Tag: urus

  • Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ

    Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ

    ಬೆಳಗಾವಿ: ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ (I Love Muhammad) ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮುಸ್ಲಿಂ ಯುವಕರು ಕಲ್ಲು ತೂರಾಟ (Stone Pelting) ನಡೆಸಿದ ಘಟನೆ ಬೆಳಗಾವಿ (Belagavi) ನಗರದ ಖಡಕ್ ಗಲ್ಲಿಯಲ್ಲಿ (Khadak Galli) ನಡೆದಿದೆ.

    ಮಾಬುಸುಬಾನಿ ದರ್ಗಾದ ಉರುಸ್ ವೇಳೆ ‘ಐ ಲವ್ ಮುಹಮ್ಮದ್’ ಘೋಷಣೆ ಕೂಗಿದ ಹಿನ್ನೆಲೆ ಆಕ್ರೋಶ ವ್ಯಕ್ತವಾಗಿದೆ. ಪ್ರಶ್ನೆ ಮಾಡಿದ ಸ್ಥಳೀಯ ಹಿಂದೂ ನಿವಾಸಿಗಳ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿ ವರ್ಷ ಶನಿವಾರ ಕೂಟ, ಜಾಲ್ಗಾರ ಗಲ್ಲಿ ಮಾರ್ಗದ ಮೂಲಕ ದರ್ಗಾಗೆ ಮೆರವಣಿಗೆ ಹೋಗುತ್ತಿತ್ತು. ಈ ವರ್ಷ ಅನುಮತಿ ಇಲ್ಲದೆಯೂ ಸಹ ಖಡಕ್ ಗಲ್ಲಿಗೆ ಮೆರವಣಿಗೆ ಎಂಟ್ರಿಯಾಗಿದೆ ಎನ್ನಲಾಗಿದೆ. ಮೆರವಣಿಗೆ ವೇಳೆ ‘ ಐ ಲವ್ ಮುಹಮ್ಮದ್’ ಎಂಬ ಘೋಷಣೆ ಕೂಗಿದ್ದಲ್ಲದೇ ಯಾವಾಗಲೂ ಬಾರದ ಮೆರವಣಿಗೆ ಈಗ ಯಾಕೆ ಬಂದಿದೆ? ತಮ್ಮ ಏರಿಯಾಗೆ ಬಂದು ಘೋಷಣೆ ಕೂಗಿದ್ದು ಯಾಕೆ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ ನಡೆದಿದೆ. ಬಳಿಕ ತಲ್ವಾರ್ ಕೂಡ ಪ್ರದರ್ಶನ ಮಾಡಿ ಗೂಂಡಾವರ್ತನೆ ತೋರಲಾಗಿದೆ. ಇದನ್ನೂ ಓದಿ: ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ಒಪ್ಪಿಗೆ

    ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೆರವಣಿಗೆಯನ್ನು ಸ್ಥಳದಿಂದ ಕಳುಹಿಸಿದ್ದಾರೆ. ಏಕಾಏಕಿ ಮೆರವಣಿಗೆ ಬಂದವರು ಮತ್ತು ಕಲ್ಲು ತೂರಿದವರ ವಿರುದ್ಧ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮನಿ, ಇಬ್ಬರು ಡಿಸಿಪಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅ.9ರಂದು ಹಾಸನಾಂಬ ದೇಗುಲ ಓಪನ್ – ಭಕ್ತರ ದರ್ಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

    ಇನ್ನು ಪ್ರಕರಣ ಸಂಬಂಧ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಭೇಟಿ ನೀಡಿ ಸ್ಥಳೀಯರು, ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಡಕ್ ಗಲ್ಲಿಯಲ್ಲಿ ಎರಡು ಕೋಮಿನ ಜನರ ನಡುವೆ ಘರ್ಷಣೆ ನಡೆದಿದೆ. ಒಂದು ಧಾರ್ಮಿಕ ಕಾರ್ಯಕ್ರಮ ಇತ್ತು. ಒಂದು ರೂಟ್ ಫಿಕ್ಸ್ ಇದೆ, ಅದನ್ನ ಬಿಟ್ಟು ಬೇರೆ ರೂಟ್‌ನಲ್ಲಿ ಬಂದಿದ್ದಾರೆ. ಇದನ್ನ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಘರ್ಷಣೆ ಆಗಿದೆ. ಸ್ಥಳೀಯರು ಕಲ್ಲು ತೂರಾಟ ಆಗಿದೆ ಅಂತಾ ಕೇಸ್ ಕೊಟ್ಟಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಯಾರಿಗೂ ಗಾಯ ಆಗಿಲ್ಲ, ಎರಡು ಕೋಮಿನ ಹಿರಿಯರು ಕೂಡಲೇ ಸರಿಪಡೆಸಿದ್ದಾರೆ. ಓರಿಜನಲ್ ರೂಟ್ ಬಿಟ್ಟು ಬಂದು ತಪ್ಪಾಗಿದೆ. ‘ಐ ಲವ್ ಮುಹಮ್ಮದ್’ ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿಂತೆ ಮಹಾನಗರ ಪಾಲಿಕೆ ಅವರಿಗೆ ಹೇಳುತ್ತೇವೆ. ಅನುಮತಿ ಪಡೆದು ಬ್ಯಾನರ್ ಹಾಕಲು ಸೂಚನೆ ನೀಡುತ್ತೇವೆ ಎಂದು ತಿಳಿಸಿದರು. ಘಟನೆ ಸಂಬಂಧ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಲಬುರಗಿಗೂ ಕಾಲಿಟ್ಟ ಐ ಲವ್ ಮೊಹಮ್ಮದ್ ಬ್ಯಾನರ್ ವಿವಾದ: ಹಿಂದೂ ಸಂಘಟನೆಗಳಿಂದ ಆಕ್ರೋಶ

  • ಪ್ರವಾಸಿಗರೇ ಗಮನಿಸಿ; ಕಾಫಿನಾಡ ಮುಳ್ಳಯ್ಯನಗಿರಿ-ದತ್ತಪೀಠ 3 ದಿನ ಬಂದ್!

    ಪ್ರವಾಸಿಗರೇ ಗಮನಿಸಿ; ಕಾಫಿನಾಡ ಮುಳ್ಳಯ್ಯನಗಿರಿ-ದತ್ತಪೀಠ 3 ದಿನ ಬಂದ್!

    ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ 3 ದಿನಗಳ ಕಾಲ ಉರುಸ್ (Urus) ನಡೆಯುವುದರಿಂದ ಚಿಕ್ಕಮಗಳೂರು (Chikkamagaluru) ಜಿಲ್ಲಾಡಳಿತ ಪ್ರವಾಸಿಗರಿಗೆ (Tourists) ಸಂಪೂರ್ಣ ನಿರ್ಬಂಧ ಹೇರಿದೆ.

    ಉರುಸ್ ಅಂಗವಾಗಿ ಜಿಲ್ಲಾಡಳಿತ 3 ದಿನಗಳ ಕಾಲ ಪಶ್ಚಿಮ ಘಟ್ಟಗಳ ತಪ್ಪಲು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದೆ. ಇದೇ ಮಾರ್ಚ್ 15ರಿಂದ 17ರವರೆಗೆ 3 ದಿನಗಳ ಕಾಲ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ-ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಮಾರ್ಚ್ 15 ರಿಂದ 17ವರೆಗೆ 3 ದಿನ ಉರುಸ್ ನಡೆಯುವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ನಿರ್ಬಂಧಿಸಿದೆ. ಇದನ್ನೂ ಓದಿ: ಮತಾಂತರ ಆಗುವಂತೆ ನನಗೆ ಒತ್ತಡ ಹೇರುತ್ತಿದ್ದರು: ಮಾಜಿ ಪಾಕ್ ಕ್ರಿಕೆಟಿಗ ಕನೇರಿಯಾ

    ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಮುಸ್ಲಿಂ ಬಾಂಧವರು ಉರುಸ್ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದು. ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಬಾರದು ಎಂದು ಜಿಲ್ಲಾಡಳಿತ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಇದನ್ನೂ ಓದಿ: ಐಪಿಎಸ್ ಸೂಚನೆಯಂತೆ ರನ್ಯಾಗೆ ಗ್ರೀನ್‌ಚಾನಲ್ – ಡಿಆರ್‌ಐ ಮುಂದೆ ಶಿಷ್ಟಾಚಾರ ಅಧಿಕಾರಿ ಹೇಳಿಕೆ

    ಚಿಕ್ಕಮಗಳೂರಿನಿಂದ ದತ್ತಪೀಠದ ಮಾರ್ಗದ ರಸ್ತೆ ಅತ್ಯಂತ ಚಿಕ್ಕದಾಗಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಬಾರದು ಜೊತೆಗೆ ಭದ್ರತೆಯ ದೃಷ್ಠಿಯಿಂದಲೂ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಆದರೆ, ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿಗೆ ಮೊದಲೇ ಬುಕ್ ಮಾಡಿರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧವಿಲ್ಲ. ಪ್ರವಾಸಿಗರು ಬುಕ್ಕಿಂಗ್ ತೋರಿಸಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಮಾತ್ರ ಹೋಗಬಹುದು. ಇದನ್ನೂ ಓದಿ: ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕೋಚಿಂಗ್‌ಗೆ ಬಂದ ರಾಹುಲ್ ದ್ರಾವಿಡ್

    ಇನ್ನು ಗಿರಿ ಭಾಗದ ಕಾಫಿ ತೋಟಗಳಿಗೆ ಓಡಾಡುವ ಸ್ಥಳೀಯರಿಗೂ ಯಾವುದೇ ನಿರ್ಬಂಧವಿಲ್ಲ. ಉರುಸ್ ಆಚರಣೆ ಹಿನ್ನೆಲೆ ಪೊಲೀಸ್ ಕೂಡ ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದೆ. ಚಿಕ್ಕಮಗಳೂರು ನಗರ ಹಾಗೂ ದತ್ತಪೀಠದಲ್ಲಿ 800ಕ್ಕೂ ಅಧಿಕ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

  • ಪೊಲೀಸ್‌ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ

    ಪೊಲೀಸ್‌ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ

    ಕಲಬುರಗಿ: ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ (Ladle Mashak Dargah) ಮುಸ್ಲಿಮರು ನಿರ್ವಿಘ್ನವಾಗಿ ಉರುಸ್ (Urus) ಆಚರಿಸಿದರೆ ಹಿಂದೂಗಳು ಯಾವುದೇ ಅಡೆತಡೆ ಇಲ್ಲದೇ ಶ್ರೀರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ (Shivaratri Pooja) ಸಲ್ಲಿಸಿದ್ದಾರೆ.

    ವಕ್ಫ್ ಟ್ರಿಬ್ಯುನಲ್‌ ಕೋರ್ಟ್ ಮತ್ತು ಕಲಬುರಗಿ ಹೈಕೋರ್ಟ್ ಪೀಠ ಅನುಮತಿ ನೀಡಿದ ಹಿನ್ನಲೆಯಲ್ಲಿ ಬಿಗಿ ಭದ್ರತೆಯಲ್ಲಿ 15 ಜನರ ತಂಡ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ (Raghava Chaitanya Shivalinga) ಪೂಜೆ ಸಲ್ಲಿಸಿತು.

    ದರ್ಗಾಕ್ಕೆ ತೆರಳುವ ಮುನ್ನ ಆಳಂದ ಪಟ್ಟಣದ ಹೊರವಲಯದಲ್ಲಿ ಗಣಪತಿ ಪೂಜೆ, ಗಂಗಾ ಪೂಜೆ, ಮಹಾರುದ್ರಾಭಿಷೇಕ ಪೂಜೆ, ಸಹಸ್ರ ಬಿಲ್ವಾರ್ಚನೆ ಪೂಜೆ ಮತ್ತು ಮಹಾಮಂಗಳಾರತಿ ಪೂಜೆ ನೆರವೇರಿಸಲಾಯಿತು. ಶಿವರಾತ್ರಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಹಲವಾರು ಪೂಜಾ ಕೈಂಕರ್ಯಗಳಲ್ಲಿ ಕಡಗಂಚಿ ಶ್ರೀ, ಸಿದ್ದಲಿಂಗ ಶ್ರೀ ಸೇರಿದಂತೆ ಹಲವು ಬಿಜೆಪಿ ಶಾಸಕರು ಮತ್ತು ಮೂರು ಸಾವಿರಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.

    ಪೂಜೆ ಕೈಂಕರ್ಯಗಳು ಮುಗಿದ ಬಳಿಕ ಕಡಗಂಚಿ ಶ್ರೀಗಳು ಮತ್ತು ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ 15 ಜನ ಹಿಂದೂಗಳ ತಂಡ ಬಿಗಿ ಭದ್ರತೆಯಲ್ಲಿ ಲಾಡ್ಲೇ ಮಶಾಕ್ ದರ್ಗಾ ಪ್ರವೇಶ ಮಾಡಿದರು. ಪ್ರತಿಯೊಬ್ಬರ ವಿಳಾಸ ಪರಿಶೀಲಿಸಿ ದರ್ಗಾ ಪ್ರವೇಶಿಸಲು ಅನುಮತಿ ನೀಡಲಾಯಿತು. ಈ ವೇಳೆ ಒಳಗಡೆ ಮೊಬೈಲ್‌ ತೆಗೆದುಕೊಂಡು ಹೋಗಲು ಅನುಮತಿ ನೀಡಿರಲಿಲ್ಲ. ಇದನ್ನೂ ಓದಿ: ಯೋಗಿಯಿಂದಲೇ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಬಿಜೆಪಿ ಪ್ಲಾನ್‌

    ಮುಸ್ಲಿಮರಿಂದ ಪ್ರಾರ್ಥನೆ:
    ಹಿಂದೂಗಳ ಪೂಜೆಗೂ ಮುನ್ನ ವಕ್ಫ್ ಟ್ರಿಬ್ಯುನಲ್ ಕೋರ್ಟ್ ಮತ್ತು ಹೈಕೋರ್ಟ್ ಪೀಠದ ತೀರ್ಪಿನಂತೆ ಬೆಳಗ್ಗೆ 8 ಗಂಟೆಗೆ 15 ಜನ ಮುಸ್ಲಿಂ ಮುಖಂಡರು ಪೊಲೀಸ್ ಬಿಗಿ ಭದ್ರತೆಯಲ್ಲಿ ಲಾಡ್ಲೇ ಮಶಾಕ್ ದರ್ಗಾಕ್ಕೆ ಆಗಮಿಸಿದರು.

     

    ಕಳೆದ ವರ್ಷ ನಡೆದ ಕೋಮು ಗಲಭೆ ಮರುಕಳಿಸದಂತೆ ಈ ಬಾರಿ ಕಲಬುರಗಿ ಜಿಲ್ಲಾ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡ ಹಿನ್ನಲೆಯಲ್ಲಿ ಎರಡು ಧರ್ಮದ ಜನ ನಿರ್ವಿಘ್ನವಾಗಿ ಲಾಡ್ಲೇ ಮಶಾಕ್ ದರ್ಗಾದಲ್ಲಿ ಪೂಜೆ ಸಲ್ಲಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಾಜ್ ಮಹಲ್‌ಗೆ 3 ದಿನಗಳ ಉಚಿತ ಪ್ರವೇಶ

    ತಾಜ್ ಮಹಲ್‌ಗೆ 3 ದಿನಗಳ ಉಚಿತ ಪ್ರವೇಶ

    ಲಕ್ನೋ: ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿರುವ ಭಾರತದ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ಭೇಟಿಗೆ 3 ದಿನಗಳ ಉಚಿತ ಪ್ರವೇಶ ಘೋಷಿಸಲಾಗಿದೆ.

    ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ) ಫೆಬ್ರವರಿ 27, 28 ಹಾಗೂ ಮಾರ್ಚ್ 1ರಂದು ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದೆ. ಈ 3 ದಿನ ತಾಜ್ ಮಹಲ್‌ನಲ್ಲಿ ಷಹಜಹಾನ್‌ನ ಉರ್ಸ್ ಆಚರಿಸಲಾಗುವುದು. ಹೀಗಾಗಿ ಈ 3 ದಿನಗಳಲ್ಲಿ ಪ್ರವಾಸಿಗರು ವಿನಾಯಿತಿ ಪಡೆಯಲಿದ್ದಾರೆ ಎಂದು ತಿಳಿಸಿದೆ.

    ಪ್ರತಿ ವರ್ಷ ಉರುಸ್ ಆಚರಣೆ ಸಂದರ್ಭದಲ್ಲಿ ಈ ವಿನಾಯಿತಿಯನ್ನು ನೀಡಲಾಗುತ್ತದೆ. ಇದರೊಂದಿಗೆ ವಿಶ್ವ ಪ್ರವಾಸೋದ್ಯಮ ದಿನದಂದು ಕೂಡಾ ತಾಜ್ ಮಹಲ್‌ನಲ್ಲಿ ಪ್ರವೇಶ ಉಚಿತವಾಗಿದೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ – PSI ನೇಮಕಾತಿಗೆ ತಡೆ: ಆರಗ ಜ್ಞಾನೇಂದ್ರ

    ತಾಜ್ ಮಹಲ್‌ನಲ್ಲಿ ಮುಮ್ತಾಜ್ ಮಹಲ್‌ನ ಸಮಾಧಿ ಇದೆ. ಷಹಜಹಾನ್‌ನನ್ನು ಅವನ ಪತ್ನಿಯೊಂದಿಗೆ ಸಮಾಧಿ ಮಾಡಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಅನುಮತಿಗೆ ಅನುಗುಣವಾಗಿ ಪ್ರತಿ ವರ್ಷ ಚಕ್ರವರ್ತಿಯ ಷಹಜಹಾನ್ ಮೃತಪಟ್ಟ ದಿನದಂದು ಇಲ್ಲಿ ಉರುಸ್ ನಡೆಯುತ್ತದೆ

    ಫೆಬ್ರವರಿ 27ರಂದು ಷಹಜಹಾನ್‌ನ ಉರುಸ್ ಮೊದಲ ದಿನ. ಅಂದು ಮಧ್ಯಾಹ್ನ 2 ಗಂಟೆಯಿAದ ಸೂರ್ಯಾಸ್ತದ ವರೆಗೆ ಎಲ್ಲಾ ಪ್ರವಾಸಿಗರಿಗೂ ಉಚಿತ ಪ್ರವೇಶ ಇರಲಿದೆ. ಫೆಬ್ರವರಿ 28 ರಂದು ಹಿಂದಿನ ದಿನದ ವೇಳಾಪಟ್ಟಿ ಅನುಸರಿಸಲಾಗುತ್ತದೆ. ಮಾರ್ಚ್ 1 ಉರುಸ್ ಕೊನೆಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಉಚಿತ ಪ್ರವೇಶ ಇರಲಿದೆ ಎಂದು ಎಎಸ್‌ಐನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಡಾ. ರಾಜ್‌ಕುಮಾರ್ ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಲಾಯಂ ಸಿಂಗ್ ಯಾದವ್ ಮನಃಪೂರ್ವಕವಾಗಿ ಸಮಾಜವಾದಿ ಪಕ್ಷದೊಂದಿಗಿಲ್ಲ: ಬಿಜೆಪಿ

    ಷಹಜಹಾನ್‌ನ 3 ದಿನಗಳ ಉರುಸ್ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಇರಲಿದೆ. ಹೀಗಾಗಿ ತಾಜ್ ಮಹಲ್‌ನ ಭದ್ರತಾ ವ್ಯವಸ್ಥೆ ಬಲಪಡಿಸಲಾಗುತ್ತದೆ. ಉಚಿತ ಪ್ರವೇಶ ಪಡೆಯುವ ಪ್ರವಾಸಿಗರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.

  • ಮಂಗ್ಳೂರಲ್ಲಿ ಹಿಂದೂ- ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಯ್ತು ವಿಶೇಷ ದೋಣಿ ಸೇತುವೆ!

    ಮಂಗ್ಳೂರಲ್ಲಿ ಹಿಂದೂ- ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಯ್ತು ವಿಶೇಷ ದೋಣಿ ಸೇತುವೆ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೀಪಕ್ ರಾವ್ ಮತ್ತು ಬಶೀರ್ ಸಾವಿನಿಂದಾಗಿ ಕೆಲ ದಿನಗಳಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು ರಾಜಕೀಯ ನಾಯಕರು ಒಂದೊಂದು ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಬಿತ್ತುವ ಪೋಸ್ಟ್ ಗಳು ಹರಿದಾಡುತ್ತಿದೆ. ಈ ಮಧ್ಯೆ ಕುದುರು ಒಂದರಲ್ಲಿ ನಡೆದ ಊರುಸ್ ಕಾರ್ಯಕ್ರಮ ಹಿಂದೂ- ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಗಿದೆ.

    ಹೌದು. ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿರೋ ಕಣ್ಣೂರಿನಲ್ಲಿ ಇದೇ 6 ಮತ್ತು 7ರಂದು ನೇತ್ರಾವತಿ ನದಿ ಮಧ್ಯೆ ಇರುವ ಕುದುರು `ನಡುಪಳ್ಳಿ’ ಯಲ್ಲಿ ರಹ್ಮಾನಿಯಾ ಮಸೀದಿ ವಠಾರದ ದರ್ಗಾದಲ್ಲಿ ಉರುಸ್ ಉತ್ಸವ ನಡೆದಿತ್ತು. ಈ ಸಂಭ್ರಮದಲ್ಲಿ ಜಾತಿ ಬೇಧವಿಲ್ಲದೇ ಎಲ್ಲಾ ಧರ್ಮದವರೂ ಭಾಗಿಯಾಗಿದ್ದರು. ಅಲ್ಲದೇ ನಡುಪಳ್ಳಿಗೆ ಹೋಗಲು ಸೇತುವೆಯಿಲ್ಲದೇ ಇರುವುದರಿಂದ ಉತ್ಸವಕ್ಕೆ ಬರುವ ಸಾವಿರಾರು ಮಂದಿ ಭಕ್ತರಿಗೆ ಅಡ್ಯಾರ್-ಕಣ್ಣೂರ್ ನಡುಪಳ್ಳಿಯ ಮಧ್ಯೆ ತಾತ್ಕಾಲಿಕವಾಗಿ ದೋಣಿ ಸೇತುವೆ ನಿರ್ಮಾಣ ಮಾಡಲಾಗಿತ್ತು.

    ದೋಣಿ ಸೇತುವೆಯ ವಿಶೇಷತೆ ಏನು?
    ನದಿ ಬದಿಯಲ್ಲಿ ಮರಳುಗಾರಿಕೆ ನಡೆಸುವ ದಕ್ಕೆಯಲ್ಲಿ ಕೆಲಸ ಮಾಡುವ ಮಂದಿ ಒಟ್ಟಾಗಿ ತಮ್ಮ ದೋಣಿಗಳನ್ನೇ ಸಾಲಾಗಿ ನಿಲ್ಲಿಸಿ ಅದರ ಮೇಲೆ ಕಬ್ಬಿಣದ ಹಲಗೆಗಳನ್ನು ಜೋಡಿಸಿ ತಾತ್ಕಾಲಿಕವಾಗಿ ಸೇತುವೆಯೊಂದನ್ನು ನಿರ್ಮಾಣ ಮಾಡಿದ್ದರು. ಶನಿವಾರ ಉತ್ಸವ ಆಯೋಜನೆಗೊಂಡಿದ್ದರಿಂದ ಶುಕ್ರವಾರವೇ ಸೇತುವೆ ನಿರ್ಮಾಣ ಕೆಲಸ ಶುರುವಾಗಿತ್ತು. ಸಂಜೆ ವೇಳೆಗೆ ಒಂದೇ ರೀತಿಯಾಗಿ 67 ದೋಣಿಗಳನ್ನು ಜೋಡಿಸಿ, ಅದರದ ಮೇಲೆ ಕಬ್ಬಿಣದ ಹಲಗೆಯನ್ನು ಇಡಲಾಗಿತ್ತು. ಇದರ ಮೇಲೆ ಕೆಂಪು ಹಾಸು ಹಾಸಿ, ಲೈಟ್ ಕಟ್ಟುವ ಮೂಲಕ ಭಕ್ತರಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ವಿಶೇಷ ಏನೆಂದರೆ ಹಿಂದೂಗಳು ದೋಣಿಗಳು ಇದರಲ್ಲಿ ಇದ್ದು, ಸ್ವ-ಇಚ್ಛೆಯಿಂದ ದೋಣಿಯನ್ನು ತಂದು ನಿಲ್ಲಿಸಿದ್ದರು. ಈ ದರ್ಗಾ ಬಹಳ ಪುರಾತನವಾಗಿದ್ದು, 1923ರಲ್ಲಿ ಬೃಹತ್ ನೆರೆ ಬಂದು ಕೊಚ್ಚಿಹೋಗಿತ್ತು.

    ದೋಣಿ ಸೇತುವೆಯೇ ಯಾಕೆ?
    ಇನ್ನು ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಮಸೀದಿಯ ಮದರಸ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್, ಈ ಮೊದಲು ಭಕ್ತರನ್ನು ನಡುಪಳ್ಳಿಗೆ ದೋಣಿ ಮೂಲಕ ಉಚಿತವಾಗಿ ಕರೆದೊಯ್ಯಲಾಗುತ್ತಿತ್ತು. ಆದ್ರೆ ದೋಣಿಯಲ್ಲಿ ಜನರ ಹೊಯ್ದಾಟದಿಂದ ಆತಂಕ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದ ತಾತ್ಕಾಲಿಕ ಸೇತುವೆಯ ನಿರ್ಮಿಸಲಾಗುತ್ತಿದೆ. ಇನ್ನು ಇದರಲ್ಲಿ ಹಿಂದೂಗಳ ಅನೇಕ ದೋಣಿಗಳಿವೆ. ಅವರೆಲ್ಲರೂ ಸ್ವ-ಇಚ್ಛೆಯಿಂದ ದೋಣಿ ತಂದು ನಿಲ್ಲಿಸುತ್ತಾರೆ ಎಂದು ಹೇಳಿದರು.

    ಈ ಸೌಹಾರ್ದದ ಕುರಿತು ಮೂರು ವರ್ಷವೂ ತಮ್ಮ ದೋಣಿಗಳನ್ನು ಸೇತುವೆಗೆಂದು ನಿಲ್ಲಿಸುವ ಜಯಶೀಲ ಅಡ್ಯಂತಾಯ ಎಂಬವರು ಮಾತನಾಡಿ, “ಕರಾವಳಿಯಲ್ಲಿ ರಾಜಕೀಯ ಪ್ರೇರಿತವಾಗಿ ಯಾವುದೇ ಘಟನೆಗಳು ನಡೆಯಲಿ. ನಮ್ಮೂರಿನ ಸೌಹಾರ್ದಕ್ಕೆ ಯಾವುದೇ ಧಕ್ಕೆಯಾಗದಂತೆ ನಾವು ನಡೆದುಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ. ಉರುಸ್ ಮುಗಿದ ಬಳಿಕ ಅಂದ್ರೆ ಸೋಮವಾರ ಮುಂಜಾನೆ ದೋಣಿಗಳೆಲ್ಲ ತಮ್ಮ ಕಾರ್ಯದಲ್ಲಿ ತೊಡಗಿಕೊಂಡವು.