ದು, ಜನರ ಏರ್ ಲಿಫ್ಟ್ ಮಾಡಲು ಸಹಾಯ ಮಾಡುತ್ತಿದ್ದಾರೆ. ಅಮೆರಿಕ ಸೇರಿದಂತೆ ಬೇರೆ ದೇಶದ ಚಾರ್ಟರ್ ವಿಮಾನ ಮತ್ತು ಜನರಿಗೆ ಅಮೆರಿಕ ಸೇನೆ ರಕ್ಷಣೆ ನೀಡುವ ಕೆಲಸ ಮಾಡುತ್ತಿದೆ.
    * ಐಎಸ್‍ಐಎಸ್ ನವರ ಭಯೋತ್ಪಾದನೆ ಅಪಾಯಕಾರಿಯಾಗಿದೆ ನಾಟೋ ದೇಶಗಳ ಜೊತೆ ಅಮೆರಿಕ ನಿಲ್ಲಲಿದೆ.
    * ಅಫ್ಘಾನಿಸ್ತಾನದಲ್ಲಿಯ ಯದ್ಧಕ್ಕೆ ಅಂತ್ಯ ಹಾಡುವ ಸಮಯ ಬಂದಾಗಿದೆ. ನಾಟೋ ದೇಶಗಳು ಈ ನಿರ್ಣಯಕ್ಕೆ ಸಹಮತ ನೀಡಿದೆ. ಮುಂದಿನ ವಾರ ಜಿ-7 ಬೈಠಕ್ ನಲ್ಲಿ ನಾವು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ.
    * ಗಾಯಾಳು ಸೈನಿಕರ ನಡುವೆಯೇ ಸೇನೆ ಕೆಲಸ ಮಾಡುತ್ತಿದೆ. ಇದರ ಅಂತಿಮ ಪರಿಣಾಮ ಏನು ಆಗುತ್ತೆ ಎಂದು ಸದ್ಯಕ್ಕೆ ನಾನು ಹೇಳುವ ಸ್ಥಿತಿಯಲ್ಲಿಲ್ಲ. ಸಾವು-ನೋವು ಆಗದಂತೆ ತಮ್ಮ ನಿರ್ಣಯ ಜಾರಿಗೆ ಬರಲಿದೆ. ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್

    ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು:
    ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ತಾಲಿಬಾನಿಗಳ ಕೈವಶವಾಗಿವೆ. ಅತ್ಯಾಧುನಿಕ ಯುದ್ಧ ಟ್ಯಾಂಕ್‍ಗಳು, ರೈಫೆಲ್ಸ್ ಗಳು, 2 ಸಾವಿರ ಬಹು ಉದ್ದೇಶಿತ ಅತ್ಯಾಧುನಿಕ ಟ್ಯಾಂಕ್ ಗಳು, ಬಹು ಉದ್ದೇಶಿತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್, ಸ್ಕೌಟ್ ಯುದ್ಧ ಹೆಲಿಕಾಪ್ಟರ್, ಮಿಲಿಟರಿ ಡ್ರೋಣ್‍ಗಳು, ಎಂ-16 ರೈಫಲ್‍ಗಳು, 6 ಲಕ್ಷದಷ್ಟು ಶಸ್ತ್ರಾಸ್ತ್ರಗಳು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಈ ಶಸ್ತ್ರಾಸ್ತ್ರಗಳ ನಾಶಕ್ಕೆ ವೈಮಾನಿಕ ದಾಳಿ ನಡೆಸಲು ಅಮೆರಿಕ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಬೂಲ್‍ನಲ್ಲಿ ಕನ್ನಡಿಗರು ಸೇರಿ 450 ಭಾರತೀಯರ ಒದ್ದಾಟ – ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್ ಸಾಧ್ಯತೆ