Tag: Urigowda

  • ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ

    ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ

    ಹಾಸನ: ಉರಿಗೌಡ, ನಂಜೇಗೌಡ ಆ ಎರಡು ಹೆಸರುಗಳನ್ನು ನಾನು ಸೃಷ್ಟಿ ಮಾಡಿದ್ದಲ್ಲ. ಉರಿಗೌಡ, ನಂಜೇಗೌಡ ವಿಚಾರ ಈಗ ಚರ್ಚೆಗೆ ಬಂದಿದ್ದು ನನ್ನ ದುರದೃಷ್ಟ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ (Addanda Cariappa) ಹೇಳಿದರು.

    ಹಾಸನದಲ್ಲಿ ಬೇಲೂರಿನ ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1996ರಲ್ಲಿ ರಾಜೇಶ್‌ಗೌಡ ಎನ್ನುವವರು ಮುನ್ನಲೆಗೆ ತಂದಿದ್ದಾರೆ. ಆದರೆ ಈಗ ರಾಜೇಶ್‌ಗೌಡ ಇಲ್ಲ, ಅವರು ನಿಧನ ಹೊಂದಿದ್ದಾರೆ. ಅವರು ಸುವರ್ಣ ಮಂಡ್ಯ ಅನ್ನುವ ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ. ಟಿಪ್ಪು ಸುಲ್ತಾನ್ ಯಾರು ಕೊಂದರು ಅನ್ನುವುದು ಗೊಂದಲದಲ್ಲಿದೆ‌. ನಾನು ನಾಟಕವನ್ನು ಬರೆಯುವುದರೊಳಗೆ ಅದನ್ನು ಅಧ್ಯಯನ ಮಾಡಿದ್ದೇನೆ ಎಂದು ತಿಳಿಸಿದರು.‌

    ಬ್ರಿಟಿಷರು ಟಿಪ್ಪುವನ್ನು ಹತ್ಯೆ ಮಾಡಿಲ್ಲ ಅಂತಾರೆ, ಇನ್ನೊಂದು ಕಡೆ ಬ್ರಿಟಿಷರು ಟಿಪ್ಪುವನ್ನು ಹತ್ಯೆ ಮಾಡಿದರು ಅಂಥ ಹೇಳಿಕೊಂಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಹಾಕಿರುವ ಶಿಲಾ‌ಸ್ತಂಭಗಳಲ್ಲಾಗಲಿ ಎಲ್ಲಿಯೂ ಇಲ್ಲ. ಶ್ರೀರಂಗಪಟ್ಟಣ ವಾಟರ್‌ಗೇಟ್ ಬಳಿ ಆತ ಬಿದ್ದಿದ್ದ ಅಂತ ಹೇಳಲಾಗಿದೆ.‌ ಅಲ್ಲಿಂದ ಮುನ್ನೂರು ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿತ್ತು ಎನ್ನುವ ಅನೇಕ ಗೊಂದಲಗಳಿವೆ. ಆ ಪಾತ್ರಗಳು ನನ್ನ ಸೃಷ್ಟಿಯಲ್ಲ, 1996ರಲ್ಲೇ ದಾಖಲಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆ ಪುಸ್ತಕ ಬಿಡುಗಡೆಯೂ ಆಗಿದೆ.‌ ಆ ಪುಸ್ತಕದ ದಾಖಲೆಗಳನ್ನು ತೆಗೆದುಕೊಂಡು, ಲಾವಣಿಗಳಲ್ಲಿ ಒಂದು ಲೈನ್ ಬಂದಿರುವುದನ್ನು ನೋಡಿ ನಾನು ದಾಖಲಿಸಿದ್ದೇನೆ ಎಂದರು.

    ನಿರ್ಮಲಾನಂದನಾಥ ಸ್ವಾಮೀಜಿಯವರು ಈ ನಾಡಿನ ಸಂತ. ಅದರಲ್ಲೂ ನಿರ್ಮಲಾನಂದನಾಥ ಸ್ವಾಮೀಜಿಯವರು ಎಂಟೆಕ್ ಮಾಡಿಕೊಂಡು ವಿಜ್ಞಾನಿ ಆಗಿರುವವರು. ಅವರಿಗೆ ಅವರದ್ದೇ ಆದ ಗೌರವವಿದೆ. ನಾನು ಅವರ ಬಗ್ಗೆ ಅವಹೇಳನಕಾರಿಯಾಗಿ ಅಥವಾ ನೋವಾಗುವ ರೀತಿ ಮಾತನಾಡಿಲ್ಲ. ಆದರೆ ಸಮಾಜದ ಪ್ರಮುಖರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯೇ ಅವರಿಗೆ ಕ್ಷಮೆ ಕೇಳಿದ್ದೇನೆ, ಅದು ಮುಗಿದ ಅಧ್ಯಾಯ, ಮತ್ತೆ ಕೆದಕುವುದು ಬೇಡ. ಒಕ್ಕಲಿಗರು ಅಂದರೆ ಅದು ಗಂಗರಸರು, ವೀರರು. ಮಲ್ಲಗೌಡ ಎನ್ನುವ ಪಾತ್ರ, ಶಾಸನ ಇದೆ ಅವರಲ್ಲಿ ಅನೇಕ ಐತಿಹ್ಯಗಳಿವೆ. ನಮ್ಮ ನಾಡಿನಲ್ಲಿ ದೇವೇಗೌಡರು, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದವರು. ನಾಡಿಗೆ ಬಹಳ ಕೊಡುಗೆಯನ್ನು ಕೊಟ್ಟಿದ್ದಾರೆ. ನಾನು ಆ ಜನಾಂಗವನ್ನು ಎಲ್ಲಿಯೂ ದೂಷಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಪ್ರೊ. ಕೃಷ್ಣೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅದು ಅವರ ಅಭಿಪ್ರಾಯ, ರಾಜಕೀಯ ಮಾತನಾಡಬಾರದು ಅಂತ ಎಲ್ಲೂ ಇಲ್ಲ. ರಾಜಕೀಯ ಅದೊಂದು ಪವಿತ್ರವಾದ ಫೀಲ್ಡ್. ರಾಜಕೀಯವನ್ನು ಕೆಲವರು ಗಬ್ಬು ಎಬ್ಬಿಸಿದ್ದಕ್ಕೆ ಅದರ ಬಗ್ಗೆ ಅಹಸ್ಯ ಹುಟ್ಟಿದೆ.‌ ಅದು ಅವರ ಸ್ವಂತ ಅಭಿಪ್ರಾಯ, ಅವರನ್ನು ರಂಗಾಯಣಕ್ಕೆ ಕರೆಸಿದ್ದೇನೆ, ಅವರ ಬಗ್ಗೆ ಗೌರವವಿದೆ ಎಂದರು. ನಾನು 2012 ರಲ್ಲೇ ಟಿಪ್ಪು ಸುಲ್ತಾನ್ ಬಗ್ಗೆ ಪುಸ್ತಕ ಬರೆದು ಟಿಪ್ಪು ಮತ್ತು ಕೊಡವರು ಅಂತ ಪ್ರಕಟ ಮಾಡಿದ್ದೇನೆ. ಇದು ಚುನಾವಣೆ ಹೊತ್ತಿನಲ್ಲಿ ಕಾಕತಾಳೀಯವಾಗಿ ಬಂದುಬಿಡ್ತು. ಅದೇ ಎಫೆಕ್ಟ್ ಆಗ್ತಿರೋದು, ಚುನಾವಣೆ ಬಂದರುವುದರಿಂದ ಎಲ್ಲಾ ಮಾತಗಳು ರಾಜಕೀಯಕರಣಗೊಳ್ಳುತ್ತಿದೆ. ಸ್ವಾಮೀಜಿಯವರ ಹೇಳಿಕೆಗೆ ನನ್ನ ಸಹಮತವಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ತಂದೆ, ಮಕ್ಕಳಿಗೆ ಟಿಕೆಟ್

    ಉರಿಗೌಡ (Urigowda), ನಂಜೇಗೌಡ (Nanjegowda) ಬಗ್ಗೆ ಸಂಶೋಧನೆ ನಡೆಯಬೇಕು ಅಂತ ಸ್ವಾಮೀಜಿ ಹೇಳಿದ್ದಾರೆ, ಅದಕ್ಕೆ ನನ್ನ ಸಹಮತವಿದೆ. ಸಂಶೋಧನೆ ನಡೆಯಲಿ ಅಂತ ನಾನು ಹೇಳುತ್ತಿದ್ದೇನೆ‌. ಉರಿಗೌಡ, ನಂಜೇಗೌಡ ಚಿತ್ರಗಳು ನಾಟಕದ್ದು, ಅದನ್ನು ನಾನು ತಿರಸ್ಕರಿಸುತ್ತೇನೆ.‌ ಆ ಫೋಟೋಗಳನ್ನು ಯಾರು ವ್ಯಾಟ್ಸ‌ಪ್‌ ಅಲ್ಲಿ ಹಾಕಿದ್ದಾರೆ ಅದು ಸುಳ್ಳು. ಅದು ತಮಿಳುನಾಡಿನ ಚಿತ್ರಗಳು. ನಾನು ನನ್ನ ನಾಟಕದ ಅನೇಕ ಫೋಟೋಗಳನ್ನು ಹಾಕಿದ್ದೇನೆ.‌ ಅದರಲ್ಲಿ ನನ್ನ ನಾಟಕದಲ್ಲಿ ಬರುವ ಪಾತ್ರಧಾರಿಗಳ ಫೋಟೋ ಇದೆ.‌ ಟಿಪ್ಪುವನ್ನು ಕೊಂದಿರುವುದು ಉರಿಗೌಡ, ನಂಜೇಗೌಡ ಅಂತ ನನ್ನ ನಾಟಕದಲ್ಲಿ ಬಂದಿದೆ. ಇನ್ನಷ್ಟು ಸಂಶೋಧನೆ ನಡೆಯಲಿ. ನಾನು ಆ ಎರಡು ಪಾತ್ರಗಳನ್ನು ತಂದಿರುವುದಕ್ಕೆ ಅನೇಕ ಕಾರಣಗಳಿವೆ. ಆ ಹೆಸರುಗಳು ನನ್ನ ಸೃಷ್ಟಿ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 12 ಲಕ್ಷ ರೂ. ಹಣ ಜಪ್ತಿ

  • Breaking- ಬಂಧಿತನಾಗಿದ್ದ ನಟ ಚೇತನ್ ಗೆ ಜಾಮೀನು

    Breaking- ಬಂಧಿತನಾಗಿದ್ದ ನಟ ಚೇತನ್ ಗೆ ಜಾಮೀನು

    ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ನಟ ಚೇತನ್ ಗೆ 32ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.  ಇಪ್ಪತ್ತೈದು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ನೀಡುವಂತೆ ನ್ಯಾಯಾಧೀಶೆ ಲತಾ ಅವರು ಆದೇಶಿಸಿದ್ದಾರೆ. ಶಿವಕುಮಾರ್ ನೀಡಿದ್ದ ದೂರಿನ ಮೇಲೆ ಚೇತನ್ ಬಂಧನವಾಗಿತ್ತು.

    ಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಎರಡು ದಿನಗಳ ಹಿಂದೆ ನಟ ಚೇತನ್ ನನ್ನು (Chetan) ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದರು. ಅವರನ್ನು ಕೋರ್ಟಿಗೂ ಹಾಜರುಪಡಿಸಿದ್ದರು. ಪೊಲೀಸರು ಹಾಕಿರುವ ಎಫ್‍ ಐಆರ್ ಆಧರಿಸಿ ನ್ಯಾಯಾಲಯವು  ಚೇತನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.  ಈ ಸಂದರ್ಭದಲ್ಲಿ ಚೇತನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮಾನ್ಯ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿತ್ತು. ಇದನ್ನೂ ಓದಿ: ಮಗಳ ನಟನೆ ಬಗ್ಗೆ ತಂದೆ-ತಾಯಿಗೆ ಖುಷಿ ಇದ್ಯಾ? ಅಸಲಿ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    ಚೇತನ್ ಅವರು ಉರಿಗೌಡ (Urigowda), ನಂಜೇಗೌಡ (Nanjegowda) ವಿಚಾರವಾಗಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು. ಈ ಕುರಿತು ಶಿವಕುಮಾರ್ (Shivakumar) ಎನ್ನುವವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

    ಚೇತನ್ ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಅಲ್ಲಿ ಉರಿಗೌಡ ನಂಜೇಗೌಡ ಬಗ್ಗೆ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್ ಹೇಳಿಕೆ, ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಎನ್ನುವುದು ಇದು ಒಂದು ಸುಳ್ಳು. 1992ರಲ್ಲಿ ಬಾಬರಿ ಮಸೀದಿ ರಾಮನ ಜನ್ಮ ಭೂಮಿ ಕುರಿತು ಇದು ಒಂದು ಸುಳ್ಳು. ಈಗ 2023ರಲ್ಲಿ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು ಎನ್ನುವುದು ಇದು ಕೂಡ ಒಂದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು, ಸತ್ಯವೇ ಸಮಾನತೆ’ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

    ಈ ಪೋಸ್ಟ್ ಅನ್ನು ಆಧರಿಸಿಯೇ ಶಿವಕುಮಾರ್ ಎಂಬುವರು ದೂರು ನೀಡಿದ್ದಾರೆ. ದೂರಿನಲ್ಲಿ ಚೇತನ್ ಅವರು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಶಿವಕುಮಾರ್. ಈ ದೂರನ್ನು ಆಧರಿಸಿ ಎಫ್ ಐ ಆರ್ ದಾಖಲಿಸಿದ್ದ ಶೇಷಾದ್ರಿಪುರಂ ಪೊಲೀಸರು ನಟ ಚೇತನ್ ನನ್ನು ಕೋರ್ಟಿಗೆ ಹಾಜರುಪಡಿಸಿದ್ದರು.

  • ಉರಿ-ನಂಜೇಗೌಡ ಟ್ವೀಟ್ ಪ್ರಕರಣ : 14 ದಿನಗಳ ನ್ಯಾಯಾಂಗ ಬಂಧನಕ್ಕೆ ನಟ ಚೇತನ್

    ಉರಿ-ನಂಜೇಗೌಡ ಟ್ವೀಟ್ ಪ್ರಕರಣ : 14 ದಿನಗಳ ನ್ಯಾಯಾಂಗ ಬಂಧನಕ್ಕೆ ನಟ ಚೇತನ್

    ಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಇಂದು ಬೆಳಗ್ಗೆ ನಟ ಚೇತನ್ ನನ್ನು (Chetan) ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದರು. ಅವರನ್ನು ಕೋರ್ಟಿಗೂ ಹಾಜರುಪಡಿಸಿದ್ದರು. ಪೊಲೀಸರು ಹಾಕಿರುವ ಎಫ್‍ ಐಆರ್ ಆಧರಿಸಿ ನ್ಯಾಯಾಲಯವು  ಚೇತನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಈ ಸಂದರ್ಭದಲ್ಲಿ ಚೇತನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮಾನ್ಯ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

    ಚೇತನ್ ಅವರು ಉರಿಗೌಡ (Urigowda), ನಂಜೇಗೌಡ (Nanjegowda) ವಿಚಾರವಾಗಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು. ಈ ಕುರಿತು ಶಿವಕುಮಾರ್ (Shivakumar) ಎನ್ನುವವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

    ಚೇತನ್ ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಅಲ್ಲಿ ಉರಿಗೌಡ ನಂಜೇಗೌಡ ಬಗ್ಗೆ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್ ಹೇಳಿಕೆ, ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಎನ್ನುವುದು ಇದು ಒಂದು ಸುಳ್ಳು. 1992ರಲ್ಲಿ ಬಾಬರಿ ಮಸೀದಿ ರಾಮನ ಜನ್ಮ ಭೂಮಿ ಕುರಿತು ಇದು ಒಂದು ಸುಳ್ಳು. ಈಗ 2023ರಲ್ಲಿ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು ಎನ್ನುವುದು ಇದು ಕೂಡ ಒಂದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು, ಸತ್ಯವೇ ಸಮಾನತೆ’ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

    ಈ ಪೋಸ್ಟ್ ಅನ್ನು ಆಧರಿಸಿಯೇ ಶಿವಕುಮಾರ್ ಎಂಬುವರು ದೂರು ನೀಡಿದ್ದಾರೆ. ದೂರಿನಲ್ಲಿ ಚೇತನ್ ಅವರು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಶಿವಕುಮಾರ್. ಈ ದೂರನ್ನು ಆಧರಿಸಿ ಎಫ್ ಐ ಆರ್ ದಾಖಲಿಸಿದ್ದ ಶೇಷಾದ್ರಿಪುರಂ ಪೊಲೀಸರು ನಟ ಚೇತನ್ ನನ್ನು ಕೋರ್ಟಿಗೆ ಹಾಜರುಪಡಿಸಿದ್ದರು.

  • Breaking- ಉರಿಗೌಡ ನಂಜೇಗೌಡ ಬಗ್ಗೆ ಟ್ವೀಟ್:  ನಟ ಚೇತನ್ ಬಂಧನ

    Breaking- ಉರಿಗೌಡ ನಂಜೇಗೌಡ ಬಗ್ಗೆ ಟ್ವೀಟ್: ನಟ ಚೇತನ್ ಬಂಧನ

    ಟ, ಸಾಮಾಜಿಕ ಹೋರಾಟಗಾರ ಚೇತನ್ (Chetan) ಬಂಧನವಾಗಿದೆ. ಉರಿಗೌಡ (Urigowda) ನಂಜೇಗೌಡ (Nanjegowda) ವಿಚಾರವಾಗಿ ಅವರು ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು. ಈ ಕುರಿತು ಶಿವಕುಮಾರ್ (Shivakumar) ಎನ್ನುವವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಚೇತನ್ ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಅಲ್ಲಿ ಉರೀಗೌಡ ನಂಜೇಗೌಡ ಬಗ್ಗೆ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್ ಹೇಳಿಕೆ, ರಾಮನು ರಾವಣನನ್ನು ಸೋಲಿಸಿ ಅಯೋಧ್ಯಗೆ ಹಿಂದಿರುಗಿದಾ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಎನ್ನುವುದು ಇದು ಒಂದು ಸುಳ್ಳು. 1992ರಲ್ಲಿ ಬಾಬರಿ ಮಸೀದಿ ರಾಮನ ಜನ್ಮ ಭೂಮಿ ಕುರಿತು ಇದು ಒಂದು ಸುಳ್ಳು. ಈಗ 2023ರಲ್ಲಿ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು ಎನ್ನುವುದು ಇದು ಕೂಡ ಒಂದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು, ಸತ್ಯವೇ ಸಮಾನತೆ’ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ತೆಲುಗು ನಟ ನಾಗಬಾಬು ಪುತ್ರಿ ನಿಹಾರಿಕಾ ದಾಂಪತ್ಯದಲ್ಲಿ ಬಿರುಕು

    ಈ ಪೋಸ್ಟ್ ಅನ್ನು ಆಧರಿಸಿಯೇ ಶಿವಕುಮಾರ್ ಎಂಬುವರು ದೂರು ನೀಡಿದ್ದಾರೆ. ದೂರಿನಲ್ಲಿ ಚೇತನ್ ಅವರು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಶಿವಕುಮಾರ್. ಈ ದೂರನ್ನು ಆಧರಿಸಿ ಎಫ್ ಐ ಆರ್ ದಾಖಲಿಸಿದ್ದ ಶೇಷಾದ್ರಿಪುರಂ ಪೊಲೀಸರು ನಟ ಚೇತನ್ ನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

  • ಉರಿಗೌಡ-ನಂಜೇಗೌಡ ಸಿನಿಮಾ : ಇಂದು ಮಹತ್ವದ ನಿರ್ಧಾರ

    ಉರಿಗೌಡ-ನಂಜೇಗೌಡ ಸಿನಿಮಾ : ಇಂದು ಮಹತ್ವದ ನಿರ್ಧಾರ

    ಳೆದ ಮೂರ್ನಾಲ್ಕು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ‘ಉರಿಗೌಡ (Urigowda)-ನಂಜೇಗೌಡ (Nanjegowda)’ ಚಿತ್ರದ್ದೇ ಸುದ್ದಿ. ತೋಟಗಾರಿಕಾ ಸಚಿವ ಹಾಗೂ ನಿರ್ಮಾಪಕ ಮುನಿರತ್ನ (Munirathna) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಂತೆಯೇ ಈ ಸಿನಿಮಾ ಆಗತ್ತಾ? ಅಥವಾ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ಕಾ ಎನ್ನುವ ಚರ್ಚೆ ಶುರುವಾಗಿತ್ತು. ನಿರ್ಮಾಪಕರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮುಹೂರ್ತದ ದಿನಾಂಕವನ್ನೂ ಘೋಷಣೆ ಮಾಡಿದ್ದಾರೆ.

    ಮುನಿರತ್ನ ಅವರ ನಿರ್ಮಾಣ ಸಂಸ್ಥೆಯ ಟ್ವೀಟರ್ ಖಾತೆಯಿಂದ ಮೇ 18ರಂದು ಉರಿಗೌಡ ನಂಜೇಗೌಡ ಚಿತ್ರಕ್ಕೆ ಮುಹೂರ್ತ ಎಂದು ಬರೆಯುತ್ತಿದ್ದಂತೆಯೇ ಚರ್ಚೆಯ ಕಾವು ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆದಿಯಾಗಿ ಅನೇಕರು ಈ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ. ಒಕ್ಕಲಿಗರ ಸಂಘಗಳು ವಿರೋಧಿಸಿವೆ. ಭಾರೀ ವಿರೋಧ ಬಂದ ಹಿನ್ನೆಲೆಯಲ್ಲಿ ಇಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanath Swamiji) ಅವರನ್ನು ಮುನಿರತ್ನ ಭೇಟಿಯಾಗುತ್ತಿದ್ದಾರೆ. ಇದನ್ನೂ ಓದಿ: ವಿವಾದದ ನಡುವೆಯೂ `ಉರಿಗೌಡ – ನಂಜೇಗೌಡ’ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್!

    ಇಂದು ನಿರ್ಮಲಾನಂದನಾಥ ಸ್ವಾಮಿಗಳನ್ನು ಮುನಿರತ್ನ ಭೇಟಿಯಾಗಿ ಚಿತ್ರದ ಕುರಿತು ಸಲಹೆಗಳನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಆಗತ್ತಾ ಅಥವಾ ನಿಲ್ಲುತ್ತಾ ಎನ್ನುವುದು ಈ ಭೇಟಿಯ ನಂತರ ಸ್ಪಷ್ಟತೆ ಸಿಗಲಿದೆ. ಈ ಸಿನಿಮಾಗೆ ಸ್ವಾಮಿಗಳ ಬೆಂಬಲ ಇರುತ್ತಾ ಅಥವಾ ಸಿನಿಮಾ ಮಾಡುವುದನ್ನು ನಿಲ್ಲಿಸಿ ಎಂದು ಸಲಹೆ ನೀಡುತ್ತಾರಾ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    ಈ ಚಿತ್ರಕ್ಕೆ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ್ (Ashwattha Narayan) ಚಿತ್ರಕಥೆ ಬರೆಯಲಿದ್ದಾರೆ ಎಂದು ಮುನಿರತ್ನ ಹೇಳಿದ್ದರು. ಆದರೆ, ಈ ಮಾತನ್ನು ಅಶ್ವತ್ಥ್ ನಾರಾಯಣ್ ಅಲ್ಲಗಳೆದಿದ್ದಾರೆ. ಆದರೂ, ಪೋಸ್ಟರ್ ನಲ್ಲಿ ಅಶ್ವತ್ಥ್ ನಾರಾಯಣ ಹೆಸರು ಹಾಗೆಯೇ ಇದೆ. ಈ ಸಿನಿಮಾವನ್ನು ಆರ್.ಎಸ್. ಗೌಡ ನಿರ್ದೇಶನ ಮಾಡಲಿದ್ದಾರೆ.

  • ʻಉರಿಗೌಡ-ನಂಜೇಗೌಡʼ ಕಾಲ್ಪನಿಕ ಪಾತ್ರ ಅಂದೋರು ನಮ್ಮನ್ನ ಕ್ಷಮೆ ಕೇಳಬೇಕು – ಸಿ.ಟಿ ರವಿ

    ʻಉರಿಗೌಡ-ನಂಜೇಗೌಡʼ ಕಾಲ್ಪನಿಕ ಪಾತ್ರ ಅಂದೋರು ನಮ್ಮನ್ನ ಕ್ಷಮೆ ಕೇಳಬೇಕು – ಸಿ.ಟಿ ರವಿ

    ಚಿಕ್ಕಮಗಳೂರು: ʻಉರಿಗೌಡ-ನಂಜೇಗೌಡʼ (Urigowda, Nanjegowda) ಕಾಲ್ಪನಿಕ ಪಾತ್ರ ಅಂದವರು ನಮ್ಮನ್ನ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಒತ್ತಾಯಿಸಿದ್ದಾರೆ.

    ನಗರದ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂ ಹೆಣ್ಣುಮಕ್ಕಳನ್ನು ಅವಮಾನಿಸಿದ್ರೆ ಕೈ ಕತ್ತರಿಸುತ್ತೇವೆ – ಕೇಂದ್ರ ಸಚಿವ ಚೌಬೆ ವಿವಾದಾತ್ಮಕ ಹೇಳಿಕೆ

    ʻಉರಿಗೌಡ-ನಂಜೇಗೌಡʼ ಅನ್ನೋದು ಕಾಲ್ಪನಿಕ ಪಾತ್ರ, ಅದು ಸಿ.ಟಿ ರವಿ, ಅಶ್ವಥ್ ನಾರಾಯಣ್ (Ashwath Narayan), ಬಿಜೆಪಿ, ಆರ್‌ಎಸ್‌ಎಸ್‌ (RSS) ಸೃಷ್ಠಿ ಎಂದವರು ನಮ್ಮನ್ನ ಕ್ಷಮೆ ಕೇಳಬೇಕು. ದಿವಂಗತ ದೇ. ಜವರೇಗೌಡರು ಸಾಮಾನ್ಯರಲ್ಲ. ಅವರನ್ನ, ಅವರು ಬರೆದ ಪುಸ್ತಕವನ್ನ ನೀವು ಅವಮಾನಿಸುತ್ತಿದ್ದೀರಿ. ಮಾಜಿ ಪ್ರಧಾನಿ ದೇವೇಗೌಡರು ಬಿಡುಗಡೆ ಮಾಡಿರುವ ʻಸುವರ್ಣ ಮಂಡ್ಯʼ ಪುಸ್ತಕವನ್ನ ನೀವು ಅಪಮಾನ ಮಾಡುತ್ತಿದ್ದೀರಿʼ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಅಂತರರಾಜ್ಯ ಬೈಕ್ ಕಳ್ಳರ ಬಂಧನ

    ಮುಂದುವರಿದು ಹೆಚ್.ಡಿ ಕುಮಾರಸ್ವಾಮಿ ಅವರ ʻಉರಿಗೌಡ-ನಂಜೇಗೌಡರಿಗಿಂತ ನಮಗೆ ಬೋರೇಗೌಡ ಮುಖ್ಯʼ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬೋರೇಗೌಡನ ಮೇಲೆ ಪ್ರೀತಿ ಇರೋದಕ್ಕೆ ಬಡ ಬೋರೇಗೌಡನ ಖಾತೆಗೆ ವರ್ಷಕ್ಕೆ 10 ಸಾವಿರ ರೂ. ಹಾಕುತ್ತಿರುವುದು. ಬೋರೇಗೌಡನ ಮೇಲೆ ಕಾಳಜಿ ಇರೋದಕ್ಕೆ ಹಾಲಿಗೆ 5 ರೂ. ಸಹಾಯಧನ ಕೊಡ್ತಿರೋದು, ಬಡ್ಡಿ ಇಲ್ಲದೇ 5 ಲಕ್ಷ ಹಣ ಕೊಡುತ್ತಿರೋದು ಎಂದು ತಿರುಗೇಟು ನೀಡಿದ್ದಾರೆ.

    ಬೋರೇಗೌಡನ ಬಗ್ಗೆ ಕಾಳಜಿ ಇದೆ. ಆದರೆ, ಪ್ರೇರಣೆ ಇತಿಹಾಸದಿಂದ ಸಿಗುತ್ತೆ. ನಾವು ಬರೀ ಮನುಷ್ಯರೆಂದು ಕರೆಸಿಕೊಂಡರೇ ಸಾಲೋದಿಲ್ಲ. ಮನುಷ್ಯರು ಎಂದಾಗ ನೀವು ಯಾರು ಅನ್ನೋ ಪ್ರಶ್ನೆ ಬರುತ್ತೆ. ಹೊರಗಿನವರು ಕೇಳಿದಾಗ ನಾನು ಭಾರತೀಯ, ನಾವು ಕನ್ನಡಿಗರು, ನಾವು ಹಿಂದೂ ಅಂತಾ ಹೇಳುತ್ತೇವೆ. ಜಾತಿಯಲ್ಲಿ ಯಾರು ಅಂದ್ರೆ ಜಾತಿ ಹೆಸರೇಳುತ್ತೇವೆ. ಅದರಲ್ಲಿ ಯಾರ ಮಗ ಅಂದರೆ ತಂದೆ ಹೆಸರೇಳುತ್ತೇವೆ. ಅದೇ ರೀತಿ ನಮಗೊಂದು ಅಸ್ಮಿತೆ ಇದೆ, ಆ ಮೂಲಕ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಹೇಳಿದ್ದಾರೆ.

  • ವಿವಾದದ ನಡುವೆಯೂ `ಉರಿಗೌಡ – ನಂಜೇಗೌಡ’ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್!

    ವಿವಾದದ ನಡುವೆಯೂ `ಉರಿಗೌಡ – ನಂಜೇಗೌಡ’ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್!

    ಬೆಂಗಳೂರು: ಮಂಡ್ಯದ ಒಕ್ಕಲಿಗ ಕಲಿಗಳು ಎಂದು ಬಿಂಬಿಸಲಾಗುತ್ತಿರುವ `ಉರಿಗೌಡ, ನಂಜೇಗೌಡ’ (Urigowda, Nanjegowda) ಹೆಸರಿನಲ್ಲಿ ಸಿನಿಮಾವೊಂದು (Cinema) ಮೂಡಿ ಬರುತ್ತಿದ್ದು, ಮೇ 18ರಂದು ಚಿತ್ರೀಕರಣಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ.

    ಚಿತ್ರಕ್ಕೆ `ಉರಿಗೌಡ-ನಂಜೇಗೌಡ’ (1750-1799 ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸತ್ಯಕಥೆ) ಎಂಬ ಶೀರ್ಷಿಕೆಯನ್ನಿಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಮುನಿರತ್ನ (Munirathna) ಚಿತ್ರದ ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲದೇ ಯಾರೇ ಸ್ಪರ್ಧೆ ಮಾಡಿದ್ರು ನನ್ನ ಗೆಲುವು ಶತಸಿದ್ಧ – ಕೋಲಾರ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್

    `ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರೀಗೌಡ ನಂಜೇಗೌಡ’ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್ ಅಶ್ವಥ್ ನಾರಾಯಣ್ (CN Ashwath Narayan) ಅವರ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ (RS Gowda) ನಿರ್ದೇಶನ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇತಿಹಾಸದ ಪುಟ ತೆರೆದು ನೋಡಿದ್ರೆ ಉರಿಗೌಡ, ನಂಜೇಗೌಡನ ಹೆಸರಿದೆ: ಶೋಭಾ ಕರಂದ್ಲಾಜೆ

    ಕುರುಕ್ಷೇತ್ರ ಸೇರಿದಂತೆ ಹಲವು ಭಾರೀ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಮುನಿರತ್ನ, ಈ ಬಾರಿ ವಿವಾದಿತ ವ್ಯಕ್ತಿಗಳ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ಯಾವ ರೀತಿ ಈ ಚಿತ್ರ ಮೂಡಿಬರಲಿದೆ ಎಂಬುದು ಕುತೂಹಲವಾಗಿದೆ.

  • ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖ – ರಾಜಕೀಯ ವಾದಕ್ಕೆ ಪುಷ್ಟಿ

    ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖ – ರಾಜಕೀಯ ವಾದಕ್ಕೆ ಪುಷ್ಟಿ

    ಮಂಡ್ಯ: ರಾಜ್ಯದಲ್ಲಿ ಉರಿಗೌಡ ಹಾಗೂ ದೊಡ್ಡನಂಜೇಗೌಡ (Urigowda and Nanjegowda) ಹೆಸರಿನಲ್ಲಿ ಫೈಟ್ ಹೆಚ್ಚಾಗಿದೆ. ಬಿಜೆಪಿಯವರು (BJP) ಉರಿಗೌಡ ಹಾಗೂ ದೊಡ್ಡನಂಜೇಗೌಡರು ಇದ್ದರು ಎಂಬ ವಾದ ಮಾಡಿದರೆ, ಕಾಂಗ್ರೆಸ್ (Congress) ನಾಯಕರು ಇದೊಂದು ಬಿಜೆಪಿ ಕಾಲ್ಪನಿಕ ಪಾತ್ರಗಳು ಎಂದು ವಾದ ಮಾಡುತ್ತಿದ್ದಾರೆ. ಇದೀಗ ಉರಿಗೌಡ ಹಾಗೂ ದೊಡ್ಡನಂಜೇಗೌಡರ ಬಗ್ಗೆ ಉಲ್ಲೇಖವಿರುವ ಪುಸ್ತಕ ಪತ್ತೆಯಾಗಿದ್ದು, ಈ ರಾಜಕೀಯ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

    ಡಾ. ದೇಜಗೌ ಸಂಪಾದಕತ್ವದಲ್ಲಿ 2006ರಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊರ ತಂದಿರುವ ಸುವರ್ಣ ಮಂಡ್ಯ (Suvarna Mandya) ಪುಸ್ತಕದಲ್ಲಿ ಉರಿಗೌಡ, ದೊಡ್ಡನಂಜೇಗೌಡರ ಬಗ್ಗೆ ಉಲ್ಲೇಖವಿದೆ. ಸುವರ್ಣ ಮಂಡ್ಯದಲ್ಲಿ ಹ.ಕ. ರಾಜೇಗೌಡರು ಬರೆದಿರುವ ಲೇಖನದಲ್ಲಿ ಇದು ಉಲ್ಲೇಖವಾಗಿದೆ. ಉರಿಗೌಡ ಹಾಗೂ ದೊಡ್ಡನಂಜೇಗೌಡ ಇಬ್ಬರ ಬಗ್ಗೆಯೂ ಇದರಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಚಿತ್ರ : ಫಿಲ್ಮ್ ಚೇಂಬರ್ ಗೆ ಪತ್ರ ಬರೆದ ಒಕ್ಕಲಿಗರ ಸಂಘ

    ಈ ಪುಸ್ತಕದಲ್ಲಿ, ಹೈದರಾಲಿ ಮತ್ತು ಟಿಪ್ಪು ಕಾಲದಲ್ಲಿ ಉರಿಗೌಡ ಹಾಗೂ ದೊಡ್ಡನಂಜೇಗೌಡ ಅವರ ವಿರುದ್ಧ ಸೆಟೆದು ನಿಂತವರು. ಟಿಪ್ಪುವಿನ ಧಾರ್ಮಿಕ ಮತ್ತು ಭಾಷಾ ನೀತಿಯ ಕಾರಣದಿಂದ ಉರಿಗೌಡ ಹಾಗೂ ದೊಡ್ಡನಂಜೇಗೌಡರು ತಿರುಗಿಬಿದ್ದಿದ್ದರು. ಟಿಪ್ಪು ಆಡಳಿತದಲ್ಲಿ ಮುಸಲ್ಮಾನರನ್ನೇ ನೇಮಿಸಿದ್ದು, ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಣೆ ಮಾಡಿದ್ದರು. ಇದಕ್ಕಾಗಿ ಮಂಡ್ಯ ಪ್ರದೇಶದ ಗೌಡರು ಟಿಪ್ಪುವಿನ ವಿರುದ್ಧ ತಿರುಗಿ ಬಿದ್ದಿದ್ದರು.

    ಟಿಪ್ಪುವಿನ ಪತನದ ನಂತರ ಇದೇ ಗೌಡರು ಬ್ರಿಟಿಷರ ವಿರುದ್ಧವೂ ಕೆಲಸ ಮಾಡಿದ್ದಾರೆ. ಮಂಡ್ಯ ನೆಲದ ಜನ ಹೊರಗಿನ ಅಧಿಕಾರವನ್ನು ಸಹಿಸುವುದಿಲ್ಲ ಎಂಬುದು ಕಂಡುಬರುತ್ತದೆ ಎಂಬ ರೀತಿಯಲ್ಲಿ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಕೋಲಾರ ಬೇಡ, ವರುಣಾದಿಂದ್ಲೇ ಸ್ಪರ್ಧಿಸಿ- ಸಿದ್ದರಾಮಯ್ಯಗೆ ಖರ್ಗೆ, ರಾಹುಲ್ ಗಾಂಧಿ ಸಲಹೆ

  • ಉರಿಗೌಡ-ನಂಜೇಗೌಡ ಚಿತ್ರ : ಫಿಲ್ಮ್ ಚೇಂಬರ್ ಗೆ ಪತ್ರ ಬರೆದ ಒಕ್ಕಲಿಗರ ಸಂಘ

    ಉರಿಗೌಡ-ನಂಜೇಗೌಡ ಚಿತ್ರ : ಫಿಲ್ಮ್ ಚೇಂಬರ್ ಗೆ ಪತ್ರ ಬರೆದ ಒಕ್ಕಲಿಗರ ಸಂಘ

    ನಿನ್ನೆಯಿಂದ ಗಾಂಧಿನಗರದಲ್ಲಿ ‘ಉರಿಗೌಡ (Urigowda)-ನಂಜೇಗೌಡ (Nanjegowda) ’ ಸಿನಿಮಾದ (Cinema) ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ಸಚಿವ, ನಿರ್ಮಾಪಕ ಮುನಿರತ್ನ ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chamber) ಟೈಟಲ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ವಾಣಿಜ್ಯ ಮಂಡಳಿ ಕೂಡ ಅರ್ಜಿಗೆ ಮಾನ್ಯ ಮಾಡಿತ್ತು. ಈ ಪತ್ರವನ್ನಿಟ್ಟುಕೊಂಡು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದರು. ಸರಣೀಯ ಟ್ವೀಟ್ ಕೂಡ ಮಾಡಿದ್ದರು. ಇದೀಗ ಒಕ್ಕಲಿಗರ ಸಂಘ ಈ ವಿವಾದಕ್ಕೆ ಪ್ರವೇಶ ಮಾಡಿದೆ.

    ಒಕ್ಕಲಿಗ ಯುವಬ್ರಿಗೆಡ್ ಹಾಗೂ ಒಕ್ಕಲಿಗ ಅನಿವಾಸಿ ಭಾರತೀಯ ಯುವಬ್ರಿಗೆಡ್ ಅಧ್ಯಕ್ಷ ನಂಜೇಗೌಡ ನಂಜುಂಡಿ ಕರ್ನಾಟಕ ಚಲನಚಿತ್ರ  ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದು, ಆ ಪತ್ರದಲ್ಲಿ ಸಿನಿಮಾ ಮಾಡದಂತೆ ಸಂಬಂಧಿಸಿದ ನಿರ್ಮಾಪಕರಿಗೆ ತಿಳಿಸುವಂತೆ ಹಾಗೂ ಟೈಟಲ್ ನೀಡದಂತೆ ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಂಗೊಳಿಸಿದ ರಾಗಿಣಿ

    ‘ಉರೀಗೌಡ, ನಂಜೇಗೌಡ ಎನ್ನುವ ಇಬ್ಬರೂ ವ್ಯಕ್ತಿಗಳ ಮೇಲೆ ಯಾವುದೇ ತರಹದ ಮಾಹಿತಿ ಸರ್ಕಾರದ ದಾಖಲೆಗಳಾಗಲಿ, ಇತಿಹಾಸದ ದಾಖಲೆಗಳಾಗಲಿ ಹಾಗೂ ಸ್ಥಳೀಯ ಆಡಳಿತದಲ್ಲಿ ಸಿಗುವ ಕರಡು ಪ್ರತಿಗಳಾಗಲಿ ಸಿಗುವುದಿಲ್ಲ. ಆದ್ದರಿಂದ ಪಟ್ಟಭದ್ರ ಹಿತಾಶಕ್ತಿಗಳು ಒಕ್ಕಲಿಗ ಸಮುದಾಯವನ್ನು ಅಪಮಾನ ಮಾಡಲು ಹಾಗೂ ಮುಸ್ಲಿಂ ಹಾಗೂ ಒಕ್ಕಲಿಗರ ನಡುವೆ ಧರ್ಮ ಸಂ‍ಘರ್ಷವನ್ನು ತಂದು, ತಮ್ಮ ರಾಜಕೀಯ ಹಿತಾಶಕ್ತಿಗೆ ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ತಾವುಗಳು ದಯಮಾಡಿ ಇದಕ್ಕೆ ಅವಕಾಶ ನೀಡದೇ, ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

    ಈಗಾಗಲೇ ಪತ್ರವು ಫಿಲ್ಮ್ ಚೇಂಬರ್ ಅಧ್ಯಕ್ಷರಿಗೆ ತಲುಪಿದ್ದು, ಕಾನೂನಾತ್ಮಕವಾಗಿ ತಡೆಯುವಂತಹ ಯಾವುದೇ ಹಕ್ಕು ಫಿಲ್ಮ್ ಚೇಂಬರ್ ಗೆ ಇಲ್ಲವಾದರೂ, ಈ ವಿಷಯದಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷರು ಯಾವ ರೀತಿಯಲ್ಲಿ ಕ್ರಮ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.