Tag: Urvi

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ನನ್ನರಸಿ ರಾಧೆ’ ನಟಿ

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ನನ್ನರಸಿ ರಾಧೆ’ ನಟಿ

    ‘ನನ್ನರಸಿ ರಾಧೆ’ (Nanarasi Radhe) ಖ್ಯಾತಿಯ ಸಹನಾ ಶೆಟ್ಟಿ (Sahana Shetty) ಅವರು ತಮ್ಮ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ನೀಡಿದ್ದಾರೆ. ನಟಿ ಸಹನಾ ಅವರು ಸದ್ಯ ಎಂಗೇಜ್ ಆಗಿದ್ದು, ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ.

    ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನನ್ನರಸಿ ರಾಧೆ’ (Nanarasi Radhe) ಸೀರಿಯಲ್‌ನಲ್ಲಿ ಹೀರೋ ಅಗಸ್ತ್ಯನ (Agastya) ತಂಗಿ ಊರ್ವಿ (Urvi) ರೋಲ್‌ನಲ್ಲಿ ಸಹನಾ ಶೆಟ್ಟಿ ಕಾಣಿಸಿಕೊಂಡಿದ್ದರು. ಅಗಸ್ತ್ಯ- ಊರ್ವಿ ಕಾಂಬೋ ಎಲ್ಲರನ್ನೂ ಮೋಡಿ ಮಾಡಿತ್ತು. ಮೊದಲ ಸೀರಿಯಲ್‌ನಲ್ಲೇ ಸಹನಾ ಗಮನ ಸೆಳೆದಿದ್ದರು.

    ನಟಿ ಸಹನಾ ಶೆಟ್ಟಿ ಅವರು ಸದ್ಯದಲ್ಲೇ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಈ ವರ್ಷ ಫೆ.14 ಪ್ರೇಮಿಗಳ ದಿನದಂದು ತಾವು ಎಂಗೇಜ್ ಆಗಿರೋದಾಗಿ ನಟಿ ತಿಳಿಸಿದ್ದರು. ಎಂಗೇಜ್‌ಮೆಂಟ್ (Engagement) ವೀಡಿಯೋ ಕೂಡ ಹಂಚಿಕೊಂಡಿದ್ದರು. ಇದೀಗ ಪ್ರಿ-ವೆಡ್ಡಿಂಗ್ ಫೋಟೋಶೂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    ಸಹನಾ ಮದುವೆಯಾಗುತ್ತಿರುವ ಹುಡುಗನ ಹೆಸರು ಪ್ರತಾಪ್ ಶೆಟ್ಟಿ, ಸದ್ಯದಲ್ಲೇ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಫೋಟೋಶೂಟ್ ಕಪ್ಪು ಬಣ್ಣದ ಉಡುಗೆಯಲ್ಲಿ ಸಹನಾ-ಪ್ರತಾಪ್ ಮಿಂಚಿದ್ದಾರೆ.

  • ಶಕ್ತಿ, ಯುಕ್ತಿ, ಭಕ್ತಿಯ ‘ಉರ್ವಿ’ ಟ್ರೇಲರ್ ರಿಲೀಸ್ – ಭೇಷ್ ಅಂದ್ರು ಕಿಚ್ಚ ಸುದೀಪ್

    ಬೆಂಗಳೂರು: ಬಹುನಿರೀಕ್ಷಿತ ಮಹಿಳಾ ಪ್ರಧಾನ ಚಿತ್ರ ‘ಉರ್ವಿ’ ಟ್ರೇಲರ್ ಬಿಡುಗಡೆಯಾಗಿದೆ. ನಟ ಯಶ್ ಹಾಗೂ ರಾಧಿಕಾ ಪಂಡಿತ್ ಗುರುವಾರ ರಾತ್ರಿ ಟ್ರೇಲರ್ ಬಿಡುಗಡೆಗೊಳಿಸಿದರು.

    ಸ್ಟಾರ್ ನಟಿಯರಾದ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್, ಜಾನ್ವಿ ಜ್ಯೋತಿ, ಮಧುಕರ್, ಪ್ರಭು ಮುಂಡ್ಕೂರು ಹಾಗೂ ವಾಸುಕಿ ವೈಭವ್ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆಯಲ್ಲಿ ಅಚ್ಯುತ ಕುಮಾರ್ ಅವರೂ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ಪ್ರದೀಪ್ ವರ್ಮಾ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು ಚಿತ್ರದ ಟ್ರೇಲರ್ ಭಾರೀ ಕ್ಯೂರಿಯಾಸಿಟಿ ಹುಟ್ಟು ಹಾಕಿಸಿದೆ ಎನ್ನುವುದಂತೂ ಸುಳ್ಳಲ್ಲ. ಮನೋಜ್ ಜಾರ್ಜ್ ಚಿತ್ರಕ್ಕೆ ಸಂಗೀತ ನೀಡಿದರೆ ತಿಳಿ ಪ್ರೇಮ ಎಂಬ ಹಾಡನ್ನು ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಹಾಡಿದ್ದಾರೆ. ವಿಭಿನ್ನವಾದ ಪೋಸ್ಟರ್, ಹಾಡುಗಳಿಂದಲೇ ಉರ್ವಿ ಈಗಾಗಲೇ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

    ಉರ್ವಿ ಚಿತ್ರದ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಫೇಸ್‍ಬುಕ್‍ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ತಾವು ಮಾಡುವ ಚಿತ್ರದ ಬಗ್ಗೆ ಹೆಮ್ಮೆ ಇರುತ್ತದೆ. ಉರ್ವಿ ಎನ್ನುವುದು ನಮ್ಮ ಮಗು. ಇದು ನಿಮಗಿಷ್ಟವಾದರೆ ನಮಗೆ ತಿಳಿಸಿ ಎಂದು ಅವರು ಫೇಸ್‍ಬುಕ್ ವಾಲ್‍ನಲ್ಲಿ ಬರೆದುಕೊಂಡಿದ್ದಾರೆ.

    ಇನ್ನು ಚಿತ್ರದ ಟ್ರೇಲರ್ ನೋಡಿದ ಕಿಚ್ಚ ಸುದೀಪ್, ಪವನ್ ಒಡೆಯರ್ ಮೆಚ್ಚುಗೆಯ ಮಾತನ್ನಾಡಿ ಚಿತ್ರ ತಂಡದ ಬೆನ್ನು ತಟ್ಟಿದ್ದಾರೆ.