Tag: UP Election

  • ಮತದಾರರು ತಪ್ಪು ಮಾಡಿದರೆ ಯುಪಿ ಕಾಶ್ಮೀರ, ಕೇರಳವಾಗಬಹುದು: ಯೋಗಿ ಆದಿತ್ಯನಾಥ್

    ಮತದಾರರು ತಪ್ಪು ಮಾಡಿದರೆ ಯುಪಿ ಕಾಶ್ಮೀರ, ಕೇರಳವಾಗಬಹುದು: ಯೋಗಿ ಆದಿತ್ಯನಾಥ್

    ಲಕ್ನೋ: ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಅಥವಾ ಪಶ್ಚಿಮ ಬಂಗಾಳದಂತೆ ಆಗಬಹುದು. ಆದ್ದರಿಂದ ಪ್ರತಿಯೊಬ್ಬರು ಯೋಚಿಸಿ ಮತದಾನ ಮಾಡಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ ಮಾಡಿದರು.

    ಈ ಬಗ್ಗೆ ವೀಡಿಯೋ ಟ್ವೀಟ್ ಮಾಡಿರುವ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಭಯ ಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ. ಕಳೆದ ಐದು ವರ್ಷಗಳ ನನ್ನ ಶ್ರಮಕ್ಕೆ ನಿಮ್ಮ ಮತವೇ ವರದಾನವಾಗಿದೆ. ನಿಮ್ಮ ಮತವೂ ನಿಮ್ಮ ಭಯಮುಕ್ತ ಬದುಕಿಗೆ ಎಂಬುದನ್ನು ನೀವೇ ಖಚಿತ ಪಡಿಸಿಕೊಳ್ಳಿ. ದೊಡ್ಡ ನಿರ್ಧಾರದ ಸಮಯ ಬಂದಿದೆ ಎಂದರು.

    ಕಳೆದ ಐದು ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿ ಪರ ಕೆಲಸಗಳು ನಡೆದಿವೆ. ಮತದಾರರು ಎಚ್ಚರ ತಪ್ಪಿದರೆ ಈ ಐದು ವರ್ಷಗಳ ದುಡಿಮೆ ಹಾಳಾಗುತ್ತದೆ. ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕ್ಷಣ ಮಾತ್ರದಲ್ಲಿ ಉತ್ತರಪ್ರದೇಶವು ಕಾಶ್ಮೀರ, ಕೇರಳ ಮತ್ತು ಬಂಗಾಳವಾಗಲಿದೆ ಎಂದು ವೀಡಿಯೋದಲ್ಲಿ ಹೇಳಿದರು.

    ಕಳೆದ ಐದು ವರ್ಷಗಳಲ್ಲಿ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಸಮರ್ಪಣಾ ಮತ್ತು ಬದ್ಧತೆಯಿಂದ ಎಲ್ಲವನ್ನೂ ಮಾಡಿದೆ. ನೀವು ಎಲ್ಲವನ್ನೂ ನೋಡಿದ್ದೀರಿ ಮತ್ತು ಎಲ್ಲವನ್ನೂ ವಿವರವಾಗಿ ಕೇಳಿದ್ದೀರಿ ಎಂದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

    ಉತ್ತರ ಪ್ರದೇಶ ಚುನಾವಣೆ ಇಂದಿನಿಂದ ಮೊದಲನೇ ಹಂತದ ಮತದಾನ ಪ್ರಾರಂಭವಾಗಿದ್ದು, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಅಧಿಕಾರವನ್ನು ಮುಂದುವರೆಸಲು ಪ್ರಯತ್ನ ನಡೆಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಅವರಿಗೆ ಪ್ರಬಲ ಎದುರಾಳಿ ಪಕ್ಷವಾಗಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

  • ಬ್ರಿಟಿಷರು ಬಿಜೆಪಿ ರೂಪದಲ್ಲಿ ಮತ್ತೆ ಭಾರತಕ್ಕೆ ಬಂದಿದ್ದಾರೆ: ಲಾಲೂ ಪ್ರಸಾದ್ ಯಾದವ್

    ಬ್ರಿಟಿಷರು ಬಿಜೆಪಿ ರೂಪದಲ್ಲಿ ಮತ್ತೆ ಭಾರತಕ್ಕೆ ಬಂದಿದ್ದಾರೆ: ಲಾಲೂ ಪ್ರಸಾದ್ ಯಾದವ್

    ಪಾಟ್ನಾ: 75 ವರ್ಷಗಳ ಹಿಂದೆ ಭಾರತ ಬಿಟ್ಟು ಹೋಗಿದ್ದ ಬ್ರಿಟಿಷರು ಮತ್ತೆ ಬಿಜೆಪಿಯ ರೂಪದಲ್ಲಿ ಬಂದಿದ್ದಾರೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದ ಅವರು, ಭಾರತೀಯ ಜನತಾ ಪಕ್ಷವು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋಲನ್ನು ಅನುಭವಿಸಲಿದೆ ಎಂದು ಭವಿಷ್ಯ ನುಡಿದರು.

    ಬಿಜೆಪಿಯ ಹತಾಶೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋಲುತ್ತದೆ ಎನ್ನುವುದನ್ನು ತೋರಿಸುತ್ತದೆ. ದೇಗುಲಗಳಂತಹ ಸೂಕ್ಷ್ಮ ವಿಷಯದ ಮೇಲೆ ನಡೆದ ಗಲಭೆಗಳು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೇಶವು ಅಂತರ್ಯುದ್ಧದತ್ತ ಸಾಗುತ್ತದೆ ಎನ್ನುವುದನ್ನು ತೋರುತ್ತಿದೆ. ಅವರು ಕೇವಲ ಗಲಭೆ ಮತ್ತು ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮ ಹೇಳಿದಂತೆ ಮೈತುಂಬ ಬಟ್ಟೆ ಹಾಕುವುದು ತಪ್ಪಾ: ರಾಯರೆಡ್ಡಿ ಪ್ರಶ್ನೆ

    ಉತ್ತರ ಪ್ರದೇಶದ ಜನರು ಬಿಜೆಪಿಯ ಪ್ರಚಾರದಿಂದ ಬೇಸತ್ತಿದ್ದಾರೆ. ಪ್ರಧಾನಿ ಮೋದಿಯವರ ಆಡಳಿತದಲ್ಲಿ ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ. ಅವರು ಹಣದುಬ್ಬರ ಮತ್ತು ಬಡತನದ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಅಯೋಧ್ಯೆ ಮತ್ತು ವಾರಣಾಸಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್

    ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಮೊದಲ ಹಂತದ ಪ್ರಚಾರ ಮಂಗಳವಾರ ಸಂಜೆ ಮುಕ್ತಾಯಗೊಂಡಿದೆ.

  • ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

    ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

    ಲಕ್ನೋ: ತಾಪಮಾನ ಕಡಿಮೆ ಆಗುವುದರ ಬಗ್ಗೆ ಖಚಿತವಿಲ್ಲ. ಆದರೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದು ಉದ್ಯೋಗ ನೇಮಕಾತಿಯಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟಾಂಗ್ ನೀಡಿದರು.

    ಇತ್ತೀಚೆಗೆ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ ಕೈರಾನಾದ ತಮಂಚವಾಡಿ ಪಕ್ಷದ ಅಭ್ಯರ್ಥಿ ಬೆದರಿಕೆ ಹಾಕಿದ್ದಾರೆ ಎಂದರೆ ಇನ್ನೂ ಬಿಸಿ ತಣ್ಣಗಿಲ್ಲ ಎಂದರ್ಥ. ಇದು ಮಾರ್ಚ್ 10ರ ನಂತರ ತಣ್ಣಗಾಗಲಿದೆ ಎಂದಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ರೈತರ ಮತ್ತು ಬಡವರ ಕಷ್ಟವನ್ನು ಅರ್ಥಮಾಡಿಕೊಳ್ಳದ ಸರ್ಕಾರ ರಚನೆಯಾದರೆ ಉಳಿದ ಪಕ್ಷಗಳಿಗೆ ಅವರ ಸ್ಥಾನವನ್ನು ತೋರಿಸುತ್ತೇವೆ ಎನ್ನುತ್ತಾರೆ. ಆದರೆ ತಾಪಮಾನ ಕಡಿಮೆ ಆಗುತ್ತದೆಯೋ ಇಲ್ಲವೋ ಎನ್ನುವುದರ ಕುರಿತು ಖಚಿತವಿಲ್ಲ, ಆದರೆ ನಮ್ಮ ಸರ್ಕಾರ ರಚನೆಯಾದರೆ, ಉದ್ಯೋಗ ನೇಮಕಾತಿ ನಡೆಯಲಿದೆ ಎಂದು ಭರವಸೆ ನೀಡಿದರು.

    ಕೇಂದ್ರದ ಉಡಾನ್ ಯೋಜನೆಯನ್ನು ಟೀಕಿಸಿದ ಅವರು, ಡೀಸೆಲ್ ಮತ್ತು ಪೆಟ್ರೋಲ್ ತುಂಬಾ ದುಬಾರಿಯಾಗಿದೆ, ಯುವಕರು ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ

    Akhilesh Yadav

    ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಚುನಾವಣೆ ಇದಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಐದು ವರ್ಷಗಳು ಕಳೆದಿವೆ. ಆದರೆ ಏನು ಅಭಿವೃದ್ಧಿಯಾಗಿಲ್ಲ. ಹವಾಯಿ ಚಪ್ಪಲಿ ಹಾಕಿಕೊಂಡವರು, ಏರೋಪ್ಲೇನ್‍ನಲ್ಲಿ ಕೂರುತ್ತಾರೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ಯಾವಾಗಿನಿಂದ ಡೀಸೆಲ್, ಪೆಟ್ರೋಲ್ ಬೆಲೆ ದುಬಾರಿಯಾಗುತ್ತಿದೆಯೋ ಅಂದಿನಿಂದ ಬಡವರ ಟ್ರ್ಯಾಕ್ಟರ್, ಯುವಕರ ದ್ವಿಚಕ್ರವಾಹನ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ

  • ಲತಾ ಮಂಗೇಶ್ಕರ್ ನಿಧನ- ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ರದ್ದುಪಡಿಸಿದ ಬಿಜೆಪಿ

    ಲತಾ ಮಂಗೇಶ್ಕರ್ ನಿಧನ- ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ರದ್ದುಪಡಿಸಿದ ಬಿಜೆಪಿ

    ಲಕ್ನೋ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನದಿಂದಾಗಿ ಅವರಿಗೆ ಸಂತಾಪ ಸೂಚಿಸಲು ಬಿಜೆಪಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಪ್ರಣಾಳಿಕೆ ಬಿಡುಗಡೆಯನ್ನು ರದ್ದುಗೊಳಿಸಿದೆ.

    ಗಾನ ಕೋಗಿಲೆಯ ನಿಧನಕ್ಕೆ ಸರ್ಕಾರ ಎರಡು ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಿದೆ. ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಲತಾ ಮಂಗೇಶ್ಕರ್ ಅವರ ನಿಧನದಿಂದಾಗಿ ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅವರ ಉಪ ಕೇಶವ್ ಮೌರ್ಯ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ಸ್ವತಂತ್ರ ದೇವ್ ಅವರು ಎರಡು ನಿಮಿಷಗಳ ಮೌನ ಆಚರಿಸಿ, ಪ್ರಣಾಳಿಕೆ ಬಿಡುಗಡೆಯನ್ನು ಮುಂದಕ್ಕೆ ಹಾಕಿದರು.

    ಈ ಬಗ್ಗೆ ಮಾತನಾಡಿದ ಉತ್ತರಪ್ರದೇಶದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು, ಲತಾ ಮಂಗೇಶ್ಕರ್ ಅವರ ನಿಧನದ ಹಿನ್ನೆಲೆಯಲ್ಲಿ ನಾವು ಪಕ್ಷದ ಪ್ರಣಾಳಿಕೆ ಬಿಡುಗಡೆಯನ್ನು ಮುಂದೂಡುತ್ತಿದ್ದೇವೆ. ಅದರ ಬಿಡುಗಡೆಯ ಮುಂದಿನ ದಿನಾಂಕವನ್ನು ನಾವು ನಂತರ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

    ಗೋವಾಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚುವಲ್ ರ‍್ಯಾಲಿ ಸೇರಿದಂತೆ ಬಿಜೆಪಿಯು ತನ್ನ ಇತರ ಕೆಲವು ರಾಜಕೀಯ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ರ ಮೊದಲ ಹಾಡನ್ನು ಸಿನಿಮಾದಿಂದ ತೆಗೆಯಲಾಗಿತ್ತು – ನೀವು ತಿಳಿಯಲೇಬೇಕಾದ 10 ಸಂಗತಿಗಳು ಇಲ್ಲಿವೆ!

    ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಮುಂಬೈನ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನೆಲ್ಲ ಅಗಲಿದ್ದಾರೆ. ಅವ ನಿಧನಕ್ಕೆ ಪಿಎಂ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸಲ್ಲಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನ- ಬಾಲಿವುಡ್‍ ಸಂತಾಪ

  • ಓಡುತ್ತಾ ಬಂದು ನಾಮಪತ್ರ ಸಲ್ಲಿಸಿದ ಕ್ರೀಡಾ ಸಚಿವ – ವೀಡಿಯೋ ವೈರಲ್

    ಓಡುತ್ತಾ ಬಂದು ನಾಮಪತ್ರ ಸಲ್ಲಿಸಿದ ಕ್ರೀಡಾ ಸಚಿವ – ವೀಡಿಯೋ ವೈರಲ್

    ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕ್ರೀಡಾ ಸಚಿವ ಉಪೇಂದ್ರ ತಿವಾರಿ ಅವರು ಓಡಿ ಬಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವೀಡಿಯೋ ವೈರಲ್ ಆಗಿದೆ.

    ಜಿಲ್ಲೆಯ ಫೆಫ್ನಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉತ್ತರಪ್ರದೇಶ ಚುನಾವಣೆಯಲ್ಲಿ ತಿವಾರಿ ಸ್ಪರ್ಧಿಸುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಅವರು ಬಲ್ಲಿಯಾ ಕಲೆಕ್ಟರೇಟ್‍ನಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ತಿವಾರಿ ಕೇಸರಿ ಶಾಲು ಹಾಗೂ ಹಾರವನ್ನು ಧರಿಸಿ ಬಲ್ಲಿಯಾ ಕಲೆಕ್ಟರೇಟ್ ಕಚೇರಿಯ ಮುಖ್ಯ ಗೇಟ್‍ನಿಂದ ನಾಮನಿರ್ದೇಶನ ಸಭಾಂಗಣಕ್ಕೆ ಓಡುತ್ತಿರುವ ದೃಶ್ಯ ವೈರಲ್ ಆಗಿದೆ.

    ಫೆಫ್ನಾ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಫೆ.11 ಕೊನೆಯ ದಿನವಾಗಿದ್ದರೂ ಶುಕ್ರವಾರದ ಗಡುವನ್ನು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ನೀಡಲು ಅವರು ಬಯಸಿದ್ದರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫೆ. 10ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

  • ಯೋಗಿ ಆದಿತ್ಯನಾಥ್‌ರ ಬಳಿಯಿದೆ 1.54 ಕೋಟಿ ಆಸ್ತಿ – 1 ಲಕ್ಷ ಮೌಲ್ಯದ ರಿವಾಲ್ವರ್‌

    ಯೋಗಿ ಆದಿತ್ಯನಾಥ್‌ರ ಬಳಿಯಿದೆ 1.54 ಕೋಟಿ ಆಸ್ತಿ – 1 ಲಕ್ಷ ಮೌಲ್ಯದ ರಿವಾಲ್ವರ್‌

    ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಒಟ್ಟು ಆಸ್ತಿ ಮೌಲ್ಯ 1,54,94,054 ರೂ. ಎಂದು ಘೋಷಿಸಿದ್ದಾರೆ.

    ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶುಕ್ರವಾರ ಗೋರಖ್‍ಪುರ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಆಸ್ತಿ ವಿವರವನ್ನು ನೀಡಿದ್ದು, ಅದರಲ್ಲಿ ಬ್ಯಾಂಕ್ ಖಾತೆಗಳ ಬಾಕಿ ಹಾಗೂ ಸ್ಥಿರ ಠೇವಣಿಗಳನ್ನು ಒಳಗೊಂಡಿದೆ.

    49,000 ಮೌಲ್ಯದ 20 ಗ್ರಾಂ ತೂಕದ ಚಿನ್ನದ ಕಿವಿಯೋಲೆ ಮತ್ತು 20,000 ಮೌಲ್ಯದ 10 ಗ್ರಾಂ ತೂಕದ ರುದ್ರಾಕ್ಷಿ ಹೊಂದಿರುವ ಚಿನ್ನದ ಸರ ಹಾಗೂ 12,000 ಬೆಲೆಯ ಸ್ಮಾರ್ಟ್‍ಫೋನ್ ಅನ್ನು ಹೊಂದಿದ್ದಾರೆ. ಜೊತೆಗೆ ಯೋಗಿ ಆದಿತ್ಯನಾಥ್ ಅವರು ರಿವಾಲ್ವರ್ ಹಾಗೂ ರೈಫಲ್‍ನ್ನು ಹೊಂದಿದ್ದು ಅವುಗಳ ಮೌಲ್ಯಗಳು ಕ್ರಮವಾಗಿ 1,00,000 ಹಾಗೂ 80,000 ಇದೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

    ಒಟ್ಟಾರೆಯಾಗಿ 2016-17ರಲ್ಲಿ 8,40,998 ರೂ. ಗಳಿದ್ದ ಅವರ ಆದಾಯವು 2020-21 ರ 13,20,653ಗಳಷ್ಟು ಹೆಚ್ಚಾಗಿದೆ. ಆದರೆ ಅವರ ಹೆಸರಿನಲ್ಲಿ ಈ ಬಾರಿಯೂ ಯಾವುದೇ ವಾಹನ ನೋಂದಣಿಯಾಗಿಲ್ಲ.

    ಗೋರಖ್‍ಪುರದಿಂದ ಐದು ಬಾರಿ ಸಂಸದರಾಗಿರುವ ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಗಮನಾರ್ಹವಾಗಿದೆ. ಗೋರಖ್‍ಪುರ ನಗರ ಕ್ಷೇತ್ರಕ್ಕೆ ಮಾರ್ಚ್ 3 ರಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಆರನೇ ಹಂತದ ಮತದಾನ ನಡೆಯಲಿದೆ. ಇದನ್ನೂ ಓದಿ: ವಿಧಾನಸಭೆ ಚುನಾವಣಾ ಅಖಾಡಕ್ಕೆ ಯೋಗಿ – ಮೊದಲ ಬಾರಿ ಆದಿತ್ಯನಾಥ್ ನಾಮಪತ್ರ ಸಲ್ಲಿಕೆ

    ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

  • ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ

    ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ

    ಲಕ್ನೋ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದರು. ಬಿಜೆಪಿಗೆ ಸೇರಿದರೆ ಹೇಮಾ ಮಾಲಿನಿಯಾಗಿ ಮಾಡುತ್ತೇನೆ ಎಂದು ಹೇಳಿದ್ದರು ಎಂದು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ(ಆರ್ ಎಲ್‍ಡಿ) ಜಯಂತ್ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದರು.

    ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನನ್ನ ಮೇಲೆ ಯಾವುದೇ ಪ್ರೀತಿಯೂ ಇಲ್ಲ. ನಾನು ಹೇಮಾಮಾಲಿನಿಯಂತೆ ಆಗಲು ಇಷ್ಟಪಡುವುದಿಲ್ಲ ಎಂದ ಅವರು, ನನ್ನನ್ನು ಸಮಾಧಾನಪಡಿಸುವುದರಿಂದ ನೀವು ಏನು ಪಡೆಯುತ್ತೀರಿ? ಜನರಿಗಾಗಿ ನೀವು ಏನು ಮಾಡುದ್ದೀರಿ? ಏಳು ರೈತರ ಕುಟುಂಬಗಳಿಗೆ ಏನು ಮಾಡಿದ್ದೀರಿ? ಅಜಯ್ ಮಿಶ್ರಾ ಇನ್ನೂ ಏಕೆ ಸಚಿವರಾಗಿದ್ದಾರೆ? ಎಂದು ಇದೇ ವೇಳೆ ಪ್ರಶ್ನಿಸಿದರು.

    ಅಕ್ಟೋಬರ್‍ನಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಪ್ರತಿಭಟನೆ ವೇಳೆ ರೈತರ ಮೇಲೆ ಹರಿಹಾಯ್ದ ಆರೋಪದ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಜೈಲು ಸೇರಿದ್ದಾರೆ. ಅವರನ್ನು ಸಚಿವ ವಜಾಗೊಳಿಸಲು ವಿರೋಧ ಪಕ್ಷ ಮುಖಂಡರು ಒತ್ತಾಯಿಸಿದರೂ ಬಿಜೆಪಿ ತಮ್ಮ ಸಂಪುಟದಲ್ಲಿ ಉಳಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

    ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಜೊತೆ ಆರ್‍ಎಲ್‍ಡಿ ಪಕ್ಷ ಮೈತ್ರಿ ಮಾಡಿಕೊಂಡಿದೆ. ಇತ್ತ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದ ಬೆಂಬಲವನ್ನು ಮರಳಿ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಜನವರಿ 26ರಂದು ಜಾಟ್ ನಾಯಕರೊಂದಿಗೆ ಅಮಿತ್ ಶಾ ಸಭೆ ನಡೆಸಿ ಜಯಂತ್ ಚೌಧರಿ ಅವರು ತಪ್ಪು ದಾರಿ ಹಿಡಿದಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ:  ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

    ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 7 ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಘೋಷಣೆಯಾಗಲಿದೆ. ಇದನ್ನೂ ಓದಿ: ಜಯಲಲಿಲಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ – ಪೊಲೀಸರಿಗೆ ಸಂಕಷ್ಟ

  • UP Election: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲಿಲ್ಲ ಅಪರ್ಣಾ ಯಾದವ್ ಹೆಸರು

    UP Election: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲಿಲ್ಲ ಅಪರ್ಣಾ ಯಾದವ್ ಹೆಸರು

    ಲಕ್ನೋ: ಸುದೀರ್ಘ ಚರ್ಚೆಯ ನಂತರ ಬಿಜೆಪಿ ಲಕ್ನೋದ 9 ಸ್ಥಾನಗಳಿಗೆ ಅಭ್ಯರ್ಥಿ ಪಟ್ಟಿಯನ್ನು ಘೋಷಿಸಿದೆ. ಆದರೆ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಹಾಗೂ ಬಿಜೆಪಿ ಸಂಸದ ರೀಟಾ ಬಹುಗುಣ ಜೋಶಿ ಪುತ್ರ ಮಯಾಂಕ್ ಜೋಶಿ ಅವರ ಹೆಸರು ಅಭ್ಯರ್ಥಿ ಪಟ್ಟಿಯಲಿಲ್ಲ.

    ಅಪರ್ಣಾ ಯಾದವ್ ಮತ್ತು ಮಯಾಂಕ್ ಜೋಶಿ ಇಬ್ಬರೂ ಸ್ಪರ್ಧಿಸಲು ಇಚ್ಛಿಸುತ್ತಿದ್ದ ಕ್ಷೇತ್ರವಾದ ಲಕ್ನೋ ಕಂಟೋನ್ಮೆಂಟ್‍ಲ್ಲಿ ರಾಜ್ಯ ಸಚಿವ ಬ್ರಿಜೇಶ್ ಪಾಠಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ಪಕ್ಷಕ್ಕೆ ಸುರಕ್ಷಿತ ಸ್ಥಾನ ಎಂದು ಪರಿಗಣಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ರೀಟಾ ಬಹುಗುಣ ಜೋಶಿ ಅವರು ಅಪರ್ಣಾ ಯಾದವ್ ಅವರನ್ನು ಸೋಲಿಸಿದ್ದರು. ಇದನ್ನೂ ಓದಿ:  Budget 2022: ಬೆಳೆ ರಕ್ಷಣೆಗೆ ಕಿಸಾನ್ ಡ್ರೋನ್ ಬಳಕೆಗೆ ಅಸ್ತು – ಬಜೆಟ್‍ನಲ್ಲಿ ಕೃಷಿ ವಲಯಕ್ಕೆ ದಕ್ಕಿದ್ದೇನು?

    ಇಡಿ ಅಧಿಕಾರಿ ರಾಜೇಶ್ವರ್ ಸಿಂಗ್ ಅವರು ಸ್ವಯಂ ನಿವೃತ್ತಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ್ದು, ಸರೋಜಿನಿ ಅವರಿಗೆ ಬಿಜೆಪಿ ನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಈ ಕ್ಷೇತ್ರದ ಮೇಲೆ ರಾಜ್ಯದ ಮಹಿಳಾ ಕಲ್ಯಾಣ ಖಾತೆ ಸಚಿವೆ ಸ್ವಾತಿ ಸಿಂಗ್ ಮತ್ತು ಅವರ ಪತಿ ದಯಾಶಂಕರ್ ಸಿಂಗ್ ಇಬ್ಬರೂ ಕಣ್ಣಿಟ್ಟಿದ್ದರು.

    ಕಳೆದ ರಾಜ್ಯ ಚುನಾವಣೆಯಲ್ಲಿ ಲಕ್ನೋದ ಒಂಬತ್ತು ಸ್ಥಾನಗಳ ಪೈಕಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿತ್ತು. ರಾಜ್ಯದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: 3ನೇ ಪತಿಗೆ ನಿಷ್ಠೆ ತೋರಿಸಲು 2ನೇ ಪತಿಯಿಂದ ಪಡೆದ ಮಗುವನ್ನು ಸುಟ್ಟು ಹಾಕಿದ್ಳು!

  • ಎಸ್‌ಪಿ ಕಚೇರಿಯಲ್ಲಿ ಕೋವಿಡ್‌ ರೂಲ್ಸ್‌ ಬ್ರೇಕ್‌ – 2,500 ಮಂದಿ ವಿರುದ್ಧ ಎಫ್‌ಐಆರ್‌

    ಎಸ್‌ಪಿ ಕಚೇರಿಯಲ್ಲಿ ಕೋವಿಡ್‌ ರೂಲ್ಸ್‌ ಬ್ರೇಕ್‌ – 2,500 ಮಂದಿ ವಿರುದ್ಧ ಎಫ್‌ಐಆರ್‌

    ಲಕ್ನೋ: ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಉಲ್ಲಂಘಿಸಿದ 2,500 ಅನಾಮಧೇಯ ವ್ಯಕ್ತಿಗಳ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲಾಗಿದೆ.

    ಬಿಜೆಪಿ ಸಚಿವರಾಗಿದ್ದ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ, ಐವರು ಬಿಜೆಪಿ ಶಾಸಕರು ಮತ್ತು ಅಪ್ನಾ ದಳದ ಶಾಸಕರೊಬ್ಬರು ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಎಸ್‌ಪಿಗೆ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ಮಾಲ್‍ಗಳಿಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಹಕ್ಕಿಲ್ಲ: ಕೇರಳ ಹೈಕೋರ್ಟ್

    ಎಸ್‌ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಈ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: 8 ಪ್ರಯಾಣಿಕರ ವಾಹನದಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ

    ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ನಡೆಯಲಿರುವ 5 ರಾಜ್ಯಗಳಲ್ಲಿ ಜ. 15 ರವರೆಗೆ ಸಾರ್ವಜನಿಕ ಮೆರವಣಿಗೆ, ಬಹಿರಂಗ ಸಭೆಯನ್ನು ಚುನಾವಣಾ ಆಯೋಗ ನಿಷೇಧಿಸಿದೆ.