Tag: Uppittu

  • ಬೆಳಗ್ಗಿನ ಉಪಾಹಾರಕ್ಕೆ ಮಾಡಿ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು

    ಬೆಳಗ್ಗಿನ ಉಪಾಹಾರಕ್ಕೆ ಮಾಡಿ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು

    ರೋಗ್ಯಕರ ಮಾತ್ರವಲ್ಲದೇ ರುಚಿಕರವೂ ಆದ ಓಟ್ಸ್‌ನ (Oats) ಅಡುಗೆಯನ್ನು ಮಕ್ಕಳು ಮಾತ್ರವಲ್ಲದೇ ವಯಸ್ಕರೂ ಇಷ್ಟ ಪಡುತ್ತಾರೆ. ಹಾಲು ಅಥವಾ ಮೊಸರಿನೊಂದಿಗೆ ಓಟ್ಸ್ ಅನ್ನು ಹೆಚ್ಚಿನವರು ಸವಿಯಲು ಇಷ್ಟಪಡುತ್ತಾರಾದರೂ ಮಸಾಲೆಯುಕ್ತ ಪಾಕವಿಧಾನವೂ ಅಷ್ಟೇ ರುಚಿಕರವಾಗಿರುತ್ತದೆ. ನಾವಿಂದು ಹೇಳಿಕೊಡುತ್ತಿರುವ ವೆಜ್ ಮಾಸಾಲಾ ಓಟ್ಸ್ ಉಪ್ಪಿಟ್ಟನ್ನು(Veg Masala Oats Upma) ಒಮ್ಮೆ ನೀವೂ ಕೂಡಾ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 2 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಸೀಳಿದ ಹಸಿರು ಮೆಣಸಿನಕಾಯಿ – 1
    ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಟೊಮೆಟೊ – 1
    ಸಣ್ಣಗೆ ಹೆಚ್ಚಿದ ಬೀನ್ಸ್ – 3
    ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – ಅರ್ಧ

    ತಾಜಾ ಬಟಾಣಿ – ಕಾಲು ಕಪ್
    ಸಣ್ಣಗೆ ಹೆಚ್ಚಿದ ಕ್ಯಾರೆಟ್ – 1
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಗರಂ ಮಸಾಲ ಪುಡಿ – ಅರ್ಧ ಟೀಸ್ಪೂನ್
    ರೋಲ್ಡ್ ಓಟ್ಸ್ – 1 ಕಪ್
    ನೀರು – 2 ಕಪ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಕತ್ತರಿಸಿದ ಗೋಡಂಬಿ – 2 ಟೀಸ್ಪೂನ್ ಇದನ್ನೂ ಓದಿ: ಬೇಳೆ ಬಳಸದೇ ಮಾಡಿ ರುಚಿಕರವಾದ ರಸಂ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಜೀರಿಗೆ ಸೇರಿಸಿ ಪರಿಮಳ ಬರುವವರೆಗೆ ಹುರಿಯಿರಿ.
    * ಈಗ ಈರುಳ್ಳಿ ಸೇರಿಸಿ ಮತ್ತು ಚೆನ್ನಾಗಿ ಸಾಟ್ ಮಾಡಿ.
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಫ್ರೈ ಮಾಡಿ.
    * ಈಗ ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.
    * ಬಳಿಕ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಮತ್ತು ಬಟಾಣಿ ಹಾಕಿ 2 ನಿಮಿಷ ಬೇಯಿಸಿ.
    * ಈಗ ಮೆಣಸಿನ ಪುಡಿ, ಗರಂ ಮಸಾಲ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ 1 ನಿಮಿಷ ಬೇಯಿಸಿ.
    * ಓಟ್ಸ್ ಸೇರಿಸಿ, 1 ನಿಮಿಷ ಸಾಟ್ ಮಾಡಿ.
    * ಇದೀಗ 2 ಕಪ್ ನೀರು ಸೇರಿಸಿ. ನಿಮಗೆ ಬೇಕಾಗಿರುವ ಸ್ಥಿರತೆಯನ್ನು ಅಂದಾಜಿಸಿ ಹೆಚ್ಚುವರಿ ನೀರು ಸೇರಿಸಬಹುದು.
    * ಈಗ ಎಲ್ಲವನ್ನೂ ನಿಧಾನವಾಗಿ ಮಿಶ್ರಣ ಮಾಡಿ, ಕಡಾಯಿಯನ್ನು ಮುಚ್ಚಿ, 5 ನಿಮಿಷಗಳ ಕಾಲ ಕುದಿಸಿ.
    * ಈಗ ಕೊತ್ತಂಬರಿ ಸೊಪ್ಪು ಮತ್ತು ಕತ್ತರಿಸಿದ ಗೋಡಂಬಿಯನ್ನು ಹಾಕಿದರೆ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು ತಯಾರಾಗುತ್ತದೆ. ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]

  • ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯಾಗಿ ಮಾಡಿ – ಟ್ವಿಟ್ಟರ್‍ನಲ್ಲಿ ಭಾರೀ ಚರ್ಚೆ

    ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯಾಗಿ ಮಾಡಿ – ಟ್ವಿಟ್ಟರ್‍ನಲ್ಲಿ ಭಾರೀ ಚರ್ಚೆ

    ಬೆಂಗಳೂರು: ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿ, ರಾಷ್ಟ್ರೀಯ ಮರ ಯಾವುದು ಅಂತಾ ಕೇಳಿದ್ರೆ ಥಟ್ ಅಂತಾ ಅನ್ಸರ್ ಮಾಡ್ತೇವೆ. ಆದ್ರೆ ರಾಷ್ಟ್ರೀಯ ತಿಂಡಿ ಯಾವುದು ಅಂತಾ ಕೇಳಿದ್ರೆ ಏನ್ ಹೇಳ್ತೀರಾ?

    ಹೌದು. ಇನ್ಮುಂದೆ ಉಪ್ಪಿಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಮಾಡುವಂತೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಆಗಿದೆ. ತಮಿಳು ನಟ, ನಿರ್ದೇಶಕ ಪಾರ್ತೀಬನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಉಪ್ಪಿಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಮಾಡಬೇಕೆಂದು ಹೇಳಿದ್ದಾರೆ.

    ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ಟ್ವಿಟ್ಟರ್‍ನಲ್ಲಿ ಸಂಚಲನ ಮೂಡಿಸುತ್ತಿದ್ದು, ಭಾರೀ ಪರ-ವಿರೋಧ ಚರ್ಚೆಗಳು ಕೂಡ ನಡೆಯುತ್ತಿದೆ.

     

    https://twitter.com/ShantanuChikara/status/877105042167398400

    https://twitter.com/MrTheCHOWDHRY/status/877085082510544896