Tag: Uppi 2

  • ಉಪೇಂದ್ರ UI ಚಿತ್ರ ಸೇರಿಕೊಂಡ ಶ್ರುತಿ ನಂದೀಶ್

    ಉಪೇಂದ್ರ UI ಚಿತ್ರ ಸೇರಿಕೊಂಡ ಶ್ರುತಿ ನಂದೀಶ್

    ಸ್ಯಾಂಡಲ್‌ವುಡ್ (Sandalwood) ನಟಿ ಶ್ರುತಿ ನಂದೀಶ್ (Shruthi Nandeesh) ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಇದೀಗ ಮತ್ತೆ ಉಪೇಂದ್ರ ಚಿತ್ರತಂಡ ಸೇರಿಕೊಂಡಿದ್ದಾರೆ. ಭಿನ್ನ ಪಾತ್ರ ಮೂಲಕ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ರಾಕಿಭಾಯ್ ಹೆಸರಿನಲ್ಲಿ ಸಲ್ಮಾನ್ ಖಾನ್‌ಗೆ ಧಮ್ಕಿ

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶಿಸಿರುವ UI ಚಿತ್ರಕ್ಕೆ ಮತ್ತೊಬ್ಬ ನಟಿಯ ಆಗಮನವಾಗಿದೆ. ಈ ಹಿಂದೆ ಉಪೇಂದ್ರ ಜೊತೆ ಉಪ್ಪಿ 2, ಉಪೇಂದ್ರ ಮತ್ತೆ ಬಾ ಸಿನಿಮಾಗಳಲ್ಲಿ ನಟಿಸಿದ್ದ ಶ್ರುತಿ ನಂದೀಶ್ ಇದೀಗ UI ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    ಚಿತ್ರದಲ್ಲಿ ಉಪ್ಪಿ ಜೊತೆ ಸಪೋರ್ಟಿಂಗ್ ರೋಲ್‌ನಲ್ಲಿ ಶ್ರುತಿ ನಂದೀಶ್ ನಟಿಸುತ್ತಿದ್ದು, ಎರಡು ಡಿಫರೆಂಟ್ ಶೇಡ್‌ನಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ. ಯುಐ ಚಿತ್ರಕ್ಕೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaih)ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಉಪ್ಪಿ ನಿರ್ದೇಶನದ ಈ ಸಿನಿಮಾದಲ್ಲಿ, ನಿಧಿ ಸುಬ್ಬಯ್ಯ, ನೀತು ವನಜಾಕ್ಷಿ, ಶ್ರುತಿ ನಂದೀಶ್ ಸೇರಿದಂತೆ ಹಲವು ನಟಿಸಿದ್ದಾರೆ.

  • ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ನೆನ್ನೆಯಷ್ಟೇ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ, ಸ್ಯಾಂಡಲ್ ವುಡ್ ಪ್ರತಿಭಾನ್ವಿತ ತಲೆಗಳಿಗೆ ಹುಳ ಬಿಟ್ಟಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಬಿಡುಗಡೆ ಆಗಿರುವ ಪೋಸ್ಟರ್ ಚಂದನವನದಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪೋಸ್ಟರ್ ಕುರಿತು ಹೇಳುತ್ತಿದ್ದಾರೆ. ಆದರೆ, ಉಪ್ಪಿ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ನಗ್ತಾ ಸಿನಿಮಾದ ಶೂಟಿಂಗೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

    ಹೊಸ ಸಿನಿಮಾದ ಟೈಟಲ್ ಇಂಥದ್ದೇ ಅಂತ ಹೇಳುವುದು ಕಷ್ಟವಾದರೂ, ಸದ್ಯಕ್ಕೆ ‘ಯುಐ’ ಎಂದು ಹೇಳುವ ಆ ಸಿನಿಮಾ ಹುಟ್ಟಿಗೆ ಕಾರಣ ದಕ್ಷಿಣದ ಖ್ಯಾತ ನಟಿ ನಯನತಾರಾ ಎನ್ನುವುದು ವಿಶೇಷ. ಉಪೇಂದ್ರ ಜತೆ ಉಪ್ಪಿ 2 ಚಿತ್ರದಲ್ಲಿ ನಟಿಸಿದ್ದ ನಯನತಾರಾ, ಇಂಥದ್ದೊಂದು ಸಿನಿಮಾ ಹುಟ್ಟಿಗೆ ಕಾರಣವಾಗಿದ್ದನ್ನು ಸ್ವತಃ ಉಪೇಂದ್ರ ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    “ಸಿನಿಮಾದ ಎಳೆ ನನ್ನನ್ನು ತುಂಬಾ ಕಾಡುತ್ತಿತ್ತು. ಉಪ್ಪಿ 2 ಸಿನಿಮಾದ ಶೂಟಿಂಗ್ ವೇಳೆ ಅದನ್ನು ನಯನತಾರಾ ಅವರ ಬಳಿ ಹೇಳಿಕೊಂಡೆ. ಇಂತಹ ಥಾಟ್ಸ್ ನಿಮ್ಮಲ್ಲಿಯೇ ಉಳಿಯಬಾರದು, ಅದನ್ನು ಜನರಿಗೂ ನೀವು ಹೇಳಬೇಕು ಅಂತ ಒತ್ತಾಯಿಸಿದರು. ಅಲ್ಲಿಂದಲೇ ಈ ಎಳೆಯ ಮೇಲೆ ಸೀರಿಯಸ್ ಆಗಿ ವರ್ಕ್ ಮಾಡೋಕೆ ಶುರು ಮಾಡಿದೆ’ ಎಂದಿದ್ದಾರೆ ಉಪೇಂದ್ರ. ಇದನ್ನೂ ಓದಿ : ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

    ಉಪೇಂದ್ರ ಮತ್ತು ನಯನತಾರ ಒಂದೇ ರೀತಿಯಲ್ಲಿ ಯೋಚಿಸುವಂಥವರು. ಈ ಜೋಡಿಯ ಸಿನಿಮಾ ಕೂಡ ಸಾಕಷ್ಟು ಸದ್ದು ಮಾಡಿತ್ತು. ಹಾಗಾಗಿ ಹೊಸ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಮೇ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಅಷ್ಟರಲ್ಲಿ ಕಲಾವಿದರ ಆಯ್ಕೆಯನ್ನೂ ಮಾಡಿಕೊಳ್ಳುತ್ತಾರಂತೆ ಉಪೇಂದ್ರ. ಇದನ್ನೂ ಓದಿ : ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್

    ಲಹರಿ ಫಿಲ್ಮ್ಸ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕೆ.ಪಿ.ಶ್ರೀಕಾಂತ್ ಕೂಡ ನಿರ್ಮಾಣದ ಹೊಣೆ ಹೊತ್ತಿದ್ದಾರೆ.