Tag: Urvashi Rautel

  • ಟ್ರೆಡಿಷನಲ್ ಲುಕ್‍ಗೆ 58 ಲಕ್ಷ ಖರ್ಚು ಮಾಡಿದ  ಐರಾವತ ಬೆಡಗಿ

    ಟ್ರೆಡಿಷನಲ್ ಲುಕ್‍ಗೆ 58 ಲಕ್ಷ ಖರ್ಚು ಮಾಡಿದ ಐರಾವತ ಬೆಡಗಿ

    ಮುಂಬೈ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದ ನಟಿ ಊರ್ವಶಿ ರೌಟೇಲಾ 5 ಲಕ್ಷ ರೂಪಾಯಿಗೂ ಅಧಿಕ ಬೆಲೆಬಾಳುವ ದುಬಾರಿ ಬೆಲೆಯ ಸೀರೆ ತೊಟ್ಟು ಎಲ್ಲಡೆ ಸುದ್ದಿಯಾಗುತ್ತಿದ್ದಾರೆ.

    ದುಬಾರಿ ಫ್ಯಾಷನ್ ಆಯ್ಕೆ ಮೂಲಕ ಆಗಾಗ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇದೀಗ ಹೈ ಪ್ರೊಫೈಲ್ ಮದುವೆ ಸಮಾರಂಭವೊಂದಕ್ಕೆ ಬರೋಬ್ಬರಿ 4,25,000 ರೂ. ಬೆಲೆಯ ಗುಜರಾತಿ ಪಟೋಲಾ ಸೀರೆ ಧರಿಸಿ ಗಮನ ಸೆಳೆದಿದ್ದಾರೆ. ಇದಿಷ್ಟೆ ಅಲ್ಲ, ಆ ದಿನ ಅವರು ಧರಿಸಿದ ವಜ್ರದ ಆಭರಣಗಳ ಬೆಲೆಯೂ 24,50,000 ರೂಪಾಯಿ ಎನ್ನಲಾಗಿದೆ.

    ಸೀರೆ, ಆಭರಣ, ಹೇರ್ ಸ್ಟೈಲ್, ಮೇಕಪ್, ಇತರ ಫ್ಯಾಷನ್ ಸೇರಿದಂತೆ ಆ ಮದುವೆಗೆ ಅವರು ಒಟ್ಟು 58,75,000 ರೂ. ಬೆಲೆಯ ಕಾಸ್ಟ್ಯೂಮ್ ಧರಿಸಿದ್ದರಂತೆ. ಹಿಂದಿ ಚಿತ್ರರಂಗದ ಹಿರಿಯ ನಟ ಮತ್ತು ರಾಜಕಾರಣಿ ಮನೋಜ್ ಕುಮಾರ್ ಅವರ ಮರಿಮೊಮ್ಮಗಳ ಮದುವೆಯಾಗಿತ್ತು. ಮೆಹಂದಿ ಕಾರ್ಯಕ್ರಮಕ್ಕೆ ಈ ಸಾಂಪ್ರದಾಯಿಕ ಮತ್ತು ದುಬಾರಿ ಕಾಸ್ಟ್ಯೂಮ್ ಧರಿಸಿದ್ದ ಊರ್ವಶಿ ರೌಟೇಲಾ ಅವರ ಆ ವಿಶೇಷ ಸೀರೆಯನ್ನು ತಯಾರಿಸಲು ಸುಮಾರು 70 ದಿನಗಳು ಬೇಕಾದವು ಎಂದು ಅವರ ಸ್ಟೈಲಿಸ್ಟ್  ಹೇಳಿದ್ದಾರೆ. ಇದನ್ನೂ ಓದಿ:  ಮಣ್ಣಿನಲ್ಲಿ ಮಿಂದೆದ್ದ ಊರ್ವಶಿ ರೌಟೆಲ್ಲಾ

    ಸೀರೆಯ ರೇಷ್ಮೆಯ ನೂಲುಗಳಿಗೆ ಬಣ್ಣ ಹಾಕಲು ಸುಮಾರು 70 ದಿನಗಳು ಬೇಕಾಗಿದೆ. ಸೀರೆ ನೇಯಲು 25 ದಿನಗಳು ಬೇಕಾದವು. 600 ಗ್ರಾಂ ರೇಷ್ಮೆ ಬಳಕೆಯಾಗಿರುವ ಈ ಸೀರೆ ತಯಾರಿಕೆಗೆ 12 ಜನರು ಕೆಲಸ ಮಾಡಿದ್ದಾರೆ. ಇದಕ್ಕೆ ಬಳಕೆಯಾಗಿರುವ ವಸ್ತುಗಳಿಂದ ಸಾಮಾನ್ಯ ರೀತಿಯ ಸುಮಾರು 27 ಪಟೋಲಾ ಸೀರೆ ತಯಾರಿಸಬಹುದು ಎಂದು ಅವರು ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಬಾಲಿವುಡ್ ನಟಿಯರು ಬೆಲೆ ಬಾಳುವ ಸೀರೆಯುಟ್ಟು ಸುದ್ದಿಯಾಗಿದ್ದರು. ಇದೀಗ ಅದೇ ಸಾಲಿಗೆ ಊರ್ವಶಿ ರೌಟೇಲಾ ಸೇರ್ಪಡೆಯಾಗಿದ್ದಾರೆ.

    ಕೆಲವು ದಿನಗಳ ಹಿಂದೆ ಮಣ್ಣನ್ನು ಮೈಗೆ ಹಚ್ಚಿಕೊಂಡು ಮಣ್ಣಿನ ಸ್ನಾನ ಮಾಡಿರುವ ಫೋಟೋವನ್ನು ಊರ್ವಶಿ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ದುಬಾರಿಯಾದ ಕಾಸ್ಟ್ಯೂಮ್ ಧರಿಸುವ ಮೂಲಕವಾಗಿ ಸುದ್ದಿಯಗುತ್ತಿದ್ದಾರೆ.

  • ಫೋಟೋ ಶೂಟ್ ವೇಳೆ ಊರ್ವಶಿ ಎಡವಟ್ಟು-ಸೊಂಟದ ಪಟ್ಟಿಯೇ ಕಳಚಿ ಬಿತ್ತು

    ಫೋಟೋ ಶೂಟ್ ವೇಳೆ ಊರ್ವಶಿ ಎಡವಟ್ಟು-ಸೊಂಟದ ಪಟ್ಟಿಯೇ ಕಳಚಿ ಬಿತ್ತು

    ನವದೆಹಲಿ: ಸಿನಿಮಾ ತಾರೆಯರು ಯಾವಾಗಲೂ ಸಿನಿಮಾ ಶೂಟಿಂಗ್ ಅಥವಾ ಫೋಟೋಶೂಟ್ ಮಾಡುವಾಗ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾರೆ. ಈಗ ಅದೇ ರೀತಿ ಬಾಲಿವುಡ್ ನಟಿ ಊರ್ವಶಿ ರೌತೆಲಾ ಕೂಡ ಫೋಟೋ ಶೂಟ್ ಮಾಡುವಾಗ ಎಡವಿದ್ದಾರೆ.

    ನಟಿ ಊರ್ವಶಿ ಅವರು ಫೋಟೋಶೂಟ್ ನಲ್ಲಿ ಎಡವಿದ ವಿಡಿಯೋವನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದ್ರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯಕ್ಕೆ ಶೂಟಿಂಗ್ ವೇಳೆ ಎಡವಿ ತಕ್ಷಣ ಬ್ಯಾಲೆನ್ಸ್ ಮಾಡಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

    ಊರ್ವಶಿ ಸುಂದರವಾಗಿರುವ ಬಟ್ಟೆ ಜೊತೆಗೆ ಪೆನ್ಸಿಲ್ ಹೀಲ್ಡ್ ಸ್ಯಾಂಡಲ್ ಹಾಕಿಕೊಂಡು ಗಾರ್ಡನ್ ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದರು. ಊರ್ವಶಿವರು ನಿಧಾನವಾಗಿ ಫೋಟೋಗೆ ಪೋಸ್ ಕೊಡುತ್ತಿದ್ದರು. ಆದರೆ ಈ ವೇಳೆ ಊರ್ವಶಿ ನಿಯಂತ್ರಣ ತಪ್ಪಿ ಹಿಂದೆ ಬೀಳುತ್ತಿದ್ದರು. ತಕ್ಷಣ ಅವರು ಧರಿಸಿದ್ದ ಉಡುಪಿನಿಂದ ಬೆಲ್ಟ್ ಕಳಚಿ ಬಿದ್ದಿದೆ. ಆದರೆ ಅವರು ಹೇಗೋ ಬ್ಯಾಲೆನ್ಸ್ ಮಾಡಿ ಕೆಳಗೆ ಬೀಳುವುದರಿಂದ ತಪ್ಪಿಸಿಕೊಂಡಿದ್ದಾರೆ.

    ಊರ್ವಶಿ ಬೀಳುವುದರಿಂದ ತಪ್ಪಿಸಿಕೊಂಡು ಕೆಲ ಕ್ಷಣ ನಕ್ಕು ಸುಮ್ಮನಾಗಿದ್ದಾರೆ. ಆದರೆ ಬಳಿಕ ಈ ವಿಡಿಯೋವನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದುವರೆಗೂ ಆ ವಿಡಿಯೋ ಸುಮಾರು 16 ಲಕ್ಷಕ್ಕಿಂತ ಅಧಿಕ ವೀವ್ಸ್ ಕಂಡಿದೆ.

    2013ರಲ್ಲಿ `ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಸಿನಿಮಾ ಅಂಗಳಕ್ಕೆ ಊರ್ವಶಿ ಪಾದಾರ್ಪಣೆ ಮಾಡಿದರು. ಗ್ರೇಟ್ ಗ್ರ್ಯಾಂಡ್ ಮಸ್ತಿ, ಸನಮ್ ರೇ, ಕಾಬಿಲ್, ಹೇಟ್ ಸ್ಟೋರಿ-4 ಸಿನಿಮಾಗಳಲ್ಲಿ ಊರ್ವಶಿ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bmkx6qPBEvS/?taken-by=urvashirautela