Tag: Upper Krishna Project

  • UKP 3ನೇ ಹಂತ| ಮುಳುಗಡೆ ಸಂತ್ರಸ್ತರಿಗೆ 40 ಲಕ್ಷ ಪರಿಹಾರ – ಯಾರಿಗೆ ಎಷ್ಟು ಸಿಗುತ್ತೆ?

    UKP 3ನೇ ಹಂತ| ಮುಳುಗಡೆ ಸಂತ್ರಸ್ತರಿಗೆ 40 ಲಕ್ಷ ಪರಿಹಾರ – ಯಾರಿಗೆ ಎಷ್ಟು ಸಿಗುತ್ತೆ?

    ಬೆಂಗಳೂರು: ಕೃಷ್ಣ ಮೇಲ್ದಂಡೆ ಯೋಜನೆ (Upper Krishna Project) ಮೂರನೇ ಹಂತದಲ್ಲಿ ಬಾಗಲಕೋಟೆ (Bagalkote) ಜಿಲ್ಲೆಯ ಆಲಮಟ್ಟಿ ಡ್ಯಾಂ (Almatti Dam) ಎತ್ತರ ಹೆಚ್ಚಳ ಯೋಜನೆ ಸಂಬಂಧ ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಇಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿಯೆ ವಿಶೇಷ ಸಚಿವ ಸಂಪುಟ ಸಭೆ ಇಂದು ನಡೆದಿದ್ದು ಸಭೆಯಲ್ಲಿ ರೈತರ ಭೂ ಪರಿಹಾರಕ್ಕೆ ದರ ನಿಗದಿ ಮಾಡಲಾಗಿದೆ.

    ಮುಳಗಡೆ ವ್ಯಾಪ್ತಿಯಲ್ಲಿ ನೀರಾವರಿ ಜಮೀನಿಗೆ ಎಕರೆಗೆ 40 ಲಕ್ಷ ರೂ., ಒಣ ಭೂಮಿಗೆ ಎಕರೆಗೆ 30 ಲಕ್ಷ ರೂ. ನಿಗದಿ ಮಾಡಲಾಗಿದೆ. ಅದರಂತೆ ಕೆನಾಲ್ ಭಾಗದಲ್ಲಿ ನೀರಾವರಿ ಜಮೀನಿಗೆ ಎಕರೆಗೆ 30 ಲಕ್ಷ ರೂ. ಒಣ ಭೂಮಿಗೆ 25 ಲಕ್ಷ ರೂ. ದರ ನಿಗದಿ ಮಾಡಲಾಗಿದೆ.

    ಸಿಎಂ ಸಿದ್ದರಾಮಯ್ಯ ಮಾತನಾಡಿ, ಡ್ಯಾಂ ಎತ್ತರಿಸಲು 75 ಸಾವಿರ ಎಕರೆಗೂ ಹೆಚ್ಚು ಜಮೀನು ಮುಳುಗಡೆ ಆಗಲಿದೆ. 5 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಜಾಗಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಬರಡು ಭೂಮಿಗೆ ನೀರು ಕೊಟ್ಟಂತೆ ಆಗಲಿದೆ ಎಂದರು. ಇದನ್ನೂ ಓದಿ: ಎಸ್‌ಟಿಗೆ ಕುರುಬ ಮಹತ್ವದ ಸಭೆ ಕರೆದ ವಾಲ್ಮೀಕಿ ಸಮುದಾಯ


    ಡಿಸಿಎಂ ಡಿಕೆ ಶಿವಕುಮಾರ್‌ ಮಾತನಾಡಿ, ಇವತ್ತು ಐತಿಹಾಸಿಕ ತೀರ್ಮಾನಕ್ಕೆ ಬಂದಿದ್ದೇವೆ. ಸುಮಾರು ಹತ್ತು ಸುತ್ತಿನ ಸಭೆಗಳು ನಡೆಸಿದ್ದೇವೆ. ಪುನರ್ವಸತಿಗಾಗಿ ಹೊಸ ಪಾಲಿಸಿ, ಪರಿಹಾರ ಪ್ಯಾಕೇಜ್ ಪರ್ಯಾಯ ವ್ಯವಸ್ಥೆಗೆ ತೀರ್ಮಾನ. ಸೆಕ್ಷನ್ 51 ಅನ್ವಯ ಪ್ರಾಧಿಕಾರ ರಚನೆ ಮಾಡಿ ಹಾಲಿ, ನಿವೃತ್ತ ನ್ಯಾಯಾಧೀಶರ ನೇಮಕ ಮಾಡಲಾಗುವುದು ಎಂದು ತಿಳಿಸಿದರು

    ಕ್ಯಾಬಿನೆಟ್ ನಿರ್ಧಾರ ಏನು?
    519.6 ಮೀಟರ್‌ನಿಂದ 524.25 ಮೀಟರ್‌ಗೆ ಆಲಮಟ್ಟಿ ಡ್ಯಾಮ್ ಎತ್ತರಕ್ಕೆ ತೀರ್ಮಾನ.
    ಯೋಜನೆಗೆ ಅಂದಾಜು ಒಟ್ಟು 70 ಸಾವಿರ ಕೋಟಿ ರೂ. ಖರ್ಚು
    3 ವರ್ಷದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ
    ಒಟ್ಟು 5 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ
    ಒಟ್ಟು 1.33 ಲಕ್ಷ ಎಕರೆ ಜಮೀನು ಯೋಜನೆ ಆಗಲಿದ್ದು 75,532 ಎಕರೆ ಜಾಗ ಮುಳುಗಡೆಯಾಗಲಿದೆ.
    ನಾಲೆ ನಿರ್ಮಾಣಕ್ಕೆ ಬೇಕಾದ ಜಾಗ 51,837 ಎಕರೆ
    ಪುನರ್ವಸತಿಗಾಗಿ ಬೇಕಾಗಿರುವ ಜಾಗ 6,439 ಎಕರೆ
    ಈ ಯೋಜನೆಯಿಂದ ಸ್ಥಳಾಂತರ ಆಗಲಿವೆ 20 ಗ್ರಾಮಗಳು

  • ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಂಧ್ರ, ಮಹಾರಾಷ್ಟ್ರ ಅಡ್ಡಿ: ಡಿಕೆಶಿ

    ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಂಧ್ರ, ಮಹಾರಾಷ್ಟ್ರ ಅಡ್ಡಿ: ಡಿಕೆಶಿ

    ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ (Upper Krishna Project) ಅಧಿಸೂಚನೆಗೆ ಒಮ್ಮೆ ಆಂಧ್ರ ಪ್ರದೇಶ ಮತ್ತೊಮ್ಮೆ ಮಹಾರಾಷ್ಟ್ರದವರು ಕೇಂದ್ರದ ಮೇಲೆ ಒತ್ತಡ ತಂದು ನಿಲ್ಲಿಸಿದರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

    ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿಹೆಚ್ ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಅಡಿಕೆ ಬೆಳೆ GST ವ್ಯಾಪ್ತಿಯಿಂದ ಹೊರಗಿಡಿ, ಹಳದಿ ಎಲೆ ರೋಗ ಬಿದ್ದ ಭೂಮಿಗೆ ಪರಿಹಾರ ನೀಡಿ – ರಾಜ್ಯ ಸಂಸದರ ನಿಯೋಗ ಮನವಿ

    ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರು ಈ ಯೋಜನೆಯ ಪರವಾಗಿದ್ದು, ಇದಕ್ಕೆ ಅಧಿಸೂಚನೆ ಹೊರಡಿಸಲೇಬೇಕು ಎಂದು ಸಂಬಂಧಪಟ್ಟ ರಾಜ್ಯಗಳ ಸಭೆ ನಡೆಸಲು ಎರಡು ಬಾರಿ ಪ್ರಯತ್ನಿಸಿದರು. ಆದರೆ ಎರಡು ರಾಜ್ಯದವರು ದೂರವಾಣಿ ಕರೆ ಮಾಡಿ ನಿಲ್ಲಿಸಿದರು. ಕೇಂದ್ರ ಸಚಿವರನ್ನು ನಾನು, ಮುಖ್ಯಮಂತ್ರಿಯವರು ಹಾಗೂ ಕೇಂದ್ರ ಸಚಿವ ಸೋಮಣ್ಣ ಅವರು ಭೇಟಿಯಾಗಿ ಮನವಿ ಸಲ್ಲಿಸಿದ್ದೆವು ಎಂದರು. ಇದನ್ನೂ ಓದಿ: ಐದೇ ನಿಮಿಷದಲ್ಲಿ ಆಟೋ, ಇಲ್ಲವಾದಲ್ಲಿ 50 ರೂ. ಆಫರ್ ನೀಡಿ ವಂಚನೆ – ರಾಪಿಡೋಗೆ 10 ಲಕ್ಷ ದಂಡ

    ಯೋಜನೆ ಜಾರಿಗೆ 2 ಲಕ್ಷ ಕೋಟಿ ಬೇಕು:
    ಕೃಷ್ಣಾ ಮೇಲ್ದಂಡೆ ಯೋಜನೆ (3) ಜಾರಿಗೆ 2 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಇದು ಸಾಧ್ಯವಾಗುತ್ತದೆಯೇ? ಈ ಯೋಜನೆ ವಿಚಾರದಲ್ಲಿ ದೊಡ್ಡ ಹಗರಣವೇ ನಡೆಯುತ್ತಿದೆ. ಭೂಮಿ ಪರಿಹಾರ ವಿಚಾರದಲ್ಲಿ ವಕೀಲರುಗಳು ಹಣ ಮಾಡುತ್ತಿದ್ದಾರೆ ವಿನಃ ರೈತರಿಗೆ ಪರಿಹಾರ ದೊರೆಯುವುದಿಲ್ಲ. ಆದ ಕಾರಣಕ್ಕೆ ಪರಿಷತ್ ಸದಸ್ಯರಾದ ಪೂಜಾರ್ ಅವರು ಅಲ್ಲಿನ ರೈತರನ್ನು ಸಮಾಧಾನಪಡಿಸಿದರೆ ಹದಿನೈದು ದಿನಗಳಲ್ಲಿ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌

    ಸುಪ್ರೀಂ ಕೊರ್ಟ್‌ನಿಂದ ಎಕರೆಗೆ 8-10 ಕೋಟಿ ಪರಿಹಾರ ನೀಡಿ ಎಂದು ಆದೇಶವಾಗಿದೆ. ಇಷ್ಟು ಪರಿಹಾರ ಮೊತ್ತ ಬೆಂಗಳೂರಿನಲ್ಲಿಯೇ ಇಲ್ಲ. ಆದ ಕಾರಣಕ್ಕೆ ಕಂದಾಯ ಇಲಾಖೆಯಿಂದ ನೀರಾವರಿ ಇಲಾಖೆಗೆ ಭೂಮಿ ಹಸ್ತಾಂತರ ಕುರಿತ ವಿಚಾರವನ್ನು ಸಚಿವ ಸಂಪುಟದ ಮುಂದಿಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಎಂಕೆ, ಬಿಜೆಪಿ ಯಾವುದೇ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ – ಟಿವಿಕೆ ವಿಜಯ್ ಘೋಷಣೆ

    ಈಗಾಗಲೇ 75,563 ಎಕರೆ ಸಬ್ ಮರ್ಜ್ ಆಗಿದೆ. ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವುದು 2,543 ಎಕರೆಗೆ ಮಾತ್ರ. ವಿವಿಧ ಹಂತಗಳಲ್ಲಿ ಅಧಿಸೂಚನೆ ಹೊರಡಿಸಿರುವ ಅಡಿ 29,568 ಎಕರೆ ಭೂಮಿಯಿದೆ. 43,452 ಎಕರೆ ಭೂಮಿಗೆ ಅಧಿಸೂಚನೆ ಹೊರಡಿಸಲು ಬಾಕಿ ಇದೆ. ಕಾಲುವೆಗಳ ನಿರ್ಮಾಣಕ್ಕೆ 51 ಸಾವಿರ ಎಕರೆ ಬೇಕಾಗಿದೆ. ಇದರಲ್ಲಿ 23 ಸಾವಿರ ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಆರ್.ಸಿ ಭೂಮಿಗೆ 6,467 ಎಕರೆ ಬೇಕಾಗಿದೆ. ಇದರಲ್ಲಿ 50%ನಷ್ಟು ಎಂದರೆ 3,392 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಹೆಚ್‌ಡಿಕೆ

    ಶೀತ ವಾತಾವರಣ ತಡೆಯಲು 16.42 ಕೋಟಿ ವೆಚ್ಚ:
    ಸದಸ್ಯ ಸೂರಜ್ ರೇವಣ್ಣ ಅವರು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ಹಾಗೂ ಯಗಚಿ ಶೀತಪೀಡಿತವಲ್ಲ ಎಂದು ಘೋಷಣೆಯಾಗಿರುವ ಗ್ರಾಮಗಳು ಯಾವುವು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಶೀತ ವಾತಾವರಣ ತಡೆಯಲು 12 ಕಾಮಗಾರಿಗಳಿಗೆ 16.42 ಕೋಟಿ ವೆಚ್ಚ ಮಾಡಲಾಗಿದೆ. ಮತ್ತೊಂದು ಅಂದಾಜು ವರದಿ ಮಾಡಿಸಿ 27 ಕೋಟಿ ಬೇಕಾಗಿದೆ ಎಂದು ವರದಿ ಸಲ್ಲಿಸಿದ್ದಾರೆ. ನಾವು ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಈ ಬಗ್ಗೆ ಗಮನಹರಿಸುತ್ತೇವೆ ಎಂದು ನುಡಿದರು. ಇದನ್ನೂ ಓದಿ: ದೆಹಲಿ ಸಿಎಂಗೆ ಕಪಾಳಮೋಕ್ಷ ಕೇಸ್ – ಆರೋಪಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

    ಈ ಹಿಂದೆ ಶಾಸಕರುಗಳು ಜಲಸಂಪನ್ಮೂಲ ಇಲಾಖೆಯಿಂದ ರಸ್ತೆ, ಸಮುದಾಯ ಭವನ ಬೇಕು ಎಂದು ಶಿಫಾರಸು ಮಾಡುತ್ತಿದ್ದರು. ಈಗ ನಾನು ಅದನ್ನೆಲ್ಲಾ ನಿಲ್ಲಿಸಿದ್ದೇನೆ. ನಮ್ಮ ಇಲಾಖೆ ಹಣವನ್ನು ಕಾಲುವೆ ಅಭಿವೃದ್ಧಿ, ಪ್ರಮುಖ ಯೋಜನೆಗಳಿಗೆ ಮಾತ್ರ ಬಳಸುತ್ತಿದ್ದೇವೆ. ಈ ವಿಚಾರವಾಗಿಯೂ ಮತ್ತೊಂದು ವರದಿ ತರಿಸಿ ಗಮನಹರಿಸುತ್ತೇನೆ. ಸದಸ್ಯರು ಹೇಳಿರುವಂತೆ ನ್ಯಾಯಾಲಯದ ವಿಚಾರ ಪರಿಶೀಲನೆ ಮಾಡಲಾಗುವುದು. ಆನಂತರ ನಾವು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜಿಎಸ್‌ಟಿ ಪರಿಷ್ಕರಣೆ – 12%, 28% ಸ್ಲ್ಯಾಬ್‌ ತೆಗೆಯಲು ಸಚಿವರ ಸಮಿತಿ ಒಪ್ಪಿಗೆ

  • Upper Krishna Project | ಪರ್ಸಂಟೇಜ್‌ಗಾಗಿ ಡಿಕೆಶಿ ನೀರಾವರಿ ಮಂತ್ರಿಯಾಗಿದ್ದಾರೆ: ಯತ್ನಾಳ್‌

    Upper Krishna Project | ಪರ್ಸಂಟೇಜ್‌ಗಾಗಿ ಡಿಕೆಶಿ ನೀರಾವರಿ ಮಂತ್ರಿಯಾಗಿದ್ದಾರೆ: ಯತ್ನಾಳ್‌

    ಬೆಳಗಾವಿ: ಡಿಕೆ ಶಿವಕುಮಾರ್ (DK Shivakumar) ಪರ್ಸಂಟೇಜ್‌ಗಾಗಿ ನೀರಾವರಿ ಮಂತ್ರಿಯಾಗಿದ್ದಾರೆ (Water Resources Minister) ಎಂದು ಬಿಜೆಪಿ ಶಾಸಕನ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಅಧಿವೇಶನದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಯತ್ನಾಳ್ ಬಳಿ ಕೃಷ್ಣ ಮೇಲ್ದಂಡೆ ಯೋಜನೆ (Upper Krishna Project) ಇನ್ನೂ ಪೂರ್ಣಗೊಳ್ಳದ ಬಗ್ಗೆ ಪಬ್ಲಿಕ್ ಟಿವಿ ಕೇಳಿದ ಪ್ರಶ್ನೆಗೆ, ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ನೀರಾವರಿ ಮಂತ್ರಿ ಆಗುವ ಉದ್ದೇಶ ಏನಿತ್ತು? ಪರ್ಸಂಟೇಜ್‌ಗಾಗಿ ಡಿಕೆಶಿ ನೀರಾವರಿ ಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಯೋಜನೆ ಹೋರಾಟದಲ್ಲಿ ಪ್ರತಿಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು

     

    ಕೋವಿಡ್ (Covid) ಬಗ್ಗೆ ಭ್ರಷ್ಟಾಚಾರ ನಡೆದಿದೆ ಎಂದು ಈಗ ಡಿಕೆಶಿ ಮಾತನಾಡುತ್ತಿದ್ದಾರೆ. ಅದೇ ಡಿಕೆ ಶಿವಕುಮಾರ್ ಹಳೆ ಬಿಲ್ಲು ನೀಡಲು 10% ಹಣ ಹೊಡೆಯುತ್ತಿದ್ದಾರೆ. ಬಿಬಿಎಂಪಿಯಲ್ಲಂತೂ ಚದರ ಅಡಿಗಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಮೇಕೆದಾಟು ಹೋರಾಟ ಹಾರಾಟ ಎಂದೆಲ್ಲಾ ಮಾತನಾಡುತ್ತಿದ್ದ ಡಿಕೆಶಿ ಈ ದಂಡೆಯಿಂದ ಆ ದಂಡೆಗೆ ಹೋಗುವ ಗಿರಾಕಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಗ್ಯಾರಂಟಿಯಿಂದ ದುಡ್ಡು ಇಲ್ಲದೇ ಇದ್ರೆ ಸರ್ಕಾರಿ ಆಸ್ತಿ ಮಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ: ಎಸ್.ಆರ್ ಪಾಟೀಲ್ ಆಕ್ರೋಶ

    40 ಸಾವಿರ ಕೋಟಿ ಕೊಡುತ್ತೇವೆ. ಭಾರೀ ಅನುದಾನ ನೀಡುತ್ತೇವೆ ಎಂದು ಉತ್ತರ ಕರ್ನಾಕಟದ (North Karnataka) ಬಗ್ಗೆ ಕೇವಲ ಡೈಲಾಗ್ ಹೊಡೆಯುತ್ತಾರೆ ಬಿಟ್ಟರೆ ನಿಜವಾದ ಕಾಳಜಿ ಇವರಿಗೆ ಇಲ್ಲ. ಉತ್ತರ ಕರ್ನಾಟಕದವರು ನೀರಾವರಿ ಮಂತ್ರಿಯಾಗುವುದಿಲ್ಲ. 60 ವರ್ಷಗಳಿಂದ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಂಡಿಲ್ಲ. ಈ ಯೋಜನೆ ಪೂರ್ಣಗೊಳ್ಳದೇ ಇರಲು ಎಲ್ಲಾ ಸರ್ಕಾರಗಳು ಕಾರಣ. ಬೊಮ್ಮಾಯಿ, ಕಾರಜೋಳ, ಹೆಚ್‌ಕೆ ಪಾಟೀಲ್‌, ಎಂಬಿ ಪಾಟೀಲ್‌ ಇದ್ದಾಗ ಸ್ವಲ್ಪ ಸ್ವಲ್ಪ ಕೆಲಸ ಮಾಡಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ಹಣ ಇಡದೇ ಇದ್ದರೆ ಪಾಪ ಅವರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ಡಿ.3 ರಿಂದ ಸಂತ್ರಸ್ಥರು ಹೋರಾಟ ಆರಂಭಿಸಿದ್ದಾರೆ. ಎಲ್ಲಾ ಪಕ್ಷದ ನಾಯಕರು ಪಕ್ಷಬೇಧ ಮರೆತು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

     

  • ಕೃಷ್ಣಾ ಮೇಲ್ದಂಡೆ ಯೋಜನೆ ಹೋರಾಟದಲ್ಲಿ ಪ್ರತಿಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು

    ಕೃಷ್ಣಾ ಮೇಲ್ದಂಡೆ ಯೋಜನೆ ಹೋರಾಟದಲ್ಲಿ ಪ್ರತಿಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು

    – ಕಾವೇರಿಗೆ ಇರುವ ಒಲವು ಕೃಷ್ಣೆಗೆ ಯಾಕಿಲ್ಲ?
    – ಯೋಜನೆಗೆ ಅಡಿಗಲ್ಲು ಹಾಕಿ 60 ವರ್ಷವಾದ್ರೂ ಇನ್ನೂ ಪರಿಹಾರ ಸಿಕ್ಕಿಲ್ಲ

    ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (Upper Krishna Project) ಹೋರಾಟದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ (North Karnataka Separate State) ಕೂಗು ಕೇಳಿಬಂದಿದೆ. ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ (Siddu Savadi) ಅವರಿಂದಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪರ ಧ್ವನಿ ಎತ್ತಿದರು.

    ಆಲಮಟ್ಟಿ (Almatti Dam) ಹಿನ್ನೀರಿನಿಂದ ಬಾಧಿತರಾಗಿರುವ ಸಂತ್ರಸ್ತರಿಗೆ ನ್ಯಾಯ ಕೊಡದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಲಮಟ್ಟಿ ಜಲಾಶಯದ ಕೃಷ್ಣಾ ಮೇಲ್ದಂಡೆ ಸಮಸ್ಯೆಗೆ ಪರಿಹಾರ ನೀಡಿ, ಇಲ್ಲವೇ ನಮಗೆ ಪ್ರತ್ಯೇಕ ರಾಜ್ಯ ಒಡೆದು ಕೊಡಿ ಎಂದು ಸಿದ್ದು ಸವದಿ ಆಗ್ರಹಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ನಡೆಯುತ್ತಿರುವ ಸಂತ್ರಸ್ಥರ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಸಂತ್ರಸ್ತರು ಹಾಗೂ ಹೋರಾಟ ಸಮಿತಿ ಸದಸ್ಯರ ಜೊತೆ ನಗರದ ಪುನರ್‌ ವಸತಿ ಹಾಗೂ ಪುನರ್ ನಿರ್ಮಾಣ ಇಲಾಖೆಯ ಆಯುಕ್ತರ ಕಛೇರಿಗೆ‌ ಮುತ್ತಿಗೆ ಹಾಕಿ ಮಾತನಾಡಿದ ಅವರು, ಯೋಜನೆಯ ನೀರಾವರಿ ಕಾಮಗಾರಿಗೆ ಅಡಿಗಲ್ಲು ಹಾಕಿ 60 ವರ್ಷ ಆಯ್ತು. ಇಂದಿಗೂ ಕೃಷ್ಣ ಮೇಲ್ದಂಡೆ ಯೋಜನೆಗೆ ಪರಿಹಾರ ‌ಸಿಕ್ಕಿಲ್ಲ. ಇಲ್ಲಿ ಸಂತ್ರಸ್ತರು ಒದ್ದಾಡುತ್ತಿದ್ದಾರೆ ಯಾರು ಕೂಡ ಇವರ ಹಿತ ಕಾಡುತ್ತಿಲ್ಲ ಎಂದು ಆಗ್ರಹಿಸಿ ಎಲ್ಲಾ ಸರ್ಕಾರಗಳ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ಇದನ್ನೂ ಓದಿ: ಗ್ಯಾರಂಟಿಯಿಂದ ದುಡ್ಡು ಇಲ್ಲದೇ ಇದ್ರೆ ಸರ್ಕಾರಿ ಆಸ್ತಿ ಮಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ: ಎಸ್.ಆರ್ ಪಾಟೀಲ್ ಆಕ್ರೋಶ

    ಮಂಡ್ಯ, ಮೈಸೂರು ಭಾಗದಲ್ಲಿ ಕಾವೇರಿಗೆ ಸಮಸ್ಯೆಯಾದರೆ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ. ರಾಜ್ಯ ಸರ್ಕಾರವೇ ಶರಣಾಗುತ್ತದೆ. ಕಾವೇರಿ ಹೋರಾಟಗಾರರಿಗೆ ಏನು ಬೇಕು ಅದನ್ನೆಲ್ಲ ಮಾಡಿಕೊಡುತ್ತಾರೆ. ಆದರೆ ನಮ್ಮ ಹೋರಾಟಕ್ಕೆ ಏನು ಮಾಡುವುದಿಲ್ಲ. ಹೀಗೆ ಮುಂದುವರೆದರೆ ಪ್ರತ್ಯೇಕ ಉತ್ತರ ಕರ್ನಾಟಕ ಬೇಡಿಕೆಯ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು.

    ಸಂತ್ರಸ್ತರ ಹೋರಾಟಕ್ಕೆ ಬೆಂಬಲವಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಪರಿಹಾರವಾಗುತ್ತಾ? ಪರಿಹಾರ ಆಗುತ್ತದೆ ಎಂದರೆ ನಾವು ರಾಜೀನಾಮೆ ನೀಡುತ್ತೇವೆ. ರಾಜಕಾರಣ ಬೆರೆಸುವುದು ಬೇಡ, ಮೂಗಿಗೆ ತುಪ್ಪ ಒರೆಸುವ ಕೆಲಸ ಆಗಬಾರದು. ಸದನದ ಬಾವಿಗಿಳಿದು ಹೋರಾಟ ಮಾಡಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ಒಂದು ವೇಳೆ ರಾಜೀನಾಮೆ ನೀಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದಾದರೆ ಮೊದಲು ನಾನೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.

     

  • ಗ್ಯಾರಂಟಿಯಿಂದ ದುಡ್ಡು ಇಲ್ಲದೇ ಇದ್ರೆ ಸರ್ಕಾರಿ ಆಸ್ತಿ ಮಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ: ಎಸ್.ಆರ್ ಪಾಟೀಲ್ ಆಕ್ರೋಶ

    ಗ್ಯಾರಂಟಿಯಿಂದ ದುಡ್ಡು ಇಲ್ಲದೇ ಇದ್ರೆ ಸರ್ಕಾರಿ ಆಸ್ತಿ ಮಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ: ಎಸ್.ಆರ್ ಪಾಟೀಲ್ ಆಕ್ರೋಶ

    – 75 ಸಾವಿರ ಕೋಟಿ ಅನುದಾನವನ್ನು ನೀಡುವ ಭರವಸೆ ನೀಡಿದ್ದ ಸಿಎಂ
    – ಎರಡು ಬಜೆಟ್‌ ಮಂಡನೆಯಾದ್ರೂ ಅನುದಾನ ಸಿಕ್ಕಿಲ್ಲ

    ಬಾಗಲಕೋಟೆ: ಪಂಚ ಗ್ಯಾರಂಟಿಗಳಿಂದ (Congress Guarantee) ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಸಬೂಬು ಹೇಳಬೇಡಿ, ಬೆಂಗಳೂರಿನಲ್ಲಿರುವ (Bengaluru) ಒಂದು ಸರ್ಕಾರಿ ಆಸ್ತಿ ತೆಗೆದು ನಮ್ಮ ಕೃಷ್ಣಾ ಮೇಲ್ದಂಡೆ ಯೋಜನೆಗೆ (Upper Krishna Project) ದುಡ್ಡು ಕೊಡಿ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ್ (SR Patil) ಕಾಂಗ್ರೆಸ್‌ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.

    ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ, ಮುಳುಗಡೆ ಹಿತರಕ್ಷಣಾ ಸಮಿತಿ ವತಿಯಿಂದ ಬಾಗಲಕೋಟೆಯಲ್ಲಿ (Bagalkot) ಮಂಗಳವಾರ ಬೃಹತ್ ಹೋರಾಟದ ಧರಣಿ ಸತ್ಯಾಗ್ರಹದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ಹೋರಾಟದಲ್ಲಿ ಸಾವಿರಾರು ರೈತರು ಎಲ್ಲಾ ಪಕ್ಷದ ನಾಯಕರು ಭಾಗವಹಿಸಿದ್ದರು.

    ಹೋರಾಟದಲ್ಲಿ ಭಾಗವಹಿಸಿ ರೈತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಸ್.ಆರ್ ಪಾಟೀಲ್, 1964 ರಲ್ಲಿ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರಿಂದ ಅಡಿಗಲ್ಲು ಹಾಕಿದ ನಂತರ ಕುಂಟುತ್ತಾ ಸಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಚುನಾವಣೆಗೂ ಮುನ್ನ ವಿಜಯಪುರದಲ್ಲಿ ಭಾಷಣ ಮಾಡುವ ವೇಳೆ ಈಗಿನ ಸಿಎಂ ಸಿದ್ದರಾಮಯ್ಯ ಅವರು ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು 75 ಸಾವಿರ ಕೋಟಿ ರೂ. ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದರು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗಾಗಿ ಪ್ರತೀ ವರ್ಷ 40 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ತಿಳಿಸಿದ್ದರು. ಆದರೆ ಈಗ ಸರ್ಕಾರ ಬಂದು ಎರಡು ಬಜೆಟ್ ಆಗಿವೆ. ನೀರಾವರಿ ಯೋಜನೆಗೆ 40 ಸಾವಿರ ಕೋಟಿ ರೂ. ಇಟ್ಟಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಿ ತಿಂಗಳು ಸರಿಯಾಗಿ ನಿಮಗೆ ಸಂಬಳ ಸಿಗುತ್ತಾ – ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಹೆಬ್ಬಾಳ್ಕರ್‌ ಮೊಂಡುವಾದ

    ಯಾವುದೇ ಸರ್ಕಾರ ಬಂದರೂ ಕೃಷ್ಣ ಮೇಲ್ದಂಡೆ ಯೋಜನೆಗೆ ಸರಿಯಾಗಿ ಅನುದಾನವನ್ನು ನೀಡುತ್ತಿಲ್ಲ. ಹೀಗೆ ಆದರೆ ಯೋಜನಾ ವೆಚ್ಚ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಮನೆ ಮಠ ಜಮಿನುಗಳನ್ನು ಕಳೆದುಕೊಂಡ ಸಂತ್ರಸ್ತರು ಪರಿಹಾರಕ್ಕಾಗಿ ಪರಿತಪಿಸುತ್ತಿದ್ದಾರೆ ಎಂದರು.

    ಯಾವುದೇ ಸರ್ಕಾರ ಬಂದರೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ದುಡ್ಡು ನೀಡುತ್ತಿಲ್ಲ. ಕೃಷ್ಣೆಗೆ ಈ ರೀತಿಯ ತಾತ್ಸಾರ ಯಾಕೆ ಎಂದು ಅಧಿಕಾರ ಅನುಭವಿಸಿದ ಮೂರು ಸರ್ಕಾರಗಳಿಗೂ ಪ್ರಶ್ನೆ ಮಾಡಿದರು.

    ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಈಗಿನ ಸರ್ಕಾರ ಪಂಚ ಗ್ಯಾರಂಟಿ ಇಂದ ಸರ್ಕಾರದಲ್ಲಿ ದುಡ್ಡಿಲ್ಲ ಎನ್ನುವ ಸಬೂಬು ಹೇಳುವ ಬದಲು ಬೆಂಗಳೂರಿನಲ್ಲಿರುವ ಒಂದು ಸರ್ಕಾರಿ ಆಸ್ತಿಯನ್ನ ಮಾರಿ ನಮ್ಮ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ. ಟರ್ಫ್ ಕ್ಲಬ್, ರೇಸ್ ಕೋರ್ಸ್ ಮೈದಾನ ಹಾಗೂ ಗಾಲ್ಫ್ ಮೈದಾನ ತೆಗೆದರೆ 50 ಲಕ್ಷ ಕೋಟಿ ರೂ. ಬರುತ್ತದೆ. ಹೀಗೆ ನೂರರಷ್ಟು ಸರ್ಕಾರಿ ಆಸ್ತಿಗಳಿವೆ. ಅದರಲ್ಲಿ ಒಂದನ್ನು ತೆಗೆದು ಉತ್ತರ ಕರ್ನಾಟಕ ಭಾಗದ ಜನರ ಜೀವನ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸರ್ಕಾರಕ್ಕೆ ಕಟುವಾಗಿ ಆಗ್ರಹಿಸಿದರು.

    ನಾನು ಹಿಂದೆ ವಿಪಕ್ಷ ನಾಯಕನಾಗಿದ್ದಾಗ ಕೃಷ್ಣ ಮೇಲ್ದಂಡೆ ಯೋಜನೆಯ ಕಾಮಗಾರಿಗಾಗಿ ಪಾದಯಾತ್ರೆ, ಟ್ರ್ಯಾಕ್ಟರ್ ರ‍್ಯಾಲಿ ಮಾಡಿ ಸದನದಲ್ಲಿ ಕೃಷ್ಣೆಗಾಗಿ ಅನುದಾನ‌ ನೀಡುವಂತೆ ಆಗ್ರಹಿಸಿದ್ದೆ. ಕೃಷ್ಣೆಗಾಗಿ ಹೋರಾಟ ಮಾಡಿದ್ದಕ್ಕೆ ನಾನು ಸದನದಿಂದ ಹೊರ ಬರಬೇಕಾಯಿತು ಎಂದು ತಮಗೆ ಪರಿಷತ್‌ ಸದಸ್ಯರಾಗಿ ಆಯ್ಕೆ ಮಾಡದ್ದಕ್ಕೆ ಪಕ್ಷದ ನಾಯಕರ ಬಗ್ಗೆ ಪರೋಕ್ಷ ಬೇಸರವನ್ನು ಹೊರಹಾಕಿದರು.

    ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯೋಣ. ಉಪವಾಸ ಸತ್ಯಾಗ್ರಹ ಮಾಡೋಣ, ಅದಕ್ಕೂ ಬಗ್ಗದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿ ಕೃಷ್ಣಾ ಕಾಮಗಾರಿಗೆ ದುಡ್ಡು ನೀಡುವಂತೆ ಸರ್ಕಾರಕ್ಕೆ ಆಗ್ರಹಿಸೋಣ ಎಂದು ರೈತರಿಗೆ ಕರೆ ನೀಡಿದರು.

     

  • ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯ – ಸಿಎಂರಿಂದ ಸಿಗುತ್ತಾ ಪರಿಹಾರ?

    ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯ – ಸಿಎಂರಿಂದ ಸಿಗುತ್ತಾ ಪರಿಹಾರ?

    ಬಾಗಲಕೋಟೆ: ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರಿದ ಕಾಂಗ್ರೆಸ್ (Congress) ಪಕ್ಷ, ಸದ್ಯ ಆಡಳಿತದಲ್ಲಿದೆ. ರಾಜ್ಯದ ದೊರೆಯಾಗಿ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಆದರೆ ಇದೇ ಕಾಂಗ್ರೆಸ್ ನಾಯಕರು ಚುನಾವಣೆ ಪೂರ್ವದಲ್ಲಿ ಜಿಲ್ಲೆಯ ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದರು. ಆದರೆ ಆ ಭರವಸೆಗಳು ಕೇವಲ ಮಾತಾಗಿ ಉಳಿದಿವೆ.

    ಮುಳುಗಡೆ ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ವಿಜಯಪುರ-ಬಾಗಲಕೋಟೆ ಅಖಂಡ ಜಿಲ್ಲೆಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಇದೇ ಸೆಪ್ಟೆಂಬರ್ 2 ರಂದು ಆಲಮಟ್ಟಿ ಅಣೆಕಟ್ಟೆಗೆ ಗಂಗಾ ಪೂಜೆ ಮತ್ತು ಬಾಗಿನ ಅರ್ಪಿಸಲು ಆಗಮಿಸಲಿದ್ದಾರೆ. ಈ ನಡುವೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗೆ ಒತ್ತು ನೀಡಿ ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಪರಿಹಾರ ನೀಡದೇ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಜಿಲ್ಲೆಯ ಜನರಲ್ಲಿದೆ.

    ಬಾಗಲಕೋಟೆ ಜಿಲ್ಲೆಯ ಕೃಷ್ಣ ಮೇಲ್ದಂಡೆ (Upper Krishna Project) 3ನೇ ಹಂತದ ಭೂಸ್ವಾಧೀನ ಕಾರ್ಯ ಆಮೆ ಗತಿಯಲ್ಲಿ ಸಾಗುತ್ತಿದೆ. ಮುಳುಗಡೆ ಸಂತ್ರಸ್ತರಿಗೆ ಶಾಶ್ವಾತ ಸೂರು ಕಲ್ಪಿಸುವುದು ಹಾಗೂ ಪರಿಹಾರ ಘೋಷಣೆ ಹೀಗೆ ಸಮಸ್ಯೆಗಳ ಸರಮಾಲೆ ಜಿಲ್ಲೆಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯಗೆ ಸವಾಲಾಗಿ ಪರಿಣಮಿಸಲಿದೆ.

    ನಮ್ಮ ಸರ್ಕಾರದ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಘೋಷಣೆಗಳ ನೆಪ ಹೇಳಿ ಮುಳುಗಡೆ ಪ್ರದೇಶದ ಭೂಸ್ವಾಧೀನ, ಪುನರ್ ವಸತಿ, ಪುನರ್ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ಯಾವುದೇ ವಿಶೇಷ ಅನುದಾನ ಇಡದೇ, ಜಿಲ್ಲೆಯ ಜನರು ನಿರಾಸೆಗೊಳ್ಳುವಂತೆ ಮಾಡಿದೆ. ಇನ್ನು 2014-15ರಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ (ಮೆಡಿಕಲ್) ಕಾಲೇಜು ಘೋಷಣೆ ಮಾಡಿದ್ದರು. ಆದರೆ ಇಂದಿಗೂ ಅದರ ಕಾರ್ಯ ಒಂದು ಸಣ್ಣ ಪ್ರಗತಿ ಕಂಡಿಲ್ಲ.

    ಮೆಡಿಕಲ್ ಕಾಲೇಜಿಗೆ ಬೇಕಾದ ಭೂಮಿ ಈಗಾಗಲೇ 12 ಎಕರೆ ಜಾಗ ಕಾಯ್ದಿರಿಸಿ ಇಟ್ಟಿದ್ದರೂ ಸಹ ಕಟ್ಟಡ ಕಾರ್ಯವಾಗಲಿ ಅಥವಾ ಯಾವುದೇ ಕಾರ್ಯ ಶುರುವಾಗಿಲ್ಲ. ಬಜೆಟ್‌ನಲ್ಲಿ ಅನುದಾನ ಒದಗಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಹೀಗೆ ಹಲವಾರು ಸವಾಲುಗಳು ಬರುವ ಸೆಪ್ಟೆಂಬರ್ 2ರಂದು ಜಿಲ್ಲೆಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಎದುರಾಗಲಿವೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ಧ – ಸುಪ್ರೀಂ ಕೋರ್ಟ್‍ಗೆ ಕೇಂದ್ರ

    ಹೀಗಿರುವಾಗಲೇ ಕೃಷ್ಣೆಯ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆಶಿ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳ ಜೊತೆ ಜಂಟಿ ಸಭೆ ನಡೆಸಲಿದ್ದಾರೆ. ಹೀಗಾಗಿ ಈ ಎಲ್ಲ ಸವಾಲುಗಳನ್ನು ಸಿಎಂ, ಡಿಸಿಎಂ ಹೇಗೆ ಎದುರಿಸುತ್ತಾರೆ? ಮುಳುಗಡೆ ಜಿಲ್ಲೆಯ ಜನರಿಗೆ ಸಿಹಿ ಸುದ್ದಿಯನ್ನು ಕೊಡ್ತಾರಾ? ಇಲ್ಲವೇ ಕೇವಲ ಬಾಗಿನ ಅರ್ಪಣೆ ಮಾಡಿ ಹೋಗ್ತಾರಾ? ಎಂಬುದನ್ನು ಕಾಯ್ದು ನೋಡಬೇಕಿದೆ. ಇದನ್ನೂ ಓದಿ: ಮಾರ್ಗ ಮಧ್ಯೆ ಕೈಕೊಟ್ಟ ಅಂಬುಲೆನ್ಸ್ – ಆನೆ ದಾಳಿಯಿಂದ ಗಾಯಗೊಂಡಿದ್ದ ಶಾರ್ಪ್ ಶೂಟರ್ ಅರಣ್ಯ ಸಿಬ್ಬಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀರಿಗಾಗಿ ಕೂಡಲಸಂಗಮದಿಂದ ರಾಜಭವನಕ್ಕೆ ರೈತರ ಪಾದಯಾತ್ರೆ: ವೈಎಸ್‍ವಿ ದತ್ತಾ

    ನೀರಿಗಾಗಿ ಕೂಡಲಸಂಗಮದಿಂದ ರಾಜಭವನಕ್ಕೆ ರೈತರ ಪಾದಯಾತ್ರೆ: ವೈಎಸ್‍ವಿ ದತ್ತಾ

    – ಯುಕೆಪಿಯನ್ನ ರಾಷ್ಟ್ರಿಯ ನೀರಾವರಿ ಯೋಜನೆಯಾಗಿ ಘೋಷಿಸಲು ಆಗ್ರಹ
    – ದೇವೇಗೌಡರು ಅನುಮತಿ ಕೊಟ್ಟರೆ ನೀರಾವರಿಗಾಗಿ ಪಾದಯಾತ್ರೆ

    ರಾಯಚೂರು: ಸಮುದಾಯದ ಹಿತಕ್ಕಾಗಿ ಪಾದಯಾತ್ರೆ ಮಾಡುವ ಬದಲು ರೈತರ ಹಿತಕ್ಕೆ ಹೋರಾಟ ಮಾಡಬೇಕಿದೆ ದೇವೇಗೌಡರು ಅನುಮತಿ ನೀಡಿದರೆ ನೀರಾವರಿಗಾಗಿ ಪಾದಯಾತ್ರೆಗೆ ನಾವು ಸಿದ್ಧರಿದ್ದೇವೆ ಎಂದು ಜೆಡಿಎಸ್ ಮುಖಂಡ ವೈಎಸ್‍ವಿ ದತ್ತಾ ಹೇಳಿದರು.

    ಜಿಲ್ಲೆಯ ದೇವದುರ್ಗದಲ್ಲಿ ಆಯೋಜಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೀಸಲಾತಿ ಪಾದಯಾತ್ರೆ ಮಾಡುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಪಾದಯಾತ್ರೆ ಮಾಡಲು ನಾವು ಸಿದ್ಧರಿದ್ದೇವೆ. ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಘೋಷಣೆ ಮಾಡಬೇಕು. ಸುಪ್ರೀಂ ಕೋರ್ಟ್ ನಲ್ಲಿ ಎಸ್‍ಎಲ್‍ಪಿ ಅರ್ಜಿ ವಿಲೇವಾರಿ ಮಾಡಿ ಯೋಜನೆಯ ಲಾಭ ರೈತರಿಗೆ ಸಿಗುವಂತೆ ಮಾಡುವ ಕಡೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

    ಬಸವ ಜಯಂತಿ ದಿನ ಬಸವಕಲ್ಯಾಣದಿಂದ ಬೆಂಗಳೂರಿನ ರಾಜ ಭವನದವರೆಗೆ ಪಾದಯಾತ್ರೆ ಮಾಡೋಣ. ಕೇಂದ್ರ ಸರ್ಕಾರ ಕೃಷ್ಣ ಮೇಲ್ದಂಡೆ ಯೋಜನೆ ಲಾಭ ರೈತರಿಗೆ ಸಿಗುವಂತೆ ಮಾಡಲು ಆಗ್ರಹಿಸೋಣ. ಪಾದಯಾತ್ರೆಯನ್ನು ಉದ್ಘಾಟಿಸುವ ಅರ್ಹತೆಯಿರುವ ಏಕೈಕ ವ್ಯಕ್ತಿ ಮಾಜಿ ಪ್ರಧಾನಿ ದೇವೇಗೌಡ. ದೇವೇಗೌಡರು ಅನುಮತಿ ನೀಡಿದರೆ ಪಾದಯಾತ್ರೆಗೆ ಎಲ್ಲ ರೈತರು ಸಿದ್ಧರಾಗೋಣ ಎಂದರು.

    ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲಾಗಿದೆ. ಜೇನು ತುಪ್ಪದ ಬಾಟಲಿ ಮೇಲೆ ಕಿಡಿಗೇಡಿಗಳು ವಿಷದ ಬಾಟಲಿ ಅಂತ ಸ್ಟಿಕರ್ ಅಂಟಿಸಿದಂತೆ, ಉತ್ತಮ ಕೆಲಸ ಮಾಡಿದ ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲಾಗಿದೆ ಎಂದು ವೈಎಸ್‍ವಿ ದತ್ತಾ ಸಮಾವೇಶದಲ್ಲಿ ವಿಷಾದ ವ್ಯಕ್ತಪಡಿಸಿದರು.

    ದೇವೇಗೌಡರು ಜಿಲ್ಲೆಗೆ ಎನ್‍ಆರ್‍ಬಿಸಿ ತಂದಿದ್ದಕ್ಕೆ ದೇವದುರ್ಗದ ಗಾಣಧಾಳ ಗ್ರಾಮದ ರೈತ ಪ್ರಭಾಕರ್ ರೆಡ್ಡಿ ದೇವೇಗೌಡರ ಪ್ರತಿಮೆ ಮಾಡಿ ಪೂಜಿಸುತ್ತಿದ್ದಾರೆ. ಆ ರೈತನ ಅಭಿಮಾವೇ ಇಂದಿನ ಕಾರ್ಯಕ್ರಮ ಆಯೋಜನೆಗೆ ಕಾರಣವಾಗಿದೆ ಎಂದು ದತ್ತಾ ಹೇಳಿದರು.

    ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಗಾಗಿ ಆಯೋಜಿಸಿದ್ದ ಸಮಾವೇಶದಲ್ಲಿ ದೇವದುರ್ಗ ತಾಲೂಕಿನ ನೂತನ ಅಧ್ಯಕ್ಷರ ಪದಗ್ರಹಣ ನಡೆಯಿತು. ಬುಡ್ಡನಗೌಡ ಪಾಟೀಲ್ ನೂತನ ತಾಲೂಕಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸಮಾವೇಶದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಶಾಸಕರಾದ ವೆಂಕಟರಾವ್ ನಾಡಗೌಡ, ವೆಂಕಟಪ್ಪ ನಾಯಕ್, ಕೋನರೆಡ್ಡಿ, ಬಂಡೆಪ್ಪ ಕಾಶಂಪುರ ಸೇರಿಸಂತೆ ಹಲವರು ಭಾಗವಹಿಸಿದ್ದರು.

  • ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ. ಅನುದಾನ ಘೋಷಣೆ

    ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ. ಅನುದಾನ ಘೋಷಣೆ

    ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೊನೆಗೂ ಸರ್ಕಾರ ಅನುದಾನ ಘೋಷಣೆ ಮಾಡಿದೆ. ವಿಧಾನಸಭೆ ಕಲಾಪದಲ್ಲಿಂದು ಸಿಎಂ ಯಡಿಯೂರಪ್ಪ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತ ಹಾಗೂ ಮೂವತ್ತು ಹಳ್ಳಿಗಳ ಪುನರ್ವಸತಿ ಹಾಗೂ ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂ.ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಘೋಷಣೆ ಮಾಡಿದರು.

    ನಿನ್ನೆ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಪ್ರಸ್ತಾಪವೇ ಇರಲಿಲ್ಲ. ಇದರಿಂದ ಆ ಭಾಗದ ಜನತೆ ಹಾಗೂ ಪ್ರತಿಪಕ್ಷಗಳಿಂದ ಭಾರೀ ಟೀಕೆಗೆ ವ್ಯಕ್ತವಾಗಿತ್ತು. ಹೀಗಾಗಿ ನಿನ್ನೆಯೇ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಈ ಕುರಿತು ತೀರ್ಮಾನ ಮಾಡಿದರು.

    ವಿಧಾನಸಭೆಯಲ್ಲಿ ಮಾತಾಡಿದ ಯಡಿಯೂರಪ್ಪ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಇಂದು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಸರ್ಕಾರದ ಪ್ರಮುಖರ ಜತೆ ಮಾತುಕತೆ ನಡೆಸುತ್ತೇನೆ. ಹೇಗಾದರೂ ಸರಿಯೇ ಹೆಚ್ಚುವರಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದರು.

    ಸಿದ್ದರಾಮಯ್ಯ ಆಕ್ಷೇಪ: ಸಿಎಂ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ನಿನ್ನೆ ಬಜೆಟ್ ಮಂಡಿಸುವಾಗಲೇ ಅದನ್ನು ಸೇರ್ಪಡೆ ಮಾಡಬಹುದಿತ್ತು. ಹೋಗಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಹೇಳಬಹುದಿತ್ತು. ಆದರೂ ಈಗಲೇ ಹೇಳಿದ್ದಾರೆ. ಸಂತೋಷ. ಆದರೆ ಹತ್ತು ಸಾವಿರ ಕೋಟಿ ರೂ ಮೀಸಲಿಡುತ್ತೇವೆ ಎಂದಿದ್ದಾರೆ. ಆದರೆ ಹಣ ಎಲ್ಲಿದೆ? ಕೇವಲ ಭರವಸೆ ಆಗಬಾರದು, ನಾನು ಕೂಡ ಬಾಗಲಕೋಟೆ ಜಿಲ್ಲೆಯವನೇ. ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುವವನೇ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.