ತೆಲುಗಿನ ಸೂಪರ್ ಹಿಟ್ ‘ಉಪ್ಪೇನಾ’ (Uppena) ಸಿನಿಮಾ ಬಾಲಿವುಡ್‌ಗೆ (Bollywood) ರಿಮೇಕ್ ಮಾಡಲು ನಿರ್ಮಾಪಕ ಬೋನಿ ಕಪೂರ್ (Boney Kapoor) ನಿರ್ಧರಿಸಿದ್ದಾರೆ. ಕೃತಿ ಶೆಟ್ಟಿ-ವೈಷ್ಣವ್ ತೇಜ್ ನಟಿಸಿದ ಈ ಚಿತ್ರವನ್ನು ಹಿಂದಿ ವರ್ಷನ್‌ನಲ್ಲಿ ತೋರಿಸಲು ಯೋಚಿಸಿದ್ದಾರೆ. ನಾಯಕಿಯಾಗಿ ಕೃತಿ ಶೆಟ್ಟಿ (Krithi Shetty) ನಟಿಸಿದ್ದ ಪಾತ್ರಕ್ಕೆ ಸ್ಟಾರ್ ನಟಿಯ ಮಗಳನ್ನೇ ಆಯ್ಕೆ ಮಾಡಿದ್ದಾರೆ.
ಬುಚ್ಚಿಬಾಬು ಸನಾ ಅವರು ‘ಉಪ್ಪೇನಾ’ (Uppena) ಸಿನಿಮಾ ನಿರ್ದೇಶನ ಮಾಡಿ ಗೆದ್ದು ಬೀಗಿದ್ದರು. ಈ ಚಿತ್ರದಿಂದ ಕೃತಿ ಶೆಟ್ಟಿಗೆ ಬಂಪರ್ ಅವಕಾಶಗಳು ಸಿಕ್ಕಿದ್ದವು. ಈ ಕಥೆಯನ್ನು ಪ್ರೇಕ್ಷಕರು ನೋಡಿ ಗೆಲ್ಲಿಸಿದ್ದರು. ದಕ್ಷಿಣದ ಚಿತ್ರಗಳೇ ಸಿನಿಮಾರಂಗದಲ್ಲಿ ಕ್ಲಿಕ್ ಆಗುತ್ತಿರೋ ಕಾರಣ, ಇದೇ ಸಿನಿಮಾವನ್ನು ರಿಮೇಕ್ ಮಾಡಲು ನಿರ್ಮಾಪಕ ಬೋನಿ ಕಪೂರ್ ಮನಸ್ಸು ಮಾಡಿದ್ದಾರೆ.

ಬೋನಿ ಕಪೂರ್- ಶ್ರೀದೇವಿ ಅವರ 2ನೇ ಪುತ್ರಿ ಖುಷಿ ಕಪೂರ್ (Kushi Kapoor) ಅವರನ್ನು ನಾಯಕಿಯಾಗಿ ಫೈನಲ್ ಮಾಡಿದ್ದಾರೆ. ಅವರ ಸಲುವಾಗಿಯೇ ಈ ಚಿತ್ರವನ್ನು ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಬೋನಿ ಕಪೂರ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನೆಪೋಟಿಸಂ ಎಂದು ನೆಟ್ಟಿಗರು ಕುಟುಕಿದ್ದಾರೆ. ಇದನ್ನೂ ಓದಿ:ಮೊದಲ ಸಿನಿಮಾದಲ್ಲಿ ‘ಯುವ’ಗೆ ಓಡೋ ಶಾಟ್ ಇಟ್ಟಿದ್ದೇಕೆ? ಸೀಕ್ರೆಟ್ ಬಿಚ್ಚಿಟ್ಟ ಡೈರೆಕ್ಟರ್

ಟ್ರೋಲ್ (Troll) ಮಾಡಲು ಕಾರಣ ಕೂಡ ಇದೆ. ಉಪ್ಪೇನಾ ಸಿನಿಮಾದ ಕಥೆ ‘ಧಡಕ್’ ಚಿತ್ರದ ಕಥೆಯ ರೀತಿಯೇ ಇದೆ. ಈ ಚಿತ್ರ ಮರಾಠಿಯ ‘ಸೈರಾಟ್’ ಚಿತ್ರದ ರಿಮೇಕ್. ಉಪ್ಪೇನಾ ಕ್ಲೈಮಾಕ್ಸ್‌ನಲ್ಲಿ ಬರುವ ಕೆಲವು ದೃಶ್ಯಗಳನ್ನು ಹೊರತುಪಡಿಸಿ ಬಹುತೇಕ ಕಥೆ ಅದೇ ರೀತಿ ಇತ್ತು. ಈಗ ಹಿಂದಿಯಲ್ಲಿ ‘ ಉಪ್ಪೇನಾ’ ರಿಮೇಕ್ ಮಾಡಿದರೆ ಹಿಂದಿ ಪ್ರೇಕ್ಷಕರು ಮತ್ತೊಮ್ಮೆ ಅದೇ ಕಥೆಯನ್ನು ನೋಡಬೇಕಾ ಎಂದು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬೋನಿ ಕಪೂರ್ ಮೊದಲ ಪುತ್ರಿ ಜಾನ್ವಿ ಕಪೂರ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಸಿನಿಮಾಗಳಿಗೆ ಹೀರೋಯಿನ್ ಆಗಿದ್ದಾರೆ. 2ನೇ ಪುತ್ರಿ ಖುಷಿ ಕಪೂರ್ ಕೂಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಶ್ರೀದೇವಿ ಪತಿ ನಿರ್ಮಾಣಕ್ಕೆ ಸಾಥ್ ನೀಡುತ್ತಿದ್ದಾರೆ.



ಕೃತಿ ಶೆಟ್ಟಿ ಮೂರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಲೇ `ಗೋಲ್ಡನ್ ಲೆಗ್’ ಅನ್ನೋ ಪಟ್ಟ ಕೊಟ್ಟಿದ್ದರು. ಆದ್ರೀಗ ಈ ನಟಿ `ಗೋಲ್ಡನ್ ಲೆಗ್’ ಅನ್ನೋ ಚಾರ್ಮ್ ಅನ್ನು ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಎರಡು ಸಿನಿಮಾಗಳು. ರಾಮ್ ಪೋತಿನೇನಿ ಅಭಿನಯದ `ದಿ ವಾರಿಯರ್’ ಹಾಗೂ ನಿತಿನ್ ಜೊತೆ ನಟಿಸಿದ್ದ `ಮಾಚೆರ್ಲಾ ನಿಯೊಜಕವರ್ಗಂ’ ಸಿನಿಮಾಗಳು ಬಾಕ್ಸಾಫೀಸ್ ಮೋಡಿ ಮಾಡಲು ಸೋತಿವೆ. ಈ ಕಾರಣಕ್ಕೆ ಕೃತಿ ಶೆಟ್ಟಿಯನ್ನು ಟೀಕೆ ಮಾಡಲು ಆರಂಭಿಸಿದ್ದಾರೆ.




