Tag: Urvashi Rautela

  • ಸುಳ್ಳು ಸುದ್ದಿ ಬರೆದ ಸಿನಿಮಾ ವಿಶ್ಲೇಷಕನಿಗೆ ಚಳಿ ಬಿಡಿಸಿದ ನಟಿ ಊರ್ವಶಿ ರೌಟೇಲಾ

    ಸುಳ್ಳು ಸುದ್ದಿ ಬರೆದ ಸಿನಿಮಾ ವಿಶ್ಲೇಷಕನಿಗೆ ಚಳಿ ಬಿಡಿಸಿದ ನಟಿ ಊರ್ವಶಿ ರೌಟೇಲಾ

    ಹುಭಾಷಾ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಸಿನಿಮಾ ಬಿಟ್ಟು ಆಗಾಗ ರಿಷಬ್ ಪಂತ್ (Rishab Pant) ವಿಚಾರವಾಗಿ ಸುದ್ದಿಯಾಗುತ್ತಿದ್ದರು. ಇದೀಗ ತಮ್ಮ ಬಗ್ಗೆ ಸುಳ್ಳು ಸುದ್ದಿ ಬರೆದ ಸಿನಿಮಾ ವಿಶ್ಲೇಷಕ ಉಮೈರ್ ಸಂಧುಗೆ (Umair Sandhu) ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಸದಾ ಒಂದಲ್ಲಾ ಒಂದು ಕಿರಿಕ್ ಮಾಡುವ ಮೂಲಕ ಸುದ್ದಿಯಲ್ಲಿರುವ ಉಮೈರ್‌ಗೆ ನಟಿ ಊರ್ವಶಿ ಇದೀಗ ಬೆಂಡೆತ್ತಿದ್ದಾರೆ.

    ಕೆಲ ದಿನಗಳ ಹಿಂದೆ ‘ಶಾಕುಂತಲಂ’ ಸಿನಿಮಾ ಕಲೆಕ್ಷನ್ ಉಲ್ಲೇಖಿಸಿ ನಟಿ ಸಮಂತಾ (Samantha) ಫ್ಲಾಪ್ ನಟಿ ಎಂದು ಬರೆಯುವ ಮೂಲಕ ಸ್ಯಾಮ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಊರ್ವಶಿ ರೌಟೇಲ್ -ಅಖಿಲ್ ಅಕ್ಕಿನೇನಿ ಬಗ್ಗೆ ಸುಳ್ಳು ಸುದ್ದಿ ಟ್ವೀಟ್ ಮಾಡಿದ್ದ ಉಮೈರ್ ಸಂಧುಗೆ ನಟಿ ಕಾನೂನು ಸಮರ ಸಾರಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

    ನಟಿ ಊರ್ವಶಿ ಬಗ್ಗೆ ಅಸಭ್ಯವಾಗಿ ಬರೆದಿದ್ದಾರೆ. ಯುರೋಪ್‌ನಲ್ಲಿ ‘ಏಜೆಂಟ್’ (Agent) ಚಿತ್ರದ ಐಟಂ ಸಾಂಗ್ ಚಿತ್ರೀಕರಣದ ವೇಳೆ ನಟಿ ಅಖಿಲ್ ಅಕ್ಕಿನೇನಿ (Akhil Akkineni) ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ಇವರಿಬ್ಬರ ಫೋಟೋ ಲಗತ್ತಿಸಿ ತೀರಾ ಕೆಟ್ಟದ್ದಾಗಿ ಬರೆದಿದ್ದಾರೆ. ಇದೀಗ ಈ ಟ್ವೀಟ್ ಓದಿದ ಊರ್ವಶಿ ರೌಟೇಲಾ ಕೆಂಡಾಮಂಡಲವಾಗಿದ್ದಾರೆ. ಅವರು ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅದರ ಮೇಲೆ ನಕಲಿ ಎಂದು ಬರೆದಿದ್ದಾರೆ. ಇದನ್ನೂ ಓದಿ:ಹನಿಮೂನ್‌ಗೆ ವಿದೇಶಕ್ಕೆ ಹಾರಿದ ಸಿಂಹಪ್ರಿಯಾ ಜೋಡಿ

     

    View this post on Instagram

     

    A post shared by Urvashi Rautela (@urvashirautela)

    ನನ್ನ ಕಾನೂನು ತಂಡವು ನಿಮಗೆ ಮಾನನಷ್ಟ ನೋಟಿಸ್ ಕಳುಹಿಸುತ್ತಿದೆ. ನಿಮ್ಮಂತಹ ಸಿನಿಮಾ ವಿಶ್ಲೇಷಕರ ಕೊಳಕು ಟ್ವೀಟ್‌ಗಳಿಂದ ಎಲ್ಲರೂ ಕೋಪಗೊಂಡಿದ್ದಾರೆ ಎಂದು ನಟಿ ಹೇಳಿದ್ದಾರೆ. ನೀವು ನನ್ನ ಅಧಿಕೃತ ವಕ್ತಾರರಲ್ಲ. ಅವರಂತೆ ವರ್ತಿಸಬೇಡಿ. ಇದರಿಂದ ಬಹಳಷ್ಟು ಮಂದಿಯ ಮನಸ್ಸಿಗೆ ನೋವುಂಟಾಗುತ್ತದೆ ಎಂದಿರುವ ನಟಿ, ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

  • `ರಿಷಬ್’ ಜೊತೆ ಕಾಣಿಸಿಕೊಂಡ ಊರ್ವಶಿ ರೌಟೇಲಾ: `ಕಾಂತಾರ 2′ ಬಗ್ಗೆ ಅಪ್‌ಡೇಟ್

    `ರಿಷಬ್’ ಜೊತೆ ಕಾಣಿಸಿಕೊಂಡ ಊರ್ವಶಿ ರೌಟೇಲಾ: `ಕಾಂತಾರ 2′ ಬಗ್ಗೆ ಅಪ್‌ಡೇಟ್

    ರಾವತ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ರಿಷಬ್ ಪಂತ್‌ನ ಬಿಟ್ಟು, ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರನ್ನು ನಟಿ ಭೇಟಿ ಮಾಡಿದ್ದಾರೆ. ಈ ಕುರಿತ ಫೋಟೋ ಶೇರ್ ಮಾಡಿ, `ಕಾಂತಾರ 2′ (Kantara 2) ಎಂದು ಉಲ್ಲೇಖಿಸಿದ್ದಾರೆ.

    ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ (Rishab Pant) ಹಿಂದೆ ಬಿದ್ದಿರುವ ಊರ್ವಶಿ, ಅವರನ್ನು ಬಿಟ್ಟು ಬಿಡದೆ ಕಾಡುತ್ತಿದ್ದಾರೆ. ಅಪಘಾತದಿಂದ ಆಸ್ಪತ್ರೆ ದಾಖಲಾಗಿದ್ದ ಪಂತ್ ಬಗ್ಗೆ ಊರ್ವಶಿ ಪರೋಕ್ಷವಾಗಿ ಪೋಸ್ಟ್‌ಗಳನ್ನ ಹಾಕುತ್ತಿದ್ದರು. ಊರ್ವಶಿ ನಡೆ ಪಂತ್ ಅಭಿಮಾನಿಗಳನ್ನು ಕೆರಳಿಸಿತ್ತು. ಇದೀಗ ರಿಷಬ್ ಪಂತ್ ಬಿಟ್ಟು ರಿಷಬ್ ಶೆಟ್ಟಿ ಅವರನ್ನ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಊರ್ವಶಿ ರೌಟೇಲಾ ಶನಿವಾರ (ಫೆ.11) ರಿಷಬ್ ಜೊತೆಗಿನ ಫೋಟೋ ಶೇರ್ ಮಾಡಿ ಕಾಂತಾರ ಪ್ರೀಕ್ವೆಲ್ ಬಗ್ಗೆ ಸುಳಿವು ನೀಡಿದ್ದಾರೆ.

     

    View this post on Instagram

     

    A post shared by Urvashi Rautela (@urvashirautela)

    `ಕಾಂತಾರ’ ನಿರ್ದೇಶಕ ರಿಷಬ್ ಶೆಟ್ಟಿ ಜೊತೆ ಊರ್ವಶಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಊರ್ವಶಿ ಹಳದಿ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಬಿಳಿ ಬಣ್ಣದ ಶರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಫೋಟೋ ಶೇರ್ ಮಾಡಿ, `ಕಾಂತಾರಾ-2′ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ (Hombale Films) ಲೋಡಿಂಗ್’ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಕೂಡ ʻಕಾಂತಾರʼ ಸಿನಿಮಾ ನೋಡಿದೆ: ಅಮಿತ್‌ ಶಾ

    ಊರ್ವಶಿ ಈ ಪೋಸ್ಟ್ಗೆ ನೆಟ್ಟಿಗರು ಸಖತ್ ಕಾಮೆಂಟ್ ಮಾಡುತ್ತಿದ್ದಾರೆ. ಪಂತ್ ಹೆಸರು ಹೇಳಿ ಕಾಲೆಳೆದಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, ಓಯ್ ಅಕ್ಕ.. ನಿಮ್ಮ ಲೈಫ್‌ನಲ್ಲಿ ಎಷ್ಟೆಲ್ಲಾ ರಿಷಬ್ ಇದ್ದಾರೆ? ಎಂದು ಕೇಳುತ್ತಿದ್ದಾರೆ. ಇಬ್ಬರ ಫೋಟೋ ವೈರಲ್ ಆಗಿದ್ದು ಭೇಟಿಯ ಕಾರಣ ಬಹಿರಂಗವಾಗಿಲ್ಲ. ಊರ್ವಶಿ ರೌಟೇಲಾ `ಕಾಂತಾರ’ ಪ್ರೀಕ್ವೆಲ್‌ನಲ್ಲಿ ನಟಿಸುತ್ತಿದ್ದಾರಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಟ್ಟು ಬಿಡದೇ ರಿಷಬ್ ಪಂತ್‌ನ ಕಾಡುತ್ತಿರುವ ಊರ್ವಶಿ ರೌಟೇಲಾ: ನೆಟ್ಟಿಗರಿಂದ ನಟಿಗೆ ಕ್ಲಾಸ್

    ಬಿಟ್ಟು ಬಿಡದೇ ರಿಷಬ್ ಪಂತ್‌ನ ಕಾಡುತ್ತಿರುವ ಊರ್ವಶಿ ರೌಟೇಲಾ: ನೆಟ್ಟಿಗರಿಂದ ನಟಿಗೆ ಕ್ಲಾಸ್

    ಹುಭಾಷಾ ನಟಿಯಾಗಿ ಮಿಂಚ್ತಿರುವ ಊರ್ವಶಿ ರೌಟೇಲಾ (Uravashi Rautela) ಮತ್ತೆ ರಿಷಬ್ ಪಂತ್  (Rishab Pant) ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆಷ್ಟೇ ರಿಷಬ್ ಪಂತ್ ಅವರಿಗೆ ಕಾರು ಅಪಘಾತವಾಗಿತ್ತು. ಮುಂಬೈನ(Mumbai)  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಹಿಂದೆ ಊರ್ವಶಿ ಬಿದ್ದಿದ್ದಾರೆ. ನಟಿಯ ವರ್ತನೆಗೆ ಅನೇಕರು ಛೀಮಾರಿ ಹಾಕಿದ್ದಾರೆ.

    ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲಿ ಮಿಂಚ್ತಿರುವ ಊರ್ವಶಿ ಈಗ ಮತ್ತೆ ರಿಷಬ್ ಪಂತ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಪಾಡಿಗೆ ರಿಷಬ್ ಇದ್ದರೂ ಕೂಡ ಅವರಿಗೆ ಬಿಟ್ಟು ಬಿಡದೇ ಕಾಡ್ತಿದ್ದಾರೆ ನಟಿ ಊರ್ವಶಿ ರೌಟೇಲಾ. ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ನಟಿ ಊರ್ವಶಿ ಈ ಹಿಂದೆ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಬ್ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕ್ರಿಕೆಟಿಗ ರಿಷಬ್ ಕೂಡ ನಟಿಗೆ ಖಡಕ್ ಆಗಿ ತಿರುಗೇಟು ನೀಡಿದ್ದರು.

    ಇತ್ತೀಚೆಗೆ ಇಬ್ಬರ ಮಧ್ಯೆ ಕಿತ್ತಾಟ ನಡೆಯುತ್ತಲೇ ಇತ್ತು. ಈಗ ರಿಷಬ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿದೆ. ಈಗಲೂ ಊರ್ವಶಿ ಅವರು ರಿಷಬ್ ಅವರನ್ನು ಹಿಂಬಾಲಿಸಿದಂತಿದೆ. ರಿಷಬ್‌ಗೆ ಅಪಘಾತದ ವಿಚಾರ ತಿಳಿದಾಗ ʻಪ್ರಾರ್ಥನೆʼ (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಊರ್ವಶಿ ತಾಯಿ, ರಿಷಬ್ ಬೇಗ ಚೇತರಿಕೆ ಕಾಣಲಿ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಊರ್ವಶಿಯನ್ನು ನೆಟ್ಟಿಗರು ಟೀಕೆ ಮಾಡಿದ್ದರು. ಇದನ್ನೂ ಓದಿ: ಬಾಲಯ್ಯನ ಸಿನಿಮಾ ಪ್ರೀರಿಲೀಸ್ ಇವೆಂಟ್‌ಗೆ ಬ್ರೇಕ್ ಹಾಕಿದ ಸರ್ಕಾರ

    ಕ್ರಿಕೆಟಿಗ ರಿಷಬ್ ಪಂತ್ (Rishab Pant) ಅವರಿಗೆ ಮುಂಬೈನ `ಕೋಕಿಲಾಬೇನ್ ಧೀರುಬಾಯ್ ಅಂಬಾನಿ’ (Kokilaben Dhirubhai Ambani Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯ ಫೋಟೋವನ್ನ ನಟಿ ಊರ್ವಶಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ನಟಿಯ ಈ ನಡೆಗೆ ಟೀಕೆ ಮಾಡಿದ್ದಾರೆ. ಪ್ರಚಾರಕ್ಕಾಗಿ ಊರ್ವಶಿ ಹೀಗೆಲ್ಲಾ ಮಾಡ್ತಿದ್ದಾರೆ ಎಂದು ನೆಟ್ಟಿಗರು ನಟಿಯ ವಿರುದ್ಧ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಜಬ್ ವಿರೋಧ ಬೆಂಬಲಿಸಿ ಕೂದಲು ಕತ್ತರಿಸಿಕೊಂಡ ಊರ್ವಶಿ ರೌಟೇಲಾ

    ಹಿಜಬ್ ವಿರೋಧ ಬೆಂಬಲಿಸಿ ಕೂದಲು ಕತ್ತರಿಸಿಕೊಂಡ ಊರ್ವಶಿ ರೌಟೇಲಾ

    ಗತ್ತಿನಾದ್ಯಂತ ಈಗ ಹಿಜಬ್ (Hijab) ವಿರೋಧದದ್ದೇ ಸದ್ದು. ಅದರಲ್ಲೂ ಇರಾನ್ ಮಹಿಳೆಯರು ಹಿಜಬ್ ವಿರೋಧಿಸಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಇರಾನ್ ಮಹಿಳೆಯರ ಈ ಹೋರಾಟಕ್ಕೆ ವಿಶ್ವದ ನಾನಾ ಕಡೆಯ ಮಹಿಳೆಯರು ಕೂಡ ತಮ್ಮದೇ ಆದ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಕೂಡ ವಿಭಿನ್ನ ರೀತಿಯಲ್ಲೇ ಆ ಮಹಿಳೆಯರ ಪರ ನಿಂತಿದ್ದಾರೆ.

    ಹಿಜಬ್ ವಿರುದ್ಧದ ಹೋರಾಟ ಇರಾನ್ ನಲ್ಲಿ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಮಹಿಳೆಯರಿಗೆ ಸ್ವತಂತ್ರವಾಗಿ ಬದುಕಲು ಬಿಡಿ, ಹಿಜಬ್ ನಾವು ಧರಿಸುವುದಿಲ್ಲ. ನಮ್ಮ ಬಟ್ಟೆ ನಮ್ಮ ಹಕ್ಕು ಎನ್ನುತ್ತಾ ಸತತ ಒಂದು ತಿಂಗಳಿಂದ ಇರಾನ್ ಮಹಿಳೆಯರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಈ ಬೆಳವಣಿಗೆಯ ಕುರಿತು ಬಾಲಿವುಡ್ ನಟ ಊರ್ವಶಿ ಕೂಡ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬೆರೆದುಕೊಂಡಿದ್ದು, ‘ಹಿಜಬ್ ಕುರಿತಾಗಿ ಹಲವು ಹತ್ಯೆಗಳು ನಡೆದಿವು. ಮಹ್ಸಾ ಅಮಿನಿ ಹತ್ಯೆಯ ನಂತರ ಹಿಜಬ್ ವಿರುದ್ಧದ ಹೋರಾಟ ಶುರುವಾಯಿತು. ಅಲ್ಲದೇ, ಅನೇಕರಿಗೆ ತೊಂದರೆ ನೀಡಿದರು. ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಹಿಜಬ್ ವಿರೋಧಿಸುವೆ. ಮಹಿಳೆಯರು ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಯಾರೂ ಹೇಳಬೇಕಿಲ್ಲ. ತಮಗಿಷ್ಟ ಬಂದಂತೆ ಅವರನ್ನು ಬದುಕಲು ಬಿಡಿ’ ಎಂದು ಊರ್ವಶಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಕೂದಲು (Hair) ಮಹಿಳೆಯರಿಗೆ ಸೌಂದರ್ಯದ ಸಂಕೇತ. ಹಾಗಾಗಿ ಅದನ್ನೇ ಬಳಸಿಕೊಂಡು ಆ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇನೆ ಎಂದೂ ಬರೆದುಕೊಂಡಿರುವ ಊರ್ವಶಿ, ಇರಾನ್ ನಲ್ಲಿ ಹೋರಾಟ ಮಾಡುತ್ತಿರುವ ಮಹಿಳೆಯರಿಗೆ ಜಯ ಸಿಗಲಿ ಎಂದು ಹಾರೈಸಿದ್ದಾರೆ. ಇಂತಹ ವಿಷಯಗಳಿಗೆ ಜಗತ್ತಿನ ಹೆಣ್ಣು ಮಕ್ಕಳು ಒಂದಾಗಬೇಕು ಎಂದೂ ಅವರು ಕರೆ ನೀಡಿದ್ದಾರೆ. ಊರ್ವಶಿಯ ನಡೆಗೆ ಕೆಲವರು ಬೆಂಬಲ ಸೂಚಿಸಿದ್ದರೆ, ಇನ್ನೂ ಕೆಲವರು ಕಾಲೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಪ್ರೀತಿಯನ್ನು ಹಿಂಬಾಲಿಸುತ್ತಿದ್ದೇನೆ ಎಂದು ಆಸ್ಟ್ರೇಲಿಯಾಗೆ ಹಾರಿದ ಊರ್ವಶಿ – ಟ್ರೋಲ್ ಆದ ಪಂತ್

    ನನ್ನ ಪ್ರೀತಿಯನ್ನು ಹಿಂಬಾಲಿಸುತ್ತಿದ್ದೇನೆ ಎಂದು ಆಸ್ಟ್ರೇಲಿಯಾಗೆ ಹಾರಿದ ಊರ್ವಶಿ – ಟ್ರೋಲ್ ಆದ ಪಂತ್

    ಸಿಡ್ನಿ: ನಟಿ ಊರ್ವಶಿ ರೌಟೇಲಾ (Urvashi Rautela) ನನ್ನ ಪ್ರೀತಿಯನ್ನು ಹಿಂಬಾಲಿಸುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ಆಸ್ಟ್ರೇಲಿಯಾಗೆ (Australia) ಹಾರಿದ್ದಾರೆ.

    ಇತ್ತ ಊರ್ವಶಿ ರೌಟೇಲಾ ಪೋಸ್ಟ್ ನೋಡಿದ ಅಭಿಮಾನಿಗಳು ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್ (Rishabh Pant) ಕಾಳೆಲೆಯುತ್ತಿದ್ದಾರೆ. ರಿಷಭ್ ಪಂತ್ ಮತ್ತು ಊರ್ವಶಿ ರೌಟೇಲಾ ಇಬ್ಬರೂ ಡೇಟಿಂಗ್‍ನಲ್ಲಿದ್ದಾರೆ ಎಂಬ ಗಾಸಿಪ್ ಇತ್ತು. ಕೆಲದಿನಗಳ ಹಿಂದೆ ಇವರಿಬ್ಬರ ನಡುವೆ ಬಿರುಕು ಕಾಣಿಸಿಕೊಂಡಿತ್ತು ಎಂದು ವರದಿಯಾಗಿತ್ತು. ಆ ಬಳಿಕ ಇದೀಗ ಟಿ20 ವಿಶ್ವಕಪ್‍ಗಾಗಿ (T20 World Cup)  ರಿಷಭ್ ಪಂತ್ ಆಸ್ಟ್ರೇಲಿಯಾದಲ್ಲಿದ್ದಾರೆ. ಈ ಹೊತ್ತಲ್ಲೇ ಈ ರೀತಿ ಪೋಸ್ಟ್ ಮಾಡಿಕೊಂಡು ಊರ್ವಶಿ ರೌಟೇಲಾ ಆಸ್ಟ್ರೇಲಿಯಾಗೆ ತೆರಳಿರುವುದು ನೆಟ್ಟಿಗರಿಗೆ ಆಹಾರವಾಗಿದೆ. ಇದನ್ನೂ ಓದಿ: ನನ್ನ ಪುಟ್ಟ ರಾಜಕುಮಾರಿ ಇನ್ನಿಲ್ಲ – ಭಾರತದಲ್ಲಿರುವಾಗಲೇ ಪುತ್ರಿಯನ್ನು ಕಳೆದುಕೊಂಡ ಮಿಲ್ಲರ್

    ಮೊದ ಮೊದಲು ಊರ್ವಶಿ ರೌಟೇಲಾ ಮತ್ತು ರಿಷಭ್ ಪಂತ್ ಡೇಟಿಂಗ್‍ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆಯೂ ಗಾಸಿಪ್ ಇದ್ದವು. ಆಗಾಗ್ಗೆ ಇಬ್ಬರೂ ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡ ಬಗ್ಗೆ ಸುದ್ದಿ ಹಬ್ಬಿತ್ತು. ಆ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ರಿಷಭ್ ಪಂತ್ ನನ್ನನ್ನು ಭೇಟಿ ಮಾಡಲು 10 ಗಂಟೆ ಕಾದಿದ್ದರು ಎಂದು ಊರ್ವಶಿ ಹೇಳಿಕೊಂಡಿದ್ದರು. ನನಗಾಗಿ ಸ್ಟಾರ್ ಕ್ರಿಕೆಟಿಗ ಒಬ್ಬ ಅಷ್ಟೊಂದು ಹೊತ್ತು ಕಾದಿದ್ದ ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ರಿಷಭ್ ತಿರುಗೇಟು ಕೊಟ್ಟಿದ್ದರು. ಅಲ್ಲಿಂದ ಇಬ್ಬರ ಮಧ್ಯ ಕೋಲ್ಡ್ ವಾರ್ ಶುರುವಾಗಿತ್ತು. ಈ ನಡುವೆ ಇದೀಗ ಊರ್ವಶಿ ಮತ್ತೆ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಕಳೆದ ಹತ್ತು ವರ್ಷಗಳಿಂದ ಭಾರತಕ್ಕೆ ಕಾಡುತ್ತಿರುವ ಪಾಕ್‍ನ ನಿದಾ ದಾರ್

    Live Tv
    [brid partner=56869869 player=32851 video=960834 autoplay=true]

  • ಕ್ರಿಕೆಟಿಗ ರಿಷಭ್ ಪಂತ್ ಗೆ ನಾನು ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲ: ನಟಿ ಊರ್ವಶಿ ರೌಟೇಲಾ

    ಕ್ರಿಕೆಟಿಗ ರಿಷಭ್ ಪಂತ್ ಗೆ ನಾನು ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲ: ನಟಿ ಊರ್ವಶಿ ರೌಟೇಲಾ

    ಟೀಮ್ ಇಂಡಿಯಾ ಆಟಗಾರ (Cricket) ರಿಷಭ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ (Urvashi Rautela) ನಡುವಿನ ಕೋಳಿ ಜಗಳ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸೋಷಿಯಲ್ ಮೀಡಿಯಾ ಮೂಲಕವೇ ಇಬ್ಬರೂ ತಿಕ್ಕಾಟ ಶುರು ಮಾಡಿದ್ದಾರೆ. ಅವರೊಂದು ಬರೆದರೆ, ಇವರೊಂದು ಕೌಂಟರ್ ಕೊಡುತ್ತಾ ಅಭಿಮಾನಿಗಳಿಗಿಂತೂ ಸಖತ್ ಮಜಾ ನೀಡುತ್ತಿದ್ದಾರೆ.

    ಮೊದ ಮೊದಲು ಊರ್ವಶಿ ರೌಟೇಲಾ ಮತ್ತು ರಿಷಭ್ ಪಂತ್ (Rishabh Pant) ಡೇಟಿಂಗ್ ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆಯೂ ಗಾಸಿಪ್ ಇದ್ದವು. ಆಗಾಗ್ಗೆ ಇಬ್ಬರೂ ಪಾರ್ಟಿ ಮಾಡುತ್ತಾರೆ ಎಂದು ಹೇಳಲಾಗಿತ್ತು. ಸಡನ್ನಾಗಿ ಸಂದರ್ಶನವೊಂದರಲ್ಲಿ ಊರ್ವಶಿ ಸತ್ಯವೊಂದನ್ನು ಹೇಳಿದ್ದರು. ಅದು ರಿಷಭ್ ಕೋಪಕ್ಕೆ ಕಾರಣವಾಗಿತ್ತು. ಇದನ್ನೂ ಓದಿ:ವಿಚಾರಣೆ ವೇಳೆ ‘ಬೆತ್ತಲೆ ಫೋಟೋ’ ನಂದಲ್ಲ ಎಂದ ಬಾಲಿವುಡ್ ನಟ ರಣವೀರ್ ಸಿಂಗ್

    ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ರಿಷಭ್ ಪಂತ್ ನನ್ನನ್ನು ಭೇಟಿ ಮಾಡಲು 10 ಗಂಟೆ ಕಾದಿದ್ದರು’ ಎಂದು ಊರ್ವಶಿ ಹೇಳಿಕೊಂಡಿದ್ದರು. ನನಗಾಗಿ ಸ್ಟಾರ್ ಕ್ರಿಕೆಟಿಗ ಒಬ್ಬ ಅಷ್ಟೊಂದು ಹೊತ್ತು ಕಾದಿದ್ದ ಎಂದು ಹೇಳಿದ್ದರು.  ಅದಕ್ಕೆ ರಿಷಭ್ ಸಖತ್ ತಿರುಗೇಟು ಕೊಟ್ಟಿದ್ದರು. ಅಲ್ಲಿಂದ ಇಬ್ಬರ ಮಧ್ಯ ಕೋಲ್ಡ್ ವಾರ್ ಶುರುವಾಗಿತ್ತು. ಮೊನ್ನೆಯಷ್ಟೇ ತನ್ನ ಹೇಳಿಕೆಗಾಗಿ ಪಂತ್ ಅವರಲ್ಲಿ ಕ್ಷಮೆ (Kshame) ಕೇಳುತ್ತೇನೆ ಎನ್ನುವ ಸುದ್ದಿ ಕೂಡ ಆಗಿತ್ತು.

    ಆದರೆ, ಈ ಸುದ್ದಿಯನ್ನು ಊರ್ವಶಿ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳಿಲ್ಲ. ಕೇಳಿರುವ ಕ್ಷಮೆ ರಿಷಭ್ ಪಂತ್ ಗೆ ಅಲ್ಲ. ನನ್ನ ಫ್ಯಾನ್ಸ್ ಗೆ (Fans) ಮತ್ತು ನನ್ನ ಆಪ್ತರಿಗೆ ಎಂದು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಊರ್ವಶಿ. ಅಲ್ಲಿಗೆ ಈ ಜಗಳ ಮತ್ತೆ ಮುಂದುವರೆದಿದೆ. ಯಾವ ಹಂತ ಪಡೆದುಕೊಳ್ಳತ್ತೋ ಅವರಿಬ್ಬರಿಗೆ ಗೊತ್ತು.

    Live Tv
    [brid partner=56869869 player=32851 video=960834 autoplay=true]

  • `ಐರಾವತ’ ನಟಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಪಾಕಿಸ್ತಾನಿ ಬೌಲರ್ ನಸೀಮ್ ಶಾ

    `ಐರಾವತ’ ನಟಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಪಾಕಿಸ್ತಾನಿ ಬೌಲರ್ ನಸೀಮ್ ಶಾ

    ಬಾಲಿವುಡ್ ನಟಿ ಊರ್ವಶಿ ರೌಟೇಲಾ(Urvashi Rautela) ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಪಾಕಿಸ್ತಾನಿ ಬೌಲರ್ ನಸೀಮ್ ಶಾ(Nassem Shah) ಜೊತೆಗೆ ಊರ್ವಶಿ ಹೆಸರು ಸಕತ್ ಸದ್ದು ಮಾಡಿತ್ತು. ಇವರಿಬ್ಬರ ಮಧ್ಯೆ ಪ್ರೀತಿಯಿದೆ ಎಂಬರ್ಥದಲ್ಲಿ ಸಖತ್ ಸುದ್ದಿಯಾಗಿದ್ದರು. ಇದೀಗ ನಸೀಮ್ ಶಾ ಊರ್ವಶಿ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಈ ಅಚ್ಚರಿಯ ಹೇಳಿಕೆಯ ಮೂಲಕ ಎಲ್ಲಾ ವದಂತಿಗೂ ಬ್ರೇಕ್‌ ಹಾಕಿದ್ದಾರೆ.

    `ಐರಾವತ’ ನಟಿ ಊರ್ವಶಿ ಇದೀಗ ಚಿತ್ರರಂಗದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇತ್ತೀಚೆಗೆ ಪಾಕ್ ಕ್ರಿಕೆಟಿಗ ನಸೀಮ್ ಶಾ ಮತ್ತು ಊರ್ವಶಿ ರೌಟೇಲಾ ಅವರ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವೀಡಿಯೋದಲ್ಲಿ ಪಾಕಿಸ್ತಾನದ ವೇಗದ ಬೌಲರ್ ನಸೀಮ್ ಶಾ ನಗುತ್ತಿದ್ದು, ಅತೀಫ್ ಅಸ್ಲಾಂ ಅವರ ರೊಮ್ಯಾಂಟಿಕ್ ಹಾಡು ಪ್ಲೇ ಆಗಿತ್ತು. ಈ ಇಬ್ಬರು ಸ್ಟಾರ್‌ಗಳ ನಡುವೆ ಏನೋ ನಡೆಯುತ್ತಿದೆ ಎಂದು ಊಹಿಸಲಾಗಿತ್ತು. ಈಗ ಸ್ವತಃ ನಸೀಮ್ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ. ಇದನ್ನೂ ಓದಿ:ಹೆರಿಗೆಯ ನಂತರ ಬದಲಾಯ್ತು ಪ್ರಣಿತಾ ಸುಭಾಷ್ ಲುಕ್

    ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನಸೀಮ್ ಶಾ ಭಾಗವಹಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಊರ್ವಶಿ ರೌಟೇಲಾ ಶೇರ್ ಮಾಡಿರುವ ವೀಡಿಯೋ ಬಗ್ಗೆ ಕೇಳಿದ್ದಾರೆ. ಅದಕ್ಕೆ ನಸೀಮ್ ಶಾ ಪ್ರತಿಕ್ರಿಯಿಸಿದ್ದು, ಊರ್ವಶಿ ರೌಟೇಲಾ ಯಾರು ಎಂದು ಪ್ರಶ್ನಿಸಿದ್ದಾರೆ. ಊರ್ವಶಿ ಯಾರೆಂಬುದು ನನಗೆ ತಿಳಿದಿಲ್ಲ ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

    ಪಾಕ್ ಕ್ರಿಕೆಟಿಗ ನಸೀಮ್ ಶಾ, ಊರ್ವಶಿ ಬಗ್ಗೆ ನೀಡಿರುವ ಹೇಳಿಕೆ ಸದ್ಯ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನಿ ಬೌಲರ್ ನಸೀಮ್ ಶಾಗೆ ಬೋಲ್ಡ್ ಆದ `ಐರಾವತ’ ನಟಿ

    ಪಾಕಿಸ್ತಾನಿ ಬೌಲರ್ ನಸೀಮ್ ಶಾಗೆ ಬೋಲ್ಡ್ ಆದ `ಐರಾವತ’ ನಟಿ

    ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ (Urvashi rautela) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ರಿಷಬ್ ಪಂತ್ ವಿಷ್ಯವಾಗಿ ನಟಿ ನ್ಯೂಸ್‌ನಲ್ಲಿದ್ದರು. ಈಗ ಪಾಕ್ ಕ್ರಿಕೆಟಿಗ ನಸೀಮ್ ಶಾ (Naseem shah) ವಿಷ್ಯವಾಗಿ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾರೆ. ಇವರಿಬ್ಬರ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

    ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸುತ್ತಿರುವ `ಐರಾವತ’ ನಟಿ ಈಗ ನಸೀಮ್ ಶಾಗೆ ಬೋಲ್ಡ್ ಆಗಿದ್ದಾರೆ. ಇನ್ನೂ ಊರ್ವಶಿ ರೌಟೇಲಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಪಾಕಿಸ್ತಾನದ ವೇಗದ ಬೌಲರ್ ನಸೀಮ್ ಶಾ ನಗುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ:`ಬಾಹುಬಲಿ’ ಪ್ರಭಾಸ್ ಜೊತೆ ನಟಿಸಲಿದ್ದಾರಾ ಚಿಕ್ಕಣ್ಣ?

     

    View this post on Instagram

     

    A post shared by Nasim Shah (@inaseemshah)

    ಈ ವೀಡಿಯೋದ ಹಿನ್ನೆಲೆಯಲ್ಲಿ ಅತೀಫ್ ಅಸ್ಲಾಂ ಅವರ ರೊಮ್ಯಾಂಟಿಕ್ ಹಾಡು ಪ್ಲೇ ಆಗುತ್ತಿದೆ. ಅದರ ನಂತರ ಊರ್ವಶಿ ಮತ್ತು ನಸೀಮ್ ನಡುವೆ ಏನೋ ನಡೆಯುತ್ತಿದೆ ಎಂದು ಊಹಿಸಲಾಗಿದೆ. ಇಬ್ಬರು ಕಣ್ಣಲ್ಲೇ ಮಾತನಾಡಿದ್ದಾರೆ. ಸದ್ಯ ವೀಡಿಯೋ ಸಖತ್‌ ಟ್ರೋಲ್‌ ಆಗುತ್ತಿದೆ.

    ವೀಡಿಯೋದಲ್ಲಿ ನಸೀಮ್‌ನ ಈ ನಗುವನ್ನು ನೋಡಿ ಊರ್ವಶಿ ರೌಟೇಲಾಳ ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ. ಆದರೆ, ಸದ್ಯಕ್ಕೆ ಇಬ್ಬರ ನಡುವಿನ ಸಂಬಂಧದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದಲ್ಲೂ ಬರ್ತಿದೆ ತಮಿಳಿನ ‘ದಿ ಲೆಜೆಂಡ್’ ಸಿನಿಮಾ

    ಕನ್ನಡದಲ್ಲೂ ಬರ್ತಿದೆ ತಮಿಳಿನ ‘ದಿ ಲೆಜೆಂಡ್’ ಸಿನಿಮಾ

    ಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ ದಿ ಲೆಜೆಂಡ್ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೇ ತಿಂಗಳ 28ರಂದು ಸಿನಿಮಾ ರಿಲೀಸ್ ಆಗ್ತಿದ್ದು, ವರ್ಲ್ಡ್ ವೈಡ್ ಅದ್ಧೂರಿಯಾಗಿ ಪ್ರಚಾರ ನಡೆಸಿರುವ ಸರವಣನ್ ಅಂಡ್ ಟೀಂ ಬೆಂಗಳೂರಿನಲ್ಲಿಯೂ ಪ್ರಚಾರ ಕಹಳೆ ಮೊಳಗಿಸಿದ್ದಾರೆ. ಸಿಲಿಕಾನ್ ಸಿಟಿಗೆ ಬಂದಿಳಿದ ಚಿತ್ರದ ನಾಯಕ ಸರವಣನ್, ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲ, ರೈ ಲಕ್ಷ್ಮಿ ಮಾಧ್ಯಮದವರೊಟ್ಟಿಗೆ ಸಿನಿಮಾದ ಬಗ್ಗೆ ಒಂದಷ್ಟು ಅನುಭವ ಹಂಚಿಕೊಂಡಿರು.

    ನಾಯಕ ಸರವಣನ್ ಮಾತನಾಡಿ, ಸಿನಿಮಾ ಮಾಡಬೇಕು ಎಂಬ ಕನಸು ಚಿಕ್ಕ ವಯಸ್ಸಿನಿಂದ ಇತ್ತು. ಬ್ಯುಸಿನೆಸ್ ಮೇಲೆ ಹೆಚ್ಚು ಫೋಕಸ್ ಇತ್ತು. ಎಲ್ಲಾ ಸೆಟಲ್ಡ್ ಆದ ಮೇಲೆ ಸಿನಿಮಾ ಮಾಡಿದ್ದೇನೆ. ಕಳೆದ ಹದಿನೈದು ವರ್ಷದಿಂದ ನಿರ್ದೇಶಕ ಜೆ.ಡಿ.ಜೆರ್ರಿ ನನ್ನ ಜೊತೆ ಇದ್ದಾರೆ. ಪ್ರತಿಯೊಂದು ದೃಶ್ಯವೂ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾ ನೋಡಿ ಸಪೋರ್ಟ್ ಮಾಡಿ ಎಂದರು. ಇದನ್ನೂ ಓದಿ: ಶಿವಣ್ಣನನ್ನೇ ಹಿಂದಿಕ್ಕಿದ ಶಿವಣ್ಣನ ಅಭಿಮಾನಿ ಕಾಫಿನಾಡು ಚಂದು!

    ರಾಜ್ಯದಲ್ಲಿ ಸಿನಿಮಾ ವಿತರಿಸ್ತಿರುವ ಹಾರಿಜನ್ ಸ್ಟುಡಿಯೋಸ್ ನ ಟೋನಿರಾಜ್, ಕನ್ನಡದಲ್ಲೂ ಸಿನಿಮಾ ಬುಕ್ಕಿಂಗ್ ಗೆ ಅವಕಾಶ ನೀಡುತ್ತೇವೆ. ಪ್ರತಿಯೊಬ್ಬರು ಸಿನಿಮಾ ನೋಡಿ ಬೆಂಬಲಿಸಿ ಎಂದರು. ಟ್ರೇಲರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡ್ತಿರುವ ದಿ ಲೆಜೆಂಡ್ ಸಿನಿಮಾ ಜೆ.ಡಿ.ಜೆರ್ರಿ ಆಕ್ಷನ್ ಕಟ್ ಹೇಳಿದ್ದು, ಊರ್ವಶಿ ರೌಟೇಲಾ ಈ ಸಿನಿಮಾ ಮೂಲಕ ಮೊದಲ ಬಾರಿಗೆ ತಮಿಳು ಚಿತ್ರರಂಗ ಪ್ರವೇಶ ಮಾಡಿದ್ದು, ಸರವಣನ್ ಗೆ ಜೋಡಿಯಾಗಿ ನಟಿಸಿದ್ದಾರೆ. ನಸ್ಸಾರ್, ಪ್ರಭು, ಸುಮನ್, ವಿವೇಕ್, ಇಮ್ಮನ್ ಅಣ್ಣಾಚಿ, ಯಶಿಕಾ ಆನಂದ್ ಸೇರಿದಂತೆ ಹಲವರು ತಾರಾಬಳಗ ಚಿತ್ರದಲ್ಲಿದ್ದಾರೆ. ಹ್ಯಾರೀಸ್ ಜಯರಾಜ್ ಮ್ಯೂಸಿಕ್ ಸಿನಿಮಾಕ್ಕಿದ್ದು, ವರ್ಲ್ಡ್ ವೈಡ್ 2000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ತೆರೆಗೆ ಬರ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹರಿದ ಜೀನ್ಸ್‌ನಲ್ಲಿ ಫ್ಲೈಟ್‌ ಏರಿದ `ಐರಾವತ’ ಬ್ಯೂಟಿ ಊರ್ವಶಿ

    ಹರಿದ ಜೀನ್ಸ್‌ನಲ್ಲಿ ಫ್ಲೈಟ್‌ ಏರಿದ `ಐರಾವತ’ ಬ್ಯೂಟಿ ಊರ್ವಶಿ

    ಹುಭಾಷಾ ನಟಿ ಊರ್ವಶಿ ಸಿನಿಮಾ ಜೊತೆ ಆಗಾಗ ತಮ್ಮ ಕಾಸ್ಟ್ಯೂಮ್ ವಿಚಾರವಾಗಿ ಕೂಡ ಸದ್ದು ಮಾಡುತ್ತಿರುತ್ತಾರೆ. ದುಬಾರಿ ಬಟ್ಟೆ ತೊಟ್ಟು ಸದಾ ಸುದ್ದಿ ಮಾಡುತ್ತಿದ್ದ ನಟಿ ಈಗ ಹಿಂದೆ ಮುಂದೆ ಎಲ್ಲಾ ಕಡೆ ಹರಿದ ಜೀನ್ಸ್ ಧರಿಸಿ ನಟಿ ಊರ್ವಶಿ ವಿಮಾನವೇರಿದ್ದಾರೆ. ಈಗ ಫೋಟೋ ಕುರಿತು ಸಖತ್ ಚರ್ಚೆ ಕೂಡ ಆಗುತ್ತಿದೆ.

     

    View this post on Instagram

     

    A post shared by Urvashi Rautela (@urvashirautela)

    ಊರ್ವಶಿ ಸದ್ಯ `ದಿ ಲೆಜೆಂಡ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಏರ್‌ಪೋರ್ಟ್ಗೆ ಹರಿದ ಜೀನ್ಸ್ನಲ್ಲಿ ನಟಿ ಎಂಟ್ರಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಟೋರ್ನ್ ಜೀನ್ಸ್ ಮುಂದೆ ಹರಿದಿರೋದನ್ನ ನೋಡಿರುತ್ತೇವೆ. ಆದರೆ ಊರ್ವಶಿ ಹಿಂದೆಯೂ ಹರಿದಂತೆ ಸ್ಪೆಷಲ್ ಆಗಿ ಡಿಸೈನ್ ಮಾಡಿಸಿದ್ದಾರೆ.ನಟಿಯ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಇದನ್ನೂ ಓದಿ:ವಿದೇಶದಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ ಯಶ್- ರಾಧಿಕಾ ಪಂಡಿತ್

     

    View this post on Instagram

     

    A post shared by Urvashi Rautela (@urvashirautela)

    ಸಾಲು ಸಾಲು ಸಿನಿಮಾಗಳಲ್ಲಿ ಊರ್ವಶಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಂಭಾವನೆಯೂ ಪಡೆಯುತ್ತಾರೆ ಹೀಗಿರುವಾಗ ತುಂಬಾ ಬಟ್ಟೆ ಧರಿಸಿ ಓಡಾಡಿ ಅಂತಾ ನಟಿಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ತುತ್ತು ಅನ್ನ ತಿನ್ನೋಕೆ ಹಾಡು ನೆನಪಾಯಿತು ಅಂತಾ ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ಊರ್ವಶಿ ಹರಿದ ಜೀನ್ಸ್ ಎಂಟ್ರಿಗೆ ಫ್ಯಾನ್ಸ್ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]