Tag: Urigowda

  • ಉರಿಗೌಡ-ನಂಜೇಗೌಡ ಸಿನಿಮಾ : ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಿಡಿ

    ಉರಿಗೌಡ-ನಂಜೇಗೌಡ ಸಿನಿಮಾ : ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಿಡಿ

    ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ  (Muniratna)ಅವರ ವಿರುದ್ಧ ಸರಣಿ ಟ್ವೀಟ್‍ ಮಾಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy). ಉರಿಗೌಡ (Urigowda)-ನಂಜೇಗೌಡ (Nanjegowda) ಕುರಿತಾದ ಸಿನಿಮಾ ಮಾಡಲು ಮುನಿರತ್ನ ತಯಾರಾಗಿದ್ದರು. ತಮ್ಮದೇ ಬ್ಯಾನರ್ ನಲ್ಲಿ ‘ಉರಿಗೌಡ-ನಂಜೇಗೌಡ’ ಟೈಟಲ್ ಗಾಗಿ ಅರ್ಜಿಯನ್ನೂ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಲ್ಲಿಸಿದ್ದರು. ವಾಣಿಜ್ಯ ಮಂಡಳಿಗೆ ಸಲ್ಲಿಸಿದ ಅರ್ಜಿಯೊಂದಿಗೆ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ.

    ಕಲ್ಪಿತ ಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿ, ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೇಬೇಕೆಂಬ ಹಿಡೆನ್ ಅಜೆಂಡ ಬಿಜೆಪಿಗೆ ಇರುವುದಂತೂ ಸತ್ಯ ಎಂದು ಟ್ವೀಟ್ ಮಾಡಿದ್ದಾರೆ ಕುಮಾರಸ್ವಾಮಿ. ಇದನ್ನೂ ಓದಿ: ಭೈರತಿ ರಣಗಲ್‌ಗೆ `ಕೆಜಿಎಫ್ 2′ ರವಿ ಬಸ್ರೂರು ಸಂಗೀತ

    ಮುನಿರತ್ನ ವಿರುದ್ಧವೂ ಟ್ವೀಟ್ ಮಾಡಿರುವ ಅವರು, ‘ಸಚಿವರು ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ ಮೂಲಕ ಉರಿಗೌಡ-ನಂಜೇಗೌಡ’ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ’ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ ಕುಮಾರಸ್ವಾಮಿ.

    ಹೀಗೆ ಒಂದರ ಮೇಲೊಂದು ಹನ್ನೊಂದು  ಟ್ವೀಟ್ ಗಳನ್ನು ಮಾಡಿರುವ ಕುಮಾರಸ್ವಾಮಿ, ಯಾರೆ‍ಲ್ಲ ಕಥೆ ಬರೆದಿದ್ದಾರೆ, ಏನೆಲ್ಲ ಸುಳ್ಳುಗಳನ್ನು ಹೇಳಲಿದ್ದಾರೆ ಎನ್ನುವುದನ್ನೂ ಹೇಳಿದ್ದಾರೆ. ಇವತ್ತು ಬೆಳಗ್ಗೆಯಿಂದ ಉರಿಗೌಡ ನಂಜೇಗೌಡ ಸಿನಿಮಾದ್ದೆ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಸುದ್ದಿಯಾಗಿದೆ. ಚುನಾವಣೆ ಹತ್ತಿರ ಇರುವಾಗಲೇ ಇಂಥದ್ದೊಂದು ಚರ್ಚೆ ಭಾರೀ ಕುತೂಹಲ ಮೂಡಿಸಿದೆ.

  • Exclusive-ಉರಿಗೌಡ-ನಂಜೇಗೌಡ ಸಿನಿಮಾ ಮಾಡಲಿದ್ದಾರೆ ಸಚಿವ ಮುನಿರತ್ನ

    Exclusive-ಉರಿಗೌಡ-ನಂಜೇಗೌಡ ಸಿನಿಮಾ ಮಾಡಲಿದ್ದಾರೆ ಸಚಿವ ಮುನಿರತ್ನ

    ಮಂಡ್ಯದ ಒಕ್ಕಲಿಗ ವೀರರು ಎಂದು ಬಿಂಬಿಸಲಾಗುತ್ತಿರುವ ಉರಿಗೌಡ (Urigowda)- ನಂಜೇಗೌಡ (Nanjegowda) ಹೆಸರಿನಲ್ಲಿ ಸಿನಿಮಾವೊಂದು (Cinema) ಮೂಡಿ ಬರಲಿದೆ. ಹಲವು ದಿನಗಳಿಂದ ಈ ಹೆಸರು ವಿವಾದಕ್ಕೆ ಕಾರಣವಾಗಿದ್ದರೂ, ಈ ವೀರರ ಕುರಿತಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ ತೋಟಗಾರಿಕ ಸಚಿವ ಮುನಿರತ್ನ (Muniratna). ಈ ಸಿನಿಮಾ ಮಾಡಲೆಂದು ಅವರು ಎರಡು ಟೈಟಲ್ ಅನ್ನು ರಿಜಿಸ್ಟರ್ ಕೂಡ ಮಾಡಿಸಿದ್ದಾರೆ.

    ಕುರುಕ್ಷೇತ್ರ ಸೇರಿದಂತೆ ಹಲವು ಭಾರೀ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮುನಿರತ್ನ, ಈ ಬಾರಿ ವಿವಾದಿದ ವ್ಯಕ್ತಿಗಳ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಉರಿಗೌಡ –ನಂಜೇಗೌಡ’ ಅಥವಾ ‘ನಂಜೇಗೌಡ-ಉರಿಗೌಡ’ ಎನ್ನುವ ಹೆಸರನ್ನೂ ಇಡಲಿದ್ದಾರೆ. ನಿನ್ನೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪೆದ್ದಮ್ಮ ತಲ್ಲಿ ದೇವಿಗೆ ಸೀರೆ, ಗಾಜಿನ ಬಳೆ ಅರ್ಪಣೆ ಮಾಡಿದ ಸಮಂತಾ

    ಈ ಕುರಿತು ಖಚಿತ ಪಡಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್, ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿ, ‘ಸಚಿವ ಮುನಿರತ್ನ ಅವರ ಬ್ಯಾನರ್ ನಲ್ಲೇ ಎರಡು ಶೀರ್ಷಿಕೆಗಳನ್ನು ನೋಂದಾಯಿಸಲು ನಿನ್ನೆ ಅರ್ಜಿ ಸಲ್ಲಿಸಿದ್ದಾರೆ. ಕಮೀಟಿಯಲ್ಲಿ ಎರಡೂ ಶೀರ್ಷಿಕೆಗಳನ್ನು ಇಟ್ಟು ಟೈಟಲ್ ಕೊಡುವ ಕುರಿತು ತೀರ್ಮಾನ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

    ಉರಿಗೌಡ ಹಾಗೂ ನಂಜೇಗೌಡ ಮಂಡ್ಯದ ಕಲಿಗಳು. ಅವರು ಟಿಪ್ಪು ಸುಲ್ತಾನ್ ನನ್ನು ಕೊಂದವರು ಎಂದು ಒಂದು ಗುಂಪು ಹೇಳುತ್ತಿದ್ದರೆ, ಈ ರೀತಿಯ ಹೆಸರಿನ ಯಾವುದೇ ಕಲಿಗಳು ಇರಲಿಲ್ಲ. ಅವರು ಟಿಪ್ಪುವನ್ನು ಕೊಂದಿಲ್ಲ. ಇಬ್ಬರೂ ವ್ಯಕ್ತಿಗಳು ಕಾಲ್ಪನಿಕ ಕಥೆಯಲ್ಲಿ ಹುಟ್ಟಿಕೊಂಡ ಪಾತ್ರಗಳು ಎನ್ನುವ ಚರ್ಚೆ ಹಲವು ದಿನಗಳಿಂದ ನಡೆದಿದೆ. ಸಿನಿಮಾದಲ್ಲಿ ಈ ಪಾತ್ರಗಳನ್ನು ಯಾವ ರೀತಿಯಲ್ಲಿ ತೋರಿಸಲಿದ್ದಾರೆ ಎನ್ನುವ ಕುತೂಹಲ ಸದ್ಯಕ್ಕಿದೆ.