Tag: upadhyaksha film

  • ಮನಸ್ತಾಪದಿಂದ ಸಂಬಂಧ ಮುರಿದು ಬಿತ್ತು- ಬ್ರೇಕಪ್ ಬಗ್ಗೆ ಚಿಕ್ಕಣ್ಣ ಮಾತು

    ಮನಸ್ತಾಪದಿಂದ ಸಂಬಂಧ ಮುರಿದು ಬಿತ್ತು- ಬ್ರೇಕಪ್ ಬಗ್ಗೆ ಚಿಕ್ಕಣ್ಣ ಮಾತು

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ತಮ್ಮ ಕಾಮಿಡಿ ಪಂಚ್ ಮೂಲಕ ಮನಗೆದ್ದಿರೋ ಚಿಕ್ಕಣ್ಣ (Chikkanna) ಇದೀಗ ‘ಉಪಾಧ್ಯಕ್ಷ’ನಾಗಿ ಬರಲು ರೆಡಿಯಾಗಿದ್ದಾರೆ. ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಚಿಕ್ಕಣ್ಣ ಸಂದರ್ಶನವೊಂದರಲ್ಲಿ ತಮ್ಮ ಲವ್ ಬ್ರೇಕಪ್ ಬಗ್ಗೆ ಹೇಳಿದ್ದಾರೆ.‌ ಇದನ್ನೂ ಓದಿ:ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಪ್ರಥಮ್

    ನಾನು ಪಿಯುಸಿ ಓದುವಾಗಲೇ ಅಮ್ಮನನ್ನು ಕೆಲಸ ಬಿಡಿಸಿ ಅವರನ್ನ ಸಾಕಬೇಕು ಎಂಬ ಹಂಬಲವಿತ್ತು. ಅದರಂತೆಯೇ ಮಾಡಿದೆ, ನನ್ನ ಮೊದಲ ಸಂಬಳದಲ್ಲಿ ಅಮ್ಮನಿಗೆ ಸೀರೆ ಕೊಡಿಸಿರುವೆ. ನನಗೆ ಗೊತ್ತಿರುವ ಹಾಗೇ ತಕ್ಕ ಮಟ್ಟಕ್ಕೆ ಚೆನ್ನಾಗಿ ನೋಡಿಕೊಳ್ಳುತ್ತಿರುವೆ. ನನ್ನ ಯೋಗ್ಯತೆ ಮೀರಿ ಅಲ್ಲ. ನನ್ನ ಯೋಗ್ಯತೆ ತಕ್ಕ ಹಾಗೇ ನೋಡಿಕೊಳ್ಳುತ್ತಿರುವೆ ಎಂದು ಚಿಕ್ಕಣ್ಣ ಮಾತನಾಡಿದ್ದಾರೆ.

    ನಾನು ಒಬ್ಬರನ್ನು ಪ್ರೀತಿಸುತ್ತಿದ್ದೆ, ಸಣ್ಣ ಪುಟ್ಟ ಮನಸ್ತಾಪಗಳಿಂದ ಸಂಬಂಧ ಮುರಿದು ಬಿತ್ತು. ಯೋಚನೆ ಮಾಡಿಕೊಂಡು ಕೂತರೆ ನಾನು ತಪ್ಪಾ ಅಥವಾ ಸರಿನಾ ಅನಿಸುತ್ತಿದೆ. ಆ ಟೈಮ್‌ಗೆ ಏನೋ ತಪ್ಪು ಆಗಿ ಹೋಯ್ತು ಎಂದು ಬ್ರೇಕಪ್ ಬಗ್ಗೆ ಚಿಕ್ಕಣ್ಣ ಮೌನ ಮುರಿದಿದ್ದಾರೆ.

  • ಉಪಾಧ್ಯಕ್ಷನಾದ ಖ್ಯಾತ ಹಾಸ್ಯನಟ ಚಿಕ್ಕಣ್ಣ : ಹೀರೋ ಆಗಿ ಲಾಂಚ್

    ಉಪಾಧ್ಯಕ್ಷನಾದ ಖ್ಯಾತ ಹಾಸ್ಯನಟ ಚಿಕ್ಕಣ್ಣ : ಹೀರೋ ಆಗಿ ಲಾಂಚ್

    ನ್ನಡದ ಹೆಸರಾಂತ ಹಾಸ್ಯನಟ ಚಿಕ್ಕಣ್ಣ ಸ್ಯಾಂಡಲ್‌ವುಡ್‌ನ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಕೂಡ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅವರು ಹೀರೋ ಆಗಿ ಲಾಂಚ್ ಆಗಿದ್ದಾರೆ. ಈ ಹಿಂದೆ ಶರಣ್ ಜೊತೆ ಚಿಕ್ಕಣ್ಣ ‘ಅಧ್ಯಕ್ಷ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಮುಂದುವರಿದ ಭಾಗವೇ ‘ಉಪಾಧ್ಯಕ್ಷ’ ಸಿನಿಮಾವಂತೆ.

    ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಅಧ್ಯಕ್ಷನಾಗಿ ರಂಜಿಸಿದ್ದರೆ, ಚಿಕ್ಕಣ್ಣ ಉಪಾಧ್ಯಕ್ಷನಾಗಿ ನಗೆಯ ಕಚಗುಳಿ ಇಟ್ಟಿದ್ದರು. ಇಬ್ಬರದ್ದೂ ಲವ್ ಸ್ಟೋರಿ ಬೇರೆ ಇತ್ತು. ಅಧ್ಯಕ್ಷ ಸಿನಿಮಾದಲ್ಲಿ ಶರಣ್‌ಗೆ ಮದುವೆ ಆಗುತ್ತದೆ. ಆನಂತರ ನಡೆಯುವ ಕಥೆಯೇ ಉಪಾಧ್ಯಕ್ಷ ಸಿನಿಮಾವಂತೆ. ಹಾಗಾಗಿ ಈ ಸಿನಿಮಾದಲ್ಲಿ ಕೇವಲ ಚಿಕ್ಕಣ್ಣ ಮಾತ್ರ ಇರಲಿದ್ದಾರೆ. ಇದನ್ನೂ ಓದಿ: ಅಮ್ಮ ಅಂತಾ ಎಷ್ಟೇ ಹೇಳಿಕೊಟ್ಟರೂ ಕೊನೆಗೆ ಅಪ್ಪ ಎಂದು ಕರೆದ ರಾಯನ್

    ಇಂದಿನಿಂದ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಚಂದ್ರಮೋಹನ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಉಮಾಪತಿ ಈ ಸಿನಿಮಾದ ನಿರ್ಮಾಪಕರು. ಅಂದುಕೊಂಡಂತೆ ಆಗಿದ್ದರೆ, ಈ ಮೊದಲೇ ಸಿನಿಮಾದ ಶೂಟಿಂಗ್ ನಡೆಯಬೇಕಿತ್ತು. ಕೊರೊನಾ ಕಾರಣದಿಂದಾಗಿ ತಡವಾಯಿತು. ಇದೀಗ ಪಕ್ಕಾ ಸಿದ್ಧತೆಯೊಂದಿಗೆ ಸಿನಿಮಾ ಟೀಮ್ ಚಿತ್ರೀಕರಣಕ್ಕೆ ತೆರಳುತ್ತಿದೆ. ಮೊದಲ ಹಂತದ ಶೂಟಿಂಗ್ ಮೈಸೂರು ಸುತ್ತಮುತ್ತ ನಡೆಯಲಿದೆಯಂತೆ.

    Live Tv