Tag: Urban Naxals

  • ಮೊದಲು ನಗರ ನಕ್ಸಲರ ವಿರುದ್ಧ ಹೋರಾಡಬೇಕು – ವಿಪಕ್ಷಗಳ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ

    ಮೊದಲು ನಗರ ನಕ್ಸಲರ ವಿರುದ್ಧ ಹೋರಾಡಬೇಕು – ವಿಪಕ್ಷಗಳ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ

    – ಜಾತಿ, ಸಮುದಾಯಗಳ ಹೆಸರಿನಲ್ಲಿ ದೇಶ ಒಡೆಯುತ್ತಿದ್ದಾರೆ ಎಂದ ಪ್ರಧಾನಿ

    ನವದೆಹಲಿ: ಭಾರತದ ಒಳಗೆ ಮತ್ತು ಹೊರಗೆ, ಕೆಲವು ಶಕ್ತಿಗಳು ತಮ್ಮ ರಾಜಕೀಯ ಉದ್ದೇಶಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಆದ್ದರಿಂದ ನಾವು ನಗರ ನಕ್ಸಲರನ್ನು (Urban Naxals) ಗುರುತಿಸಿ, ಅವರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದರು.

    ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್‌ (National Unity Day) ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಅವರು ಮಾತನಾಡಿದರು. ರಾಷ್ಟ್ರೀಯ ಏಕತೆಗೆ ಕರೆ ನೀಡಿದ ಪ್ರಧಾನಿ ಮೋದಿ, ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ಅದರ ಮೌಲ್ಯವನ್ನು ಒತ್ತಿ ಹೇಳಿದರು. ಇದನ್ನೂ ಓದಿ: 2 ದಿನಗಳಿಂದ ನಾಪತ್ತೆಯಾಗಿದ್ದ 50ರ ಮಹಿಳೆಯ ಮೃತದೇಹ 6 ತುಂಡುಗಳಾಗಿ ಪತ್ತೆ

    ಬಳಿಕ ಮಾತನಾಡುತ್ತಾ, ʻರಾಷ್ಟ್ರೀಯ ಏಕತಾ ದಿವಸ್’ ಹಾಗೂ ದೀಪಾವಳಿ ಹಬ್ಬದ (Deepavali Festival) ಶುಭಾಶಯ ಕೋರಿದರು. ಪ್ರಪಂಚದ ಹಲವಾರು ದೇಶಗಳಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ. ಈ ಹಬ್ಬವು ಭಾರತವನ್ನು ಇಡೀ ವಿಶ್ವದೊಂದಿಗೆ ಜೋಡಿಸಿದೆ. ದೇಶಗಳಲ್ಲಿ ಇದನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ಹೊತ್ತಿನಲ್ಲೇ ಏಕತಾ ದಿವಸ್‌ ಆಚರಣೆ ಮಾಡುತ್ತಿರುವುದು ವಿಶಿಷ್ಟ ಸಂಗತಿ ಎಂದು ಶ್ಲಾಘಿಸಿದರು.

    ವಿಕ್ಷಗಳ ವಿರುದ್ಧ ಕೆಂಡಾಮಂಡಲ:
    ಇದೇ ವೇಳೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಮಾತನಾಡಿದ ಮೋದಿ, ಕೆಲವು ಶಕ್ತಿಗಳಿಂದ ಭಾರತದ ಒಳಗೆ ಮತ್ತು ಹೊರಗೆ ತೊಂದರೆಯಾಗಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಘನತೆಗೆ ಹಾನಿ ಮಾಡುವುದು ಸೇರಿದಂತೆ ದೇಶದಲ್ಲಿ ಅವ್ಯವಸ್ಥೆ ಮತ್ತು ಅಸ್ಥಿರತೆ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ತಿವಿದರು.

    ಭಾರತದ ಆರ್ಥಿಕ ಹಿತಾಸಕ್ತಿಗಳಿಗೆ ಹಾನಿ ಮಾಡುವತ್ತ ಕೆಲ ಶಕ್ತಿಗಳು ಗಮನಹರಿಸಿವೆ. ಅಲ್ಲದೇ ವಿಶ್ವದಾದ್ಯಂತ ಭಾರತದ ಬಗ್ಗೆ ತಪ್ಪು ಸಂದೇಶ ಹರಡಲು ಬಯಸುತ್ತಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಗುರಿ ಹೊಂದಿದ್ದಾರೆ. ಜೊತೆಗೆ ಜಾತಿ, ಸಮುದಾಯಗಳ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಭಾರತೀಯ ಸಮಾಜ ಮತ್ತು ಅದರ ಏಕತೆಯನ್ನು ದುರ್ಬಲಗೊಳಿಸುವುದು ಅವರ ಏಕೈಕ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

    ಮುಂದುವರಿದು, ಭಾರತ ಅಭಿವೃದ್ಧಿ ಹೊಂದುವುದನ್ನು ಅವರು ಎಂದಿಗೂ ಬಯಸುವುದಿಲ್ಲ. ಏಕೆಂದರೆ ʻಬಡ ಭಾರತ, ದುರ್ಬಲ ಭಾರತʼದ ರಾಜಕೀಯ ಅವರಿಗೆ ಸರಿಹೊಂದುತ್ತದೆ. ಹಾಗಾಗಿ ಅವರು ಸಂವಿಧಾನದ ಹೆಸರಿನಲ್ಲಿ ಭಾರತ ದೇಶವನ್ನ ಒಡೆಯುತ್ತಿದ್ದಾರೆ. ನಾವು ಈ ನಗರ ನಕ್ಸಲರ ಮೈತ್ರಿಯನ್ನು ಗುರುತಿಸಿ ಅವರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಆರ್‌.ಆರ್‌ ನಗರ ದರ್ಶನ್ ನಿವಾಸದ ಬಳಿ ಪೊಲೀಸರ ಬಿಗಿ ಭದ್ರತೆ – ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ

    ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ:
    ಹಿಂದಿನ ಕಾಂಗ್ರೆಸ್‌ ಸರ್ಕಾರದ ನೀತಿಗಳು ದೇಶದಲ್ಲಿ ಏಕೆತೆಯ ಭಾವನೆಯನ್ನು ದುರ್ಬಲಗೊಳಿಸಿದೆ. ಆದ್ರೆ ನಮ್ಮ ಸರ್ಕಾರ ಕಳೆದ 10 ವರ್ಷಗಳಲ್ಲಿ, ಉತ್ತಮ ಆಡಳಿತದ ಹೊಸ ಮಾದರಿಯು ದೇಶದಲ್ಲಿ ತಾರತಮ್ಯದ ಸಾಧ್ಯತೆಯನ್ನು ಕೊನೆಗೊಳಿಸಿದೆ. ಏಕೆಂದರೆ ನಾವು ʻಸಬ್ಕಾ ಸಾಥ್ ಸಬ್ಕಾ ವಿಕಾಸ್ʼ ತತ್ವದಲ್ಲಿ ನಂಬಿಕೆ ಹೊಂದಿದ್ದೇವೆ ಎಂದು ಪ್ರಧಾನಿ ಹೇಳಿದರು. ಇದನ್ನೂ ಓದಿ: ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ – 2 ಕೋಟಿಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಮುಂಬೈನಲ್ಲಿ ಅರೆಸ್ಟ್‌

  • ಯುವಜನರ ಜೀವನ ನಾಶಮಾಡಲು ಬಿಡಲ್ಲ: ಮೋದಿ ಎಚ್ಚರಿಕೆ

    ಯುವಜನರ ಜೀವನ ನಾಶಮಾಡಲು ಬಿಡಲ್ಲ: ಮೋದಿ ಎಚ್ಚರಿಕೆ

    ಗಾಂಧಿನಗರ: ಎಷ್ಟೇ ನಗರ ನಕ್ಸಲರು (Urban Naxals) ಬಂದರೂ ಗುಜರಾತ್ (Gujarat) ರಾಜ್ಯ ಯುವಜನರ ಜೀವನ ನಾಶ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Naredra Modi) ಎಚ್ಚರಿಸಿದರು.

    ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆ (Gujarat Assembly Polls) ಹಿನ್ನೆಲೆ ಭರೂಚ್ ಜಿಲ್ಲೆಯಲ್ಲಿ ಬೃಹತ್ ಔಷಧೋದ್ಯಾನ ಉದ್ಘಾಟಿಸಿ ಅವರು ಮಾತನಾಡಿದರು. ಇದನ್ನೂ ಓದಿ: ‘ಗೋವನ್ನು’ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಮನವಿ – ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

    ನಗರ ನಕ್ಸಲರು ತಮ್ಮ ರೂಪ ಬದಲಿಸಿಕೊಂಡು ರಾಜ್ಯ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಮುಗ್ಧ ಹಾಗೂ ಶಕ್ತಿಯುತ ಯುವಕರು (Youth) ತಮ್ಮನ್ನು ಅನುಸರಿಸುವಂತೆ ದಾರಿ ತಪ್ಪಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ನಮ್ಮ ಯುವ ಪೀಳಿಗೆಯನ್ನ ನಾಶಮಾಡಲು ಬಿಡುವುದಿಲ್ಲ. ದೇಶವನ್ನು ನಾಶ ಮಾಡುವ ಕೆಲಸಕ್ಕೆ ಕೈ ಹಾಕಿರುವ ಅರ್ಬನ್ ನಕ್ಸಲರ ವಿರುದ್ಧ ನಮ್ಮ ಮಕ್ಕಳಿಗೆ ಈಗಲೇ ಎಚ್ಚರಿಕೆ ನೀಡಬೇಕು. ಅವರು ವಿದೇಶಿ ಶಕ್ತಿಗಳ ಏಜೆಂಟ್‌ಗಳಾಗಿದ್ದಾರೆ. ಗುಜರಾತ್ ಅವರ ವಿರುದ್ಧ ತಲೆ ಕೆಡಿಸಿಕೊಳ್ಳುವುದಿಲ್ಲ, ಅಂಥವರನ್ನು ನಾಶ ಮಾಡುತ್ತದೆ ಎಂದು ಕಿಡಿಕಾರಿದರು.

    ಇದೇ ವೇಳೆ 2014ರಲ್ಲಿ ನಾನು ಪ್ರಧಾನಿಯಾಗಿ (Prime Minister) ಅಧಿಕಾರ ವಹಿಸಿಕೊಂಡಾಗ ಭಾರತದ ಆರ್ಥಿಕತೆ ವಿಶ್ವದಲ್ಲಿ 10ನೇ ಸ್ಥಾನದಲ್ಲಿತ್ತು. ಆದರೆ ಈಗ 5ನೇ ಸ್ಥಾನದಲ್ಲಿದೆ ಎಂದು ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ನಗರ ನಕ್ಸಲರ ಅಪಪ್ರಚಾರದಿಂದ ಸರ್ದಾರ್‌ ಸರೋವರ ಡ್ಯಾಂ ನಿರ್ಮಾಣ ವಿಳಂಬವಾಯಿತು: ಮೋದಿ

    ನಗರ ನಕ್ಸಲರ ಅಪಪ್ರಚಾರದಿಂದ ಸರ್ದಾರ್‌ ಸರೋವರ ಡ್ಯಾಂ ನಿರ್ಮಾಣ ವಿಳಂಬವಾಯಿತು: ಮೋದಿ

    ನವದೆಹಲಿ: ನಗರ ನಕ್ಸಲರು ಗುಜರಾತ್‌ನಲ್ಲಿ ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯ ವಿರುದ್ಧ ಪ್ರಚಾರ ನಡೆಸಿದ್ದರಿಂದ ನಿರ್ಮಾಣ ತಡವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಗುಜರಾತಿನ ನರ್ಮದಾ ಜಿಲ್ಲೆಯಲ್ಲಿ ಕೇಂದ್ರ ಪರಿಸರ ಸಚಿವಾಲಯದಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ ಅವರು ವಿವಿಧ ರಾಜ್ಯಗಳ ಪರಿಸರ ಸಚಿವರನ್ನು ಉದ್ದೇಶಿಸಿ ಮಾತನಾಡಿದರು.

    ನಗರ ನಕ್ಸಲರು ಮತ್ತು ರಾಜಕೀಯ ಪಕ್ಷದ ಬೆಂಬಲ ಪಡೆದ ಅಭಿವೃದ್ಧಿ ವಿರೋಧಿಗಳು ಅಣೆಕಟ್ಟು ವಿರುದ್ಧ ಅಪಪ್ರಚಾರ ನಡೆಸಿದರು. ಅಣೆಕಟ್ಟು ನಿರ್ಮಾಣದಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಹಲವು ವರ್ಷಗಳ ಕಾಲ ಅಭಿಯಾನ ನಡೆಸಿದರು ಎಂದು ದೂಷಿಸಿದರು. ಇದನ್ನೂ ಓದಿ: ರಾಷ್ಟ್ರೀಯ ಮೇಯರ್ ಸಮ್ಮೇಳನ – ಉಡುಪಿ ನಗರಸಭೆಯನ್ನು ಹಾಡಿಹೊಗಳಿದ ಮೋದಿ

    ಅಪಪ್ರಚಾರದಿಂದ ನಿರ್ಮಾಣ ಕಾರ್ಯ ವಿಳಂಬವಾಗಿ ಭಾರೀ ಪ್ರಮಾಣದ ಹಣ ವ್ಯರ್ಥವಾಯಿತು. ಅಣೆಕಟ್ಟು ಪೂರ್ಣಗೊಂಡ ಬಳಿಕ ಅವರ ಹೋರಾಟ ಎಷ್ಟು ಸಂಶಯಾಸ್ಪದವಾಗಿದೆ ಎಂಬುದನ್ನು ನೀವೇ ಚೆನ್ನಾಗಿ ನಿರ್ಣಯಿಸಬಹುದು ಎಂದು ಹೇಳಿದರು.

    ಈ ವರ್ಷದ ಕೊನೆಯಲ್ಲಿ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲೇ ಪ್ರಧಾನಿ ಮೋದಿ ಬಹಿರಂಗವಾಗಿ ನಗರ ನಕ್ಸಲರು ಎಂದು ಡ್ಯಾಂ ನಿರ್ಮಾಣದ ವಿರುದ್ಧ ಹೋರಾಟ ಮಾಡಿದವರನ್ನು ಸಂಬೋಧಿಸಿದ್ದಾರೆ.

    1987ರಲ್ಲಿ ನರ್ಮದಾ ಜಲಾಶಯ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಈ ವೇಳೆ ಭಾರೀ ಹೋರಾಟಗಳು ನಡೆದ ಪರಿಣಾಮ 1995ರಲ್ಲಿ ಸುಪ್ರೀಂ ಕೋರ್ಟ್‌ 139 ಮೀಟರ್‌ ಎತ್ತರದ ಜಲಾಶಯ ನಿರ್ಮಾಣ ಕಾರ್ಯಕ್ಕೆ ತಡೆ ನೀಡಿತು. 2001ರಲ್ಲಿ ಸುಪ್ರೀಂ ಕೋರ್ಟ್‌ ಡ್ಯಾಂ ಎತ್ತರವನ್ನು 111 ಮೀಟರ್‌ಗೆ ನಿಗದಿ ಮಾಡಿತು. ಬಳಿಕ 2006ರಲ್ಲಿ ಕೋರ್ಟ್‌ 123 ಮೀಟರ್‌ ಎತ್ತರ ಏರಿಸಲು ಅನುಮತಿ ನೀಡಿತು. ಕೊನೆಗೆ 2017ರಲ್ಲಿ ಪೂರ್ಣ ಮಟ್ಟವಾದ 139 ಮೀಟರ್‌ಗೆ ಏರಿಸಲು ಅನುಮತಿ ಕೊಟ್ಟಿತು. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಣೆಕಟ್ಟು ಲೋಕಾರ್ಪಣೆ ಮಾಡಿದರು.

    ಕಚ್‌ ಮತ್ತು ಸೌರಾಷ್ಟ್ರದ ಬರ ಪೀಡಿತ ಹೊಂದಿರುವ 1.9 ದಶಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಜಲಾಶಯ ನಿರ್ಮಾಣ ಮಾಡಲಾಗಿದೆ. ಈ ಜುಲೈ ತಿಂಗಳಿನಲ್ಲಿ ನರ್ಮದಾ ಅಣೆಕಟ್ಟೆಯ ನೀರು ಕಾಲುವೆಯ ಮೂಲಕ 750 ಕಿ.ಮೀ. ದೂರದಲ್ಲಿರುವ ಕಚ್ ಜಿಲ್ಲೆಯ ಮಾಂಡ್ವಿ ತಾಲೂಕಿನ ಮೋಡ್ ಕುಬಾ ಗ್ರಾಮವನ್ನು ತಲುಪಿತ್ತು.

    Live Tv
    [brid partner=56869869 player=32851 video=960834 autoplay=true]