Tag: US air force

  • ತಾಂತ್ರಿಕ ದೋಷ ಬಗೆಹರಿಸಲು ಇಂಜಿನಿಯರ್‌ಗಳ ಜೊತೆ‌ 50 ನಿಮಿಷ ಚರ್ಚಿಸಿದ ಪೈಲಟ್ – ಆದ್ರೂ ನೆಲಕ್ಕಪ್ಪಳಿಸಿದ F-35 ಜೆಟ್‌!

    ತಾಂತ್ರಿಕ ದೋಷ ಬಗೆಹರಿಸಲು ಇಂಜಿನಿಯರ್‌ಗಳ ಜೊತೆ‌ 50 ನಿಮಿಷ ಚರ್ಚಿಸಿದ ಪೈಲಟ್ – ಆದ್ರೂ ನೆಲಕ್ಕಪ್ಪಳಿಸಿದ F-35 ಜೆಟ್‌!

    ವಾಷಿಂಗ್ಟನ್‌: ಅಲಸ್ಕಾ ವಿಮಾನ ನಿಲ್ದಾಣದಲ್ಲಿ ಅಮೆರಿಕ ವಾಯುಪಡೆಯ (US Air Force) ಎಫ್‌ -35 ಫೈಟರ್‌ ಜೆಟ್‌ (F-35 Fighter Jet) ಒಂದು ತಾಂತ್ರಿಕ ದೋಷದಿಂದ ಪಥನಗೊಂಡಿದೆ. ಇದಕ್ಕೂ ಮುನ್ನ ವಿಮಾನದ ತಾಂತ್ರಿಕ ದೋಷ ಬಗೆಹರಿಸಲು ಪೈಲಟ್‌, ಇಂಜಿನಿಯರ್‌ಗಳ ಜೊತೆ ಕಾನ್ಫರೆನ್ಸ್‌ ಕಾಲ್‌ನಲ್ಲಿ 50 ನಿಮಿಷ ಚರ್ಚಿಸಿದ್ದರು. ಆದರೂ ಅದು ಪ್ರಯೋಜನವಾಗಿಲ್ಲ.

    ವಿಮಾನದ ಮುಂಭಾಗ ಮತ್ತು ಲ್ಯಾಂಡಿಂಗ್ ಗೇರ್‌ಗಳ ಹೈಡ್ರಾಲಿಕ್ ಲೈನ್‌ಗಳಲ್ಲಿನ ಮಂಜು ಮೆತ್ತಿಕೊಂಡಿತ್ತು. ಇದರಿಂದ ಟೇಕ್ ಆಫ್ ಆದ ನಂತರ, ಪೈಲಟ್ ಲ್ಯಾಂಡಿಂಗ್ ಗೇರ್ ಹಿಂತೆಗೆದುಕೊಳ್ಳಲು ಪ್ರಯತ್ನಿಸಿದರೂ ಸಹ ಸಾಧ್ಯವಾಗಲಿಲ್ಲ. ಮತ್ತೆ ಕೆಳಕ್ಕೆ ಇಳಿಸುವಾಗ, ಮುಂಭಾಗದ ಗೇರ್ ಲಾಕ್ ಆಗಿತ್ತು. ಈ ವೇಳೆ, ಸಮಸ್ಯೆ ಬಗೆ ಹರಿಸಲು ಪೈಲೆಟ್‌ ಕಾನ್ಫರೆನ್ಸ್‌ ಕಾಲ್‌ನಲ್ಲಿ ಇಂಜಿನಿಯರ್‌ಗಳ ಜೊತೆ‌ 50 ನಿಮಿಷ ಚರ್ಚಿಸಿದ್ದರು.  

    ಪೈಲಟ್ “ಟಚ್ ಅಂಡ್ ಗೋ” ಲ್ಯಾಂಡಿಂಗ್‌ಗೆ ಪ್ರಯತ್ನಿಸಿದರು, ಆದರೆ ಆ ಪ್ರಯತ್ನ ಸಹ ವಿಫಲವಾಯಿತು. ಕೊನೆಯದಾಗಿ ಫೈಲೆಟ್‌ ವಿಮಾನದಿಂದ ಸುರಕ್ಷಿತವಾಗಿ ಪ್ಯಾರಾಚೂಟ್‌ ಮೂಲಕ ಎಜೆಕ್ಟ್‌ ಆಗಿದ್ದು, ವಿಮಾನ ನೆಲಕ್ಕೆ ಅಪ್ಪಳಿಸಿದೆ.

    ವಿಮಾನ ನೆಲಕ್ಕೆ ಅಪ್ಪಳಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಮಾನ ಪಥನದ ಬಳಿಕ ಹೊತ್ತಿ ಉರಿದಿದ್ದು, ಸಂಪೂರ್ಣ ಭಸ್ಮವಾಗಿದೆ.  

  • ಸೇನಾ ಸಮವಸ್ತ್ರದಲ್ಲಿರೋವಾಗ ತಿಲಕವಿಡಲು ಭಾರತೀಯ ಅಧಿಕಾರಿಗೆ ಅಮೆರಿಕ ಅನುಮತಿ

    ಸೇನಾ ಸಮವಸ್ತ್ರದಲ್ಲಿರೋವಾಗ ತಿಲಕವಿಡಲು ಭಾರತೀಯ ಅಧಿಕಾರಿಗೆ ಅಮೆರಿಕ ಅನುಮತಿ

    ವಾಷಿಂಗ್ಟನ್: ಸೇನಾ ಸಮವಸ್ತ್ರದಲ್ಲಿ ಇರುವಾಗ ಹಣೆಗೆ ತಿಲಕ ಇಟ್ಟುಕೊಳ್ಳಲು ಭಾರತೀಯ ಮೂಲದ ವಾಯುಪಡೆ ಅಧಿಕಾರಿ ದರ್ಶನ್ ಶಾಗೆ ಅಮೆರಿಕ ಅನುಮತಿ ನೀಡಿದೆ.

    ಭಾರತೀಯ ಮೂಲದ ದರ್ಶನ್ ಶಾ ಅವರು ಇಎಫ್ ವಾರೆನ್ ಏರ್ ಫೋರ್ಸ್ ಬೇಸ್ ವ್ಯೋಮಿಂಗ್‍ನಲ್ಲಿ ಏರ್‍ಮ್ಯಾನ್ ಆಗಿ ನೇಮಕಗೊಂಡಿದ್ದಾರೆ. ಇದೀಗ ಅವರಿಗೆ ಸಮವಸ್ತ್ರದಲ್ಲಿರುವಾಗ ತಿಲಕವನ್ನು ಇಟ್ಟುಕೊಳ್ಳಲು ಅಮೆರಿಕ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಹೀಗಾಗಿ ದರ್ಶನ್ ಶಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

     

    ಈ ಬಗ್ಗೆ ಪ್ರತಿಕ್ರಿಯೆ ನಿಡಿರುವ ಅವರು, ತಿಲಕ ಧರಿಸಿ ಕೆಲಸ ಮಾಡುವುದು ಅದ್ಭುತ ಅನುಭವ. ನನಗೆ ಅವಕಾಶ ನೀಡಿದ ಅಮೆರಿಕ ವಾಯುಪಡೆಗೆ ಧನ್ಯವಾದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಪಾಕ್‌ ಪ್ರಧಾನಿಗೆ 50,000 ರೂ. ದಂಡ

    ವಾಯುಪಡೆಯಲ್ಲಿ ಧಾರ್ಮಿಕ ಸಂಕೇತವಾಗಿರುವ ತಿಲಕ ಧರಿಸಲು ಅವಕಾಶ ನೀಡಿರುವುದಕ್ಕೆ ನನ್ನ ಹೆತ್ತವರು ತುಂಬಾನೇ ಸಂತಸಗೊಂಡಿದ್ದಾರೆ. ಅಲ್ಲದೆ ಟೆಕ್ಸಾಸ್, ಕ್ಯಾಲಿಪೋರ್ನಿಯಾ, ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್‍ನಲ್ಲಿರುವ ನನ್ನ ಸ್ನೇಹಿತರು ಕೂಡ ಶುಭ ಕೋರಿರುವುದಾಗಿ ದರ್ಶನ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!

    ಏರ್ ಫೋರ್ಸ್‍ನಲ್ಲಿ ಈ ರೀತಿಯ ಘಟನೆ ನಡೆದಿರುವುದು ಅವರಿಗೆ ತುಂಬಾ ಸಂತೋಷವಾಗಿದೆ ಎಂದು ಶಾ ಹೇಳಿದರು. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?