Tag: Upparpet Police Station

  • 25 ಲಕ್ಷದಲ್ಲಿ ಮದುವೆ ಕಾರ್ಯಕ್ರಮ – ತಾಳಿ ಕಟ್ಟುವ ಶುಭವೇಳೆ ಮಂಟಪದಿಂದಲೇ ಕಾಲ್ಕಿತ್ತ ವರ

    25 ಲಕ್ಷದಲ್ಲಿ ಮದುವೆ ಕಾರ್ಯಕ್ರಮ – ತಾಳಿ ಕಟ್ಟುವ ಶುಭವೇಳೆ ಮಂಟಪದಿಂದಲೇ ಕಾಲ್ಕಿತ್ತ ವರ

    ಬೆಂಗಳೂರು/ಮೈಸೂರು: ಮದುವೆ ದಿನವೇ ವರ ಹಾಗೂ ಆತನ ಕುಟುಂಬಸ್ಥರು ಮಂಟಪದಿಂದ ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಮೈಸೂರಿನ (Mysuru) ಪ್ರೇಮ್ ಚಂದ್ ಪರಾರಿಯಾಗಿರುವ ವರ. ಮೈಸೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ಪ್ರೇಮ್ ಚಂದ್, ಸಂತ್ರಸ್ತೆಯು ಒಂದೇ ತರಗತಿಯಲ್ಲಿದ್ದರು. ಈ ವೇಳೆ ಇಬ್ಬರ ನಡುವೆ ಸ್ನೇಹವಾಗಿತ್ತು. ಸಂತ್ರಸ್ತೆ ಬಿಇ ಬಳಿಕ ಎಂಎಸ್ ಮುಗಿಸಿದ ಫ್ರಾನ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಆರೋಪಿ ಪ್ರೇಮ್ ಕೂಡ ಪ್ಯಾರೀಸ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಇಬ್ಬರ ಸ್ನೇಹ ಬಳಿಕ ಪ್ರೀತಿ ತಿರುಗಿ ಪ್ಯಾರೀಸ್‌ನಲ್ಲಿ ಸುತ್ತಾಡುತ್ತಿದ್ದರು. ಇದನ್ನೂ ಓದಿ: ರನ್ಯಾ ರಾವ್ ಬಂಧನ – ನಮಗೆ ಯಾವುದೇ ಮಾಹಿತಿ ಕೊಟ್ಟಿಲ್ಲ: ಪರಮೇಶ್ವರ್

    ಇಬ್ಬರು ಮನೆಯವರನ್ನು ಒಪ್ಪಿಸಿ ಕಳೆದ ಜುಲೈನಲ್ಲಿ ಎಂಗೆಜ್ಮೆಂಟ್ ಮಾಡಿಕೊಂಡಿದ್ದರು. ಕುಟುಂಬಸ್ಥರು ಮಾ. 3ರಂದು ಪ್ರೇಮ್ ಹಾಗೂ ಸಂತ್ರಸ್ಥೆಯ ಮದುವೆ ದಿನಾಂಕ ನಿಶ್ಚಯಿಸಿದ್ದರು. ಸಂತ್ರಸ್ಥೆಯ ತಂದೆ ಗಾಂಧಿನಗರದ ನಂದಿ ಕ್ಲಬ್ ಮಂಟಪ ಬುಕ್ ಮಾಡಿದ್ದರು.

    ಫೆ. 28ರಿಂದಲೇ ಮದುವೆ ಕಾರ್ಯಕ್ರಮ ಆರಂಭವಾಗಿತ್ತು. ಮಾ. 1 ರಂದು ಮೆಹಂದಿ ಹಾಗೂ ಹಳದಿ ಶಾಸ್ತ್ರ ಕೂಡ ಮುಗಿದಿತ್ತು. ಈ ವೇಳೆ ಪ್ರೇಮ್ ತಂದೆ ಶಿವಕುಮಾರ್ ಪವಾನಿ, ತಾಯಿ ರಾಧ, ಸಂಬಂಧಿ ಮಂಜು, ಭರತ್ 50 ಲಕ್ಷ ರೂ. ನಗದು, ಅರ್ಧ ಕೆಜಿ ಚಿನ್ನ ಹಾಗೂ ಬೆಂಜ್ ಕಾರು ನೀಡುವಂತೆ ಸಂತ್ರಸ್ತೆ ತಂದೆ ಬಳಿ ಬೇಡಿಕೆಯಿಟ್ಟಿದ್ದರು. ಮದುವೆಗೆ ಸುಮಾರು 25 ಲಕ್ಷ ರೂ. ಖರ್ಚಾಗಿದೆ. ಹಾಗಾಗಿ ಅಷ್ಟೆಲ್ಲಾ ಕೊಡಲು ಸಾಧ್ಯವಿಲ್ಲ ಎಂದು ಸಂತ್ರಸ್ತೆ ತಂದೆ ಹೇಳಿದ್ದರು. ಇದನ್ನೂ ಓದಿ: ಹಾಲಿನ ದರ ಏರಿಕೆ ಮಾಡೇ ಮಾಡ್ತೀವಿ, ಎಷ್ಟು ಏರಿಕೆ ಅಂತ ಸಿಎಂ ಜೊತೆ ಚರ್ಚೆ – ವೆಂಕಟೇಶ್

    ಈ ವಿಷಯ ತಿಳಿಯುತ್ತಿದ್ದಂತೆ ಪ್ರೇಮ್ ಹಾಗೂ ಆತನ ಕುಟುಂಬಸ್ಥರು ಮದುವೆ ಮಂಟಪದಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಮದುವೆ ಶಾಸ್ತ್ರಕ್ಕೆ ವರನ್ನು ಕರೆಯಲು ಹೋದಾಗ ವಿಷಯ ಬೆಳಕಿಗೆ ಬಂದಿದೆ. ಈಗ ಸಂತ್ರಸ್ತೆ ತಂದೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಅರಣ್ಯ ಭೂಮಿಯಲ್ಲಿ ಶೂಟಿಂಗ್ ನಡೆಸಿತ್ತಾ ತರುಣ್ ಸುಧೀರ್ ಚಿತ್ರತಂಡ?- ಅರಣ್ಯಾಧಿಕಾರಿ ಹೇಳೋದೇನು?

    ದೂರಿನಲ್ಲಿ ವರ ಪ್ರೇಮ್ ಸಂತ್ರಸ್ತೆಯನ್ನು ಮದುವೆಗೂ ಮುನ್ನ ಬಲವಂತವಾಗಿ ಲೈಗಿಂಕವಾಗಿ ಬಳಸಿಕೊಂಡಿದ್ದಾನೆಂದು ಉಲ್ಲೇಖಿಸಲಾಗಿದೆ.

  • ಪಾಕ್ ಪರ ಘೋಷಣೆ ಪ್ರಕರಣ- ಪೊಲೀಸರ ಪ್ರಶ್ನೆಗೆ ಕಾರ್ಪೊರೇಟರ್ ಸುಸ್ತೋ ಸುಸ್ತು

    ಪಾಕ್ ಪರ ಘೋಷಣೆ ಪ್ರಕರಣ- ಪೊಲೀಸರ ಪ್ರಶ್ನೆಗೆ ಕಾರ್ಪೊರೇಟರ್ ಸುಸ್ತೋ ಸುಸ್ತು

    ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಪಾಕ್ ಪ್ರೇಮಿ ಅಮೂಲ್ಯ ಲಿಯೋನ ಪರಪ್ಪನ ಅಗ್ರಹಾರ ಸೇರಿದ್ದಾಳೆ. ಈ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ಪ್ರತಿಭಟನೆ ಆಯೋಜಕ, ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಪೊಲೀಸರು ನೀರಿಳಿಸಿದ್ದಾರೆ.

    ಪ್ರಕರಣದ ಸಂಬಂಧ ತನಿಖೆ ಆರಂಭಿಸಿರುವ ಉಪ್ಪಾರಪೇಟೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಠಾಣೆಗೆ ಹಾಜರಾದ ಇಮ್ರಾನ್ ಪಾಷಾ ಅವರಿಗೆ ಐದು ಜನ ಪೊಲೀಸ್ ಅಧಿಕಾರಿಗಳು ರೌಂಡ್ ಟೇಬಲ್ ಮಾದರಿಯಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ಅಮೂಲ್ಯಳನ್ನು ಕಾರ್ಯಕ್ರಮದಿಂದ ಕೈಬಿಟ್ಟ ಆಯೋಜಕರು- ವಿಮಾನ ಟಿಕೆಟ್ ರದ್ದು

    ವಿಚಾರಣೆ ವೇಳೆ ಇಮ್ರಾನ್ ಪಾಷ, ಕಾರ್ಯ ಕ್ರಮ ಆಯೋಜನೆ ಮಾಡಿದ್ದು ನಾನೇ. ಆದರೆ ಅದಕ್ಕೆ ಅಮೂಲ್ಯಳಿಗೆ ಆಹ್ವಾನ ಕೊಟ್ಟವರು ಯಾರು? ಅವಳಿಗೆ ವಿಐಪಿ ಪಾಸ್ ಕೊಟ್ಟವರು ಯಾರು? ಬ್ಯಾಡ್ಜ್  ಕೊಟ್ಟವರು ಯಾರು? ಅವಳನ್ನು ವೇದಿಕೆ ಮೇಲೆ ಬಿಟ್ಟವರು ಯಾರು ಎನ್ನುವುದು ಪ್ರಶ್ನೆಗಳಿಗೆ ಪಾಷಾ ಅವರು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ಅಮೂಲ್ಯ ಜೊತೆ ವೇದಿಕೆಯಲ್ಲಿದ್ದ ಎಲ್ಲರ ಮೇಲೆ ದೇಶದ್ರೋಹ ಕೇಸ್ ಹಾಕಿ: ಅನಂತ್ ಕುಮಾರ್ ಹೆಗ್ಡೆ

    ಇದೇ ವಿಚಾರಕ್ಕೆ ಪೊಲೀಸರು ಬೇರೆ ಬೇರೆ ಆಯಾಮದಲ್ಲಿ ಇಮ್ರಾನ್ ಪಾಷಾ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗಳಿಂದ ಕಕ್ಕಾಬಿಕ್ಕಿಯಾದ ಇಮ್ರಾನ್ ಪಾಷಾ ನಂಗೇನು ಗೊತ್ತಿಲ್ಲ. ದಯವಿಟ್ಟು ನನ್ನ ಬಿಟ್ಟುಬಿಡಿ ಸರ್ ಅಂತ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಹೇಳಿಬಂದಿದೆ. ಅಷ್ಟೇ ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಹತ್ತು ಜನರಿಗೆ ನೋಟಿಸ್ ನೀಡುವ ಸಾಧ್ಯತೆ ಇದ್ದು, ಇಮ್ರಾನ್ ಪಾಷಾ ಅವರನ್ನು ಪೊಲೀಸರು ಶನಿವಾರ ಸತತ ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.