Tag: Urvashi Rautela

  • ಕನ್ನಡದಲ್ಲೂ ನಟಿಸಿರುವ ಈ ನಟಿ ಮಕ್ಕಳ ಚಿಕಿತ್ಸೆಗೆ 67 ಲಕ್ಷ ದಾನ

    ಕನ್ನಡದಲ್ಲೂ ನಟಿಸಿರುವ ಈ ನಟಿ ಮಕ್ಕಳ ಚಿಕಿತ್ಸೆಗೆ 67 ಲಕ್ಷ ದಾನ

    ಸ್ಯಾಂಡಲ್ ವುಡ್ ನಲ್ಲಿ ತೆರೆ ಕಂಡಿರುವ ಐರಾವತ ಸಿನಿಮಾದ ನಾಯಕಿ, ಬಾಲಿವುಡ್ ನಟಿ ಮತ್ತು ಮಾಡೆಲ್ ಊರ್ವಶಿ ರೌಟೆಲಾ ಮತ್ತೆ ಸುದ್ದಿಗೆ ಬಂದಿದ್ದಾರೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಹತ್ತು ಹಲವು ಬಗೆಯಲ್ಲಿ ಸಹಾಯ ಮಾಡಿದ್ದ ಈ ನಟಿ ಇದೀಗ ಮಕ್ಕಳ ಸೀಳು ತುಟಿ ಚಿಕಿತ್ಸೆಗಾಗಿ ಬರೋಬ್ಬರಿ 67 ಲಕ್ಷ ರೂಪಾಯಿಯನ್ನು ದಾನ ಮಾಡಿದ್ದಾರೆ. ಮಾಡೆಲಿಂಗ್ ನಿಂದ ಬಂದ ಹಣದಲ್ಲಿ ಅವರು ಪ್ರತಿ ಸಾರಿಯೂ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡುತ್ತಲೇ ಇರುತ್ತಾರೆ.

    ಸಿನಿಮಾಗಳಿಗಿಂತ ಮಾಡೆಲಿಂಗ್ ಜಗತ್ತಿನಲ್ಲಿ ಹೆಚ್ಚು ಪ್ರಸಿದ್ಧ ಹೊಂದಿರುವ ಊರ್ವಶಿ, ಸಾಕಷ್ಟು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ದುಬೈನಲ್ಲಿ ಬಹುಬೇಡಿಕೆಯ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಮಾಡೆಲಿಂಗ್ ಜಗತ್ತಿನ ಜೊತೆ ಜೊತೆಗೆ ಎನ್.ಜಿ.ಓ ಗಳ ರಾಯಭಾರಿಯಾಗಿಯೂ ಉಚಿತವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಆ ಎನ್.ಜಿ.ಓಗಳಿಗೆ ತಾವು ದುಡಿದ ಹಣವನ್ನೂ ಕೊಡುತ್ತಾರೆ. ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್‌ ಡಿಸೈನರ್‌ ಮಸಾಬ ಗುಪ್ತಾ

    ಸದ್ಯ ಸ್ಮೈಲ್ ಟ್ರೈನ್ ಹೆಸರಿನ ಎನ್.ಜಿ.ಓ ಗೆ ರಾಯಭಾರಿ ಆಗಿರುವ ಊರ್ವಶಿ, ಇದೊಂದು ಸೀಳು ತುಂಟಿ ಹೊಂದಿರುವ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಸಂಸ್ಥೆ. ಎರಡು ದಶಕಗಳಿಂದಲೂ ಇದು ಈ ಕೆಲಸವನ್ನು ಮಾಡುತ್ತಿದೆ. ಹಾಗಾಗಿ ಇದರೊಂದಿಗೆ ಕೈ ಜೋಡಿಸಿರುವ ರೌಟೆಲಾ ತನ್ನ ದುಡಿಮೆಯಿಂದ ಬಂದ ಹಣದಲ್ಲಿ 67 ಲಕ್ಷ ದೇಣಿಗೆ ನೀಡಿ, ಆ ಮಕ್ಕಳ ಮೊಗದಲ್ಲಿ ನಗು ಕಾಣಲು ಕಾರಣರಾಗಿದ್ದಾರೆ. ಈ ಹಣದಿಂದ ಇನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಊರ್ವಶಿ ರೌಟೇಲಾ ಜಲ ಸಂರಕ್ಷಣೆ ಅಭಿಯಾನದ ರಾಯಭಾರಿ

    ಊರ್ವಶಿ ರೌಟೇಲಾ ಜಲ ಸಂರಕ್ಷಣೆ ಅಭಿಯಾನದ ರಾಯಭಾರಿ

    ನವದೆಹಲಿ: ನಟಿ ಊರ್ವಶಿ ರೌಟೇಲಾರನ್ನು ಮಿಷನ್ ಪಾನಿ ಜಲಶಕ್ತಿ, ಜಲ ಸಂರಕ್ಷಣೆ ಅಭಿಯಾನದ ರಾಯಭಾರಿಯಾಗಿ ಅಯ್ಕೆ ಮಾಡಲಾಗಿದೆ.

    ಊರ್ವಶಿ ರೌಟೇಲಾ ಫೌಂಡೇಶನ್ ಮೂಲಕವಾಗಿ ನೀರಿನ ಬಿಕ್ಕಟ್ಟಿನ ವಿರುದ್ಧ ಹೋರಾಡಿದ್ದಾರೆ. ತಮ್ಮ ಪೋಷಕರೊಂದಿಗೆ ಸ್ಥಾಪಿಸಿದ್ದ ಸಂಸ್ಥೆ ಉತ್ತರಾಖಂಡ್, ಪೌರಿ, ಗರ್ವಲ್ ಮತ್ತು ಹರಿದ್ವಾರದ ನೂರಾರು ಸಮುದಾಯಗಳಿಗೆ ಶುದ್ಧ ಮತ್ತು ಸುರಕ್ಷಿತ ನೀರು ಪಡೆಯಲು ಸಹಾಯ ಮಾಡಿದೆ. ಈ ಎಲ್ಲವನ್ನು ಗಮನಿಸಿದ ಕೇಂದ್ರ ಸರ್ಕಾರ ಊರ್ವಶಿಯವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ. ಇದನ್ನೂ ಓದಿ:  ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

    ನನ್ನ ಜೀವನದಲ್ಲಿ ಈ ಎಲ್ಲಾ ವಿಶ್ವ ದರ್ಜೆಯ ಅವಕಾಶಗಳನ್ನು ಸ್ವೀಕರಿಸುತ್ತಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಕೇಂದ್ರ ಸರ್ಕಾರ ನನಗೆ ಹೊಸ ಅವಕಾಶವನ್ನು ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖವತ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಹಸೆಮಣೆ ಏರಲು ಸಿದ್ಧರಾದ ವಜ್ರಕಾಯ ಬೆಡಗಿ ಶುಭ್ರಾ ಅಯ್ಯಪ್ಪ

    ಮಿಸ್ ಯೂನಿವರ್ಸ್ 2021ರ ತೀರ್ಪುಗಾರರಿಂದ ಆರಂಭಗೊಂಡು ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಜ್ಯೂರಿ ಆಗಿ ಕೆಲಸ ಮಾಡಿದ್ದಾರೆ. ಊರ್ವಶಿ ಅವರು  ‘ದಿ ಲೆಜೆಂಡ್’ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಲಿದ್ದಾರೆ. ಹಾಗೇ ಜಲಶಕ್ತಿ ಅಭಿಯಾನದ ರಾಯಭಾರಿಯಾಗಿ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ.

  • ಇಸ್ರೇಲ್ ಮಾಜಿ ಪ್ರಧಾನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ

    ಇಸ್ರೇಲ್ ಮಾಜಿ ಪ್ರಧಾನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ

    ಜೆರುಸಲೇಮ್ : ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರಿಗೆ ಭಗವದ್ಗೀತೆ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಊರ್ವಶಿ ಅವರು ಭಗವದ್ಗೀತೆಯ ಇಂಗ್ಲಿಷ್ ಪುಸ್ತಕವನ್ನು ಇಸ್ರೇಲ್ ಮಾಜಿ ಪ್ರಧಾನಿಗೆ ಊಡುಗೊರೆಯಾಗಿ ನೀಡಿದ್ದಾರೆ. ಹಾಗೂ ಅವರಿಗೆ ಹಿಂದಿಯ ಕೆಲವು ಪದಗಳನ್ನು ಕಲಿಸುವ ಪ್ರಯತ್ನವನ್ನು ಮಾಡಿದ್ದಾರೆ.

    2015ರಲ್ಲಿ ಮಿಸ್ ದಿವಾ ಯೂನಿವರ್ಸ್ ಗೌರವವನ್ನು ಗಳಿಸಿದ್ದ ಊರ್ವಶಿ, ಇಸ್ರೇಲ್‍ನ ಐಲಾಟ್‍ನಲ್ಲಿ ನಡೆದ ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ಈ ವರ್ಷದ ತೀರ್ಪುಗಾರರಾಗಿದ್ದಾರೆ. (ಡಿಸೆಂಬರ್ 12) ಇಂದು ನಡೆಯಲಿರುವ ಮಿಸ್ ಯೂನಿವರ್ಸ್‍ನ 70 ನೇ ಆವೃತ್ತಿಯಲ್ಲಿ ನಟಿ ಭಾರತವನ್ನು ಪ್ರತಿನಿಧಿಸುತ್ತಾರೆ. ಈ ಸಮಯದಲ್ಲಿ ಊರ್ವಶಿ ಮತ್ತು ಅವರ ಕುಟುಂಬವನ್ನು ಇಸ್ರೇಲ್ ಮಾಜಿ ಅಧ್ಯಕ್ಷ ಆಮಂತ್ರಿಸಿ ಊರ್ವಶಿ ಅವರನ್ನು ಗೌರವಿಸಿದ್ದಾರೆ. ಈ ಬಗ್ಗೆ ಊರ್ವಶಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಧನ್ಯವಾದವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ

    ನಮ್ಮ ಭಾಷೆಯಲ್ಲಿ ಎಲ್ಲಾ ಚೆನ್ನಾಗಿದೆ ಎನ್ನುವುದಕ್ಕೆ ಹಬಾಬಾ ಎನ್ನುತ್ತೇವೆ ಹಿಂದಿಯಲ್ಲಿ ಏನು ಹೇಳುತ್ತೀರಾ? ಎಂದು ಬೆಂಜಮಿನ್ ನೆತಾನ್ಯಾಹು, ಊರ್ವಶಿ ಅವರನ್ನು ಕೇಳಿದ್ದಾರೆ. ಸಬ್ ಶಾಂದಾರ್ ಸಬ್ ಬಡಿಯಾ ಎಂದು ಹೇಳುತ್ತೇವೆ ಎಂದು ಊರ್ವಶಿ ಹೇಳಿದ್ದಾರೆ. ನೆತಾನ್ಯಾಹು ಅವರು ಸರಾಗಾವಾಗಿ ಹಿಂದಿ ಅದನ್ನು ಅನುಕರಣೆ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಇಸ್ರೇಲ್ ವಾಯುದಾಳಿಯಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡು ಬದುಕುಳಿದ ಮಗು

  • ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಐರಾವತ, ಭದ್ರ ಚೆಲುವೆಯರು

    ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಐರಾವತ, ಭದ್ರ ಚೆಲುವೆಯರು

    ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಡೈಸಿ ಶಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

    urvashi rautela

    ವೈಟ್ ಆ್ಯಂಡ್ ವೈಟ್ ಡ್ರೆಸ್‍ನಲ್ಲಿ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟ ಊರ್ವಶಿ ರೌಟೇಲಾ ಬ್ಲಾಕ್ ಕಲರ್ ಮಾಸ್ಕ್ ತೊಟ್ಟಿದ್ದರು. ಇದೇ ವೇಳೆ ಅಭಿಮಾನಿಯೊಬ್ಬರಿಗೆ ಊರ್ವಶಿ ರೌಟೇಲಾ ಸೆಲ್ಫಿ ನೀಡಿದ್ದಾರೆ. ಇದನ್ನು ಕಂಡು ಕೈಯಲ್ಲಿ ಐಸ್ ಕ್ರೀಮ್ ಹಿಡಿದುಕೊಂಡಿದ್ದ ಬಾಲಕಿ ತಾನು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕೆಂದು ಹಠ ಮಾಡಿ ಊರ್ವಶಿ ಪಕ್ಕ ಬರುತ್ತಾಳೆ. ಆದರೆ ಆದ್ಯಗೋ ನಾಚಿಕೆಯಿಂದ ಮತ್ತೆ ಹಿಂದಿರುಗಿದ್ದಾಳೆ.

    urvashi rautela

    ನಂತರ ಬಾಲಕಿಗೆ ಬಾಯ್ ಹೇಳಿ ಮುಂದೆ ನಡೆದ ಊರ್ವಶಿ ರೌಟೇಲಾ ಕ್ಯಾಮೆರಾಗಳಗೆ ಮಾಸ್ಕ್ ತೆಗೆದು ಪೋಸ್ ನೀಡಿದರು. ಇದನ್ನೂ ಓದಿ: ಮಹಿಳೆಯರಿಗೆ ಸೂಟ್ ಆಗುವಂತಹ ಸ್ಯಾಟಿನ್ ಬೆಸ್ಟ್ ಪಾರ್ಟಿ ವೇರ್‌ಗಳು

    urvashi rautela

    ಕೊನೆಗೆ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಮುಂದೆ ಸಾಗಿದರು. ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಜೋಡಿಯಾಗಿ ಊರ್ವಶಿ ರೌಟೇಲಾ ಐರಾವತ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದನ್ನೂ ಓದಿ: ಗದ್ದೆಗೆ ಹೋಗೋ ನೆಪದಲ್ಲಿ ಬಾವಿಗೆ ತಳ್ಳಿ ಹೆಂಡ್ತಿ ಕೊಲೆ – ಅಪರಾಧಿಗೆ ಜೀವಾವಧಿ ಶಿಕ್ಷೆ

    ಸ್ಯಾಂಡಲ್‍ವುಡ್ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‍ಗೆ ಜೋಡಿಯಾಗಿ ಭದ್ರ ಸಿನಿಮಾದಲ್ಲಿ ಅಭಿನಯಿಸಿದ್ದ ಡೈಸಿ ಶಾ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.

    daisy shah (7)

    ಇಂದು ಮುಂಬೈ ವಿಮಾನ ನಿಲ್ದಾಣಕ್ಕೆ ಕಾರಿನಿಂದ ಲಾಗೇಜ್ ಸಮೇತ ಬಂದಿಳಿದ ಅವರು ಅಭಿಮಾನಿಯೊಟ್ಟಿಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಕಾರಂಜಾ ಜಲಾಶಯದಿಂದ 5050 ಕ್ಯೂಸೆಕ್ ನೀರು ಬಿಡುಗಡೆ- ನಾಲೆಗಳಿಗೆ ಇಳಿಯದಂತೆ ಜನರಿಗೆ ಎಚ್ಚರಿಕೆ

     daisy shah (7)

    ಬಳಿಕ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ಮುಗುಳು ನಗೆ ಬೀರಿ ಮಾಸ್ಕ್ ಧರಿಸಿಕೊಂಡು ಮುಂದೆ ನಡೆದರು. ಗ್ರೀನ್ ಕಲರ್ ಡ್ರೆಸ್ ಜೊತೆ ವೈಟ್ ಶೂ ಧರಿಸಿದ್ದ ಡೈಸಿ ಸಾ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದರು.

    daisy shah (7)

    ಅಲ್ಲದೇ ಸ್ಯಾಂಡಲ್‍ವುಡ್ ನಟ ನವರಸ ನಾಯಕ ಜಗ್ಗೇಶ್‍ಗೆ ಡೈಸಿ ಶಾ ಬಾಡಿಗಾರ್ಡ್ ಸಿನಿಮಾದಲ್ಲಿ ಈ ಹಿಂದೆ ಜೋಡಿಯಾಗಿ ಅಭಿನಯಿಸಿದ್ದರು.

     daisy shah (7)

    https://www.youtube.com/watch?v=tz8BRe599Ew

  • ಮಣ್ಣಿನಲ್ಲಿ ಮಿಂದೆದ್ದ ಊರ್ವಶಿ ರೌಟೆಲ್ಲಾ

    ಮಣ್ಣಿನಲ್ಲಿ ಮಿಂದೆದ್ದ ಊರ್ವಶಿ ರೌಟೆಲ್ಲಾ

    ಮುಂಬೈ: ಮಣ್ಣನ್ನು ಬಳಕೆ ಮಾಡಿಕೊಂಡು ಸ್ನಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಅನೇಕರ ನಂಬಿಕೆ. ಈ ಬಗ್ಗೆ ಆಯುರ್ವೇದದಲ್ಲೂ ಕೂಡ ಹೇಳಲಾಗಿದೆ. ಐರಾವತ ಚಿತ್ರದ ನಟಿ ಊರ್ವಶಿ ರೌಟೆಲ್ಲಾ ಈಗ ಮಣ್ಣಿನಿಂದ ಸ್ನಾನ ಮಾಡಿದ ಫೋಟೋ  ವೈರಲ್ ಆಗಿದೆ.

    ಮಣ್ಣಿನ ಸ್ನಾನದಿಂದ ದೇಹದಲ್ಲಿರುವ ಕಲ್ಮಶಗಳೂ ನಾಶವಾಗುತ್ತವೆ. ಚರ್ಮವನ್ನು ಮೃದುಗೊಳ್ಳುತ್ತದೆ, ರಕ್ತ ಸಂಚಾರ ಸುಧಾರಿಸುತ್ತದೆ ಮತ್ತು ನೋವು ನಿವಾರಕವಾಗಿ ಇದು ಕೆಲಸ ಮಾಡುತ್ತದೆ ಎಂದು ಬರೆದುಕೊಂಡು ಮಣ್ಣಿನ ಸ್ನಾನ ಮಾಡಿರುವ ಫೋಟೋವನ್ನು ಊರ್ವಶಿ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ತಿಪಟೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಪ್ರವಾಸ ಹೋಗ್ತಿದ್ರು ಸಂಚಾರಿ ವಿಜಯ್

    ನಟಿಮಣಿಯರು ಚರ್ಮದ ಆರೋಗ್ಯ ಕಾಪಾಡಿಕೊಳ್ಳೋಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ, ಧೂಳು, ಬಿಸಿಲಿಗೆ ದೇಹ ತಾಗದಂತೆ ನೋಡಿಕೊಳ್ಳುತ್ತಾರೆ. ಆದರೆ, ಊವರ್ಶಿ ಮಣ್ಣಿನಲ್ಲೇ ಸ್ನಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಊರ್ವಶಿ ಲಾಕ್‍ಡೌನ್ ವೇಳೆ ಫಿಟ್ನೆಸ್ ಕಾಯ್ದುಕೊಳ್ಳೋಕೆ ಏನೆಲ್ಲ ಮಾಡಬೇಕು ಎನ್ನುವುದನ್ನು ಅಭಿಮಾನಿಗಳಿಗೆ ಟಿಪ್ಸ್ ನೀಡುತ್ತಿದ್ದರು.

    2013ರಲ್ಲಿ ತೆರೆಗೆ ಬಂದ ಹಿಂದಿಯ ಸಿಂಗ್ ಸಾಬ್ ದಿ ಗ್ರೇಟ್ ಚಿತ್ರದಲ್ಲಿ ಊರ್ವಷಿ ನಟಿಸಿದ್ದರು. ಇದಾದ ನಂತರ 2015ರಲ್ಲಿ ತೆರೆಗೆ ಬಂದ ಕನ್ನಡದ ಐರಾವತ ಚಿತ್ರದಲ್ಲಿ ದರ್ಶನ್‍ಗೆ ಜೊತೆಯಾಗಿ ನಟಿಸಿದರು. ಎ.ಪಿ. ಅರ್ಜುನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ನಂತರ ಅವರು ಕನ್ನಡಕ್ಕೆ ಮರಳಲೇ ಇಲ್ಲ. ಸದ್ಯ, ಬ್ಲ್ಯಾಕ್ ರೋಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಿಂದಿ, ತೆಲುಗು ಎರಡೂ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಮತ್ತು ತಮಿಳಲ್ಲಿ ಒಟ್ಟಿಗೆ ಸಿದ್ಧವಾಗುತ್ತಿರುವ ಚಿತ್ರದಲ್ಲೂ ಊರ್ವಶಿ ನಟಿಸುತ್ತಿದ್ದಾರೆ.

  • ಒಂದು ಗೌನ್ ಧರಿಸಿ ನಾಲ್ಕು ಸೀಟಿನಲ್ಲಿ ಕುಳಿತ ಊರ್ವಶಿ: ವಿಡಿಯೋ ವೈರಲ್

    ಒಂದು ಗೌನ್ ಧರಿಸಿ ನಾಲ್ಕು ಸೀಟಿನಲ್ಲಿ ಕುಳಿತ ಊರ್ವಶಿ: ವಿಡಿಯೋ ವೈರಲ್

    ಮುಂಬೈ: ಐರಾವತ ಬೆಡಗಿ ಊರ್ವಶಿ ರೌಟೇಲಾ ಒಂದು ಗೌನ್ ಧರಿಸಿ ನಾಲ್ಕು ಸೀಟಿನಲ್ಲಿ ಕುಳಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಇತ್ತೀಚೆಗೆ ಊರ್ವಶಿ ಫಿಲ್ಮ್‌ಫೇರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಕೆಂಪು ಬಣ್ಣದ ಗೌನ್ ಧರಿಸಿದ್ದು, ಸಾಕಷ್ಟು ಭಾರ ಕೂಡ ಇತ್ತು. ಗೌನ್ ಭಾರವಾಗಿದ್ದ ಕಾರಣ ಊರ್ವಶಿಗೆ ಅದನ್ನು ನಿಭಾಯಿಸಲು ಕಷ್ಟವಾಗಿತ್ತು.

    ಊರ್ವಶಿ ತನ್ನ ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಊರ್ವಶಿ ಕೆಂಪು ಬಣ್ಣದ ಗೌನ್ ಧರಿಸಿ ಕುಳಿತಿದ್ದಾರೆ. ಆದರೆ ಅವರ ತಂಡದ ಮೂರು- ನಾಲ್ಕು ಮಂದಿ ಊರ್ವಶಿಯ ಗೌನ್ ಸರಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಸದ್ಯ ಈ ವಿಡಿಯೋ ಹಾಕಿ ಊರ್ವಶಿ ತಮ್ಮ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

    ವಿಡಿಯೋದಲ್ಲಿ ಊರ್ವಶಿ ಅವರಿಗೆ ಒಂದು ಸೀಟಿನಲ್ಲಿ ಕುಳಿತುಕೊಳ್ಳಲು ಆಗಲಿಲ್ಲ. ಅವರ ಗೌನ್‍ಗಾಗಿಯೇ ಎರಡರಿಂದ ಮೂರು ಸೀಟ್ ಬೇಕಾಯಿತು. ಊರ್ವಶಿ ಅವರ ಗೌನ್‍ಗಾಗಿ ಎರಡರಿಂದ ಮೂರು ಸೀಟ್‍ಗನ್ನು ಖಾಲಿ ಮಾಡಿಸಲಾಯಿತು.

    ಸದ್ಯ ಊರ್ವಶಿ ಪೋಸ್ಟ್ ಮಾಡಿದ ವಿಡಿಯೋ ನೋಡಿ ಕೆಲವರು, ‘ಈ ಗೌನ್ ಧರಿಸಿ ಕೂರಲು ಬೇರೆಯೇ ಸೀಟ್ ಬೇಕಾಗುತ್ತದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ‘ನೀವು ಒಂದು ಸೀಟಿನಲ್ಲಿ ಕುಳಿತಿದ್ದೀರಾ, ಆದರೆ ನಿಮ್ಮ ಗೌನ್‍ಗೆ ನಾಲ್ಕು ಸೀಟ್ ಬೇಕಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ.

  • ನನ್ನನ್ನು ಚಾಕಲೇಟ್ ಕೇಕ್ ರೀತಿ ನೋಡೋರು ಬೇಕು – ಬೋಲ್ಡ್ ಲುಕ್‍ನಲ್ಲಿ ‘ಐರಾವತ’ ಬೆಡಗಿ

    ನನ್ನನ್ನು ಚಾಕಲೇಟ್ ಕೇಕ್ ರೀತಿ ನೋಡೋರು ಬೇಕು – ಬೋಲ್ಡ್ ಲುಕ್‍ನಲ್ಲಿ ‘ಐರಾವತ’ ಬೆಡಗಿ

    ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಆದರೆ ಈ ಬಾರಿ ಅವರು ಬೋಲ್ಡ್ ಲುಕ್‍ನಲ್ಲಿ ಪೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಲ್ಲದೇ ‘ನನ್ನನ್ನು ಚಾಕಲೇಟ್ ಕೇಕ್ ರೀತಿ ನೋಡೋರು ಬೇಕು’ ಎಂದು ಪೋಸ್ಟ್ ಮಾಡಿ ಸಖತ್ ಸುದ್ದಿಯಾಗಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಊರ್ವಶಿ ರೌಟೇಲಾ ತುಂಬಾ ಆಕ್ಟಿವ್ ಆಗಿರುತ್ತರೆ. ಊರ್ವಶಿ ತಮ್ಮ ಹಾಟ್ ಹಾಗೂ ಬೋಲ್ಡ್ ಲುಕ್‍ಗೆ ಸಿಕ್ಕಾಪಟ್ಟೆ ಫೇಮಸ್. ಇಂತಹ ನಟಿ 65ನೇ ಫಿಲ್ಮ್‌ಫೇರ್ 2020 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಕಪ್ಪು ಬಣ್ಣದ ಸ್ಲಿಟ್ ಗೌನ್ ತೊಟ್ಟು ಎಲ್ಲರ ಗಮನ ಸೆಳೆದಿದ್ದರು. ಈ ಗೌನ್‍ನಲ್ಲಿ ಊರ್ವಶಿ ಸಿಕ್ಕಾಪಟ್ಟೆ ಹಾಟ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಹಾಟ್ ಲುಕ್ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಅವರು ಹಂಚಿಕೊಂಡ ಪೋಸ್ಟ್ ಕೂಡ ಸಖತ್ ಸದ್ದು ಮಾಡುತ್ತಿದೆ.

    “ನಾನು ಚಾಕೊಲೇಟ್ ಕೇಕನ್ನು ಹೇಗೆ ನೋಡುತ್ತೇನೋ ಅದೇ ರೀತಿ ಯಾರಾದರು ನನ್ನನ್ನು ನೋಡೋರು ಬೇಕು” ಎಂದು ಬರೆದು ತಮ್ಮ ಬೋಲ್ಡ್ ಲುಕ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಊರ್ವಶಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗಿದೆ. ಈವೆರೆಗೆ ಊರ್ವರ್ಶಿ ಅವರ ಬೋಲ್ಡ್ ಪೋಸ್ಟ್ ನ್ನು 9 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

    ಈ ಹಿಂದೆ ಐರಾವತ ಬೆಡಗಿ ಊರ್ವಶಿ ರೌಟೇಲಾ ಕಾರ್ಯಕ್ರಮವೊಂದರಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆದಿದ್ದ ಸುದ್ದಿ ಸಖತ್ ಸದ್ದುಮಾಡಿತ್ತು.

    https://www.instagram.com/p/B8LNfL2hf1D/

    ಡಿಸೆಂಬರ್ 31ರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಹೊಸ ವರ್ಷ ಆಚರಿಸಲು ಬಾಲಿವುಡ್ ಕಾರ್ನಿವಲ್ 2020 ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಊರ್ವಶಿ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು

    ಹೊಸ ವರ್ಷದ ಕಾರ್ಯಕ್ರಮದಲ್ಲಿ ಊರ್ವಶಿ, ‘ಡ್ಯಾಡಿ ಮಮ್ಮಿ’, ‘ಹಸಿನೋ ಕಾ ದೀವಾನಾ’ ಹಾಗೂ ತಾವು ನಟಿಸಿದ ‘ಪಾಗಲ್‍ಪಂತಿ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದರು. ಡ್ಯಾನ್ಸ್ ಮಾಡುವ ಮೊದಲು ಊರ್ವಶಿ ತಮ್ಮ ಇನ್‍ಸ್ಟಾದಲ್ಲಿ ವಿಡಿಯೋ ಹಾಕುವ ಮೂಲಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು.

    https://www.instagram.com/p/B8Iys-9hLtf/

  • ಮೋದಿ ಟ್ವೀಟ್ ಕಾಪಿ ಮಾಡಿ ಐರಾವತ ಬೆಡಗಿ ಟ್ರೋಲ್

    ಮೋದಿ ಟ್ವೀಟ್ ಕಾಪಿ ಮಾಡಿ ಐರಾವತ ಬೆಡಗಿ ಟ್ರೋಲ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಕಾಪಿ ಮಾಡಿ ಐರಾವತ ಸಿನಿಮಾದ ನಟಿ ಊರ್ವಶಿ ರೌಟೇಲಾ ಟ್ರೋಲ್‍ಗೆ ಒಳಗಾಗಿದ್ದಾರೆ.

    ಶಬಾನಾ ಅಜ್ಮಿ ಅವರು ಶನಿವಾರ ಸಂಜೆ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಈ ವಿಚಾರ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ‘ಅಪಘಾತದಲ್ಲಿ ಶಬಾನಾ ಅಜ್ಮಿ ಜಿ ಗಾಯಗೊಂಡ ಸುದ್ದಿ ದುಃಖ ತಂದಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

    ಪ್ರಧಾನಿ ಮೋದಿ ಅವರ ಟ್ವೀಟ್ ಅನ್ನು ಊರ್ವಶಿ ರೌಟೇಲಾ ಯಥಾವತ್ತಾಗಿ ನಕಲು ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಊರ್ವಶಿ ರೌಟೇಲಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

    ನೀವ್ಯಾಕೆ ಮೋದಿ ಅವರ ಟ್ವೀಟ್ ಅನ್ನು ಕಾಪಿ, ಪೇಸ್ಟ್ ಮಾಡಿದ್ರಿ. ಸುಮ್ಮನೆ ರಿಟ್ವೀಟ್ ಮಾಡಬಹುದಿತ್ತು ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ ಕಾಪಿ, ಪೇಸ್ಟ್ ಮಾಡುವುದು ಅಪರಾಧವಲ್ಲ ಬಿಡಿ. ಕಾಪಿ ಪೇಸ್ಟ್ ಸೂಪರ್ ಎಂದು ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

  • ಬಾಲಿವುಡ್ ನಟಿಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ ರಿಷಬ್ ಪಂತ್

    ಬಾಲಿವುಡ್ ನಟಿಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ ರಿಷಬ್ ಪಂತ್

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ನಟಿಯರು ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇದೇ ವೇಳೆ ಹಲವು ಆಟಗಾರರ ಹೆಸರು ಕೂಡ ನಟಿಯರೊಂದಿಗೆ ಕೇಳಿ ಬರುತ್ತದೆ. ಸದ್ಯ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಗೆಳತಿ, ನಟಿ ಊರ್ವಶಿ ರೌಟೇಲಾ ಅವರ ಮೊಬೈಲ್ ನಂಬರನ್ನು ತಮ್ಮ ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇತ್ತೀಚೆಗಷ್ಟೇ ರಿಷಬ್ ಪಂತ್ ಹೊಸ ವರ್ಷದ ಸಂಭ್ರಮದಲ್ಲಿ ತಮ್ಮ ಪ್ರೇಯಸಿ ಇಶಾ ನೇಗಿ ಅವರೊಂದಿಗೆ ಇರುವ ಫೋಟೋವನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಾವಿಬ್ಬರೂ ಕಳೆದ 5 ವರ್ಷಗಳಿಂದ ಪ್ರೀತಿಯಲ್ಲಿರುವುದಾಗಿ ತಿಳಿಸಿದ್ದರು. ಆದರೆ ಇದಾದ ಬಳಿಕ ರಿಷಬ್ ಪಂತ್ ಅವರ ಮಾಜಿ ಗೆಳತಿ, ನಟಿ ಊರ್ವಶಿ ರೌಟೇಲಾ ಮತ್ತೆ ರಿಷಬ್‍ರನ್ನು ಸಂಪರ್ಕ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

    ಊರ್ವಶಿ ರೌಟೇಲಾರೊಂದಿಗೆ ಮಾತನಾಡಲು ಇಷ್ಟಪಡದ ರಿಷಬ್, ತಮ್ಮ ಮೊಬೈಲ್‍ನಲ್ಲಿ ನಟಿಯ ಮೊಬೈಲ್ ಸಂಖ್ಯೆಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಇಬ್ಬರು ಪರಸ್ಪರ ಚರ್ಚೆ ನಡೆಸಿಕೊಂಡ ಬಳಿಕವೇ ತಮ್ಮ ಮೊಬೈಲ್ ನಂಬರ್ ಗಳನ್ನು ಬ್ಲಾಕ್ ಮಾಡಿಕೊಂಡಿದ್ದಾರೆ ಎಂದು ಊರ್ವಶಿ ರೌಟೇಲಾ ಸ್ನೇಹಿತರು ಪ್ರತಿಕ್ರಿಯೆ ನೀಡಿದ್ದಾರೆ.

     

    View this post on Instagram

     

    I like me better when I’m with you ????????????‍♂

    A post shared by Rishabh Pant (@rishabpant) on

  • 1 ಗಂಟೆ ಡ್ಯಾನ್ಸ್‌ಗೆ ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದ ಐರಾವತ ಬೆಡಗಿ

    1 ಗಂಟೆ ಡ್ಯಾನ್ಸ್‌ಗೆ ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದ ಐರಾವತ ಬೆಡಗಿ

    ಮುಂಬೈ: ಐರಾವತ ಬೆಡಗಿ ಊರ್ವಶಿ ರೌಟೇಲಾ ಕಾರ್ಯಕ್ರಮವೊಂದರಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಆಗಿ ಪಡೆದಿದ್ದಾರೆ.

    ಡಿಸೆಂಬರ್ 31ರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಹೊಸ ವರ್ಷ ಆಚರಿಸಲು ಬಾಲಿವುಡ್ ಕಾರ್ನಿವಲ್ 2020 ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಊರ್ವಶಿ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ.

    ವರದಿಗಳ ಪ್ರಕಾರ, ಇದುವರೆಗೂ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಇತರ ಕಲಾವಿದರು ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಲು ಇಷ್ಟು ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ 3 ಕೋಟಿ ಸಂಭಾವನೆ ಪಡೆಯುವ ಮೂಲಕ ಊರ್ವಶಿ ಬೇರೆ ಕಲಾವಿದರ ದಾಖಲೆಯನ್ನೇ ಮುರಿದಿದ್ದಾರೆ.

    ಹೊಸ ವರ್ಷದ ಕಾರ್ಯಕ್ರಮದಲ್ಲಿ ಊರ್ವಶಿ, ‘ಡ್ಯಾಡಿ ಮಮ್ಮಿ’, ‘ಹಸಿನೋ ಕಾ ದೀವಾನಾ’ ಹಾಗೂ ತಾವು ನಟಿಸಿದ ‘ಪಾಗಲ್‍ಪಂತಿ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್ ಮಾಡುವ ಮೊದಲು ಊರ್ವಶಿ ತಮ್ಮ ಇನ್‍ಸ್ಟಾದಲ್ಲಿ ವಿಡಿಯೋ ಹಾಕುವ ಮೂಲಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು.

    ಊರ್ವಶಿ ಕೊನೆಯದಾಗಿ ಪಾಗಲ್‍ಪಂತಿ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರನ್ನು ಹೊರತುಪಡಿಸಿ ನಟ ಜಾನ್ ಅಬ್ರಾಹಂ, ಅನಿಲ್ ಕಪೂರ್, ಅರ್ಷದ್ ವಾರ್ಸಿ, ಕೃತಿ ಕರಾಬಂಧ, ಇಲಿಯಾನಾ ಡಿಕ್ರೂಸ್ ನಟಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಲಿಲ್ಲ.