Tag: UP women

  • ವರದಕ್ಷಿಣೆ ಕಿರುಕುಳ ನೀಡಿ ಪತ್ನಿಗೆ ಬೆಂಕಿ ಇಟ್ಟ ಪೊಲೀಸ್‌ ಕಾನ್‌ಸ್ಟೇಬಲ್‌ ‌

    ವರದಕ್ಷಿಣೆ ಕಿರುಕುಳ ನೀಡಿ ಪತ್ನಿಗೆ ಬೆಂಕಿ ಇಟ್ಟ ಪೊಲೀಸ್‌ ಕಾನ್‌ಸ್ಟೇಬಲ್‌ ‌

    – ಗ್ರೇಟರ್‌ ನೋಯ್ಡಾದಲ್ಲಿ ಮಹಿಳೆ ಭೀಕರ ಸಾವು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದೌರ್ಜನ್ಯ

    ಲಕ್ನೋ: ಗ್ರೇಟರ್ ನೋಯ್ಡಾದಲ್ಲಿ 26 ವರ್ಷದ ನಿಕ್ಕಿ ಭಾಟಿಯ ಭೀಕರ ಸಾವಿನ ನಂತರ, ಉತ್ತರ ಪ್ರದೇಶದಲ್ಲಿ ಮತ್ತೊಂದು ವರದಕ್ಷಿಣೆ ಸಂಬಂಧಿತ ಹಿಂಸಾಚಾರ ಪ್ರಕರಣ ಬೆಳಕಿಗೆ ಬಂದಿದೆ.

    ಅಮ್ರೋಹಾ ಜಿಲ್ಲೆಯ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರು ತಮ್ಮ ಪತ್ನಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ವೃತ್ತಿಯಲ್ಲಿ ನರ್ಸ್ ಆಗಿರುವ ಪಾರುಲ್ (32) ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿರುವ ಪಾರುಲ್‌ ಅವರ ಪತಿ ದೇವೇಂದ್ರ ಇತ್ತೀಚೆಗೆ ರಾಂಪುರದಿಂದ ಬರೇಲಿಗೆ ವರ್ಗಾವಣೆಗೊಂಡು ರಜೆಯ ಮೇಲೆ ಮನೆಯಲ್ಲಿದ್ದ. ವರದಕ್ಷಿಣೆ ಕಿರುಕುಳ ನೀಡಿ ಆಕೆಗೆ ಬೆಂಕಿ ಇಟ್ಟು, ಜೀವಂತವಾಗಿ ಸುಟ್ಟುಹಾಕಲು ಯತ್ನಿಸಿದ್ದಾರೆ ಎನ್ನಲಾಗಿದೆ.

    ಪಾರುಲ್ ಸಹೋದರ ದೂರು ದಾಖಲಿಸಿದ್ದು, ಆಕೆಯ ಪತಿ ದೇವೇಂದ್ರ, ಆತನ ತಾಯಿ ಮತ್ತು ಸೋನು, ಗಜೇಶ್, ಜಿತೇಂದ್ರ, ಸಂತೋಷ್ ಎಂಬ ನಾಲ್ವರು ಪುರುಷ ಸಂಬಂಧಿಕರ ವಿರುದ್ಧ ಆರೋಪ ಹೊರಿಸಲಾಗಿದೆ. ಕೌಟುಂಬಿಕ ಹಿಂಸೆ ಮತ್ತು ಕೊಲೆಯತ್ನದ ಗಂಭೀರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

    ಆರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮುಂಜಾನೆ ನೆರೆಹೊರೆಯವರು ತಮಗೆ ಮಾಹಿತಿ ನೀಡಿದ್ದರು ಎಂದು ಪಾರುಲ್ ತಾಯಿ ಅನಿತಾ ವಿವರಿಸಿದ್ದಾರೆ.

    ನಾನು ಸ್ಥಳಕ್ಕೆ ತಲುಪಿದಾಗ, ನನ್ನ ಮಗಳು ನೋವಿನಿಂದ ನರಳುತ್ತಿದ್ದಳು. ತೀವ್ರವಾಗಿ ಸುಟ್ಟು ಹೋಗಿದ್ದಳು. ಅವಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಕೆಯ ಸ್ಥಿತಿ ಗಂಭೀರವಾದ ಕಾರಣ ದೆಹಲಿಗೆ ಕರೆದೊಯ್ಯಬೇಕಾಯಿತು. ಅವಳು ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.

  • ಮದುವೆ, ಅಕ್ರಮ ಸಂಬಂಧ, ಚಿತ್ರಹಿಂಸೆ, ಗರ್ಭಪಾತ; ಪತಿಯ ಕಿರುಕುಳಕ್ಕೆ ನೊಂದಿದ್ದ ಗೃಹಿಣಿ ಸಾವು

    ಮದುವೆ, ಅಕ್ರಮ ಸಂಬಂಧ, ಚಿತ್ರಹಿಂಸೆ, ಗರ್ಭಪಾತ; ಪತಿಯ ಕಿರುಕುಳಕ್ಕೆ ನೊಂದಿದ್ದ ಗೃಹಿಣಿ ಸಾವು

    – ವಿವಾಹವಾದ 5 ತಿಂಗಳಲ್ಲೇ ಸಾವಿನ ಮನೆ ಸೇರಿದ ಮಹಿಳೆ

    ಲಕ್ನೋ: ಐದು ತಿಂಗಳ ಹಿಂದಷ್ಟೇ ಮರ್ಚೆಂಟ್ ನೇವಿ ಅಧಿಕಾರಿಯನ್ನು ಮದುವೆಗಿದ್ದ 32 ವರ್ಷದ ಮಹಿಳೆಯೊಬ್ಬಳು ಲಕ್ನೋದ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿಸಿದ್ದಾರೆ. ಆದರೆ, ಮಧು ಸಿಂಗ್ ಕುಟುಂಬ ಸದಸ್ಯರು, ವರದಕ್ಷಿಣೆಗಾಗಿ ಆಕೆಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆಂದು ಪತಿಯ ವಿರುದ್ಧ ಆರೋಪ ಮಾಡಿದ್ದಾರೆ. ನೇಣು ಬಿಗಿದುಕೊಂಡು ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆ ದೃಢಪಡಿಸಿದೆ. ಆರೋಪಿ ಅನುರಾಗ್ ಸಿಂಗ್‌ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

    ಈ ವರ್ಷ ಫೆ.25 ರಂದು ಮಧು, ವೈವಾಹಿಕ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಮೂಲಕ ಸಂಪರ್ಕ ಸಾಧಿಸಿ ಅನುರಾಗ್‌ನನ್ನು ವಿವಾಹವಾಗಿದ್ದರು. ಅನುರಾಗ್ ಹಾಂಗ್‌ಕಾಂಗ್ ಮೂಲದ ಹಡಗು ನಿರ್ವಹಣಾ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಮದುವೆಯ ಸಮಯದಲ್ಲಿ, 15 ಲಕ್ಷ ರೂ. ವರದಕ್ಷಿಣೆಯಾಗಿ ಬೇಡಿಕೆ ಇಟ್ಟಿದ್ದ ಎಂದು ಮಧು ಕುಟುಂಬವು ಆರೋಪಿಸಿದೆ. ಅವರ ಕುಟುಂಬ ಹಂಚಿಕೊಂಡ ವಾಟ್ಸಾಪ್ ಚಾಟ್‌ಗಳಲ್ಲಿ ಅನುರಾಗ್ 15 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.

    ಮಧು ಅವರ ಕುಟುಂಬ ಸದಸ್ಯರು ಕೇವಲ 5 ಲಕ್ಷ ರೂ. ವರದಕ್ಷಿಣೆ ಕೊಡಬಹುದು ಎಂದು ಹೇಳಿದ್ದರು. ಆದರೆ, ಅನುರಾಗ್‌ ಇದಕ್ಕೆ ಒಪ್ಪಿರಲಿಲ್ಲ. ಮಧು ತಂದೆ ಫತೇ ಬಹದ್ದೂರ್ ಸಿಂಗ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ಮದುವೆಯ ನಂತರ ಅನುರಾಗ್ ಪದೇ ಪದೆ ಕರೆ ಮಾಡಿ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಹಿಳೆಯ ಬರ್ಬರ ಹತ್ಯೆ – ಕೊಲೆ ಬಳಿಕ ಆರೋಪಿಯೂ ನೇಣಿಗೆ ಶರಣು

    ಮದುವೆಯ ಒಂದು ತಿಂಗಳಲ್ಲೇ ನಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅವಳು ತವರಿಗೆ ಬಂದಿದ್ದಳು. ನಂತರ ನಾವು ವರದಕ್ಷಿಣೆ ಕೊಟ್ಟೆವು. ಮಗಳು ಮತ್ತೆ ಗಂಡನ ಮನೆ ಸೇರಿದರು. ಆದರೆ, ಪದೇ ಪದೆ ಆಕೆಯನ್ನು ಗಂಡನ ಮನೆಯವರು ಹಿಂಸಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಅನುರಾಗ್ ವಿವಾಹೇತರ ಸಂಬಂಧ ಹೊಂದಿದ್ದಾನೆ. ಇತ್ತೀಚೆಗೆ ತನ್ನ ಮಾಜಿ ಗೆಳತಿಯೊಂದಿಗೆ ನಗರದ ಹೋಟೆಲ್‌ನಲ್ಲಿ ಒಂದು ರಾತ್ರಿ ಕಳೆದಿದ್ದಾನೆ ಎಂದು ಮಧು ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ನನ್ನ ಮಗಳು ಗರ್ಭಿಣಿಯಾಗಿದ್ದಳು. ಗರ್ಭಪಾತ ಮಾಡಿಸುವಂತೆ ಪತಿ ಒತ್ತಾಯಿಸುತ್ತಿದ್ದ. ಮಧು ಸಾವನ್ನಪ್ಪುವ ನಾಲ್ಕು ದಿನಗಳ ಮೊದಲು, ಜು.31 ರಂದು ಹೋಟೆಲ್ ಬುಕಿಂಗ್‌ನ ವಿವರಗಳನ್ನು ಕುಟುಂಬ ಹಂಚಿಕೊಂಡಿದೆ. ಆ.3 ರಂದು, ಅನುರಾಗ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಧು ನಮಗೆ ತಿಳಿಸಿದ್ದಳು. ಮಾರನೆ ದಿನವೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಗಂಡನ ಮನೆಯಿಂದ ನಮಗೆ ಕರೆ ಬಂತು. ಇದು ಕೊಲೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

  • ರಾಹುಲ್ಲನನ್ನ ಬಿಟ್ಟು ಬದುಕಲ್ಲ – ಭಾವಿ ಅಳಿಯನೊಂದಿಗೆ ಒಟ್ಟಿಗೆ ಜೀವನ ನಡೆಸಲು ಮುಂದಾದ ಮಹಿಳೆ

    ರಾಹುಲ್ಲನನ್ನ ಬಿಟ್ಟು ಬದುಕಲ್ಲ – ಭಾವಿ ಅಳಿಯನೊಂದಿಗೆ ಒಟ್ಟಿಗೆ ಜೀವನ ನಡೆಸಲು ಮುಂದಾದ ಮಹಿಳೆ

    – 12 ಗಂಟೆ ಕೌನ್ಸೆಲಿಂಗ್‌ ಬಳಿಕವೂ ನಿರ್ಧಾರದಿಂದ ಹಿಂದೆ ಸರಿಯದ ಭಾವಿ ಅತ್ತೆ

    ಲಕ್ನೋ: ಉತ್ತರ ಪ್ರದೇಶದ ಅಲಿಘರ್‌ನಲ್ಲಿ (Uttar Pradesh’s Aligarh) ಭಾವಿ ಅಳಿಯ ಮತ್ತು ಅತ್ತೆಯ ಪ್ರೇಮ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. 10 ದಿನಗಳ ಬಳಿಕ ಪೊಲೀಸರ ಎದುರು ಶರಣಾದ ಸಪ್ನಾ ದೇವಿ ಮತ್ತು ಭಾವಿ ಅಳಿಯ ರಾಹುಲ್‌ ಈಗ ಒಟ್ಟಿಗೆ ಜೀವನ ಕಳೆಯಲು ನಿರ್ಧರಿಸಿದ್ದಾರೆ.

    ತನ್ನ ಮಗಳಿಗೆ ನಿಶ್ಚಯವಾಗಿದ್ದ ಭಾವಿ ಅಳಿಯನೊಂದಿಗೆ ಮನೆಯಲ್ಲಿದ್ದ 3.5 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಳು. ಇದೀಗ ಪೊಲೀಸರಿಗೆ ಶರಣಾಗಿದ್ದು, ತಾನು ಓಡಿಹೋಗಲು ಕಾರಣ ಏನೆಂಬುದನ್ನ ತಿಳಿಸಿದ್ದಾಳೆ.

    UP Women 2

    12 ಗಂಟೆಗಳ ಕಾಲ ಕೌನ್ಸೆಲಿಂಗ್‌:
    ರಾಹುಲ್‌ ಮತ್ತು ಸಪ್ನಾ ದೇವಿ ಪೊಲೀಸರಿಗೆ ಶರಣಾದಾಗ ಸಪ್ನಾ ತನ್ನ ಕುಟುಂಬಸ್ಥರಿಂದ ಅನುಭವಿಸುತ್ತಿದ್ದ ತೊಂದರೆಗಳನ್ನು ಹೇಳಿಕೊಂಡಿದ್ದಳು. ಪತಿ ನಿತ್ಯ ಥಳಿಸುತ್ತಿದ್ದ, ಮಗಳೂ ಸಹ ಜಗಳ ಆಡುತ್ತಿದ್ದಳು, ಇದರಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗಿತ್ತು ಎಂದು ಹೇಳಿದ್ದಳು. ಅಲ್ಲದೇ ರಾಹುಲ್‌ ಸಹ ನಾನು ಇಲ್ಲದೇ ಇದ್ದಿದ್ದರೇ ಅವಳು ಬದುಕುತ್ತಿರಲಿಲ್ಲ ಎಂದು ಹೇಳಿದ್ದ. ಇದಾದ ಬಳಿಕ ಪೊಲೀಸರು ಸಪ್ನಾ ಮತ್ತು ಪತಿಗೆ 12 ಗಂಟೆಗಳ ಕಾಲ ಕೌನ್ಸೆಲಿಂಗ್‌ ನಡೆಸಿದರು. ಸಪ್ನಾಳ ಪತಿ ಮತ್ತು ಆತನ ಕುಟುಂಬಸ್ಥರೊಂದಿಗೆ ಮಾತನಾಡಿಸಿ, ಮನವೊಲಿಸುವ ಪ್ರಯತ್ನ ಮಾಡಿದರು. ಆದ್ರೆ ಸಪ್ನಾ ಮಾತ್ರ ರಾಹುಲ್‌ ಜೊತೆಗೇ ಜೀವನ ಕಳೆಯುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕೊನೆಗೆ ಪೊಲೀಸರು ಸಪ್ನಾಳನ್ನ ರಾಹುಲ್‌ ಜೊತೆಗೆ ಕಳುಹಿಸಿದ್ರು ಎಂದು ವರದಿಗಳು ತಿಳಿಸಿವೆ. ಆದ್ರೆ ಸಪ್ನಾ ದೇವಿ ಪತಿ, ಅವಳು ದೋಚಿರುವ ಎಲ್ಲಾ ಹಣ ಮತ್ತು ಚಿನ್ನಾಭರಣ ಹಿಂದಿರುಗಿಸುವವರೆಗೆ ಇಬ್ಬರನ್ನೂ ಬಿಡಲ್ಲ ಎಂದು ಹೇಳಿದ್ದಾನೆ.

    UP Women

    ಏನಿದು ಪ್ರಕರಣ?
    ಸಪ್ನಾಳ ಮಗಳು ಅನಿತಾಳಿಗೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. 10 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಿ, ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ತನ್ನ ಮಗಳನ್ನು ಮದುವೆಯಾಗಬೇಕಿದ್ದ ಯುವಕನೊಂದಿಗೆ ಸಪ್ನಾ ಓಡಿ ಹೋಗಿದ್ದಳು. ಇದು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸಿತ್ತು.

    uttar pradesh man

    ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಭಾನುವಾರ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ಮಾರಾದಲ್ಲಿ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ಅವಳು ಮಾಡಿದ್ದಾಳೆ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆಂದು ವಧು ಅನಿತಾ ನೊಂದು ನುಡಿದಿದ್ದಳು.

    ಸಪ್ನಾಳ ಪತಿ ಕುಮಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಸಪ್ನಾ ಮತ್ತು ರಾಹುಲ್ ಪತ್ತೆಗೆ ಬಲೆಬೀಸಿದ್ದರು.

  • ನಾನು ಅವನನ್ನೇ ಮದ್ವೆಯಾಗ್ತೀನಿ – ಭಾವಿ ಅಳಿಯನೊಂದಿಗೆ ಓಡಿಹೋಗಿದ್ದ ಯುಪಿ ಮಹಿಳೆ ಪಟ್ಟು

    ನಾನು ಅವನನ್ನೇ ಮದ್ವೆಯಾಗ್ತೀನಿ – ಭಾವಿ ಅಳಿಯನೊಂದಿಗೆ ಓಡಿಹೋಗಿದ್ದ ಯುಪಿ ಮಹಿಳೆ ಪಟ್ಟು

    – ಏನೇ ಆಗಲಿ ರಾಹುಲ್ಲನೊಂದಿಗೆ ಬದುಕುತ್ತೀನಿ ಅಂದ್ಳು ಸಪ್ನೋಂಕಿ ರಾಣಿ

    ಲಕ್ನೋ: ಪ್ರೀತಿ (Love) ಎಂಬುದು ಮಾಯೆ.. ಅದು ಹುಟ್ಟಿದಾಗ ಗಾಳಿಯಲ್ಲಿ ತೇಲಾಡುವ ಅನುಭವ… ಎದೆಯಲ್ಲಿ ಪುಳಕ, ಅಸಹನೀಯ ಭಾರ. ಇದರ ಕೊನೆಯ ಹಂತವೇ ಮದುವೆ. ಆದ್ರೆ ಈ ಪ್ರೀತಿ ಅದು ಯಾರಿಗೆ ಯಾವಾಗ ಹೇಗೆ, ಯಾರ ಮೇಲೆ ಹುಟ್ಟುತ್ತೆ? ಅನ್ನೋ ಕಾರಣವೇ ನಿಗೂಢ.. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲ ವಿವಾಹಿತ ಮಹಿಳೆಯರು ಯುವಕರನ್ನು ವರಿಸುತ್ತಿರುವ ಪ್ರಸಂಗ ಆಗಾಗ್ಗೆ ಕಂಡುಬರುತ್ತಿವೆ. ಇದಕ್ಕೆ ಉತ್ತರ ಪ್ರದೇಶದ (Uttar Pradesh) ಘಟನೆ ತಾಜಾ ಉದಾಹರಣೆಯಾಗಿದೆ.

    UP Women

    ತನ್ನ ಮಗಳಿಗೆ ನಿಶ್ಚಯವಾಗಿದ್ದ (daughter’s fiance) ಭಾವಿ ಅಳಿಯನೊಂದಿಗೆ ಮನೆಯಲ್ಲಿದ್ದ 3.5 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಳು. ಇದೀಗ ಪೊಲೀಸರಿಗೆ ಶರಣಾಗಿದ್ದು, ತಾನು ಓಡಿಹೋಗಲು ಕಾರಣ ಏನೆಂಬುದನ್ನ ತಿಳಿಸಿದ್ದಾಳೆ. ಅಲ್ಲದೇ ಅವನನ್ನೇ ಮದುವೆಯಾಗುತ್ತೇನೆಂದು ಪಟ್ಟು ಹಿಡಿದಿದ್ದಾಳೆ. ಇದನ್ನೂ ಓದಿ: ಪಿಯುಸಿ ಹುಡುಗನ ಮದುವೆಯಾದ ಮೂರು ಮಕ್ಕಳ ತಾಯಿ!

    ಓಡಿ ಹೋಗಿದ್ದ ಮಹಿಳೆ ಸಪ್ನಾ, ಭಾವಿ ಅಳಿಯ ರಾಹುಲ್‌ ಕುಮಾರ್. ತನ್ನ ಪತಿ ಕುಡಿದು ಥಳಿಸುತ್ತಿದ್ದ, ಮಗಳು ಕೂಡ ಪದೇ ಪದೇ ಜಗಳವಾಡುತ್ತಿದ್ದಳು ಇದರಿಂದ ಬೇಸತ್ತು ಅವನೊಂದಿಗೆ ಓಡಿ ಹೋದೆ. ನನ್ನ ಕಥೆಯನ್ನು ಕೇಳಿ ರಾಹುಲ್‌ ಓಡಿ ಹೋಗಲು ಒಪ್ಪಿಕೊಂಡ. ಇಲ್ಲದಿದ್ದರೆ, ಆತ್ಮಹತ್ಯೆ ಒಂದೇ ದಾರಿಯಾಗಿತ್ತು. ಪೊಲೀಸರು ಹುಡುಕಾಡುತ್ತಿರುವುದು ಗೊತ್ತಾಗಿ ಮರಳಿ ಬಂದೆ. ಏನೇ ಆಗಲಿ ನಾನು ರಾಹುಲ್‌ ಜೊತೆಗೇ ಬದುಕುತ್ತೇನೆ, ಅವನನ್ನೇ ಮದುವೆಯಾಗುತ್ತೇನೆ ಅಂತ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಮಹಿಳೆ ಜೂಟ್‌

    ಅಲ್ಲದೇ ಲಕ್ಷಗಟ್ಟಲೇ ಚಿನ್ನಾಭರಣ, ಹಣ ಕದ್ದೊಯ್ದಿದ್ದಾರೆ ಎನ್ನುವ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ಹೋಗುವಾಗ ನನ್ನ ಮೊಬೈಲ್‌, 200 ರೂ.ಪಾಯಿ ಮಾತ್ರ ತೆಗೆದುಕೊಂಡು ಹೋಗಿದ್ದೆ. ಆಕೆಯ ಮತ್ತೊಬ್ಬ ಮಗಳು ಶಿವಾನಿ ಮನೆಯಲ್ಲಿದ್ದ 3.5 ಲಕ್ಷ ರೂಪಾಯಿ ನಗದು ಮತ್ತು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದೇ ಸಂದರ್ಭದಲ್ಲಿ ರಾಹುಲ್‌ ಕುಮಾರ್‌ನನ್ನು ವಿವಾಹವಾಗುತ್ತೀಯಾ ಎಂದು ಕೇಳಿದ್ದಕ್ಕೆ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಸಪ್ನಾಳ ಕುಟುಂಬಸ್ಥರು ಅವಳು ಮನೆಗೆ ವಾಪಸ್‌ ಬರೋದು ಬೇಡ ತೆಗೆದುಕೊಂಡು ಹೋಗಿರುವ ಚಿನ್ನಾಭರಣ ಕೊಟ್ಟರೆ ಸಾಕು ಅಂತ ಹೇಳಿದ್ದಾರೆ. ಇದನ್ನೂ ಓದಿ: ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಪೊಲೀಸ್ ರಕ್ಷಣೆ ಇಲ್ಲ: ಹೈಕೋರ್ಟ್

    uttar pradesh man

    ಏನಿದು ಪ್ರಕರಣ?
    ಸಪ್ನಾಳ ಮಗಳು ಅನಿತಾಳಿಗೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. 10 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಿ, ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ತನ್ನ ಮಗಳನ್ನು ಮದುವೆಯಾಗಬೇಕಿದ್ದ ಯುವಕನೊಂದಿಗೆ ಸಪ್ನಾ ಓಡಿ ಹೋಗಿದ್ದಳು. ಇದು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸಿತ್ತು.

    ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಭಾನುವಾರ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ಮಾರಾದಲ್ಲಿ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ಅವಳು ಮಾಡಿದ್ದಾಳೆ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆಂದು ವಧು ಅನಿತಾ ನೊಂದು ನುಡಿದಿದ್ದಳು.

    ಸಪ್ನಾಳ ಪತಿ ಕುಮಾರ್ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಸಪ್ನಾ ಮತ್ತು ರಾಹುಲ್ ಪತ್ತೆಗೆ ಬಲೆಬೀಸಿದ್ದರು. ಇದನ್ನೂ ಓದಿ: Mandya | ಅಪರಿಚಿತ ವಾಹನ ಡಿಕ್ಕಿ – ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವು

  • ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಮಹಿಳೆ ಜೂಟ್‌

    ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಮಹಿಳೆ ಜೂಟ್‌

    – ಮನೆಯಲ್ಲಿದ್ದ 3 ಲಕ್ಷ ಹಣ, 5 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಎಸ್ಕೇಪ್‌
    – ಮದುವೆಗೆ 10 ದಿನ ಬಾಕಿ ಇರುವಾಗಲೇ ಘಟನೆ

    ಲಕ್ನೋ: ತನ್ನ ಮಗಳೊಂದಿಗೆ ಮದುವೆಯಾಗಬೇಕಿದ್ದ ಅಳಿಯನ ಜೊತೆ ಮಹಿಳೆಯೊಬ್ಬರು ಎಸ್ಕೇಪ್‌ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರ ಪ್ರದೇಶದ ಅಲಿಗಢದ ಮದ್ರಾಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಧುವಿನ ತಾಯಿ ಅನಿತಾ ತನ್ನ ಭಾವಿ ಅಳಿಯನೊಂದಿಗೆ ಓಡಿ ಹೋಗಿದ್ದಾಳೆ. ಮನೆಯಲ್ಲಿದ್ದ 3.5 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಪಿಯುಸಿ ಹುಡುಗನ ಮದುವೆಯಾದ ಮೂರು ಮಕ್ಕಳ ತಾಯಿ!

    ಅನಿತಾ ಮಗಳಿಗೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. 10 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಿ, ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಅನಿತಾ ತನ್ನ ಮಗಳನ್ನು ಮದುವೆಯಾಗಬೇಕಿದ್ದ ಯುವಕನೊಂದಿಗೆ ಓಡಿ ಹೋಗಿದ್ದಾಳೆ. ಇದು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ.

    ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಭಾನುವಾರ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ಮಾರಾದಲ್ಲಿ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ಅವಳು ಮಾಡಿದ್ದಾಳೆ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆಂದು ವಧು ನೊಂದು ನುಡಿದಿದ್ದಾಳೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ

    ಅನಿತಾಳ ಪತಿ ಕುಮಾರ್ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪೊಲೀಸರು ಅನಿತಾ ಮತ್ತು ರಾಹುಲ್ ಪತ್ತೆಗೆ ಬಲೆಬೀಸಿದ್ದಾರೆ.

  • ಬಲವಂತದ ಮದುವೆ; ವಿವಾಹವಾದ 2 ವಾರಗಳಲ್ಲೇ ಪ್ರಿಯಕರನ ಜೊತೆಗೆ ಸೇರಿ ಪತಿ ಹತ್ಯೆ ಮಾಡಿಸಿದ ಮಹಿಳೆ

    ಬಲವಂತದ ಮದುವೆ; ವಿವಾಹವಾದ 2 ವಾರಗಳಲ್ಲೇ ಪ್ರಿಯಕರನ ಜೊತೆಗೆ ಸೇರಿ ಪತಿ ಹತ್ಯೆ ಮಾಡಿಸಿದ ಮಹಿಳೆ

    ಲಕ್ನೋ: ಮದುವೆಯಾದ 2 ವಾರದಲ್ಲೇ ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳಾದ ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಯನ್ನು ಪೋಷಕರು ಒಪ್ಪಲಿಲ್ಲ. ಮಾ.5 ರಂದು ಪ್ರಗತಿಯನ್ನು ದಿಲೀಪ್ ಎಂಬಾತನ ಜೊತೆ ಬಲವಂತವಾಗಿ ಮದುವೆ ಮಾಡಿದರು.

    ಮದುವೆಯಾಗಿ ಕೇವಲ ಎರಡು ವಾರಗಳಷ್ಟೇ ಕಳೆದಿತ್ತು. ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ, ಯೋಜನೆ ರೂಪಿಸಿ ಗಂಡನನ್ನು ಹತ್ಯೆ ಮಾಡಿಸಿದ್ದಾರೆ. ಪತಿ ಕೊಲೆ ಮಾಡಲು ವ್ಯಕ್ತಿಯೊಬ್ಬನಿಗೆ 2 ಲಕ್ಷ ರೂ. ಸುಪಾರಿ ಕೊಟ್ಟಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

    ಗುಂಡೇಟಿನಿಂದ ಗಾಯಗೊಂಡು ಹೊಲದಲ್ಲಿ ಬಿದ್ದಿದ್ದ ದಿಲೀಪ್‌ನನ್ನು ಪೊಲೀಸರು ಗುರುತಿಸಿದ್ದರು. ತಕ್ಷಣ ಆತನನ್ನು ಬಿಧುನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ, ಸೈಫೈ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಕರೆದೊಯ್ಯಲಾಯಿತು. ಕೊನೆಗೆ ಔರೈಯಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ದಿಲೀಪ್‌ ಕೊನೆಯುಸಿರೆಳೆದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‌

    ಈ ಸಂಬಂಧ ಮೃತ ವ್ಯಕ್ತಿಯ ಸಹೋದರ ಸಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತನ ಪತ್ನಿ ಮತ್ತು ಆಕೆಯ ಪ್ರೇಮಿ ಮದುವೆಯ ನಂತರ ಭೇಟಿಯಾಗಲು ಸಾಧ್ಯವಾಗದ ಕಾರಣ, ಇಬ್ಬರೂ ಸೇರಿಕೊಂಡು ದಿಲೀಪ್‌ನನ್ನು ಕೊಲ್ಲಲು ನಿರ್ಧರಿಸಿದ್ದರೆಂಬುದು ತನಿಖೆಯಿಂದ ತಿಳಿದುಬಂದಿದೆ. ಇಬ್ಬರೂ ದಿಲೀಪ್‌ನನ್ನು ಕೊಲೆ ಮಾಡಲು ರಾಮಾಜಿ ಚೌಧರಿ ಎಂಬ ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿದ್ದರು. ಕೊಲೆ ಮಾಡಲು ಅವನಿಗೆ 2 ಲಕ್ಷ ರೂ.ಗಳನ್ನು ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ರಾಮಾಜಿ ಮತ್ತು ಇತರ ಕೆಲವರು, ದಿಲೀಪ್‌ನನ್ನು ಬೈಕ್‌ನಲ್ಲಿ ಹೊಲಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ನಂತರ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ಗುರುತಿಸಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ಎರಡು ಪಿಸ್ತೂಲ್‌ಗಳು, ನಾಲ್ಕು ಲೈವ್ ಕಾರ್ಟ್ರಿಡ್ಜ್‌ಗಳು, ಒಂದು ಬೈಕ್, ಎರಡು ಮೊಬೈಲ್ ಫೋನ್‌ಗಳು, ಒಂದು ಪರ್ಸ್, ಆಧಾರ್ ಕಾರ್ಡ್ ಮತ್ತು 3,000 ರೂ.ಗಳನ್ನು ವಶಪಡಿಸಿಕೊಂಡಿದ್ದರು.

  • ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು

    ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು

    ಲಕ್ನೋ: ಮುದ್ದಿನ ಬೆಕ್ಕು ಸಾವಿನಿಂದ ಕಂಗೆಟ್ಟು, ಎರಡು ದಿನ ಮೃತದೇಹದ ಜೊತೆಗೇ ಕಾಲ ಕಳೆದಿದ್ದ ಮಹಿಳೆ ಮೂರನೇ ದಿನ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.

    ಅಮ್ರೋಹದ ಹಸನ್‌ಪುರ ನಿವಾಸಿ 32 ವರ್ಷದ ಪೂಜಾ ಮೃತ ಮಹಿಳೆ. ಎಂಟು ವರ್ಷಗಳ ಹಿಂದೆ ಪೂಜಾ ದೆಹಲಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಎರಡು ವರ್ಷ ಸಂಸಾರ ನಡೆಸಿ ವಿಚ್ಛೇದನ ಪಡೆದಿದ್ದರು. ಬಳಿಕ ತಾಯಿ ಗಜ್ರಾ ದೇವಿಯೊಂದಿಗೆ ವಾಸವಾಗಿದ್ದರು.

    ಒಂಟಿತನವನ್ನು ನಿಭಾಯಿಸಲು ಪೂಜಾ ಬೆಕ್ಕೊಂದನ್ನು ಸಾಕಿಕೊಂಡಿದ್ದರು. ಬೆಕ್ಕು ಸಾವಿಗೀಡಾದಾಗ ತುಂಬಾ ದುಃಖಿತರಾಗಿದ್ದರು. ಆಕೆಯ ತಾಯಿ ಪ್ರಾಣಿಯನ್ನು ಹೂಳಲು ಸೂಚಿಸಿದಾಗ, ಪೂಜಾ ನಿರಾಕರಿಸಿದ್ದಳು. ಅದು ಮತ್ತೆ ಬದುಕಿ ಬರುತ್ತದೆ ಎಂದು ತಾಯಿ ಜೊತೆ ವಾದಿಸಿದ್ದಳು. ಪೂಜಾ ಎರಡು ದಿನ ಬೆಕ್ಕಿನ ಮೃತದೇಹದ ಜೊತೆ ಕಾಲ ಕಳೆದಿದ್ದಳು. ಕೊನೆಗೆ ಅದು ಬದುಕಿ ಬರಲಿಲ್ಲ ಎಂದು ದುಃಖಿಸಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ತನ್ನ ಕೋಣೆಯಲ್ಲಿ ಪೂಜೆ ನೇಣಿಗೆ ಶರಣಾದಳು. ಆಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಬೆಕ್ಕಿನ ಮೃತದೇಹವು ಇತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

  • ವಯಸ್ಸಾಯಿತು ಇನ್ಯಾವಾಗ ಮದ್ವೆ ಆಗ್ತೀಯಾ? ಅಂತ ರೇಗಿಸಿದ್ದಕ್ಕೆ ಅತ್ತಿಗೆಯನ್ನೇ ಕೊಂದ

    ವಯಸ್ಸಾಯಿತು ಇನ್ಯಾವಾಗ ಮದ್ವೆ ಆಗ್ತೀಯಾ? ಅಂತ ರೇಗಿಸಿದ್ದಕ್ಕೆ ಅತ್ತಿಗೆಯನ್ನೇ ಕೊಂದ

    ಲಕ್ನೋ: ವಯಸ್ಸಾಯಿತು ಇನ್ನೂ ಯಾವಾಗ ನೀನು ಮದ್ವೆ (Marriage) ಆಗೋದು ಅಂತ ಪದೇ ಪದೇ ತಮಾಷೆ ಮಾಡುತ್ತಿದ್ದಕ್ಕೆ ತನ್ನ ಅತ್ತಿಗೆಯನ್ನೇ ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಂದಾ ಪಟ್ಟಣದಲ್ಲಿ ನಡೆದಿದೆ.

    ಕೊಲೆ ಆರೋಪಿಯನ್ನು ಸುನೀಲ್‌ ಹಾಗೂ ಕೊಲೆಯಾದ ಆತನ ಅತ್ತಿಗೆಯನ್ನು (Sister in Law) ಆಶಾದೇವಿ ಎಂದು ಗುರುತಿಸಲಾಗಿದೆ. ಆಶಾದೇವಿ ತನ್ನ ಮೈದುನನೊಂದಿಗೆ ಆಗಾಗ್ಗೆ ಮದುವೆ ವಿಚಾರವಾಗಿ ತಮಾಷೆ ಮಾಡುತ್ತಲೇ ಇದ್ದಳು. ಇದರಿಂದ ಮನನೊಂದಿದ್ದ ಮೈದುನ ಆಕೆಯನ್ನು ಕೊಂದೇಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಟ್ರಂಪ್‌, ಸೋತ ಹ್ಯಾರಿಸ್‌ಗೆ ರಾಹುಲ್‌ ಗಾಂಧಿ ಪತ್ರ

    ಮಾಹಿತಿ ಪ್ರಕಾರ, ಕೊಲೆಯಾದ ಮಹಿಳೆ ಹಾಗೂ ಆತನ ಮೈದುನ ಬಂದಾ ಪಟ್ಟಣದ ನಿವಾಸಿಗಳು. ಆಶಾದೇವಿ ಸುನೀಲ್‌ಗೆ ಆಗಾಗ್ಗೆ ಮದುವೆ ವಿಷಯದಲ್ಲಿ ತಮಾಷೆ ಮಾಡುತ್ತಿದ್ದಳು. ಅಷ್ಟೇ ಅಲ್ಲ, ನನಗೆ ಆಗಾಗ್ಗೆ ಹಣ ಕೊಡ್ತಾನೆ ಅಂತ ಸುನೀಲ್‌ ತಾಯಿ ಮುಂದೆ ಹೇಳಿದ್ದಳು. ಇದರಿಂದ ಸುನೀಲ್‌ ತಾಯಿ ಅಸಮಾಧಾನಗೊಂಡಿದ್ದರು. ಬಳಿಕ ತನ್ನ ಅತ್ತಿಗೆಗೆ ತಮಾಷೆ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದ. ಆದರೂ ಆಶಾ ತಮಾಷೆ ಮುಂದುವರಿಸಿದ್ದಳು. ಇದರಿಂದ ಬೇಸತ್ತ ಸುನೀಲ್‌ ಆಕೆಯನ್ನ ಕೊಂದೇ ಬಿಟ್ಟಿದ್ದಾನೆ ಎನ್ನಲಾಗಿದೆ.

    ಸ್ಕೆಚ್‌ ಹಾಕಿದ್ದು ಹೇಗೆ?
    ಇದೇ ನವೆಂಬರ್‌ 3ರ ರಾತ್ರಿ ಸುನೀಲ್‌ ಟೆರೇಸ್‌ ಮೇಲಿಂದ ತನ್ನ ಅತ್ತಿಗೆ ಮಲಗಿದ್ದ ಕೊಠಡಿಗೆ ನುಗ್ಗಿದ್ದಾನೆ. ನಿದ್ರೆ ಮಾಡುತ್ತಿದ್ದ ಆಶಾಳ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದು ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ ಆಕೆಯನ್ನ ಹೊರಗೆ ಎಳೆದೊಯ್ದು, ಇಟ್ಟಿಗೆಯಿಂದ ತಲೆಯನ್ನ ಜಜ್ಜಿ, ಕಾಲಿನಿಂದ ಚೆನ್ನಾಗಿ ತುಳಿದು ಕೊಲೆ ಮಾಡಿದ್ದಾನೆ. ನಂತರ ಕಸದ ರಾಶಿಯಿಂದ ಆಕೆಯ ದೇಹವನ್ನ ಮುಚ್ಚಿಟ್ಟು, ಯಾರಿಗೂ ತಿಳಿಯದಂತೆ ಮನೆಗೆ ಬಂದಿದ್ದಾನೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿ

    ಘಟನೆ ನಡೆದ ಮರುದಿನ ಆಶಾಳ ಮಗು ಮನೆಯಲ್ಲಿ ಅಳುತ್ತಿದ್ದುದ್ದನ್ನು ಕಂಡು ಮನೆಯವರು ಗಾಬರಿಯಾಗಿದ್ದಾರೆ. ಆಶಾ ಇಲ್ಲದಿರುವುದು ಗೊತ್ತಾದಾಗ ಆಕೆಯನ್ನ ಹುಡುಕಲು ಪ್ರಾರಂಭಿಸಿದ್ದಾರೆ. ಬಳಿಕ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಕಸದ ಗುಡ್ಡೆಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಬಳಿಕ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

    ಬಳಿಕ ಆರೋಪಿ ಕೊಲೆಗೆ ಬಳಸಿದ್ದ ದೊಣ್ಣೆ ಮತ್ತು ಇಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯನ್ನು ಯಶಸ್ವಿಯಾಗಿ ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಅಂಕುರ್ ಅಗರ್ವಾಲ್ 10,000 ರೂ. ಬಹುಮಾನ ನೀಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿರೋ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಭಾವಚಿತ್ರ ಇರುವ 30 ರೇಶನ್ ಕಿಟ್‌ಗಳು ಜಪ್ತಿ

  • ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ವಿವಿಐಪಿ ಪ್ರದೇಶದಲ್ಲಿ ಶವವಾಗಿ ಪತ್ತೆ

    ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ವಿವಿಐಪಿ ಪ್ರದೇಶದಲ್ಲಿ ಶವವಾಗಿ ಪತ್ತೆ

    ಲಕ್ನೋ: ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ, ವಿವಿಐಪಿ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಮಹಿಳೆಯ ಶವ ಪತ್ತೆಯಾಗಿದೆ.

    ಆರೋಪಿ ವಿಮಲ್ ಸೋನಿ, ಗ್ರೀನ್ ಪಾರ್ಕ್ ಪ್ರದೇಶದಲ್ಲಿ ಜಿಮ್ ತರಬೇತುದಾರನಾಗಿದ್ದಾನೆ. ಸರ್ಕಾರಿ ಅಧಿಕಾರಿಗಳಿಗೆ ಮಂಜೂರು ಮಾಡಿದ ಬಂಗಲೆಗಳನ್ನು ಒಳಗೊಂಡಿರುವ ಪ್ರದೇಶದಲ್ಲಿ ಉದ್ಯಮಿಯ ಪತ್ನಿಯ ಶವವನ್ನು ಹೂತಿಟ್ಟಿದ್ದಾಗಿ ಪೊಲೀಸರ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಮುಂಬೈ ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – 9 ಮಂದಿಗೆ ಗಾಯ

    ಜೂನ್ 24 ರಂದು ಮಹಿಳೆ ನಾಪತ್ತೆಯಾಗಿದ್ದರು. ನಂತರ ತನಿಖೆ ನಡೆಸಿದಾಗ ಆಕೆ ಮೃತಪಟ್ಟಿರುವುದು ತಿಳಿದುಬಂದಿದೆ.

    ಆರೋಪಿಗೆ ವಿವಾಹ ನಿಶ್ಚಯವಾಗಿದ್ದ ಬಗ್ಗೆ ಮಹಿಳೆ ಅಸಮಾಧಾನಗೊಂಡಿದ್ದಳು. ಕೊಲೆಯಾದ ದಿನ ಆಕೆ, 20 ದಿನಗಳ ನಂತರ ಜಿಮ್‌ಗೆ ಬಂದಿದ್ದಳು. ಆರೋಪಿ ಮತ್ತು ಮಹಿಳೆ ಇಬ್ಬರೂ ಮಾತುಕತೆಗೆ ಕಾರಿನಲ್ಲಿ ಹೋಗಿದ್ದರು. ಪರಸ್ಪರರಿಗೆ ಜಗಳವಾಗಿದೆ. ಈ ವೇಳೆ ಆರೋಪಿಯು ಮಹಿಳೆಯ ಕುತ್ತಿಗೆಗೆ ಗುದ್ದಿದ್ದಾನೆ. ಪೆಟ್ಟಿನಿಂದ ಆಕೆ ಮೂರ್ಛೆ ಹೋಗಿದ್ದಾಳೆ. ಬಳಿಕ ಆತ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲ್ಲ – ಮಹಾ ವಿಕಾಸ್‌ ಅಘಾಡಿ ಒಕ್ಕೂಟಕ್ಕೆ ಬೆಂಬಲ

  • ಸಂಬಂಧಿ ಜೊತೆ ಸೇರಿ ಪತ್ನಿ ಮೇಲೆ ಅತ್ಯಾಚಾರ ಎಸಗಿ ತಲಾಖ್‌ ನೀಡಿದ ಪತಿ

    ಸಂಬಂಧಿ ಜೊತೆ ಸೇರಿ ಪತ್ನಿ ಮೇಲೆ ಅತ್ಯಾಚಾರ ಎಸಗಿ ತಲಾಖ್‌ ನೀಡಿದ ಪತಿ

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಸೋದರ ಸಂಬಂಧಿಯೊಂದಿಗೆ ಸೇರಿ ಪತ್ನಿಯನ್ನು ಅತ್ಯಾಚಾರ ಎಸಗಿದ್ದಲ್ಲದೇ, ವರದಕ್ಷಿಣೆ ನೀಡದಿದ್ದಕ್ಕೆ ತ್ರಿವಳಿ ತಲಾಖ್‌ ನೀಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ.

    ಆರೋಪಿಯಾಗಿರುವ ಸಂತ್ರಸ್ತೆ ಪತಿ ಲಕ್ನೋ ಮೂಲದ ಮೊಹಮ್ಮದ್ ಅದ್ನಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಸೋದರ ಸಂಬಂಧಿ ತಲೆಮರೆಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದೆ. ಇದನ್ನೂ ಓದಿ: ಸಿಧು ಮೂಸೆ ವಾಲಾ ಮುಖವನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡ ತಂದೆ

    ನನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆಗಾಗಿ ನನಗೆ ಥಳಿಸುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

    ಪತಿಯ ಕಿರುಕುಳ ತಾಳಲಾರದೇ ಮಹಿಳೆ ತನ್ನ ತಾಯಿಯ ಮನೆಗೆ ಹೋಗಿದ್ದರು. ನಂತರ ಅದ್ನಾನ್ ಮತ್ತು ಆತನ ಸೋದರ ಸಂಬಂಧಿ ಅತ್ತೆಯ ಮನೆಗೆ ಹೋಗಿದ್ದಾರೆ. ಮಹಿಳೆ ಒಬ್ಬಂಟಿಯಾಗಿ ಇರುವುದನ್ನು ಕಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಆಕಾಶ್ ತೋಮರ್ ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಸಿರಿಂಜ್‍ನಿಂದ 39 ವಿದ್ಯಾರ್ಥಿಗಳಿಗೆ ಲಸಿಕೆ – ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್

    ಅದ್ನಾನ್ ನಂತರ ಆಕೆಯನ್ನು ಥಳಿಸಿ, ಕಾನೂನುಬಾಹಿರವಾದ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]