Tag: upi

  • 10 ಕೋಟಿ ಭಾರತೀಯ ಬಳಕೆದಾರರಿಗೆ ಯುಪಿಐ ಸೇವೆ ನೀಡಲಿದೆ ವಾಟ್ಸಪ್

    ನವದೆಹಲಿ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್‌ಪಿಸಿಐ) ವಾಟ್ಸಪ್‌ಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್(ಯುಪಿಐ) ಮೂಲಕ ಡಿಜಿಟಲ್ ಪಾವತಿಯ ಸೇವೆಗಳನ್ನು 10 ಕೋಟಿ ಬಳಕೆದಾರರಿಗೆ ಒದಗಿಸಲು ಅನುಮತಿ ನೀಡಿದೆ.

    ಈ ಹಿಂದೆ 4 ಕೋಟಿ ಬಳಕೆದಾರರಿಗೆ ವಾಟ್ಸಪ್‌ನಲ್ಲಿ ಯುಪಿಐ ಸೇವೆಯನ್ನು ಬಳಸಲು ಎನ್‌ಸಿಪಿಐ ಅವಕಾಶ ನೀಡಿತ್ತು. ಇದೀಗ ಎನ್‌ಸಿಪಿಐ 10 ಕೋಟಿ ಬಳಕೆದಾರರಿಗೆ ಸೇವೆ ಒದಗಿಸಲು ಅನುವು ಮಾಡಿಕೊಟ್ಟಿದೆ. ಇದನ್ನೂ ಓದಿ: ರಷ್ಯಾದಿಂದ ಹೊರನಡೆದ ಇನ್ಫೋಸಿಸ್

    whatsapp

    ಎನ್‌ಸಿಪಿಐ ಕಳೆದ ವರ್ಷ ನವೆಂಬರ್‌ನಲ್ಲಿ ವಾಟ್ಸಪ್‌ಗೆ 2 ಕೋಟಿ ಬಳಕೆದಾರರಿಗೆ ನೀಡಿದ್ದ ಸೇವೆಯ ಅನುಮತಿಯನ್ನು ದ್ವಿಗುಣಗೊಳಿಸಿತ್ತು. ಇದೀಗ 10 ಕೋಟಿ ಬಳಕೆದಾರರಿಗೆ ಯುಪಿಐ ಸೇವೆ ನೀಡಲು ಅನುಮತಿ ನೀಡಿದೆ. ಇದನ್ನೂ ಓದಿ: ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್

    ವಾಟ್ಸಪ್ ಭಾರತದಲ್ಲಿ ತನ್ನ ಎಲ್ಲಾ ಬಳಕೆದಾರರಿಗೂ ಯಾವುದೇ ಮಿತಿಯಿಲ್ಲದೇ ತನ್ನ ಯುಪಿಐ ಸೇವೆಯನ್ನು ಒದಗಿಸಲು ಅನುಮತಿ ಕೋರಿತ್ತು. ಆದರೆ ಎನ್‌ಸಿಪಿಐ ಒಂದೇ ಬಾರಿಗೆ ಈ ಸೇವೆಯನ್ನು ಬಳಕೆದಾರರಿಗೆ ನೀಡಲು ಅನುಮತಿ ಕೊಡದೇ ಹಂತ ಹಂತವಾಗಿ ಅವಕಾಶ ನೀಡುತ್ತಿದೆ. ಪ್ರಸ್ತುತ ಭಾರತದಲ್ಲಿ 48 ಕೋಟಿ ಜನ ವಾಟ್ಸಪ್ ಬಳಕೆ ಮಾಡುತ್ತಿದ್ದಾರೆ.

  • ಶೀಘ್ರದಲ್ಲೇ ಎಲ್ಲಾ ಬ್ಯಾಂಕ್‌ಗಳ ATMಗಳಲ್ಲಿ ಕಾರ್ಡ್ ರಹಿತ ಹಣ ಹಿಂಪಡೆಯುವ ಸೌಲಭ್ಯ ಜಾರಿ: RBI

    ಶೀಘ್ರದಲ್ಲೇ ಎಲ್ಲಾ ಬ್ಯಾಂಕ್‌ಗಳ ATMಗಳಲ್ಲಿ ಕಾರ್ಡ್ ರಹಿತ ಹಣ ಹಿಂಪಡೆಯುವ ಸೌಲಭ್ಯ ಜಾರಿ: RBI

    ಮುಂಬೈ: ಶೀಘ್ರದಲ್ಲೇ ಎಲ್ಲಾ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಕಾರ್ಡ್ ಬಳಸದೆ ನಗದು ಹಿಂಪಡೆಯುವ ವ್ಯವಸ್ಥೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತರಲು ಮುಂದಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

    ಮುಂಬೈಯಲ್ಲಿ ಹಣಕಾಸು ನೀತಿ ಪರಾಮರ್ಶೆಯಲ್ಲಿ ವಿತ್ತೀಯ ನೀತಿಯ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಾಹಿತಿ ಹಂಚಿಕೊಂಡ ಅವರು, ಪ್ರಸ್ತುತ ಎಟಿಎಂ ಮೂಲಕ ಕಾರ್ಡ್ ರಹಿತವಾಗಿ ನಗದು ಹಿಂಪಡೆಯುವ ಸೌಲಭ್ಯವು ಕೆಲವು ಬ್ಯಾಂಕ್‍ಗಳಿಗೆ ಮಾತ್ರ ಸೀಮಿತವಾಗಿದೆ. ಯುಪಿಐ ಬಳಸಿಕೊಂಡು ಎಲ್ಲಾ ಬ್ಯಾಂಕ್‍ಗಳು ಮತ್ತು ಎಟಿಎಂ ನೆಟ್‍ವರ್ಕ್‍ಗಳಲ್ಲಿ ಕಾರ್ಡ್ ರಹಿತವಾಗಿ ಹಣ ಹಿಂಪಡೆಯುವ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಇದರಿಂದಾಗಿ ಕಾರ್ಡ್ ರಹಿತವಾಗಿ ವ್ಯವಹಾರ ನಡೆಸುವ ಮೂಲಕ ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಕ್ಲೋನಿಂಗ್ ಮುಂತಾದ ವಂಚನೆಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ

    ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಕೆಯ ಮೂಲಕ ಗ್ರಾಹಕರ ದೃಢೀಕರಣವನ್ನು ಸಕ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಆದರೆ ಅಂತಹ ವಹಿವಾಟುಗಳು ಎಟಿಎಂ ನೆಟ್‍ವರ್ಕ್‍ಗಳ ಮೂಲಕ ನಡೆಯುತ್ತದೆ ಎಂದು ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳ ಹೇಳಿಕೆ ತಿಳಿಸಿದೆ. ಎನ್‍ಪಿಸಿಐ, ಎಟಿಎಂ ನೆಟ್‍ವರ್ಕ್‍ಗಳು ಮತ್ತು ಬ್ಯಾಂಕ್‍ಗಳಿಗೆ ಶೀಘ್ರದಲ್ಲೇ ಪ್ರತ್ಯೇಕ ಸೂಚನೆಗಳನ್ನು ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಏಪ್ರಿಲ್ 10 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದು – ಆರೋಗ್ಯ ಇಲಾಖೆ

    ಶುಕ್ರವಾರ ಸತತ 11ನೇ ಬಾರಿಗೆ ರೆಪೋ ದರವನ್ನು ಶೇ. 4ರಷ್ಟು ಬದಲಾಯಿಸದೇ ಇಡಲು ನಿರ್ಧರಿಸಿದೆ. ರಿವರ್ಸ್ ರೆಪೋ ದರವನ್ನು ಕೂಡ ಯಥಾಸ್ಥಿತಿಯಲ್ಲಿ ಶೇ. 3.35ರಲ್ಲಿ ಇರಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ ಇದು ಮೊದಲ ದ್ವೈಮಾಸಿಕ ಹಣಕಾಸು ನೀತಿಯಾಗಿದೆ. ಆರ್ಥಿಕತೆಯು ಹೊಸ ಮತ್ತು ಬೃಹತ್ ಸವಾಲುಗಳನ್ನು ಎದುರಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ಜಾಗತಿಕ ಆರ್ಥಿಕತೆಯನ್ನು ಹಳಿತಪ್ಪಿಸಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿಯೂ ಆರ್ಥಿಕ ಬಿಕ್ಕಟ್ಟು ತಲೆದೋರಲಿದೆ: ರಾಹುಲ್ ಗಾಂಧಿ

    ರೆಪೋ ದರವು ಕೇಂದ್ರೀಯ ಬ್ಯಾಂಕ್ ಅಂದರೆ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕ್‍ಗಳಿಗೆ ನೀಡುವ ಸಾಲಕ್ಕೆ ಪಡೆಯುವ ಬಡ್ಡಿಯಾಗಿದೆ. ರಿವರ್ಸ್ ರೆಪೋ ದರವು ವಾಣಿಜ್ಯ ಬ್ಯಾಂಕ್‍ಗಳಿಂದ ಆರ್‌ಬಿಐ ತಾನು ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿಯಾಗಿದೆ. ಆರ್‌ಬಿಐ ರೆಪೋ ದರವನ್ನು ಮೇ 2020ರಿಂದ ದಾಖಲೆಯ ಕನಿಷ್ಠ ಮಟ್ಟದಲ್ಲಿ ಇರಿಸಿದೆ.

  • ಭಾರತದ UPI ವ್ಯವಸ್ಥೆ ಅಳವಡಿಸಿಕೊಂಡ ನೇಪಾಳ

    ಕಠ್ಮಂಡು: ಭಾರತದ UPI ವ್ಯವಸ್ಥೆಯನ್ನು ನೇಪಾಳ ಅಳವಡಿಸಿಕೊಳ್ಳುತ್ತಿದ್ದು, ಮೊದಲ ದೇಶ ಎನಿಸಿಕೊಳ್ಳುತ್ತಿದೆ. ಇದು ನೆರೆಯ ದೇಶದ ಡಿಜಿಟಲ್ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ತಿಳಿಸಿದೆ.

    NPCI ಇಂಟರ್‌ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್(NIPL) NPCIಯ ಅಂತರಾಷ್ಟ್ರೀಯ ಅಂಗವಾಗಿದ್ದು, ನೇಪಾಳದಲ್ಲಿ ಸೇವೆಗಳನ್ನು ಒದಗಿಸಲು ಗೇಟ್‍ವೇ ಪೇಮೆಂಟ್ ಸರ್ವಿಸ್(GPS) ಹಾಗೂ ಮನಮ್ ಇನ್ಫೋಟೆಕ್‍ನೊಂದಿಗೆ ಕೈಜೋಡಿಸಿದೆ. ಇದನ್ನೂ ಓದಿ: ಸಂಜ್ಞಾ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ಅಭಿವೃದ್ಧಿ ಪಡಿಸಿದ 20ರ ಯುವತಿ

    ಈ ಸಹಯೋಗದಿಂದ ನೇಪಾಳದಲ್ಲಿ ದೊಡ್ಡ ಡಿಜಿಟಲ್ ಸಾರ್ವಜನಿಕ ಸೇವೆ ಪೂರೈಕೆಯಾಗಲಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ(P2P) ಹಾಗೂ ವ್ಯಕ್ತಿಯಿಂದ ವ್ಯಾಪಾರಿ(P2M) ವಹಿವಾಟುಗಳನ್ನು ಉತ್ತೇಜಿಸುತ್ತದೆ ಎಂದು ಎನ್‍ಪಿಸಿಐ ತಿಳಿಸಿದೆ. ಇದನ್ನೂ ಓದಿ: ವಿರಾಟ್ ಅಭಿಮಾನಿಗಳಿಗಿಲ್ಲ ಗಡಿರೇಖೆ – ಪಾಕ್ ಕ್ರಿಕೆಟ್ ಲೀಗ್‍ನಲ್ಲಿ ರಾರಾಜಿಸಿದ ಕೊಹ್ಲಿ ಪೋಸ್ಟರ್

    ಭಾರತದ UPI ವ್ಯವಸ್ಥೆಯನ್ನು ಅಳವಡಿಸಿಕೊಂಡು ನಗದು ವಹಿವಾಟುಗಳನ್ನು ಡಿಜಿಟಲೀಕರಣವಾಗಿ ಬದಲಾವಣೆ ಮಾಡುತ್ತಿರುವ ಮೊದಲ ದೇಶ ನೇಪಾಳ ಎಂದು ತಿಳಿಸಿದೆ.

  • UPI :  ಸೆಪ್ಟೆಂಬರ್​ನಲ್ಲಿ 6.54 ಲಕ್ಷ ಕೋಟಿ ರೂ. ವಹಿವಾಟು

    UPI : ಸೆಪ್ಟೆಂಬರ್​ನಲ್ಲಿ 6.54 ಲಕ್ಷ ಕೋಟಿ ರೂ. ವಹಿವಾಟು

    ಬೆಂಗಳೂರು : ಯುಪಿಐ (Unified Payments Interface – UPI) ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್​ ತಿಂಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಕೂ ಮೂಲಕ ಹಂಚಿಕೊಂಡಿದ್ದಾರೆ.

    2021ರ ಜನವರಿಯಿಂದ ಸೆಪ್ಟೆಂಬರ್ ಅವಧಿಯ ಪ್ರತಿ ತಿಂಗಳ ಯುಪಿಐ ವಹಿವಾಟು ಅಂಕಿಅಂಶವನ್ನು ಕೂ ಮಾಡಿರುವ ಸಚಿವರು, ತಿಂಗಳಿನಿಂದ ತಿಂಗಳಿಗೆ ವಹಿವಾಟಿನ ಗಾತ್ರ ಗಮನಾರ್ಹ ಪ್ರಮಾಣದಲ್ಲಿ ವೃದ್ಧಿಯಾಗಿರುವುದನ್ನು ತೋರಿಸಿದ್ದಾರೆ. ಜನವರಿ 2021ರಲ್ಲಿ   4.31 ಲಕ್ಷ ಕೋಟಿ ರೂ., ಮೊತ್ತದ ವಹಿವಾಟು ಯುಪಿಐ ಮೂಲಕ ನಡೆದಿದ್ದರೆ, ಸೆಪ್ಟೆಂಬರ್​ ತಿಂಗಳಲ್ಲಿ ಈ ಮೊತ್ತವು  6.54 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

    ಅಮೆರಿಕ ಡಾಲರ್​ ಎದುರಿನ ಭಾರತೀಯ ರೂಪಾಯಿ ಮೌಲ್ಯದ ಲೆಕ್ಕಾಚಾರದಲ್ಲಿ ಕಳೆದ ಆಗಸ್ಟ್​ನಲ್ಲಿ ನಡೆದಿರುವ ಯುಪಿಐ ವಹಿವಾಟಿನ ಮೊತ್ತ 86.19 ಶತಕೋಟಿ ಡಾಲರ್. ಸೆಪ್ಟೆಂಬರ್ ತಿಂಗಳಲ್ಲಿ ಇದು 88.25 ಶತಕೋಟಿ ಡಾಲರ್​ಗೆ ಮುಟ್ಟಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು


    ಅಶ್ವಿನಿ ವೈಷ್ಣವ್ ಸಹ ತಾವು ಮಾಡಿರುವ ಕೂನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. #UPIChalega ಹ್ಯಾಷ್​ಟ್ಯಾಗ್​ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಯುಪಿಐ ವಹಿವಾಟು ಗಾತ್ರವು ಪ್ರತಿವರ್ಷ 1 ಲಕ್ಷ ಕೋಟಿ ಡಾಲರ್ ಆರ್ಥಿಕ ಪ್ರಗತಿ ಸಾಧಿಸಲು ಅಗತ್ಯ ವೇಗ ಸಿಗುತ್ತಿರುವ ಉದಾಹರಣೆ’ ಎಂದು ವಿವರಿಸಿದ್ದಾರೆ.

  • ಡಿಜಿಟಲ್ ಪಾವತಿ – ವಿಶ್ವದಲ್ಲೇ ಭಾರತ ಈಗ ನಂಬರ್ 1

    ಡಿಜಿಟಲ್ ಪಾವತಿ – ವಿಶ್ವದಲ್ಲೇ ಭಾರತ ಈಗ ನಂಬರ್ 1

    ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಭಾರತ ಈಗ ವಿಶ್ವದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಹೌದು. ಕೋವಿಡ್ 19 ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಡಿಜಿಟಲ್ ವ್ಯವಹಾರ ನಡೆದಿದೆ. ಪರಿಣಾಮ ಅಮೆರಿಕ, ಚೀನಾವನ್ನು ಹಿಂದಿಕ್ಕಿ ಭಾರತ 2020ರ ಅವಧಿಯಲ್ಲಿ ಅಗ್ರ ಸ್ಥಾನವನ್ನು ಸಂಪಾದಿಸಿದೆ.

    ಯುನೈಟೆಡ್ ಕಿಂಗ್‍ಡಮ್‍ನ ಎಸಿಐ ವರ್ಲ್ಡ್ ಈ ವರದಿ ನೀಡಿದ್ದು, 2020ರಲ್ಲಿ 25.5 ಶತಕೋಟಿ ರಿಯಲ್ ಟ್ರೈಮ್ ಆನ್‍ಲೈನ್ ವ್ಯವಹಾರ ನಡೆದಿದೆ. ಭೀಮ್ ಆಪ್, ಗೂಗಲ್ ಪೇ, ಪೇಟಿಂಎ, ಫೋನ್ ಪೇ ಸೇರಿದಂತೆ ಹಲವು ಆಪ್‍ಗಳಿಂದ ವ್ಯವಹಾರ ನಡೆಸಿದ ಪರಿಣಾಮ ಭಾರತಕ್ಕೆ ಮೊದಲ ಸ್ಥಾನ ಸಿಕ್ಕಿದೆ ಎಂದು ಹೇಳಿದೆ.

    ಯಾವ ದೇಶದಲ್ಲಿ ಎಷ್ಟು?
    ಚೀನಾ 15.7 ಶತಕೋಟಿ, ದಕ್ಷಿಣ ಕೊರಿಯಾ 6 ಶತಕೋಟಿ, ಥಾಯ್ಲೆಂಡ್ 5.2 ಶತಕೋಟಿ, ಇಂಗ್ಲೆಂಡ್ 2.8 ಶತಕೋಟಿ, ಅಮೆರಿಕ 1.2 ಶತಕೋಟಿ ವ್ಯವಹಾರ ನಡೆಸಿದೆ.

    ಭಾರತದಲ್ಲಿ ರಿಯಲ್ ಟೈಂ ವ್ಯವಹಾರ ಪಾಲು ಶೇ.15.6ರಷ್ಟು ಇದ್ದರೆ ಎಲೆಕ್ಟ್ರಾನಿಕ್ ಪಾವತಿ ಪಾಲು ಶೇ.22.9 ರಷ್ಟು ಇದೆ. ನಗದು ಮೂಲಕ ದೇಶದಲ್ಲಿ ಶೇ.61.4 ರಷ್ಟು ವ್ಯವಹಾರ ನಡೆದಿದೆ ಎಂದು ಅಧ್ಯಯನ ತಿಳಿಸಿದೆ.

    2025ರ ವೇಳೆ ರಿಯಲ್ ಟೈಂ ಮತ್ತು ಇತರ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಗಳು ಕ್ರಮವಾಗಿ ಶೇ.37.1 ಮತ್ತು ಶೇ.34.6ಕ್ಕೆ ಏರಿಕೆಯಾಗಲಿದೆ. ನಗದು ಮೂಲಕ ನಡೆಸುವ ವ್ಯವಹಾರ ಶೇ.28.3ಕ್ಕೆ ಕುಸಿಯಬಹುದು. 2024ರ ವೇಳೆಗೆ ರಿಯಲ್‍ಟೈಂ ಪೇಮೆಂಟ್ ವ್ಯವಸ್ಥೆ ಭಾರತದಲ್ಲಿ ಶೇ.50ಕ್ಕಿಂತ ಹೆಚ್ಚಾಗಲಿದೆ ಎಂದು ವರದಿ ಅಂದಾಜಿಸಿದೆ.

    ಪೇಟಿಎಂ, ಫೋನ್‍ಪೇ, ಪೈನ್ ಲ್ಯಾಬ್ಸ್, ರಾಝರ್ ಪೇ, ಭಾರತ್ ಪೇ ಸೇರಿದಂತೆ ಇನ್ನಿತರ ಸಂಸ್ಥೆಗಳು ಕೋವಿಡ್ 19 ಅವಧಿಯಲ್ಲಿ ಬೆಳವಣಿಗೆ ಸಾಧಿಸಿದೆ. ಕ್ಯಾಶ್‍ಬ್ಯಾಕ್, ಕೊಡುಗೆಗಳನ್ನು ಪ್ರಕಟಿಸಿದರಿಂದ ಗ್ರಾಹಕರು ಈ ಸೇವೆಯತ್ತ ಹೆಚ್ಚು ಆಕರ್ಷಿತರಾಗಿದ್ದಾರೆ.

    ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಆರಂಭಿಸಿದ ಪ್ರಿ ಪೇಯ್ಡ್ ಇನ್‍ಸ್ಟ್ರುಮೆಂಟ್ಸ್(ಪಿಪಿಐ), ಯುನಿವರ್ಸಲ್ ಪೇಮೆಂಟ್ ಇಂಟರ್‍ಫೇಸ್(ಯುಪಿಐ) ಅಲ್ಲದೇ ಭೀಮ್ ಆಪ್‍ನಿಂದಾಗಿ ಕೆಲ ವರ್ಷದಲ್ಲಿ ಹಣಕಾಸು ವ್ಯವಹಾರದಲ್ಲಿ ಭಾರೀ ಬದಲಾವಣೆಯಾಗಿದೆ ಎಂದು ಹೇಳಿದೆ.

     

    ಯರ್ನೆಸ್ಟ್ ಯಂಗ್ ಸಂಸ್ಥೆಯ ಪ್ರಕಾರ 2020 ರಿಂದ 25ರ ಹಣಕಾಸು ವರ್ಷದಲ್ಲಿ ಶೇ.27 ರಷ್ಟು ಡಿಜಿಟಲ್ ಬೆಳವಣಿಗೆಯಾಗಬಹುದು. 2020ರಲ್ಲಿ 2,153 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದ್ದರೆ 2025ರ ವೇಳೆಗೆ ಇದು 7,092 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಹೇಳಿದೆ.

    ಪ್ರತಿ ತಿಂಗಳು ಯುಪಿಐ ವ್ಯವಹಾರ ಶೇ.18.7ರಷ್ಟು ಏರಿಕೆ ಕಾಣುತ್ತಿದೆ ಎಂದು ಎನ್‍ಪಿಸಿಐ ಹೇಳಿದೆ. 2021ರ ಫೆಬ್ರವರಿ 4.25 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದ್ದರೆ ಮಾರ್ಚ್ ನಲ್ಲಿ 5.05 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದೆ. ಈ ಅವಧಿಯಲ್ಲಿ 2,292.90 ದಶಲಕ್ಷದಿಂದ 2,731.68 ದಶಲಕ್ಷಕ್ಕೆ ವ್ಯವಹಾರ ಏರಿಕೆಯಾಗಿದೆ ಎಂದು ಅದು ತಿಳಿಸಿದೆ.

  • ವಾಟ್ಸಪ್‌ನಲ್ಲಿ ಹಣ ಸೆಂಡ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

    ವಾಟ್ಸಪ್‌ನಲ್ಲಿ ಹಣ ಸೆಂಡ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

    ನವದೆಹಲಿ: ಇನ್ನು ಮುಂದೆ ವಾಟ್ಸಪ್‌ನಲ್ಲೂ ಹಣವನ್ನು ಕಳುಹಿಸಬಹುದು. ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ(ಎನ್‌ಪಿಸಿಐ) ಅನುಮತಿ ನೀಡಿದ ಹಿನ್ನೆಲೆಯಲ್ಲಿ ವಾಟ್ಸಪ್‌ ಈಗ ಬಳಕೆದಾರರಿಗೆ ಈ ಸೇವೆ ನೀಡಲು ಮುಂದಾಗಿದೆ.

    ಈ ಸಂಬಂಧ ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಜಿಯೋ ಪೇಮೆಂಟ್ಸ್‌ ಬ್ಯಾಂಕ್‌ ಜೊತೆ ಕೆಲಸ ಮಾಡುತ್ತಿದ್ದೇವೆ. ಬಳಕೆದಾರರು ಯಪಿಐ ಬೆಂಬಲಿತ ಆಪ್‌ ಬಳಸಿಕೊಂಡು ಹಣವನ್ನು ಕಳುಹಿಸಬಹುದು ಎಂದು ವಾಟ್ಸಪ್‌ ಹೇಳಿದೆ.

    ಸದ್ಯಕ್ಕೆ ಈ ವಿಶೇಷತೆ ಎಲ್ಲ ವಾಟ್ಸಪ್‌ ಬಳಕೆದಾರರಿಗೆ ಸಿಗುವುದಿಲ್ಲ. 2 ಕೋಟಿ ಮಂದಿಗೆ ಮಾತ್ರ ಬಳಕೆ ಮಾಡಲು ಸಿಗುತ್ತದೆ. ಪ್ರಸ್ತುತ ಭಾರತದಲ್ಲಿ 40 ಕೋಟಿ ಜನ ವಾಟ್ಸಪ್‌ ಬಳಕೆ ಮಾಡುತ್ತಿದ್ದಾರೆ.

     

     

    ಹಣ ಕಳುಹಿಸುವುದು ಹೇಗೆ?
    ವಾಟ್ಸಪ್‌ನಲ್ಲಿ ಹಣ ಕಳುಹಿಸುವ ಮೊದಲು ನೀವು ಯಾರಿಗೆ ಹಣ ಕಳುಹಿಸಬೇಕು ಅಂತ ಉದ್ದೇಶಿಸಿದ್ದೀರೋ ಅವರ ಚಾಟ್‌ ಓಪನ್‌ ಮಾಡಿ ಕ್ಯಾಮೆರಾ ಬಳಿ ಇರುವ ಅಟ್ಯಾಚ್‌ಮೆಂಟ್‌ ಕ್ಲಿಕ್‌ ಮಾಡಿ. ಇದಾದ ಬಳಿಕ ಪೇಮೆಂಟ್‌ ಆಯ್ಕೆಯಲ್ಲಿ ನಿಮ್ಮ ಬ್ಯಾಂಕ್‌ ಖಾತೆಯನ್ನು ಆರಿಸಿಕೊಳ್ಳಿ.

    ನಂತರ ನಿಮ್ಮ ವಾಟ್ಸಪ್‌ ಮೊಬೈಲ್‌ ನಂಬರ್‌ ಬ್ಯಾಂಕ್‌ ಖಾತೆಗೆ ನೀಡಿದ ಮೊಬೈಲ್‌ ಸಂಖ್ಯೆ ಸರಿ ಇದ್ಯಾ ಎಂದು ಖಚಿತಪಡಿಸಿ. ಇದಾದ ಬಳಿಕ ವಾಟ್ಸಪ್‌ ಪೇಮೆಂಟ್‌ ಮೂಲಕ ಹಣವನ್ನು ಕಳುಹಿಸಬಹುದು. ಗಮನಿಸಬೇಕಾದ ಅಂಶ ನೀವು ಹಣವನ್ನು ಯಾರಿಗೆ ಕಳುಹಿಸುತ್ತಿರೋ ಅವರು ಸಹ ನಿಮ್ಮ ರೀತಿಯಲ್ಲೇ ವಾಟ್ಸಪ್‌ ಸೆಟಪ್‌ ಮಾಡಿರಬೇಕಾಗುತ್ತದೆ.

    ವಿಳಂಬ ಆಗಿದ್ದು ಯಾಕೆ?
    ಗೂಗಲ್‌ ಪೇ, ಫೋನ್‌ ಪೇಯಂತೆ ವಾಟ್ಸಪ್‌ನಲ್ಲೂ ಈ ಸೇವೆ ಈ ಮೊದಲೇ ಜಾರಿಯಾಗಬೇಕಿತ್ತು. 2018ರಲ್ಲೇ ಪ್ರಾಯೋಗಿಕವಾಗಿ ಈ ಸೇವೆ ಆರಂಭಗೊಂಡಿತ್ತು. ಆದರೆ ವಾಟ್ಸಪ್‌ ಭಾರತೀಯ ಬಳಕೆದಾರರ ಪೇಮೆಂಟ್ಸ್‌ ಡೇಟಾ ಸಂಗ್ರಹಣೆ ವಿಚಾರದಲ್ಲಿ ಸ್ಥಳೀಯ ಮಾನದಂಡಗಳನ್ನು ಅನುಸರಿಸದ ಕಾರಣ ವಾಟ್ಸಪ್‌ ಪೇಮೆಂಟ್ಸ್‌ಗೆ ಅನುಮತಿ ನೀಡುವುದಿಲ್ಲ ಎಂದು ಆರ್‌ಬಿಐ 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

    ಬಳಕೆದಾರರ ಟ್ರಾನ್ಸಕ್ಷನ್‌ ಐಡಿ, ರೆಫೆರೆನ್ಸ್‌ ನಂಬರ್‌ ಇತ್ಯಾದಿಗಳನ್ನು ವಾಟ್ಸಪ್‌ ಭಾರತದ ಹೊರಗಡೆ ಸಂಗ್ರಹ ಮಾಡುತ್ತಿರುವ ಕಾರಣ ಅನುಮತಿ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ಗೆ ಆರ್‌ಬಿಐ ಮಾಹಿತಿ ನೀಡಿತ್ತು. ಈ ವಿಚಾರದ ಬಗ್ಗೆ ಇದ್ದ ಎಲ್ಲ ಗೊಂದಲಗಳು ಈಗ ನಿವಾರಣೆಯಾದ ಎನ್‌ಪಿಸಿಐ ವಾಟ್ಸಪ್‌ ಪೇಮೆಂಟ್ಸ್‌ಗೆ ಅನುಮತಿ ನೀಡಿದೆ.

    ವಾಟ್ಸಪ್ 8ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿದ್ದರು. ಈ ವೇಳೆ ಈ ವೇಳೆ ಬುಸಿನೆಸ್ ಕ್ಷೇತ್ರವನ್ನು ಹೇಗೆ ವಿಸ್ತರಿಸುತ್ತೀರಿ ಎನ್ನುವ ಪ್ರಶ್ನೆಗೆ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು. 2017ರ ಫೆಬ್ರವರಿ 24ರಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಬ್ರಿಯಾನ್ ಆಕ್ಟನ್ ಭೇಟಿ ಮಾಡಿ ‘ಡಿಜಿಟಲ್ ಇಂಡಿಯಾ’ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು.

    2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 40 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ.

  • ಈಗ ವಾಟ್ಸಪ್ ನಲ್ಲೂ  ಹಣವನ್ನು ಸೆಂಡ್ ಮಾಡಿ!

    ಈಗ ವಾಟ್ಸಪ್ ನಲ್ಲೂ ಹಣವನ್ನು ಸೆಂಡ್ ಮಾಡಿ!

    ನವದೆಹಲಿ: ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್. ಈಗ ವಾಟ್ಸಪ್ ಮೂಲಕವೇ ಹಣವನ್ನು ಆಪ್ತರಿಗೆ ಸೆಂಡ್ ಮಾಡಬಹುದು. ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿಯು ಭಾರತದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಮುಖಾಂತರ ಹಣ ವರ್ಗಾವಣೆ ಮಾಡುವ ವಿಶೇಷತೆಯನ್ನು ಆ್ಯಪ್‍ಗೆ ಸೇರಿಸಿದೆ.

    ಈ ಹೊಸ ವಿಶೇಷತೆಯನ್ನು ಐಓಎಸ್ ಮತ್ತು ಆಂಡ್ರಾಯ್ಡ್ ವಾಟ್ಸಪ್ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ. ಈ ಹೊಸ ವಿಶೇಷತೆಯನ್ನು ವಾಟ್ಸಪ್ 2.18.21 ಐಓಎಸ್ ಮತ್ತು ಆಂಡ್ರಾಯ್ಡ್ಗೆ 2.18.41 ಆವೃತ್ತಿಯ ಆ್ಯಪ್ ಬಳಸುವ ಮಂದಿಗೆ ಸಿಕ್ಕಿದೆ.

    ವಾಟ್ಸಪ್‍ನ ಈ ವಿಶೇಷತೆಯು ಚಾಟ್ ವಿಂಡೋ ನಲ್ಲಿ ಕಾಣಿಸಲಿದ್ದು, ಅಟಾಚ್ಮೆಂಟ್ ಮೆನುವಿನಲ್ಲಿ ಸಿಗುವ ಗ್ಯಾಲರಿ, ವಿಡಿಯೋ, ಡಾಕ್ಯುಮೆಂಟ್‍ಗಳ ಜೊತೆಯಲ್ಲಿ ಈ ವಿಶೇಷತೆ ಸಿಗುತ್ತದೆ. ಇದರಲ್ಲಿ ಹಣ ಪಾವತಿಸುವ ವಿಶೇಷತೆಯನ್ನು ಕ್ಲಿಕ್ ಮಾಡಿದರೆ, ವಿವಿಧ ಬ್ಯಾಂಕ್‍ಗಳ ಆಯ್ಕೆ ಮಾಡಬಹುದಾಗಿದೆ.

    ನಮಗೆ ಬೇಕಾದ ಬ್ಯಾಂಕ್ ಅನ್ನು ಸೆಲೆಕ್ಟ್ ಮಾಡಿ ನಂತರ ಯುಪಿಐಗೆ ಕನೆಕ್ಟ್ ಮಾಡಬೇಕು. ತದನಂತರ ಹೊಸ ಯುಪಿಐ ಖಾತೆ ತೆರೆದು ಪಿನ್ ಸೆಟ್ ಮಾಡಿ, ನಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಬಹುದು. ಹಣ ಕಳುಹಿಸುವ ಹಾಗು ಹಣ ಪಡೆದು ಕೊಳ್ಳುವ ವ್ಯಕ್ತಿಗಳಿಬ್ಬರು ಈ ವಿಶೇಷತೆ ಬಳಸಬೇಕಾದರೆ ಆ್ಯಪ್ ಅಪ್‍ಡೇಟ್ ಮಾಡಿಕೊಳ್ಳಬೇಕಾಗುತ್ತದೆ.

    ವಾಟ್ಸಪ್ 8ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿದ್ದರು. ಈ ವೇಳೆ ಈ ವೇಳೆ ಬುಸಿನೆಸ್ ಕ್ಷೇತ್ರವನ್ನು ಹೇಗೆ ವಿಸ್ತರಿಸುತ್ತೀರಿ ಎನ್ನುವ ಪ್ರಶ್ನೆಗೆ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು.

    2017ರ ಫೆಬ್ರವರಿ 24ರಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಬ್ರಿಯಾನ್ ಆಕ್ಟನ್ ಭೇಟಿ ಮಾಡಿ `ಡಿಜಿಟಲ್ ಇಂಡಿಯಾ’ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು.

    ನವೆಂಬರ್ 8ರಂದು ಕೇಂದ್ರ ಸರ್ಕಾರ 1 ಸಾವಿರ ಮತ್ತು 500 ರೂ. ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಭಾರತದಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಟ್ಸಪ್ ಈಗ ಈ ಕ್ಷೇತ್ರದತ್ತ ಕಣ್ಣುಹಾಕಿದೆ. ಈ ಸಂಬಂಧವಾಗಿ ವಾಟ್ಸಪ್ ಕಂಪೆನಿ ಈ ಹಿಂದೆ ಜಾಹಿರಾತು ಪ್ರಕಟಿಸಿ, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಭೀಮ್ ಆ್ಯಪ್ ಮತ್ತು ಆಧಾರ್ ನಂಬರ್ ಇವುಗಳಲ್ಲಿ ಪರಿಣಿತಿ ಹೊಂದಿರುವ ಅಭ್ಯರ್ಥಿಗಳನ್ನು ಹುಡುಕುತ್ತಿರುವುದಾಗಿ ತಿಳಿಸಿತ್ತು.

    2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 20 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ.

    ವಾಟ್ಸಪ್ ಪ್ರಕಟಿಸಿದ್ದ ಜಾಹಿರಾತು

  • ನೋಟ್ ಬ್ಯಾನ್ ನಂತ್ರ ಡಿಜಿಟಲ್ ವಹಿವಾಟು ಎಷ್ಟು ಹೆಚ್ಚಾಗಿದೆ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

    ನೋಟ್ ಬ್ಯಾನ್ ನಂತ್ರ ಡಿಜಿಟಲ್ ವಹಿವಾಟು ಎಷ್ಟು ಹೆಚ್ಚಾಗಿದೆ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

    ನವದೆಹಲಿ: 500 ಮತ್ತು 1 ಸಾವಿರ ರೂ. ನೋಟು ಬ್ಯಾನ್ ಆದ ಬಳಿಕ ಭಾರತದಲ್ಲಿ ಡಿಜಿಟಲ್ ವಹಿವಾಟು ಎಷ್ಟಾಗಿದೆ? ಪ್ರಧಾನಿ ನರೇಂದ್ರ ಮೋದಿಯ ನೋಟ್‍ಬ್ಯಾನ್‍ಗೆ ಒಂದು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಕೇಳುತ್ತಿರುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ನೋಟ್ ಬ್ಯಾನ್ ಬಳಿಕ ಯುಪಿಐ ಮೂಲಕ ನಡೆಸುವ ವಹಿವಾಟು 77 ಪಟ್ಟು ಏರಿಕೆಯಾಗಿದೆ.

    ನೋಟ್ ಬ್ಯಾನ್ ಮುನ್ನ ಅಕ್ಟೋಬರ್ ಅವಧಿಯಲ್ಲಿ ಯುಪಿಐ ಮೂಲಕ 1 ಲಕ್ಷ ವಹಿವಾಟು ನಡೆದಿದ್ದರೆ ಈಗ 7.6 ಕೋಟಿ ವಹಿವಾಟು ನಡೆದಿದೆ. ಸೆಪ್ಟೆಂಬರ್ 2017ರ ಅವಧಿಯಲ್ಲಿ 3 ಕೋಟಿ ವಹಿವಾಟು ನಡೆದಿದ್ದರೆ, ಅಕ್ಟೋಬರ್ ನಲ್ಲಿ ಒಂದೇ ಬಾರಿಗೆ  7.6 ಕೋಟಿಗೆ ಜಿಗಿತ ಕಂಡಿದೆ.

    ಆಗಸ್ಟ್ ನಲ್ಲಿ ಒಟ್ಟು 65,149 ಕೋಟಿ ರೂ. ವಹಿವಾಟು ನಡೆದಿದ್ದರೆ, ಸೆಪ್ಟೆಂಬರ್ ನಲ್ಲಿ 71,759 ಕೋಟಿ ರೂ. ವಹಿವಾಟು ನಡೆದಿದೆ. ಆದರೆ ಅಕ್ಟೋಬರ್ ನಲ್ಲಿ 75,041 ಕೋಟಿ ರೂ. ವಹಿವಾಟು ನಡೆದಿದೆ ಎಂದು ಎನ್‍ಪಿಸಿಐ ಹೇಳಿದೆ.

    ಇನ್ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ ಟ್ವೀಟ್ ಮಾಡಿ ಯುಪಿಐ ಸಾಧನೆಯನ್ನು ಹೊಗಳಿದ್ದು, ‘ವಾಟ್ ಎ ಸ್ಟೋರಿ’ ಎಂದು ಬರೆದು ಹೊಗಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‍ನಲ್ಲಿ ಭಾರತ್ ಇಂಟರ್‍ಫೇಸ್ ಫಾರ್ ಮನಿ(ಭೀಮ್) ಅಪ್ಲಿಕೇಶನ್ ಬಿಡುಗಡೆ ಮಾಡಿದ್ದರು. ಭಾರತ ಸರ್ಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೇರೇಷನ್ ‘ಯೂನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್(ಯುಪಿಐ) ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಗೆ ಸುಲಭವಾಗಿ ಹಣವನ್ನು ಪಾವತಿಸಬಹುದಾಗಿದೆ. ಪೇಟಿಎಂ, ಜಿಯೋ ಮನಿ, ಪೋನ್‍ಪೇ ಇತ್ಯಾದಿ ಅಪ್‍ಗಳು ಯುಪಿಐ ಮೂಲಕವೇ ಕಾರ್ಯನಿರ್ವಹಿಸುತ್ತದೆ.