Tag: Upendra Cinema

  • ಇನ್ಮುಂದೆ ಉಪ್ಪಿ ʻನೆಕ್ಸ್ಟ್‌ ಲೆವೆಲ್‌ʼ – ಸದ್ದಿಲ್ಲದೇ ಸೆಟ್ಟೇರುತ್ತಿದೆ ಹೊಸ ಸಿನಿಮಾ

    ಇನ್ಮುಂದೆ ಉಪ್ಪಿ ʻನೆಕ್ಸ್ಟ್‌ ಲೆವೆಲ್‌ʼ – ಸದ್ದಿಲ್ಲದೇ ಸೆಟ್ಟೇರುತ್ತಿದೆ ಹೊಸ ಸಿನಿಮಾ

    ಸೈಲೆಂಟಾಗೇ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ಹೊಸ ಸಿನಿಮಾ ಪ್ಲ್ಯಾನ್‌ ಆಗಿದೆ, ಟೀಮ್ ಕೂಡ ರಿವೀಲ್ ಆಗಿದೆ. ಇನ್ನುಳಿದ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದ್ದು, ಉಪೇಂದ್ರಗೆ ಈ ಬಾರಿ ಅರವಿಂದ್ ಕೌಶಿಕ್ ನಿರ್ದೇಶನ ಮಾಡುತ್ತಿದ್ದಾರೆ.

    ಚಿತ್ರವನ್ನು ತರುಣ್ ಸ್ಡುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ (Tarun Shivappa) ನಿರ್ಮಿಸುತ್ತಿದ್ದಾರೆ. ಈ ನಯಾ ಕಾಂಬಿನೇಶನ್ ಆರಂಭದಲ್ಲೇ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಭಾರೀ ಸರಕು ವಾಹನ ಪರವಾನಗಿಯುಳ್ಳ ಚಾಲಕರು ಪ್ರಯಾಣಿಕ ವಾಹನ ಚಾಲನೆ ಮಾಡಲು ಅರ್ಹರು: ಕಾಶ್ಮೀರ ಹೈಕೋರ್ಟ್

    ಸದ್ಯಕ್ಕೀಗ ಉಪೇಂದ್ರ, ಸೂರಪ್ಪ ಬಾಬು ನಿರ್ಮಾಣದ ನಾಗಣ್ಣ ನಿರ್ದೇಶನದಲ್ಲಿ ʻಭಾರ್ಗವʼ ಚಿತ್ರದಲ್ಲಿ ತೊಡಗಿದ್ದು ಇದರ ಶೂಟಿಂಗ್ ಮುಗಿದ ಬಳಿಕ ಹೊಸ ಸಿನಿಮಾ ಪ್ರಾರಂಭಿಸುವ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ; ಸಂಸತ್ ಅಧಿವೇಶನಕ್ಕೂ ಮುನ್ನ ಮೋದಿ ಮಾತು

    ಹಲವು ದಿನಗಳಿಂದ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಉಪ್ಪಿ ನಟಿಸುವ ಸುದ್ದಿ ಇತ್ತು. ಇದೀಗ ನಿರ್ಮಾಣ ಸಂಸ್ಥೆಯಿಂದಲೇ ಅಧಿಕೃತ ಮಾಹಿತಿ ಸಿಕ್ಕಿದ್ದು ಚಿತ್ರಕ್ಕೆ ಶೀರ್ಷಿಕೆಯೇ ಮುಖ್ಯ ಆಕರ್ಷಣೆ ಆಗಿದೆ. ಚಿತ್ರಕ್ಕೆ ʻನೆಕ್ಸ್ಟ್‌ ಲೆವೆಲ್ʼ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಇನ್ನಷ್ಟು ಸೀಕ್ರೆಟ್‌ಗಳನ್ನ ಹಂತಹಂತವಾಗಿ ರಿವ್ಹೀಲ್‌ ಮಾಡುವ ಸುದ್ದಿ ಕೊಟ್ಟಿದೆ ಚಿತ್ರತಂಡ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ದುರಂತ – ಪೈಲಟ್ ಸೇರಿ 16 ಜನ ಸಾವು

  • ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ!

    ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ!

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Upendra) ಅವರೇ ನಿರ್ದೇಶಿಸಿ ನಟಿಸಿರುವ ʻಯುಐʼ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಟೀಸರ್, ಸಾಂಗ್ಸ್‌ನಿಂದ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಉಪ್ಪಿ ಅವರೇ ನಿರ್ದೇಶಿಸಿ ನಟಿಸಿದ್ದ ‘ಉಪೇಂದ್ರ’ ಸಿನಿಮಾ (Upendra Cinema) ರೀರಿಲೀಸ್‌ ಆಗಿದೆ. ರೀರಿಲೀಸ್‌ ಆಗ್ತಿದ್ದಂತೆ ಮೊದಲ ಶೋನಲ್ಲೇ ಅಭಿಮಾನಿಗಳೊಂದಿಗೆ ಕುಳಿತು ಉಪೇಂದ್ರ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

    ಉಪೇಂದ್ರ ಸಿನಿಮಾಗೆ 25 ವರ್ಷ ಆದ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ರೀರಿಲೀಸ್‌ ಆಗಿದೆ. ಬೆಳ್ಳಂಬೆಳಗೆ 6 ಗಂಟೆ ಸುಮಾರಿಗೆ ನಟ ಉಪೇಂದ್ರ ಮೊದಲ ಶೋವನ್ನು ಅಭಿಮಾನಿಗಳೊಂದಿಗೆ ಥಿಯೇಟರ್‌ನಲ್ಲಿ ಕುಳಿತು ವೀಕ್ಷಣೆ ಮಾಡಿದ್ದಾರೆ. ಇದರಿಂದ ಉಪ್ಪಿ ಅಭಿಮಾನಿಗಳೂ ಫುಲ್‌ ಖುಷ್‌ ಆಗಿದ್ದಾರೆ. ಉಪ್ಪಿ ಥಿಯೇಟರ್‌ಗೆ ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಮಳೆಗರೆದಿದ್ದಾರೆ.

    ಹೌದು. ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ ಉಪ್ಪಿ ಏನೋ ದೊಡ್ಡದಾಗಿಯೇ ಪ್ಲ್ಯಾನ್ ಮಾಡಿದ್ದಾರೆ. ವಿದೇಶಗಳಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ. ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಎಂದು ಈಗಾಗಲೇ ಘೋಷಿಸಿದ್ದಾರೆ. ‘ಯುಐ’ ವಿಚಾರ ಪಕ್ಕಕ್ಕಿಟ್ಟರೆ ಈ ಬಾರಿ ಉಪ್ಪಿ ಹುಟ್ಟುಹಬ್ಬಕ್ಕೆ ಮತ್ತೊಂದು ಸರ್‌ಪ್ರೈಸ್ ಕಾಯ್ತಿದೆ. ಈ ನಡುವೆ ʻಉಪೇಂದ್ರʼ ರೀ-ರಿಲೀಸ್‌ ಆಗಿದೆ. ಇದನ್ನೂ ಓದಿ: ಪ್ರಭಾಸ್ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಲು ಸೈಫ್ ಅಲಿ ಖಾನ್ ದಂಪತಿಗೆ ಆಫರ್

    ಸದ್ಯ ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳನ್ನು ಮತ್ತೆ ಮತ್ತೆ ತೆರೆಗೆ ತರುವ ಪ್ರಯತ್ನ ನಡೀತಿದೆ. ಇತ್ತಿಚೆಗೆ ದರ್ಶನ್‌ ನಟನೆಯ ʻಕರಿಯʼ ಸಿನಿಮಾ ರೀ-ರಿಲೀಸ್ ಆಗಿತ್ತು. ಇದಕ್ಕೂ ಮುನ್ನ ‘ಜಾಕಿ’, ‘ಶಾಸ್ತ್ರಿ’, ‘ರಾಜಾಹುಲಿ’ ಹೀಗೆ ಹಲವು ಸಿನಿಮಾಗಳು ಮರು ಬಿಡುಗಡೆ ಆಗಿತ್ತು. 3 ತಿಂಗಳ ಹಿಂದೆ ಉಪೇಂದ್ರ ಅವರ ʻಎʼ ಸಿನಿಮಾ ಸಹ ಬಂದಿತ್ತು. ಇದನ್ನೂ ಓದಿ: 42ರ ಹರೆಯದಲ್ಲೂ ಬೋಲ್ಡ್ ಆಗಿ ಕಾಣಿಸಿಕೊಂಡ ಶ್ರೀಯಾ ಶರಣ್

    ಹೆಚ್ಚು ಕಮ್ಮಿ 25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾ ಬಿಡುಗಡೆ ಆಗಿ ದಾಖಲೆ ಬರೆದಿತ್ತು. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಸಿನಿಮಾ ತೆರೆಗಪ್ಪಳಿಸಿ ಗೆದ್ದಿತ್ತು. ಉಪ್ಪಿ ತಮ್ಮ ವಿಭಿನ್ನ ಶೈಲಿಯ ನಿರ್ದೇಶನ, ನಿರೂಪಣೆ, ನಟನೆಯಿಂದ ಮೋಡಿ ಮಾಡಿದ್ದರು. ಪ್ರೇಮಾ, ದಾಮಿನಿ ಹಾಗೂ ರವೀನಾ ಟಂಡನ್ ನಾಯಕಿಯರಾಗಿ ನಟಿಸಿದ್ದರು.

    ಬಹಳ ದಿನಗಳಿಂದ ಅಭಿಮಾನಿಗಳು ‘ಉಪೇಂದ್ರ’ ಸಿನಿಮಾ ರೀ-ರಿಲೀಸ್ ಮಾಡುವಂತೆ ಕೇಳುತ್ತಲೇ ಇದ್ದರು. ಅದರಂತೆ ಆರ್‌.ಕೆ ಗ್ರೂಪ್ಸ್ ಸಿನಿ ಕಂಬೈನ್ಸ್ ಸಂಸ್ಥೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿದೆ. ಇದನ್ನೂ ಓದಿ: ಬಳೆ ಶಾಸ್ತ್ರ ಮಾಡಿಕೊಂಡ ಸೋನಲ್ ಮೊಂಥೆರೋ

  • ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ

    ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ

    ಭಾರತೀಯ ಸಿನಿಮಾ ರಂಗದ ಮೋಸ್ಟ್ ಡೆಡ್ಲಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಅವರನ್ನು ಉಪೇಂದ್ರ ಭೇಟಿ ಮಾಡಿದ್ದಾರೆ. ಈ ಕುರಿತು ಸ್ವತಃ ರಾಮ್ ಗೋಪಾಲ್ ವರ್ಮಾ ಟ್ವಿಟ್ ಮಾಡಿ, ಉಪೇಂದ್ರ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇತ್ತ ರಾಮ್ ಗೋಪಾಲ್ ವರ್ಮಾ ಹಸಿ ಹಸಿ ಕಾಮನೆಗಳ ಚಿತ್ರ ಮಾಡುತ್ತಿದ್ದಾರೆ, ಅತ್ತ ಉಪೇಂದ್ರ ಹೊಸ ಸಿನಿಮಾದ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿನ ಭೇಟಿ ಭಾರೀ ಕುತೂಹಲವನ್ನಂತೂ ಮೂಡಿಸಿದೆ. ಇದನ್ನೂ ಓದಿ : ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

     

    ಉಪೇಂದ್ರ ನಿರ್ದೇಶನ ಮಾಡಲಿರುವ ಸಿನಿಮಾ ಬಜೆಟ್ ಗಾತ್ರ ದೊಡ್ಡದು. ಅಲ್ಲದೇ, ದಕ್ಷಿಣದ ತಾರೆಯರು ಕೂಡ ಈ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾಗೆ ಬೇಕಾಗಿದ್ದರಿಂದ, ಆಡಿಷನ್ ಕೂಡ ನಡೆದಿದೆ. ಅಷ್ಟೊಂದು ಕಲಾವಿದರನ್ನು ಹುಡುಕುವುದು ಕಷ್ಟಸಾಧ್ಯವಾಗಿದ್ದರಿಂದ ಎರಡು ತಿಂಗಳುಗಳ ಕಾಲ ಕಲಾವಿದರ ಹುಡುಕಾಟಕ್ಕೆ ಅವರು ಮೀಸಲಿಟ್ಟಿದ್ದಾರಂತೆ. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್

    ಈಗಾಗಲೇ ಸಿನಿಮಾದ ಟೈಟಲ್ ಕೂಡ ಲಾಂಚ್ ಮಾಡಿದ್ದಾರೆ ಉಪೇಂದ್ರ. ಈ ಟೈಟಲ್ ಅನ್ನು ಹೇಗೆ ಕರೆಯಬೇಕು ಎನ್ನುವ ಗೊಂದಲದಲ್ಲಿದ್ದಾರೆ ಅಭಿಮಾನಿಗಳು. ಅದೊಂದು ಧಾರ್ಮಿಕ ಚಿಹ್ನೆಯೂ ಆಗಿರುವುದರಿಂದ ಮತ್ತು ‘ಯು’ ಹಾಗೂ ‘ಐ” ಇಂಗ್ಲಿಷ್ ಅಕ್ಷರಗಳು ಇರುವುದರಿಂದ ನಿಮಗೆ ಇಷ್ಟ ಬಂದಂತೆ ಕರೆದುಕೊಳ್ಳಿ ಎನ್ನುವಂತೆ ಅಭಿಮಾನಿಗಳಿಗೆ ಬಿಟ್ಟಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ರಘು ದೀಕ್ಷಿತ್ ತಾಯಿ ನಿಧನ : ದುಬೈನಲ್ಲಿದ್ದಾರೆ ರಘು

    ‘ನೀನು’ ಮತ್ತು ‘ನಾನು’ ಎನ್ನುವ ಎರಡು ಗೂಢಾರ್ಥದ ಶಬ್ದಗಳೊಂದಿಗೆ ಈವರೆಗೂ ಸಿನಿಮಾ ಮಾಡಿರುವ ಉಪೇಂದ್ರ, ಹೊಸ ಸಿನಿಮಾದಲ್ಲೂ ಅದೇ ಹುಳು ಬಿಟ್ಟಿದ್ದಾರೆ. ಈ ಎರಡೇ ಶಬ್ದಗಳಲ್ಲಿ ಇಡೀ ಸಿನಿಮಾ ಅಡಗಿದೆ ಎನ್ನಲಾಗುತ್ತಿದೆ. ಆದರೆ, ಈವರೆಗೂ ಉಪೇಂದ್ರ ಹೊಸ ಸಿನಿಮಾದ ಕಥೆಯ ಬಗ್ಗೆ ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಈ ಎಲ್ಲದನ್ನು ಗಮನಿಸಿದಾಗ ರಾಮ್ ಗೋಪಾಲ್ ವರ್ಮಾ ಜತೆ ಉಪೇಂದ್ರ ಇನ್ನೇನು ಚರ್ಚೆ ಮಾಡಿರಬಹುದು ಎನ್ನುವ ಕ್ಯೂರಿಯಾಸಿಟಿಯಂತೂ ಅಭಿಮಾನಿಗಳಲ್ಲಿ ಮೂಡಿದೆ. ಯಾವತ್ತಾದರೂ ಒಂದು ದಿನ ರಾಮ್ ಗೋಪಾಲ್ ವರ್ಮಾ ಈ ಗುಟ್ಟನ್ನು ರಟ್ಟು ಮಾಡುವುದಂತೂ ಗ್ಯಾರಂಟಿ.