Tag: up

  • ಸಿಟ್ಟಿನಿಂದ ಹುಡುಗನ ಮೂಗನ್ನು ಕಚ್ಚಿದ ರಾಜಕೀಯ ನಾಯಕ

    ಸಿಟ್ಟಿನಿಂದ ಹುಡುಗನ ಮೂಗನ್ನು ಕಚ್ಚಿದ ರಾಜಕೀಯ ನಾಯಕ

    ಲಕ್ನೋ: ರಾಜಕೀಯ ನಾಯಕನೊಬ್ಬ ಹುಡುಗನ ಮೂಗನ್ನು ಸಿಟ್ಟಿನಿಂದ ಕಚ್ಚಿದ ಘಟನೆ ಉತ್ತರಪ್ರದೇಶದ ಲಲಿತ್‍ಪುರದದಲ್ಲಿ ನಡೆದಿದೆ.

    ಆರೋಪಿಯನ್ನು ಸಚಿನ್ ಸಾಹು ಎಂದು ಗುರುತಿಸಲಾಗಿದೆ. 16 ವರ್ಷದ ಹುಡುಗ ಸಚಿನ್ ಸಾಹು ಮನೆಯ ಮೇಲೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಸಚಿನ್ ಸಾಹು ಕ್ಷುಲ್ಲಕ ವಿಷಯಕ್ಕೆ ಹುಡುಗನ ಮೇಲೆ ಕೋಪ ಮಾಡಿಕೊಂಡು ಆತನ ಮೂಗನ್ನು ಕಚ್ಚಿದ್ದಾನೆ.

    ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜಿಗೆ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮೂರು ದಿನದಲ್ಲಿ ಯೋಗಿ ಮೇಲೆ ಬಾಂಬ್‌ ದಾಳಿ – ಕಂಟ್ರೋಲ್‌ ರೂಂಗೆ ಸಂದೇಶ

    ಈ ಬಗ್ಗೆ ಎಸ್ಪಿ ಲಲಿತ್‍ಪುರ ನಿಖಿಲ್ ಪಾಠಕ್ ಮಾತನಾಡಿ, ಈ ಘಟನೆ ಸಂಬಂಧ ಆರೋಪಿಯನ್ನು ಸಚಿನ್ ಸಾಹು ಎಂದು ಗುರುತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಶುರುವಾಗುತ್ತಾ ಮೈನಿಂಗ್ ಚಾಪ್ಟರ್ 2? – ಅನುಮತಿ ಕೇಳಿದ ರೆಡ್ಡಿ

    Live Tv
    [brid partner=56869869 player=32851 video=960834 autoplay=true]

  • ಮೂರು ದಿನದಲ್ಲಿ ಯೋಗಿ ಮೇಲೆ ಬಾಂಬ್‌ ದಾಳಿ – ಕಂಟ್ರೋಲ್‌ ರೂಂಗೆ ಸಂದೇಶ

    ಮೂರು ದಿನದಲ್ಲಿ ಯೋಗಿ ಮೇಲೆ ಬಾಂಬ್‌ ದಾಳಿ – ಕಂಟ್ರೋಲ್‌ ರೂಂಗೆ ಸಂದೇಶ

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಾಂಬ್ ಬೆದರಿಕೆ ಬಂದಿದ್ದು, ಬಿಗಿ ಭದ್ರತೆಯನ್ನು ನೀಡಲಾಗಿದೆ.

    ಪೊಲೀಸ್ ನಿಯಂತ್ರಣ ಕೊಠಡಿಯ ಸಹಾಯವಾಣಿ ವಾಟ್ಸಪ್‍ನಲ್ಲಿ ಕೊಲೆ ಬೆದರಿಕೆ ಸಂದೇಶ ಬಂದಿತ್ತು. ಪೊಲೀಸ್ ಕಂಟ್ರೋಲ್ ರೂಂನ ಸಹಾಯವಾಣಿ ವಾಟ್ಸಪ್‍ನಲ್ಲಿ ಬಂದ ಮೆಸೆಜ್‍ನಲ್ಲಿ 3 ದಿನಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೇಲೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದೆ.

    ಈ ಹಿನ್ನೆಲೆಯಲ್ಲಿ ಸಹಾಯವಾಣಿಯ ಆಪರೇಷನ್ ಕಮಾಂಡರ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಮೆಸೇಜ್ ಕಳುಹಿಸುವವರನ್ನು ಗುರುತಿಸಿ, ಬಂಧಿಸಲು ಶೋಧ ನಡೆಯುತ್ತಿದೆ. ಇದನ್ನೂ ಓದಿ: ರೈಲ್ವೆ ಸ್ಟೇಷನ್ ಬಳಿ ವ್ಯಾಪಾರಿಗಳಿಂದ 17ರ ಹುಡುಗಿ ಮೇಲೆ ಅತ್ಯಾಚಾರ

    ವಾಟ್ಸಪ್ ಮೆಸೇಜ್ ಬಂದ ಕೂಡಲೇ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್ ಶಿಪ್‍ನಲ್ಲಿದ್ದು, ಮದುವೆಗೆ ನೋ ಅಂದ – ಪ್ರಿಯಕರನ ಕತ್ತು ಸೀಳಿ ಸೂಟ್‍ಕೇಸ್‍ನಲ್ಲಿ ತುಂಬಿದ್ಲು

    Live Tv
    [brid partner=56869869 player=32851 video=960834 autoplay=true]

  • ಬಸ್‍ಗಳ ನಡುವೆ ಭೀಕರ ಅಪಘಾತ – 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಬಸ್‍ಗಳ ನಡುವೆ ಭೀಕರ ಅಪಘಾತ – 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಲಕ್ನೋ: ಬಸ್‍ಗಳ ನಡುವೆ ನಡೆದ ಭೀಕರ ಅಪಘಾತಕ್ಕೆ 8 ಮಂದಿ ಸಾವನ್ನಪ್ಪಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇನಲ್ಲಿ ಚಲಿಸುತ್ತಿದ್ದ ಬಸ್‍ಗಳು ನರೇಂದ್ರಪುರ ಮದ್ರಹಾ ಗ್ರಾಮದ ಬಳಿ ತಲುಪುತಿದ್ದಂತೆ ಅಪಘಾತ ಸಂಭವಿಸಿದೆ. ಎರಡೂ ಬಸ್‍ಗಳು ಬಿಹಾರದ ಸೀತಾಮರ್ಹಿ ಮತ್ತು ಸುಪೌಲ್‍ನಿಂದ ದೆಹಲಿಗೆ ಹೋಗುತ್ತಿದ್ದವು. ಬಸ್‍ಗಳ ನಡುವಿನ ಡಿಕ್ಕಿಯ ರಭಸಕ್ಕೆ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 3 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್‍ಗಳೆರಡು ಸಂಪೂರ್ಣ ಜಖಂ ಗೊಂಡಿದೆ. ಇದನ್ನೂ ಓದಿ: ನಾಯಿಗಳ ಹಾವಳಿಗೆ ಬೆಚ್ಚಿ ಬಿದ್ದ ಕುಂದಾನಗರಿ ಜನ – ಆರು ತಿಂಗಳಲ್ಲಿ 14 ಸಾವಿರ ಮಂದಿಗೆ ನಾಯಿ ಕಡಿತ

    ಲೋನಿ ಕತ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಅಪಘಾತ ಸಂಭವಿಸಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಗಾಂಜಾ ಸಾಗಾಟ ಎಂದು ತನಿಖೆ ಮಾಡಿದ ಪೊಲೀಸರಿಗೆ ತಿಳಿಯಿತು ಕೊಲೆ ರಹಸ್ಯ

    Live Tv
    [brid partner=56869869 player=32851 video=960834 autoplay=true]

  • ಯುವಕನನ್ನು ಪ್ರೀತಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದ ಮುಸ್ಲಿಂ ಯುವತಿ

    ಯುವಕನನ್ನು ಪ್ರೀತಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದ ಮುಸ್ಲಿಂ ಯುವತಿ

    ಲಕ್ನೋ: ಹಿಂದೂ ಯುವತಿಯರನ್ನು ಪ್ರೀತಿಸಿ ಇತರೆ ಧರ್ಮೀಯರು ಮತಾಂತರ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುವ ಉದ್ದೇಶದಿಂದ ಅನೇಕ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಕರಣವೊಂದು ವರದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

    ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಪ್ರೀತಿಸಿ ಬಳಿಕ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆ ಆಗಿರುವ ಬಗ್ಗೆ ಉತ್ತರ ಪ್ರದೇಶದ ಅಜಂಗಢ ನಗರದಲ್ಲಿ ವರದಿಯಾಗಿದೆ. ಇದೀಗ ಈ ಜೋಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ರೇವಡಿ ಹಂಚಿ ಮತ ಗಳಿಸುವ ಸಂಸ್ಕೃತಿಯನ್ನು ತೊಡೆದುಹಾಕಬೇಕು: ಮೋದಿ

    ಉತ್ತರ ಪ್ರದೇಶದ ಅಜಂಗಢದ ಅಟ್ರೌಲಿಯಾ ಪ್ರದೇಶದ ಖಾನ್‍ಪುರ್ ಫತೇಹ್ ಗ್ರಾಮದ ಹಿಂದೂ ಯುವಕ ಸೂರಜ್, ಹೈದರ್‍ಪುರ ಖಾಸ್ ಗ್ರಾಮದ ಮುಸ್ಲಿಂ ಯುವತಿ ಮೋಮಿನ್ ಖಾತೂನ್ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಪ್ರೀತಿಗೆ ಧರ್ಮ ಅಡ್ಡಿಯಾಗಿತ್ತು. ಇವರಿಬ್ಬರ ಪ್ರೀತಿಯನ್ನು ಮೊದಲು ಎರಡು ಕುಟುಂಬಸ್ಥರು ಒಪ್ಪಿರಲಿಲ್ಲ. ಆದರೂ ಇವರಿಬ್ಬರೂ ಮಾತ್ರ ತಮ್ಮ ಪ್ರೀತಿಯನ್ನು ಮುಂದುವರಿಸಿದ್ದರು.

    ಆರಂಭದಲ್ಲಿ ಮನೆಯವರ ವಿರೋಧದ ನಡುವೆಯೂ ಈ ಜೋಡಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಮತ್ತು ಮನೆಯವರನ್ನು ಒಪ್ಪಿಸಲು ಪ್ರಯತ್ನಿಸಿ ಕೊನೆಗೆ ಮೋಮಿನ್ ಖಾತೂನ್ ಹಿಂದೂ ಧರ್ಮವನ್ನು ಸ್ವೀಕರಿಸಿ ಸೂರಜ್‍ನನ್ನು ವರಿಸಿದ್ದಾಳೆ. ಜುಲೈ 13 ರಂದು ಅಟ್ರೌಲಿಯಾ ಸಮ್ಮೋ ಮಾತಾ ದೇವಾಲಯದ ಸಂಕೀರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದೆ. ಹಿಂದೂ ಧರ್ಮವನ್ನು ಸ್ವೀಕರಿಸಿದ ಮೋಮಿನ್ ಖಾತೂನ್ ಹಿಂದೂ ಸಂಪ್ರದಾಯದಂತೆ ಸೂರಜ್ ಕೊರಳಿಗೆ ಹಾರ ಹಾಕಿ ಮದುವೆ ಆಗಿದ್ದಾಳೆ. ಸೂರಜ್ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಕ್ಕರೂ ಮೋಯಿನ್ ಖಾತೂನ್ ಮನೆಯವರು ಧರ್ಮದ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅವರ ಮಾತು ಕೇಳದ ಮೋಯಿನ್ ಖಾತೂನ್ ಇದೀಗ ಸೂರಜ್‍ನನ್ನು ಮದುವೆ ಆಗಿದ್ದಾಳೆ. ಸಂಭ್ರಮದಿಂದ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಗಣ್ಯರು ಈ ಯುವ ಜೋಡಿಗೆ ಆಶೀರ್ವದಿಸಿದ್ದರು. ಇದನ್ನೂ ಓದಿ: ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಿ – ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

    ಮದುವೆಯ ಬಳಿಕ ಇದೀಗ ಈ ಜೋಡಿಗೆ ಸಮುದಾಯದ ಸಂಘಟನೆಗಳಿಂದ ಬೆದರಿಕೆ ಕರೆ ಬರಲಾರಂಭಿಸಿದೆ. ಇದೀಗ ಈ ಜೋಡಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷತ್‌ ವಹಿಸಿಕೊಂಡಿದೆ. ಧರ್ಮದ ಎಲ್ಲೆ ಮೀರಿ ಮದುವೆಯಾದ ಈ ಜೋಡಿಗೆ ಆಘಾತ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೂಲ್ಸ್ ಜಾರಿಗೆ ಬಂದಿದ್ದು ನೆರೆ ರಾಜ್ಯಗಳ ಗಮನ ಸೆಳೆದಿದೆ.

    ಹೌದು.. ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ ಅಂತ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಜಿಲ್ಲಾಧಿಕಾರಿ ಆರ್ಯಕಾ ಚೌಧರಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ಕುರಿತಾದ ಚರ್ಚೆಗೆ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾನನ್ನು ನಾನು ಆಹ್ವಾನಿಸಿಲ್ಲ: ಹಮೀದ್ ಅನ್ಸಾರಿ

    ಈ ಜಿಲ್ಲೆ ವ್ಯಾಪ್ತಿಯ ಸರ್ಕಾರಿ ಶಾಲೆ ಶಿಕ್ಷಕರು, ಇತರೆ ಇಲಾಖೆಗಳ ನೌಕರರು ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ. ಕೇವಲ ಫಾರ್ಮಲ್ಸ್ ಧರಿಸಲಷ್ಟೇ ಅವಕಾಶ. ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಅಂತ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಕೆಲ ಸರ್ಕಾರಿ ಕಚೇರಿಯ ನೌಕರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ- ದಿಗ್ಭ್ರಮೆಗೊಂಡ ಪೊಲೀಸರು

    ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ- ದಿಗ್ಭ್ರಮೆಗೊಂಡ ಪೊಲೀಸರು

    ಲಕ್ನೋ: ವೃದ್ಧರು, ಮಕ್ಕಳು ಸೇರಿದಂತೆ 27 ಪ್ರಯಾಣಿಕರನ್ನು ಒಂದೇ ಆಟೋದಲ್ಲಿ ಕೂರಿಸಿಕೊಂಡು ಬಂದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಧ್ಯ ಉತ್ತರ ಪ್ರದೇಶದ ಫತೇಪುರದಲ್ಲಿ ಈ ಘಟನೆ ನಡೆದಿದೆ. ಕರ್ತವ್ಯದಲ್ಲಿದ್ದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ಫತೇಪುರದ ಬಿಂಡ್ಕಿ ಕೊಟ್ವಾಲಿಪ್ರದೇಶದ ಬಳಿ ಆಟೋರಿಕ್ಷಾವನ್ನು ನಿಲ್ಲಿಸಲಾಗಿತ್ತು.

    ಈ ವೇಳೆ ಪೊಲೀಸರು ಆಟೋದಲ್ಲಿದ್ದ ಪ್ರಯಾಣಿಕರನ್ನೆಲ್ಲರನ್ನೂ ಇಳಿಯಲು ಹೇಳಿದ್ದಾರೆ. ಚಾಲಕನನ್ನು ಹೊರತುಪಡಿಸಿ ಮಕ್ಕಳು, ವೃದ್ಧರು ಸೇರಿ 27 ಜನ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಆಟೋವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಣ ನೀಡಿಲ್ಲ ಅಂತ ಅಜ್ಜಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ಮೊಮ್ಮಗ

    ಸಾಮಾನ್ಯವಾಗಿ ಒಂದು ಆಟೋದಲ್ಲಿ 6 ಜನರು ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಈ ಆಟೋರಿಕ್ಷಾದಲ್ಲಿ ಚಾಲಕನನ್ನು ಹೊರತುಪಡಿಸಿ 27 ಜನರು ಇರುವುದನ್ನು ನೋಡಿ ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ. ಈ ವೀಡಿಯೋವನ್ನು ದಾರಿಹೋಕರೊಬ್ಬರು ವೀಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದನ್ನೂ ಓದಿ:  2023ರ ವೇಳೆ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಮೀರಿಸಲಿದೆ: ವಿಶ್ವಸಂಸ್ಥೆ

    Live Tv
    [brid partner=56869869 player=32851 video=960834 autoplay=true]

  • ಸಂಕುಚಿತ ಮನಸ್ಥಿತಿಯಿಂದ ಹೊರತರುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ: ಮೋದಿ

    ಸಂಕುಚಿತ ಮನಸ್ಥಿತಿಯಿಂದ ಹೊರತರುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ: ಮೋದಿ

    ಲಕ್ನೋ: ಶಿಕ್ಷಣವನ್ನು ಸಂಕುಚಿತ ಮನಸ್ಥಿತಿ, ಚಿಂತನೆಯಿಂದ ಹೊರತರುವುದು ಹಾಗೂ 21ನೇ ಶತಮಾನದ ಆಧುನಿಕ ವಿಚಾರಗಳೊಂದಿಗೆ ಸಂಯೋಜಿಸುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಉತ್ತರಪ್ರದೇಶದ ಚುನಾವಣೆಯ ಬಳಿಕ ಪ್ರಧಾನಿ ಮೊದಲ ಬಾರಿಗೆ ವಾರಣಾಸಿಗೆ ಭೇಟಿ ನೀಡಿ ಮೂರು ದಿನಗಳ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 300ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಈ ಸಂಕಿರಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಕುರಿತು ಚರ್ಚಿಸುತ್ತಿದ್ದಾರೆ. ಇದನ್ನೂ ಓದಿ: ಮಕ್ಕಳ ಹೊಂದುವ ಕುರಿತು ಆಲಿಯಾ ಬಗ್ಗೆ ಅಚ್ಚರಿಯ ವಿಚಾರ ರಿವೀಲ್ ಮಾಡಿದ ರಣ್‌ಬೀರ್ ಕಪೂರ್

    ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ, ಯುವಸಮೂಹವನ್ನು ಪದವಿಯೊಂದಿಗೆ ತಯಾರು ಮಾಡುವುದಲ್ಲ. ದೇಶವನ್ನು ಮುನ್ನಡೆಸುವ ಮಾನವ ಸಂಪನ್ಮೂಲ ರೂಪಿಸುವ ಮೂಲಕ ಶಿಕ್ಷಣ ನೀತಿ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

    ಎನ್‌ಇಪಿ ಅನುಷ್ಠಾನಕ್ಕಾಗಿ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಮೂಲ ಸೌಕರ್ಯಗಳನ್ನು ಪರಿಶೀಲಿಸುವ ಕೆಲಸ ಮಾಡಲಾಗುತ್ತಿದೆ. ಇದು ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣಕ್ಕೆ ದಾರಿ ಮಾಡಿಕೊಡುತ್ತಿದ್ದು, ಸಂಸ್ಕೃತದಂತಹ ಪ್ರಾಚೀನ ಭಾಷೆಗಳನ್ನು ಮುಂದಕ್ಕೆ ಕೊಂಡೊಯ್ಯಲು ಅನುವು ಮಾಡಿಕೊಡುತ್ತದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಪಾಸ್‍ಪೋರ್ಟ್‍ಗಾಗಿ 2 ದಿನ ಕ್ಯೂನಲ್ಲಿ ನಿಂತು ಮಗುವಿಗೆ ಜನ್ಮ ನೀಡಿದ ಮಹಿಳೆ

    ಇದಕ್ಕೂ ಮುನ್ನ ಪ್ರಧಾನಿ ಮೋದಿ ಅಕ್ಷಯ ಪಾತ್ರಾ ಮಧ್ಯಾಹ್ನದ ಬಿಸಿಯೂಟ ಅಡುಗೆಕೊಠಡಿಯನ್ನು ಉದ್ಘಾಟಿಸಿದರು. ಈ ಅಡುಗೆ ಕೊಠಡಿಯು ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಊಟ ತಯಾರಿಸುವ ಸಾಮರ್ಥ್ಯ ಹೊಂದಿದೆ.

    Live Tv
    [brid partner=56869869 player=32851 video=960834 autoplay=true]

  • ವಲಸೆ ಕಾರ್ಮಿಕರು ಬಿಟ್ಟು ಹೋದ ಸೈಕಲ್‌ಗಳಿಂದ ಬಂತು ಲಕ್ಷ – ಲಕ್ಷ ಆದಾಯ

    ವಲಸೆ ಕಾರ್ಮಿಕರು ಬಿಟ್ಟು ಹೋದ ಸೈಕಲ್‌ಗಳಿಂದ ಬಂತು ಲಕ್ಷ – ಲಕ್ಷ ಆದಾಯ

    ಲಕ್ನೋ: ಕೊರೊನಾ ತೀವ್ರವಾಗಿ ವ್ಯಾಪಿಸಿದ್ದ 2020ರ ವೇಳೆ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿ, ಬಹುತೇಕ ವಲಸೆ ಕಾರ್ಮಿಕರು ಅನಿವಾರ್ಯವಾಗಿ ತಮ್ಮ ರಾಜ್ಯಗಳಿಗೆ ಹೋಗಲೇಬೇಕಿತ್ತು.

    ಬಹುತೇಕರು ತಾವು ತಲುಪುವುದೇ ಕಷ್ಟವಾಗಿದ್ದರಿಂದ ತಮ್ಮ ವಸ್ತುಗಳನ್ನು ತಾವಿದ್ದ ಸ್ಥಳಗಳಲ್ಲೇ ಬಿಟ್ಟು ಹೋಗಿದ್ದರು. ಇನ್ನೂ ದಿನಗೂಲಿ ಕಾರ್ಮಿಕರು ಹೆಚ್ಚಾಗಿ ಬಳಸುತ್ತಿದ್ದ ಸೈಕಲ್ ಪಾಡಂತೂ ಕೇಳೋರೇ ಇಲ್ಲದಂತಾಗಿತ್ತು. ಇದರಿಂದ ಸಾವಿರಾರು ಮಂದಿ ತಮ್ಮ ಬೈಸಿಕಲ್‌ಗಳನ್ನು ಇಲ್ಲಿಯೇ ಬಿಟ್ಟುಹೋದರು. ಇಂತಹ ಬಿಟ್ಟು ಹೋಗಿದ್ದ ಸೈಕಲ್‌ಗಳು ಇದೀಗ ಲಕ್ಷಾಂತರ ರೂಪಾಯಿ ಆದಾಯ ತಂದುಕೊಟ್ಟಿವೆ. ಇದನ್ನೂ ಓದಿ: ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ: ಒಮರ್ ಅಬ್ದುಲ್ಲಾ

    UP

    ರಾಶಿ-ರಾಶಿ ಸೈಕಲ್‌ಗಳು: ಕೋವಿಡ್ ಮೊದಲ ಅಲೆಯಲ್ಲಿ ಉಂಟಾದ ಲಾಕ್‌ಡೌನ್ ವೇಳೆ ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಕಾರ್ಮಿಕರು ಬಿಟ್ಟು ಹೋಗಿದ್ದ 5,400 ಬೈಸಿಕಲ್‌ಗಳನ್ನು ಸಹರಾನ್‌ಪುರ ಜಿಲ್ಲಾಡಳಿತವು 2 ವರ್ಷಗಳ ನಂತರ ಹರಾಜು ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ: ಒಮರ್ ಅಬ್ದುಲ್ಲಾ

    21.2 ಲಕ್ಷ ಸಂಗ್ರಹ: 5,400 ಬೈಸಿಕಲ್‌ಗಳನ್ನು ಹರಾಜು ಮಾಡಲಾಗಿದ್ದು ಇದರಿಂದ 21.2 ಲಕ್ಷ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ಹರಿದು ಬಂದಿದೆ ಎಂದು ಸದರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ (SDM) ಕಿನ್‌ಶುಕ್ ಶ್ರೀವಾಸ್ತವ ತಿಳಿಸಿದ್ದಾರೆ.

  • ವಾರಣಾಸಿ ಸರಣಿ ಬಾಂಬ್ ಸ್ಫೋಟ – 16 ವರ್ಷಗಳ ನಂತರ ಆರೋಪಿಯನ್ನು ಗುರುತಿಸಿದ ಹೈಕೋರ್ಟ್

    ವಾರಣಾಸಿ ಸರಣಿ ಬಾಂಬ್ ಸ್ಫೋಟ – 16 ವರ್ಷಗಳ ನಂತರ ಆರೋಪಿಯನ್ನು ಗುರುತಿಸಿದ ಹೈಕೋರ್ಟ್

    ಲಕ್ನೋ: ವಾರಣಾಸಿಯಲ್ಲಿ 2006ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ವಲಿಯುಲ್ಲಾನನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 16 ವರ್ಷಗಳ ನಂತರ ದೋಷಿ ಎಂದು ಘೋಷಿಸಿದೆ.

    ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಯಾಗರಾಜ್ ಜಿಲ್ಲೆಯ ಫುಲ್ಪುರ್ ಗ್ರಾಮದ ನಿವಾಸಿ ವಲಿಯುಲ್ಲಾನನ್ನು ದೋಷಿ ಎಂದು ಗುರುತಿಸಿದ್ದು ಜೂನ್ 6ರಂದು ಪ್ರಕಟಿಸಲಿದೆ. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು

    CRIME

    ಸ್ಫೋಟ ಪ್ರಕರಣಗಳು: 2006ರ ಮಾರ್ಚ್ 7ರಂದು ಉತ್ತರ ಪ್ರದೇಶದ ವಾರಣಾಸಿಯ ಸಂಕತ್ಮೋಚ್‌ನ ದೇವಸ್ಥಾನ ಮತ್ತು ಕ್ಯಾಂಟ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರಲ್ಲಿ 30 ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದರು. 2006 ರ ಏಪ್ರಿಲ್ 5 ರಂದು ಉತ್ತರ ಪ್ರದೇಶ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗರಾಜ್ ಜಿಲ್ಲೆಯ ಫುಲ್ಪುರ್ ಗ್ರಾಮದ ನಿವಾಸಿ ವಲಿಯುಲ್ಲಾನನ್ನು ಬಂಧಿಸಿದ್ದರು. ಹೈಕೋರ್ಟ್ನ ಆದೇಶದ ಮೇರೆಗೆ ಪ್ರಕರಣವನ್ನು ವಿಚಾರಣೆಗಾಗಿ ಗಾಜಿಯಾಬಾದ್‌ಗೆ ವರ್ಗಾಯಿಸಲಾಗಿತ್ತು.

  • ಮನೆಯಲ್ಲಿ ನಾಯಿ ಸಾಕುವವರಿಗೆ ಎಚ್ಚರಿಕೆ ನೀಡಿದ ಯೋಗಿ – ನಿಯಮ ಮೀರಿದರೆ ಕ್ರಮ

    ಮನೆಯಲ್ಲಿ ನಾಯಿ ಸಾಕುವವರಿಗೆ ಎಚ್ಚರಿಕೆ ನೀಡಿದ ಯೋಗಿ – ನಿಯಮ ಮೀರಿದರೆ ಕ್ರಮ

    ಲಕ್ನೋ: ಉತ್ತರ ಪ್ರದೇಶದಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಮನೆಯಲ್ಲಿ ನಾಯಿ ಸಾಕುವವರಿಗೆ ಕಟ್ಟು ನಿಟ್ಟಿನ ನಿಯಮ ಜಾರಿಗೆ ಮುಂದಾಗಿದ್ದಾರೆ.

    ರಾಜ್ಯದಲ್ಲಿನ ಪರಿಸ್ಥಿತಿ ಕುರಿತಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ, ನಾಯಿ ಸಾಕುವವರಿಗೆ ವಿಶೇಷ ಹಾಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಮನೆಯಲ್ಲಿ ಸಾಕಿದ ನಾಯಿಗಳನ್ನು ಬೀದಿಗೆ ಕರೆತಂದು ಕೊಳಕು ಮಾಡಬಾರದು. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಹಾನಗರ ಪಾಲಿಕೆ ಹಾಗೂ ಇತರೆ ಜವಾಬ್ದಾರಿಯುತ ಇಲಾಖೆಗಳು ನಾಯಿ ಸಾಕುವವರ ಮೇಲೆ ಗಮನವಿಡಿ. ಅಲ್ಲದೆ ಸಮಯಕ್ಕೆ ಸರಿಯಾಗಿ ನಾಯಿಗಳಿಗೆ ಲಸಿಕೆ ಹಾಕುವುದನ್ನು ಸಹ ಖಚಿತಪಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್

    ಸಾರ್ವಜನಿಕರು ಓಡಾಡುವ ರಸ್ತೆ ಸೇರಿದಂತೆ ತಮ್ಮ ಆಸುಪಾಸು ಯಾರಾದರೂ ತಮ್ಮ ನಾಯಿಯನ್ನು ಶೌಚ ಮಾಡಿಸುವ ಉದ್ದೇಶದಿಂದ ಮನೆಯಿಂದ ಹೊರತಂದು ತಿರುಗಾಡಿಸುವುದು ಕಂಡುಬಂದರೆ ತಕ್ಷಣವೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಕಠಿಣ ನಿಯಮ ಜಾರಿಗೊಳಿಸಲು ಮುಂದಾಗಿದೆ. ಇದನ್ನೂ ಓದಿ: ಮನೆ ಮಾಲೀಕಳ ಪ್ರಾಣ ಉಳಿಸಲು ಪರ್ವತ ಸಿಂಹದೊಂದಿಗೆ ಹೋರಾಡಿದ ಶ್ವಾನ

    ಸಾಕು ಪ್ರಾಣಿಯನ್ನು ಹೊರಗೆ ಕರೆದುಕೊಂಡು ಹೋಗುವಾಗ ಸ್ವಚ್ಛತೆ ಜೊತೆಗೆ ರಸ್ತೆಯಲ್ಲಿ ಕಸ ಹಾಕುವವರಿಗೂ ಕೂಡ ಖಡಕ್ ವಾರ್ನಿಂಗ್ ನೀಡಲಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಅಕ್ರಮ ಗೋ ಕಳ್ಳರನ್ನು ಮಟ್ಟಹಾಕಿ ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.