Tag: upadyaksha film

  • ಮದುವೆಯ ಬಗ್ಗೆ ಮೌನ ಮುರಿದ `ಉಪಾಧ್ಯಕ್ಷ’

    ಮದುವೆಯ ಬಗ್ಗೆ ಮೌನ ಮುರಿದ `ಉಪಾಧ್ಯಕ್ಷ’

    `ಕಿರಾತಕ’ (Kirataka) ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಲಾವಿದ ಚಿಕ್ಕಣ್ಣ(Chikkanna) ಇದೀಗ ಕನ್ನಡದ ಸ್ಟಾರ್ ಹಾಸ್ಯ ಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. `ಉಪಾಧ್ಯಕ್ಷ'(Upadyaksha) ಚಿತ್ರದ ಮೂಲಕ ಹೀರೋ ಆಗಿ ಬರುತ್ತಿದ್ದಾರೆ. ಸಿನಿಮಾ ಜೊತೆಗೆ ಚಿಕ್ಕಣ್ಣ ಮದುವೆಯ ವಿಚಾರ ಕೂಡ ಆಗಾಗ ಸಾಕಷ್ಟು ಚರ್ಚೆ ಆಗುತ್ತದೆ.

    ರಾಜಾಹುಲಿ, ಅಧ್ಯಕ್ಷ, ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದ ನಟ ಚಿಕ್ಕಣ್ಣಗೆ ಅಪಾರ ಅಭಿಮಾನಿಗಳ ಬಳಗವಿದೆ. ನೆಚ್ಚಿನ ನಟನ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಕುತೂಹಲ ಕೂಡ ಇದೆ. ಹಾಗಾಗಿ ಆಗಾಗ ಚಿಕ್ಕಣ್ಣ ಮದುವೆಯ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿರುತ್ತದೆ. ಇದೀಗ ಸ್ವತಃ ಚಿಕ್ಕಣ್ಣ ಅವರೇ ತಮ್ಮ ಮದುವೆಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    `ಉಪಾಧ್ಯಕ್ಷ’ ಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಮದುವೆ ಬಗ್ಗೆ ತಮಗಿರುವ ಅಭಿಪ್ರಾಯ ತಿಳಿಸಿದ್ದಾರೆ. ನನ್ನ ಮದುವೆ ಯಾವಾಗ ನನಗೆ ಗೊತ್ತಿಲ್ಲ. ಕಂಕಣ ಭಾಗ್ಯ ಕೂಡಿ ಬಂದಾಗ ನನ್ನ ಮದುವೆ ನಡೆಯಲಿದೆ, ಸದ್ಯಕ್ಕೆ ತಮಗೆ ಮದುವೆ ಬಗ್ಗೆ ಯಾವುದೇ ಆಲೋಚನೆ ಇಲ್ಲ. ಮುಂದೆ ಏನಾಗುತ್ತದೆ ಎಂದು ಹೇಗೆ ಹೇಳಲು ಸಾಧ್ಯ ಎಂದು ಚಿಕ್ಕಣ್ಣ ಮದುವೆ ಬಗ್ಗೆ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]