Tag: Urvashi Rautela

  • ನಟಿ ಊರ್ವಶಿ ವಿರುದ್ಧ ಅಸಮಾಧಾನ ಹೊರಹಾಕಿದ ದರ್ಶನ್

    ನಟಿ ಊರ್ವಶಿ ವಿರುದ್ಧ ಅಸಮಾಧಾನ ಹೊರಹಾಕಿದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ನಾವು ಕನ್ನಡ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಕನ್ನಡ ಅಭಿಮಾನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂಬುದು ನನ್ನ ಆಸೆ. ಕೆಲವರು ಕನ್ನಡ ಕಲಿಯುತ್ತಾರೆ. ಹೊಸಬರು ಎಂದಾಕ್ಷಣ ಎಲ್ಲವೂ ಆಗುತ್ತೆ ಎಂಬ ಅರ್ಥ ಅಲ್ಲ. ಒಂದು ಹೊಸ ಪ್ರಯತ್ನ ಮಾಡಬೇಕು ಎಂದರು.

    ನಮ್ಮ ಭಾಷೆಯವರನ್ನೇ ಸಿನಿಮಾದಲ್ಲಿ ಅವಕಾಶ ಕೊಟ್ಟಾಗ ಲಿಪ್ ಮೂಮೆಂಟ್ ತಿಳಿಯುತ್ತದೆ. ‘ಐರಾವತ’ ಚಿತ್ರದಲ್ಲಿ ಹೀಗೆ ಆಗಿತ್ತು. ನಟಿ ಊರ್ವಶಿ ನೋಡಲು ಚೆನ್ನಾಗಿದ್ದರು. ಆದರೆ ಅವರು ಕನ್ನಡ ಭಾಷೆ ಕಲಿಯಲಿಲ್ಲ. ಇದು ಐರಾವತ ಚಿತ್ರಕ್ಕೆ ಮೈನಸ್ ಪಾಯಿಂಟ್ ಆಯಿತು. ಮುಂಬೈಯಿಂದ ಬಂದವರು ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೆ ಹೋದಾಗ ಅಲ್ಲಿನ ಭಾಷೆ ಕಲಿಯುತ್ತಾರೆ. ಆದರೆ ನಮ್ಮ ಭಾಷೆಯನ್ನು ನಿರ್ಲಕ್ಷ್ಯಿಸುತ್ತಾರೆ ಎಂದು ದರ್ಶನ್ ಅಸಮಾಧಾನ ವ್ಯಕ್ತಪಡಿಸಿದರು.

    ನಾನು ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಶೂಟಿಂಗ್ ಮಾಡಿದ್ದೇನೆ. ಬೇರೆ ಭಾಷೆಗಳ ಸಿನಿಮಾ ಸೆಟ್ ನೋಡಿದ್ದೇವೆ. ಅವರ ಸಿನಿಮಾ ಸೆಟ್ ನೋಡಿದಾಗ ನಮ್ಮ ಕನ್ನಡ ಸಿನಿಮಾ ಸೆಟ್ ಚೆನ್ನಾಗಿದೆ ಎಂದು ಎನಿಸುತ್ತೆ. ನಿರ್ಮಾಪಕರು ಹೊರಗಿನಿಂದ ನಟಿಯನ್ನು ಕರೆದುಕೊಂಡು ಬರುತ್ತಾರೆ ಎಂದು ಹೇಳಿದಾಗ ನಾನು ಅವರಿಗೆ ಟಾಪ್ ಹೀರೋಯಿನ್ ಕರೆದುಕೊಂಡು ಬಾ ಎಂದು ಹೇಳುತ್ತೇನೆ. ಮುಂಬೈಯಿಂದ ನಟಿಯನ್ನು ಕರೆದುಕೊಂಡು ಬರುತ್ತೇನೆ ಎಂದರೆ ನಮ್ಮವರನ್ನೇ ನಟಿಯಾಗಿ ಮಾಡು ಎಂದು ಹೇಳುತ್ತೇನೆ ಎಂದರು.

    ದರ್ಶನ್ ಜೊತೆಗೆ ನಟಿ ಊರ್ವಶಿ ‘ಐರಾವತ’ ಸಿನಿಮಾದಲ್ಲಿ ನಟಿಯಾಗಿ ನಟಿಸಿದ್ದರು.

  • ಡ್ಯಾನ್ಸ್ ಮಾಡುತ್ತಾ ಧರಿಸಿದ್ದ ಟೀ-ಶರ್ಟ್ ತೆಗೆದ ‘ಐರಾವತ’ ಬೆಡಗಿ: ವಿಡಿಯೋ ವೈರಲ್

    ಡ್ಯಾನ್ಸ್ ಮಾಡುತ್ತಾ ಧರಿಸಿದ್ದ ಟೀ-ಶರ್ಟ್ ತೆಗೆದ ‘ಐರಾವತ’ ಬೆಡಗಿ: ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಡ್ಯಾನ್ಸ್ ಮಾಡುತ್ತಾ ತಾನು ಧರಿಸಿದ್ದ ಟೀ-ಶರ್ಟ್ ತೆಗೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಊರ್ವಶಿ ತಾವು ನಟಿಸಿದ ಸೂಪರ್ ಹಿಟ್ ‘ಬಿಜಲಿ ಕೀ ತಾರ್’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಊರ್ವಶಿ ತಾವು ಧರಿಸಿದ್ದ ಟೀ-ಶರ್ಟ್ ತೆಗೆದಿದ್ದಾರೆ. ಈ ವಿಡಿಯೋವನ್ನು ಸ್ವತಃ ಊರ್ವಶಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ತಾವು ನಟಿಸಿದ ‘ಬಿಜಲಿ ಕೀ ತಾರ್’ ಹಾಡು ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಊರ್ವಶಿ ಮತ್ತೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೆ ಈ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ, “ನಿಮ್ಮ ಐವರು ಸ್ನೇಹಿತರಿಗೆ ಟ್ಯಾಗ್” ಮಾಡಿ ಎಂದು ಬರೆದುಕೊಂಡಿದ್ದಾರೆ.

    ಊರ್ವಶಿ ಅವರು ಪೋಸ್ಟ್ ಮಾಡಿದ ಈ ವಿಡಿಯೋಗೆ ಇದುವರೆಗೂ 17 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದ್ದು, 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಭಿಮಾನಿಗಳು ಊರ್ವಶಿ ಅವರ ಡ್ಯಾನ್ಸ್ ಸ್ಟೈಲ್‍ಗೆ ಫಿದಾ ಆಗಿದ್ದು, ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಅನೀಸ್ ಬಾಜ್ಮಿ ಅವರ ನಿರ್ದೇಶನದ ‘ಪಾಗಲ್‍ಪಂತಿ’ ಚಿತ್ರದಲ್ಲಿ ಊರ್ವಶಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇಲಿಯಾನಾ ಡಿ ಕ್ರೂಸ್, ಜಾನ್ ಅಬ್ರಾಹಂ ಲೀಡ್ ರೋಲ್‍ನಲ್ಲಿ ನಟಿಸುತ್ತಿದ್ದು, ಅನಿಲ್ ಕಪೂರ್, ಅರ್ಷದ್ ವಾರ್ಸಿ, ಪುಲ್ಕಿತ್ ಸಾಮ್ರಾಟ್ ಹಾಗೂ ಕೃತಿ ಕರಬಂದ ಕಾಣಿಸಿಕೊಂಡಿದ್ದಾರೆ. ಚಿತ್ರ ಇದೇ ವರ್ಷ ನವೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಊರ್ವಶಿ ಈ ಹಿಂದೆ ಸ್ಯಾಂಡಲ್ ವುಡ್ ನಟ ದರ್ಶನ್ ಅಭಿನಯದ ಐರಾವತ ಚಿತ್ರದಲ್ಲಿ ನಟಿಸಿದ್ದರು.

  • ಹಿಂಭಾಗಕ್ಕೆ ಬೋನಿ ಕಪೂರ್ ಟಚ್ – 5 ತಿಂಗಳ ಬಳಿಕ ಊರ್ವಶಿ ಮೌನ ಸ್ಫೋಟ

    ಹಿಂಭಾಗಕ್ಕೆ ಬೋನಿ ಕಪೂರ್ ಟಚ್ – 5 ತಿಂಗಳ ಬಳಿಕ ಊರ್ವಶಿ ಮೌನ ಸ್ಫೋಟ

    ಮುಂಬೈ: ಐದು ತಿಂಗಳ ಹಿಂದೆ ಬಾಲಿವುಡ್ ಸಿನಿಮಾ ನಿರ್ದೇಶಕ ಬೋನಿ ಕಪೂರ್ ಮದುವೆಯಲ್ಲಿ ನಟಿ ಊರ್ವಶಿ ರೌಥೆಲಾರ ಹಿಂಭಾಗಕ್ಕೆ ಟಚ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಐದು ತಿಂಗಳ ಬಳಿಕ ಊರ್ವಶಿ ವಿಡಿಯೋಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

    ಏಪ್ರಿಲ್ ನಲ್ಲಿ ಸ್ನೇಹಿತರ ಮದುವೆ ಸಮಾರಂಭದಲ್ಲಿ ನಾನು ಭಾಗಿಯಾಗಿದ್ದಾಗ ಅಲ್ಲಿ ಬೋನಿ ಕಪೂರ್ ಸಹ ಬಂದಿದ್ದರು. ವೇದಿಕೆ ಮೇಲೆ ನವದಂಪತಿ ಜೊತೆ ಫೋಟೋಗೆ ಪೋಸ್ ಕೊಡುತ್ತಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಕೈ ನನಗೆ ತಾಕಿದ್ದು, ಅದಕ್ಕಿಂತ ಹೆಚ್ಚಿನದು ಅಲ್ಲಿ ಏನು ನಡೆದಿಲ್ಲ. ಅವರ ಕೈ ನನಗೆ ತಾಕಿದ್ದಾಗ ನಾನು ಯಾವುದೇ ಪ್ರತಿಕಿಯೆ ಸಹ ನೀಡಿರಲಿಲ್ಲ. ಆದ್ರೆ ಬೆಳಗ್ಗೆ ಆಗುವಷ್ಟರಲ್ಲಿ ಈ ಸಣ್ಣ ಘಟನೆಯೊಂದು ಹಲವು ಆಯಾಮಗಳನ್ನು ಪಡೆದುಕೊಂಡು ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಬಿತ್ತರವಾಗಿತ್ತು. ಸತತ ಒಂದು ವಾರಗಳ ಕಾಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು ಎಂದು ಊರ್ವಶಿ ಬೇಸರ ವ್ಯಕ್ತಪಡಿಸಿದ್ದಾರೆ.

    ವಿಡಿಯೋ ವೈರಲ್ ಬಳಿಕ ಬೋನಿ ಕಪೂರ್ ಸಹ ಜೊತೆ ಮಾತನಾಡಿದ್ದೇನೆ. ಬೋನಿ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡದೇ ಅಸಮಾಧಾನ ಹೊರ ಹಾಕಿದ್ದರು. ವಿಡಿಯೋವನ್ನು ಕೆಟ್ಟದಾಗಿ ಬಿಂಬಿಸಿದವರ ವಿರುದ್ಧ ಬೇಸರ ಹೊರಹಾಕಿದ್ದರು ಎಂದು ಊರ್ವಶಿ ತಿಳಿಸಿದ್ದಾರೆ.

    ಏನದು ವಿಡಿಯೋ?
    ಮದುವೆ ಕಾರ್ಯಕ್ರಮದಲ್ಲಿ ನವದಂಪತಿ ಜೊತೆ ಫೋಟೋ ತೆಗೆದುಕೊಳ್ಳುವಾಗ ಬೋನಿ ಕಪೂರ್ ಪಕ್ಕದಲ್ಲಿದ್ದ ಊರ್ವಶಿ ಯ ಹಿಂಭಾಗ ಟಚ್ ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಣ್ಣದ ಕಥೆಗಳೊಂದಿಗೆ ಸಂಚರಿಸಿತ್ತು.

  • ವಿಶ್ವಕಪ್ ವೇಳೆ ಪಾಂಡ್ಯ ಜೊತೆ ವಿಶೇಷ ಮನವಿ – ಸ್ಪಷ್ಟನೆ ಕೊಟ್ಟ ಊರ್ವಶಿ ರೌಟೇಲಾ

    ವಿಶ್ವಕಪ್ ವೇಳೆ ಪಾಂಡ್ಯ ಜೊತೆ ವಿಶೇಷ ಮನವಿ – ಸ್ಪಷ್ಟನೆ ಕೊಟ್ಟ ಊರ್ವಶಿ ರೌಟೇಲಾ

    ಮುಂಬೈ: ಬಾಲಿವುಡ್ ನಟಿ, ಹೇಟ್ ಸ್ಟೋರಿ ಚಿತ್ರದ ಮೂಲಕ ಪ್ರಸಿದ್ಧಿಯಾದ ಊರ್ವಶಿ ರೌಟೇಲಾ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ಮಾಡುತ್ತಿದ್ದು, ಸಹಾಯ ಕೇಳಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈಗ ಈ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ಊರ್ವಶಿ ರೌಟೇಲಾ ಸ್ಪಷ್ಟನೆ ನೀಡಿದ್ದಾರೆ.

    ಯೂ ಟ್ಯೂಬ್ ನಲ್ಲಿ “ಊರ್ವಶಿ ರೌಟೇಲಾ ತನ್ನ ಮಾಜಿ ಗೆಳೆಯ ಹಾರ್ದಿಕ್ ಪಾಂಡ್ಯ ಜೊತೆ ಸಹಾಯ ಕೇಳಿದ್ದಾರೆ” ಎನ್ನುವ ಹೆಡ್‍ಲೈನ್ ಹಾಕಿ ಒಂದು ವಿಡಿಯೋ ಅಪ್ಲೋಡ್ ಆಗಿತ್ತು. ಈ ವಿಡಿಯೋಗೆ ಸಂಬಂಧಿಸಿದಂತೆ ಇನ್‍ಸ್ಟಾಗ್ರಾಮನ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ ಊರ್ವಶಿ, ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಆಗುತ್ತಿರುವ ಈ ರೀತಿಯ ಸುದ್ದಿಗಳನ್ನು ದಯವಿಟ್ಟು ನಿಲ್ಲಿಸಿ. ನಾನು ನನ್ನ ಕುಟುಂಬಕ್ಕೆ ಉತ್ತರ ನೀಡಬೇಕು. ಇದರಿಂದ ನನಗೆ ಸಮಸ್ಯೆಯಾಗುತ್ತದೆ ಎಂದು ಅಪ್‍ಡೇಟ್ ಮಾಡಿಕೊಂಡಿದ್ದಾರೆ.

    ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಊರ್ವಶಿ ರೌಟೇಲಾ ಪಾಂಡ್ಯ ಜೊತೆ ಸಹಾಯ ಕೇಳಿದ್ದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನ ವಿರುದ್ಧ ಪಂದ್ಯವನ್ನು ತಾಯಿ ಜೊತೆ ವೀಕ್ಷಿಸಲು ಊರ್ವಶಿ 2 ಪಾಸ್ ಬೇಕಿತ್ತು ಎಂದು ಹಾರ್ದಿಕ್ ಪಾಂಡ್ಯ ಅವರಲ್ಲಿ ಕೇಳಿಕೊಂಡಿದ್ದರು. ಹಲವಾರು ಬಾರಿ ಮೆಸೇಜ್ ಮಾಡಿದ್ದರು ಪಾಂಡ್ಯ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕ್ರಿಕೆಟ್ ಅಭ್ಯಾಸದಲ್ಲಿ ನಿರತರಾಗಿದ್ದ ಕಾರಣ ಹಾರ್ದಿಕ್ ಪಾಂಡ್ಯ ಪಾಸ್ ಬೇಡಿಕೆಯ ಮಸೇಜ್ ನೋಡಿರಲಿಲ್ಲವಂತೆ. ಈ ವಿಚಾರ ಬೆಳಕಿಗೆ ಬಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು.

    ಚರ್ಚೆ ಜೋರಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಊರ್ವಶಿ ರೌಟೇಲಾ, ನಾನು ಲಂಡನ್‍ಗೆಂದು ಶೂಟಿಂಗ್‍ಗೆ ತೆರಳಿದ್ದೆ. ಮ್ಯಾಚ್ ಮ್ಯಾಂಚೆಸ್ಟರ್ ನಲ್ಲಿತ್ತು. ಲಂಡನ್‍ನಿಂದ ಮ್ಯಾಂಚೆಸ್ಟರ್ ಗೆ ಬಹಳ ದೂರವಿದೆ. ನನ್ನ ಮಾಜಿ ಪಿಆರ್ ಹೇಳುವ ವಿಷಯವನ್ನು ನಂಬಬೇಡಿ. ಇದು ಸುಳ್ಳು ಸುದ್ದಿ ಎಂದು ಹೇಳಿದ್ದರು.

    2018ರಲ್ಲಿ ಊರ್ವಶಿ ರೌಟೇಲಾ ಮತ್ತು ಹಾರ್ದಿಕ್ ಪಾಂಡ್ಯ ಜೊತೆಯಾಗಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಇವರಿಬ್ಬರ ಮಧ್ಯೆ ಡೇಟಿಂಗ್ ನಡೆಯುತ್ತಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಹಲವಾರು ಬಾರಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.

  • ಶವರ್ ಕೆಳಗೆ ನಿಂತು ಐರಾವತ ನಟಿಯ ಹಾಟ್ ಫೋಟೋಶೂಟ್

    ಶವರ್ ಕೆಳಗೆ ನಿಂತು ಐರಾವತ ನಟಿಯ ಹಾಟ್ ಫೋಟೋಶೂಟ್

    ಮುಂಬೈ: ಬಾಲಿವುಡ್, ‘ಐರಾವತ’ ಚಿತ್ರದ ನಟಿ ಊರ್ವಶಿ ರೌಟೇಲಾ ಶವರ್ ಕೆಳಗೆ ನಿಂತು ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಊರ್ವಶಿ ಅವರ ಇನ್‍ಸ್ಟಾಗ್ರಾಂ ಪೋಸ್ಟ್ ನಲ್ಲಿ ನಿಯಾನ್ ಪಿಂಕ್ ಲೇಸ್ ಉಡುಪು ಧರಿಸಿ ಶವರ್ ಕೆಳಗೆ ನಿಂತಿದ್ದಾರೆ. ಈ ಡ್ರೆಸ್‍ಗೆ ಅವರು ಹಾಟ್ ಕೆಂಪು ಬಣ್ಣದ ಒಳ ಉಡುಪು ಧರಿಸಿದ್ದು, ಫೋಟೋಗೆ ಪೋಸ್ ನೀಡಿದ್ದಾರೆ.

     

    View this post on Instagram

     

    ???? #MAXIM

    A post shared by URVASHI RAUTELA ????????Actor (@urvashirautela) on

    ಊರ್ವಶಿ ಇನ್‍ಸ್ಟಾಗ್ರಾಂನಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಅಲ್ಲದೆ ತಮ್ಮ ಹೊಸ ಫೋಟೋಶೂಟ್‍ನ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಊರ್ವಶಿಯ ಈ ಫೋಟೋಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಊರ್ವಶಿ ರೌಟೇಲಾ ಈಗ ನಟ ಜಾನ್ ಅಬ್ರಹಾಂ ಜೊತೆ ‘ಪಾಗಲ್‍ಪಂತಿ ಇನ್ ಲಂಡನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಈ ವರ್ಷ ಬಿಡುಗಡೆ ಆಗಲಿದೆ. ಈ ಹಿಂದೆ ಊರ್ವಶಿ ‘ಹೇಟ್ ಸ್ಟೋರಿ 4’ ಚಿತ್ರದಲ್ಲಿ ನಟಿಸಿದ್ದರು.

  • ಊರ್ವಶಿ ಹಿಂಬದಿಗೆ ಹೊಡೆದ ಬೋನಿ ಕಪೂರ್- ಟ್ರೋಲರ್ಸ್‌ಗೆ ಚಳಿ ಬಿಡಿಸಿದ `ಐರಾವತ’ ನಟಿ

    ಊರ್ವಶಿ ಹಿಂಬದಿಗೆ ಹೊಡೆದ ಬೋನಿ ಕಪೂರ್- ಟ್ರೋಲರ್ಸ್‌ಗೆ ಚಳಿ ಬಿಡಿಸಿದ `ಐರಾವತ’ ನಟಿ

    ಮುಂಬೈ: ಬಾಲಿವುಡ್ ಬೆಡಗಿ, ‘ಐರಾವತ’ ಚಿತ್ರದ ನಾಯಕಿ ಊರ್ವಶಿ ರೌಟೆಲಾ ಹಿಂಬದಿಗೆ ನಿರ್ಮಾಪಕ, ದಿ. ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದು, ಟ್ರೋಲ್ ಮಾಡುವವರಿಗೆ ನಟಿ ಚಳಿ ಬಿಡಿಸಿದ್ದಾರೆ.

    ಹೌದು. ಊರ್ವಶಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ರು. ಇದರಿಂದ ಸಿಟ್ಟಿಗೆದ್ದ ನಟಿ, ನಿಮಗೆ ಹೆಣ್ಣಮಕ್ಕಳಿಗೆ ಗೌರವ ಕೊಡಲು ಆಗುವುದಿಲ್ಲ ಎಂದರೆ ಹೆಣ್ಣು ಮಕ್ಕಳ ಪವರ್ ಬಗ್ಗೆ ಮಾತನಾಡಿಬೇಡಿ ಎಂದು ಟ್ವೀಟ್ ಮಾಡುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ.

    https://twitter.com/UrvashiRautela/status/1112750029444284416

    ಅಲ್ಲದೆ ಮತ್ತೊಂದು ಟ್ವೀಟ್‍ನಲ್ಲಿ, ನಾನು ಬೆಳಗ್ಗೆ ಎದ್ದು ಸಾಮಾಜಿಕ ಜಾಲತಾಣದಲ್ಲಿ ನೋಡಿದಾಗ ನನ್ನ ಹಾಗೂ ಬೋನಿ ಕಪೂರ್ ಸರ್ ಅವರ ವಿಡಿಯೋ ಟ್ರೋಲ್ ಮಾಡುತ್ತಿರುವುದನ್ನು ನೋಡಿ ನನಗೆ ಶಾಕ್ ಆಯಿತು. ಬೋನಿ ಕಪೂರ್ ಅವರು ಜೆಂಟಲ್‍ಮೆನ್. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ವಿಡಿಯೋ ಹಾಕುವ ಮೊದಲು ಅಥವಾ ಇನ್ನೊಬ್ಬರ ಹೆಸರು ಹಾಳು ಮಾಡುವ ಮೊದಲು ಯಾರು ಎರಡು ಬಾರಿ ಯೋಚಿಸುವುದಿಲ್ಲ. ಇದರಿಂದ ನನಗೆ ಬೇಸರವಾಗಿದೆ. ದಯವಿಟ್ಟು ಟ್ರೋಲ್ ಮಾಡುವುದನ್ನು ನಿಲ್ಲಿಸಿ. ನಾನು ಬೋನಿ ಕಪೂರ್ ಅವರನ್ನು ಗೌರವಿಸುತ್ತೇನೆ ಹಾಗೂ ಅವರ ಪರವಾಗಿ ನಿಲ್ಲುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ವೈರಲ್ ವಿಡಿಯೋದಲ್ಲೇನಿದೆ?:
    ವಿಡಿಯೋದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಬೋನಿ ಕಪೂರ್ ಹಾಗೂ ಊರ್ವಶಿ ಫೋಟೋಗೆ ಪೋಸ್ ನೀಡಿದ್ದಾರೆ. ಪೋಸ್ ಕೊಡುತ್ತಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಅವರು ಊರ್ವಶಿ ಅವರ ಹಿಂಬದಿಗೆ ಹೊಡೆದಿದ್ದಾರೆ. ಈ ವಿಡಿಯೋವನ್ನು ಜನರು ಟ್ರೋಲ್ ಮಾಡಲು ಶುರು ಮಾಡಿದ್ದು, ಟ್ರೋಲರ್ಸ್‍ಗೆ ಊರ್ವಶಿ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.

    ಕಾರ್ಯಕ್ರಮವೇನು?
    ಇತ್ತೀಚೆಗೆ ನಿರ್ಮಾಪಕ ಜಯಂತಿಲಾಲ್ ಗಾಡಾ ಅವರ ಮಗ ಅಕ್ಸಯ್ ಗಾಡಾ ಅವರ ಮದುವೆ ಮುಂಬೈನಲ್ಲಿ ನಡೆಯಿತು. ಈ ಮದುವೆ ಕಾರ್ಯಕ್ರಮಕ್ಕೆ ನಟಿ ಊರ್ವಶಿ ರೌಟೆಲಾ ಹಾಗೂ ನಿರ್ಮಾಪಕ ಬೋನಿ ಕಪೂರ್ ಕೂಡ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಊರ್ವಶಿ ಹಾಗೂ ಬೋನಿ ಕಪೂರ್ ಅವರ ಈ ವಿಡಿಯೋವೊಂದು ವೈರಲ್ ಆಗಿತ್ತು.

  • ಚಿತ್ರ-ವಿಚಿತ್ರ ಡ್ರೆಸ್ ತೊಟ್ಟುಕೊಂಡ ಊರ್ವಶಿ

    ಚಿತ್ರ-ವಿಚಿತ್ರ ಡ್ರೆಸ್ ತೊಟ್ಟುಕೊಂಡ ಊರ್ವಶಿ

    ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸಿನಿಮಾ ತಾರೆಯರು ತಮ್ಮ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡುವ ಮೂಲಕ ಸುದ್ದಿಯಾಗುತ್ತಿದ್ದಾರೆ.

    ಬಾಲಿವುಡ್ ನಟಿ ಊರ್ವಶಿ ರೌತೆಲಾ ತಮ್ಮ ಹಾಟ್ ಮತ್ತು ಬೋಲ್ದ್ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು, ಆ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.

    https://www.instagram.com/p/BqRhJesAo1T/?hl=en

    ನಟಿ ಊರ್ವಶಿ ಅಪ್ಲೋಡ್ ಮಾಡಿರುವ ಫೋಟೋದಲ್ಲಿ ಚಿತ್ರ-ವಿಚಿತ್ರವಾದ ಉಡುಗೆಯನ್ನು ಧರಿಸಿದ್ದಾರೆ. ಅವರು ಧರಿಸಿರುವ ಡ್ರೆಸ್‍ನ ತುಂಬಾ ಡಿಸೈನ್ ಇದೆ. ಆ ಉಡುಪು ಆಕೆಯ ಚರ್ಮದ ಬಣ್ಣದ್ದಾಗಿದೆ. ಊರ್ವಶಿ ಒಂದು ಸೋಫಾ ಮೇಲೆ ಮಲಗಿಕೊಂಡು ಕ್ಯಾಮೆರಾಗೆ ಪೋಸ್ಟ್ ಕೊಟ್ಟಿದ್ದಾರೆ. ಆ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ ಮುಂಜಾನೆಯ ಶುಭಾಶಯವನ್ನು ತಿಳಿಸಿದ್ದಾರೆ.

    ವಿಚಿತ್ರವಾಗಿರುವ ಡ್ರೆಸ್ ಧರಿಸಿ ಎರಡು ಫೋಟೋಗಳನ್ನು ನಟಿ ಊರ್ವಶಿ ಅಪ್ಲೋಡ್ ಮಾಡಿದ್ದಾರೆ. ಅಪ್ಲೋಡ್ ಮಾಡಿದ ಒಂದೇ ದಿನದಲ್ಲಿ ಒಂದು ಫೋಟೋವನ್ನು 3 ಲಕ್ಷಕ್ಕಿಂತಲೂ ಅಧಿಕ ಮಂದಿ ಮತ್ತು ಇನ್ನೊಂದು ಫೋಟೋವನ್ನು 5.5 ಲಕ್ಷಕ್ಕಿಂತ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ಹಲವು ಮಂದಿ ಅನೇಕ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಸೂಪರ್, ತುಂಬಾ ಚೆನ್ನಾಗಿದೆ, ಹಾಟ್ ಬೇಬಿ, ಸೆಕ್ಸಿ ಇನ್ನೂ ಅನೇಕ ರೀತಿಯಲ್ಲಿ ಸುಮಾರು 5 ಸಾವಿರ ಕಮೆಂಟ್ ಮಾಡಿದ್ದಾರೆ.

    https://www.instagram.com/p/BqRhAi9gAyp/

    2013ರಲ್ಲಿ `ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಸಿನಿಮಾ ಅಂಗಳಕ್ಕೆ ಊರ್ವಶಿ ಪಾದಾರ್ಪಣೆ ಮಾಡಿದ್ದಾರೆ. ಗ್ರೇಟ್ ಗ್ರ್ಯಾಂಡ್ ಮಸ್ತಿ, ಸನಮ್ ರೇ, ಕಾಬಿಲ್, ಹೇಟ್ ಸ್ಟೋರಿ-4 ಸಿನಿಮಾಗಳಲ್ಲಿ ಊರ್ವಶಿ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 31 ಲಕ್ಷ ವ್ಯೂವ್ ಪಡೆದುಕೊಂಡ ಊರ್ವಶಿಯ 10 ಸೆಕೆಂಡ್‍ನ ಬೆಲ್ಲಿ ಡ್ಯಾನ್ಸ್

    31 ಲಕ್ಷ ವ್ಯೂವ್ ಪಡೆದುಕೊಂಡ ಊರ್ವಶಿಯ 10 ಸೆಕೆಂಡ್‍ನ ಬೆಲ್ಲಿ ಡ್ಯಾನ್ಸ್

    ಮುಂಬೈ: ಬಾಲಿವುಡ್ ಸಿಜ್ಲಿಂಗ್ ಸ್ಟಾರ್ ಊರ್ವಶಿ ರೌತೆಲಾರ ಬೆಲ್ಲಿ ಡ್ಯಾನ್ಸ್ ವಿಡಿಯೋ ಇಂಟರ್ ನೆಟ್‍ನಲ್ಲಿ ಸಂಚಲನವನ್ನು ಹುಟ್ಟು ಹಾಕಿದೆ. ಕೇವಲ 10 ಸೆಕೆಂಡ್ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿಯೇ 31 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

    ನೃತ್ಯ ತರಬೇತಿ ವೇಳೆ ಈ ವಿಡಿಯೋ ಮಾಡಲಾಗಿದ್ದು, ಸಹ ನೃತ್ಯಗಾರ್ತಿಯೊಂದಿಗೆ ಊರ್ವಶಿ ತಮ್ಮ ಮಾದಕ ಅಭಿನಯದಿಂದ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ವಿಡಿಯೋವನ್ನು ಊರ್ವಶಿ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದೆ.

    2013ರಲ್ಲಿ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಸಿನಿಮಾ ಅಂಗಳಕ್ಕೆ ಊರ್ವಶಿ ಪಾದಾರ್ಪಣೆ ಮಾಡಿದರು. ಗ್ರೇಟ್ ಗ್ರ್ಯಾಂಡ್ ಮಸ್ತಿ, ಸನಮ್ ರೇ, ಕಾಬಿಲ್, ಹೇಟ್ ಸ್ಟೋರಿ-4 ಸಿನಿಮಾಗಳಲ್ಲಿ ಊರ್ವಶಿ ನಟಿಸಿದ್ದಾರೆ.

    https://www.instagram.com/p/BkNoPPShlwa/?taken-by=urvashirautela

  • ಒಂದೇ ದಿನದಲ್ಲಿ 1 ಕೋಟಿ ವ್ಯೂ ಪಡೆದ ಹಾಟ್ ಹಾಟ್ ‘ಹೇಟ್ ಸ್ಟೋರಿ-4’ ಟ್ರೇಲರ್

    ಒಂದೇ ದಿನದಲ್ಲಿ 1 ಕೋಟಿ ವ್ಯೂ ಪಡೆದ ಹಾಟ್ ಹಾಟ್ ‘ಹೇಟ್ ಸ್ಟೋರಿ-4’ ಟ್ರೇಲರ್

    ಮುಂಬೈ: ಬಾಲಿವುಡ್ ನಲ್ಲಿ ಸಿನಿಮಾಗಳ ಯಶಸ್ಸಿನ ನಂತರ ಅದೇ ಟೈಟಲ್ ಬಳಸಿಕೊಂಡು ಹಲವು ಚಿತ್ರಗಳು ತೆರೆಕಾಣುತ್ತವೆ. ಈಗ ಹಾಟ್ ಸೀನ್ ಗಳ ಮೂಲಕವೇ ಯಶಸ್ವಿ ಯಾಗಿರುವ ‘ಹೇಟ್ ಸ್ಟೋರಿ’ ಚಿತ್ರದ ನಾಲ್ಕನೇಯ ಅವತರಣಿಕೆ ತೆರೆಯ ಮೇಲೆ ಬರಲಿದೆ. ಶನಿವಾರ ‘ಹೇಟ್ ಸ್ಟೋರಿ-4’ ಸಿನಿಮಾದ ಟ್ರೇಲರ್ ಬಿಡುಗೊಡೆಗೊಂಡಿದ್ದು ನಂಬರ್ 2 ಟ್ರೆಂಡಿಂಗ್ ನಲ್ಲಿದೆ.

    ಹೇಟ್ ಸ್ಟೋರಿ-4ರಲ್ಲಿ ಊರ್ವಶಿ ರೌತೆಲಾ, ವಿವಾನ ಭಥೆನಾ ಮತ್ತು ಕರಣ್ ವಾಹಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಳೆಯ ಸಿನಿಮಾಗಳಂತೆ ಇಲ್ಲಿಯೂ ರೊಮ್ಯಾಂಟಿಕ್ ಸೀನ್‍ಗಳಿಗೆ ಕೊರತೆ ಕಾಣುವುದಿಲ್ಲ. ಸಿನಿಮಾದಲ್ಲಿ ಊರ್ವಶಿ ನಟಿ ಆಗಬೇಕೆಂಬ ಕನಸನ್ನು ಹೊಂದಿರುವ ನಟಿಯಾಗಿದ್ದು, ಈ ವೇಳೆ ನಾಯಕ ನಟರಿಬ್ಬರ ಪರಿಚಯವಾಗುತ್ತದೆ. ಸಿನಿಮಾದಲ್ಲಿ ಸಹೋದರರಾಗಿರುವ ನಟರಿಬ್ಬರಿಗೂ ನಾಯಕಿಯ ಮೇಲೆ ಪ್ರೇಮಾಂಕುರವಾಗುತ್ತದೆ. ಮುಂದೆ ಕಥಾ ನಾಯಕಿಗೆ ಯಾರ ಜೊತೆ ಲವ್ ಆಗುತ್ತೆ, ತನ್ನ ಕನಸು ಪೂರ್ಣ ಮಾಡಿಕೊಳ್ಳಲು ಇಬ್ಬರು ಸೋದರರನ್ನು ಯಾವ ರೀತಿ ಬಳಸಿಕೊಳ್ಳುತ್ತಾಳೆ ಎಂಬುವುದೆ ಸಿನಿಮಾ ಕಥೆ.

    ವಿಶಾಲ್ ಪಾಂಡ್ಯ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಮಾರ್ಚ್ 09 ರಂದು ತೆರೆಕಾಣಲಿದೆ. 2016ರಲ್ಲಿ ತೆರೆಕಂಡಿದ್ದ ‘ಗ್ರೇಟ್ ಗ್ರ್ಯಾಂಡ್ ಮಸ್ತಿ’ ಸಿನಿಮಾದಲ್ಲಿ ನಟಿಸಿದ್ದರು. 2017ರಲ್ಲಿ ಹೃತಿಕ್ ರೋಷನ್ ಅಭಿನಯದ ‘ಕಾಬಿಲ್’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

    2012ರಲ್ಲಿ ಮೊದಲ ಬಾರಿಗೆ ಹೇಟ್ ಸ್ಟೋರಿ ಚಿತ್ರ ರಿಲೀಸ್ ಆಗಿತ್ತು. ಚಿತ್ರದಲ್ಲಿ ನಟಿ ಪೌಲಿದಾಮ್ ಬೋಲ್ಡ್ ಆಗಿ ನಟಿಸುವುದರ ಮೂಲಕ ಪಡ್ಡೆ ಹುಡುಗರ ಹಾಟ್ ಫೇವರೇಟ್ ಆಗಿದ್ದರು. 2014ರಲ್ಲಿ ಹೇಟ್ ಸ್ಟೋರಿ-2 ನೇ ಭಾಗ ತೆರೆಕಂಡಿತ್ತು. 2ನೇ ಭಾಗದಲ್ಲಿ ಸರ್ವಿನ್ ಚಾವ್ಲಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರೆ, ಸನ್ನಿ ಲಿಯೋನ್ ‘ಪಿಂಕ್ ಲಿಪ್ಸ್’ ಹಾಡಿಗೆ ಹೆಜ್ಜೆ ಹಾಕಿದ್ದರು. ಇನ್ನು ಹೇಟ್ ಸ್ಟೋರಿ-3 ನೇ ಭಾಗ ಮಲ್ಟಿ ಸ್ಟಾರ್ ಗಳಿಂದ ಕೂಡಿತ್ತು. ಡೈಸಿ ಶಾ, ಜರೀನ್ ಖಾನ್ ಇಬ್ಬರೂ ನಟಿಯರು ಒಬ್ಬರಿಗಿಂತ ಒಬ್ರೂ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ರೆ, ಕರಣ್ ಸಿಂಗ್ ಗ್ರೋವರ್ ಮತ್ತು ಶರ್ಮಾ ಸಿಂಗ್ ನಟರು ತಮ್ಮ ಸಿಕ್ಸ್ ಪ್ಯಾಕ್ ಗಳಿಂದ ಗಮನ ಸೆಳೆದಿದ್ದರು. ಹೇಟ್ ಸ್ಟೋರಿ 2, 3 ಮತ್ತು 4ನೇ ಸಿನಿಮಾಗಳು ವಿಶಾಲ್ ಪಾಂಡ್ಯ ನಿರ್ದೇಶನದಲ್ಲಿ ಮೂಡಿ ಬಂದಿವೆ.