Tag: Urvashi Routella

  • 40 ಲಕ್ಷ ಮೌಲ್ಯದ ಡ್ರೆಸ್ ಹಾಕಿ ಮಿಂಚಿದ ಊರ್ವಶಿ ರೌಟೇಲಾ

    40 ಲಕ್ಷ ಮೌಲ್ಯದ ಡ್ರೆಸ್ ಹಾಕಿ ಮಿಂಚಿದ ಊರ್ವಶಿ ರೌಟೇಲಾ

    ಮುಂಬೈ: ಮಿಸ್ ಯುನಿವರ್ಸ್ 2021ರ ಇವೆಂಟ್‍ನಲ್ಲಿ ಐರಾವತ ಚಿತ್ರದ ನಾಯಕಿ ಊರ್ವಶಿ ರೌಟೇಲಾ, 40 ಲಕ್ಷ ರೂ. ಮೌಲ್ಯದ ಉಡುಪು ಧರಿಸಿ ಸಖತ್ ಗ್ಲಾಮರ್ ಆಗಿ ಮಿಂಚಿದ್ದಾರೆ.

    ಊರ್ವಶಿಯು ಬಾಲಿವುಡ್‍ನ ಮೋಸ್ಟ್ ಸ್ಟೈಲಿಶ್ ಮತ್ತು ಗ್ಲಾಮರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಈ ಸ್ಟೈಲಿಶ್ ಲುಕ್‍ನಿಂದಲೇ ಎಷ್ಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಆದರೆ ಅವರ ಐಷಾರಾಮಿ ಲೈಫ್ ಸ್ಟೈಲ್ ಜೊತೆಗೆ ಅವರು ತೊಡುವ ಉಡುಪುಗಳು ಸಹ ತುಂಬಾ ದುಬಾರಿಯಾಗಿರುತ್ತವೆ. ಇದನ್ನೂ ಓದಿ: ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್‌ಗೆ ಚಿತ್ರರಸಿಕರಿಂದ ಬಹುಪರಾಕ್

    ಇತ್ತೀಚಿಗೆ ನಡೆದ ಮಿಸ್ ಯುನಿವರ್ಸ್ 2021ರ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಊರ್ವಶಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಕಪ್ಪು ಬಣ್ಣದ ನೆಟ್ ಡ್ರೆಸ್ ಧರಿಸಿ ನೋಡುಗರ ಗಮನ ಸೆಳೆದಿದ್ದಾರೆ.

    ನಟಿಯ ಈ ಡ್ರೆಸ್ ಬೆಲೆ 40 ಲಕ್ಷ ರೂ. ಆಗಿದ್ದು, ಈ ಡ್ರೆಸ್‍ನಲ್ಲಿ ಅಂತಹದೇನಿದೆ ಎಂದು ನೀವು ಯೋಚಿಸುತ್ತಿರಬೇಕು. ಊರ್ವಶಿಯ ಹಾಲ್ಟರ್ ಡೀಪ್ ನೆಕ್ ಕಪ್ಪು ಬಣ್ಣದ ಈ ಡ್ರೆಸ್ ಮೇಲೆ ಸುಂದರವಾದ ಗೋಲ್ಡನ್ ವರ್ಕ್ ಮಾಡಲಾಗಿದೆ. ಈ ಡ್ರೆಸ್‍ನ ವೈಶಿಷ್ಟ್ಯವೆನೆಂದರೆ ಅವರು ಉಡುಗೆಗೆ ಹೊಂದಿಕೊಂಡಿರುವ ಮ್ಯಾಚಿಂಗ್ ನೆಟ್‍ವೆಲ್ ಹಾಗೂ ಎರಡು ಕೈಗಳ ಭುಜದ ಮೇಲೆ ಅವರು ಅದನ್ನು ಕಟ್ಟಿಕೊಂಡಿದ್ದು ಮತ್ತು ನೆಟ್ ರೀತಿಯ ಬಟ್ಟೆಯನ್ನು ತಲೆಗೆ ಸುತ್ತಿಕೊಂಡಿದ್ದನ್ನು ನೀವು ಕಾಣಬಹುದಾಗಿದೆ. ಇದನ್ನೂ ಓದಿ: ‘ಪುಷ್ಪ’ ಸಿನಿಮಾದ ರೋಮ್ಯಾಂಟಿಕ್ ಸೀನ್​ಗೆ ಬಿತ್ತು ಕತ್ತರಿ

    ಡ್ರೆಸ್ ನೊಂದಿಗೆ ಮೇಕಪ್ ಅನ್ನು ಸಹ ತುಂಬಾ ವಿಶೇಷವಾಗಿ ಮಾಡಿಕೊಂಡಿದ್ದಾರೆ. ಸ್ಮೋಕಿ ಬ್ಲ್ಯಾಕ್ ಐ ಲುಕ್‍ನೊಂದಿಗೆ ಕಪ್ಪು ಉಡುಗೆ ತೊಟ್ಟಿದ್ದಾರೆ. ಊರ್ವಶಿಯ ಈ ಉಡುಗೆಯೊಂದಿಗೆ ವಜ್ರದ ಕಿವಿಯೋಲೆಗಳು ಮತ್ತು ವಜ್ರದ ಬೆರಳಿನ ಉಂಗುರಗಳನ್ನು ಸಹ ಹಾಕಿಕೊಂಡಿದ್ದಾರೆ.

  • ‘ಐರಾವತ’ ಬೆಡಗಿ ಊರ್ವಶಿಯ ಮದುವೆ ಫೋಟೋ ವೈರಲ್

    ‘ಐರಾವತ’ ಬೆಡಗಿ ಊರ್ವಶಿಯ ಮದುವೆ ಫೋಟೋ ವೈರಲ್

    ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ನಟಿಯ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ನಟಿ ಊರ್ವಶಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಐರಾವತ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಊರ್ವಶಿ ಮದುವೆ ಫೋಟೋ ವೈರಲ್ ಆಗಿದೆ. ಹೀಗಾಗಿ ಅಭಿಮಾನಿಗಳು ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ನಟ-ನಟಿಯರು ಮದುವೆಯಾಗುತ್ತಿದ್ದಾರೆ. ಅದೇ ರೀತಿ ಊರ್ವಶಿ ಕೂಡ ಸದ್ದಿಲ್ಲದೆ ಮದುವೆಯಾಗಿದ್ದಾರಾ ಎಂದುಕೊಂಡಿದ್ದರು. ಆದರೆ ಊರ್ವಶಿ ನಿಜ ಜೀವನದಲ್ಲಿ ಮದುವೆಯಾಗಿಲ್ಲ. ಬದಲಾಗಿ ಸಿನಿಮಾದಲ್ಲಿ ವಿವಾಹವಾಗಿದ್ದಾರೆ.

    ಊರ್ವಶಿ ಮದುವೆಯ ಫೋಟೋವನ್ನು ಕಿರುತೆರೆ ನಟ ಗೌತನ್ ಗುಲಾಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ “ಮದುವೆ ಶುಭಾಶಯಗಳು ಅಂತ ವಿಶ್ ಮಾಡುವುದಿಲ್ಲವೇ” ಎಂದು ಕ್ಯಾಪ್ಶನ್ ಕೊಡುವ ಮೂಲಕ ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದರು. ಹೀಗಾಗಿ ಇವರಿಬ್ಬರು ಮದುವೆಯಾಗಿದ್ದಾರೆ ಎಂದುಕೊಂಡಿದ್ದರು. ನಂತರ ಸಿನಿಮಾದ ಫೋಟೋ ಎಂದು ಗೊತ್ತಾಗಿದೆ.

    ಗೌತಮ್ ಮತ್ತು ಊರ್ವಶಿ ‘ವರ್ಜಿನ್ ಭಾನುಪ್ರಿಯ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಕೆಲವು ದಿನಗಳಲ್ಲಿ ಓಟಿಟಿ ಪ್ಲಾಟ್‍ಫಾರ್ಮ್ ಮೂಲಕ ಬಿಡುಡಗೆಯಾಗಲಿದೆ. ಇದೇ ಸಿನಿಮಾದಲ್ಲಿ ಗೌತಮ್ ಮತ್ತು ಊರ್ವಶಿ ಮದುವೆಯಾಗುವ ದೃಶ್ಯ ಇದೆ. ಆ ಫೋಟೋವನ್ನು ನಟ ಗೌತಮ್ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

    ಇದೊಂದು ಕಾಮಿಡಿ ಸಿನಿಮಾವಾಗಿದ್ದು, ಅಜಯ್ ಲೋಹನ್ ಆಕ್ಷನ್ ಕಟ್ ಹೇಳಿದ್ದಾರೆ. ಯುವಕರು ಮತ್ತು ಅವರ ಕುಟುಂಬದ ನಡುವಿನ ಸಂಬಂಧದ ಬಗ್ಗೆ ಇರುವ ಸಿನಿಮಾವಾಗಿದೆ. ಜುಲೈ 16ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

    https://www.instagram.com/p/CCIY9K6sN0f/?igshid=lbvz3nqbtj3a