Tag: UP Thieves Gang

  • ಯುಪಿಯಲ್ಲಿ ಕಳ್ಳರ ಗ್ಯಾಂಗ್‌ಗೆ ತಿಂಗಳ ಸಂಬಳ, ಪ್ರಯಾಣ ಭತ್ಯೆ – ಗ್ಯಾಂಗ್‌ ಬಗ್ಗೆ ತಿಳಿದು ಪೊಲೀಸರೇ ಶಾಕ್‌!

    ಯುಪಿಯಲ್ಲಿ ಕಳ್ಳರ ಗ್ಯಾಂಗ್‌ಗೆ ತಿಂಗಳ ಸಂಬಳ, ಪ್ರಯಾಣ ಭತ್ಯೆ – ಗ್ಯಾಂಗ್‌ ಬಗ್ಗೆ ತಿಳಿದು ಪೊಲೀಸರೇ ಶಾಕ್‌!

    – ಕಾರ್ಪೊರೇಟ್‌ ಕಂಪನಿಗಳಂತೆ ತಿಂಗಳಿಗೆ 15,000 ರೂ. ಪಡೆಯುತ್ತಿದ್ದ ಕಳ್ಳರು

    ಲಕ್ನೋ: ಟಾರ್ಗೆಟ್‌ ರೀಚ್‌ ಆಗದಿದ್ದರೂ ಕಾರ್ಪೊರೇಟ್‌ ಕಂಪನಿಗಳಂತೆ ತಿಂಗಳಿಗೆ ನಿಗದಿತ ಸಂಬಳ, ಪ್ರಯಾಣ ಭತ್ಯೆ ಕಳ್ಳರ ಗ್ಯಾಂಗ್‌ನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದಾರೆ.

    ಉತ್ತರ ಪ್ರದೇಶದ ಗೋರಖ್‌ಪುರದ ಸರ್ಕಾರಿ ರೈಲ್ವೆ ಪೊಲೀಸರು (GRP) ಕಿಂಗ್‌ಪಿನ್ ಮತ್ತು ಅವನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಗ್ಯಾಂಗ್ ಲೀಡರ್ ಮನೋಜ್ ಮಂಡಲ್ ಎಂದು ಗುರುತಿಸಲಾಗಿದೆ. ಕರಣ್ ಕುಮಾರ್ (19) ಮತ್ತು ಕುಮಾರ್ (15) ಬಂಧಿತ ಆರೋಪಿಗಳು.

    ಇವರಿಂದ 44 ಕದ್ದ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಧನಗಳು 10 ಲಕ್ಷಕ್ಕೂ ಹೆಚ್ಚು ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಫೋನ್‌ಗಳ ಜೊತೆಗೆ ಜನರನ್ನು ಬೆದರಿಸಲು ಬಳಸಿದ ಬಂದೂಕು ಮತ್ತು ಚಾಕು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮನೋಜ್ ತನ್ನ ಸಹಚರರಿಗೆ ಪ್ರತಿ ತಿಂಗಳು 15,000 ರೂ. ಸಂಬಳ ನೀಡಿದ್ದಾನೆ ಎಂದು ಗೋರಖ್‌ಪುರ ಜಿಆರ್‌ಪಿ ಎಸ್‌ಪಿ ಸಂದೀಪ್ ಕುಮಾರ್ ಮೀನಾ ಬಹಿರಂಗಪಡಿಸಿದ್ದಾರೆ. ಅವರಿಗೆ ಉಚಿತ ಆಹಾರ ಮತ್ತು ಹೊರ ನಿಲ್ದಾಣದ ಪ್ರಯಾಣಕ್ಕಾಗಿ ಪ್ರಯಾಣ ಭತ್ಯೆಯನ್ನು ಸಹ ನೀಡಲಾಯಿತು.

    ಗ್ಯಾಂಗ್ ಸದಸ್ಯರು ರೈಲ್ವೆ ನಿಲ್ದಾಣಗಳು ಮತ್ತು ಜನನಿಬಿಡ ಮಾರುಕಟ್ಟೆಗಳಲ್ಲಿ ಜನರಿಂದ ಫೋನ್‌ಗಳನ್ನು ಕದಿಯುವಲ್ಲಿ ಪರಿಣತಿ ಹೊಂದಿದ್ದರು. ಮನೋಜ್ ತನ್ನ ಗ್ರಾಮ ಸಾಹೇಬ್‌ಗಂಜ್‌ನಲ್ಲಿ ಹಣದ ಅಗತ್ಯವಿರುವ ಮತ್ತು ಶಿಕ್ಷಣದಲ್ಲಿ ಹಿಂದುಳಿದ ಯುವಕರನ್ನು ಹುಡುಕುತ್ತಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಯುವಕರಿಗೆ ಮೂರು ತಿಂಗಳ ಕಾಲ ತರಬೇತಿ ನೀಡುತ್ತಿದ್ದ. ನಂತರ ತರಬೇತಿ ಪಡೆದವರಿಗೆ ದರೋಡೆ ಮಾಡಲು ಸಣ್ಣ ಗುರಿಗಳನ್ನು ನೀಡಲಾಯಿತು. ಗುರಿಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದವರನ್ನು ಗ್ಯಾಂಗ್‌ಗೆ ಸೇರಿಸಿಕೊಳ್ಳುತ್ತಿದ್ದ.