Tag: urigowda nanjegowda

  • ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ

    ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ

    ಹಾಸನ: ಉರಿಗೌಡ, ನಂಜೇಗೌಡ ಆ ಎರಡು ಹೆಸರುಗಳನ್ನು ನಾನು ಸೃಷ್ಟಿ ಮಾಡಿದ್ದಲ್ಲ. ಉರಿಗೌಡ, ನಂಜೇಗೌಡ ವಿಚಾರ ಈಗ ಚರ್ಚೆಗೆ ಬಂದಿದ್ದು ನನ್ನ ದುರದೃಷ್ಟ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ (Addanda Cariappa) ಹೇಳಿದರು.

    ಹಾಸನದಲ್ಲಿ ಬೇಲೂರಿನ ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1996ರಲ್ಲಿ ರಾಜೇಶ್‌ಗೌಡ ಎನ್ನುವವರು ಮುನ್ನಲೆಗೆ ತಂದಿದ್ದಾರೆ. ಆದರೆ ಈಗ ರಾಜೇಶ್‌ಗೌಡ ಇಲ್ಲ, ಅವರು ನಿಧನ ಹೊಂದಿದ್ದಾರೆ. ಅವರು ಸುವರ್ಣ ಮಂಡ್ಯ ಅನ್ನುವ ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ. ಟಿಪ್ಪು ಸುಲ್ತಾನ್ ಯಾರು ಕೊಂದರು ಅನ್ನುವುದು ಗೊಂದಲದಲ್ಲಿದೆ‌. ನಾನು ನಾಟಕವನ್ನು ಬರೆಯುವುದರೊಳಗೆ ಅದನ್ನು ಅಧ್ಯಯನ ಮಾಡಿದ್ದೇನೆ ಎಂದು ತಿಳಿಸಿದರು.‌

    ಬ್ರಿಟಿಷರು ಟಿಪ್ಪುವನ್ನು ಹತ್ಯೆ ಮಾಡಿಲ್ಲ ಅಂತಾರೆ, ಇನ್ನೊಂದು ಕಡೆ ಬ್ರಿಟಿಷರು ಟಿಪ್ಪುವನ್ನು ಹತ್ಯೆ ಮಾಡಿದರು ಅಂಥ ಹೇಳಿಕೊಂಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಹಾಕಿರುವ ಶಿಲಾ‌ಸ್ತಂಭಗಳಲ್ಲಾಗಲಿ ಎಲ್ಲಿಯೂ ಇಲ್ಲ. ಶ್ರೀರಂಗಪಟ್ಟಣ ವಾಟರ್‌ಗೇಟ್ ಬಳಿ ಆತ ಬಿದ್ದಿದ್ದ ಅಂತ ಹೇಳಲಾಗಿದೆ.‌ ಅಲ್ಲಿಂದ ಮುನ್ನೂರು ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿತ್ತು ಎನ್ನುವ ಅನೇಕ ಗೊಂದಲಗಳಿವೆ. ಆ ಪಾತ್ರಗಳು ನನ್ನ ಸೃಷ್ಟಿಯಲ್ಲ, 1996ರಲ್ಲೇ ದಾಖಲಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆ ಪುಸ್ತಕ ಬಿಡುಗಡೆಯೂ ಆಗಿದೆ.‌ ಆ ಪುಸ್ತಕದ ದಾಖಲೆಗಳನ್ನು ತೆಗೆದುಕೊಂಡು, ಲಾವಣಿಗಳಲ್ಲಿ ಒಂದು ಲೈನ್ ಬಂದಿರುವುದನ್ನು ನೋಡಿ ನಾನು ದಾಖಲಿಸಿದ್ದೇನೆ ಎಂದರು.

    ನಿರ್ಮಲಾನಂದನಾಥ ಸ್ವಾಮೀಜಿಯವರು ಈ ನಾಡಿನ ಸಂತ. ಅದರಲ್ಲೂ ನಿರ್ಮಲಾನಂದನಾಥ ಸ್ವಾಮೀಜಿಯವರು ಎಂಟೆಕ್ ಮಾಡಿಕೊಂಡು ವಿಜ್ಞಾನಿ ಆಗಿರುವವರು. ಅವರಿಗೆ ಅವರದ್ದೇ ಆದ ಗೌರವವಿದೆ. ನಾನು ಅವರ ಬಗ್ಗೆ ಅವಹೇಳನಕಾರಿಯಾಗಿ ಅಥವಾ ನೋವಾಗುವ ರೀತಿ ಮಾತನಾಡಿಲ್ಲ. ಆದರೆ ಸಮಾಜದ ಪ್ರಮುಖರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯೇ ಅವರಿಗೆ ಕ್ಷಮೆ ಕೇಳಿದ್ದೇನೆ, ಅದು ಮುಗಿದ ಅಧ್ಯಾಯ, ಮತ್ತೆ ಕೆದಕುವುದು ಬೇಡ. ಒಕ್ಕಲಿಗರು ಅಂದರೆ ಅದು ಗಂಗರಸರು, ವೀರರು. ಮಲ್ಲಗೌಡ ಎನ್ನುವ ಪಾತ್ರ, ಶಾಸನ ಇದೆ ಅವರಲ್ಲಿ ಅನೇಕ ಐತಿಹ್ಯಗಳಿವೆ. ನಮ್ಮ ನಾಡಿನಲ್ಲಿ ದೇವೇಗೌಡರು, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದವರು. ನಾಡಿಗೆ ಬಹಳ ಕೊಡುಗೆಯನ್ನು ಕೊಟ್ಟಿದ್ದಾರೆ. ನಾನು ಆ ಜನಾಂಗವನ್ನು ಎಲ್ಲಿಯೂ ದೂಷಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಪ್ರೊ. ಕೃಷ್ಣೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅದು ಅವರ ಅಭಿಪ್ರಾಯ, ರಾಜಕೀಯ ಮಾತನಾಡಬಾರದು ಅಂತ ಎಲ್ಲೂ ಇಲ್ಲ. ರಾಜಕೀಯ ಅದೊಂದು ಪವಿತ್ರವಾದ ಫೀಲ್ಡ್. ರಾಜಕೀಯವನ್ನು ಕೆಲವರು ಗಬ್ಬು ಎಬ್ಬಿಸಿದ್ದಕ್ಕೆ ಅದರ ಬಗ್ಗೆ ಅಹಸ್ಯ ಹುಟ್ಟಿದೆ.‌ ಅದು ಅವರ ಸ್ವಂತ ಅಭಿಪ್ರಾಯ, ಅವರನ್ನು ರಂಗಾಯಣಕ್ಕೆ ಕರೆಸಿದ್ದೇನೆ, ಅವರ ಬಗ್ಗೆ ಗೌರವವಿದೆ ಎಂದರು. ನಾನು 2012 ರಲ್ಲೇ ಟಿಪ್ಪು ಸುಲ್ತಾನ್ ಬಗ್ಗೆ ಪುಸ್ತಕ ಬರೆದು ಟಿಪ್ಪು ಮತ್ತು ಕೊಡವರು ಅಂತ ಪ್ರಕಟ ಮಾಡಿದ್ದೇನೆ. ಇದು ಚುನಾವಣೆ ಹೊತ್ತಿನಲ್ಲಿ ಕಾಕತಾಳೀಯವಾಗಿ ಬಂದುಬಿಡ್ತು. ಅದೇ ಎಫೆಕ್ಟ್ ಆಗ್ತಿರೋದು, ಚುನಾವಣೆ ಬಂದರುವುದರಿಂದ ಎಲ್ಲಾ ಮಾತಗಳು ರಾಜಕೀಯಕರಣಗೊಳ್ಳುತ್ತಿದೆ. ಸ್ವಾಮೀಜಿಯವರ ಹೇಳಿಕೆಗೆ ನನ್ನ ಸಹಮತವಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ತಂದೆ, ಮಕ್ಕಳಿಗೆ ಟಿಕೆಟ್

    ಉರಿಗೌಡ (Urigowda), ನಂಜೇಗೌಡ (Nanjegowda) ಬಗ್ಗೆ ಸಂಶೋಧನೆ ನಡೆಯಬೇಕು ಅಂತ ಸ್ವಾಮೀಜಿ ಹೇಳಿದ್ದಾರೆ, ಅದಕ್ಕೆ ನನ್ನ ಸಹಮತವಿದೆ. ಸಂಶೋಧನೆ ನಡೆಯಲಿ ಅಂತ ನಾನು ಹೇಳುತ್ತಿದ್ದೇನೆ‌. ಉರಿಗೌಡ, ನಂಜೇಗೌಡ ಚಿತ್ರಗಳು ನಾಟಕದ್ದು, ಅದನ್ನು ನಾನು ತಿರಸ್ಕರಿಸುತ್ತೇನೆ.‌ ಆ ಫೋಟೋಗಳನ್ನು ಯಾರು ವ್ಯಾಟ್ಸ‌ಪ್‌ ಅಲ್ಲಿ ಹಾಕಿದ್ದಾರೆ ಅದು ಸುಳ್ಳು. ಅದು ತಮಿಳುನಾಡಿನ ಚಿತ್ರಗಳು. ನಾನು ನನ್ನ ನಾಟಕದ ಅನೇಕ ಫೋಟೋಗಳನ್ನು ಹಾಕಿದ್ದೇನೆ.‌ ಅದರಲ್ಲಿ ನನ್ನ ನಾಟಕದಲ್ಲಿ ಬರುವ ಪಾತ್ರಧಾರಿಗಳ ಫೋಟೋ ಇದೆ.‌ ಟಿಪ್ಪುವನ್ನು ಕೊಂದಿರುವುದು ಉರಿಗೌಡ, ನಂಜೇಗೌಡ ಅಂತ ನನ್ನ ನಾಟಕದಲ್ಲಿ ಬಂದಿದೆ. ಇನ್ನಷ್ಟು ಸಂಶೋಧನೆ ನಡೆಯಲಿ. ನಾನು ಆ ಎರಡು ಪಾತ್ರಗಳನ್ನು ತಂದಿರುವುದಕ್ಕೆ ಅನೇಕ ಕಾರಣಗಳಿವೆ. ಆ ಹೆಸರುಗಳು ನನ್ನ ಸೃಷ್ಟಿ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 12 ಲಕ್ಷ ರೂ. ಹಣ ಜಪ್ತಿ

  • ಟಿಪ್ಪು ಕಾಲದಲ್ಲಿ ಇದ್ದಿದ್ರೆ ನಾನೇ ಉರಿಗೌಡ-ನಂಜೇಗೌಡನಂತೆ ಕತ್ತಿ ಹಿಡಿದು ಹೋರಾಡ್ತಿದ್ದೆ : ಸಿ.ಟಿ.ರವಿ

    ಟಿಪ್ಪು ಕಾಲದಲ್ಲಿ ಇದ್ದಿದ್ರೆ ನಾನೇ ಉರಿಗೌಡ-ನಂಜೇಗೌಡನಂತೆ ಕತ್ತಿ ಹಿಡಿದು ಹೋರಾಡ್ತಿದ್ದೆ : ಸಿ.ಟಿ.ರವಿ

    ಚಿಕ್ಕಮಗಳೂರು: ಟಿಪ್ಪು ಕಾಲಮಾನದಲ್ಲಿ ನಾನು ಇದ್ದಿದ್ದರೇ ಆಂಜನೇಯ ಮಂದಿರ ಮಸೀದಿ ಆಗಲು ಬಿಡುತ್ತಿರಲಿಲ್ಲ. ನಾನೇ ಉರಿಗೌಡ (Urigowda), ನಾನೇ ದೊಡ್ಡ ನಂಜೇಗೌಡನಂತೆ (Nanjegowda) ಕತ್ತಿ ಹಿಡಿದು ಸಿಡಿದು ನಿಲ್ಲುತ್ತಿದ್ದೆ. ಇತಿಹಾಸದಲ್ಲಿ ಮತಾಂಧನ ವಿರುದ್ಧ ಕತ್ತಿ ಎತ್ತಿದ ಅನ್ನಿಸಿಕೊಳ್ಳುತ್ತಿದೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

    ನಗರದ ಬಸವನಹಳ್ಳಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಉರಿಗೌಡ, ಅಶ್ವಥ್ ನಾರಾಯಣ್ (Ashwath Narayan) ನಂಜೇಗೌಡ ಎಂಬಂತೆ ಬಿಂಬಿಸಿ ಸೋಶಿಯಲ್ ಮೀಡಿಯಾದಲ್ಲಿ ಆಧಾರ್ ಕಾರ್ಡ್ ಹರಿಬಿಟ್ಟಿರುವುದನ್ನು ಸಮರ್ಥಿಸಿಕೊಂಡರು. ಹೌದು, ನಾವು ಅದೇ. ನಮಗೆ ಖುಷಿ, ಹೆಮ್ಮೆ ಇದೆ ಎಂದರು. ಗುಲಾಮಿ ಮಾನಸಿಕತೆಯಲ್ಲಿ ಬದುಕುವ ಜನರಿಗಿಂತ ಹಾಗೆ ಕರೆಸಿಕೊಳ್ಳುವುದು ಒಳ್ಳೆಯದು ಎಂದು ಕಾಂಗ್ರೆಸ್ (Congress) ಪ್ರಚಾರಕ್ಕೆ ಟಾಂಗ್ ನೀಡಿದರು.

    ಇವತ್ತು ಟಿಪ್ಪುಯಿದ್ದು ಆತ ಆಂಜನೇಯ ದೇವಸ್ಥಾನವನ್ನು ಮಸೀದಿ ಮಾಡ ಹೊರಟಿದ್ದರೆ ಸುಮ್ಮನೆ ಇರ್ತಿದ್ವಾ, ಕೆಲವರಿಗೆ ಸತ್ಯ ಗೊತ್ತು. ಆದರೂ ಹೇಡಿಗಳಂತೆ ಬದುಕುತ್ತಿದ್ದಾರೆ. ವೋಟಿನ ಆಸೆಗೆ ಒಪ್ಪಿಕೊಳ್ಳಲು ಅವರು ತಯಾರಿರಲಿಲ್ಲ, ನಾವು ಸತ್ಯವನ್ನು ಪ್ರತಿಪಾದನೆ ಮಾಡುತ್ತಿದ್ದೇವೆ. ದುರ್ದೈವ ಕೆಲವರು ಕಪಾಲೇಶ್ವರ ಬೆಟ್ಟವನ್ನೇ ಮತಾಂತರ ಮಾಡಲು ಹೊರಟಿದ್ದ ಜನ, ಇಂದು ದೊಡ್ಡ-ದೊಡ್ಡ ಮಾತುಗಳನ್ನ ಆಡುತ್ತಾರೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಟಿಪ್ಪುವನ್ನು ನೀವು ಹೇಗೆ ಮೈಸೂರಿನ ಹುಲಿ, ಧರ್ಮಸಹಿಷ್ಣು, ಕನ್ನಡ ಪ್ರೇಮಿ ಅಂತ ಕರೆಯುತ್ತೀರಾ. ಆತ ತನ್ನ ಖಡ್ಗದ ಮೇಲೆ ಕಾಫಿಗರ ರಕ್ತಕ್ಕಾಗಿ ತನ್ನ ಖಡ್ಗ ತಹತಹಿಸುತ್ತಿದೆ ಎಂದು ಅರೆಬಿಕ್ ಭಾಷೆಯಲ್ಲಿ ಬರೆಸಿಕೊಂಡಿದ್ದ. ರಕ್ತಕ್ಕಾಗಿ ಹಾತೊರೆಯುತ್ತಿದ್ದವನನ್ನು ಮತಾಂಧ ಅನ್ನದೆ ಇನ್ನೇನು ಹೇಳಬೇಕು ಎಂದು ಟಿಪ್ಪು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಫಿಗರು ಅಂದರೆ ಯಾರು? ಯಾರ‍್ಯಾರು ಇಸ್ಲಾಂ ಧರ್ಮವನ್ನು ನಂಬುವುದಿಲ್ಲವೋ ಅವರೆಲ್ಲರೂ ಕಾಫಿಗರು. ಓಕ್ಕಲಿಗರು, ಲಿಂಗಾಯಿತರು, ಕುರುಬರು, ಬ್ರಾಹ್ಮಣರು, ಜೈನರು ಎಲ್ಲರೂ ಕೂಡ ಕಾಫಿಗರು. ಅವನನ್ನ ಹೇಗೆ ಧರ್ಮಸಹಿಷ್ಣು ಅಂತೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಪ್ರಾಪ್ತ ಸ್ನೇಹಿತರ ನಡುವೆ ಜಗಳ- ದವಡೆಗೆ ಚಾಕು ಹಾಕಿ ಹಲ್ಲೆ

    ಟಿಪ್ಪುವನ್ನು ಮೈಸೂರು ಹುಲಿ, ಕನ್ನಡಪ್ರೇಮಿ, ಧರ್ಮಸಹಿಷ್ಣು ಎಂದು ಓದಿದ್ದೇವೆ. ಆದರೆ, ನಾವು ಪುಸ್ತಕದಲ್ಲಿ ಓದಿದ್ದು ಬೇರೆ, ವಾಸ್ತವದಲ್ಲಿ ದಾಖಲೆಗಳ ಪ್ರಕಾರ ಸತ್ಯವೇ ಬೇರೆ. ರಕ್ತಕ್ಕಾಗಿ ಹಾತೊತೆಯುತ್ತಿದ್ದ ಅವನನ್ನ ಮತಾಂಧ ಎಂದು ಹೇಳಬೇಕಿತ್ತು. ಆದರೆ, ದುರ್ದೈವ ಸರ್ವಧರ್ಮ ಸಹಿಷ್ಣು ಅಂತ ಸುಳ್ಳು ಇತಿಹಾಸ ಬರೆದರು. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಮೋಸದಿಂದ ನಮ್ಮ ಆಳಿದರು ಎಂದು ಓದಿದ್ದೇವೆ ಇದು ಕೂಡ ಅದೇ ರೀತಿ. ಕೂಲಿಗೆ ಬಂದ ಹೈದರಾಲಿಯೂ ಮೋಸದಿಂದಲೇ ಅಧಿಕಾರ ನಡೆಸಿದ್ದು, ಹೈದರಾಲಿ ನಂಬಿಕೆದ್ರೋಹಿ ಅಂತ ನಮ್ಮ ಪಠ್ಯಪುಸ್ತಕದಲ್ಲಿ ಬರೆಯಬೇಕಿತ್ತು ಎಂದು ಇತಿಹಾಸದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟಕ್ಕೆ ಕುಮಾರಸ್ವಾಮಿ ವ್ಯಂಗ್ಯ!

  • ಉರಿಗೌಡ-ನಂಜೇಗೌಡ ಪ್ರಕರಣದಲ್ಲಿ ಹಿನ್ನಡೆ ಪ್ರಶ್ನೆಯೇ ಇಲ್ಲ- ಬೊಮ್ಮಾಯಿ

    ಉರಿಗೌಡ-ನಂಜೇಗೌಡ ಪ್ರಕರಣದಲ್ಲಿ ಹಿನ್ನಡೆ ಪ್ರಶ್ನೆಯೇ ಇಲ್ಲ- ಬೊಮ್ಮಾಯಿ

    ಹುಬ್ಬಳ್ಳಿ: ಉರಿಗೌಡ-ನಂಜೇಗೌಡ (Urigowda-Nanjegowda) ಪ್ರಕರಣದಲ್ಲಿ ಹಿನ್ನಡೆಯಾಗಿರುವ ಪ್ರಶ್ನೆಯೇ ಇಲ್ಲ. ಸತ್ಯ ಸಂಶೋಧನೆಯಾಗಿ ಸತ್ಯ ಹೊರಗೆ ಬಂದಾಗ ಜಯ ದೊರೆಯಲಿದೆ ಎಂದು ಸಿಎಂ ಬೊಮ್ಮಾಯಿ (Basavaraj Bommai) ಹೇಳಿದರು.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ಐತಿಹಾಸಿಕ ಸತ್ಯಗಳನ್ನು ಮರೆಮಾಚಲಾಗಿದೆ. ಇತಿಹಾಸವನ್ನು ಭಾರತ ಹಾಗೂ ಕರ್ನಾಟಕದಲ್ಲಿ ತಿರುಚಿರುವ ಕೆಲಸವಾಗಿದೆ. ಆ ಸಂದರ್ಭದಲ್ಲಿ ಯಾರು ಪ್ರಮುಖ ಪಾತ್ರವಹಿಸಿದ್ದರು ಎಂಬುವುದು ಜಗಜ್ಜಾಹೀರಾಗಿದೆ. ಸತ್ಯವನ್ನು ಹೇಳಿದರೆ ಇವರಿಗೆ ತಡೆಯಲು ಆಗುವುದಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ನಾಳೆ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ – ಡಿಕೆಶಿ 

    ರಾಹುಲ್ ಗಾಂಧಿ (Rahul Gandhi) ರಾಜ್ಯಕ್ಕೆ ಆಗಮಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡಿರುವುದರಿಂದ ಯವುದೇ ಪರಿಣಾಮ ಬೀರಲ್ಲ. ಇವರು ಭಾರತ್ ಜೋಡೋ ಯಾತ್ರೆಯನ್ನು ಮಾಡಿದ್ದು, ಯಾವುದೇ ಪರಿಣಾಮ ಉಂಟಾಗಲಿಲ್ಲ. ಸೋಮವಾರ ಹುಬ್ಬಳ್ಳಿಯಲ್ಲಿ ಮಾಡಿದ ಘೋಷಣೆಗಳಿಂದ ಯಾವುದೇ ಪರಿಣಾಮವಾಗುವುದಿಲ್ಲ. ಅವರು ಕಳೆದ ಬಾರಿ ರಾಜ್ಯಕ್ಕೆ ಬಂದಿರುವುದಕ್ಕೆ ಹಾಗೂ ಈ ಸಲ ಬಂದಿರುವುದಕ್ಕೆ ಬಹಳಷ್ಟು ವ್ಯತ್ಯಾಸಗಳಿವೆ. ಲಂಡನ್ ವಿಶ್ವವಿದ್ಯಾಲಯದಲ್ಲಿ (London University) ಅವರು ಮಾತನಾಡಿರುವುದು ದೇಶ ವಿರೋಧಿಯಾಗಿದೆ. ಇಡಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಈ ಬಗ್ಗೆ ಖಂಡನೆಯಾಗಿದೆ. ಅವರ ಮಾತಿಗೆ ಜನರು ಯಾವುದೇ ಬೆಲೆಯನ್ನು ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ದೆಹಲಿ ಬಜೆಟ್ ಅನ್ನು ತಡೆಯಬೇಡಿ : ಮೋದಿಗೆ ಕೇಜ್ರಿವಾಲ್ ಪತ್ರ

    ಸಿದ್ದರಾಮಯ್ಯನವರು (Siddaramaiah) ಬೋಗಸ್ ಕಾರ್ಡ್ ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿಯ ಆಶ್ವಾಸನೆಗಳನ್ನು ನೀಡಿದ್ದು, ಇಂದಿಗೂ ಈಡೇರಿಸಲಿಲ್ಲ. ಇದು ಅವರ ಟ್ರ್ಯಾಕ್ ರೆಕಾರ್ಡ್. ರಾಜಸ್ಥಾನ (Rajasthan)‌ ಹಾಗೂ ಛತ್ತೀಸ್‌ಗಢದಲ್ಲಿ (Chattisgarh) ಘೋಷಣೆ ಮಾಡಿದ್ದನ್ನು ಅವರು ಈಡೇರಿಸಲಿಲ್ಲ. ಛತ್ತೀಸ್‌ಗಡದಲ್ಲಿ ಪ್ರತಿ ಮನೆಗೆ ಒಂದು ಸಾವಿರ ರೂ. ನೀಡುವುದಾಗಿ ಹೇಳಿದ್ದರು. ನಾಲ್ಕು ವರ್ಷ ನೀಡದೇ ಕೊನೆಯ ವರ್ಷ ಕೊಡಲು ಓಡಾಡಿದರು. ಈ ರೀತಿಯಾಗಿ ಜನರನ್ನು ಯಾಮಾರಿಸುತ್ತಾರೆ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಬರೀ ವಿಸಿಟಿಂಗ್ ಕಾರ್ಡ್ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: Breaking- ಉರಿಗೌಡ ನಂಜೇಗೌಡ ಬಗ್ಗೆ ಟ್ವೀಟ್: ನಟ ಚೇತನ್ ಬಂಧನ 

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ರೀಡೂ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭ್ರಷ್ಟಾಚಾರದ (Corruption) ಆರೋಪವಿದೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆಂದರೆ ಇದ್ದಿಲು ಮಸಿಗೆ ಬುದ್ಧಿ ಹೇಳಿದಂತೆ. ಕಾಂಗ್ರೆಸ್ ಅಧ:ಪತನಕ್ಕೆ ಸಿದ್ಧವಾಗಿದೆ. ಭಾರತ ದೇಶದಲ್ಲಿ ಎಲ್ಲಾ ಕಡೆ ಪತನವಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರದ 59 ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ನ್ಯಾಯಾಂಗ ತನಿಖೆಯನ್ನು ನಡೆಸಲು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ತೀರ್ಮಾನವಾಗುತ್ತದೆ. 59 ಪ್ರಕರಣಗಳಲ್ಲಿ ಕೆಲವನ್ನು ವಹಿಸಲಾಗಿದೆ. ಬಾಕಿ ಇರುವುದನ್ನು ವಹಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಔಟ್‌- ಇನ್ನು ಮುಂದೆ ವಿಶ್ವದೆಲ್ಲೆಡೆ ವಂಚಕ ಮೆಹುಲ್‌ ಚೋಕ್ಸಿ ಸಂಚರಿಸಬಹುದು

    ಬಾಬುರಾವ್ ಚಿಂಚನಸೂರ್ (Baburao Chinchansur) ಅವರು ಕಾಂಗ್ರೆಸ್‌ನಲ್ಲಿದ್ದವರು. ಈಗ ವಾಪಸ್ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರಿದ್ದಾರೆ. ಆ ಕ್ಷೇತ್ರದಲ್ಲಿ ನಮ್ಮ ಸಂಘಟನೆ ಉತ್ತಮವಾಗಿದೆ. ಗುರುಮಿಠಕಲ್ (Gurumitkal) ಕ್ಷೇತ್ರದಲ್ಲಿ ಬಿಜೆಪಿ (BJP) ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಾರ್ಚ್ 25 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಹಾಗೂ ಮಾರ್ಚ್ 24 ಮತ್ತು 26 ರಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅದೇ ರೀತಿ ಬೇಡಿಕೆ ಈಡೇರಿದ್ದಕ್ಕಾಗಿ ಸಾರಿಗೆ ನೌಕರರ ಸಂಘದವರು ಪ್ರತಿಭಟನೆ ಹಿಂಪಡೆದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನನ್ನು ಕೋರ್ಟ್‌ನಲ್ಲೂ ಕೊಲ್ಬೋದು – ಪಾಕ್ ನ್ಯಾಯಮೂರ್ತಿಗೆ ಪತ್ರ ಬರೆದ ಇಮ್ರಾನ್ ಖಾನ್

  • ತಾಯಿ ಅಶ್ವಥ್‌ ನಾರಾಯಣ್‌, ತಂದೆ ಸಿ.ಟಿ.ರವಿ, ಜನ್ಮಸ್ಥಳ BJP ಕಚೇರಿ; ಉರಿಗೌಡ-ನಂಜೇಗೌಡ ಆಧಾರ್‌ ಬಿಡುಗಡೆ ಮಾಡಿದ ಕಾಂಗ್ರೆಸ್‌

    ತಾಯಿ ಅಶ್ವಥ್‌ ನಾರಾಯಣ್‌, ತಂದೆ ಸಿ.ಟಿ.ರವಿ, ಜನ್ಮಸ್ಥಳ BJP ಕಚೇರಿ; ಉರಿಗೌಡ-ನಂಜೇಗೌಡ ಆಧಾರ್‌ ಬಿಡುಗಡೆ ಮಾಡಿದ ಕಾಂಗ್ರೆಸ್‌

    ಬೆಂಗಳೂರು: ಉರಿಗೌಡ-ನಂಜೇಗೌಡ (Urigowda-Nanjegowda) ಹೆಸರಿನ ವಿವಾದ ವಿಚಾರವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಗುದ್ದಾಟ ಇನ್ನೂ ನಿಂತಿಲ್ಲ. ಉರಿಗೌಡ-ನಂಜೇಗೌಡ ಹೆಸರಲ್ಲಿ ಕಾಂಗ್ರೆಸ್ (Congress) ಅಣಕು ಆಧಾರ್‌ ಕಾರ್ಡ್‌ ಬಿಡುಗಡೆ ಮಾಡಿ ಬಿಜೆಪಿ ಕಾಲೆಳೆದಿದೆ.

    ಕಾಂಗ್ರೆಸ್ಸಿಗರು ಆಧಾರ್‌ ಕಾರ್ಡ್‌ನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಉರಿಗೌಡ ಮತ್ತು ನಂಜೇಗೌಡರಿಗೆ ಅಶ್ವಥ್‌ ನಾರಾಯಣ್‌ ತಾಯಿ ಹಾಗೂ ಸಿ.ಟಿ.ರವಿ ತಂದೆ. ಇವರಿಬ್ಬರೂ ಹುಟ್ಟಿದ್ದು ಚುನಾವಣೆ ಹತ್ತಿರ ಬಂದಾಗ. ಇವರ ಜನ್ಮಸ್ಥಳ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ (BJP) ಕಚೇರಿಯಲ್ಲಿ ಎಂದು ಬಿಜೆಪಿಗೆ ಕಾಂಗ್ರೆಸ್‌ ಟಾಂಗ್‌ ಕೊಟ್ಟಿದೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್‌ – ಸಿನಿಮಾ ಮಾಡಲ್ಲ ಎಂದ ಮುನಿರತ್ನ

    ಅನೇಕ ಸಂಶೋಧನೆಯ ಬಳಿಕ ಸಿಕ್ಕಿದೆ. ಉರಿಗೌಡ, ನಂಜೇಗೌಡರ ಆಧಾರ್‌ ಕಾರ್ಡ್‌ ನಂಬರ್‌ 420 420 420 420 ಎಂದು ಹಾಕಿ ಕಾಂಗ್ರೆಸ್‌ ತಿರುಗೇಟು ನೀಡಿದೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಉರಿಗೌಡ-ನಂಜೇಗೌಡ ಹೆಸರು ರಾಜಕೀಯವಾಗಿ ಮುನ್ನೆಲೆಗೆ ಬಂದಿದೆ. ಟಿಪ್ಪು ಸುಲ್ತಾನ್‌ ಕೊಂದ ವೀರರಿವರು ಎಂದು ಬಿಜೆಪಿ ಬಿಂಬಿಸುತ್ತಿದೆ. ಒಕ್ಕಲಿಗರ ಓಲೈಕೆಗೆ ಬಿಜೆಪಿ ವೋಟ್‌ಬ್ಯಾಂಕ್‌ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಟೀಕಿಸುತ್ತಿವೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನಿಮಾ : ಇಂದು ಮಹತ್ವದ ನಿರ್ಧಾರ

    ಇದೇ ಹೊತ್ತಿನಲ್ಲಿ ಉರಿಗೌಡ-ನಂಜೇಗೌಡ ಕುರಿತು ಸಿನಿಮಾ ಮಾಡುವುದಾಗಿ ಬಿಜೆಪಿ ನಾಯಕರು ಘೋಷಿಸಿದ್ದರು. ಆದರೆ ಇದಕ್ಕೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಸಿನಿಮಾ ನಿರ್ಮಾಣ ಕಾರ್ಯ ಕೈಬಿಡಲಾಯಿತು.

  • ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್‌ – ಸಿನಿಮಾ ಮಾಡಲ್ಲ ಎಂದ ಮುನಿರತ್ನ

    ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್‌ – ಸಿನಿಮಾ ಮಾಡಲ್ಲ ಎಂದ ಮುನಿರತ್ನ

    ವಿವಾದ ಹುಟ್ಟುಹಾಕಿದ್ದ ಉರಿಗೌಡ-ನಂಜೇಗೌಡ (Urigowda-Nanjegowda) ಚಿತ್ರ ನಿರ್ಮಾಣವನ್ನು ಸಚಿವ ಮುನಿರತ್ನ (Munirathna) ಕೈಬಿಟ್ಟಿದ್ದಾರೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಭೇಟಿ ಬಳಿಕ ಚಿತ್ರಕ್ಕೆ ಬ್ರೇಕ್‌ ಬಿದ್ದಿದೆ.

    ಮಂಡ್ಯದ ಕೊಮ್ಮೇರನಹಳ್ಳಿಯಲ್ಲಿ ಸಚಿವ ಮುನಿರತ್ನ ಮಾತನಾಡಿ, ವೃಷಭ ಪ್ರೊಡಕ್ಷನ್‌ನಲ್ಲಿ ಮೇ 14ರಂದು ಚಿತ್ರೀಕರಣದ ಮುಹೂರ್ತ ಮಾಡಬೇಕು ಅಂದುಕೊಂಡಿದ್ದೆ. ಬಹಳ ದೊಡ್ಡ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. ಮೈಸೂರು ಸಂಸ್ಥಾನ ಹಾಗೂ ಟಿಪ್ಪು ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಚರ್ಚೆಯಾಗಿತ್ತು. ಕುಮಾರಸ್ವಾಮಿ ಅವರು ಮುನಿರತ್ನನಿಗೆ ಅಶ್ವಥ್‌ ನಾರಾಯಣ್ ಸಿನಿಮಾ ಮಾಡೋಕೆ ಹೇಳಿರಬೇಕು ಎಂದಿದ್ದರು. ಅಲ್ಲಿಯವರೆಗೆ ನನಗೆ ಸಿನಿಮಾ ಮಾಡುವ ಆಲೋಚನೆ ಇರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನಿಮಾ : ಇಂದು ಮಹತ್ವದ ನಿರ್ಧಾರ

    ಉರಿಗೌಡ-ನಂಜೇಗೌಡ ವಿಚಾರದಲ್ಲಿ ಒಂದಷ್ಟು ದಾಖಲೆ ಸಿಗುತ್ತಿವೆ, ಒಂದಷ್ಟು ಸಿಗುತ್ತಿಲ್ಲ. ನನಗ ಚಿತ್ರ ಮಾಡಬೇಕು ಅನ್ನಿಸಿತು. ಸ್ವಾಮೀಜಿ ಅವರ ಜೊತೆ ಚರ್ಚೆ ಮಾಡಿದೆ. ಆಗ ನನಗೆ ಅನ್ನಿಸಿತು, ಯಾರಿಗೂ ಮನಸ್ಸು ನೋಯಿಸಿ ಸಿನಿಮಾ ಮಾಡಬಾರದು. ಸಿನಿಮಾ ಮಾಡಲು ಕಥೆಗಳು ತುಂಬಾ ಸಿಗುತ್ತದೆ. ಸ್ವಾಮೀಜಿ ಅವರಿಗೆ ಹೇಳಿದ್ದೇನೆ. ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಾನು ಈ‌ ಸಿನಿಮಾವನ್ನು ಇಲ್ಲಿಗೆ ಕೈ ಬಿಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

    ಬಿಜೆಪಿಯವನು ಅಂತಾ ನಾನು ಈ ಸಿನಿಮಾ ಮಾಡಲು ಹೋಗಲ್ಲ. ಶ್ರೀಗಳು ನೈಜತೆ ಇದ್ದರೆ ಅದರ ಬಗ್ಗೆ ಯೋಜನೆ ಮಾಡಿ ಎಂದರು. ಗೊಂದಲ ಇರುವಾಗ ಯಾವುದು ಸೂಕ್ತ ಎಂದು ಕೇಳಿದರು. ಶ್ರೀಗಳ ಮಾತಿನಂತೆ ನಾನು ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ

    ಕೆಲ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಉರಿಗೌಡ-ನಂಜೇಗೌಡ ವಿಚಾರ ಭಾರಿ ಸದ್ದು ಮಾಡುತ್ತಿದೆ. ಟಿಪ್ಪು ಸುಲ್ತಾನ್‌ (Tipu Sultan) ಕೊಂದವರು ಉರಿಗೌಡ-ನಂಜೇಗೌಡ ಎಂದು ಬಿಜೆಪಿ ನಾಯಕರು ಬಿಂಬಿಸಿದ್ದರು. ಚುನಾವಣೆ ಹೊತ್ತಿನಲ್ಲಿ ಒಕ್ಕಲಿಗ ಸಮುದಾಯದ ಓಲೈಕೆಗಾಗಿ ಬಿಜೆಪಿ ವೋಟ್‌ಬ್ಯಾಂಕ್‌ ರಾಜಕೀಯ ಮಾಡುತ್ತಿದೆ ಎಂದು ಪ್ರತಿಪಕ್ಷಗಳ ನಾಯಕರು ಟೀಕಾಪ್ರಹಾರ ನಡೆಸಿದ್ದರು. ಇದರ ಬೆನ್ನಲ್ಲೇ ಈ ಇಬ್ಬರೂ ನಾಯಕರ ಬಗ್ಗೆ ಸಿನಿಮಾ ಮಾಡುವುದಾಗಿ ಸಚಿವ ಮುನಿರತ್ನ ಘೋಷಿಸಿದ್ದರು.

  • ಉರಿಗೌಡ, ನಂಜೇಗೌಡ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ – ಒಕ್ಕಲಿಗರ ಸಂಘದ ಅಧ್ಯಕ್ಷ

    ಉರಿಗೌಡ, ನಂಜೇಗೌಡ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ – ಒಕ್ಕಲಿಗರ ಸಂಘದ ಅಧ್ಯಕ್ಷ

    ಬೆಂಗಳೂರು: ಇತ್ತೀಚೆಗೆ ಕೆಲವರು ಉರಿಗೌಡ ಮತ್ತು ನಂಜೇಗೌಡ (Urigowda-Nanjegowda) ಎಂಬ ಒಕ್ಕಲಿಗರ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ (C.N.Balakrishna) ಖಂಡಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತಿಹಾಸದಲ್ಲಿ ಎಲ್ಲಿಯೂ ಇಲ್ಲದ ವ್ಯಕ್ತಿಗಳನ್ನು ಸೃಷ್ಟಿಸಿ ಈಗ ಪ್ರಚಾರ ಮಾಡುತ್ತಿರುವುದರ ಹುನ್ನಾರವೇನು ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ʻಉರಿಗೌಡ-ನಂಜೇಗೌಡʼ ಕಾಲ್ಪನಿಕ ಪಾತ್ರ ಅಂದೋರು ನಮ್ಮನ್ನ ಕ್ಷಮೆ ಕೇಳಬೇಕು – ಸಿ.ಟಿ ರವಿ

    ಈ ರೀತಿಯ ಸುಳ್ಳಿನ ಮೂಲಕ ಒಕ್ಕಲಿಗ ಸಮುದಾಯವನ್ನು ಅವಮಾನಿಸುವ ಪ್ರಯತ್ನವನ್ನು ಒಕ್ಕಲಿಗ ಸಮುದಾಯ ಸಹಿಸುವುದಿಲ್ಲ. ಬಹುಶಃ ಹತ್ತಿರದಲ್ಲಿರುವ ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಹೀಗೆ ಮಾಡುತ್ತಿರುವ ಸಾಧ್ಯತೆಯಿದ್ದು, ಯಾವುದೇ ಕಾರಣಕ್ಕೂ ಸ್ವಾಭಿಮಾನಿ ಒಕ್ಕಲಿಗ ಸಮುದಾಯ ಸುಳ್ಳುಗಳಿಗೆ ಮಾರುಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

    ಈ ಸುಳ್ಳು ಪ್ರಚಾರದ ಮೂಲಕ ಒಕ್ಕಲಿಗರನ್ನು ಅವಮಾನಿಸುವ ಕುತಂತ್ರದ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಸರ್ಕಾರ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ

    ರಾಜ್ಯ ಸರ್ಕಾರವು ಈ ರೀತಿ ಸುಳ್ಳು ಸುದ್ದಿ ಹಬ್ಬುವಿಕೆಯನ್ನು ತಡೆಯದಿದ್ದರೆ ಆದಿಚುಂಚನಗಿರಿ ಸ್ವಾಮೀಜಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಮತ್ತು ಸ್ಪಟಿಕಪುರಿ ಸ್ವಾಮೀಜಿ ಶ್ರೀ ನಂಜಾವಧೂತ ಸ್ವಾಮೀಯವರ ನೇತೃತ್ವದಲ್ಲಿ ರಾಜ್ಯ ಒಕ್ಕಲಿಗರ ಸಂಘವು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ನಗರದಲ್ಲಿನ ಬಡ ಒಕ್ಕಲಿಗರಿಗೆ ಇಡಬ್ಲ್ಯೂಎಸ್‌ ಪ್ರಮಾಣ ಪತ್ರ ಕೊಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ ಸಿ.ಎನ್.ಬಾಲಕೃಷ್ಣ ಅವರು, ಇದೇ ವೇಳೆಯಲ್ಲಿ ಒಕ್ಕಲಿಗರಿಗೆ ಅವರ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಜಾರಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿವಾದದ ನಡುವೆಯೂ `ಉರಿಗೌಡ – ನಂಜೇಗೌಡ’ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್!

    ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ರಾಜ್ಯದಲ್ಲಿ ಉರಿಗೌಡ ಮತ್ತು ನಂಜೇಗೌಡ ಹೆಸರು ರಾಜಕೀಯ ಸ್ವರೂಪ ಪಡೆದುಕೊಂಡಿವೆ. ಈ ಇಬ್ಬರೂ ಟಿಪ್ಪುವನ್ನು ಹತ್ಯೆ ಮಾಡಿದ್ದರು ಎಂದು ಬಿಜೆಪಿ ನಾಯಕರು ಬಿಂಬಿಸಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಗಿಮಿಕ್‌. ವೋಟ್‌ ಬ್ಯಾಂಕ್‌ಗಾಗಿ ಉರಿಗೌಡ-ನಂಜೇಗೌಡ ಹೆಸರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

  • ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ

    ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ

    ರಾಜ್ಯ ರಾಜಕೀಯದಲ್ಲಿ ವಿವಾದಿತ ಪಾತ್ರಗಳಾಗಿ ಚರ್ಚೆಯಲ್ಲಿರುವ ಉರಿಗೌಡ-ನಂಜೇಗೌಡ (Urigowda -Nanjegowda) ಅವರುಗಳನ್ನು ಆಧರಿಸಿದ ಸಿನಿಮಾ ಮಾಡಲು ನಿರ್ಮಾಪಕ, ಹಾಲಿ ಸಚಿವ ಮುನಿರತ್ನ (Munirathna) ಅವರು ಇದೀಗ ಸಿನಿಮಾದ ಮುಹೂರ್ತ ದಿನಾಂಕವನ್ನೂ ಘೋಷಿಸಿದ್ದರು. ಮೇ 18ರಂದು ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತ ಎಂದು ಅನೌನ್ಸ್ ಮಾಡಿದ್ದರು. ಈ ಬೆನ್ನಲ್ಲೇ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನ ಮುನಿರತ್ನ ಭೇಟಿಯಾಗಲಿದ್ದಾರೆ.

    ಚಿತ್ರಕ್ಕೆ `ಉರಿಗೌಡ-ನಂಜೇಗೌಡ (1750-1799 ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸತ್ಯಕಥೆ) ಎಂಬ ಶೀರ್ಷಿಕೆಯನ್ನಿಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಮುನಿರತ್ನ ಚಿತ್ರದ ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ. ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ʻಉರಿಗೌಡ ನಂಜೇಗೌಡʼ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಉರಿಗೌಡ-ನಂಜೇಗೌಡ ಕುರಿತ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮಾ.20ರಂದು ಮುನಿರತ್ನ ಅವರು ಭೇಟಿಯಾಗುತ್ತಿದ್ದಾರೆ. ಸಿನಿಮಾದ ಬಗ್ಗೆ ಮಹತ್ವದ ಚರ್ಚೆ ಮಾಡಲಿದ್ದಾರೆ. ಶ್ರೀಗಳ ಸಲಹೆ ಪಡೆದು ಮುಂದುವರೆಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ವಿವಾದದ ನಡುವೆಯೂ `ಉರಿಗೌಡ – ನಂಜೇಗೌಡ’ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್!

    ಇನ್ನೂ ಈಗಾಗಲೇ ಅಶೋಕ್ -ಅಶ್ವಥ್ ನಾರಾಯಣ ಅವರು ಉರಿಗೌಡ-ನಂಜೇಗೌಡರ ಇತಿಹಾಸ ಬಗ್ಗೆ ಮಾತಾಡಿದ್ದಾರೆ. ನಾನು ಒಬ್ಬ ನಿರ್ಮಾಪಕನಾಗಿ ಅವರ ಚಿತ್ರ ಮಾಡೋಣ ಎಂದು ನಿರ್ಧರಿಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಶ್ರೀಗಳು ಚರ್ಚೆ ಮಾಡಲು ನನ್ನನ್ನು ಕರೆಸಿದ್ದಾರೆ. ನಾಳೆ (ಮಾ.20) ಬೆಳಿಗ್ಗೆ ಶ್ರೀಗಳ ಭೇಟಿ ಮಾಡ್ತಿದೀನಿ. ಇತಿಹಾಸದ ಬಗ್ಗೆ ಮಾತಾಡೋರು ಅದಕ್ಕೆ ಜಾತಿ ಬಣ್ಣ ಕೊಡಬಾರದು. ಸಿನಿಮಾ ಈಗ ಚರ್ಚೆಯಲ್ಲಿದೆ. ಶ್ರೀಗಳನ್ನು ಭೇಟಿ ಮಾಡೋವರೆಗೂ ಚಿತ್ರದ ಬಗ್ಗೆ ಹೆಚ್ಚಾಗೇನೂ ಮಾತಾಡಲ್ಲ ಎಂದು ನಿರ್ಮಾಪಕ ಮುನಿರತ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.