Tag: UP man

  • ನನ್ನ ಹಣವನ್ನೆಲ್ಲ ತಿಂದು ತೇಗಿದ್ದೀಯಾ: ಡಿವೋರ್ಸ್‌ ವಿಚಾರಕ್ಕೆ ಪತ್ನಿಗೆ ಗುಂಡಿಟ್ಟು ಕೊಂದ ಪತಿ

    ನನ್ನ ಹಣವನ್ನೆಲ್ಲ ತಿಂದು ತೇಗಿದ್ದೀಯಾ: ಡಿವೋರ್ಸ್‌ ವಿಚಾರಕ್ಕೆ ಪತ್ನಿಗೆ ಗುಂಡಿಟ್ಟು ಕೊಂದ ಪತಿ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಗೋರಖ್‌ಪುರದ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಬುಧವಾರ ತನ್ನ ಹೆಂಡತಿಯನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮಮತಾ ಚೌಹಾಣ್‌ (33) ಕೊಲೆಯಾದ ಮಹಿಳೆ. ವಿಶ್ವಕರ್ಮ ಚೌಹಾಣ್‌ ಹತ್ಯೆ ಆರೋಪಿ. ವಿಚ್ಛೇದನ ಕುರಿತು ಪತ್ನಿಯೊಂದಿಗೆ ಜಗಳ ತೆಗೆದು ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 14 ಪಾಕಿಸ್ತಾನಿ ಉಗ್ರರು, 400 ಕೆಜಿ RDX, 34 ಮಾನವ ಬಾಂಬ್ ಸ್ಫೋಟ ನಡೆಯಲಿದೆ; ಮುಂಬೈಗೆ ಉಗ್ರ ಬೆದರಿಕೆ

    ಈ ದಂಪತಿ 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ 13 ವರ್ಷದ ಮಗಳು ಇದ್ದಾಳೆ. ‘ಪತ್ನಿಯನ್ನು ಹತ್ಯೆ ಮಾಡಿರುವುದಕ್ಕೆ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ. ನನ್ನ ಹಣವನ್ನೆಲ್ಲ ತಿಂದು ತೇಗಿದ್ದಾಳೆ’ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ.

    ಮಮತಾ ಚೌಹಾಣ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ತನ್ನ ಪತಿಯಿಂದ ಪ್ರತ್ಯೇಕವಾಗಿ ಮಗಳೊಂದಿಗೆ ವಾಸಿಸುತ್ತಿದ್ದಳು. ವಿಚ್ಛೇದನ ವಿಚಾರವಾಗಿ ಇಬ್ಬರ ನಡುವೆಯೂ ಜಗಳವಾಗಿದೆ. ಅಂಗಡಿಯೊಂದರ ಬಳಿ ನಡೆದ ತೀವ್ರ ವಾಗ್ವಾದದ ನಂತರ, ಚೌಹಾಣ್ ಪಿಸ್ತೂಲನ್ನು ಹೊರತೆಗೆದು ಆಕೆಯ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸ್ಪೈ ಕ್ಯಾಮೆರಾ ಬಳಸಿ ಮಹಿಳೆ ವೀಡಿಯೋ ರೆಕಾರ್ಡ್‌ – ದೆಹಲಿಯಲ್ಲಿ ಪೈಲಟ್‌ ಬಂಧನ

    ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ. ಮೃತ ಮಹಿಳೆ ಮಗಳು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಅಮ್ಮನಿಗೆ ಅಪ್ಪ ಕಿರುಕುಳ ನೀಡುತ್ತಿದ್ದ, ಅಕ್ರಮ ಸಂಬಂಧ ಹೊಂದಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

  • ಸಮೋಸಾ ಕೊಡಿಸಲಿಲ್ಲ ಅಂತ ವ್ಯಕ್ತಿ ಮೇಲೆ ಪತ್ನಿ, ಕುಟುಂಬಸ್ಥರಿಂದ ಹಲ್ಲೆ

    ಸಮೋಸಾ ಕೊಡಿಸಲಿಲ್ಲ ಅಂತ ವ್ಯಕ್ತಿ ಮೇಲೆ ಪತ್ನಿ, ಕುಟುಂಬಸ್ಥರಿಂದ ಹಲ್ಲೆ

    ಲಕ್ನೋ: ಸಮೋಸಾ ತರದಿದ್ದಕ್ಕೆ ಪತ್ನಿ ಮತ್ತು ಆಕೆಯ ಸಂಬಂಧಿಕರು ವ್ಯಕ್ತಿಯೊಬ್ಬನನ್ನು ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊಲೆ ಯತ್ನದ ಆರೋಪದ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಆನಂದಪುರದ ನಿವಾಸಿ ಶಿವಂ ಮೇಲೆ ಆತನ ಪತ್ನಿ ಸಂಗೀತಾ, ಆಕೆಯ ಪೋಷಕರು ಉಷಾ, ರಾಮ್‌ಲಡೈಟ್ ಮತ್ತು ಮಾವ ರಾಮೋತಾರ್ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಶಿವಂ ತಾಯಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

    ಸಂಗೀತಾ ತನ್ನ ಪತಿಗೆ ಸಮೋಸಾ ತರಲು ಹೇಳಿದ್ದಾಳೆ. ಆದರೆ, ಪತಿ ತರುವುದಕ್ಕೆ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ತನ್ನ ಕುಟುಂಬದವರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ. ಮಾರನೇ ದಿನ ಪತಿ-ಪತ್ನಿ ನಡುವೆ ರಾಜಿ ಪಂಚಾಯಿತಿ ವೇಳೆ ಹಲ್ಲೆ ನಡೆಸಲಾಗಿದೆ.

    ಘಟನೆಯ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದವರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

    ಹಲ್ಲೆಗೊಳಗಾದ ವ್ಯಕ್ತಿಯ ತಾಯಿ ವಿಜಯ್ ಕುಮಾರಿ ನೀಡಿದ ದೂರಿನ ಆಧಾರದ ಮೇಲೆ, ಕೊಲೆ ಯತ್ನ ಸೇರಿದಂತೆ ಬಿಎನ್‌ಎಸ್ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವೃತ್ತ ಅಧಿಕಾರಿ (ಸಿಒ) ಪುರನ್‌ಪುರ ಪ್ರತೀಕ್ ದಹಿಯಾ ತಿಳಿಸಿದ್ದಾರೆ.

  • ಚಿರತೆ ಸೆರೆಗೆ ಇರಿಸಿದ್ದ ಕೋಳಿ ಹಿಡಿಯಲು ಹೋಗಿ ಬೋನಿನಲ್ಲಿ ಲಾಕ್ ಆದ ಭೂಪ!

    ಚಿರತೆ ಸೆರೆಗೆ ಇರಿಸಿದ್ದ ಕೋಳಿ ಹಿಡಿಯಲು ಹೋಗಿ ಬೋನಿನಲ್ಲಿ ಲಾಕ್ ಆದ ಭೂಪ!

    ಲಕ್ನೋ: ಚಿರತೆ ಸೆರೆಗಾಗಿ ಇರಿಸಿದ್ದ ಬೋನಿಗೆ ವ್ಯಕ್ತಿಯೊಬ್ಬ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದ (Uttar Pradesh) ಬುಲಂದ್‍ಶಹರ್‌ನಲ್ಲಿ (Bulandshahr) ನಡೆದಿದೆ. ಚಿರತೆಯನ್ನು (Leopard) ಹಿಡಿಯಲು ಇರಿಸಿದ್ದ ಕೋಳಿಯನ್ನು ಹಿಡಿಯಲು ಹೋಗಿ ಬೋನಿನಲ್ಲಿ ಸಿಲುಕಿದ್ದಾನೆ. ಆತನನ್ನ ತಕ್ಷಣ ಬಿಡುಗಡೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಅರಣ್ಯ ಇಲಾಖೆಯ ಸಿಬ್ಬಂದಿ ಬೋನ್ ಇರಿಸಿದ್ದ ಜಾಗಕ್ಕೆ ತೆರಳಿದಾಗ ಒಳಗೆ ಸಿಲುಕಿದ್ದ ವ್ಯಕ್ತಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಬೋನಿನಲ್ಲಿ ಸೆರೆಯಾದ ವ್ಯಕ್ತಿಯ ವೀಡಿಯೋ ವೈರಲ್ ಆಗಿದೆ. ಬೋನಿನ ಸರಳುಗಳನ್ನು ಹಿಡಿದುಕೊಂಡು ರಕ್ಷಿಸುವಂತೆ ಕೂಗಿಕೊಳ್ಳುತ್ತಿರುವ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಪಕ್ಷ ಧೂಳಿಪಟವಾಗಲಿದೆ: ಎಸ್. ಆರ್ ಹಿರೇಮಠ್ ಭವಿಷ್ಯ

    ಬೋನು ಇರಿಸಿದ್ದ ಭಾಗದಲ್ಲಿ ಚಿರತೆ ಓಡಾಡುವುದರ ಬಗ್ಗೆ ಮಾಹಿತಿ ಬಂದಿತ್ತು. ಬೋನು ಇರಿಸುವ ಮೊದಲು ಚಿರತೆಗಾಗಿ ಸ್ವಲ್ಪ ಹುಡುಕಾಟ ನಡೆಸಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈಗ ಚಿರತೆಗಳು ಹಳ್ಳಿ ಹಾಗೂ ನಗರಗಳಿಗೆ ಬರುವುದು ಸಾಮಾನ್ಯವಾಗಿದೆ. ಇತ್ತೀಚೆಗಷ್ಟೇ ಉತ್ತರಪ್ರದೇಶದ ಗಾಜಿಯಾಬಾದ್ (Ghaziabad) ನ್ಯಾಯಾಲಯದ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಬಳಿಕ ಚಿರತೆಯನ್ನು ಸೆರೆಹಿಡಿಯಲಾಗಿತ್ತು. ಇದನ್ನೂ ಓದಿ: ಕೊಲೆ ಆರೋಪಿ ಪತ್ತೆಗೆ ನೆರವಾಯ್ತು ಆ ಒಂದು ಮಿಸ್ಡ್‌ಕಾಲ್!

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k