Tag: UPP

  • ಖಂಡಿತಾ ಸಿನಿಮಾ ಬಿಡ್ತೀನಿ ಅಂದ್ರು ನಟ ಉಪೇಂದ್ರ..!

    ಖಂಡಿತಾ ಸಿನಿಮಾ ಬಿಡ್ತೀನಿ ಅಂದ್ರು ನಟ ಉಪೇಂದ್ರ..!

    ದಾವಣಗೆರೆ: ಚುನಾವಣೆಗೆ ಸ್ಪರ್ಧಿಸಿ ಗೆದ್ದರೆ ಖಂಡಿತಾ ನಾನು ಸಿನಿಮಾ ಬಿಡ್ತೀನಿ. ಯಾಕಂದ್ರೆ ಅವತ್ತಿನಿಂದ ನಾನು ಪ್ರಜೆಗಳ ಕಾರ್ಮಿಕ ಎಂದು ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಿವೆ. ಅಲ್ಲದೇ ಈಗಾಗಲೇ ಕೆಲ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ಒಂದು ವೇಳೆ ಎಲೆಕ್ಷನ್ ಗೆ ನಿಂತು ಗೆದ್ದರೆ ನನಗೆ ಸಿನಿಮಾ ಮಾಡೋದಿಕೆ ಆಗಲ್ಲ. ನನ್ನ ಸಂಪಾದನೆ, ನನ್ನ ಕೆಲಸ ಎಲ್ಲವೂ ಇಲ್ಲಿರುತ್ತದೆ. ಹೀಗಾಗಿ ಆ ಸಂದರ್ಭದಲ್ಲಿ ಸಿನಿಮಾ ಕೈ ಬಿಡ್ತೀನಿ ಎಂದು ಹೇಳಿದ್ರು.

    ಪ್ರಜಾಕೀಯದಿಂದ ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಅಂದುಕೊಂಡಿದ್ದೆವು. ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಈಗ ನಮ್ಮದೇ ಆದ ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಗೆ 28 ಕ್ಷೇತ್ರಗಳಿಂದ ಸ್ಪರ್ಧಿಸಬೇಕು ಎಂದು ತುಂಬಾ ಮಂದಿ ಕೇಳಿದ್ದರು. ಹೀಗಾಗಿ ಆ ಕಾರ್ಯದಲ್ಲಿದ್ದೇವೆ ಎಂದು ಅವರು ತಿಳಿಸಿದ್ರು. ಇದನ್ನೂ ಓದಿ: ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಲ್ಲ ನಿಮ್ಮದೇ: ಉಪೇಂದ್ರ

    ಈಗಿರುವ ರಾಜಕೀಯ ವ್ಯವಸ್ಥೆ ಸಂಪೂರ್ಣ ತೆಗೆದು ಹಾಕಿ ನಿಜವಾದ ಪ್ರಜಾಪ್ರಭುತ್ವ ಬರಬೇಕು ಎಂದು 5 ತತ್ವಗಳ ಮೇಲೆ ಈ ಪ್ರಜಾಕೀಯ ಪಕ್ಷವನ್ನು ಕಟ್ಟಿದ್ದೇವೆ. ಈ ಚುನಾವಣಾ ಪ್ರಕ್ರಿಯೆ ಹೇಗಿರಬೇಕೆಂದರೆ ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್ ಹಾಗೂ ಪ್ರಮೋಷನ್ ತತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ನಾವು ಯಾವ ಪಕ್ಷದ ಓಟುಗಳನ್ನ ಕೀಳೋದಿಲ್ಲ. ಅಧಿಕಾರಕ್ಕೋಸ್ಕರ ನಾವು ಯಾರ ಜೊತೆನೂ ಸಪೋರ್ಟ್ ಮಾಡಲ್ಲ. ಹೊಸ ವಿಚಾರಕ್ಕೆ ನಮ್ಮ ದೇಶದ ಸಂವಿಧಾನ ಉತ್ತಮವಾಗಿದೆ ಎಂದರು.

    ಹೀಗಾಗಿ ಪ್ರಣಾಳಿಕೆಯನ್ನು ಎರಡು ಭಾಗವಾಗಿ ಮಾಡಿಕೊಂಡಿದ್ದೇವೆ. ಸಾಮಾನ್ಯವಾಗಿ ಪ್ರಣಾಳಿಕೆಯನ್ನು ಸಾಕಷ್ಟು ಭರವಸೆ, ಆಶ್ವಾಸನೆಗಳನ್ನು ಕೊಡುತ್ತಾರೆ. ಅಲ್ಲದೇ ಏನೇನೋ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ವಾಸ್ತವವಾಗಿ ಜನರಿಗೆ ಏನು ಬೇಕು ಅನ್ನೋದು ಗೊತ್ತಿದೆ. ಹೀಗಾಗಿ ಒಂದು ಪ್ರಣಾಳಿಕೆಯನ್ನು ನೀವು ಇಟ್ಟುಕೊಳ್ಳಿ. ಇನ್ನು 2ನೇ ಪ್ರಣಾಳಿಕೆಯನ್ನು ನಮ್ಮ ಅಭ್ಯರ್ಥಿಗಳು ತೆಗೆದುಕೊಂಡು ಬರಬೇಕು. ಯಾಕಂದ್ರೆ ಪ್ರತಿಯೊಬ್ಬ ಅಭ್ಯರ್ಥಿಯೂ ಜನಗಳ ಧ್ವನಿಯಾಗಿರುತ್ತಾರೆ. ಒಟ್ಟಿನಲ್ಲಿ ಒಂದು ಅದ್ಭುತವಾದ ಆಡಳಿತಾತ್ಮಕ ರಚನೆಯನ್ನು ಒಳಗೊಂಡಿದೆ. ಅಲ್ಲಿ ತಜ್ಞರ ಸಮಿತಿ ಇರುತ್ತದೆ. ಹಾಗೆಯೇ ಐಎಎಸ್, ಕೆಎಎಸ್ ಓದಿರೋರು ಇರುತ್ತಾರೆ. ನಿಜವಾದ ಸಮಾಜ ಸೇವೆ ಅಂದರೆ ನನ್ನ ಪ್ರಕಾರ ಪಾಲಿಟಿಕ್ಸ್. ರಾಜಕೀಯ ಇರುವುದೇ ಸಮಾಜ ಸೇವೆಗೋಸ್ಕರವಾಗಿದ್ದು, ಪ್ರತಿಯೊಬ್ಬರು ಸಮಾಜ ಸೇವೆ ಮಾಡುತ್ತಾರೆ ಎಂದು ಅವರು ವಿವರಿಸಿದ್ರು. ಇದನ್ನೂ ಓದಿ: ನಮ್ಮ ಪಕ್ಷದಿಂದ ರಾಜ್ಯದ 28 ಕ್ಷೇತ್ರಗಳಿಂದ ಸ್ಪರ್ಧೆ: ಉಪೇಂದ್ರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹುಟ್ಟುಹಬ್ಬದಂದೇ ಉಪ್ಪಿಯಿಂದ ಹೊಸ ಪಕ್ಷ ಲಾಂಚ್

    ಹುಟ್ಟುಹಬ್ಬದಂದೇ ಉಪ್ಪಿಯಿಂದ ಹೊಸ ಪಕ್ಷ ಲಾಂಚ್

    ಬೆಂಗಳೂರು: ಇಂದು ರಿಯಲ್ ಸ್ಟಾರ್ ಉಪೇಂದ್ರಗೆ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲೇ ಉಪ್ಪಿ ಹೊಸ ಪಕ್ಷ ಲಾಂಚ್ ಮಾಡಿದ್ದಾರೆ.

    ಹೌದು. ನಟ ಉಪೇಂದ್ರ ಅವರು ಇಂದು `ಉತ್ತಮ ಪ್ರಜಾಕೀಯ ಪಕ್ಷ’ ಎಂಬ ಹೊಸ ಪಕ್ಷವನ್ನು ಲೋಕಾರ್ಪಣೆ ಮಾಡಿದ್ದಾರೆ. ವಿನೂತನವಾಗಿ ಪಕ್ಷವನ್ನು ಲಾಂಚ್ ಮಾಡಿದ ಅವರು, ಇನ್ಮುಂದೆ ನನ್ಮ ಬರ್ತ್ ಡೇ ಯುಪಿಪಿ ಬರ್ತ್ ಡೇ ಆಗಲಿದೆ ಅಂತ ಹೇಳಿದ್ರು.

    ವೇದಿಕೆ ಮೇಲೆ ಯುಪಿಪಿಐ ಎಂಬ ಪದಗಳನ್ನಿಟ್ಟು ಅದರಲ್ಲಿ ಐ ಎಂಬ ಪದಕ್ಕೆ ಬೆಂಕಿ ಹಚ್ಚಿ ಉಪ್ಪಿ ಹೆಸರಿನಲ್ಲಿ ಯುಪಿಪಿ ಮಾತ್ರ ಉಳಿದುಕೊಂಡಿದ್ದು ಐ(ನಾನು) ಅನ್ನೋದು ಹೋಗಬೇಕು. 15-20 ವರ್ಷದಿಂದ ನಾನು ಅನ್ನೋದನ್ನು ಕಿತ್ತೊಕೊಳ್ಳೋಕೆ ಇಂದು ದಿನ ಬಂತು. ಇನ್ಮೇಲೆ ಉಪ್ಪಿ ಬರ್ತ್ ಡೇ ಇರಲ್ಲ. ಇಷ್ಟು ವರ್ಷಗಳ ಕಾಲ ಅಭಿಮಾನಿಗಳು ಬರ್ತ್ ಡೇ ಯನ್ನು ಆಚರಿಸಿಕೊಂಡು ಬಂದ್ರು. ಹೀಗಾಗಿ ಇಂದು ಅಭಿಮಾನಿಳಿಗೋಸ್ಕರ ಯುಪಿಪಿ ಎಂಬ ವೇದಿಕೆಯೊಂದನ್ನು ಸಿದ್ಧಪಡಿಸಿದ್ದೇನೆ ಇನ್ಮೇಲಿಂದ ಸೆಪ್ಟೆಂಬರ್ 18ರಂದು ಯುಪಿಪಿ ಬರ್ತ್ ಡೇ ಆಗುತ್ತೆ ಅಂತ ಹೇಳಿದ್ರು.

    ಒಂದು ವರ್ಷದ ಹಿಂದೆ ಪ್ರಜಾಕೀಯ ಎಂಬ ಕಲ್ಪನೆಯಿಟ್ಟುಕೊಂಡು ಬಂದಿದ್ದೆವು. ಆ ಬಳಿಕ ಏನೇನೋ ಆಗೋಯ್ತು. ಹೀಗಾಗಿ ಇನ್ನೊಂದು ಪಕ್ಷದ ಜೊತೆ ಸೇರಿ ಕೋಳ್ಳೋ ಪರಿಸ್ಥಿತಿ ಎದುರಾಯ್ತು. ಹೀಗಾಗಿ ಕಳೆದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಿಲ್ಲ. ಆಗೋದೆಲ್ಲ ಒಳ್ಳೆಯದೇ ಅನ್ನುವಂತೆ ಎಲ್ಲವೂ ಒಳ್ಳೆದಾಗಿದೆ. ಸದ್ಯ ನಮ್ಮದೇ ಒಂದು ಪಕ್ಷವನ್ನು ರಿಜಿಸ್ಟಾರ್ ಮಾಡಿದ್ದೇವೆ. ಅದೇ ಉತ್ತಮ ಪ್ರಜಾಕೀಯ ಪಕ್ಷ ಅಂದ್ರು

    ಪಕ್ಷ ಹೇಗೆ ಕೆಲಸ ಮಾಡುತ್ತೆ?:
    1. ವ್ಯಾಪಾರೀ ರಾಜಕೀಯದಿಂದ ವೃತ್ತಿಪರ ಪ್ರಜಾಕೀಯದ ಕಡೆಗೆ
    2. ಆಕಾಂಕ್ಷಿಗಳು ಮಾಡಿಕೋಳ್ಳಬೇಕಾದ ಪೂರ್ವ ಸಿದ್ಧತೆಗಳು

    ಗ್ರಾಮಪಂಚಾಯತ್ ಚುನಾವಣೆಗೆ ನಿಲ್ಲಬೇಕಂದ್ರೆ ಗ್ರಾಮದ ಪ್ರತಿಯೊಂದು ಸಮಸ್ಯೆಗಳನ್ನು ವಿಡಿಯೋ ದಾಖಲೆಗಳನ್ನು ಮಾಡಿಕೊಂಡು ಬಳಿಕ ಅವರ ಕಲ್ಪನೆಗಳನ್ನು(ಸಿಟಿಗೂ ಅನ್ವಯಿಸುತ್ತೆ) ಮಾಡಿಕೊಂಡು ಇವುಗಳನ್ನು ಅಲ್ಲಿನ ಗ್ರಾಮದ ಜನರೊಂದಿಗೆ ಚರ್ಚೆ ನಡೆಸಿ ನಂತರ ತಜ್ಞರೊಂದಿಗೆ ಚರ್ಚಿಸಿ ಬಜೆಟ್ ಮತ್ತು ಸಮಯ ನಿಗದಿ ಮಾಡಿಕೊಂಡು ಅದನ್ನು ನಮಗೆ www.prajakeeya.org ಎಂಬ ವೆಬ್‍ಸೈಟ್ ಗೆ ವಿಡಿಯೋವನ್ನು ಕಳುಹಿಸಬೇಕು. ಶಾಸಕರು, ಸಂಸದರು ಕೂಡ ಇದೇ ರೀತಿ ಕಲ್ಪನೆಗಳನ್ನಿಟ್ಟುಕೊಂಡು ನಂತರ ತಜ್ಞರ ಜೊತೆ ಚರ್ಚಿಸಬೇಕು. ಫೈನಲ್ ಆದ ಬಳಿಕ ನಮಗೆ ವಿಡಿಯೋವನ್ನು ಕಳುಹಿಸಿಕೊಡಬೇಕು ಅಂತ ವಿವರಿಸಿದ್ರು.

    ಯುಪಿಪಿ ಪಕ್ಷದ ಉದ್ಘಾಟನೆಗೆ ನೂರಾರು ಅಭಿಮಾನಿಗಳು ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv