Tag: Uppi

  • ಉಪೇಂದ್ರ ಅವರ  ಹೊಸ ಸಿನಿಮಾದ ಪೋಸ್ಟರ್: ಅಸಲಿನಾ..? ನಕಲಿನಾ..?

    ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್: ಅಸಲಿನಾ..? ನಕಲಿನಾ..?

    ಮೊನ್ನೆಯಷ್ಟೇ ರಿಲೀಸ್ ಆಗಿರುವ ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್, ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಕೊಂಬಿನ ಕುದುರೆ ಏರಿ ಬಂದ ಉಪೇಂದ್ರ ಅವರು ತಮ್ಮ ಸಿನಿಮಾದ ಪೋಸ್ಟರ್ ಅನ್ನು ಬೇರೆ ಸಿನಿಮಾದಿಂದ ಎರವಲು ಪಡೆದ್ರಾ ಅಥವಾ ಏನೂ ಗೊತ್ತಿಲ್ಲದೇ ತಮ್ಮ ಸ್ವಂತ ಬುದ್ಧಿವಂತಿಕೆಯಿಂದ ತಯಾರು ಮಾಡಿದ್ರಾ ಎನ್ನುವ ಪ್ರಶ್ನೆಯನ್ನು ಹಲವು ಸೋಷಿಯಲ್ ಮೀಡಿಯಾ ಮೂಲಕ ಕೇಳಿದ್ದಾರೆ. ಅದಕ್ಕೆ ಪೂರಕ ದಾಖಲೆಯನ್ನು ಅವರು ನೀಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಕಳೆದ ವರ್ಷವಷ್ಟೇ ಬಿಡುಗಡೆ ಆಗಿರುವ ಜೇಮ್ಸ್ ಡಿಮೊನಾಕೋ ಅವರು ಬರೆದು, ನಿರ್ಮಿಸಿದ  ‘ದಿ ಫಾರೆವರ್ ಪರ್ಜ್’ ಸಿನಿಮಾದ ಪೋಸ್ಟರ್ ಗೂ ಮತ್ತು ಉಪೇಂದ್ರ ಅವರು ಬಿಡುಗಡೆ ಮಾಡಿರುವ ಪೋಸ್ಟರ್ ಗೂ ಸಾಕಷ್ಟು ಹೋಲಿಕೆ ಕಾಣುತ್ತದೆ. ಹೀಗಾಗಿ ಬಹುತೇಕ ಇದೇ ಸಿನಿಮಾದ ಸ್ಫೂರ್ತಿಯಿಂದಾಗಿ ರಿಯಲ್ ಸ್ಟಾರ್ ತಮ್ಮ ಸಿನಿಮಾದ ಪೋಸ್ಟರ್ ತಯಾರಿಸಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

    ಉಪೇಂದ್ರ ಅವರ ಪೋಸ್ಟರ್ ನಲ್ಲಿ ಗತಿಸಿದ ಇತಿಹಾಸ, ಮಸೀದೆ, ದೇವಾಲಯ, ಚರ್ಚ್ ಗಳ ಅವಶೇಷಗಳಿವೆ. ರೈಲಿದೆ, ಸ್ಯಾಟ್ ಲೈಟ್ ಕೂಡ ಕಾಣುತ್ತದೆ.  ನಶಿಸಿದ ನಾಗರೀಕತೆಯ ಕುರುಹುಗಳಿವೆ. ಎರಡು ಕಾಲ ಘಟ್ಟವನ್ನು ಬೆಸೆಯುವಂತಹ ಧೀರನಾಗಿ ಕಲ್ಕಿ ಅವತಾರವಿದೆ. ‘ದಿ ಫಾರೆವರ್ ಪರ್ಜ್’ ನಲ್ಲಿ ಯುಎಸ್ ಕಾರ್ಟೆಲ್ ಗಳ ಹಿಂಸಾಚಾರದಿಂದ ಪಾರಾಗಲು ಗಡಿ ದಾಟಿದ ಮೆಕ್ಸಿಕನ್ ವಲಸಿಗರ ಮೇಲಿನ ಕಥೆ ಈ ಸಿನಿಮಾದಲ್ಲಿದೆ. ಹೀಗಾಗಿ ಬಹಳಷ್ಟು ಅಂಶಗಳು ಎರಡೂ ಸಿನಿಮಾದ ಕೊಡುಕೊಳ್ಳುವಿಕೆಯ ಭಾಗವಾಗಿವೆಯಾ ಎಂಬ ಅನುಮಾನ ಕೂಡ ಮೂಡುತ್ತದೆ. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ಇದರ ಜತೆಗೆ ಇನ್ನೂ ಎರಡು ಪೋಸ್ಟರ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆ ಪೋಸ್ಟರ್ ಗಳು ಯಾವ ಸಿನಿಮಾದ್ದು ಎನ್ನುವ ಹುಡುಕಾಟ ಕೂಡ ನಡೆದಿದೆ. ಈ ಎಲ್ಲದರ ಸ್ಫೂರ್ತಿಯಿಂದಾಗಿಯೇ ಉಪ್ಪಿ ತಮ್ಮ ಚಿತ್ರದ ಪೋಸ್ಟರ್ ರೆಡಿ ಮಾಡಿದ್ದಾರಾ ಎಂದು ಅವರೇ ಸ್ಪಷ್ಟ ಪಡಿಸಬೇಕು.

  • ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ನೆನ್ನೆಯಷ್ಟೇ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ, ಸ್ಯಾಂಡಲ್ ವುಡ್ ಪ್ರತಿಭಾನ್ವಿತ ತಲೆಗಳಿಗೆ ಹುಳ ಬಿಟ್ಟಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಬಿಡುಗಡೆ ಆಗಿರುವ ಪೋಸ್ಟರ್ ಚಂದನವನದಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪೋಸ್ಟರ್ ಕುರಿತು ಹೇಳುತ್ತಿದ್ದಾರೆ. ಆದರೆ, ಉಪ್ಪಿ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ನಗ್ತಾ ಸಿನಿಮಾದ ಶೂಟಿಂಗೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

    ಹೊಸ ಸಿನಿಮಾದ ಟೈಟಲ್ ಇಂಥದ್ದೇ ಅಂತ ಹೇಳುವುದು ಕಷ್ಟವಾದರೂ, ಸದ್ಯಕ್ಕೆ ‘ಯುಐ’ ಎಂದು ಹೇಳುವ ಆ ಸಿನಿಮಾ ಹುಟ್ಟಿಗೆ ಕಾರಣ ದಕ್ಷಿಣದ ಖ್ಯಾತ ನಟಿ ನಯನತಾರಾ ಎನ್ನುವುದು ವಿಶೇಷ. ಉಪೇಂದ್ರ ಜತೆ ಉಪ್ಪಿ 2 ಚಿತ್ರದಲ್ಲಿ ನಟಿಸಿದ್ದ ನಯನತಾರಾ, ಇಂಥದ್ದೊಂದು ಸಿನಿಮಾ ಹುಟ್ಟಿಗೆ ಕಾರಣವಾಗಿದ್ದನ್ನು ಸ್ವತಃ ಉಪೇಂದ್ರ ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    “ಸಿನಿಮಾದ ಎಳೆ ನನ್ನನ್ನು ತುಂಬಾ ಕಾಡುತ್ತಿತ್ತು. ಉಪ್ಪಿ 2 ಸಿನಿಮಾದ ಶೂಟಿಂಗ್ ವೇಳೆ ಅದನ್ನು ನಯನತಾರಾ ಅವರ ಬಳಿ ಹೇಳಿಕೊಂಡೆ. ಇಂತಹ ಥಾಟ್ಸ್ ನಿಮ್ಮಲ್ಲಿಯೇ ಉಳಿಯಬಾರದು, ಅದನ್ನು ಜನರಿಗೂ ನೀವು ಹೇಳಬೇಕು ಅಂತ ಒತ್ತಾಯಿಸಿದರು. ಅಲ್ಲಿಂದಲೇ ಈ ಎಳೆಯ ಮೇಲೆ ಸೀರಿಯಸ್ ಆಗಿ ವರ್ಕ್ ಮಾಡೋಕೆ ಶುರು ಮಾಡಿದೆ’ ಎಂದಿದ್ದಾರೆ ಉಪೇಂದ್ರ. ಇದನ್ನೂ ಓದಿ : ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

    ಉಪೇಂದ್ರ ಮತ್ತು ನಯನತಾರ ಒಂದೇ ರೀತಿಯಲ್ಲಿ ಯೋಚಿಸುವಂಥವರು. ಈ ಜೋಡಿಯ ಸಿನಿಮಾ ಕೂಡ ಸಾಕಷ್ಟು ಸದ್ದು ಮಾಡಿತ್ತು. ಹಾಗಾಗಿ ಹೊಸ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಮೇ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಅಷ್ಟರಲ್ಲಿ ಕಲಾವಿದರ ಆಯ್ಕೆಯನ್ನೂ ಮಾಡಿಕೊಳ್ಳುತ್ತಾರಂತೆ ಉಪೇಂದ್ರ. ಇದನ್ನೂ ಓದಿ : ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್

    ಲಹರಿ ಫಿಲ್ಮ್ಸ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕೆ.ಪಿ.ಶ್ರೀಕಾಂತ್ ಕೂಡ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

  • ಮಾ.11ರ  12:46 ವೇಳೆ ಸೇವ್ ಮಾಡ್ಕೊಳ್ಳಿ: ಕನ್ ಫ್ಯೂಸ್ ಮಾಡಿದ ಉಪೇಂದ್ರ

    ಮಾ.11ರ 12:46 ವೇಳೆ ಸೇವ್ ಮಾಡ್ಕೊಳ್ಳಿ: ಕನ್ ಫ್ಯೂಸ್ ಮಾಡಿದ ಉಪೇಂದ್ರ

    ನರನ್ನು ಕನ್ ಫ್ಯೂಸ್ ಮಾಡುವುದರಲ್ಲಿ ನಂಬರ್ ಒನ್ ಸ್ಥಾನ ಉಪೇಂದ್ರ ಅವರಿಗೆ ಕೊಡಲೇಬೇಕು. ಯಾವುದನ್ನೂ ಈ ರಿಯಲ್ ಸ್ಟಾರ್ ನೆಟ್ಟಗೆ ಹೇಳುವುದಿಲ್ಲ. ಮೊದಲ ಸಿನಿಮಾದಿಂದ ಈವರೆಗೂ ಅವರು ಪ್ರೇಕ್ಷಕರ ತಲೆಗೆ ಹುಳು ಬಿಡುತ್ತಲೇ ಬಂದಿದ್ದಾರೆ. ಈಗ ಮತ್ತೆ ಅದನ್ನೇ ಮಾಡಿದ್ದಾರೆ. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    11.03, 12:46 ಸೇವ್ ದಿಸ್ ಡೇಟ್ ಎಂದು ಮಸೇಜ್ ಕಳುಹಿಸಿ ಸುಮ್ಮನೆ ಕೂತು ಬಿಟ್ಟಿದ್ದಾರೆ. ಹೀಗೆ ಪೋಸ್ಟರ್ ವೊಂದನ್ನು ಹರಿಬಿಡುತ್ತಿದ್ದಂತೆಯೇ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದಾರೆ. ರಿಯಲ್ ಸ್ಟಾರ್ ಎರಡು ದೋಣೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಒಂದು ದೋಣೆ ಸಿನಿಮಾದ ಸಮುದ್ರದಲ್ಲಿ ಸಾಗುತ್ತಿದ್ದರೆ, ಮತ್ತೊಂದು ದೋಣಿ ಪ್ರಜಾಕೀಯದಲ್ಲಿ ತೇಲುತ್ತಿದೆ. ಮಾರ್ಚ್ 11ರಂದು ಇವರು ಸಾಗುತ್ತಿರುವ ವಿಷ್ಯ ಹೇಳ್ತಾರಾ? ಅಥವಾ ತೇಲುತ್ತಿರುವ ಕುರಿತು ಮಾತಾಡ್ತಾರಾ ಎನ್ನುವುದು ಸಸ್ಪೆನ್ಸ್. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

    ಪ್ರಜಾಕೀಯದಲ್ಲಿ ಉಪೇಂದ್ರ ತುಂಬಾ ಸೀರಿಯಸ್ ಆಗಿ ಕೆಲಸ ಮಾಡುತ್ತಿಲ್ಲ. ಕೇವಲ ಸಂದೇಶಗಳನ್ನು ಹರಿಬಿಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಚುನಾವಣೆ ಇನ್ನೂ ದೂರವಿದೆ. ಬಿಬಿಎಂಪಿ ಚುನಾವಣೆ ಬಗ್ಗೆ ಏನಾದರೂ ಹೇಳುತ್ತಾರಾ ಅಂದರೆ, ಅಸಲಿಯಾಗಿ ಉಪೇಂದ್ರ ಅವರಿಗೆ ಬಿಬಿಎಂಪಿ ಚುನಾವಣೆಯ ಬಗ್ಗೆ ಅಷ್ಟೇನೂ ಆಸಕ್ತಿ ಕಾಣುತ್ತಿಲ್ಲ. ಹಾಗಾಗಿ ಅವರ ನಿರ್ದೇಶನದ ಸಿನಿಮಾ ಬಗ್ಗೆ ಏನಾದರೂ ಅಪ್ ಡೇಟ್ ಕೊಡಬಹುದು ಎನ್ನಬಹುದು. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಉಪೇಂದ್ರ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೂ ಈ ಕುರಿತು ಅವರು ಕೆಲ ಮಾಹಿತಿಯನ್ನೂ ಕೊಟ್ಟಿದ್ದಾರೆ. ಒಂದು ಪೋಸ್ಟರ್ ಕೂಡ ರಿಲೀಸ್ ಆಗಿದೆ. ಸಾವಿರಾರು ಕಲಾವಿದರು ಈ ಸಿನಿಮಾಗೆ ಬೇಕಾಗಿದ್ದರಿಂದ ಆಡಿಷನ್ ಕೂಡ ಮಾಡುತ್ತಿದ್ದಾರೆ. ಕನ್ನಡದ್ದೇ ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ಸಿನಿಮಾ ಕುರಿತು ಅವರು ಮಾಹಿತಿ ಕೊಡುತ್ತಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಇವೆಲ್ಲದರ ಮಧ್ಯೆ ಅವರ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದರ ಮಾಹಿತಿ ಏನಾದರೂ ಕೊಟ್ಟು, ಇವೆಲ್ಲವನ್ನೂ ಸುಳ್ಳು ಮಾಡುತ್ತಾರಾ ಎನ್ನುವ ಗೊಂದಲ ಕೂಡ ಮೂಡಿದೆ. ಏನೇ ಆಗಲಿ ಎರಡು ರಾತ್ರಿ ಕಳೆದರೆ, ಉಪ್ಪಿ ಏನ್ ಹೇಳ್ತಾರೆ ಎನ್ನುವುದನ್ನು ನೋಡಬಹುದು.

  • ಉಪ್ಪಿ, ಶಿವಣ್ಣ ಸಿನೆಮಾ ಒಂದೇ ದಿನ ರಿಲೀಸ್?

    ಉಪ್ಪಿ, ಶಿವಣ್ಣ ಸಿನೆಮಾ ಒಂದೇ ದಿನ ರಿಲೀಸ್?

    ಬೆಂಗಳೂರು: ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ತೆರೆ ಕಾಣುವಂಥಾ ಅಪರೂಪದ ವಾತಾವರಣ ಆಗಾಗ ಸೃಷ್ಟಿಯಾಗುತ್ತಿರುತ್ತದೆ. ಕೆಲ ಸಂದರ್ಭದಲ್ಲಿದ್ದು ಸ್ಟಾರ್ ವಾರ್ ಸ್ವರೂಪ ಪಡೆದುಕೊಂಡರೆ, ಮತ್ತೆ ಕೆಲ ಘಳಿಗೆಗಳಲ್ಲಿ ಆರೋಗ್ಯವಂತ ಸ್ಪರ್ಧೆಗೂ ಅನುವು ಮಾಡಿ ಕೊಡುತ್ತದೆ. ಅಂಥಾದ್ದೇ ಒಂದು ಆರೋಗ್ಯಕರ ಕದನಕ್ಕೆ ಜೂನ್ 14ರಂದು ಮುಹೂರ್ತ ನಿಗದಿಯಾಗಿದೆ!

    ಜೂನ್ ಹದಿನಾಲಕ್ಕರಂದು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರ ಬಿಡುಗಡೆಯಾಗುತ್ತಿರೋದು ಗೊತ್ತೇ ಇದೆ. ಆರ್ ಚಂದ್ರು ನಿರ್ದೇಶನದ ಈ ಚಿತ್ರ ಈಗಾಗಲೇ ಒಂದಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದನ್ನು ಕಣ್ತುಂಬಿಕೊಳ್ಳಲು ಉಪ್ಪಿ ಅಭಿಮಾನಿಗಳೆಲ್ಲ ಕಾತರರಾಗಿದ್ದಾರೆ. ಇದೀಗ ಅದೇ ದಿನ ಶಿವಣ್ಣನ ರುಸ್ತುಂ ಚಿತ್ರವೂ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಅಷ್ಟಕ್ಕೂ ರುಸ್ತುಂ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಗಳೇ ಇವೆ. ಸಾಹಸ ನಿರ್ದೇಶಕರಾಗಿದ್ದ ರವಿವರ್ಮ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದರಲ್ಲಿ ಶಿವಣ್ಣನ ಪಾತ್ರ, ಉಳಿಕೆ ತಾರಾಗಣವೆಲ್ಲವೂ ಡಿಫರೆಂಟಾಗಿಯೇ ಇದೆ. ರಚಿತಾ ರಾಮ್, ಮಯೂರಿ, ಸೋನು ಗೌಡ ನಾಯಕಿಯರಾಗಿ ನಟಿಸಿದ್ದಾರೆ. ಶಿವಣ್ಣನ ವೃತ್ತಿಜೀವನದ ವಿಶಿಷ್ಟವಾದ ಚಿತ್ರವಾಗಿ ರುಸ್ತುಂ ನೆಲೆಯಾಗಲಿದೆ ಎಂಬ ಮಾತುಗಳೂ ಇವೆ. ಹೀಗೆ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ ಎಂದರೆ ಯಾರಿಗಾದರೂ ಕುತೂಹಲ ಇದ್ದೇ ಇರುತ್ತೆ.

    ಉಪೇಂದ್ರ ಮತ್ತು ಶಿವಣ್ಣ ಸ್ಯಾಂಡಲ್ ವುಡ್‍ನ ಜೀವದ ಗೆಳೆಯರು. ಉಪೇಂದ್ರ ಅವರಂತೂ ಶಿವಣ್ಣ ಏನಾದರೂ ಹುಡುಗಿಯಾಗಿದ್ದರೆ ಪ್ರಪೋಸ್ ಮಾಡಿ ಮದುವೆಯಾಗಿ ಬಿಡುವಂಥಾ ಮಾತುಗಳನ್ನು ಬಹಿರಂಗವಾಗಿಯೇ ಹೇಳಿದ್ದರು. ಶಿವಣ್ಣನ ಮೇಲೆ ಅಂಥಾ ಪ್ರೀತಿ ಇಟ್ಟುಕೊಂಡಿರೋ ಉಪ್ಪಿ ಅವರ ಚಿತ್ರದೊಟ್ಟಿಗೇ ತಮ್ಮ ಚಿತ್ರವೂ ಬಿಡುಗಡೆಯಾಗುತ್ತಿರೋದರ ಬಗ್ಗೆ ಥ್ರಿಲ್ ಆಗಿದ್ದಾರಂತೆ.

  • ಸಿಂಗಲ್ ಪೀಸಲ್ಲಿ ಐ ಲವ್ ಯೂ ಅಂದ್ರು ಉಪ್ಪಿ!

    ಸಿಂಗಲ್ ಪೀಸಲ್ಲಿ ಐ ಲವ್ ಯೂ ಅಂದ್ರು ಉಪ್ಪಿ!

    ಬೆಂಗಳೂರು:  ಪ್ರ್ಯಾಕ್ಟಿಕಲ್ ಡೈಲಾಗುಗಳ ಮೂಲಕವೇ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡವರು ಉಪೇಂದ್ರ. ಅವರಿಗೆ ರಿಯಲ್ ಸ್ಟಾರ್ ಎಂಬ ಬಿರುದು ಬಂದಿರೋದು ಕೂಡಾ ಈ ಕಾರಣದಿಂದಲೇ. ಇದೀಗ ಮತ್ತೆ ಅವರು ಉಪೇಂದ್ರ ಚಿತ್ರದ ಟ್ರ್ಯಾಕಿಗೆ ಮರಳಿದರಾ? ಹೀಗೊಂದು ಪ್ರಶ್ನೆಯನ್ನು ಹುಟ್ಟು ಹಾಕಿರೋದು ಆರ್ ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರ!

    ಆರಂಭದಿಂದಲೂ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಐ ಲವ್ ಯೂ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದರಲ್ಲಿ ಸಿಂಗಲ್ ಪೀಸಲ್ಲಿ ಪವಡಿಸಿರೋ ಉಪ್ಪಿ ಬಾಯಲ್ಲಿ ರೋಸ್ ಕಚ್ಚಿಕೊಂಡು ಪ್ರೀತಿ ಪಾಠ ಹೇಳಿದ್ದಾರೆ. ಐ ಲವ್ ಯೂ ಅಂದ್ರೇನೆಂಬುದನ್ನು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ.

    ಇದೆಲ್ಲವನ್ನೂ ನೋಡುತ್ತಿದ್ದರೆ ಉಪ್ಪಿ ತಮ್ಮನ್ನು ಸ್ಟಾರ್ ಆಗಿಸಿದ ಉಪೇಂದ್ರ ಚಿತ್ರದ ಟ್ರ್ಯಾಕಿಗೇ ಮರಳಿದಂತಿದೆ. ಇದುವರೆಗೂ ಪ್ರೀತಿ ಪ್ರೇಮದ ನವಿರಾದ ಭಾವಗಳ ಮೂಲಕವೇ ಗೆದ್ದಿರೋ ನಿರ್ದೇಶಕ ಆರ್. ಚಂದ್ರು ಮತ್ತು ಪ್ರೀತಿಯ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ಹೊಂದಿರೋ ಉಪೇಂದ್ರ ಒಂದಾಗಿರೋದರಿಂದ ಏನೋ ಕಮಾಲ್ ಸೃಷ್ಟಿಯಾಗೋ ನಿರೀಕ್ಷೆಯೂ ಇದೆ.

    ಐ ಲವ್ ಯೂ ಚಿತ್ರದ ಫಸ್ಟ್ ಲುಕ್ಕಿನಲ್ಲಿ ಆರ್. ಚಂದ್ರು ಮಾಮೂಲಿ ಟ್ರ್ಯಾಕು ಬಿಟ್ಟಿರುವ ಮತ್ತು ಉಪೇಂದ್ರ ಹಳೇ ಟ್ರ್ಯಾಕು ಹಿಡಿದಿರುವ ಸೂಚನೆ ಸ್ಪಷ್ಟವಾಗಿಯೇ ಸಿಕ್ಕಿವೆ!

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=cRJuJ0qnVbk&feature=youtu.be