Tag: Urban Development Department

  • ಕಟ್ಟಡ ಕುಸಿದ ಪ್ರಕರಣದಲ್ಲಿ ಟ್ವಿಸ್ಟ್ – ದೂರು ನೀಡಿದ್ದ ಅಧಿಕಾರಿಯೇ ಅಮಾನತು!

    ಕಟ್ಟಡ ಕುಸಿದ ಪ್ರಕರಣದಲ್ಲಿ ಟ್ವಿಸ್ಟ್ – ದೂರು ನೀಡಿದ್ದ ಅಧಿಕಾರಿಯೇ ಅಮಾನತು!

                                     ಸಂತೋಷ ಆಣಿಶೆಟ್ಟರ್                          ಮುಕುಂದ ಜೋಶಿ

    ಧಾರವಾಡ: ಜಿಲ್ಲೆಯಲ್ಲಿ ನಿರ್ಮಾಣ ಹಂತದ ಕಟ್ಟಡ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಘಟನೆ ಸಂಬಂಧ ಪೊಲೀಸರಿಗೆ ದೂರು ಕೊಟ್ಟಿದ್ದ ಅಧಿಕಾರಿಯನ್ನೇ ಅಮಾನತು ಮಾಡಲಾಗಿದೆ.

    ಪಾಲಿಕೆಯ ವಲಯ ಆಯುಕ್ತ ಮುಕುಂದ ಜೋಶಿ ಮತ್ತು ಸಹಾಯಕ ಆಯುಕ್ತ ಸಂತೋಷ ಆಣಿಶೆಟ್ಟರ್ ನನ್ನು ಅಮಾನತು ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಧಾರವಾಡ ದುರಂತ: 4 ದಿನಗಳ ಬಳಿಕ ಬದುಕಿಬಂದ ಯುವಕ – ಸಾವಿನ ಸಂಖ್ಯೆ 15ಕ್ಕೆ ಏರಿಕೆ

    ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಮಾಲೀಕರ ಮತ್ತು ಎಂಜಿನಿಯರ್ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಸಂತೋಷ ಆನಿಶೆಟ್ಟರ್ ದೂರು ನೀಡಿದ್ದನು. ಸಂತೋಷ ಆನಿಶೆಟ್ಟರ್ ವಲಯ ಕಚೇರಿ 3ರ ಸಹಾಯಕ ಆಯುಕ್ತನಾಗಿದ್ದನು. ಈ ವಲಯದ ಮೂಲಕವೇ ಕಟ್ಟಡಕ್ಕೆ ಅನುಮತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಈಗ ದೂರುದಾರನೂ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವುದರಿಂದ ಆನಿಶೆಟ್ಟರ್ ನನ್ನು ಅಧಿಕಾರದಿಂದ ಅಮಾನತು ಮಾಡಲಾಗಿದೆ.

    ಕಟ್ಟಡ ದುರಂತದಲ್ಲಿ ಇದೂವರೆಗೆ 15 ಜನರು ಮೃತಪಟ್ಟಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಆರೋಪಿಗಳಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಸವರಾಜ ನಿಗದಿ ಮತ್ತು ಗಂಗಪ್ಪ ಸಿಂತ್ರೆ  ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಉಪನಗರ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ಧಾರವಾಡದ ಜೆಎಂಎಫ್‍ಸಿ ನ್ಯಾಯಾಲಯ ಆದೇಶದ ಮೇರೆಗೆ ಉಳಿದ ರವಿ ಸಬರದ್, ಮಹಾಬಳೇಶ್ವರ ಮತ್ತು ವಿವೇಕ್ ಪವಾರ್ ಎಂಬ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

  • ನಗರಾಭಿವೃದ್ಧಿ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ನಗರಾಭಿವೃದ್ಧಿ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಒಟ್ಟು ಅನುದಾನ – 18,127 ಕೋಟಿ ರೂ.

    ಬೆಂಗಳೂರು ಅಭಿವೃದ್ಧಿಗೆ

    > ಬೆಂಗಳೂರು ಮಹಾನಗರ ಪಾಲಿಕೆ 690 ಕೋಟಿ ವೆಚ್ಚದಲ್ಲಿ 80 ಕಿಲೋಮೀಟರ್ ಉದ್ದದ 43 ರಸ್ತೆಗಳನ್ನು ಶ್ರೇಷ್ಠ ದರ್ಜೆ ಮಟ್ಟದಲ್ಲಿ ಅಭಿವೃದ್ಧಿ ಹಾಗೂ ಪಾದಚಾರಿ ಸೌಲಭ್ಯ ಮೇಲ್ದರ್ಜೆಗೆ.
    > ಟೆಂಡರ್ ಶ್ಯೂರ್ ಮಾದರಿಯ 25 ಕಿಲೋಮೀಟರ್ ಉದ್ದದ್ದ 25 ಅಂತರ್ ಸಂಪರ್ಕ ರಸ್ತೆಗಳನ್ನು ಸಮಗ್ರವಾಗಿ ಮೇಲ್ದರ್ಜೆಗೇರಿಸುವುದು.
    > ಸಂಚಾರ ದಟ್ಟಣೆ ಇರುವ 12 ಕಾರಿಡಾರ್‍ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 150 ಕೋಟಿ ರೂ.
    > 200 ಕಿ.ಮೀ ಫುಟ್‍ಪಾತ್‍ಗಳ ಅಭಿವೃದ್ಧಿಗೆ 200 ಕೋಟಿ ರೂ.
    > ತಡೆರಹಿತ ವಾಹನ ಸಂಚಾರಕ್ಕೆ ಆಯ್ದ 9 ಜಂಕ್ಷನ್‍ಗಳಲ್ಲಿ ಗ್ರೇಡ್ ಸೆಪರೇಟರ್ ನಿರ್ಮಾಣ – 420 ಕೋಟಿ ರೂ. ಅನುದಾನ
    > ರೈಲ್ವೇ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣಕ್ಕೆ ಬಿಬಿಎಂಪಿಗೆ 150 ಕೋಟಿ ರೂ .
    > ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್ ನಿರ್ಮಾಣ – 80 ಕೋಟಿ ರೂ.
    > 1000 ಸಾರ್ವಜನಿಕ ಶೌಚಾಲಯಗಳ ನಿರ್ಮಾಣ – 50 ಕೋಟಿ ರೂ.
    > ಬೃಹತ್ ಮಳೆ ನೀರು ಚರಂಡಿ ಅಭಿವೃದ್ಧಿಗೆ – 300 ಕೋಟಿ ರೂ.
    > ರಸ್ತೆ ಉಬ್ಬು, ಲೇನ್ ಮಾರ್ಕಿಂಗ್, ಜಂಕ್ಷನ್ ಅಭಿವೃದ್ದಿ ಇತ್ಯಾದಿ ಸಂಚಾರಿ ಎಂಜಿನಿಯರಿಂಗ್ ಕಾಮಾಗಾರಿಗಳಿಗೆ -200 ಕೋಟಿ ರೂ.
    > ನಮ್ಮ ಕ್ಯಾಟಿಂನ್‍ಗೆ 100ಕೋಟಿ – ಬೆಂಗಳೂರಿನ 198 ವಾರ್ಡ್‍ಗಳಲ್ಲಿ ತಲಾ ಒಂದು ಕ್ಯಾಟಿಂನ್- 5 ರೂ. ಗೆ ತಿಂಡಿ, 10 ರೂ. ಗೆ ಮಧ್ಯಾಹ್ನ, ರಾತ್ರಿ ಊಟ

    ನಮ್ಮ ಮೆಟ್ರೋ

    > ಮೆಟ್ರೋ ಹಂತ 1ರ 42.3 ಕಿ.ಮೀ ಉದ್ದದ ಇಡೀ ಮಾರ್ಗ 2017ರ ಏಪ್ರಿಲ್‍ಗೆ ಪೂರ್ಣಗೊಳಿಸುವುದು.
    > ಮೆಟ್ರೋ ಹಂತ 2 – 72.095 ಕಿ.ಮೀ.ಗೆ ಅಂದಾಜು ವೆಚ್ಚ – 26,406 ಕೋಟಿ ರೂ.
    > ಮೆಟ್ರೋ ಹಂತ 2ಎ – ಸಿಲ್ಕ್ ಬೋರ್ಡ್‍ನಿಂದ ಕೆಆರ್ ಪುರಂ ಜಂಕ್ಷನ್ – 17 ಕಿಲೋಮೀಟರ್ – 4.200 ಕೋಟಿ ರೂ.
    > ಮೆಟ್ರೋ ಹಂತ 3 ಯೋಜನೆ ಅಧ್ಯಯನ ಪೂರ್ಣ – ಏರ್‍ಪೋರ್ಟ್‍ಗೆ ಸೂಕ್ತ ಮಾರ್ಗ ಕಲ್ಪಿಸುವ ಮಾರ್ಗ ಅಂತಿಮ ಹಂತದಲ್ಲಿ.

    ನಗರ ಭೂ ಸಾರಿಗೆ

    > ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಗೆ ಉಪನಗರ ರೈಲ್ವೆ ಯೋಜನೆ ಆರಂಭ – 345 ಕೋಟಿ ರೂ.
    > ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ.
    > ಮೈಸೂರಿನ ಮಾದರಿಯಂತೆ ಬೆಂಗಳೂರಲ್ಲಿ ಕೆಲವೆಡೆ ಬಾಡಿಗೆ ಸೈಕಲ್ ಒದಗಿಸುವ ಯೋಜನೆ.

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

    – ಕೆಂಪೇಗೌಡ ಬಡವಾಣೆಯಲ್ಲಿ 5 ಸಾವಿರ ನಿವೇಶನ ಹಂಚಿಕೆ, 3 ಸಾವಿರ ಫ್ಲಾಟ್.
    – ಕೋನದಾಸಪುರ ಗ್ರಾಮದಲ್ಲಿ 166 ಎಕರೆ ಪ್ರದೇಶದಲ್ಲಿ ಬಿಡಿಎನಿಂದ ಟೌನ್‍ಶಿಪ್ ಅಭಿವೃದ್ಧಿ ಪಡಿಸಲು ಉದ್ದೇಶ.
    – ಕೆಂಪೇಗೌಡ ಬಡಾವಣೆಯಿಂದ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿ.ಮೀ ಅರ್ಟೀರಿಯಲ್ ರಸ್ತೆ ನಿರ್ಮಾಣ- 350 ಕೋಟಿ ರೂ. ಅನುದಾನ.
    – 42 ಕೋಟಿ ರೂ. ವೆಚ್ಚದಲ್ಲಿ 10 ಕೆರೆ ಸಮಗ್ರ ಅಭಿವೃದ್ಧಿ, ಬೆಳ್ಳಂದೂರು, ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿ.
    – ಹೆಬ್ಬಾಳ ಜಂಕ್ಷನ್‍ನಲ್ಲಿ ಕೆಳಸೇತುವೆ ನಿರ್ಮಾಣ, ಮೇಲ್ಸೇತುವೆ ಅಗಲೀಕರಣ – 88 ಕೋಟಿ ರೂ. ವೆಚ್ಚ.
    – ಬೆಂಗಳೂರು ಸಂಚಾರ ಅನುಕೂಲಕ್ಕಾಗಿ ಸಿಲ್ಕ್ ಬೋಡ್ ಜಂಕ್ಷನ್ ಹಾಗೂ ಕೆಆರ್ ಪುರಂ ಜಂಕ್ಷನ್ ಬಿಎಂಆರ್‍ಸಿಎಲ್ ಸಹಯೋಗದೊಂದಿಗೆ ಅಭಿವೃದ್ಧಿ.