Tag: Uri

  • ಎಲ್‌ಓಸಿಯಲ್ಲಿ ಪಾಕ್ ಒಳನುಸುಳುಕೋರರ ತಡೆದ ಸೇನೆ; ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕ ಹುತಾತ್ಮ

    ಎಲ್‌ಓಸಿಯಲ್ಲಿ ಪಾಕ್ ಒಳನುಸುಳುಕೋರರ ತಡೆದ ಸೇನೆ; ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕ ಹುತಾತ್ಮ

    – ಸ್ವಾತಂತ್ರ್ಯ ದಿನಾಚರಣೆ ಹೊತ್ತಲ್ಲೇ ಗಡಿಯಲ್ಲಿ ಒಳನುಸುಳಲು ಉಗ್ರರ ಯತ್ನ

    ಶ್ರೀನಗರ: ಜಮ್ಮು- ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಚುರುಂಡಾ ಪ್ರದೇಶದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನಾ ಪಡೆಗಳು ವಿಫಲಗೊಳಿಸಿವೆ. ಈ ವೇಳೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಹುತಾತ್ಮನಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಾಳಿಕೋರರನ್ನು ಪತ್ತೆಹಚ್ಚಲು ಪ್ರದೇಶದಲ್ಲಿ ಒಳನುಸುಳುವಿಕೆ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಗುಂಡಿನ ಚಕಮಕಿ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಹರ್ ಘರ್ ತಿರಂಗ ಅಭಿಯಾನ – ಮನೆಯ ಮೇಲೆ ಧ್ವಜಾರೋಹಣ ಮಾಡಿದ ಅಮಿತ್ ಶಾ

    ಆ.11 ರಂದು, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಬಳಿ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ ನಂತರ ಗಾಯಗೊಂಡ ಪಾಕಿಸ್ತಾನಿ ಒಳ ನುಸುಳುಕೋರರನ್ನು ಬಂಧಿಸಲಾಗಿತ್ತು.

    ಹಿರಾನಗರ ವಲಯದ ಚಂದ್ವಾನ್ ಮತ್ತು ಕೊಥೆ ಗಡಿ ಹೊರಠಾಣೆಗಳ ನಡುವೆ ಸಂಜೆ 4 ಗಂಟೆ ಸುಮಾರಿಗೆ ಜಾಗೃತ ಪಡೆಗಳು ಒಳನುಗ್ಗುವವರನ್ನು ಗಮನಿಸಿದರು. ಅವರನ್ನು ನಿಲ್ಲಿಸಲು ಸವಾಲು ಹಾಕಲಾಯಿತು. ನುಸುಳುಕೋರರು ಪದೇ ಪದೇ ಎಚ್ಚರಿಕೆ ನೀಡಿದ್ದರೂ ಕೇಳದ ಹಿನ್ನಲೆ ಮುಂಭಾಗದ ಪೋಸ್ಟ್‌ಗಳನ್ನು ನಿರ್ವಹಿಸುತ್ತಿದ್ದ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದರು, ಇದರ ಪರಿಣಾಮವಾಗಿ ಒಳನುಗ್ಗುವವರಲ್ಲಿ ಒಬ್ಬರಿಗೆ ಗಾಯವಾಯಿತು.

  • ಪಾಕ್‌ನಿಂದ ಜಮ್ಮು & ಕಾಶ್ಮೀರ, ಪೂಂಚ್, ಉರಿ ಮೇಲೆ ಶೆಲ್ ದಾಳಿ

    ಪಾಕ್‌ನಿಂದ ಜಮ್ಮು & ಕಾಶ್ಮೀರ, ಪೂಂಚ್, ಉರಿ ಮೇಲೆ ಶೆಲ್ ದಾಳಿ

    ಶ್ರೀನಗರ: ಗುರುವಾರ ನಡೆದ ಕ್ಷಿಪಣಿ ದಾಳಿ ಬಳಿಕ ಇದೀಗ ಪಾಕ್ ಕದನ ವಿರಾಮ ಉಲ್ಲಂಘಿಸಿ ಮತ್ತೆ ದಾಳಿ ಆರಂಭಿಸಿದ್ದು, ಜಮ್ಮು & ಕಾಶ್ಮೀರ, ಪೂಂಚ್, ಉರಿ ಸೇರಿ ಹಲವು ಕಡೆಗಳಲ್ಲಿ ಶೆಲ್ ದಾಳಿ ನಡೆಸಿದೆ.

    ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಗುರುವಾರ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ದಾಳಿ ನಡೆಸಿದ್ದ ಭಾರತ ತಕ್ಕ ಉತ್ತರ ನೀಡಿತ್ತು. ಆದರೆ ಇದೀಗ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ, ಜಮ್ಮುವಿನ ಉರಿ ಪ್ರದೇಶದ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರೀ ಶೆಲ್ ದಾಳಿ ಆರಂಭಿಸಿದೆ.ಇದನ್ನೂ ಓದಿ: ಭಾರತದ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಪಾಕ್‌ ದಾಳಿ: ಕೇಂದ್ರ ಸರ್ಕಾರ ವಾಗ್ದಾಳಿ

    ಜಮ್ಮು-ಕಾಶ್ಮೀರದ ಹಂದ್ವಾರ ಜಿಲ್ಲೆಯ ನೌಗಮ್ ಸೆಕ್ಟರ್, ಉರಿ, ಪೂಂಚ್ ಬಳಿಕ ಕುಪ್ವಾರಾ ಜಿಲ್ಲೆಯ ಜಿಲ್ಲೆಯ ಕರ್ನಾ ಮತ್ತು ತಂಗ್ಧರ್ ವಲಯಗಳಲ್ಲಿ ದಾಳಿ ನಡೆಸಿಸುತ್ತಿದೆ. ಇದರ ಬೆನ್ನಲ್ಲೇ ಭಾರತದ ವಾಯು ಪಡೆ ಪಾಕಿಸ್ತಾನದ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.

    ದಾಳಿ ಆರಂಭವಾಗುತ್ತಿದ್ದಂತೆ ಜಮ್ಮು ವಿಮಾನ ನಿಲ್ದಾಣ ಹಾಗೂ ಪಠಾಣ್‌ಕೋಟ್ ವಾಯುನೆಲೆಯ ಸೈರನ್‌ಗಳು ಮೊಳಗಿದವು. ನಿಯಂತ್ರಣ ರೇಖೆಯ ಉರಿ ವಲಯದಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಇದನ್ನೂ ಓದಿ: 44 ಸೆಕೆಂಡ್‌ನಲ್ಲಿ 72 ರಾಕೆಟ್ – ಏನಿದು ಪಿನಾಕಾ ರಾಕೆಟ್ ಲಾಂಚರ್?

  • ಉರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಉರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಅಕ್ರಮವಾಗಿ ಉಗ್ರರು ನುಸುಳುತ್ತಿದ್ದ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿ, ಮೂವರನ್ನು ಹತ್ಯೆ ಮಾಡಿದ್ದಾರೆ.

    ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದ ಕಮಲಕೋಟ್ ಪ್ರದೇಶದಲ್ಲಿರುವ ಮದಿಯಾನ್ ನಾಯಕ್ ಪೋಸ್ಟ್ ಸಮೀಪ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಕಾಶ್ಮೀರ ವಲಯ ಪೊಲೀಸರು, ಸೇನೆ ಮತ್ತು ಬಾರಾಮುಲ್ಲಾ ಪೊಲೀಸರು ಉರಿ ವಲಯದ ಮದಿಯಾನ್ ನಾಯಕ್ ಪೋಸ್ಟ್ ಸಮೀಪ ಮೂವರು ನುಸುಳುಕೋರರ ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: BJPಯವರ ಭ್ರಷ್ಟಾಚಾರ ನೋಡಿದ್ರೆ ರಾಜ್ಯಕ್ಕೆ 10-15 ಪರಪ್ಪನ ಅಗ್ರಹಾರ ಜೈಲು ಬೇಕು: HDK

    ದಕ್ಷಿಣ ರಜೌರಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ನಿಯಂತ್ರಿತ ಕಾಶ್ಮೀರದಿಂದ ದಾಟಿದ ಭಯೋತ್ಪಾದಕನನ್ನು ಭಾರತೀಯ ಸೈನಿಕರು ಗುಂಡು ಹಾರಿಸಿ ಸೆರೆಹಿಡಿದ ನಾಲ್ಕು ದಿನಗಳ ನಂತರ ಇತ್ತೀಚಿನ ಘಟನೆ ನಡೆದಿದೆ. ಇದನ್ನೂ ಓದಿ: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ- 3 ದಿನದೊಳಗೆ ಎರಡನೇ ಬಾರಿ ಅರೆಸ್ಟ್ ಆದ ಶಾಸಕ ರಾಜಾಸಿಂಗ್

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಅವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿಯಿಲ್ಲ – ರಕ್ಷಣಾ ಸಚಿವಾಲಯ

    ಕಾಂಗ್ರೆಸ್ ಅವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿಯಿಲ್ಲ – ರಕ್ಷಣಾ ಸಚಿವಾಲಯ

    ನವದೆಹಲಿ: ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವುದೇ ಸುಳಿವುಗಳು ನಮಗೆ ದೊರೆತಿಲ್ಲ ಎಂದು ಭಾರತದ ರಕ್ಷಣಾ ಸಚಿವಾಲಯ (ಎಂ.ಒ.ಡಿ) ಸ್ಪಷ್ಟಪಡಿಸಿದೆ.

    ಕಾಶ್ಮೀರ ಮೂಲದ ರೋಹಿತ್ ಚೌಧರಿ ಎಂಬವರು ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.) ಯ ಆಡಿಯಲ್ಲಿ 2004 ರಿಂದ 2014ರ ವರೆಗೆ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿ ನೀಡಬೇಕು ಎಂದು ರಕ್ಷಣಾ ಸಚಿವಾಯಲಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಇಂದು ಉತ್ತರಿಸಿರುವ ಸಚಿವಾಲಯ, 2004 ರಿಂದ 2014ರ ವರೆಗೆ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಮಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ ಎಂದು ಹೇಳಿದೆ.

    2016 ಸೆಪ್ಟಂಬರ್ 29 ರಂದು ಉತ್ತರ ಕಾಶ್ಮೀರದ ಉರಿಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಿಟ್ಟರೆ ನಮಗೆ 2004 ರಿಂದ 2014ರ ಅವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವ ರೀತಿಯ ಮಾಹಿತಿಗಳೂ ಸಿಕಿಲ್ಲ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ರೋಹಿತ್ ಚೌಧರಿ, ಕಾಂಗ್ರೆಸ್ ನಾಯಕರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಯುಪಿಎ ಆಡಳಿತದ ಅವಧಿಯಲ್ಲಿ ಯಾವುದೇ ಸರ್ಜಿಕಲ್ ಸ್ಟ್ರೈಕ್ ಆಗಿಲ್ಲ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಇತ್ತೀಚೆಗೆ ತಮ್ಮ ಆಡಳಿತದ ಅವಧಿಯಲ್ಲಾದ 6 ಸರ್ಜಿಕಲ್ ಸ್ಟ್ರೈಕ್‍ಗಳ ಬಗ್ಗೆ ಚಿತ್ರಗಳ ಸಮೇತ ವಿವರಗಳನ್ನು ಬಿಡುಗಡೆ ಮಾಡಿತ್ತು. ನಮ್ಮ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್‍ಗಳು ನಡೆದಿವೆ. ಆದರೆ ನಾವು ಅದನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಅವರಿಗೆ ಟಾಂಗ್ ನೀಡಿದ್ದರು.

    ಇದಕ್ಕೆ ಪ್ರತಿಕ್ರಿಸಿದ ಮೋದಿ ಸಮಾವೇಶವೊಂದರಲ್ಲಿ ಕಾಂಗ್ರೆಸ್‍ನವರು ಕಾಗದ ಚೂರು ಮತ್ತು ವಿಡಿಯೋ ಗೇಮ್‍ಗಳಲ್ಲಿ ಮಾತ್ರ ಸರ್ಜಿಕಲ್ ಸ್ಟ್ರೈಕ್ ಮಾಡಬಲ್ಲರು ಎಂದು ಕುಟುಕಿದ್ದರು. ಇದನ್ನು ಓದಿ: ಕಾಂಗ್ರೆಸ್ ಪೇಪರ್‌ನಲ್ಲಿ ಮಾತ್ರ ಸರ್ಜಿಕಲ್ ಸ್ಟ್ರೈಕ್ ಮಾಡಿ ಮೀಟೂ ಅಂತ ಹೇಳ್ತಿದೆ: ಮೋದಿ

  • How’s the josh  ಗೆ ಪುಟ್ಟ ಕಂದಮ್ಮ ನೀಡ್ತು ಸಖತ್ ಪ್ರತಿಕ್ರಿಯೆ

    How’s the josh ಗೆ ಪುಟ್ಟ ಕಂದಮ್ಮ ನೀಡ್ತು ಸಖತ್ ಪ್ರತಿಕ್ರಿಯೆ

    ಮುಂಬೈ: ಬಾಲಿವುಡ್ ಸೂಪರ್ ಹಿಟ್ ಸಿನಿಮಾ ‘ಉರಿ-ದ ಸರ್ಜಿಕಲ್ ಸ್ಟ್ರೈಕ್’ ಬಿಡುಗಡೆಯಾದ ಬಳಿಕ ‘ಹೌ ದ ಜೋಶ್’ ಡೈಲಾಗ್ ಸಖತ್ ಟ್ರೆಂಡ್ ಆಗಿತ್ತು. ಈ ಡೈಲಾಗ್ ಸಂಸತ್ತಿನಲ್ಲಿ ಘರ್ಜಿಸಿತ್ತು. ಸಾಮಾನ್ಯ ಜನರು ಸಾಮಾಜಿಕ ಜಾಲತಾಣದಲ್ಲಿ ಡಬ್ ಮ್ಯಾಶ್ ಮತ್ತು ಟಿಕ್ ಟಾಕ್ ನಲ್ಲಿ ಡೈಲಾಗ್ ಹಾಕಿಕೊಂಡು ಖುಷಿಪಟ್ಟಿದ್ದಾರೆ. ಪುಟ್ಟ ಮಗು ‘ಹೌ ದ ಜೋಶ್’ ಕೇಳಿದ ಕೂಡಲೇ ನಗುತ್ತದೆ. ಈ ಸುಂದರ ವಿಡಿಯೋವನ್ನು ನಟ ವಿಕ್ಕಿ ಕೌಶಲ್ ತಮ್ಮ ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ವಿಡಿಯೋ ಅಪ್ಲೋಡ್ ಮಾಡಿಕೊಂಡ 24 ಗಂಟೆಯಲ್ಲಿ 12 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತುಂಬಾ ಚೆನ್ನಾಗಿದೆ, ಹೈ ಸರ್ ಎಂದು ಕಮೆಂಟ್ ಹಾಕುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

    ಜನವರಿ 11ರಂದು ಬಿಡುಗಡೆಗೊಂಡಿದ್ದ ಉರಿ ಸಿನಿಮಾ ಇದೂವರೆಗೂ 242 ಕೋಟಿಗೂ ಅಧಿಕ ಹಣವನ್ನು ತನ್ನ ಗಲ್ಲಾ ಪೆಟ್ಟಿಗೆಯಲ್ಲಿ ತುಂಬಿಸಿಕೊಂಡಿದೆ. ಇಂದಿಗೂ ಸಹ ಉರಿ ಚಿತ್ರದ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. 2016ರಲ್ಲಿ ಉಗ್ರರು ಉರಿ ಸೇನಾಶಿಬಿರದ ಮೇಲೆ ದಾಳಿಯ ಪ್ರತಿಕಾರವಾಗಿ ಭಾರತದ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿ ಯಶಸ್ವಿಯಾಗಿ ಹಿಂದಿರುಗಿತ್ತು. ಅದೆ ಕಥೆಯನ್ನೇ ನಿರ್ದೇಶಕ ಆದಿತ್ಯ ದಾರ್ ಸಿನಿಮಾವಾಗಿ ಬದಲಿಸಿ ತೆರೆಯ ಮೇಲೆ ತಂದಿದ್ದರು.

    https://www.instagram.com/p/Bu1F4omlPTr/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉರಿ ಸಿನಿಮಾ ನೋಡಿ ಪೇಜಾವರಶ್ರೀ ಕಣ್ಣೀರು!

    ಉರಿ ಸಿನಿಮಾ ನೋಡಿ ಪೇಜಾವರಶ್ರೀ ಕಣ್ಣೀರು!

    ಉಡುಪಿ: ದೇಶಭಕ್ತಿ ಮತ್ತು ಸೈನಿಕರ ಜೀವನಗಾಥೆಯನ್ನು ಸಾರುವ ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರವನ್ನು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ನೋಡಿದ್ದಾರೆ. ಚಿತ್ರ ವೀಕ್ಷಣೆ ವೇಳೆ ಮೂರ್ನಾಲ್ಕು ಬಾರಿ ಸ್ವಾಮೀಜಿ ಕಣ್ಣೀರು ಹಾಕಿದ್ದಾರೆ.

    ಸ್ವಾಮೀಜಿ ಗುರುವಾರ ರಾತ್ರಿ 10 ಗಂಟೆಗೆ ಮಣಿಪಾಲದ ಭಾರತ್ ಮಾಲ್ ನಲ್ಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ದೇಶಭಕ್ತಿ ಸಾರುವ ಚಿತ್ರ ಇದಾಗಿದ್ದು, ಪೇಜಾವರ ಶಿಷ್ಯ ವಿಶ್ವ ಪ್ರಸನ್ನ ತೀರ್ಥರು, ಸೋದೆ ಮಠದ ವಿಶ್ವವಲ್ಲಭ ತೀರ್ಥರ ಜೊತೆಯಾಗಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ನೂರಾರು ಶಿಷ್ಯರ ಜೊತೆಗೆ ಚಿತ್ರ ವೀಕ್ಷಿಸುವ ವೇಳೆ ಸ್ವಾಮೀಜಿ ಅವರು ಎರಡು ಮೂರು ಬಾರಿ ಕಣ್ಣೀರು ಹಾಕಿದ್ದಾರೆ.

    ಚಿತ್ರ ವೀಕ್ಷಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಉರಿ ಸಿನಿಮಾವನ್ನು ನೋಡಿದೆ. ಸಿನಿಮಾ ನೋಡಿ, ಸೈನಿಕರ ಬಗ್ಗೆ ಬಹಳ ಅಭಿಮಾನ ಗೌರವ ಬೆಳೆಯಿತು. ಸಿನಿಮಾದಲ್ಲಿ ಯೋಧರ ಕೆಲಸದ ಚಿತ್ರಣ ಸಿಕ್ಕಿತು. ಯೋಧರ ಕುಟುಂಬದವರು ಸರ್ಕಾರದ ಸಂಬಳ ಪಡೆಯುವವರು ಬಹಳ ಜನ ಇದ್ದಾರೆ. ಯೋಧರಷ್ಟು ಶ್ರಮ ವೇದನೆ ಪಡುವವರು ಯಾರೂ ಇಲ್ಲ ಎಂಬ ಅನುಭವವಾಯಿತು ಎಂದರು.

    ಯೋಧರು ಜೀವನವನ್ನೇ ದೇಶದ ಜನಕ್ಕೆ ಮುಡಿಪಾಗಿಟ್ಟಿದ್ದಾರೆ. ಅವರ ಕೆಲಸಕ್ಕೆ ನಾವೆಲ್ಲ ತಲೆಬಾಗಬೇಕು. ಉರಿ ಚಿತ್ರ ನೋಡುತ್ತಾ ಮೂರ್ನಾಲ್ಕು ಬಾರಿ ಕಣ್ಣೀರು ಬಂತು ಎಂದು ಸ್ವಾಮೀಜಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನ ಮಂಡಲ ಅಧಿವೇಶನಕ್ಕೆ ಚಕ್ಕರ್ – ಚಲನಚಿತ್ರಕ್ಕೆ ಶಾಸಕ ಹಾಜರ್

    ವಿಧಾನ ಮಂಡಲ ಅಧಿವೇಶನಕ್ಕೆ ಚಕ್ಕರ್ – ಚಲನಚಿತ್ರಕ್ಕೆ ಶಾಸಕ ಹಾಜರ್

    ವಿಜಯಪುರ: ವಿಧಾನ ಮಂಡಲ ಅಧಿವೇಶನಕ್ಕೆ ಚಕ್ಕರ್ ಹಾಕಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚಲನಚಿತ್ರ ವೀಕ್ಷಣೆ ಮಾಡಿದ್ದಾರೆ.

    ಬಸನಗೌಡ ಪಾಟೀಲ್ ಯತ್ನಾಳ್ ‘ಉರಿ’ ಸಿನಿಮಾವನ್ನು ವಿಜಯಪುರದ ಅಪ್ಸರಾ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಾವರ್ಜನಿಕರಿಗೂ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಬಸನಗೌಡ ಪಾಟೀಲ್ ಅವಕಾಶ ಒದಗಿಸಿದ್ದು, ಸಾರ್ವಜನಿಕರೊಂದಿಗೆ ಕುಳಿತು ಚಿತ್ರವನ್ನು ವೀಕ್ಷಿಸಿದ್ದಾರೆ. ಇದನ್ನೂ ಓದಿ: ಅಧಿವೇಶನದ ಮೊದಲ ದಿನವೇ 12 ಶಾಸಕರು ಗೈರು

    ಸಿನಿಮಾ ವೀಕ್ಷಿಸಿದ ಬಳಿಕ ಮಾತನಾಡಿದ ಯತ್ನಾಳ್, ಇದೊಂದು ದೇಶಾಭಿಮಾನದ ಚಿತ್ರವಾಗಿದೆ. ಇಂದು ಸಿನಿಮಾದ ಕೊನೆಯ ಪ್ರದರ್ಶನವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಚಿತ ವೀಕ್ಷಣೆಗೆ ನಾವು ಅವಕಾಶ ಕಲ್ಪಿಸಿದ್ದೆವು. ನಮಗಾಗಿ ದೇಶದ ಗಡಿಯಲ್ಲಿ ಪ್ರತಿನಿತ್ಯ ಹೋರಾಡುವ ಸೈನಿಕರ ಕಾರ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.

    ಇನ್ನೂ ಇವತ್ತಿನ ಅಧಿವೇಶನ ಅಷ್ಟೊಂದು ಪ್ರಾಮುಖ್ಯತೆ ಹೊಂದಿಲ್ಲ. ಗುರುವಾರದ್ದು ಮುಖ್ಯವಾಗಿರುತ್ತದೆ. ಆದ್ದರಿಂದ ಗುರುವಾರ ನಾನು ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಅಧಿವೇಶನಕ್ಕೆ ಬಾರದ ಬಿಜೆಪಿ ಶಾಸಕರು ನನ್ನ ಹಾಗೆ ಯಾವುದೋ ಒಳ್ಳೆಯ ಕೆಲಸದಲ್ಲಿರಬೇಕು. ನಮ್ಮಲ್ಲಿ ಯಾವುದೇ ಅತೃಪ್ತಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಯತ್ನಾಳ್ ಟಾಂಗ್ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv