Tag: Urvashi Rautela

  • ಆಂಧ್ರದ ಸಿಎಂ ಪವನ್ ಕಲ್ಯಾಣ್ ಎಂದು ಘೋಷಿಸಿದ ನಟಿ ರೌಟೇಲಾ

    ಆಂಧ್ರದ ಸಿಎಂ ಪವನ್ ಕಲ್ಯಾಣ್ ಎಂದು ಘೋಷಿಸಿದ ನಟಿ ರೌಟೇಲಾ

    ತೆಲುಗಿನ ನಟಿ ಊರ್ವಶಿ ರೌಟೇಲಾ (Urvashi Rautela) ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ (Andhra Pradesh) ಯಾವುದೇ ಚುನಾವಣೆ ನಡೆಯದೇ ಇದ್ದರೂ, ಮುಖ್ಯಮಂತ್ರಿಯನ್ನೇ ರೌಟೇಲಾ ಬದಲಾಯಿಸಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ನಟ ಪವನ್ ಕಲ್ಯಾಣ್ (Pawan Kalyan) ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ರಾಜಕೀಯ ಪಡಸಾಲೆಯಲ್ಲಿ ಪವನ್ ಕಲ್ಯಾಣ್ ಹೆಸರು ಇದೀಗ ಪ್ರಮುಖವಾಗಿ ಕೇಳಿ ಬರುತ್ತಿದೆ. ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪವನ್ ರಾಜ್ಯದ ಪ್ರವಾಸ ಮಾಡುತ್ತಿದ್ದಾರೆ. ಅಲ್ಲದೇ, ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರೌಟೇಲಾ ಬರೆದುಕೊಂಡು ಬರಹ ವೈರಲ್ ಆಗಿದೆ. ಇದನ್ನೂ ಓದಿ:‘ನಾಗರಹಾವು’ ಚಿತ್ರದ ನಂತರ ಮತ್ತೆ ಒಂದಾಗಲಿದ್ದಾರೆ ದಿಗಂತ್-ರಮ್ಯಾ

    ಆಂಧ್ರದ ಮುಖ್ಯಮಂತ್ರಿ (Chief Minister)ಪವನ್ ಕಲ್ಯಾಣ್ ಎಂದು ಉದ್ದೇಶಪೂರ್ವಕವಾಗಿಯೇ ಬರೆದಿರುವ ರೌಟೇಲಾ, ಅದರ ಪರಿಣಾಮವನ್ನು ನಾನಾ ರೀತಿಯಲ್ಲಿ ಅನುಭವಿಸುತ್ತಿದ್ದಾರೆ. ಕೆಲವರು ಪವನ್ ಕಲ್ಯಾಣ್ ಪರ ಕಾಮೆಂಟ್ ಮಾಡಿದ್ದರೆ, ಸಾಕಷ್ಟು ಮಂದಿ ರೌಟೇಲಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಿಂದಲೇ ಈ ನಟಿಯನ್ನು ಗಡಿಪಾರು ಮಾಡಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

     

    ಊರ್ವಶಿ ರೌಟೇಲಾ ನಟನೆಯ ‘ಬ್ರೋ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಕೂಡ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಕಾರ್ಯಕ್ರಮವೊಂದರ ಫೋಟೋ ಹಂಚಿಕೊಂಡಿದ್ದ ಊರ್ವಶಿ, ‘ಗೌರವಾನ್ವಿತ ಮುಖ್ಯಮಂತ್ರಿಗಳಾದ ಪವನ್ ಕಲ್ಯಾಣ್ ಅವರು ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಅದೇ ಇದೀಗ ಚರ್ಚೆಯನ್ನು ಹುಟ್ಟು ಹಾಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 3 ನಿಮಿಷ ನಟಿಸಿದ್ದಕ್ಕೆ 3 ಕೋಟಿ ಸಂಭಾವನೆ ಪಡೆದ ‘ಐರಾವತ’ ನಟಿ

    3 ನಿಮಿಷ ನಟಿಸಿದ್ದಕ್ಕೆ 3 ಕೋಟಿ ಸಂಭಾವನೆ ಪಡೆದ ‘ಐರಾವತ’ ನಟಿ

    ನ್ನಡದ ‘ಐರಾವತ’ (Airavatha Film) ಬೆಡಗಿ ಊರ್ವಶಿ ರೌಟೇಲಾ (Urvashi Rautela) ಅವರು ಸಾಲು ಸಾಲು ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂಭಾವನೆ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ತೆಲುಗಿನ ಸಿನಿಮಾದಲ್ಲಿ ಕೇವಲ 3 ನಿಮಿಷ ನಟಿಸಿದ್ದಕ್ಕೆ ದುಬಾರಿ ಸಂಭಾವನೆ ಪಡೆದಿದ್ದಾರೆ. ಅದ್ಯಾವ ಸಿನಿಮಾ? ಏನ್ ಕಥೆ ಇಲ್ಲಿದೆ ಡಿಟೈಲ್ಸ್..ಇದನ್ನೂ ಓದಿ:ತಮನ್ನಾ ಭಾರತೀಯ ಚಿತ್ರರಂಗದ ಶಕೀರಾ: ಸೆಕ್ಸಿ ಸ್ಟೆಪ್ ಹಾಕಿದ್ದಕ್ಕೆ ಬಿರುದು

    ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇದೀಗ ಬೋಯಪತಿ ಶ್ರೀನು- ರಾಮ್ ಪೋತಿನೇನಿ (Ram Potineni) ನಟನೆಯ ಸಿನಿಮಾದಲ್ಲಿ ಮಾದಕ ಬೆಡಗಿ ಊರ್ವಶಿ ರೌಟೇಲಾ ನಟಿಸಿದ್ದಾರೆ. ಕೇವಲ 3 ನಿಮಿಷದ ನಟನೆಗೆ 3 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ. ಅಂದರೆ, ಇದರರ್ಥ ಒಂದು ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.

    ಈ ಚಿತ್ರಕ್ಕೆ ಮೂರೇ ನಿಮಿಷಕ್ಕೆ 3 ಕೋಟಿ ಸಂಭಾವನೆ ಪಡೆಯುತ್ತಾ ಇರೋದು ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ‘ವಾಲ್ತೇರ್ ವೀರಯ್ಯ’ ಚಿತ್ರದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದರು. ಈ ಸಾಂಗ್ ಪಡ್ಡೆಹುಡುಗರ ನಿದ್ದೆಗೆಡಿಸಿತ್ತು. ಈ ಹಾಡಿಗೆ ಹೆಜ್ಜೆ ಹಾಕಲು ನಟಿ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಈಗ ರಾಮ್ ಪೋತಿನೇನಿ ಸಿನಿಮಾದ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ.

    ಊರ್ವಶಿ ರೌಟೇಲಾ ಅವರು ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಜೊತೆ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯಿದೆ. ಈ ಚಿತ್ರಕ್ಕೂ ದುಬಾರಿ ಸಂಭಾವನೆಯನ್ನೇ ನಟಿ ಡಿಮ್ಯಾಂಡ್ ಮಾಡಿದ್ದಾರೆ. ಒಟ್ನಲ್ಲಿ ನಾಯಕಿಯಾಗಿ ಬೇಡಿಕೆ ಇರೋದಕ್ಕಿಂತ ಐಟಂ ಹಾಡಿಗೆ ಹೆಜ್ಜೆ ಹಾಕಲು ಐರಾವತ ಸುಂದರಿಗೆ ಬೇಡಿಕೆ ಜಾಸ್ತಿಯಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುಷ್ಪ 2 ಚಿತ್ರದ ಐಟಂ ಸಾಂಗ್: ಊರ್ವಶಿ ರೌಟೇಲಾ ಬಂದ್ರು ದಾರಿ ಬಿಡಿ

    ಪುಷ್ಪ 2 ಚಿತ್ರದ ಐಟಂ ಸಾಂಗ್: ಊರ್ವಶಿ ರೌಟೇಲಾ ಬಂದ್ರು ದಾರಿ ಬಿಡಿ

    ಪುಷ್ಪ ಸಿನಿಮಾ ಹಿಟ್ ಆಗಲು ‘ಹುಂ ಅಂಟವಾ ಮಾವ’ ಐಟಂ ಸಾಂಗ್ (Item Song) ಕೂಡ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸಮಂತಾ ಈ ಹಾಡಿಗೆ ಮೈಚಳಿ ಬಿಟ್ಟು ಕುಣಿದಿದ್ದರು. ಪಡ್ಡೆಗಳ ಹೃದಯದಲ್ಲಿ ಚಿಟ್ಟೆ ಹಾರಿಸಿದ್ದರು. ಈ ಹಾಡು ಹಿಟ್ ಆಗಿದ್ದರಿಂದ, ಚಿತ್ರದ ಗೆಲುವಿಗೂ ಅದು ಸಹಕಾರಿ ಆಯಿತು. ಪುಷ್ಪ 2ನಲ್ಲೂ ಅಂಥದ್ದೊಂದು ಫಾರ್ಮುಲಾವನ್ನು ಮತ್ತೆ ವರ್ಕ್ ಮಾಡುತ್ತಿದ್ದಾರೆ ನಿರ್ದೇಶಕರು. ಪುಷ್ಪ 2ನಲ್ಲೂ ಒಂದು ಐಟಂ ಸಾಂಗ್ ಇರಲಿದ್ದು, ಅದಕ್ಕೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಾಲಿವುಡ್ ನ ಮಾದಕ ಬೆಡಗಿ ಅಂತಾನೇ ಫೇಮಸ್ ಈ ಊರ್ವಶಿ ರೌಟೇಲಾ. ಕನ್ನಡದಲ್ಲೂ ಈ ನಟಿ ಸಿನಿಮಾ ಮಾಡಿದ್ದಾರೆ. ಸದಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವ ರೌಟೇಲಾ ಈ ಸಲ ಪುಷ್ಪ 2 ಚಿತ್ರಕ್ಕಾಗಿ ಕುಣಿಯಲಿದ್ದಾರಂತೆ. ಸಮಂತಾಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಕಾಸ್ಟ್ಯೂಮ್ ಹಾಕಲಿದ್ದಾರೆ ಎನ್ನುವುದು ತೆಲುಗು ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿರುವ ಮಾತು.

    ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 ಸಿನಿಮಾದ ಶೂಟಿಂಗ್ ಕುಂಟುತ್ತಾ ಸಾಗಿದೆ. ಸದ್ಯ ಚಿತ್ರದ ಕ್ಲೈಮ್ಯಾಕ್ಸ್ (Climax) ದೃಶ್ಯದ ಚಿತ್ರೀಕರಣವನ್ನು ಮಾಡಲು ನಿರ್ದೇಶಕ ಸುಕುಮಾರನ್ (Sukumaran) ಪ್ಲ್ಯಾನ್ ಮಾಡಿದ್ದು, ಅದೊಂದು ರೋಮಾಂಚನಕಾರಿ ನೀಡುವಂತಹ ಸನ್ನಿವೇಶವಾಗಿದೆ ಎಂದು ಹೇಳಲಾಗುತ್ತಿದೆ. ಈ ದೃಶ್ಯವನ್ನು ತಿರುಪತಿ ಜಿಲ್ಲೆಯ ಪೂರ್ವ ಘಟ್ಟದಲ್ಲಿರುವ ಸ್ವರ್ಣಮುಖಿ (Swarnamukhi) ನದಿಯ ತೀರದಲ್ಲಿ ಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ. Urvashi Rautela

    ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಅಲ್ಲು ಅರ್ಜುನ್ ಜೊತೆ ಫಾಸಿಲ್ ಕೂಡ ಭಾಗಿಯಾಗಲಿದ್ದಾರಂತೆ. ಈ ದೃಶ್ಯಕ್ಕೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಕ್ತ ಚಂದನವನ್ನು ಕಳ್ಳ ಮಾರ್ಗದಲ್ಲಿ ಸಾಗಿಸುವ ಪುಷ್ಪರಾಜನ ವಿರುದ್ಧ ಭನ್ವಿರ್ ಸಿಂಗ್ ಮಾಡುವ ದಾಳಿಯೇ ಕ್ಲೈಮ್ಯಾಕ್ಸ್ ದೃಶ್ಯ ಎಂದು ಹೇಳಲಾಗುತ್ತಿದೆ.

    ಈ ನಡುವೆ ‘ಪುಷ್ಪ 2’ (Pushpa 2) ಸಿನಿಮಾದ ಆಡಿಯೋ (Audio) ಹಕ್ಕು (Right) ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಈವರೆಗೂ ದಾಖಲಾಗಿದ್ದ ಎಲ್ಲ ಮೊತ್ತವನ್ನೂ ಅದು ಹಿಂದಿಕ್ಕಿದ್ದು ಟಿ ಸೀರಿಸ್ ಕಂಪೆನಿಯು 65 ಕೋಟಿ ರೂಪಾಯಿ ಹಣ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ರಿಲೀಸ್ ಆಗುವ ಅಷ್ಟು ಭಾಷೆಗಳಿಗೆ ಈ ಹಕ್ಕು ಅನ್ವಯಿಸಲಿದೆ.

     

    ಈ ಹಿಂದೆ ರಿಲೀಸ್ ಆಗಿರುವ ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ಸೇಲ್ ಆಗಿತ್ತು. ಆರ್.ಆರ್.ಆರ್ ಆಡಿಯೋ ಹಕ್ಕು 25 ಕೋಟಿಗೆ ಬಿಕರಿ ಆಗಿತ್ತು. ಸಾಹೋ ಸಿನಿಮಾದ ಆಡಿಯೋ ಹಕ್ಕು ಕೂಡ 22 ಕೋಟಿಗೆ ಸೇಲ್ ಆಗಿತ್ತು. ಈ ಎಲ್ಲ ದಾಖಲೆಗಳನ್ನೂ ಪುಷ್ಪ 2 ಸಿನಿಮಾ ಮುರಿದಿದೆ. ಅಲ್ಲದೇ, ಓಟಿಟಿಗೂ ಭಾರೀ ಮೊತ್ತಕ್ಕೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪದೇ ಪದೇ ಸುಳ್ಳು ಹೇಳಿ ‘ಛೀ ಸುಳ್ಳಿ..’ ಅನಿಸ್ಕೊಳ್ತಿದ್ದಾರೆ ಊರ್ವಶಿ ರೌಟೆಲಾ

    ಪದೇ ಪದೇ ಸುಳ್ಳು ಹೇಳಿ ‘ಛೀ ಸುಳ್ಳಿ..’ ಅನಿಸ್ಕೊಳ್ತಿದ್ದಾರೆ ಊರ್ವಶಿ ರೌಟೆಲಾ

    ಹಿಂದೆ ಕನ್ನಡ ಸಿನಿಮಾವೊಂದರಲ್ಲಿ ನಟಿಸುವುದಾಗಿ ಹೇಳಿ ಸಾಕಷ್ಟು ಪ್ರಚಾರ ತಗೆದುಕೊಂಡಿದ್ದ ಬಾಲಿವುಡ್ ನಟಿ ಊರ್ವಶಿ ರೌಟೆಲಾ, ಇದೀಗ ಮತ್ತೊಂದು ಸುಳ್ಳು ಹೇಳಿ ಸಿಕ್ಕಾಕಿಕೊಂಡಿದ್ದಾರೆ. ಬಾಲಿವುಡ್ ದುರಂತ ನಾಯಕಿಯೊಬ್ಬರ ಬಯೋಪಿಕ್ ನಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದ ನಟಿ, ಇದೀಗ ಅದು ಸುಳ್ಳು ಎನ್ನುವ ಮಾಹಿತಿ ಹೊರ ಬಿದ್ದಿದೆ. ಪದೇ ಪದೇ ಸುಳ್ಳು ಹೇಳುತ್ತಿರುವುದಕ್ಕೆ ಅಭಿಮಾನಿಗಳು ‘ಛೀ ಸುಳ್ಳಿ’ ಎಂದು ಗೇಲಿ ಮಾಡುತ್ತಿದ್ದಾರೆ.

    ಬಾಲಿವುಡ್ (Bollywood) ಕಂಡ ದುರಂತ ನಾಯಕಿಯರಲ್ಲಿ ಪರ್ವಿನ್ ಬಾಬಿ (Parveen Babi) ಕೂಡ ಒಬ್ಬರು. ತಮ್ಮ ಸೌಂದರ್ಯ ಹಾಗೂ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದ ಪರ್ವಿನ್ ಕೊನೆಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಸಾಯಬೇಕಾಯಿತು. ಅದೂ ಮುಂಬೈನ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದನ್ನೂ ಓದಿ:ಹುಟ್ಟುಹಬ್ಬದಂದು ನಟಿ ಭಾವನಾ ಮೆನನ್ 86ನೇ ಸಿನಿಮಾ ಅನೌನ್ಸ್

    70-80ರ ದಶಕದಲ್ಲಿ ಬಾಲಿವುಡ್ ಆಳಿದ ನಟಿ ಪರ್ವಿನ್. ಈ ದಶಕದ ಕಲಾವಿದರು ಪರ್ವಿನ್ ಡೇಟ್ ಗಾಗಿ ಕಾದದ್ದೂ ಇದೆ. ಅಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಿಸಿಕೊಂಡಿದ್ದರು. ಹಾಗಾಗಿ ಟೈಮ್ಸ್ ನಿಯತಕಾಲಿಕ ಇವರ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಬಾಲಿವುಡ್ ನಲ್ಲಿ ಮೊದಲ ಬಾರಿಗೆ ಮುಖಪುಟ ಅಲಂಕರಿಸಿದ ನಟಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.

    ಚರಿತ್ರಾ ಎಂಬ ಸಿನಿಮಾ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಪರ್ವಿನ್ ಬಾಬಿ, ಚರಿತ್ರೆಯಲ್ಲಿ ದಾಖಲಾಗುವಂತಹ ಚಿತ್ರಗಳಲ್ಲೇ ನಟಿಸಿದರು. ಆಗಿನ ಬಹುತೇಕ ಬಾಲಿವುಡ್ ನಟರ ಜೊತೆ ನಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ನಟಿಯ ಕುರಿತಾದ ಬಯೋಪಿಕ್ (Biopic) ಬಾಲಿವುಡ್ ನಲ್ಲಿ ಸಿದ್ಧವಾಗುತ್ತಿದೆ ಎಂದು ಹೇಳಲಾಗಿತ್ತು. ವಾಸಿಂ ಎಸ್ ಖಾನ್ (Wasim Khan) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಬಾಬಿ ಅವರ ಪಾತ್ರವನ್ನು ಊರ್ವಶಿ ರೌಟೆಲಾ (Urvashi Rautela) ನಿರ್ವಹಿಸಲಿದ್ದಾರೆ ಎಂದು ಸ್ವತಃ ಊರ್ವಶಿನೇ ಹೇಳಿಕೊಂಡಿದ್ದರು.

     

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಊರ್ವಶಿ, ‘ನಿಮ್ಮ ವಿಷಯದಲ್ಲಿ ಬಾಲಿವುಡ್ ಸೋತಿದೆ. ಆದರೆ, ನೀವು ಹೆಮ್ಮೆ ಪಡುವಂತೆ ನಾವು ಮಾಡುತ್ತೇವೆ. ಹೊಸ ನಂಬಿಕೆಯೊಂದಿಗೆ’ ಎಂದು ಬರೆದುಕೊಂಡಿದ್ದರು. ಈ ಮೂಲಕ ಪರ್ವಿನ್ ಸಿನಿಮಾ ಮಾಡುವ ಕುರಿತು ವಿಷಯ ತಿಳಿಸಿದ್ದರು. ಸದ್ಯ ಈ ಮಾಹಿತಿ ಸುಳ್ಳು ಎಂದು ಹೇಳಲಾಗುತ್ತಿದೆ. ಇದೆಲ್ಲ ಊರ್ವಶಿ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಎಂದು ಹೇಳಲಾಗುತ್ತಿದೆ.

  • ದುರಂತ ನಾಯಕಿ ಪರ್ವಿನ್ ಬಯೋಪಿಕ್ : ಊರ್ವಶಿ ರೌಟೆಲಾ ನಾಯಕಿ

    ದುರಂತ ನಾಯಕಿ ಪರ್ವಿನ್ ಬಯೋಪಿಕ್ : ಊರ್ವಶಿ ರೌಟೆಲಾ ನಾಯಕಿ

    ಬಾಲಿವುಡ್ (Bollywood) ಕಂಡ ದುರಂತ ನಾಯಕಿಯರಲ್ಲಿ ಪರ್ವಿನ್ ಬಾಬಿ (Parveen Babi) ಕೂಡ ಒಬ್ಬರು. ತಮ್ಮ ಸೌಂದರ್ಯ ಹಾಗೂ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದ ಪರ್ವಿನ್ ಕೊನೆಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಸಾಯಬೇಕಾಯಿತು. ಅದೂ ಮುಂಬೈನ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.

    70-80ರ ದಶಕದಲ್ಲಿ ಬಾಲಿವುಡ್ ಆಳಿದ ನಟಿ ಪರ್ವಿನ್. ಈ ದಶಕದ ಕಲಾವಿದರು ಪರ್ವಿನ್ ಡೇಟ್ ಗಾಗಿ ಕಾದದ್ದೂ ಇದೆ. ಅಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಿಸಿಕೊಂಡಿದ್ದರು. ಹಾಗಾಗಿ ಟೈಮ್ಸ್ ನಿಯತಕಾಲಿಕ ಇವರ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಬಾಲಿವುಡ್ ನಲ್ಲಿ ಮೊದಲ ಬಾರಿಗೆ ಮುಖಪುಟ ಅಲಂಕರಿಸಿದ ನಟಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಇದನ್ನೂ ಓದಿ:ದೀರ್ಘಕಾಲದ ಗೆಳತಿಯೊಂದಿಗೆ ಹಸೆಮಣೆ ಏರಿದ ಅಭಿಷೇಕ್

    ಚರಿತ್ರಾ ಎಂಬ ಸಿನಿಮಾ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಪರ್ವಿನ್ ಬಾಬಿ, ಚರಿತ್ರೆಯಲ್ಲಿ ದಾಖಲಾಗುವಂತಹ ಚಿತ್ರಗಳಲ್ಲೇ ನಟಿಸಿದರು. ಆಗಿನ ಬಹುತೇಕ ಬಾಲಿವುಡ್ ನಟರ ಜೊತೆ ನಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ನಟಿಯ ಕುರಿತಾದ ಬಯೋಪಿಕ್ (Biopic) ಬಾಲಿವುಡ್ ನಲ್ಲಿ ಸಿದ್ಧವಾಗುತ್ತಿದೆ. ವಾಸಿಂ ಎಸ್ ಖಾನ್ (Wasim Khan) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಊರ್ವಶಿ ರೌಟೆಲಾ (Urvashi Rautela) ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಊರ್ವಶಿ, ‘ನಿಮ್ಮ ವಿಷಯದಲ್ಲಿ ಬಾಲಿವುಡ್ ಸೋತಿದೆ. ಆದರೆ, ನೀವು ಹೆಮ್ಮೆ ಪಡುವಂತೆ ನಾವು ಮಾಡುತ್ತೇವೆ. ಹೊಸ ನಂಬಿಕೆಯೊಂದಿಗೆ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪರ್ವಿನ್ ಸಿನಿಮಾ ಮಾಡುವ ಕುರಿತು ವಿಷಯ ತಿಳಿಸಿದ್ದಾರೆ.

    ಚರಿತ್ರಾ ಸಿನಿಮಾ ಇವರ ನಟನೆಯ ಮೊದಲ ಸಿನಿಮಾವಾದರೆ, ‘ಐರಾದ’ ಕೊನೆಯ ಸಿನಿಮಾ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಪರ್ವಿನ್ 2005ರಲ್ಲಿ ತಮ್ಮ ನಿವಾಸದಲ್ಲೇ ಅನುಮಾನಸ್ಪಾದ ಶವವಾಗಿ ಪತ್ತೆಯಾಗಿದ್ದರು. ಈ ಎಲ್ಲ ವಿಷಯಗಳನ್ನು ಒಳಗೊಂಡಂಥ ಸ್ಟೋರಿಯನ್ನು ಧೀರಜ್ ಮಿಶ್ರಾ ಎನ್ನುವವರು ಬರೆದಿದ್ದು, ಅದನ್ನೇ ಇದೀಗ ಸಿನಿಮಾ ಮಾಡಲಾಗುತ್ತಿದೆ.

  • ಕಾಣೆಯಾದ ನಟಿ ಊರ್ವಶಿ ರೌಟೇಲ್ ಖರೀದಿಸಿದ ₹190 ಕೋಟಿ ಬಂಗ್ಲೆ

    ಕಾಣೆಯಾದ ನಟಿ ಊರ್ವಶಿ ರೌಟೇಲ್ ಖರೀದಿಸಿದ ₹190 ಕೋಟಿ ಬಂಗ್ಲೆ

    ಬಾಲಿವುಡ್ ನಟಿ ಊರ್ವಶಿ ರೌಟೇಲ್ (Urvashi Rautela) ಮುಂಬೈನಲ್ಲಿ (Mumbai) 190 ಕೋಟಿ ರೂಪಾಯಿ ಬೆಲೆ ಬಾಳುವ ಬಂಗ್ಲೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ದುಬಾರಿ ಬೆಲೆಯ ಬಂಗ್ಲೆಯನ್ನು ನಟಿಗೆ ಖರೀದಿಸಲು ಹೇಗೆ ಸಾಧ್ಯವಾಯಿತು ಎಂದು ಜನರು ಮಾತನಾಡಿಕೊಂಡರು. ಅದರಲ್ಲೂ ಪ್ರತಿಷ್ಠಿತ ಏರಿಯಾದಲ್ಲಿ ಬಂಗ್ಲೆ ಹೇಗೆ ಸಿಕ್ಕಿತು ಎನ್ನುವ ಮಾತು ಕೇಳಿ ಬಂತು. ಇದೆಲ್ಲದಕ್ಕೂ ಊರ್ವಶಿ ತಾಯಿ ಮೀರಾ ರೌಟೇಲ್ (Meera Rautela) ಉತ್ತರಿಸಿದ್ದಾರೆ.

    ನನ್ನ ಮಗಳು 190 ಕೋಟಿ ರೂಪಾಯಿ ಬಂಗ್ಲೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಕೇಳಿ ಅಚ್ಚರಿ ಆಯಿತು. ದಯವಿಟ್ಟು ಆ ಮನೆ ಎಲ್ಲಿದೆ ಎಂದು ಹುಡುಕಿಕೊಡಿ. ಅಲ್ಲದೇ, ನನ್ನ ಮಗಳು ಅಷ್ಟು ದುಬಾರಿ ಮನೆ ಖರೀದಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದು ಕಪೋಕಲ್ಪಿತ ಸುದ್ದಿ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ:ವರುಣ್‌ ತೇಜ್-‌ ನಟಿ ಲಾವಣ್ಯ ಎಂಗೇಜ್‌ಮೇಟ್ ಡೇಟ್ ಫಿಕ್ಸ್

    ಮುಂಬೈನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಜುಹು ಪ್ರದೇಶದಲ್ಲಿ ಊರ್ವಶಿ ಮನೆ ಖರೀದಿಸಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದವು. ಅದರಲ್ಲೂ ಖ್ಯಾತ ನಿರ್ಮಾಪಕ ಯಶ್ ಚೋಪ್ರಾ (Yash Chopra) ಅವರ ಮನೆಯ ಹಿಂದೆಯೇ ಆ ಬಂಗ್ಲೆ ಇದೆ ಎಂದು ಸುದ್ದಿ ಹರಿಬಿಡಲಾಗಿತ್ತು. ಆ ಮನೆಗೆ ದುಬಾರಿ ಬೆಲೆಯನ್ನೂ ನಿಗದಿ ಮಾಡಲಾಗಿತ್ತು. ಇದೆಲ್ಲವೂ ಸುಳ್ಳು ಸುದ್ದಿ ಎಂದು ಊರ್ವಶಿ ತಾಯಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • Cannes 2023: ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ ಬಾಲಿವುಡ್‌ ಬ್ಯೂಟೀಸ್

    Cannes 2023: ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ ಬಾಲಿವುಡ್‌ ಬ್ಯೂಟೀಸ್

    2023ನೇ ಸಾಲಿನ ಕಾನ್ ಫೆಸ್ಟಿವಲ್ (Cannes Festival 2023) ಆರಂಭವಾಗಿದೆ. ದೇಶ-ವಿದೇಶದ ಸೆಲೆಬ್ರಿಟಿ ತಾರೆಯರು ಈ ಸಮಾರಂಭದಲ್ಲಿ ಭಾಗಿಯಾಗುತ್ತಾರೆ. ಸಿನಿ ತಾರೆಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕೋದು ಒಂದು ವಿಶೇಷ ಆಕರ್ಷಣೆ. ಕ್ಯಾಮೆರಾ ಕಣ್ಣಿಗೆ ಚೆಂದದ ಪೋಸ್ ಕೊಡುತ್ತಾರೆ. ಸದ್ಯ ಬಾಲಿವುಡ್ ಸ್ಟಾರ್ ನಾಯಕಿಯರು ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ.

    76ನೇ ಕಾನ್ ಫೆಸ್ಟಿವಲ್ ಫ್ಯಾನ್ಸ್‌ನಲ್ಲಿ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಮೇ 16ರಿಂದ ಶುರುವಾಗಿರುವ ಈ ಕಾರ್ಯಕ್ರಮ ಮೇ 27ಕ್ಕೆ ಅಂತ್ಯವಾಗಲಿದೆ. ಕಾನ್ ಚಿತ್ರೋತ್ಸವದಲ್ಲಿ ಐಶ್ವರ್ಯ ರೈ, ಊರ್ವಶಿ ರೌಟೇಲಾ, ಮೃಣಾಲ್ ಠಾಕೂರ್ (Mrunal Thakur), ಪಾಲ್ಗೊಂಡಿದ್ದಾರೆ. ಇದನ್ನೂ ಓದಿ:‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ

    ಕರಾವಳಿ ಬೆಡಗಿ ಐಶ್ವರ್ಯಾ ರೈ (Aishwarya Rai) ಅವರು ಗ್ರೀನ್ ಬಣ್ಣದ ಡ್ರೆಸ್ ಮತ್ತು ಕಪ್ಪು- ಸಿಲ್ವರ್ ಮಿಶ್ರಿತ ಕಲರ್ ಗೌನ್‌ನಲ್ಲಿ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಲುಕ್ ಮತ್ತು ಕಣ್ಣಿನ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಊರ್ವಶಿ ರೌಟೇಲಾ (Urvashi Rautela) ಅವರು ಬಾದಮ್ ಮತ್ತು ನೀಲಿ ಕಲರ್ ಮಿಕ್ಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ತುಟಿಗೆ ನೀಲಿ ಬಣ್ಣದ ಲಿಪ್‌ಸ್ಟಿಕ್ ಹಾಕಿದ್ದಾರೆ. ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ‘ಸೀತಾ ರಾಮಂ’ ಸುಂದರಿ ಮೃಣಾಲ್ ಠಾಕೂರ್ ಅವರು ಬಿಳಿ ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

  • Cannes 2023: ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿಯರು

    Cannes 2023: ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿಯರು

    2023ನೇ ಸಾಲಿನ ಕಾನ್ ಚಿತ್ರೋತ್ಸವ (Cannes Festival) ಆರಂಭ ಆಗಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿರೋದು ಕಾನ್ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ಸುಂದರ ಉಡುಗೆಗಳನ್ನು ತೊಟ್ಟು ನಟಿಮಣಿಯರು ಪೋಸ್ ನೀಡಿದ್ದಾರೆ.

     

    View this post on Instagram

     

    A post shared by Urvashi Rautela (@urvashirautela)

    76ನೇ ಕಾನ್ ಚಿತ್ರೋತ್ಸವ ಕಾರ್ಯಕ್ರಮವು ಫ್ರಾನ್ಸ್ನಲ್ಲಿ ನಡೆಯುತ್ತಿದೆ. ವಿವಿಧ ದೇಶದವರು ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಮೇ 16ರಿಂದ ಶುರುವಾಗಿದ್ದು, ಮೇ 27ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ (Bollywood) ನಟಿಯರಾದ ಊರ್ವಶಿ ರೌಟೇಲಾ (Urvashi Rautela), ಸಾರಾ ಅಲಿ ಖಾನ್ (Sara Ali Khan), ಇಶಾ ಗುಪ್ತಾ, ಸೀತಾ ರಾಮಂ ಸುಂದರಿ ಮೃಣಾಲ್ ಠಾಕೂಲ್ ಅವರು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಕಾನ್ ಫೆಸ್ಟಿವಲ್‌ನಲ್ಲಿ ‘ಐರಾವತ’ ಬೆಡಗಿ ಊರ್ವಶಿ ರೌಟೇಲಾ ಕೇಸರಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ದಾರೆ. ಸಾರಾ ಅಲಿ ಖಾನ್ ಅವರು ಬಿಳಿ ಬಣ್ಣದ ಸೀರೆಯುಟ್ಟು ಸ್ಟನ್ನಿಂಗ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಸ್ನೇಹಾ ಆಚಾರ್ಯ ಬೇಬಿ ಬಂಪ್ ಫೋಟೋಸ್

    ನಟಿ ಮೃಣಾಲ್ ಠಾಕೂರ್ (Mrunal Thakur) ಅವರು ಲೈಟ್ ಡ್ರೆಸ್‌ನಲ್ಲಿ ಸಖತ್ ಹಾಟ್ ಪೋಸ್ ನೀಡಿದ್ದಾರೆ. ಇಶಾ ಗುಪ್ತಾ (Esha Gupta) ಅವರು ಬಳಿ ಬಣ್ಣದ ಮಾಡ್ರನ್ ಡ್ರೆಸ್‌ನಲ್ಲಿ ಕಂಗೊಳಿಸಿದ್ದಾರೆ. ಒಟ್ನಲ್ಲಿ ಬಾಲಿವುಡ್ ಬೆಡಗಿಯರು ಕಾನ್ ಫೆಸ್ಟಿವಲ್‌ನಲ್ಲಿ ತಮ್ಮ ಹಾಟ್ & ಬೋಲ್ಡ್ ಲುಕ್‌ನಿಂದ ಮಿಂಚಿದ್ದಾರೆ.

  • ಕಾನ್‌ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ ಊರ್ವಶಿ ರೌಟೇಲಾ

    ಕಾನ್‌ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ ಊರ್ವಶಿ ರೌಟೇಲಾ

    2023ರನೇ ಸಾಲಿನ ಕಾನ್ ಚಿತ್ರೋತ್ಸವಕ್ಕೆ (Cannes Film Festival 2023) ಆರಂಭ ಆಗಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿರೋದು ಕಾನ್ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ಸುಂದರ ಉಡುಗೆಗಳನ್ನು ತೊಟ್ಟು ಅವರೆಲ್ಲ ಪೋಸ್ ನೀಡುತ್ತಿದ್ದಾರೆ. ಅದರಂತೆಯೇ ಕನ್ನಡದ ‘ಐರಾವತ’ ಬೆಡಗಿ ಬಹುಭಾಷಾ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಕಾನ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿರುವ ಲುಕ್ ಹೈಲೈಟ್ ಆಗಿದೆ.

    76ನೇ ಕಾನ್ ಚಿತ್ರೋತ್ಸವ ಕಾರ್ಯಕ್ರಮವು ಫ್ರಾನ್ಸ್‌ನಲ್ಲಿ (France) ನಡೆಯುತ್ತಿದೆ. ವಿವಿಧ ದೇಶದವರು ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಮೇ 16ರಿಂದ ಮೇ 17ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಇದೀಗ ಊರ್ವಶಿ ರೌಟೇಲಾ ಕೂಡ ಭಾಗಿಯಾಗಿ ಮಿಂಚಿದ್ದಾರೆ. ಪಿಂಕ್ ಬಣ್ಣದ ಗೌನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:ದಿ ಕೇರಳ ಸ್ಟೋರಿ ನಂತರ ವಿವಾದಕ್ಕೆ ಗುರಿಯಾಯ್ತು ತಮಿಳಿನ ಚಿತ್ರ

     

    View this post on Instagram

     

    A post shared by Urvashi Rautela (@urvashirautela)

    ಇಷ್ಟೇ ಆಗಿದ್ದರೆ ಊರ್ವಶಿ ಅವರು ಹೆಚ್ಚು ಸುದ್ದಿ ಆಗುತ್ತಿರಲಿಲ್ಲವೇನೋ. ಆದರೆ, ಅವರು ಧರಿಸಿರೋ ನೆಕ್‌ಪೀಸ್ ಎಲ್ಲರ ಗಮನ ಸೆಳೆದಿದೆ. ಮೊಸಳೆ ಮರಿಯ ನೆಕ್‌ಪೀಸ್ ಎಲ್ಲರ ಗಮನ ಸೆಳೆದಿದೆ. ಊರ್ವಶಿ ಅವರು ಫ್ಯಾಷನ್‌ಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಪ್ರತಿ ಕಾರ್ಯಕ್ರಮದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.

     

    View this post on Instagram

     

    A post shared by Urvashi Rautela (@urvashirautela)

    ಊರ್ವಶಿ ರೌಟೇಲಾ ಅವರು ಸದಾ ಸಿನಿಮಾಗಿಂತ ಡ್ರೆಸ್ ಸೆನ್ಸ್ ಮತ್ತು ರಿಷಬ್ ಪಂತ್ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇನ್ನೂ ‘ಕಾಂತಾರ’ 2 ಸಿನಿಮಾದಲ್ಲಿ ಊರ್ವಶಿ ಕೂಡ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.!

    ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.!

    ದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ‘ಐರಾವತ’ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಅವರು ಇದೀಗ ದುಬಾರಿ ಡ್ರೆಸ್ ಧರಿಸಿರುವ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಊರ್ವಶಿ ತೊಟ್ಟ ಬಟ್ಟೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತಿರಾ.

     

    View this post on Instagram

     

    A post shared by Urvashi Rautela (@urvashirautela)

    ಕನ್ನಡದ ‌’ಐರಾವತ’ ನಟಿ ಊರ್ವಶಿ ರೌಟೇಲಾ ಅವರು ಇತ್ತೀಚಿಗೆ ಅವಾರ್ಡ್ ಫಂಕ್ಷನ್‌ವೊಂದರಲ್ಲಿ ಭಾಗವಹಿಸಿದ್ದರು. ದುಬಾರಿ ಬೆಲೆಯ ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಊರ್ವಶಿ ರಾಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಫ್ಯಾಷನ್ ಈವೆಂಟ್‌ನಲ್ಲಿ ಡಿಸೈನರ್ ಮೋನಿಶಾ ಜೈಸಿಂಗ್ ಅವರ ಸ್ಪೆಷಲ್ ಕಲೆಕ್ಷನ್‌ನಲ್ಲಿ ಈ ಉಡುಪನ್ನು ನಟಿ ಆಯ್ಕೆ ಮಾಡಿದ್ದಾರೆ.

     

    View this post on Instagram

     

    A post shared by Urvashi Rautela (@urvashirautela)

    ಊರ್ವಶಿ ರೌಟೇಲಾ ಚಿನ್ನದಂತೆ ಹೊಳೆಯುತ್ತಿರುವ ಈ ಉಡುಪಿನಲ್ಲಿ ಮಿಂಚಿದ್ದಾರೆ. ಬೀಜ್ ಧೋತಿ ಶೈಲಿಯ ಸ್ಕರ್ಟ್ ನೋಡಲು ಆಕರ್ಷಕವಾಗಿ ಊರ್ವಶಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ ತೊಟ್ಟು ನಟಿ ಎಲ್ಲರನ್ನು ಬೆರಗುಗೊಳಿಸಿದ್ದಾರೆ.

     

    View this post on Instagram

     

    A post shared by Urvashi Rautela (@urvashirautela)

    ಊರ್ವಶಿ ರೌಟೇಲಾ ಧರಿಸಿದ್ದ ಈ ಗೋಲ್ಡ್ ಕಲರ್ ಡ್ರೆಸ್ ಬೆಲೆ ನಿಜಕ್ಕೂ ದುಬಾರಿಯಾಗಿದೆ. ಮೂಲಗಳ ಪ್ರಕಾರ, ಊರ್ವಶಿ ರೌಟೇಲಾ ಅವರ ಐಷಾರಾಮಿ ಗೋಲ್ಡನ್ ಡ್ರೆಸ್ ಬೆಲೆ 30 ಲಕ್ಷ ಎಂದು ಹೇಳಲಾಗುತ್ತಿದೆ. ಈ ಉಡುಪಿನ ಅಸಲಿ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.