Tag: UPSC Exam

  • ಮೇ 25ರಂದು UPSC ಪೂರ್ವಭಾವಿ ಪರೀಕ್ಷೆ – 1 ಗಂಟೆ ಮುಂಚಿತವಾಗಿ ಮೆಟ್ರೋ ಸೇವೆ ಶುರು

    ಮೇ 25ರಂದು UPSC ಪೂರ್ವಭಾವಿ ಪರೀಕ್ಷೆ – 1 ಗಂಟೆ ಮುಂಚಿತವಾಗಿ ಮೆಟ್ರೋ ಸೇವೆ ಶುರು

    ಬೆಂಗಳೂರು: ಮೇ 25 ಭಾನುವಾರದಂದು ದೇಶದಾದ್ಯಂತ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಅದರಂತೆ ಬೆಂಗಳೂರಿನ(Bengaluru) ವಿವಿಧ ಕೇಂದ್ರಗಳಲ್ಲೂ ಪರೀಕ್ಷೆ ನಡೆಯಲಿದ್ದು, 1 ಗಂಟೆ ಮುಂಚಿತವಾಗಿ ಮೆಟ್ರೋ ರೈಲು ಸೇವೆ(Namma Metro) ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್(BMRCL) ತಿಳಿಸಿದೆ.

    ವೈಟ್ ಫೀಲ್ಡ್, ಚಲ್ಲಘಟ್ಟ, ಮಾದಾವರ ಹಾಗೂ ರೇಷ್ಮೆ ಸಂಸ್ಥೆ ಸೇರಿ 4 ಟರ್ಮಿನಲ್‌ಗಳಿಂದಲೂ 1 ಗಂಟೆ ಮುಂಚಿವಾಗಿ ಮೆಟ್ರೋ ಸೇವೆ ಆರಂಭವಾಗಲಿದೆ. ಅಂದರೆ 7 ಗಂಟೆಗೆ ಶುರುವಾಗಬೇಕಿದ್ದ ಮೆಟ್ರೋ ಸೇವೆ 6 ಗಂಟೆಯಿಂದ ಪ್ರಾರಂಭವಾಗಲಿದೆ. ಇದನ್ನೂ ಓದಿ: ಮಳೆಯಿಂದ ಅಡ್ಡಿ – ಒಂದೇ ವೇದಿಕೆಯಲ್ಲಿ ನೆರವೇರಿತು ಹಿಂದೂ-ಮುಸ್ಲಿಂ ಜೋಡಿಯ ವಿವಾಹ

    ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ 6 ಗಂಟೆಯಿಂದಲೇ ಮೆಟ್ರೋ ಸೇವೆಯನ್ನು ಆರಂಭಿಸುವ ನಿರ್ಧಾರವನ್ನು ನಮ್ಮ ಮೆಟ್ರೋ ಕೈಗೊಂಡಿದೆ. ಇದನ್ನೂ ಓದಿ: ಮೇ 24ಕ್ಕೆ UG CET ಫಲಿತಾಂಶ ಪ್ರಕಟ – ಕೆಇಎ

  • ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಪಾಸ್ ಆದ ಗ್ರಾಮೀಣ ಯುವಕ

    ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಪಾಸ್ ಆದ ಗ್ರಾಮೀಣ ಯುವಕ

    ಪಾಟ್ನಾ: ಬಿಹಾರ ಗ್ರಾಮೀಣ ಬಡ ಕುಟುಂಬ ಹಿನ್ನೆಲೆಯಿಂದ ಬಂದ ಸತ್ಯಂ ಗಾಂಧಿಯವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದನ್ನೂ ಓದಿ: ಬಂದ್ ಠುಸ್ ಪಟಾಕಿ – ಬೆಂಗಳೂರಿನಲ್ಲಿ ಎಂದಿನಂತೆ ಸಾಗುತ್ತಿದೆ ಜನ ಜೀವನ

    ದೆಹಲಿಯಲ್ಲಿರುವ ಕರೋಲ್‍ಬಾಗ್ ಪಿಜಿಯ ಒಂದು ಸಣ್ಣ ಕೋಣೆಯಲ್ಲಿ 22 ವರ್ಷದ ಸತ್ಯಂ ಗಾಂಧಿಯವರು ಪ್ರತಿನಿತ್ಯ ಕುಳಿತು ಸ್ವಯಂ ಅಧ್ಯಯನ ನಡೆಸಿ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‍ಸಿ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ 10ನೇ ರ‍್ಯಾಂಕ್ ಪಡೆದು ತೇರ್ಗಡೆಯಾಗಿದ್ದಾರೆ. ಅಲ್ಲದೇ ಯುಪಿಎಸ್‍ಸಿ ಪರೀಕ್ಷೆಗೆ ಯಾವುದೇ ತರಬೇತಿ ಪಡೆಯದೇ ಕೇವಲ ಒಂದು ವರ್ಷದಲ್ಲಿ ಸ್ವಯಂ ಅಧ್ಯಯನ ನಡೆಸಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಹಿಂದೂ ತೀವ್ರಗಾಮಿಗಳನ್ನು ಸೃಷ್ಟಿಸುವ ಭೂತ: ಚಿದಂಬರಂ

    ಪರೀಕ್ಷೆ ತಯಾರಿ ಬಗ್ಗೆ ಮಾತನಾಡಿದ ಅವರು, ಯುಪಿಎಸ್‍ಸಿ ಪರೀಕ್ಷೆ ಬರೆಯಲು ಕೋಣೆಯಲ್ಲಿ ವೇಳಾಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದೆ ಮತ್ತು ಅದನ್ನು ದಿನನಿತ್ಯ ಪಾಲಿಸುತ್ತಿದ್ದೆ. ಪ್ರತಿ ದಿನ 8 ರಿಂದ 10 ಗಂಟೆಗಳ ಕಾಲ ಸಂಪೂರ್ಣ ಓದುವುದರ ಕಡೆಗೆ ಗಮನ ಹರಿಸುತ್ತಿದ್ದೆ. ನಾನು ಸಾಮಾನ್ಯ ಬಡ ಕುಟುಂಬದ ಹಿನ್ನೆಲೆಯಿಂದ ಬಂದವನಾಗಿದ್ದು, ನನ್ನ ಓದಿಗಾಗಿ ತಂದೆ ಸಾಲ ಪಡೆದಿದ್ದರು ಮತ್ತು ಮಗನ ಗಮನ ಬೇರೆಡೆಗೆ ವಾಲದಂತೆ ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ತಂದೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕಷ್ಟದ ಸಮಯ ನನ್ನನ್ನು ಪ್ರಬುದ್ಧನಾಗಿಸಿತು. ಸದ್ಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ 10ನೇ ರ‍್ಯಾಂಕಿಂಗ್ ಪಡೆದಿದ್ದು, ಅಂತಿಮವಾಗಿ ವಿದ್ಯಾಭ್ಯಾಸದಿಂದ ವಿರಾಮ ತೆಗೆದುಕೊಂಡು ಬಿಹಾರದಲ್ಲಿರುವ ನನ್ನ ತಂದೆ-ತಾಯಿಯನ್ನು ಭೇಟಿ ಮಾಡಲು ಮನೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಸತ್ಯಂ ಐಎಎಸ್ ಆದ ಬಳಿಕ ಗ್ರಾಮೀಣ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ನಿಭಾಯಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತರಕಾರಿ ಸುರಿದು ರೈತರ ಆಕ್ರೋಶ – ಜಿಲ್ಲೆಗಳಲ್ಲಿ ಪ್ರತಿಭಟನೆ ಆರಂಭ

  • ಯುಪಿಎಸ್‍ಸಿ ಪರೀಕ್ಷೆಯಲ್ಲಿ ಚಿಕ್ಕೋಡಿಯ ರೈತ, ಕಾರ್ಮಿಕ, ಅರಣ್ಯ ಸಿಬ್ಬಂದಿ ಮಕ್ಕಳ ಸಾಧನೆ

    ಯುಪಿಎಸ್‍ಸಿ ಪರೀಕ್ಷೆಯಲ್ಲಿ ಚಿಕ್ಕೋಡಿಯ ರೈತ, ಕಾರ್ಮಿಕ, ಅರಣ್ಯ ಸಿಬ್ಬಂದಿ ಮಕ್ಕಳ ಸಾಧನೆ

    – ಪ್ರಫುಲ್ 532, ಗಜಾನನ ಹೊಸಬಾಳೆ 663, ಪ್ರಿಯಾಂಕಾ ಕಾಂಬ್ಳೆ 670ನೇ ರ‌್ಯಾಂಕ್

    ಚಿಕ್ಕೋಡಿ: ಯುಪಿಎಸ್‍ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಒಬ್ಬ, ಚಿಕ್ಕೋಡಿಯ ಇಬ್ಬರು ಸಾಧನೆ ಮಾಡಿದ್ದು, ರೈತನ ಮಗ, ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವವರ ಮಗ ಹಾಗೂ ಅರಣ್ಯ ಸಿಬ್ಬಂದಿ ಮಗಳು 532, 663 ಹಾಗೂ 670ನೇ ರ‌್ಯಾಂಕ್  ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ರೈತನ ಮಗ, ಅಪ್ಪಟ ಗ್ರಾಮೀಣ ಪ್ರತಿಭೆ ಪ್ರಫುಲ್ ಕೆಂಪಣ್ಣ ದೇಸಾಯಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 532ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಪ್ರಫುಲ್ ದೇಸಾಯಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಹುಬ್ಬಳ್ಳಿಯ ಬಿವಿವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಪದವಿ ಮುಗಿಸಿದ್ದು, ಸದ್ಯ ಜಲಸಂಪನ್ಮೂಲ ಇಲಾಖೆಯಲ್ಲಿ ಅಸಿಸ್ಟಂಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಫುಲ್ ಮೂರನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 532ನೇ ರ‌್ಯಾಂಕ್ ಪಡೆದಿದ್ದಾರೆ. ಪ್ರಫುಲ್ ಅವರ ಸಾಧನೆಗೆ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಕುಟಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಯುವಕ ಗಜಾನನ ಬಾಳೆ ಸಹ ಯುಪಿಎಸ್‍ಸಿ ಪರೀಕ್ಷೆಯಲ್ಲಿ 663ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ. ಯುವಕನ ತಂದೆ ಕಾಗವಾಡ ಪಟ್ಟಣದ ಉಗಾರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ಮಗನಿಗೆ ವಿದ್ಯಾಭ್ಯಾಸ ನೀಡಿ ಸಾಧನೆ ಮಾಡಲು ಸಹಕಾರಿಯಾಗಿದ್ದಾರೆ.

    ಬೆಳಗಾವಿಯ ಜಿಐಟಿ ಕಾಲೇಜಿನಲ್ಲಿ ಇ ಆಂಡ್ ಸಿ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿರುವ ಗಜಾನನ, ದೆಹಲಿಯಲ್ಲಿ ಯುಪಿಎಸ್‍ಸಿ ಪರೀಕ್ಷೆಯ ತರಬೇತಿ ಪಡೆದಿದ್ದರು. 29ನೇ ವಯಸ್ಸಿನಲ್ಲಿ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 663ನೇ ರ‌್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಗಜಾನನ ಅವರ ಸಾಧನೆಯಿಂದ ಕುಟಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.

    ಅರಣ್ಯ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಪುತ್ರಿ ಸಹ ಯುಪಿಎಸ್‍ಸಿ ಪರೀಕ್ಷೆಯಲ್ಲಿ 670ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಪ್ರೀಯಾಂಕಾ ವಿಠ್ಠಲ ಕಾಂಬ್ಳೆ, ಸರ್ಕಾರಿ ಶಾಲೆಯಲ್ಲಿ ಓದಿ, ಬಿಎಸ್‍ಸಿ ಅಗ್ರಿ ಪದವಿ ಮುಗಿಸಿದ್ದಾರೆ. ಪ್ರಿಯಾಂಕಾ ತಂದೆ ಅರಣ್ಯ ಇಲಾಖೆಯ ವಂಟಮೂರಿ ವಲಯದ ಅರಣ್ಯ ರಕ್ಷಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ 6 ತಿಂಗಳು ಸರ್ಕಾರದಿಂದ ನೀಡುವ ಉಚಿತ ಯುಪಿಎಸ್‍ಸಿ ತರಬೇತಿಯನ್ನು ದೆಹಲಿಯಲ್ಲಿ ಪಡೆದಿರುವ ಪ್ರೀಯಾಂಕಾ, 2ನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ಪಾಸ್ ಮಾಡಿದ್ದಾರೆ. ಜಿಲ್ಲಾಧಿಕಾರಿಯಾಗುವ ಕನಸು ಕಂಡಿದ್ದಾರೆ.

  • ಯುಪಿಎಸ್‍ಸಿ ಪರೀಕ್ಷೆಯಲ್ಲಿ ರಾಜ್‍ಕುಮಾರ್ ಅಕಾಡೆಮಿಯ 27 ವಿದ್ಯಾರ್ಥಿಗಳು ತೇರ್ಗಡೆ!

    ಯುಪಿಎಸ್‍ಸಿ ಪರೀಕ್ಷೆಯಲ್ಲಿ ರಾಜ್‍ಕುಮಾರ್ ಅಕಾಡೆಮಿಯ 27 ವಿದ್ಯಾರ್ಥಿಗಳು ತೇರ್ಗಡೆ!

    ಬೆಂಗಳೂರು: 2018ರ ನಾಗರಿಕ ಸೇವಾ ಆಯೋಗ ನಡೆಸಿದ್ದ ಐಎಎಸ್ ಮೌಖಿಕ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ ಒಟ್ಟು 27 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ಡಾ ರಾಜ್‍ಕುಮಾರ್ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

    ನಾಡು ನುಡಿ ಜಲಕ್ಕಾಗಿ ಸೇವೆ ಸಲ್ಲಿಸಿದ್ದ ಕಲಾವಿದ ಡಾ. ರಾಜ್‍ಕುಮಾರ್ ಹೆಸರಿಗೆ ಅದೆಷ್ಟು ಶಕ್ತಿ ಇದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಡಿಮೆ ಶುಲ್ಕದಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಗೆ ಕೋಚ್ ಕೊಡೋಕೆ ಶುರುವಾದ ಡಾ.ರಾಜ್‍ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಿಂದ ಮೊದಲ ವರ್ಷದಲ್ಲೇ 16 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

    ಈ ಬಾರಿಯ ನಾಗರಿಕಾ ಸೇವಾ ಆಯೋಗದ ಮೌಖಿಕ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಒಟ್ಟು 27 ವಿದ್ಯಾರ್ಥಿಗಳು ರ‍್ಯಾಂಕಿಂಗ್ ಗೆ ಒಳಪಡುತ್ತಾರೆ. ಅದರಲ್ಲಿ ಸಿಂಹಪಾಲು ಡಾ. ರಾಜ್‍ಕುಮಾರ್ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳದ್ದಾಗಿದೆ.

    ಕನ್ನಡಿಗರಿಗೆ ಕಬ್ಬಿಣದ ಕಡಲೆಯಂತಿದ್ದ ಐಎಸ್‍ಎಸ್ ಪರೀಕ್ಷೆಯನ್ನ ಸುಲಭ ಮಾಡೋಕೆ ದೆಹಲಿಯ ಶ್ರೀನಿವಾಸ್ ಮತ್ತು ಡಾ. ರಾಜ್‍ಕುಮಾರ್ ಕುಟುಂಬ ಬೆಂಗಳೂರಿನ ಚಂದ್ರ ಲೇಔಟ್‍ನಲ್ಲಿ ರಾಜ್‍ಕುಮಾರ್ ಹೆಸರಲ್ಲಿ ದೊಡ್ಡ ಸಂಸ್ಥೆಯೊಂದನ್ನ ಕಳೆದ ಮಾರ್ಚ್‍ನಲ್ಲಿ ಶುರುಮಾಡಿತ್ತು. ಮೊದಲ ವರ್ಷದ ರಿಸಲ್ಟ್ ಉತ್ತಮವಾಗಿ ಬಂದಿರೋದು ವಿದ್ಯಾರ್ಥಿಗಳಲ್ಲೂ ಮ್ಯಾನೇಜ್ಮೆಂಟ್‍ಗೂ ಹೊಸ ಹುರುಪು ತಂದಿದೆ.

    ಸಾಮಾನ್ಯವಾಗಿ ಕಲಾವಿದರ ಹೆಸರಲ್ಲಿ ಅಭಿನಯ ತರಬೇತಿ ಶಾಲೆಗಳಿರೋದು ಸಾಮಾನ್ಯ. ಆದರೆ ರಾಜ್ಯದ ಬುದ್ಧಿವಂಥ ವಿದ್ಯಾರ್ಥಿಗಳನ್ನ ದೇಶದ ಅತ್ಯುತ್ತಮ ಹುದ್ದೆಗೆ ಆಯ್ಕೆ ಮಾಡುವ ಸಂಸ್ಥೆಯನ್ನ ತೆರೆದು ಮೊದಲ ವರ್ಷದಲ್ಲೇ ಉತ್ತಮ ಫಲಿತಾಂಶ ಪಡೆದಿರೋದು ಸರ್ವರಲ್ಲೂ ಅಚ್ಚರಿ ಮೂಡಿಸಿದೆ. ಇದರಿಂದ ರಾಜ್ ಅಭಿಮಾನಿಗಳು ಹಾಗೂ ಸಂಸ್ಥೆ ಎದೆಯುಬ್ಬಿಸಿ ನಡೆಯುತ್ತಿದೆ.

  • ಯುಪಿಎಸ್‍ಸಿ ಪರೀಕ್ಷೆಯಲ್ಲಿ 26 ಮಂದಿ ಕನ್ನಡಿಗರು ಪಾಸ್

    ಯುಪಿಎಸ್‍ಸಿ ಪರೀಕ್ಷೆಯಲ್ಲಿ 26 ಮಂದಿ ಕನ್ನಡಿಗರು ಪಾಸ್

    ಬೆಂಗಳೂರು: ಪ್ರತಿಷ್ಠಿತ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‍ಸಿ) ನಡೆಸುವ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕದ 26 ಮಂದಿ ಆಯ್ಕೆಯಾಗಿದ್ದಾರೆ.

    ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2017ನೇ ಸಾಲಿನ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಇದರಲ್ಲಿ ತೆಲಂಗಾಣದ ಅನುದೀಪ್ ದುರಿಶೆಟ್ಟಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ರಾಜ್ಯದ 25 ಅಭ್ಯರ್ಥಿಗಳು ವಿವಿಧ ಹಂತದ ರ‍್ಯಾಂಕ್ ಗಳಿಸಿದ್ದು, ಬೀದರ್ ನ ಶಿಂಧೆ 95ನೇ ಸ್ಥಾನ ಪಡೆದಿದ್ದಾರೆ.

    ಕನ್ನಡಿಗರ ಪಟ್ಟಿ:
    ಕೀರ್ತಿ ಕಿರಣ್ ಪೂಜಾರ್ (115 ರ್ಯಾಂಕ್), ಎಂ.ಶ್ವೇತಾ (119), ಟಿ.ಶುಭಮಂಗಳಾ(147), ಸಿ. ವಿಂಧ್ಯಾ (160), ಕೃತಿಕಾ (194), ಪೃಥ್ವಿಕ್ ಶಂಕರ್ (211), ಬಿ.ಗೋಪಾಲಕೃಷ್ಣ (265), ಎಚ್.ವಿನೋದ್ ಪಾಟೀಲ್ (294), ಎಂ.ಪುನೀತ್ ಕುಟ್ಟಯ್ಯ (324), ಸಿದ್ದಲಿಂಗ ರೆಡ್ಡಿ (346), ಸುದರ್ಶನ ಭಟ್ (434), ಎನ್.ವೈ. ವೃಶಾಂಕ್ (478), ಅಭಿಲಾಷ್ ಶಶಿಕಾಂತ್ ಬದ್ದೂರ್ (531), ನಿಖಿಲ್ ನಿಪ್ಪಾಣಿಕರ್ (563), ಟಿ.ಎನ್. ನಿಥನ್‍ರಾಜ್ (575), ಎಸ್. ಪ್ರೀತಮ್ (654), ಬಿ.ಸಿ. ಹರೀಶ (657), ಆರ್.ವಿಜಯೇಂದ್ರ (666), ಶಿವರಾಜ್ ಸಾಯಿಬಣ್ಣ ಮನಗಿರಿ (784), ಸ್ಪರ್ಶ ನೀಲಾಂಗಿ (805), ಆರ್.ಸಿ. ಹರ್ಷವರ್ಧನ (913), ವೆಂಕಟೇಶ ನಾಯಕ್ (930), ಪಿ.ಪವನ್ (933), ಮಹೇಶ ವದ್ದೆ (958) ರ‍್ಯಾಂಕ್ ಪಡೆದಿದ್ದಾರೆ.

  • ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಕರಿಸಿದ ಐಪಿಎಸ್ ಅಧಿಕಾರಿ ಪತ್ನಿ ಬಂಧನ

    ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಕರಿಸಿದ ಐಪಿಎಸ್ ಅಧಿಕಾರಿ ಪತ್ನಿ ಬಂಧನ

    – ಗೂಗಲ್ ಡ್ರೈವ್, ಮೈಕ್ರೋ ಕ್ಯಾಮೆರಾ, ಬ್ಲೂಟೂತ್ ಬಳಸಿದ್ರು

    ಹೈದರಾಬಾದ್: ಯುಪಿಎಸ್‍ಸಿ ಮುಖ್ಯ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಸಹಕರಿಸಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿಯನ್ನು ಹೈದರಾಬಾದ್ ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ.

    ಐಪಿಎಸ್ ಅಧಿಕಾರಿ ಸಫೀರ್ ಕರೀಂ ಅವರ ಪತ್ನಿ ಜಾಯ್ಸಿ ಬಂಧಿತರಾದ ಮಹಿಳೆ. ಸದ್ಯ ತರಬೇತಿಯಲ್ಲಿರುವ ಕರೀಂ ಸೋಮವಾರದಂದು ಪರೀಕ್ಷೆಯಲ್ಲಿ ಕಾಪಿ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಜಾಯ್ಸಿ ತನ್ನ ಗಂಡನಿಗೆ ಸಹಾಯ ಮಾಡಲು ಹೈ-ಟೆಕ್ ವ್ಯವಸ್ಥೆಗಳನ್ನ ನೀಡಿದ ಆರೋಪದ ಮೇಲೆ ಹೈದರಾಬಾದ್‍ನ ಅಶೋಕ್‍ನಗರದಲ್ಲಿರುವ ಲಾ ಎಕ್ಸೆಲ್ಲೆನ್ಸ್ ಐಎಎಸ್ ಸ್ಟಡಿ ಸರ್ಕಲ್‍ನ ನಿರ್ದೇಶಕರಾದ ಡಾ. ಪಿ. ರಾಮಬಾಬು ಎಂಬವರನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಹೈದರಾಬಾದ್ ಪೊಲೀಸರು ಬಂಧನ ಮಾಡಿದ್ದಾರೆ.

    ನಾವು ಇಬ್ಬರೂ ಆರೋಪಿಗಳನ್ನ ಡಿಸಿಪಿ ಶ್ರೇಣಿಯ ಅಧಿಕಾರಿ ಪಿ. ಅರವಿಂದನ್ ನೇತೃತ್ವದ ಚೆನ್ನೈ ಪೊಲೀಸ್ ತಂಡಕ್ಕೆ ಒಪ್ಪಿಸಿದ್ದೇವೆ. ಚೆನ್ನೈಗೆ ಕರೆದೊಯ್ಯುವ ಮುನ್ನ ಈಗ ಹೈದರಾಬಾದ್‍ನಲ್ಲಿ ಅವರನ್ನು ವಿಚಾರಣೆ ಮಾಡಲಾಗ್ತಿದೆ ಎಂದು ಹೈದರಾಬಾದ್ ಸೆಂಟ್ರಲ್ ಝೋನ್ ಟಾಸ್ಕ್ ಫೋರ್ಸ್‍ನ ಇನ್‍ಸ್ಪೆಕ್ಟರ್ ಎಸ್ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.

    ಜಾಯ್ಸಿ ಹಾಗೂ ರಾಮಬಾಬು ಕರೀಮ್‍ಗೆ ಉತ್ತರಗಳನ್ನು ರವಾನಿಸಲು ಬಳಸಿದ ಹಾರ್ಡ್ ಡಿಸ್ಕ್, ಲ್ಯಾಪ್‍ಟಾಪ್, ಐಪ್ಯಾಡ್ ಹಾಗೂ ಇತರೆ ಉಪಕರಣಗಳನ್ನು ಟಾಸ್ಕ್ ಫೋರ್ಸ್ ವಶಪಡಿಸಿಕೊಂಡು ಚೆನ್ನೈ ಪೊಲೀಸರಿಗೆ ಹಸ್ತಾಂತರಿಸಿದೆ. ಕರೀಂ ಸದ್ಯ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    ಕಾಪಿ ಮಾಡಿದ್ದು ಹೇಗೆ: ಕರೀಂ ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಗೂಗಲ್ ಡ್ರೈವ್ ಮೂಲಕ ತನ್ನ ಹೆಂಡತಿಗೆ ಕಳಿಸಿದ್ದರು. ಪತ್ನಿ ಜಾಯ್ಲಿ ಬ್ಲೂಟೂತ್ ಮೂಲಕ ಉತ್ತರಗಳನ್ನ ಒದಗಿಸಿದ್ದರು. ಅಧಿಕಾರಿಗಳು ಕರೀಂ ಅವರನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಆದ್ರೆ ತನಿಖೆಯಿಂದ ತಮಗೆ ಬೇಕಿದ್ದ ಸುಳಿವು ಸಿಗೋವರೆಗೂ ವಿಷಯವನ್ನ ಗೌಪ್ಯವಾಗಿಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಕರೀಂ ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕಾಗಿ ಮೈಕ್ರೋ ಕ್ಯಾಮೆರಾದ ಆಧಾರದ ಮೇಲೆ ಕೆಲಸ ಮಾಡೋ ಯಂತ್ರವನ್ನ ಸಿದ್ಧಪಡಿಸಿದ್ರು. ಅದನ್ನ ಎದೆಯ ಸಮೀಪ ಇಟ್ಟುಕೊಂಡು ಗೂಗಲ್ ಡ್ರೈವ್‍ಗೆ ಕನೆಕ್ಟ್ ಮಾಡಿಕೊಂಡಿದ್ರು. ಇದರ ಕ್ಯಾಮೆರಾದಿಂದ ಪೇಪರ್ ಸ್ಕ್ಯಾನ್ ಮಾಡಿ ಗೂಗಲ್ ಡ್ರೈವ್ ಮೂಲಕ ಬೇಕಾದವರಿಗೆ ಕಳಿಸಬಹುದಿತ್ತು. ಇದನ್ನ ಸ್ವೀಕರಿಸಿದವರು ಮಾತಿನ ಮೂಲಕ ಉತ್ತರಗಳನ್ನ ನೀಡಿದ್ರೆ ಅದು ಬ್ಲೂಟೂತ್ ಮೂಲಕ ಇವರನ್ನ ತಲುಪುತ್ತಿತ್ತು. ಒಂದು ವೇಳೆ ಧ್ವನಿ ಕೇಳಿಸುತ್ತಿಲ್ಲವಾದ್ರೆ ಅದನ್ನು ಅವರು ಪೇಪರ್ ಮೇಲೆ ಪೆನ್ಸಿಲ್‍ನಿಂದ ಬರೆದು, ಅದನ್ನು ಸ್ಕ್ಯಾನ್ ಮಾಡಿ ಮತ್ತೊಮ್ಮೆ ಕಳಿಸುತ್ತಿದ್ರು. ಆಗ ಆ ಕಡೆ ಇರೋ ವ್ಯಕ್ತಿ ಜೋರಾಗಿ ಮಾತನಾಡುತ್ತಿದ್ರು ಎಂದು ಪೊಲೀಸರು ವಿವರಿಸಿದ್ದಾರೆ.

    ಕರೀಂ, ಜಾಯ್ಸಿ ಇಬ್ಬರೂ ಕೇರಳ ಮೂಲದವರು. ಕರೀಂ 2015ರಲ್ಲಿ ಐಪಿಎಸ್‍ಗೆ ಆಯ್ಕೆಯಾಗಿ ಹೈದರಾಬಾದ್‍ನ ಸರ್ದಾರ್ ವಲ್ಲಬಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ತಮಿಳುನಾಡು ಕೇಡರ್‍ಗೆ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಐಪಿಎಸ್ ಆಯ್ಕೆಗೆ ತೃಪ್ತರಾಗದ ಕರೀಂ ಐಎಎಸ್ ಮಾಡಲೇಬೆಂಕೆಂದು ನಕಲು ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಐಎಎಸ್ ಕೋಚಿಂಗ್ ಸೆಂಟರ್ ನಡೆಸ್ತಿದ್ರು: ಕರೀಂ ಹಾಗೂ ರಾಮಬಾಬು ಒಳ್ಳೇ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಕರೀಂ ರಾಮಬಾಬು ಜೊತೆಗೂಡಿ ತಿರುವನಂತಪುರಂನಲ್ಲಿ ಕರೀಮ್ಸ್ ಲಾ ಎಕ್ಸೆಲೆನ್ಸ್ ಎಂಬ ಹೆಸರಿನಲ್ಲಿ ಐಎಎಸ್ ಕೋಚಿಂಗ್ ಸೆಂಟರ್‍ವೊಂದನ್ನ ನಡೆಸುತ್ತಿದ್ರು ಎಂದು ಇನ್‍ಸ್ಪೆಕ್ಟರ್ ರಾವ್ ಹೇಳಿದ್ದಾರೆ.