Tag: Uproar

  • ಜಮೀನು ರಸ್ತೆ ವಿವಾದ, ಎರಡು ಕುಟುಂಬಗಳ ಮಾರಾಮಾರಿ – ಕೊಲೆಯಲ್ಲಿ ಅಂತ್ಯ

    ಜಮೀನು ರಸ್ತೆ ವಿವಾದ, ಎರಡು ಕುಟುಂಬಗಳ ಮಾರಾಮಾರಿ – ಕೊಲೆಯಲ್ಲಿ ಅಂತ್ಯ

    ಚಿಕ್ಕಮಗಳೂರು: ಜಮೀನಿಗೆ ಹೋಗುವ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ(Mudigere) ತಾಲೂಕಿನ ಚಿಕ್ಕಹಳ್ಳ ಗ್ರಾಮದಲ್ಲಿ ನಡೆದಿದೆ.

    ಮೃತನನ್ನು ಪ್ರವೀಣ್ (40) ಎಂದು ಗುರುತಿಸಲಾಗಿದೆ. ಮೃತ ಪ್ರವೀಣ್ ಕುಟುಂಬಕ್ಕೂ ವಿರೋಧಿ ಕುಟುಂಬಕ್ಕೂ ಕಳೆದ ಕೆಲ ವರ್ಷಗಳಿಂದ ವಿವಾದ ನಡೆಯುತ್ತಲೇ ಇತ್ತು. ರಸ್ತೆ ಗಲಾಟೆ ಕೋರ್ಟ್ ಮೆಟ್ಟಿಲು ಏರಿ, ಕೋರ್ಟ್ ತೀರ್ಮಾನ ಕೂಡ ಪ್ರವೀಣ್ ಪರವಾಗಿ ಬಂದಿತ್ತು ಎಂದು ಪ್ರವೀಣ್ ಕುಟುಂಬ ಮಾಹಿತಿ ನೀಡಿದೆ. ಆದರೂ ವಿವಾದ ನಡೆಯುತ್ತಲೇ ಇತ್ತು. ಅಷ್ಟೇ ಅಲ್ಲದೆ, ಪ್ರವೀಣ್ ವಿರೋಧಿ ಕುಟುಂಬಕ್ಕೆ ಜಮೀನಿಗೆ ಹೋಗಲು ಬೇರೆ ರಸ್ತೆ ಕೂಡ ಇತ್ತು. ಆದರೆ, ಆ ಕುಟುಂಬ ಇದೇ ರಸ್ತೆ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಇದನ್ನೂ ಓದಿ: ಕ್ರೇಜ್‌ಗಾಗಿ 300km ವೇಗದಲ್ಲಿ ಸೂಪರ್‌ ಬೈಕ್‌ ರೈಡಿಂಗ್‌ – ಯೂಟ್ಯೂಬರ್‌ ಸಾವು

    ಶುಕ್ರವಾರ ಪ್ರವೀಣ್ ತನ್ನ ಜಮೀನಿಗೆ ಹೋಗುವಾಗ ವಿವಾದಿತ ರಸ್ತೆಯಲ್ಲಿ ವಿರೋಧಿ ಕುಟುಂಬದವರು ಕೆಲಸ ಮಾಡುತ್ತಿದ್ದರು. ಅದನ್ನು ಪ್ರಶ್ನಿಸಲು ಬಂದ ಪ್ರವೀಣ್ ಮೇಲೆ ಸುಮಾರು ಎಂಟಕ್ಕೂ ಹೆಚ್ಚು ಜನ ಕತ್ತಿ ಮತ್ತು ಹಾರೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಪ್ರವೀಣ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: KSRTC ಬಸ್ ಡಿಕ್ಕಿ- ಕಾರಿನಲ್ಲಿದ್ದ ಮೂವರ ದುರ್ಮರಣ

    ವಿರೋಧಿಗಳು ಮೃತ ಪ್ರವೀಣ್ ತಂದೆ ಲಕ್ಷ್ಮಣ್ ಮೇಲೂ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರ ಕೈ ಮುರಿದಿದೆ. ಪ್ರವೀಣ್ ತಾಯಿ ಮೇಲೂ ಹಲ್ಲೆ ನಡೆಸಿದ್ದು, ಈ ಹಿಂದೆ ಹಲವು ಬಾರಿ ಇದೇ ರಸ್ತೆ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆ (Uproar) ನಡೆದಿತ್ತು. ಈ ಕುರಿತು ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಇದನ್ನೂ ಓದಿ: ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ 6 ಮಂದಿಯನ್ನು ಗುಂಡಿಕ್ಕಿ ಹತ್ಯೆ!

  • ಗಾಯಕ ಸೋನು ನಿಗಮ್ ಹಲ್ಲೆ ಘಟನೆ : ಕ್ಷಮೆ ಕೇಳಿದ ಸುಪ್ರದಾ ಫತೇರ್ ಪೇಕರ್

    ಗಾಯಕ ಸೋನು ನಿಗಮ್ ಹಲ್ಲೆ ಘಟನೆ : ಕ್ಷಮೆ ಕೇಳಿದ ಸುಪ್ರದಾ ಫತೇರ್ ಪೇಕರ್

    ಗಾಯಕ ಸೋನು ನಿಗಮ್ (Sonu Nigam) ಮೇಲಿನ ಹಲ್ಲೆಯನ್ನು ನಾನೂ ಒಪ್ಪಲಾರೆ. ಯಾರ ಮೇಲೂ ಯಾರೂ  ಕೈ ಮಾಡಬಾರದು. ಇಂಥದ್ದೊಂದು ಘಟನೆ ನಡೆಯಬಾರದಿತ್ತು. ನಡೆದಿರುವುದಕ್ಕೆ ವಿಷಾದವಿದೆ. ನನ್ನ ಕುಟುಂಬದ ಸದಸ್ಯನಿಂದ ಆದ ಹಲ್ಲೆಗೆ ಕ್ಷಮೆ ಕೇಳುವುದಾಗಿ ಶಾಸಕ ಪ್ರಕಾಶ್ ಫತೇರ್ ಪೇಕರ್ ಸಹೋದರಿ ಸುಪ್ರದಾ ತಿಳಿಸಿದ್ದಾರೆ.

    ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆಯಾದ ‍ಘಟನೆ ನಿನ್ನೆ ನಡೆದಿತ್ತು. ಮಹಾರಾಷ್ಟ್ರದ (Maharashtra) ರಾಜಧಾನಿ ಮುಂಬೈನ ಚೆಂಬೂರಿನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲೇ ಉದ್ದವ್ ಠಾಕ್ರೆ ಬಣದ ಶಾಸಕ ಪ್ರಕಾಶ್ ಫತೇರ್ ಪೇಕರ್ (,  Prakash Fateh Pekar) ಅವರ ಪುತ್ರ ಕೂಡ ಪಾಲ್ಗೊಂಡಿದ್ದರು. ಸೆಲ್ಫಿ ತಗೆಯುವ ವಿಚಾರವಾಗಿ ಗಲಾಟೆ ನಡೆದಿದೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಸೋನು ನಿಗಮ್ ಜೊತೆ ಸೆಲ್ಫಿಗಾಗಿ ಬಂದ ಶಾಸಕನ ಮಗನನ್ನು ಸೋನು ಅಂಗರಕ್ಷಕರು ತಳ್ಳಿದ್ದಾರೆ. ಈ ತಳ್ಳಾಟದಲ್ಲಿ ಶಾಸಕನ ಮಗನು ವೇದಿಕೆಯಿಂದ ಕೆಳಗೆ ಬಿದ್ದ ಎಂದು ಹೇಳಲಾಗುತ್ತಿದೆ. ರೊಚ್ಚಿಗೆದ್ದ ಹುಡುಗನು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದ ಸೋನು ನಿಗಮ್ ಅವರನ್ನು ಹಿಡಿದೆಳೆದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸೋನು ನಿಗಮ್ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

     

    ಸೋನು ಬರೆದ ದೂರಿನಲ್ಲಿ (Complaint) ‘ನಾವು ಕಾರ್ಯಕ್ರಮ ಮುಗಿಸಿಕೊಂಡು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದೆವು. ಮೊದಲು ಆ ಹುಡುಗ ನನ್ನ ತಂಡದೊಂದಿಗೆ ಗಲಾಟೆಗೆ ಇಳಿದ. ತಳ್ಳಾಟ ಶುರುವಾಯಿತು. ನನ್ನನ್ನು ಆ ಹುಡುಗ ಕೋಪದಿಂದ ತಳ್ಳಿದ. ನಾನು ವೇದಿಕೆಯ ಮೆಟ್ಟಿಲುಗಳಿಂದ ಜಾರಿದೆ’ ಎಂದು ಬರೆದಿದ್ದಾರೆ.  ಸದ್ಯ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಾಲ್ಮೀಕಿ ಜಾತ್ರೆ: ಸುದೀಪ್ ಅಭಿಮಾನಿಗಳಿಂದ ಕುರ್ಚಿಗಳು ಪೀಸ್ ಪೀಸ್

    ವಾಲ್ಮೀಕಿ ಜಾತ್ರೆ: ಸುದೀಪ್ ಅಭಿಮಾನಿಗಳಿಂದ ಕುರ್ಚಿಗಳು ಪೀಸ್ ಪೀಸ್

    ಮ್ಮ ನೆಚ್ಚಿನ ನಟ ಸುದೀಪ್ ವಾಲ್ಮೀಕಿ ಜಾತ್ರೆಗೆ ಆಗಮಿಸಲಿಲ್ಲ ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರುತ್ತಾರೆ ಎಂದು ಸುತ್ತಲಿನ ಅಭಿಮಾನಿಗಳು ಆಗಮಿಸಿದ್ದರು. ಬೆಳಗ್ಗೆಯಿಂದಲೇ ಸುದೀಪ್ ಫೋಟೋ ಹಿಡಿದುಕೊಂಡು ಜಯಘೋಷ ಮಾಡುತ್ತಿದ್ದರು.

    ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸುದೀಪ್ ಬರಲಿದ್ದಾರೆ ಎಂದು ಸುದ್ದಿ ಆಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆಗಲೂ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತಿದ್ದರು. ವಾಲ್ಮೀಕಿ ಶ್ರೀಗಳು ಅಭಿಮಾನಿಗಳನ್ನು ಎಷ್ಟೇ ಸಮಾಧಾನಿಸಿದರು. ಪ್ರಯೋಜನಕ್ಕೆ ಬರಲಿಲ್ಲ. ಕೊನೆಯಲ್ಲಿ ಶ್ರೀಗಳು ತಾಳ್ಮೆ ಕಳೆದುಕೊಂಡು ಅಭಿಮಾನಿಗಳ ಮೇಲೆ ಕೋಪಿಸಿಕೊಂಡರು. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಅಭಿಮಾನಿಗಳ ಕೂಗು ಹೆಚ್ಚಾದ ಕಾರಣದಿಂದಾಗಿ ಸಂಜೆ ಸುದೀಪ್ ಬರಲಿದ್ದಾರೆ ಎಂದು ಘೋಷಿಸಲಾಯಿತು. ಸಂಜೆಯಾದರೂ ಸುದೀಪ್ ಬಾರದೇ ಇರುವ ಕಾರಣಕ್ಕಾಗಿ ಆಕ್ರೋಶಗೊಂಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿ ಆಕ್ರೋಶ ಹೊರಹಾಕಿದರು. ಅಭಿಮಾನಿಗಳನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್, ‘ನನಗೆ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನವಿರಲಿಲ್ಲ ಮತ್ತು ಕಾರ್ಯಕ್ರಮದ ಬಗ್ಗೆ ಗೊತ್ತೂ ಇರಲಿಲ್ಲ. ಹಾಗಾಗಿ ಬರುವದಕ್ಕೆ ಆಗಲಿಲ್ಲ. ಅಭಿಮಾನಿಗಳ ಈ ನಡೆ ಬೇಸರ ತರಿಸಿದೆ. ಒಪ್ಪಿಕೊಂಡ ಕಾರ್ಯಕ್ರಮವನ್ನು ನಾನು ಯಾವತ್ತೂ ತಪ್ಪಿಸಲಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಮ್ಯಾ ಮೇಲೆ ಬ್ಲ್ಯಾಕ್ ಮೇಲ್ ಆರೋಪ, ಕಾನೂನು ಮೂಲಕ ಹೋರಾಟಕ್ಕಿಳಿದ ನಟ ನರೇಶ್

    ರಮ್ಯಾ ಮೇಲೆ ಬ್ಲ್ಯಾಕ್ ಮೇಲ್ ಆರೋಪ, ಕಾನೂನು ಮೂಲಕ ಹೋರಾಟಕ್ಕಿಳಿದ ನಟ ನರೇಶ್

    ತೆಲುಗು ನಟ ನರೇಶ್ ಮತ್ತು ಬೆಂಗಳೂರಿನ ರಮ್ಯಾ ದಾಂಪತ್ಯದ ವಿವಾದ ಬೀದಿರಂಪ ಆಗಿತ್ತು. ನರೇಶ್ ಅವರ ಮೇಲೆ ರಮ್ಯಾ ಅವರು ಹಲವು ಆರೋಪಗಳನ್ನು ಮಾಡಿದ್ದರು. ಅಲ್ಲದೇ, ಮೈಸೂರಿನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಹೋಟೆಲ್ ವೊಂದರಲ್ಲಿ ಉಳಿದುಕೊಂಡಿದ್ದಾಗ, ಅವರ ಮೇಲೆ ಚೆಪ್ಪಲಿ ಎಸೆಯುವಂತಹ ಪ್ರಯತ್ನ ಕೂಡ ಮಾಡಿದ್ದರು. ಒಂದು ವಾರಗಳ ಕಾಲ ಭಾರೀ ಸದ್ದು ಮಾಡಿದ್ದ ವಿವಾದ, ಒಂದು ವಾರದಿಂದ ತಣ್ಣಗಾಗಿದೆ.

    ಈ ಕುರಿತು ಮಾತನಾಡಿರುವ ನರೇಶ್, ‘ರಮ್ಯಾ ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಕೆಲ ಪ್ರಭಾವಿಗಳು ಅವರೊಂದಿಗೆ ಸೇರಿಕೊಂಡು ಈ ರೀತಿ ಗಲಾಟೆ ಮಾಡಿಸುತ್ತಿದ್ದಾರೆ. ರಮ್ಯಾ ಮತ್ತು ನನ್ನ ಡಿವೋರ್ಸ್ ಕೇಸ್ ಕೋರ್ಟಿನಲ್ಲಿದೆ. ಹಾಗಾಗಿ ಇನ್ಮುಂದೆ ಯಾವುದೇ ಹೇಳಿಕೆಯನ್ನು ಕೊಡಲಾರೆ. ನಾನು ಕೋರ್ಟ್ ನಲ್ಲೇ ಹೋರಾಟ ಮಾಡಿ ನ್ಯಾಯ ಪಡೆಯುತ್ತೇನೆ’ ಎಂದಿದ್ದಾರೆ. ಇದನ್ನೂ ಓದಿ:`ಹೊಯ್ಸಳ’ ಡಾಲಿಗೆ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಸಾಥ್

    ಪವಿತ್ರಾ ಲೋಕೇಶ್ ಮತ್ತು ನರೇಶ್ ಮೈಸೂರಿನ ಹೋಟೆಲ್ ವೊಂದರಲ್ಲಿ ತಂಗಿದ್ದಾಗ ರಮ್ಯಾ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿರುವ ವಿಚಾರವನ್ನೂ ಅವರು ಗಂಭೀರವಾಗಿ ತಗೆದುಕೊಂಡಿದ್ದಾರಂತೆ. ಹಾಗಾಗಿ ಕೋರ್ಟ್ ಮೊರೆ ಹೋಗುವುದಾಗಿ ಅವರು ಆಪ್ತರ ಎದುರು ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಗಲಾಟೆಯ ನಂತರ ಪವಿತ್ರಾ ಲೋಕೇಶ್ ಮತ್ತು ನರೇಶ್ ಹೈದರಾಬಾದ್ ನಲ್ಲೇ ಉಳಿದುಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಸುದ್ದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳಮುಖಿಯರ ಪಾರ್ಟಿಯಲ್ಲಿ ಗಲಾಟೆ- ವ್ಯಕ್ತಿ ಕೊಲೆ

    ಮಂಗಳಮುಖಿಯರ ಪಾರ್ಟಿಯಲ್ಲಿ ಗಲಾಟೆ- ವ್ಯಕ್ತಿ ಕೊಲೆ

    ರಾಮನಗರ: ಮಂಗಳಮುಖಿಯರ ಪಾರ್ಟಿಯಲ್ಲಿ ಗಲಾಟೆಯಾಗಿದ್ದು, ವ್ಯಕ್ತಿಯೊಬ್ಬ ಕೊಲೆಯಾಗಿರುವ ಘಟನೆ ಚನ್ನಪಟ್ಟಣ ನಗರದ ಲಾಳಘಟ್ಟ ಬಳಿ ನಡೆದಿದೆ.

    ಮಂಗಳಮುಖಿಯರ ತಂಡವೊಂದು ಮನೆಯೊಂದರಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಅತಿಕ್ರಮಣವಾಗಿ ನಾಲ್ಕೈದು ಜನರ ಪ್ರವೇಶವಾಗಿದೆ. ಮನೆಗೆ ಪ್ರವೇಶ ಮಾಡಿ ಮಂಗಳಮುಖಿಯರ ಜತೆ ಗಲಾಟೆ ಮಾಡಿಕೊಂಡಿದ್ದು, ಮಂಗಳಮುಖಿಯರ ಕಡೆಯವರಿಂದ ಮಚ್ಚಿನಿಂದ ಹಲ್ಲೆ ನಡೆದಿದೆ. ಇದನ್ನೂ ಓದಿ: ಬೆಂಗಳೂರು ನಗರಕ್ಕೆ ಸಿಎಂ ಸೇರಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ – ಯಾರಿಗೆ ಯಾವ ಜಿಲ್ಲೆ?

    ಹಲ್ಲೆಗೊಳಗಾದ ವ್ಯಕ್ತಿಯನ್ನು ಉದ್ದಾಡಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೋರ್ವನಿಗೆ ಗಾಯಗಳಾಗಿವೆ.

    ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ:  ಏನಮ್ಮಾ ಯಾರಾದ್ರೂ ಫೋನ್ ಮಾಡಿದ್ರೆ ರಿಸೀವ್ ಮಾಡಲ್ವಾ..?- ಪಿಎಸ್‍ಐಗೆ ಸಿದ್ದರಾಮಯ್ಯ ತರಾಟೆ

     

  • ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ – ಭಯದಲ್ಲಿ ಗ್ರಾಮದ ಜನರು!

    ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ – ಭಯದಲ್ಲಿ ಗ್ರಾಮದ ಜನರು!

    ಕೋಲಾರ: ಬೆಟ್ಟದ ಮೇಲಿರುವ ಪುಟ್ಟ ಹಳ್ಳಿಯಲ್ಲಿ ಕಳೆದ ರಾತ್ರಿ ಅಚಾನಕ್ಕಾಗಿ ನಡೆದ ಕ್ಷುಲ್ಲಕ ಗಲಾಟೆ ಇಡೀ ಹಳ್ಳಿಯಲ್ಲಿ ಜನರನ್ನು ಆತಂಕಕ್ಕೆ ದೂಡಿದೆ. ಗ್ರಾಮದಲ್ಲಿ ಪೊಲೀಸ್ ಕಣ್ಗಾವಲು ಹಾಕಿ ಗ್ರಾಮಸ್ಥರಿಗೆ ರಕ್ಷಣೆ ನೀಡುವಂತ ಸ್ಥಿತಿ ನಿರ್ಮಾಣವಾಗಿದೆ.

    ಗುಂಪು ಘರ್ಷಣೆಯಿಂದ ಹಲ್ಲೆಗೊಳಗಾಗಿರುವ ಮಹಿಳೆಯರು, ಯುವಕರು ಒಂದೆಡೆಯಾದರೆ, ಇನ್ನೊಂದಡೆ ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದಾರೆ. ಮತ್ತೊಂದು ಗುಂಪಿನ ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳು ಕಂಡುಬಂದಿದೆ. ಇದನ್ನೂ ಓದಿ: ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR

    ಏನಿದು ಘಟನೆ?
    ಶನಿವಾರ ರಾತ್ರಿ ಕೋಲಾರ ನಗರಕ್ಕೆ ಹೊಂದಿಕೊಂಡಿರುವ ತೇರಹಳ್ಳಿ ಬೆಟ್ಟದ ಮೇಲೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಘರ್ಷಣೆಯಲ್ಲಿ ಎರಡೂ ಗುಂಪಿನ ಸುಮಾರು 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ. ಗಲಾಟೆಗೆ ಕಾರಣವೇನು? ಅನ್ನೋದಾದ್ರೆ ನಿನ್ನೆ ರಾತ್ರಿ 8.30 ರ ಸುಮಾರಿಗೆ ತೇರಹಳ್ಳಿ ಗ್ರಾಮದಿಂದ ಹೊರಗೆ ನಾಲ್ಕೈದು ಯುವಕರಿಗೂ, ಮಾಲೂರಿನಿಂದ ಬಂದಿದ್ದ ಕೆಲವರಿಗೂ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ.

    ಈ ವೇಳೆ ಮಾಲೂರಿನಿಂದ ಬಂದಿದ್ದ ಕೆಲವರು ಬೆಟ್ಟದಿಂದ ಕೆಳಗೆ ಹೋಗಿ ತಮ್ಮ ಬೆಂಬಲಿಗರನ್ನು ಕರೆತಂದು ಏಕಾಏಕಿ ಗ್ರಾಮದಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದಾರೆ. ಏಕಾಏಕಿ ಗುಂಪಿನ ದಾಳಿಯಿಂದ ಗಾಬರಿಯಾದ ತೇರಹಳ್ಳಿ ಗ್ರಾಮದ ಜನರು ದಾಳಿಗೆ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಗ್ರಾಮದ ಐದಾರು ಜನರು ಗಾಯಗೊಂಡಿದ್ದಾರೆ. ಆದರೆ ದಾಳಿ ಮಾಡಿದ್ದೇಕೆ ಅನ್ನೋದು ಗ್ರಾಮಸ್ಥರಿಗೆ ಗೊತ್ತಿಲ್ಲ. ಗ್ರಾಮದ ಹೊರಗಿನ ಬೆಟ್ಟದಲ್ಲಿ ನಡೆದ ಗಲಾಟೆಗೂ ಗ್ರಾಮಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ ಅನವಶ್ಯಕವಾಗಿ ಬಂದ ಒಂದು ಗುಂಪು ಗ್ರಾಮದಲ್ಲಿ ಹಲ್ಲೆ ಮಾಡಿದೆ ಅನ್ನೋದು ಗ್ರಾಮಸ್ಥರ ಮಾತು.

    ಎರಡು ಗುಂಪುಗಳ ಗಲಾಟೆ ವೇಳೆ ಗ್ರಾಮದ ಮನೆಗಳಿಗೆ ನುಗ್ಗಿ ಕೆಲವರು ಹಲ್ಲೆ ಮಾಡಿರುವುದು ಒಂದೆಡೆಯಾದರೆ, ಗುಂಪು ಘರ್ಷಣೆ ವೇಳೆ ದಾಳಿ ಮಾಡಲು ಬಂದಿದ್ದ ಸುಮಾರು 10 ಕ್ಕೂ ಹೆಚ್ಚು ಜನ ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಪರಿಣಾಮ ಯುವಕರು ಕೋಲಾರದ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವವರು ಹೇಳುವ ಪ್ರಕಾರ ಬೆಟ್ಟದ ಮೇಲೆ ಹೋಗಿ ಬರುವಾಗ ಗ್ರಾಮದ ಕೆಲವರು ನಮ್ಮ ವಾಹನ ಅಡ್ಡಗಟ್ಟಿ ಹಣ ಒಡವೆ ಕೇಳಿದ್ದಾರೆ. ಆಗ ಹೊರಗಿನಿಂದ ಬೇರೆ ಜನರನ್ನು ಕರೆಸಿಕೊಂಡು ರಕ್ಷಣೆ ಪಡೆಯಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಟೈರ್ ಕೆಳಗೆ ಸಿಕ್ಕ ನೋಟ್ ತೆಗೆದುಕೊಳ್ಳಲು ವ್ಯಕ್ತಿ ಸರ್ಕಸ್

    ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ನಿಯಂತ್ರಣ ಮಾಡಿದ್ದಾರೆ. ಎರಡೂ ಗುಂಪುಗಳು ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ದೂರು ಪ್ರತಿದೂರು ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿಜಕ್ಕೂ ಆಗಿದ್ದೇನು ಅನ್ನೋದರ ಕುರಿತು ತನಿಖೆ ಕೈಗೊಂಡಿದ್ದಾರೆ.

    ಒಟ್ನಲ್ಲಿ ಈಗಾಗಲೇ ತೇರಹಳ್ಳಿ ಬೆಟ್ಟಕ್ಕೆ ಹೊರಗಿನಿಂದ ಜನರು ಬಂದು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಅನ್ನೋ ಕಾರಣಕ್ಕೆ ಪೊಲೀಸ್ ಚೆಕ್ ಪೋಸ್ಟ್ ನಿರ್ಮಿಸಿ ನಿರ್ಬಂಧ ಹಾಕಲಾಗಿತ್ತು. ಈ ಮಧ್ಯೆ ಬೆಟ್ಟದ ಗಲಾಟೆಯಿಂದ ಪೊಲೀಸರು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಂಡು ಜನರ ರಕ್ಷಣೆ ನೀಡಬೇಕಿದೆ.

  • ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಪರಸ್ಪರ ಜುಟ್ಟು ಹಿಡಿದು ಬಡಿದಾಡಿಕೊಂಡ ಮಹಿಳೆಯರು

    ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಪರಸ್ಪರ ಜುಟ್ಟು ಹಿಡಿದು ಬಡಿದಾಡಿಕೊಂಡ ಮಹಿಳೆಯರು

    – ಸಿಸಿಟಿವಿಯಲ್ಲಿ ಸೆರೆಯಾಯ್ತು ಹೊಡೆದಾಟದ ದೃಶ್ಯ

    ಬೆಂಗಳೂರು: ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಮಹಿಳೆಯರಿಬ್ಬರು ಮಾರಮಾರಿ ಬಡಿದಾಡಿಕೊಂಡಿರುವ ಘಟನೆ ಜೆಪಿ ನಗರದ ಎಸ್.ವಿ ಇನ್‍ಫ್ರಾ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.

    ಒಂದೇ ಅಪಾರ್ಟ್‍ಮೆಂಟ್‍ನಲ್ಲಿ ಬೇರೆ ಬೇರೆ ಫ್ಲಾಟ್‍ಗಳಲ್ಲಿ ವಾಸವಿರೋ ಕುಮಾರಿ ಹಾಗೂ ವರಲಕ್ಷ್ಮಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಕಳೆದ 14ರಂದು ಚಪ್ಪಲಿ ಸ್ಟಾಂಡ್ ವಿಚಾರಕ್ಕೆ ವರಲಕ್ಷ್ಮಿ ಹಾಗೂ ಕುಮಾರಿ ನಡುವೆ ಗಲಾಟೆ ಶುರುವಾಗಿತ್ತು. ಕುಮಾರಿ ಅವರ ಚಪ್ಪಲಿ ಸ್ಟ್ಯಾಂಡ್ ಅನ್ನು ವರಲಕ್ಷ್ಮಿ ಡ್ಯಾಮೇಜ್ ಮಾಡಿದ್ದರು.

    ಹೂವಿನ ಫಾಟ್‍ನಿಂದ ಚಪ್ಪಲಿ ಸ್ಟ್ಯಾಂಡ್‍ಗೆ ಹೊಡೆದು ವರಲಕ್ಷ್ಮಿ ಸ್ಟ್ಯಾಂಡ್ ಅನ್ನು ಡ್ಯಾಮೇಜ್ ಮಾಡಿದ್ದರು. ಇದನ್ನು ಪಕ್ಕದ ಫ್ಲಾಟ್‍ನ ನಿವಾಸಿ ಕುಮಾರಿ ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ, ಗಲಾಟೆ ಜೋರಾಗಿ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಮಹಿಳಾಮಣಿಯರು ಪರಸ್ಪರ ಜುಟ್ಟು ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಈ ದೃಶ್ಯ ಅಪಾರ್ಟ್‍ಮೆಂಟ್‍ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಗಲಾಟೆ ಸಂಬಂಧ ಮಹಿಳೆಯರಿಬ್ಬರು ಒಬ್ಬರ ಮೇಲೊಬ್ಬರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ಧೋನಿ, ರೋಹಿತ್ ಅಭಿಮಾನಿಗಳ ನಡುವೆ ಗಲಾಟೆ – ಓರ್ವ ಗಂಭೀರ

    ಧೋನಿ, ರೋಹಿತ್ ಅಭಿಮಾನಿಗಳ ನಡುವೆ ಗಲಾಟೆ – ಓರ್ವ ಗಂಭೀರ

    – ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ ಸೆಹ್ವಾಗ್

    ಮುಂಬೈ: ಭಾರತ ತಂಡದ ಮಾಜಿ ನಾಯಕ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿಗಳ ನಡುವೆ ಗಲಾಟೆಯಾಗಿದ್ದು, ಓರ್ವನಿಗೆ ಗಂಭೀರವಾಗಿ ಗಾಯವಾಗಿದೆ.

    ಈ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕುರುಂದವಾಡ್ ಎಂಬಲ್ಲಿ ನಡೆದಿದ್ದು, ವರದಿಯ ಪ್ರಕಾರ ಧೋನಿ ಅಭಿಮಾನಿಗಳು ರೋಹಿತ್ ಅಭಿಮಾನಿಯೋರ್ವನಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಕೇವಲ ಬ್ಯಾನರ್ ಹಾಕುವ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.

    ಅಗಸ್ಟ್ 15ರಂದು ನಿವೃತ್ತಿ ಘೋಷಣೆ ಮಾಡಿದ ಧೋನಿಯವ ಬ್ಯಾನರ್ ಅನ್ನು ಕುರುಂದವಾಡ್‍ನಲ್ಲಿ ಎಂಎಸ್‍ಡಿ ಅಭಿಮಾನಿಗಳು ಹಾಕಿದ್ದರು. ಕಳೆದ ಶನಿವಾರ ರೋಹಿತ್ ಶರ್ಮಾ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಬಂದಿದ್ದು, ಇದರ ಸಲುವಾಗಿ ರೋಹಿತ್ ಅಭಿಮಾನಿಗಳು ಕೂಡ ಇದೇ ಜಾಗದಲ್ಲಿ ಬ್ಯಾನರ್ ಹಾಕಿದ್ದಾರೆ. ಈ ವೇಳೆ ಧೋನಿಯವರ ಬ್ಯಾನರ್ ಅನ್ನು ಯಾರೋ ಕಿತ್ತು ಹಾಕಿದ್ದಾರೆ.

    ನೆಚ್ಚಿನ ಆಟಗಾರನ ಬ್ಯಾನರ್ ಅನ್ನು ಕಿತ್ತು ಹಾಕಿದ್ದಾರೆ ಎಂದು ರೊಚ್ಚಿಗೆಂದ ಧೋನಿ ಅಭಿಮಾನಿಗಳು, ರೋಹಿತ್ ಅಭಿಮಾನಿಯೋರ್ವನ ಜೊತೆ ಜಗಳವಾಡಿದ್ದಾರೆ. ಈ ವೇಳೆ ರೋಹಿತ್ ಅಭಿಮಾನಿ ಕೂಡ ಗಲಾಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಧೋನಿ ಅಭಿಮಾನಿಗಳು ರೋಹಿತ್ ಅಭಿಮಾನಿಯನ್ನು ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ಆ ಯುವಕ ಆಸ್ಪತ್ರೆ ಸೇರಿದ್ದಾನೆ.

    ಈ ವಿಚಾರ ವೈರಲ್ ಆಗಿ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡುತ್ತಿದಂತೆ ಬೇಸರಗೊಂಡ ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು, ಆಟಗಾರರು ಹೆಚ್ಚು ಮಾತನಾಡುವುದಿಲ್ಲ ನಿಜ. ಆದರೆ ಅವರು ಪರಸ್ಪರ ಜೊತೆಯಾಗಿ ಇರುತ್ತಾರೆ. ಅವರು ಅಗತ್ಯವಿರುವಷ್ಟು ಮಾತ್ರ ಮಾತನಾಡುತ್ತಾರೆ ಆದರೆ ಕೆಲವು ಅಭಿಮಾನಿಗಳು ಹುಚ್ಚರಾಗಿದ್ದಾರೆ. ದಯವಿಟ್ಟು ಪರಸ್ಪರರ ಕಿತ್ತಾಡಿಕೊಳ್ಳಬೇಡಿ ಮತ್ತು ಟೀಮ್ ಇಂಡಿಯಾವನ್ನು ಒಂದಾಗಿ ಪರಿಗಣಿಸಿ ಎಂದು ಟ್ವೀಟ್ ಮಾಡಿದ್ದಾರೆ.

    ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಧೋನಿ ಮತ್ತು ರೋಹಿತ್ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಐಪಿಎಲ್‍ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದರೆ, ಧೋನಿ ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.