Tag: UPA Government

  • ಯುಪಿಎ ಅವಧಿಯಲ್ಲಿ ಸಿಲಿಂಡರ್‌ನ ಬೆಲೆ ಜಾಸ್ತಿ ಇತ್ತು – ನಿಖಿಲ್ ಕುಮಾರಸ್ವಾಮಿ

    ಯುಪಿಎ ಅವಧಿಯಲ್ಲಿ ಸಿಲಿಂಡರ್‌ನ ಬೆಲೆ ಜಾಸ್ತಿ ಇತ್ತು – ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಯುಪಿಎ (UPA) ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ ಎಷ್ಟು ಇತ್ತು ಎಂದು ಕಾಂಗ್ರೆಸ್ (Congress) ಸ್ನೇಹಿತರು ಮೊದಲು ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿರುಗೇಟು ನೀಡಿದರು.ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಹಗರಣ – ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ ಅರೆಸ್ಟ್

    ಗ್ಯಾಸ್ ಬೆಲೆ 50 ರೂ. ಹೆಚ್ಚಳಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2004ರಿಂದ 2014ರವರೆಗೆ ಕಾಂಗ್ರೆಸ್‌ನ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ ಅನ್ನಿಸುತ್ತದೆ. ಯುಪಿಎ ಅಧಿಕಾರದಲ್ಲಿದ್ದಾಗ ಒಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,241 ರೂ. ಇತ್ತು. ಈಗ ನರೇಂದ್ರ ಮೋದಿ (Narendra Modi) ಸರ್ಕಾರದಲ್ಲಿ 854 ರೂ. ಇದೆ. 50 ರೂ. ಜಾಸ್ತಿ ಮಾಡಿದ ಮೇಲೆಯೂ ಗ್ಯಾಸ್ ಬೆಲೆ 850 ರೂ. ಮಾತ್ರ ಇದೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಲಾರಿ, ಬೈಕ್, ಅಂಬುಲೆನ್ಸ್ ನಡುವೆ ಸರಣಿ ಅಪಘಾತ – ಬಿಎಸ್‌ಎಫ್ ಯೋಧ ಸ್ಥಳದಲ್ಲೇ ಸಾವು

  • ಮಹಿಳಾ ಮೀಸಲಾತಿ ಮಸೂದೆ ನಮ್ಮದು: ಸೋನಿಯಾ ಗಾಂಧಿ

    ಮಹಿಳಾ ಮೀಸಲಾತಿ ಮಸೂದೆ ನಮ್ಮದು: ಸೋನಿಯಾ ಗಾಂಧಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ (Women’s Reservation Bill) ಅನುಮೋದನೆ ದೊರೆತಿದೆ. ಹೊಸ ಸಂಸತ್‌ ಭವನದಲ್ಲಿ ನಡೆಯುವ ಇಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ ಎಂಬುದು ತಿಳಿದುಬಂದಿದೆ.

    ಈ ನಡುವೆಯೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi), ಮಹಿಳಾ ಮೀಸಲಾತಿ ಮಸೂದೆ ನಮ್ಮದು ಎಂದಿದ್ದಾರೆ. ಸಂಸತ್ತಿಗೆ ಪ್ರವೇಶಿಸುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಹಿಳಾ ಮೀಸಲಾತಿ ಬಿಲ್‌ ನಮ್ಮದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದೆ ಏನಾಯ್ತು ಅನ್ನೋದು ಮುಖ್ಯವಲ್ಲ, ಇಂದು ಏನಾಯ್ತು ಎಂಬುದು ಮುಖ್ಯ: ದಿನೇಶ್ ಗುಂಡೂರಾವ್

    ಈ ಕುರಿತು ಮಾತನಾಡಿರುವ ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ನಾವು ಕೇಂದ್ರ ಸಚಿವ ಸಂಪುಟದ ವರದಿಯ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಮಸೂದೆಯ ವಿವರಗಳಿಗಾಗಿ ಕಾಯುತ್ತಿದ್ದೇವೆ. ವಿಶೇಷ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷಗಳ ಸಭೆಯಲ್ಲೇ ಈ ಬಗ್ಗೆ ಚೆನ್ನಾಗಿ ಚರ್ಚಿಸಬಹುದಿತ್ತು. ಗೌಪ್ಯತೆಯೊಂದಿಗೆ ಕೆಲಸ ಮಾಡುವ ಬದಲು ಒಮ್ಮತದ ನಿರ್ಧಾರ ಕೈಗೊಳ್ಳಬಹುದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್‌ ಮತ್ತೊಬ್ಬ ನಾಯಕ ಪಿ.ಚಿದಂಬರಂ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಜಯ ಸಿಕ್ಕಂತಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ವರುಣಾ ಕ್ಷೇತ್ರದ ಮತದಾರರಿಗೆ ಎಲೆಕ್ಷನ್ ವೇಳೆ ಉಡುಗೊರೆ ಕೊಟ್ಟಿದ್ರು ಸಿದ್ದು – ತಂದೆ ಗಿಫ್ಟ್‌ ಬಗ್ಗೆ ಯತೀಂದ್ರ ಮಾಹಿತಿ

    ಮಹಿಳಾ ಸಂಸದರು ಲೋಕಸಭೆಯ 15% ಗಿಂತ ಕಡಿಮೆ ಪಾಲನ್ನು ಹೊಂದಿದ್ದಾರೆ. ಮಹಿಳೆಯರ ಪ್ರಾತಿನಿಧ್ಯವು ಅನೇಕ ರಾಜ್ಯಗಳ ವಿಧಾನಸಭೆಗಳಲ್ಲಿ 10% ಗಿಂತ ಕಡಿಮೆಯಾಗಿದೆ. ಈ ಮಸೂದೆಯನ್ನು ಆರಂಭದಲ್ಲಿ ಸೆಪ್ಟೆಂಬರ್ 12, 1996 ರಂದು ಸಂಸತ್ತಿನಲ್ಲಿ ಪರಿಚಯಿಸಲಾಗಿತ್ತು. ಆ ನಂತರ 2010ರ ಮಾರ್ಚ್‌ 9 ರಂದು ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆಯನ್ನ ಅಂಗೀಕರಿಸಲಾಗಿತ್ತು. ಆದ್ರೆ ಲೋಕಸಭೆಯಲ್ಲಿ ಕೈಬಿಡಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿಯನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ನನ್ನ ಮೇಲೆ ಸಿಬಿಐ ಒತ್ತಡ ಹೇರಿತ್ತು: ಅಮಿತ್ ಶಾ

    ಮೋದಿಯನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ನನ್ನ ಮೇಲೆ ಸಿಬಿಐ ಒತ್ತಡ ಹೇರಿತ್ತು: ಅಮಿತ್ ಶಾ

    ನವದೆಹಲಿ: ಕೇಂದ್ರದಲ್ಲಿ ಕಾಂಗ್ರೆಸ್ (Congress) ಅಧಿಕಾರದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಸಿಲುಕಿಸುವಂತೆ ಕೇಂದ್ರೀಯ ತನಿಖಾ ದಳ (CBI) ತಮ್ಮ ಮೇಲೆ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗಂಭೀರ ಆರೋಪ ಮಾಡಿದ್ದಾರೆ.

    ನರೇಂದ್ರ ಮೋದಿ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಪಾದಿತ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಮೋದಿ ಅವರನ್ನು ಸಿಲುಕಿಸುವಂತೆ ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು. ಆದರೂ ಬಿಜೆಪಿ (BJP) ಎಂದಿಗೂ ಗದ್ದಲ ಎಬ್ಬಿಸಲಿಲ್ಲ. ಮೋದಿ ಹೆಸರನ್ನು ಹೇಳುವಂತೆ ನನ್ನ ವಿರುದ್ಧ ಸಿಬಿಐ ಒತ್ತಡ ಹೇರಿತ್ತು. ಮೋದಿ ಹೆಸರನ್ನು ಹೇಳಿದರೆ ನನ್ನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ನಾನು ಮೋದಿ ಹೆಸರನ್ನು ಹೇಳದ ಕಾರಣ ಜೈಲಿಗೆ ಹೋಗಬೇಕಾಯಿತು ಎಂದು ತಿಳಿಸಿದರು.

    ಸೂರತ್‍ನ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸಿದೆ. ಆದರೆ ರಾಹುಲ್ ಗಾಂಧಿ (Rahul Gandhi) ಅವರು ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕಾಂಗದ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಆದರೆ ರಾಹುಲ್ ಗಾಂಧಿ ಒಬ್ಬರೇ ಶಾಸಕಾಂಗದ ಸದಸ್ಯತ್ವವನ್ನು ಕಳೆದುಕೊಂಡ ಏಕೈಕ ರಾಜಕಾರಣಿ ಕಾಂಗ್ರೆಸ್ ನಾಯಕರಲ್ಲ. ರಾಹುಲ್ ಗಾಂಧಿ ಅವರು ಉನ್ನತ ನ್ಯಾಯಾಲಯದ ಮೊರೆ ಹೋಗುವ ಬದಲು ತಮ್ಮ ಅಳಲನ್ನು ತೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಜನರಲ್ಲಿ ತಪ್ಪು ಕಲ್ಪನೆಯನ್ನು ಹರಡುತ್ತಿದೆ ಎಂದು ಕಿಡಿಕಾರಿದರು.

    ರಾಹುಲ್ ಗಾಂಧಿ ಎಲ್ಲಿಯೂ ತಮ್ಮ ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿಲ್ಲ. ಇದು ಅವರ ದುರಹಂಕಾರವಾಗಿದೆ. ಅವರು ಸಂಸದರಾಗಿ ಮುಂದುವರಿಯಲು ಬಯಸುತ್ತಿದ್ದಾರೆ. ಆದರೆ ನ್ಯಾಯಾಲಯದ ಮುಂದೆ ಹೋಗುತ್ತಿಲ್ಲ. ಇಂತಹ ದುರಂಹಕಾರ ಎಲ್ಲಿಂದ ಹುಟ್ಟುತ್ತದೆ ಎಂದು ಪ್ರಶ್ನಿಸಿದರು.

    ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ನೀಡಿದ್ದ ಸಂಪೂರ್ಣ ಭಾಷಣವನ್ನು ಆಲಿಸಿ, ಆ ವೇಳೆ ಅವರು ಮೋದಿ ಕುರಿತು ನಿಂದನೀಯ ಮಾತುಗಳನ್ನು ಆಡಿರಲಿಲ್ಲ. ಬದಲಿಗೆ ಇಡೀ ಮೋದಿ ಸಮುದಾಯ ಹಾಗೂ ಒಬಿಸಿ ಸಮಾಜದ ಬಗ್ಗೆ ನಿಂದನೀಯ ಮಾತುಗಳನ್ನು ಆಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿದೆ. ದೇಶದ ಕಾನೂನು ಸ್ಪಷ್ಟವಾಗಿದೆ. ಇಲ್ಲಿ ಸೇಡಿನ ರಾಜಕಾರಣದ ಪ್ರಶ್ನೆಯೇ ಇಲ್ಲ. ಇದು ಅವರ ಸರ್ಕಾರದ ಅವಧಿಯಲ್ಲಿ ಬಂದ ಭಾರತದ ಸುಪ್ರೀಂ ಕೋರ್ಟ್‍ನ ತೀರ್ಪಾಗಿದೆ ಎಂದರು.

    ರಾಹುಲ್ ಗಾಂಧಿ ಅವರ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಶಿಕ್ಷೆ ಜಾರಿಯಾದ ತಕ್ಷಣ ಕಾರ್ಯನಿರ್ವಹಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿರುವ ವಿಶೇಷ ಸೌಲಭ್ಯವನ್ನು ಏಕೆ ನೀಡಬೇಕು. ಜೊತೆಗೆ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಯು ಉದ್ದೇಶ ಪೂರ್ವಕ ಹೇಳಿಕೆಯಾಗಿದೆ. ರಾಹುಲ್ ಗಾಂಧಿ ಕ್ಷಮೆ ಕೇಳಲು ಬಯಸಿದಿದ್ದರೇ, ಅವರು ಜಾಮೀನು ಅರ್ಜಿ ಸಲ್ಲಿಸಬಾರದು ಎಂದರು.

    ಈ ರೀತಿ ಸದಸ್ಯತ್ವವನ್ನು ಕಳೆದುಕೊಳ್ಳುತ್ತಿರುವವರಲ್ಲಿ ರಾಹುಲ್ ಗಾಂಧಿ ಅವರು ಮೊದಲನೆಯವರಲ್ಲ. ಉನ್ನತ ಸ್ಥಾನ ಅಲಂಕರಿಸಿದ್ದ ಹಾಗೂ ಹೆಚ್ಚು ಅನುಭವ ಹೊಂದಿರುವ ರಾಜಕಾರಣಿಗಳು ಈ ನಿಬಂಧನೆಯಿಂದಾಗಿ ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ 2013ರ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಲಾಲು ಪ್ರಸಾದ್, ಜೆ ಜಯಲಲಿತಾ ಮತ್ತು ರಶೀದ್ ಅಲ್ವಿ ಸೇರಿದಂತೆ 17 ಪ್ರಮುಖ ನಾಯಕರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಚುನಾಯಿತ ಪ್ರತಿನಿಧಿಯು ಶಿಕ್ಷೆಯಾದ ತಕ್ಷಣ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾನೆ. ಆದರೆ ಯಾರೂ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಿಲ್ಲ. ನನ್ನ ಮೇಲೆ ಆರೋಪ ಬಂದಾಗ ನಾವು ಯಾರು ಪ್ರತಿಭಟನೆ ನಡೆಸಲಿಲ್ಲ. ಇದು ದೇಶದ ಕಾನೂನಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಲಾಪದ ವೇಳೆ ತ್ರಿಪುರ ಬಿಜೆಪಿ ಶಾಸಕನಿಂದ ಅಶ್ಲೀಲ ದೃಶ್ಯ ವೀಕ್ಷಣೆ – ವಿಡಿಯೋ ವೈರಲ್

    ಲಾಲು ಪ್ರಸಾದ್ ಯಾದವ್ ಅವರನ್ನು ಅನರ್ಹಗೊಳಿಸಿದಾಗ ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯವಾಗಿರಲಿಲ್ಲ. ಆದರೆ ಗಾಂಧಿ ಕುಟುಂಬದ ವ್ಯಕ್ತಿಯನ್ನು ಅನರ್ಹಗೊಳಿಸಿದಾಗ ಮಾತ್ರ ಅದು ಅಪಾಯದಲ್ಲಿದೆ ಎಂದು ಕಾಂಗ್ರೆಸ್ ಕಿಡಿಕಾರುತ್ತಿದೆ. ಅಷ್ಟೇ ಅಲ್ಲದೇ ಗಾಂಧೀ ಕುಟುಂಬಕ್ಕೆ ಪ್ರತ್ಯೇಕ ಕಾನೂನು ಮಾಡಿ ಎಂದು ಒತ್ತಾಯಿಸುತ್ತಿದೆ. ಈ ರೀತಿ ಒಂದೇ ಕುಟುಂಬಕ್ಕೆ ಪ್ರತ್ಯೇಕ ಕಾನೂನು ಬೇಕೇ? ಇದು ಯಾವ ರೀತಿಯ ಮನಸ್ಥಿತಿ? ಏನೇ ನಡೆದರೂ ವಿರೋಧ ಪಕ್ಷದವರು ಮೋದಿ ಹಾಗೂ ಲೋಕಸಭಾ ಸ್ಪೀಕರ್‌ರನ್ನು ದ್ವೇಷಿಸುತ್ತಾರೆ. ಆದರೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಬದಲಾವಣೆಯನ್ನು ಬಿಜೆಪಿ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚುನಾವಣಾ ಅಕ್ರಮ ತಡೆಗೆ 16 ಚೆಕ್ ಪೋಸ್ಟ್ ಸ್ಥಾಪನೆ- ಐವರು ರೌಡಿಶೀಟರ್‌ಗಳ ಗಡಿಪಾರು

  • 2016ರ ಸರ್ಜಿಕಲ್ ಸ್ಟ್ರೈಕ್ ಕಾಂಗ್ರೆಸ್ ಹೇಳಿದ 6 ದಾಳಿಗಿಂತ ಭಿನ್ನ ಹೇಗೆ?

    2016ರ ಸರ್ಜಿಕಲ್ ಸ್ಟ್ರೈಕ್ ಕಾಂಗ್ರೆಸ್ ಹೇಳಿದ 6 ದಾಳಿಗಿಂತ ಭಿನ್ನ ಹೇಗೆ?

    ನವದೆಹಲಿ: 2016ರಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ಈ ಹಿಂದೆ ಸೇನೆ ನಡೆಸಿದ ಯಾವುದೇ ಕಾರ್ಯಾಚರಣೆಗೆ ಹೋಲಿಸಲು ಸಾಧ್ಯವಿಲ್ಲ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಗಡಿ ನಿಯಂತ್ರಣ ರೇಖೆಯನ್ನು ದಾಟುವ ಪ್ರಕ್ರಿಯೆ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಈ ಕುರಿತು ಅಷ್ಟಾಗಿ ವರದಿಯಾಗುವುದಿಲ್ಲ. ಅಂತಹ ದಾಳಿಗಳು ಬೆಟಾಲಿಯನ್, ದಳ ಅಥವಾ ವಿಭಾಗೀಯ ಮಟ್ಟದಲ್ಲಿ ನಡೆಯುತ್ತವೆ. ಆದರೆ 2016ರಲ್ಲಿ ನಡೆದ ನಿರ್ಧಿಷ್ಟ ದಾಳಿಯ ಯೋಜನೆ ದೊಡ್ಡ ಮಟ್ಟದಲ್ಲಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

    ಸೇನಾ ಮುಖ್ಯಸ್ಥರು ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಒಟ್ಟಾಗಿ 2016ರ ಸರ್ಜಿಕಲ್ ಸ್ಟ್ರೈಕ್ ಯೋಜನೆ ರೂಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸರ್ಜಿಕಲ್ ಸ್ಟ್ರೈಕ್ ನೇತೃತ್ವವನ್ನು ವಹಿಸಿದ್ದ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ ಪ್ರತಿಕ್ರಿಯಿಸಿ, ಈ ಹಿಂದೆ ಗಡಿ ನಿಯಂತ್ರಣ ರೇಖೆಯನ್ನು ದಾಟುವುದು ಸೇನೆಯಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ 2016ರ ನಿರ್ಧಿಷ್ಟ ದಾಳಿಯ ಮಹತ್ವದ ನಿರ್ಧಾರವನ್ನು ರಾಜಕೀಯ ನಾಯಕರು ಕೈಗೊಂಡಿದ್ದರು. ಈ ದಾಳಿ ಈ ಹಿಂದೆ ನಡೆದ ದಾಳಿಗಿಂತ ಭಿನ್ನವಾಗಿದೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಕಾಂಗ್ರೆಸ್ ರಾಷ್ಟ್ರೀಯ ಭದ್ರತಾ ಕಾರ್ಯಪಡೆಯ ನೇತೃತ್ವವನ್ನು ಡಿಎಸ್ ಹೂಡಾ ವಹಿಸಿಕೊಂಡಿದ್ದು, ಈ ಸಂಬಂಧ ತಮ್ಮ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀಡಿತ್ತು.

    ಕಾಂಗ್ರೆಸ್ ಹೇಳಿದ್ದೇನು?:
    ಸುದ್ದಿಗೋಷ್ಠಿ ನಡೆಸಿ ಗುರುವಾರ ಮಾತನಾಡಿದ್ದ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಿದ 6 ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಈ ಮೂಲಕ ನಮ್ಮ ಸರ್ಕಾರದ ಕಾಲದಲ್ಲೂ ಉಗ್ರರ ಮಾರಣಹೋಮ ಮಾಡಿದ್ದೇವೆ ಎಂದು ಹೇಳಿದ್ದರು.

    ನಮ್ಮ ಪಕ್ಷದ ಆಧಿಕಾರದ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ಆಗಿವೆ ಅದರೆ ನಾವು ಅದನ್ನು ರಾಜಕೀಯವಾಗಿ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಆದರೆ ಪ್ರಧಾನಿ ಮೋದಿ ಅವರ ಸರ್ಕಾರವು ಸೈನ್ಯದ ಶೌರ್ಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ ಎಂದು ದೂರಿದ್ದರು. 2008 ರಿಂದ 2014ರ ವರೆಗೆ ನಡೆದಿರುವ 6 ಸರ್ಜಿಕಲ್ ಸ್ಟ್ರೈಕ್‍ಗಳ ವಿವರಗಳನ್ನು ಚಿತ್ರಗಳ ಸಮೇತ ಮಾಧ್ಯಮಗಳ ಮುಂದೆ ರಾಜೀವ್ ಶುಕ್ಲಾ ಬಿಡುಗಡೆ ಮಾಡಿದ್ದರು.

    ಈ ಹಿಂದೆ ವ್ಯಕ್ತಿಯೊಬ್ಬರು ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್(ಡಿಜಿಎಂಒ)ಗೆ ಮಾಹಿತಿ ಹಕ್ಕಿನ ಅಡಿ ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿರುವ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿಕೊಂಡಿದ್ದರು. ಈ ಪ್ರಶ್ನೆಗೆ ಡಿಜಿಎಂಒ, ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎನ್ನುವುದಕ್ಕೆ ನಮ್ಮ ವಿಭಾಗದಲ್ಲಿ ಯಾವುದೇ ದಾಖಲೆಗಳು ಇಲ್ಲ ಎಂದು ಉತ್ತರ ನೀಡಿತ್ತು.

    2016ರ ಸೆಪ್ಟೆಂಬರ್ 29 ರಂದು ಡಿಜಿಎಂಒ ಸುದ್ದಿಗೋಷ್ಠಿ ನಡೆಸಿ ಭಾರತದ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಆಧಾರವಾಗಿರಿಸಿ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕಿನ ಅಡಿ ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿರುವ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದ್ದರು.