Tag: upi

  • UPI ಪೇಮೆಂಟ್‌ಗೆ ಫಿಂಗರ್‌ಪ್ರಿಂಟ್‌, ಫೇಶಿಯಲ್‌ ರೆಕಗ್ನಿಷನ್‌ – ನಾಳೆಯಿಂದ ಜಾರಿ

    UPI ಪೇಮೆಂಟ್‌ಗೆ ಫಿಂಗರ್‌ಪ್ರಿಂಟ್‌, ಫೇಶಿಯಲ್‌ ರೆಕಗ್ನಿಷನ್‌ – ನಾಳೆಯಿಂದ ಜಾರಿ

    ನವದೆಹಲಿ: ಫಿಂಗರ್‌ಪ್ರಿಂಟ್‌, ಫೇಶಿಯಲ್ ರೆಕಗ್ನಿಷನ್ ಬಳಸಿ ಯುಪಿಐ ಪಾವತಿಗಳನ್ನು ಅನುಮೋದಿಸಲು ಬಳಕೆದಾರರಿಗೆ ಭಾರತ ಅವಕಾಶ ನೀಡಲಿದೆ.

    ನಾಳೆಯಿಂದಲೇ (ಅ.8) ಈ ವ್ಯವಸ್ಥೆ ಜಾರಿಗೆ ಬರಲಿದೆ. ಭಾರತದ ವಿಶಿಷ್ಟ ಗುರುತಿನ ವ್ಯವಸ್ಥೆ ಆಧಾರ್ ಅಡಿಯಲ್ಲಿ ಸಂಗ್ರಹಿಸಲಾದ ಬಯೋಮೆಟ್ರಿಕ್ ಡೇಟಾವನ್ನು ಬಳಸಿಕೊಂಡು ದೃಢೀಕರಣಗಳನ್ನು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಸಂಖ್ಯಾತ್ಮಕ ಪಿನ್ ಅಗತ್ಯವಿರುವ ಪ್ರಸ್ತುತ ವ್ಯವಸ್ಥೆಗೆ ಬದಲಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಡಿಜಿಟಲ್ ಪಾವತಿಗಳಿಗೆ ಕೆಲವು ಪರ್ಯಾಯ ದೃಢೀಕರಣ ವಿಧಾನಗಳನ್ನು ಅನುಮತಿಸಿದೆ.

    UPI ಅನ್ನು ನಿರ್ವಹಿಸುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI), ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್‌ಟೆಕ್ ಉತ್ಸವದಲ್ಲಿ ಈ ಹೊಸ ಬಯೋಮೆಟ್ರಿಕ್ ವೈಶಿಷ್ಟ್ಯವನ್ನು ಪ್ರದರ್ಶಿಸಲು ಯೋಜಿಸಿದೆ.

  • ನ.15 ರಿಂದ ಹೊಸ ಟೋಲ್ ನಿಯಮ – ಫಾಸ್ಟ್‌ಟ್ಯಾಗ್ ಇಲ್ಲದವರಿಗೆ‌ ಗುಡ್‌ನ್ಯೂಸ್‌, UPI ಪಾವತಿದಾರರಿಗೆ ಭಾರೀ ರಿಯಾಯಿತಿ

    ನ.15 ರಿಂದ ಹೊಸ ಟೋಲ್ ನಿಯಮ – ಫಾಸ್ಟ್‌ಟ್ಯಾಗ್ ಇಲ್ಲದವರಿಗೆ‌ ಗುಡ್‌ನ್ಯೂಸ್‌, UPI ಪಾವತಿದಾರರಿಗೆ ಭಾರೀ ರಿಯಾಯಿತಿ

    ನವದೆಹಲಿ: ಟೋಲ್ (Toll) ಪಾವತಿಗಳಿಗೆ ಸಂಬಂಧಿಸಿದಂತೆ ಡಿಜಿಟಲ್‌ ಪಾವತಿಯನ್ನ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಪರಿಚಯಿಸಿದೆ. ಇದರಿಂದ ಫಾಸ್ಟ್‌ಟ್ಯಾಗ್‌ ಹೊಂದಿಲ್ಲದವರು ಯುಪಿಐ ಪಾವತಿ ಮೂಲಕವೂ ರಿಯಾಯಿತಿ ಗಳಿಸಬಹುದಾಗಿದೆ. ನವೆಂಬರ್‌ 15ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.

    ಸಹೌದು. ಫಾಸ್ಟ್‌ ಟ್ಯಾಗ್‌ (FASTag) ಹೊಂದದೇ ಇರುವ ವಾಹನಗಳು ನವೆಂಬರ್ 15ರಿಂದ ನಗದುರೂಪದಲ್ಲಿ ಟೋಲ್ ಶುಲ್ಕ ಪಾವತಿಸಲು ಬಯಸಿದ್ರೆ ಅವು ಎರಡುಪಟ್ಟು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಆದ್ರೆ ಯುಪಿಐ (UPI) ರೂಪದಲ್ಲಿ ಶುಲ್ಕ ಪಾವತಿಸುವವರಿಗೆ ನಿಗದಿಗಿಂತ 1.25 ಪಟ್ಟು ಅಧಿಕ ಶುಲ್ಕ ವಿಧಿಸಲಾಗುತ್ತದೆ. ಇದನ್ನೂ ಓದಿ: ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    ಫಾಸ್ಟ್‌ಟ್ಯಾಗ್‌ ಬಳಕೆದಾರರಲ್ಲದವರಿಗೆ ಅವರ ಟೋಲ್ ಶುಲ್ಕ (Toll) ಪಾವತಿಯ ವಿಧಾನವನ್ನ ಆಧರಿಸಿ ವಿಭಿನ್ನ ಶುಲ್ಕಗಳನ್ನು ವಿಧಿಸಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ (MORTH) ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಹಾಗೂ ಆದಾಯ ನಿರ್ಧಾರ) ನಿಯಮಗಳು, 2008 ಅನ್ನು ತಿದ್ದುಪಡಿಗೊಳಿಸಿದೆ. ಟೋಲ್‌ ಪ್ಲಾಜಾಗಳಲ್ಲಿ (Toll Plaza) ಡಿಜಿಟಲ್ ಪಾವತಿ ಉತ್ತೇಜಿಸುವುದು ಹಾಗೂ ನಗದು ಬಳಕೆಯನ್ನು ಕಡಿಮೆಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

    ನವೆಂಬರ್‌ 15ರಿಂದ ನಿಯಮ ಜಾರಿ
    ಟೋಲ್‌ ಪ್ಲಾಜಾಗಳಲ್ಲಿ ನಗದು ವಹಿವಾಟು ಕಡಿಮೆಮಾಡಲು ಈ ಬದಲಾವಣೆ ತರಲಾಗಿದ್ದು, ನವೆಂಬರ್‌ 15ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅಲ್ಲದೇ ಡಿಜಿಟಲ್‌ ಪಾವತಿ ಮಾಡುವುದರಿಂದ ಪಾರದರ್ಶಕತೆ ಕಾಯ್ದುಕೊಳ್ಳುವ ಜೊತೆಗೆ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ, ಹೆದ್ದಾರಿ ಬಳಕೆದಾರರ ಪ್ರಯಾಣ ಸಮಯ ಉಳಿತಾಯ ಕೂಡ ಮಾಡಬಹುದಾಗಿದೆ. ಇದನ್ನೂ ಓದಿ: ಕಂದಮ್ಮಗಳ ಜೀವ ತೆಗೆದ ಕೆಮ್ಮಿನ ಸಿರಪ್ – ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

    ಉದಾಹರಣೆಗೆ
    ಫಾಸ್ಟ್‌ಟ್ಯಾಗ್ ಮೂಲಕ ವಾಹನದ ಟೋಲ್ ಶುಲ್ಕ 100 ರೂ. ಆಗಿದ್ದರೆ, ನಗದು ರೂಪದಲ್ಲಿ ಪಾವತಿಸಿದರೆ 200 ರೂ. ಆಗುತ್ತದೆ, ಆದರೆ UPI ಮೂಲಕ ಡಿಜಿಟಲ್ ಆಗಿ ಪಾವತಿಸಿದರೆ 125 ರೂ. ಮಾತ್ರ ಆಗುತ್ತದೆ. ಇದರರ್ಥ ನವೆಂಬರ್ 15 ರಿಂದ FASTag ಅಲ್ಲದ ಬಳಕೆದಾರರು UPI ಮೂಲಕ ಪಾವತಿ ಮಾಡಿದ್ರೆ 100 ರೂ.ನಲ್ಲಿ 75 ರೂ. ಉಳಿತಾಯ ಮಾಡಬಹುದಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

  • ಆ.1 ರಿಂದ ಹೊಸ UPI ನಿಯಮಗಳು ಜಾರಿಗೆ – ಏನದು ರೂಲ್ಸ್‌?

    ಆ.1 ರಿಂದ ಹೊಸ UPI ನಿಯಮಗಳು ಜಾರಿಗೆ – ಏನದು ರೂಲ್ಸ್‌?

    ನವದೆಹಲಿ: ಆ.1 ರಿಂದ ಯುಪಿಐ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ.

    ಗೂಗಲ್ ಪೇ, ಪೇಟಿಎಂ ಫೋನ್ ಪೇ ನಂತಹ ಯುಪಿಐ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ನಿಯಮಗಳಲ್ಲಿ ಆಗಸ್ಟ್ 1 ರಿಂದ ಹಲವಾರು ಬದಲಾವಣೆಗಳನ್ನು ಜಾರಿಗೆ ತರಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಜ್ಜಾಗಿದೆ.

    ಡಿಜಿಟಲ್‌ ಹಣ ಪಾವತಿ ವ್ಯವಸ್ಥೆ ಯುಪಿಐನ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಹಲವು ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ. ದಿನಕ್ಕೆ ಹಲವಾರು ಬಾರಿ UPI ಅಪ್ಲಿಕೇಶನ್‌ಗಳನ್ನು ಬಳಸುವ ಗ್ರಾಹಕರಿಗೆ, ಈ ನಿಯಮಗಳು ಮಹತ್ವದ್ದಾಗಿವೆ.

    ಏನೇನು ಬದಲಾವಣೆ?
    * ಒಂದು ದಿನದಲ್ಲಿ ಬಳಕೆದಾರರು 50 ಬಾರಿ ಮಾತ್ರ ಯುಪಿಐ ಅಪ್ಲಿಕೇಷನ್‌ ಮೂಲಕ ಖಾತೆಯಲ್ಲಿರುವ ಬಾಕಿ ಹಣ ಪರಿಶೀಲಿಸಬಹುದು.
    * ದಿನಕ್ಕೆ 25 ಬಾರಿ ಮಾತ್ರ ಮೊಬೈಲ್‌ ಸಂಖ್ಯೆಗೆ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆ ಮಾಹಿತಿಯನ್ನು ಬಳಕೆದಾರರು ಪಡೆಯಬಹುದು.
    * ಇಎಂಐ, ಒಟಿಟಿ, ನೆಟ್‌ಫ್ಲಿಕ್ಸ್‌, ಸ್ಪಾಟಿಪೈ, ಮ್ಯೂಚುವಲ್‌ ಫಂಡ್ಸ್‌.. ಮೊದಲಾದ ಪೇಮೆಂಟ್‌ಗಳನ್ನು ಆಟೋ ಮೋಡ್‌ನಲ್ಲಿ ಇಡಲಾಗುತ್ತದೆ. ಅಂದರೆ, ಅವಧಿ ಮುಗಿದ ಮೇಲೆ ಖಾತೆಯಿಂದ ತಾನಾಗಿಯೇ ಹಣ ಪಾವತಿಯಾಗುತ್ತದೆ. ಬೆಳಗ್ಗೆ 10ರ ಒಳಗೆ, ಮಧ್ಯಾಹ್ನ 1-5 ಗಂಟೆ ಒಳಗೆ, ರಾತ್ರಿ 9:30ರ ನಂತರ ಪಾವತಿಯಾಗಲಿದೆ.
    * ಹಣ ಪಾವತಿಸುವಾಗ ವಹಿವಾಟು ಬಾಕಿಯಾದರೆ, ಬಳಕೆದಾರರು ಅದನ್ನು ಮೂರು ಬಾರಿ ಮಾತ್ರ ಪರಿಶೀಲಿಸಬಹುದು. ಪ್ರತಿ ಪರಿಶೀಲನೆಗೆ 90 ಸೆಕೆಂಡುಗಳ ಅಂತರವಿರುತ್ತದೆ.
    * ಬಳಕೆದಾರರು ಪ್ರತಿ ಬಾರಿ UPI ಮೂಲಕ ಹಣವನ್ನು ಕಳುಹಿಸಿದಾಗ, ವಹಿವಾಟು ನಡೆಸುವ ಮೊದಲು ಹಣ ಸ್ವೀಕರಿಸುವವರ ನೋಂದಾಯಿತ ಹೆಸರನ್ನು ನೋಡಲು ಸಾಧ್ಯವಾಗುತ್ತದೆ.

    ಈ ಬದಲಾವಣೆಗಳು ಪ್ರಮುಖವಲ್ಲದಿದ್ದರೂ, ತುರ್ತು ಸಂದರ್ಭದಲ್ಲಿ UPI ಅಪ್ಲಿಕೇಶನ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಆನ್‌ಲೈನ್‌ ಪಾವತಿಗಳ ದಕ್ಷತೆ ಹೆಚ್ಚಿಸಲು ಸಹಕಾರಿಯಾಗಿದೆ.

  • ಬದಲಾಗಲಿದೆ ಯುಪಿಐನ ಕೆಲ ನಿಯಮಗಳು – ಆ.1ರಿಂದ ಹೊಸ ನಿಯಮ ಜಾರಿ

    ಬದಲಾಗಲಿದೆ ಯುಪಿಐನ ಕೆಲ ನಿಯಮಗಳು – ಆ.1ರಿಂದ ಹೊಸ ನಿಯಮ ಜಾರಿ

    – ಕೆಲವು ರಿಚಾರ್ಜ್‌ಗಳಿಗೆ ಸಮಯ ನಿಗದಿ

    ನವದೆಹಲಿ: ಯುಪಿಐ ಪೇಮೆಂಟ್ ಜನರ ಅವಿಭಾಜ್ಯ ಅಂಗವಾಗಿದೆ. ಕಿರಿಯರಿಂದ ವೃದ್ಧರವರೆಗೂ ಯುಪಿಐ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕ್ಯಾಶ್ ಲೆಸ್ ವ್ಯವಹಾರದ ಸಂಖ್ಯೆ ಹೆಚ್ಚಾದ ಹಿನ್ನೆಲೆ, ನಾಳೆಯಿಂದ ಯುಪಿಐ ಪೇಮೆಂಟ್‌ನಲ್ಲಿ ಕೆಲ ಪ್ರಮುಖ ಬದಲಾವಣೆಯಾಗಲಿದೆ.

    ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನಿಯಮಗಳಲ್ಲಿ ಮಹತ್ವದ ಬದಲಾವಣೆಗಳ ಜಾರಿಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮುಂದಾಗಿದೆ. ಈ ಹೊಸ ಮಾರ್ಗಸೂಚಿಗಳು ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂನಂತಹ ಡಿಜಿಟಲ್ ಪಾವತಿ ಆಪ್‌ಗಳಿಗೆ ಅನ್ವಯವಾಗಲಿವೆ. ಈ ಬದಲಾವಣೆಗಳು ಬಳಕೆದಾರರ ದೈನಂದಿನ ವಹಿವಾಟುಗಳ ಮೇಲೆ ಅಂತಹ ಬದಲಾವಣೆಗಳನ್ನೇನೂ ತರುವುದಿಲ್ಲವಾದರೂ, ಬ್ಯಾಲೆನ್ಸ್ ಚೆಕ್ ಮತ್ತು ಆಟೋ ಡೆಬಿಟ್‌ಗಳಂತಹ ಕೆಲವು ಕಾರ್ಯಗಳಿಗೆ ಮಿತಿಗಳನ್ನು ಹೇರಲಿದೆ. ಹೊಸ ನಿಯಮಗಳ ಪ್ರಕಾರ, ಬಳಕೆದಾರರು ಪ್ರತಿ ಯುಪಿಐ ಅಪ್ಲಿಕೇಶನ್‌ನಲ್ಲಿ ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಲು ಅವಕಾಶ ಇರಲಿದೆ. ಅದಲ್ಲದೇ ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ಪಡೆಯಲು ಅವಕಾಶವಿರಲಿದೆ. ಇದನ್ನೂ ಓದಿ: ರಷ್ಯಾದ ಕರಾವಳಿಯಲ್ಲಿ 8.7 ತೀವ್ರತೆಯ ಭಾರೀ ಭೂಕಂಪ – ಅಮೆರಿಕ, ಜಪಾನ್‌ಗೆ ಸುನಾಮಿ ಎಚ್ಚರಿಕೆ

    ಇನ್ನೂ ಬ್ಯಾಲೆನ್ಸ್ ಚೆಕ್ ಮಾಡುವುದರ ಜೊತೆಗೆ ಓಟಿಟಿ ಸೇರಿದಂತೆ ಮೊಬೈಲ್ ರಿಚಾರ್ಜ್‌ಗಳ ಆಟೋ ಪೇಗೆ ಸಮಯ ನಿಗದಿಯಾಗಿದ್ದು, ಆ ಸಮಯ ಸಂಧರ್ಭದಲ್ಲಿ ಮಾತ್ರ ಪಾವತಿಗೆ ಅವಕಾಶ ಇರಲಿದೆ. ಮೂರು ನಿರ್ದಿಷ್ಟ ಸಮಯದ ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಪೀಕ್ ಅವರ್‌ಗಳಲ್ಲಿ ಸರ್ವರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಲು ಈ ಪಾವತಿಗಳನ್ನು ಬೆಳಗ್ಗೆ 10 ಗಂಟೆಗೂ ಮುನ್ನ, ಮಧ್ಯಾಹ್ನ 1 ರಿಂದ ಸಂಜೆ 5 ಗಂಟೆಯ ನಡುವೆ, ಮತ್ತು ರಾತ್ರಿ 9.30ರ ನಂತರ ಮಾತ್ರ ಆಟೋ ಪೇ ಪ್ರಕ್ರಿಯೆ ನಡೆಯಲಿದೆ. ಇಷ್ಟೇ ಅಲ್ಲ ವಹಿವಾಟು ಬಾಕಿ ಉಳಿದಿರೋದನ್ನ ಪರಿಶೀಲನೆ ಮಿತಿಯನ್ನು ಮೂರು ಬಾರಿಗೆ ಮಾತ್ರ ಪರಿಶೀಲಿಸಲು ಅವಕಾಶ ನೀಡಲಾಗಿದೆ. ಪ್ರತಿ ಪ್ರಯತ್ನದ ನಡುವೆ ಕಡ್ಡಾಯವಾಗಿ 90 ಸೆಕೆಂಡ್ ಅಂತರ ಇರಲೇಬೇಕು. ಈ ನಿಯಮವು ಬಳಕೆದಾರರಿಗೆ ಕೊಂಚ ಅನೂನುಕೂಲ ಉಂಟು ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್‌ ಧನಕರ್‌ ರಾಜೀನಾಮೆ – ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಹತೆಗಳೇನು?

    ಒಟ್ಟಾರೆ ಯುಪಿಐ ನಿಯಮಗಳ ಬದಲಾವಣೆ ಬಳಕೆದಾರರ ದೈನಂದಿನ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಲ್ಲ. ಆದರೆ ಸರ್ವರ್ ಮೇಲಿನ ಒತ್ತಡ ಕಡಿಮೆ ಮಾಡಲು ಈ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ರಷ್ಯಾ | ಮಿಲಿಟರಿ ಡ್ರೋನ್‌ ತಯಾರಿಕೆಗೆ ಮಕ್ಕಳ ಬಳಕೆ – ಆಟದ ಜೊತೆಗೆ‌ ಸಕತ್ ಟ್ಯಾಲೆಂಟ್!

  • 40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ಮಂದಿಗೆ ನೋಟಿಸ್‌: ವಾಣಿಜ್ಯ ತೆರಿಗೆ ಇಲಾಖೆ

    40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ಮಂದಿಗೆ ನೋಟಿಸ್‌: ವಾಣಿಜ್ಯ ತೆರಿಗೆ ಇಲಾಖೆ

    ಬೆಂಗಳೂರು: 40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ರೂ. ಮಂದಿಗೆ ನೋಟಿಸ್‌ ನೀಡಿದ್ದೇವೆ ಎಂದು ಕರ್ನಾಟಕ ಸರ್ಕಾರ ವಾಣಿಜ್ಯ ತೆರಿಗೆ (Commercial Tax) ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯಕ್ ಹೇಳಿದ್ದಾರೆ.

    ಬೇಕರಿ, ಕಾಂಡಿಮೆಂಟ್ಸ್‌, ಟೀ- ತರಕಾರಿ ಅಂಗಡಿಯವರಿಗೆ ಲಕ್ಷಲಕ್ಷ ತೆರಿಗೆ ಬಾಕಿ ನೋಟಿಸ್ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, 40 ಸಾವಿರ ಯುಪಿಐ (UPI) ದಾಖಲೆಯನ್ನು ಕಲೆ ಹಾಕಿ ಅದರಲ್ಲಿ 40 ಲಕ್ಷ ವಹಿವಾಟು ದಾಟಿದ ಆರು ಸಾವಿರ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೀದರ್ | ಶಾದಿಮಹಲ್ ನಿರ್ಮಾಣ ಹೆಸರಲ್ಲಿ ಹಗರಣ ಆರೋಪ – ಕೋಟ್ಯಂತರ ಹಣ ನುಂಗಿದ್ರಾ ಅಧಿಕಾರಿಗಳು?

     

    ಹಾಲು, ಬ್ರೆಡ್ ಮಾರಾಟ, ತರಕಾರಿ ಮಾರಾಟದ ಬಗ್ಗೆ ದಾಖಲೆ ನೀಡಿದರೆ ಖಂಡಿತ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಉಳಿದಂತೆ 40 ಲಕ್ಷ ರೂ. ವಹಿವಾಟು ಹೆಚ್ಚಾದರೆ ವಾರ್ಷಿಕವಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕು. ಕಂಪೋಸಿಷನ್ ಟ್ಯಾಕ್ಸ್‌ ಅಡಿ 1% ಕೂಡ ಕಟ್ಟುವ ಅವಕಾಶ ಇದೆ ಎಂದು ತಿಳಿಸಿದರು.

    ಕಳೆದ 2021 ರಿಂದ 2024 ವರೆಗೆ ಪ್ರತಿ ವರ್ಷ 40 ಲಕ್ಷ ರೂ.ಗಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ಮಾತ್ರ ನೋಟಿಸ್ ‌ ನೀಡಲಾಗಿದೆ. ಬ್ಯಾಂಕ್‌ (Bank) ದಾಖಲೆಗಳ ಆಧಾರದಲ್ಲಿ ನೋಟಿಸ್‌ ನೀಡಲಾಗಿದೆ ಎಂದು ಹೇಳಿದರು.

    ಹೂ, ಹಣ್ಣು, ಹಾಲು ಸೇರಿ ಮೊದಲಾದವು ಜಿಎಸ್‌ಟಿಯಿಂದ ಹೊರಗಡೆ ಇದೆ. ಇವರಿಗೆ ನೋಟಿಸ್‌ ಬಂದಿದ್ದರೆ ಆ ವ್ಯಾಪಾರಿಗಳು ಸ್ಪಷ್ಟೀಕರಣ ನೀಡಬಹುದು. ಸರಕು ಖರೀದಿ ವೇಳೆ ಜಿಎಸ್‌ಟಿ ಪಾವತಿ ಮಾಡಿದ್ದರೆ ಮಾರಾಟದಲ್ಲಿ ಜಿಎಸ್‌ಟಿ ಪಾವತಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಅದಕ್ಕೆ ಪೂರಕ ದಾಖಲೆಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ ಎಂದರು.

  • 65 ಕೋಟಿ ವಹಿವಾಟು – ವೀಸಾ ಹಿಂದಿಕ್ಕಿ ವಿಶ್ವದಲ್ಲೇ ಈಗ UPI ನಂಬರ್ 1

    65 ಕೋಟಿ ವಹಿವಾಟು – ವೀಸಾ ಹಿಂದಿಕ್ಕಿ ವಿಶ್ವದಲ್ಲೇ ಈಗ UPI ನಂಬರ್ 1

    ನವದೆಹಲಿ: 65 ಕೋಟಿ ರೂ. ವಹಿವಾಟು ನಡೆಸುವ ಮೂಲಕ ವೀಸಾವನ್ನು ಹಿಂದಿಕ್ಕಿ ಯುಪಿಐ (UPI) ವಿಶ್ವದಲ್ಲೇ ಅತೀ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ.

    ಭಾರತದಲ್ಲಿ ಮೊಬೈಲ್ ಮೂಲಕ ನಡೆಯುವ ವಹಿವಾಟಿನ ಮೂಲವಾದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಈಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈ ಮೂಲಕ ಈವರೆಗೆ ನಂ.1 ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದ ವೀಸಾವನ್ನು ಹಿಂದಿಕ್ಕಿದೆ.ಇದನ್ನೂ ಓದಿ: ಇಂದು ಹುಟ್ಟೂರಿನಲ್ಲಿ ತಾಯಿಯ ಸಮಾಧಿ ಬಳಿಯೇ ಸರೋಜಾದೇವಿ ಅಂತ್ಯಸಂಸ್ಕಾರ

    ಈ ಕುರಿತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ (Amitabh Kant) ಅವರು ಎಕ್ಸ್‌ನಲ್ಲಿ (X) ಪೋಸ್ಟ್ ಹಂಚಿಕೊಂಡಿದ್ದು, 2025ರ ಮೇ-ಜೂನ್‌ನಲ್ಲಿ ಯುಪಿಐ ಪ್ರತಿದಿನ 65 ಕೋಟಿ ರೂ.ಯ ವಹಿವಾಟನ್ನು ನಡೆಸಿದ್ದು, ಇದೇ ಅವಧಿಯಲ್ಲಿ ವೀಸಾ 63.9 ಕೋಟಿ ರೂ ವಹಿವಾಟು ನಡೆಸಿದೆ. ವೀಸಾ 200 ದೇಶಗಳಲ್ಲಿ ಜಾರಿಯಲ್ಲಿದ್ದು, ಯುಪಿಐ ಕೇವಲ 7 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ವೀಸಾವನ್ನು ಹಿಂದಿಕ್ಕಿರುವುದು ವಿಶೇಷ. ಕಳೆದ ತಿಂಗಳೇ ಈ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಯುಪಿಐ ಮೂಲಕ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ, ಅಮೇಜಾನ್ ಪೇ, ವಾಟ್ಸಾಪ್ ಪೇ ಸೇರಿದಂತೆ ಹಲವು ಡಿಜಿಟಲ್ ಪಾವತಿ ಕಂಪನಿಗಳು ಸೇವೆ ಒದಗಿಸುತ್ತವೆ. ಬ್ಯಾಂಕ್ ಖಾತೆಯನ್ನು ಜನರು ಈ ಆ್ಯಪ್‌ಗಳಲ್ಲಿ ಲಿಂಕ್ ಮಾಡಬೇಕು. ಕೆಲವೇ ಕ್ಷಣಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಇದರಿಂದ ಹಣ ಪಾವತಿ ಮಾಡಬಹುದು. ಜಾರಿಯಾದ 9 ವರ್ಷಗಳಲ್ಲೇ ಈ ಸಾಧನೆ ಮಾಡಿರುವುದು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.ಇದನ್ನೂ ಓದಿ: ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು

  • ಇಂದಿನಿಂದ ಗೂಗಲ್‌ ಪೇ, ಫೋನ್‌ ಪೇ ಮತ್ತಷ್ಟು ಫಾಸ್ಟ್‌ – ಏನೇನು ಬದಲಾವಣೆ?

    ಇಂದಿನಿಂದ ಗೂಗಲ್‌ ಪೇ, ಫೋನ್‌ ಪೇ ಮತ್ತಷ್ಟು ಫಾಸ್ಟ್‌ – ಏನೇನು ಬದಲಾವಣೆ?

    ನವದೆಹಲಿ: ಇಂದಿನಿಂದ ನೀವು ಗೂಗಲ್‌ ಪೇ (Google Pay), ಫೋನ್‌ ಪೇನಲ್ಲಿ (Phone Pay) ವೇಗವಾಗಿ ಹಣವನ್ನು ಸೆಂಡ್‌ ಮಾಡಬಹುದು. ಜೂನ್‌ 16 ರಿಂದ ಬಳಕೆದಾರರು ತಮ್ಮ UPI (ಏಕೀಕೃತ ಪಾವತಿ ಇಂಟರ್ಫೇಸ್) ವಹಿವಾಟುಗಳನ್ನು ಸುಮಾರು ಅರ್ಧದಷ್ಟು ಸಮಯದಲ್ಲಿ ಪೂರ್ಣಗೊಳಿಸಬಹುದು.

    UPI ವಹಿವಾಟುಗಳನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಸಿಸ್ಟಮ್- ಅಪ್‌ಗ್ರೇಡ್ ಮಾಡಲು ಆರಂಭಿಸಿದೆ.

    ಏಪ್ರಿಲ್ 26, 2025 ರ ಸುತ್ತೋಲೆಯ ಪ್ರಕಾರ, ಎಲ್ಲಾ ಸದಸ್ಯ ಬ್ಯಾಂಕ್‌ಗಳು ಮತ್ತು PhonePe, Google Pay ಮತ್ತು Paytm ನಂತಹ ಪಾವತಿ ಪ್ಲಾಟ್‌ಫಾರ್ಮ್‌ಗಳು ತಮ್ಮ ಸಿಸ್ಟಮ್‌ಗಳನ್ನು ಅಪ್‌ಗ್ರೇಡ್ ಮಾಡುವಂತೆ ಸೂಚಿಸಿತ್ತು.

    ಹಣ ವರ್ಗಾವಣೆ, ಪರಿಶೀಲನೆಗಳು ಮತ್ತು ರಿವರ್ಸಲ್‌ಗಳು ಸೇರಿದಂತೆ ಹಿಂದೆ ಸುಮಾರು 30 ಸೆಕೆಂಡು ತೆಗೆದುಕೊಳ್ಳುತ್ತಿದ್ದ ವಹಿವಾಟುಗಳನ್ನು ಈಗ 10 ರಿಂದ 15 ಸೆಕೆಂಡುಗಳ ಒಳಗೆ ಪೂರ್ಣ ಮಾಡಬಹುದು. ಇದನ್ನೂ ಓದಿ: Israel-Iran Conflict | ಅಡುಗೆ ಎಣ್ಣೆ ಬೆಲೆ 3-4ರೂ. ದಿಢೀರ್ ಹೆಚ್ಚಳ

    ಇದರ ಜೊತೆ ಮೊಬೈಲ್ ಸಂಖ್ಯೆಗಳು ಅಥವಾ UPI ಐಡಿಗಳಂತಹ UPI ಹ್ಯಾಂಡಲ್‌ಗಳನ್ನು 10 ಸೆಕೆಂಡ್‌ಗಳಲ್ಲಿ ಪರಿಶೀಲಿಸಬಹುದು. ಇದು ಹೇಗೆಂದರೆ ನೀವು ಯಾವುದಾದರೂ ಅಂಗಡಿ ಹೋಗಿ ಪಾವತಿ ಮಾಡಬೇಕಾದರೆ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುತ್ತೀರಿ. ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಲು 30 ಸೆಕೆಂಡ್‌ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇನ್ನು ಮುಂದೆ 10 ಸೆಕೆಂಡ್‌ನಲ್ಲಿ ಸ್ಕ್ಯಾನ್‌ ಮಾಡಬಹುದು.

    ಬಹಳ ಮುಖ್ಯವಾಗಿ ಕೆಲವೊಮ್ಮೆ ನೆಟ್‌ವರ್ಕ್‌, ತಾಂತ್ರಿಕ ಕಾರಣಗಳಿಂದ ಕಳುಹಿಸಿದ ಹಣ ಸೆಂಡ್‌ ಆಗಿರುವುದಿಲ್ಲ. ಈ ಸಂದರ್ಭದಲ್ಲಿ ಸ್ಕ್ರೀನ್‌ನಲ್ಲಿ ʼfailedʼ ಅಂತ ತೋರಿಸುತ್ತಿರುತ್ತದೆ. ಈ ಸಿಸ್ಟಮ್ ಓವರ್‌ಲೋಡ್ ಅನ್ನು ತಪ್ಪಿಸಲು, NPCI ಪ್ರತಿ ಪಾವತಿ ಪೂರೈಕೆದಾರ ಅಥವಾ ಬ್ಯಾಂಕ್‌ಗೆ ವಹಿವಾಟಿನ ಸ್ಥಿತಿಯನ್ನು ಮೂರು ಬಾರಿ ಪರಿಶೀಲಿಸಲು ಅವಕಾಶ ನೀಡಿದೆ. ಅಂದರೆ ವಹಿವಾಟು ನಡೆಸಿದ ಎರಡು ಗಂಟೆಗಳ ಒಳಗೆ ಚೆಕ್‌ ಮಾಡಬೇಕಾಗುತ್ತದೆ. ಒಂದು ವೇಳೆ ಸೆಂಡ್‌ ಆಗದೇ ಇದ್ದರೆ ಮತ್ತೆ ಹಣವನ್ನು ಸೆಂಡ್‌ ಮಾಡಬಹುದು. ಇದನ್ನೂ ಓದಿ: ಸೌದಿ ಏರ್‌ಲೈನ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ – ಟಯರ್‌ನಿಂದ ಚಿಮ್ಮಿದ ಬೆಂಕಿ ಕಿಡಿ, ಲಕ್ನೋದಲ್ಲಿ ತಪ್ಪಿದ ದುರಂತ

    ಸುಲಭವಾಗಿ ಹಣವನ್ನು ವರ್ಗಾವಣೆ ಮಾಡಲು NPCI ಅಧಿಕೃತವಾಗಿ UPI ಗಾಗಿ ಪೀಕ್ ಸಮಯವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 9:30 ರವರೆಗೆ ಎಂದು ವ್ಯಾಖ್ಯಾನಿಸಿದೆ. ಈ ಹೊಸ ಬದಲಾವಣೆಯಿಂದ UPI ವ್ಯವಹಾರಗಳು ಬಹಳ ವೇಗವಾಗಿ ನಡೆಯಲಿದೆ ಎಂದು ಎನ್‌ಪಿಸಿಐ ತಿಳಿಸಿದೆ.

  • ಏ.1ರಿಂದ UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ರೂಲ್ ಚೇಂಜ್

    ಏ.1ರಿಂದ UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ರೂಲ್ ಚೇಂಜ್

    ನವದೆಹಲಿ: ಏ.1ರಿಂದ ಆದಾಯ ತೆರಿಗೆ ಸೇರಿದಂತೆ ಯುಪಿಐ (UPI) ಮತ್ತು ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ (Minimum Bank Balance) ನಿಯಮಗಳಲ್ಲಿ ಬದಲಾವಣೆಯಾಗಲಿದೆ.

    ಇದೇ ಏ.1 ರಿಂದ ಹಣಕಾಸು ನಿಯಮಗಳಲ್ಲಿ ಹಲವಾರು ಬದಲಾವಣೆಗಳು ಜಾರಿಗೆ ಬರಲಿದ್ದು, ತೆರಿಗೆದಾರರು, ಯುಪಿಐ ಬಳಕೆದಾರರು, ಕ್ರೆಡಿಟ್ ಕಾರ್ಡ್ ಹೊಂದಿರುವವರು ಮತ್ತು ಪಿಂಚಣಿದಾರರ ಮೇಲೆ ಇದು ಪರಿಣಾಮ ಬೀರಲಿದೆ. 2025-26ರ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ, ಆದಾಯ ತೆರಿಗೆ, ಕ್ರೆಡಿಟ್ ಕಾರ್ಡ್ಗಳು, ಯುಪಿಐ ಭದ್ರತೆ, ಜಿಎಸ್‌ಟಿ ಹಾಗೂ ಬ್ಯಾಂಕಿಂಗ್ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಿದೆ.ಇದನ್ನೂ ಓದಿ:ಕೇಂದ್ರ ನೌಕರರಿಗೆ ಯುಗಾದಿ ಗಿಫ್ಟ್ – ಶೇ.2 ರಷ್ಟು ಡಿಎ ಏರಿಕೆ

    2025ರ ಕೇಂದ್ರ ಬಜೆಟ್‌ನಲ್ಲಿ ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್‌ಗಳು ಮತ್ತು ಕಡಿತಗಳನ್ನು ಪರಿಚಯಿಸಿದೆ. ಅವುಗಳನ್ನು ಈದೀಗ ಜಾರಿಗೆ ತರಲಾಗುತ್ತಿದ್ದು, ಹೊಸ ತೆರಿಗೆ ಪದ್ಧತಿಯಡಿಯಲ್ಲಿ ವರ್ಷಕ್ಕೆ 12 ಲಕ್ಷ ರೂ.ವರೆಗೆ ಗಳಿಸುವವರು ಆದಾಯ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆಯುತ್ತಾರೆ. ಅದಕ್ಕೂ ಹೆಚ್ಚು ಸಂಬಳ ಪಡೆಯುವವರು 75,000 ರೂ.ಗಳ ಪ್ರಯೋಜನ ಪಡೆಯುತ್ತಾರೆ, ಇದರಿಂದಾಗಿ 12.75 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯವು ತೆರಿಗೆ ಮುಕ್ತವಾಗಿರುತ್ತದೆ.

    ಯುಪಿಐ ನಿಯಮಗಳು:
    ಏ.1 ರಿಂದ ನಿಷ್ಕ್ರಿಯ ಮೊಬೈಲ್ ಸಂಖ್ಯೆಗಳಿಂದ ಯುಪಿಐ ವಹಿವಾಟು ನಡೆಸಲಾಗುವುದಿಲ್ಲ. ಭದ್ರತೆಯನ್ನು ಹೆಚ್ಚಿಸಲು, ಬ್ಯಾಂಕ್‌ಗಳು ಮತ್ತು ಫೋನ್ ಪೇ ಮತ್ತು ಗೂಗಲ್ ಪೇನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ ದೀರ್ಘಕಾಲದವರೆಗೆ ಬಳಕೆಯಾಗದೆ ಉಳಿದಿರುವ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಖಾತೆಗಳನ್ನು ಹಂತಹಂತವಾಗಿ ರದ್ದುಗೊಳಿಸಲು ಸೂಚಿಸಲಾಗಿದೆ. ಹೀಗಾಗಿ ಏ.1ರ ಮೊದಲು ಮೊಬೈಲ್ ಸಂಖ್ಯೆಗಳನ್ನು ನವೀಕರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಆದೇಶಿಸಿದೆ.

    ಪಿಂಚಣಿ ಯೋಜನೆ:
    ಮತ್ತೊಂದು ಮಹತ್ವದ ಆರ್ಥಿಕ ಬದಲಾವಣೆಯೆಂದರೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಬದಲಾಯಿಸುವ ಏಕೀಕೃತ ಪಿಂಚಣಿ ಯೋಜನೆ. 2024ರ ಆಗಸ್ಟ್ನಲ್ಲಿ ಪರಿಚಯಿಸಲಾದ ಯುಪಿಎಸ್, ಏ.1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಬದಲಾವಣೆಯಿಂದ ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರ ಮೇಲೆ ಪರಿಣಾಮ ಬೀರಲಿದೆ. ಕನಿಷ್ಠ 25 ವರ್ಷಗಳ ಸೇವೆಯನ್ನು ಹೊಂದಿರುವವರು ತಮ್ಮ ಕೊನೆಯ 12 ತಿಂಗಳ ಸರಾಸರಿ ಮೂಲ ವೇತನದ ಶೇ.50 ರಷ್ಟಕ್ಕೆ ಸಮಾನವಾದ ಪಿಂಚಣಿಯನ್ನು ಪಡೆಯಲಿದ್ದಾರೆ.

    ಕನಿಷ್ಠ ಬ್ಯಾಲೆನ್ಸ್:
    ಬ್ಯಾಂಕಿಂಗ್ ವಲಯದಲ್ಲಿ, ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾದಂತಹ ಪ್ರಮುಖ ಬ್ಯಾಂಕ್‌ಗಳು ಕನಿಷ್ಠ ಬ್ಯಾಲೆನ್ಸ್ ನಿಯಮಗಳನ್ನು ನವೀಕರಿಸುತ್ತಿದ್ದು, ಪರಿಷ್ಕೃತ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ ಗ್ರಾಹಕರು ಹೊಸ ಬ್ಯಾಂಕಿಂಗ್ ಮಾರ್ಗಸೂಚಿಗಳ ಪ್ರಕಾರ ದಂಡ ಪಾವತಿಸಬೇಕಾಗುತ್ತದೆ.ಇದನ್ನೂ ಓದಿ:ಮೇ.1 ರಿಂದ ಎಟಿಎಂ ವಿತ್ ಡ್ರಾ ಶುಲ್ಕ 2 ರೂ. ಹೆಚ್ಚಳ

  • UPI Down| ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ

    UPI Down| ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ

    ನವದೆಹಲಿ: ದೇಶಾದ್ಯಂತ ಯುಪಿಐ (UPI) ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

    ಗ್ರಾಹಕರ ಬೇರೆಯವರಿಗೆ ಹಣವನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಗೂಗಲ್‌ಪೇ, ಫೋನ್‌ಪೇ, ಪೇಟಿಎಂ ಸೇರಿದಂತೆ ಹಲವಾರು ಯುಪಿಐ ಸಂಯೋಜಿತ ಅಪ್ಲಿಕೇಶನ್‌ಗಳಲ್ಲಿಏಕಕಾಲಕ್ಕೆ ಸಮಸ್ಯೆಯಾಗಿದೆ.


    ಯಾವ ಕಾರಣಕ್ಕೆ ಈ ಸಮಸ್ಯೆ ಎದುರಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಜನರು ತಮಗೆ ಸಮಸ್ಯೆಯಾದ ಬಗ್ಗೆ ಪೋಸ್ಟ್‌ ಮಾಡುತ್ತಿದ್ದಾರೆ.

  • ಗಮನಿಸಿ, ನಾಳೆಯಿಂದ ವಿಶೇಷ ಅಕ್ಷರ/ ಚಿಹ್ನೆ ಹೊಂದಿರುವ ಯುಪಿಐ ಐಡಿಯಿಂದ ಹಣ ಸೆಂಡ್‌ ಆಗಲ್ಲ

    ಗಮನಿಸಿ, ನಾಳೆಯಿಂದ ವಿಶೇಷ ಅಕ್ಷರ/ ಚಿಹ್ನೆ ಹೊಂದಿರುವ ಯುಪಿಐ ಐಡಿಯಿಂದ ಹಣ ಸೆಂಡ್‌ ಆಗಲ್ಲ

    ನವದೆಹಲಿ: ನಾಳೆಯಿಂದ ಯುಪಿಐ (UPI) ಪೇಮೆಂಟ್‌ನಲ್ಲಿ ಮಹತ್ವದ ಬದಲಾವಣೆಯಾಗಲಿದೆ. ವಿಶೇಷ ಅಕ್ಷರ/ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕಾರ ಆಗುವುದಿಲ್ಲ.

    ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (NPCI) ಯುಪಿಐ ಐಡಿಯಲ್ಲಿ ವಿಶೇಷ ಅಕ್ಷರ, ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕರಿಸಲಾಗುವುದಿಲ್ಲ ಎಂದು ಸುತ್ತೋಲೆ ಪ್ರಕಟಿಸಿದೆ.

    ಯುಪಿಐ ವಹಿವಾಟು ಐಡಿಯನ್ನು ಕ್ರಿಯೇಟ್ ಮಾಡುವಾಗ ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಮಾತ್ರ ಬಳಸಬೇಕು. ಯುಪಿಐ ಐಡಿಯಲ್ಲಿ @, $, #. ^ ,%, * ಸೇರಿದಂತೆ ಇಂತಹ ಯಾವುದೇ ಚಿಹ್ನೆಗಳನ್ನು ಬಳಸಬಾರದು. ಒಂದು ವೇಳೆ ಈ ರೀತಿ ಚಿಹ್ನೆ ಇರುವ ಯುಪಿಐ ಐಡಿ ಬಳಸಿದ್ದರೆ ಪೇಮೆಂಟ್ ಸ್ವೀಕಾರ ಆಗುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌

    ಯುಪಿಐ ವಹಿವಾಟು ಐಡಿಗಳನ್ನು ರಚಿಸಲು ಆಲ್ಫಾನ್ಯೂಮರಿಕ್ ಅಕ್ಷರಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಈ ಸೂಚನೆಯ ಹೊರತಾಗಿಯೂ ಕೆಲವರು ವಿಶೇಷ ಅಕ್ಷರಗಳನ್ನು ಬಳಸುವುದನ್ನು ಮುಂದುವರೆಸಿದ್ದಾರೆ. ಇದು ತಾಂತ್ರಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದೆ.


    ಫೆಬ್ರವರಿ 1 ರಿಂದ UPI ಐಡಿಗಳು ಸಂಖ್ಯೆಗಳು (0-9) ಮತ್ತು ವರ್ಣಮಾಲೆಯ (A-Z) ಸೇರಿಸಲು ಮಾತ್ರ ಅನುಮತಿಸಲಾಗುತ್ತದೆ.

    ವ್ಯಾಲಿಡ್‌ ಐಡಿ: abcd123
    ಇನ್‌ವ್ಯಾಲಿಡಿ ಐಡಿ: abc@123#456!