Tag: UP Election

  • 2023ರ ಹೊತ್ತಿಗೆ ರಾಮಮಂದಿರ ಉದ್ಘಾಟನೆಗೆ ಸಿದ್ಧ: ಯೋಗಿ ಆದಿತ್ಯನಾಥ್‌

    2023ರ ಹೊತ್ತಿಗೆ ರಾಮಮಂದಿರ ಉದ್ಘಾಟನೆಗೆ ಸಿದ್ಧ: ಯೋಗಿ ಆದಿತ್ಯನಾಥ್‌

    ಲಕ್ನೋ: ಅಯೋಧ್ಯೆ ರಾಮಮಂದಿರ 2023ರ ವೇಳೆಗೆ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

    ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸ್ಪರ್ಧಿಸಿರುವ ಕರ್ಹಲ್‌ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ್‌, ರಾಮಮಂದಿರವು ಭಾರತದ ರಾಷ್ಟ್ರ ಮಂದಿರವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 1947ರಲ್ಲಿ ಭಾರತ ಹುಟ್ಟಲಿಲ್ಲ: ಪ್ರಧಾನಿ ಮೋದಿ

    ಕೇಂದ್ರ ಮತ್ತು ರಾಜ್ಯದಲ್ಲಿನ ಡಬಲ್‌ ಎಂಜಿನ್‌ ಸರ್ಕಾರಗಳು ಜನರಿಗೆ ಡಬಲ್‌ ಡೋಸ್‌ ಪಡಿತರವನ್ನು ನೀಡುತ್ತಿವೆ. ಆದ್ದರಿಂದ ಮತಗಳು ಸಹ ಬಿಜೆಪಿಗೆ ಬರುತ್ತವೆ ಎಂದಿದ್ದಾರೆ.

    2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಸರ್ಕಾರ ರಾಜ್ಯದಲ್ಲಿ 86 ಲಕ್ಷಕ್ಕೂ ಹೆಚ್ಚು ರೈತರ ಸಾಲ ಮನ್ನಾ ಮಾಡಿದೆ. ನಾವು ರೈತರಿಗೆ ಕೊಳವೆ ಬಾವಿಗಳ ಸೌಲಭ್ಯ ಮತ್ತು ನಿರಂತರ ವಿದ್ಯುತ್‌ ಸರಬರಾಜು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ವಿಶ್ವದ ಸ್ವೀಟೆಸ್ಟ್‌ ಭಯೋತ್ಪಾದಕ: ಅರವಿಂದ್‌ ಕೇಜ್ರಿವಾಲ್‌

    ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಪುನರಾಭಿವೃದ್ಧಿ ಕಾಮಗಾರಿಗಳ ಅನಾವರಣದೊಂದಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಆರಂಭಿಸಿತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಪಕ್ಷವು ತನ್ನ ಪ್ರಮುಖ ಸಾಧನೆಗಳಲ್ಲಿ ಒಂದು ಎಂದು ಪ್ರತಿಪಾದಿಸುತ್ತಿದೆ.

    ಫೆ.10ರಿಂದ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಿದ್ದು, ಏಳು ಹಂತಗಳಲ್ಲಿ ನಡೆಯಲಿದೆ. ಮಾ.10 ರಂದು ಫಲಿತಾಂಶ ಪ್ರಕಟವಾಗಲಿದೆ.

  • ಅಪರಾಧಿ ಹಾಗೂ ಬೆಂಬಲಿಗರ ಬಂಧನ: ಅಖಿಲೇಶ್ ಯಾದವ್

    ಅಪರಾಧಿ ಹಾಗೂ ಬೆಂಬಲಿಗರ ಬಂಧನ: ಅಖಿಲೇಶ್ ಯಾದವ್

    ಲಕ್ನೋ: ಲಖಿಂಪುರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನಿಗೆ ಜಾಮೀನು ನೀಡಿರುವುದನ್ನು ಖಂಡಿಸಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ಅವರು, ತಾವು ಅಧಿಕಾರಕ್ಕೆ ಬಂದರೆ ಅಪರಾಧಿಗಳನ್ನು ಹಾಗೂ ಅಪರಾಧಿಗಳ ರಕ್ಷಕರನ್ನು ಜೈಲಿಗೆ ಕಳಿಸುವುದಾಗಿ ಭರವಸೆ ನೀಡಿದರು.

    ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ರೈತರನ್ನು ತುಳಿದ ಸಚಿವರ ಮಗನಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಸರ್ಕಾರವು ಪ್ರಕರಣದ ತನಿಖೆಯನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಿಲ್ಲ. ಆದರೆ ನಮ್ಮ ಸರ್ಕಾರ ಬಂದಾಗ ರೈತರ ಜೀವವನ್ನು ತೆಗೆದುಕೊಂಡ ಆರೋಪಿಗಳಿಗೆ ಮಾತ್ರವಲ್ಲದೇ ಅವರನ್ನು ರಕ್ಷಿಸಿದವರನ್ನು ಬಂಧಿಸಲಾಗುವುದು. ಜೊತೆ ಪ್ರಕರಣದ ಕುರಿತು ಸರಿಯಾಗಿ ತನಿಖೆ ನಡೆಸಲಾಗುವುದು ಎಂದ ಅವರು, ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಬಯಸುವವರು ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕುವ ಅಗತ್ಯವಿಲ್ಲ ಎಂದು ನುಡಿದರು.

    ನವ ಉತ್ತರಪ್ರದೇಶಕ್ಕೆ ಸಮಾಜವಾದಿ ಪಕ್ಷಕ್ಕೆ ಮತ ಕೇಳಿದ ಅವರು, ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಮಾಡುವುದರ ಜೊತೆಗೆ ಇನ್ನೂ ಕೆಲವು ಪೊಲೀಸ್ ಹುದ್ದೇಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು. ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯಂತೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಈಗಾಗಲೇ ಭರವಸೆ ನೀಡಿರುವ ಅವರು, ಉದ್ಯೋಗ ಪಡೆಯಲು ವಯೋಮಿತಿ ಸಡಿಲಿಸುವ ಭರವಸೆ ನೀಡಿ ನಿರುದ್ಯೋಗಿ ಯುವಕರನ್ನು ಓಲೈಸಲು ಯತ್ನಿಸಿದರು. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ನಾಲ್ವರು ಲಖಿಂಪುರದ ಖೇರಿಯ ಎಂಟು ಜನರ ಸಾವಿಗೆ ಕಾರಣವಾದ ಆರೋಪಿಯಾಗಿದ್ದಾರೆ. ಆಶಿಶ್ ಮಿಶ್ರಾ ಅವರಿಗೆ ಇತ್ತೀಚೆಗೆ ಜಾಮೀನು ನೀಡಲಾಯಿತು ಮತ್ತು ಕಳೆದ ವರ್ಷ ಅಕ್ಟೋಬರ್‍ನಲ್ಲಿ ಅವರನ್ನು ಬಂಧಿಸಿದ ನಂತರ ಲಖಿಂಪುರ ಖೇರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

  • ರೈತರು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ: ಅಮಿತ್ ಶಾ ಭರವಸೆ

    ರೈತರು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ: ಅಮಿತ್ ಶಾ ಭರವಸೆ

    ಲಕ್ನೋ: ಬಿಜೆಪಿ ಪುನಃ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳ ಕಾಲ ರೈತರು ವಿದ್ಯುತ್ ಬಿಲ್‌ನ್ನು ಪಾವತಿಸುವ ಅವಶ್ಯಕತೆಯಿಲ್ಲ ಎಂದು ಗೃಹಸಚಿವ ಅಮಿತ್ ಶಾ ಭರವಸೆ ನೀಡಿದರು.

    ಉತ್ತರಪ್ರದೇಶದ ದಿಬಿಯಾಪುರದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ, ಮಾರ್ಚ್ 18ರಂದು ಉಚಿತ ಗ್ಯಾಸ್ ಸಿಲಿಂಡರ್‌ಗಳು ನಿಮ್ಮ ಮನೆಗೆ ತಲುಪುತ್ತವೆ. ಇಲ್ಲದಿದ್ದರೆ ಮುಂದಿನ ಐದು ವರ್ಷಗಳವರೆಗೆ ರೈತರು ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ ಎಂದರು.

    ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಮೊದಲ ಹಾಗೂ ಎರಡನೇ ಹಂತದ ಚುನಾವಣೆಯಿಂದ ಸಮಾಜವಾದಿ ಪಕ್ಷವನ್ನು ನಿರ್ನಾಮ ಮಾಡಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಯುವಕರಿಗೆ ಉದ್ಯೋಗ, ಬಡವರಿಗೆ 1 ಕೆಜಿ ಉಚಿತ ತುಪ್ಪ: ಅಖಿಲೇಶ್ ಯಾದವ್ ಭರವಸೆ

    ಪಶ್ಚಿಮ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಿಜೆಪಿ ಸರ್ಕಾರ ರಚಿಸಲು ಮುನ್ನುಡಿ ಹಾಕಿದ್ದೇವೆ. ಮೂರನೇ ಹಂತದಲ್ಲಿ ಈ ಬಹುಮತವನ್ನು ಇನ್ನಷ್ಟು ಹೆಚ್ಚಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಈಶಾನ್ಯ ಭಾರತದವರ ಜೀವನ ಶೈಲಿಯ ಮೇಲೆ ಬಿಜೆಪಿ ಹಸ್ತಕ್ಷೇಪ: ಪ್ರಿಯಾಂಕಾ ಗಾಂಧಿ

    ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಎರಡನೇ ಹಂತದ ವಿಧಾನಸಭೆ ಚುನಾವಣೆ ಸೋಮವಾರ ಮುಕ್ತಾಯಗೊಂಡಿದೆ. ಇನ್ನೂ 5 ಹಂತದ ಮತದಾನ ಬಾಕಿಯಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

  • 2ನೇ ಕಿಮ್‌ ಜಾಂಗ್‌ ಬೇಕೇ ಅಂತ ಜನ ಯೋಚಿಸಬೇಕು: ಮೋದಿ ವಿರುದ್ಧ ರೈತ ನಾಯಕ ಆಕ್ರೋಶ

    2ನೇ ಕಿಮ್‌ ಜಾಂಗ್‌ ಬೇಕೇ ಅಂತ ಜನ ಯೋಚಿಸಬೇಕು: ಮೋದಿ ವಿರುದ್ಧ ರೈತ ನಾಯಕ ಆಕ್ರೋಶ

    ಲಕ್ನೋ: ಉತ್ತರ ಪ್ರದೇಶ ಚುನಾವಣೆ ಮಧ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ರೈತ ನಾಯಕ ರಾಕೇಶ್‌ ಟಿಕಾಯತ್‌ ವಾಗ್ದಾಳಿ ನಡೆಸಿದ್ದಾರೆ. ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರ ಆಕ್ರೋಶಕ್ಕೆ ಗುರಿಯಾಗಿದ್ದ ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

    ಜನಸಾಮಾನ್ಯರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಮತ್ತು ಪ್ರಧಾನಿ, ಎರಡನೇ ಕಿಮ್‌ ಜಾಂಗ್‌ ಉನ್‌ (ಉತ್ತರ ಕೊರಿಯಾ ಅಧ್ಯಕ್ಷ) ಆಗಿರಬೇಕೇ ಎಂಬುದನ್ನು ಜನರೇ ತೀರ್ಮಾನಿಸಬೇಕು. ನಮಗೆ ಯಾವುದೇ ರಾಜ್ಯದಲ್ಲಿ ಸರ್ವಾಧಿಕಾರಿ ಸರ್ಕಾರ ಬೇಡ. ನಾವು ಜನರಲ್ಲಿ ಮನವಿ ಮಾಡುತ್ತೇವೆ. ಜನರು ತಮ್ಮ ಮತಗಳನ್ನು ಬುದ್ಧವಂತಿಕೆಯಿಂದ ಬಳಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಬಹುಕೋಟಿ ಮೇವು ಹಗರಣ, ಲಾಲೂ ಪ್ರಸಾದ್ ಯಾದವ್‌ ದೋಷಿ – CBI ಕೋರ್ಟ್‌

    ಮುಜಾಫರ್‌ನಗರದಲ್ಲಿ ಬಿಜೆಪಿ ಧ್ರುವೀಕರಣ ಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಇದು ಹಿಂದೂ-ಮುಸ್ಲಿಂ ಮೆರವಣಿಗೆಗಳ ಕ್ರೀಡಾಂಗಣವಲ್ಲ. ಪಶ್ಚಿಮ ಉತ್ತರ ಪ್ರದೇಶವು ಅಭಿವೃದ್ಧಿಯನ್ನು ಬಯಸುತ್ತದೆ. ಹಿಂದೂ, ಮುಸ್ಲಿಂ, ಜಿನ್ನಾ, ಧರ್ಮದ ಬಗ್ಗೆ ಮಾತನಾಡುವವರು ಮತಗಳನ್ನು ಕಳೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.

    ಮತದಾರರು ರೈತರ ವಿರುದ್ಧ ಅಲ್ಲದವರಿಗೆ ಒಲವು ತೋರುತ್ತಾರೆ ಎಂದು ನಾನು ಭವಿಸುತ್ತೇನೆ. ಹಿಂದೂ ಮತ್ತು ಮುಸ್ಲಿಂ ಮತದಾರರನ್ನು ಧ್ರುವೀಕರಿಸದವರಿಗೆ ಅವರು ಬೆಂಬಲ ನೀಡುತ್ತಾರೆ. ಪಾಕಿಸ್ತಾನ ಮತ್ತು ಜಿನ್ನಾ ಬಗ್ಗೆ ಅಲ್ಲ, ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವವರಿಗೆ ಜನರು ಒಲವು ತೋರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಸೋದರಳಿಯನ ಮಗಳಿಗೆ ಸುಷ್ಮಾ ಸ್ವರಾಜ್‌ ಹೆಸರು ನಾಮಕರಣ

    ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿ ಭಾಗಗಳಲ್ಲಿ ವಿವಿಧ ರೈತ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ವ್ಯಾಪಕ ಪ್ರತಿರೋಧದ ನಡುವೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿತು.

  • ಬಿಜೆಪಿ ಆಡಳಿತದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಸುರಕ್ಷಿತವಾಗಿದ್ದಾರೆ: ಮೋದಿ

    ಬಿಜೆಪಿ ಆಡಳಿತದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಸುರಕ್ಷಿತವಾಗಿದ್ದಾರೆ: ಮೋದಿ

    ಲಕ್ನೋ: ಬಿಜೆಪಿ ಆಡಳಿತದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

    ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಮೋದಿ ಅವರು, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಸುರಕ್ಷಿತವಾಗಿದ್ದಾರೆ. ಆ ಸಮುದಾಯದ ಹೆಣ್ಣು ಮಕ್ಕಳು ಶಾಲೆ ಹಾಗೂ ಕಾಲೇಜುಗಳಿಗೆ ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಮತ್ತೆ ಶಾಸಕನಾದ್ರೆ ಮುಸ್ಲಿಮರು ಟೋಪಿ ತೆಗೆದು ತಿಲಕ ಇಡುವಂತೆ ಮಾಡ್ತೀನಿ: ಬಿಜೆಪಿ ಶಾಸಕ

    ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದ ಅವರು, ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆ ಹೋಗುವಾಗ ಬೀದಿಗಳಲ್ಲಿ ಕಿಡಿಗೇಡಿಗಳಿಂದ ಸಾಕಷ್ಟು ತೊಂದರೆ ಎದುರಿಸುತ್ತಿದ್ದರು. ಆದರೆ ಈಗ ನಮ್ಮ ಸರ್ಕಾರ ಅಪರಾಧಿಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ಹೆಣ್ಣು ಮಕ್ಕಳಲ್ಲಿ ಭದ್ರತೆ ಭಾವ ಮೂಡಿದೆ ಎಂದಿದ್ದಾರೆ.

    ಪ್ರತಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಮೈತ್ರಿ ಪಕ್ಷಗಳನ್ನು ಬದಲಾಯಿಸುತ್ತಿರುವ ಬಗ್ಗೆ ಮಾತನಾಡಿ, ಅವರು ತಮ್ಮ ಮಿತ್ರಪಕ್ಷಗಳನ್ನು ಬದಲಾಯಿಸುತ್ತಲೇ ಇರುವಾಗ ರಾಜ್ಯದ ಜನತೆಗೆ ಹೇಗೆ ಸೇವೆ ಸಲ್ಲಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಎಲ್ಲಾ ಚಿಹ್ನೆಗಳನ್ನು ನಾಶ ಮಾಡ್ತಿದೆ ಬಿಜೆಪಿ: ಹಿಜಬ್‌ ಕುರಿತು ಮುಫ್ತಿ ಪ್ರತಿಕ್ರಿಯೆ

    ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕ ದಳ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಎಸ್‌ಪಿ ಮೈತ್ರಿ ಮಾಡಿಕೊಂಡಿತ್ತು. ಅಂತೆಯೇ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಎಸ್‌ಪಿಯೊಂದಿಗೆ ಮೈತ್ರಿ ಸಾಧಿಸಿತ್ತು.

  • 80% ವರ್ಸಸ್ 20% ಧರ್ಮ ಆಧಾರಿತ ಹೇಳಿಕೆಯಲ್ಲ: ಯೋಗಿ ಆದಿತ್ಯನಾಥ್ ಸ್ಪಷ್ಟನೆ

    80% ವರ್ಸಸ್ 20% ಧರ್ಮ ಆಧಾರಿತ ಹೇಳಿಕೆಯಲ್ಲ: ಯೋಗಿ ಆದಿತ್ಯನಾಥ್ ಸ್ಪಷ್ಟನೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಇಂದು 55 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಈ ಮಧ್ಯೆ ಯೋಗಿ ಆದಿತ್ಯನಾಥ್ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ನೀಡಿದ್ದ 80% ವರ್ಸಸ್ 20% ಹೇಳಿಕೆ ಧರ್ಮ ಆಧರಿತವಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

    ಇಂದು ನ್ಯೂಸ್ ಏಜೆನ್ಸಿ ಎಎನ್‍ಐ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸ್ಪಷ್ಟನೆ ನೀಡಿದರು. 80% ವರ್ಸಸ್ 20% ಧರ್ಮ ಆಧಾರಿತವಾಗಿರಲಿಲ್ಲ, 80% ಬಿಜೆಪಿ ಬೆಂಬಲಿಗರು, 20% ವಿಪಕ್ಷಗಳನ್ನು ಬೆಂಬಲಿಸುವ ಜನರು ಎನ್ನುವ ರಾಜಕೀಯ ಅರ್ಥದಲ್ಲಿ ನಾನು ಮಾತನಾಡಿದ್ದೆ ಎಂದು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದರು.

    80 ಪ್ರತಿಶತ ಜನರು ಎಂದರೆ, ಭದ್ರತೆಗಾಗಿ ಸರ್ಕಾರದ ಕಾರ್ಯಸೂಚಿಯಿಂದ ಸಂತೋಷವಾಗಿರುವವರು. ಸರ್ಕಾರದ ಜನಪರ ಹಾಗೂ ಬಡವರ ಪರ ಕೆಲಸಗಳಿಂದ ಸಂತಸಗೊಂಡವರು. ಅಭಿವೃದ್ಧಿಯನ್ನು ಇಷ್ಟಪಡುವವರು ಮತ್ತು ಗಮನಾರ್ಹ ಬದಲಾವಣೆಯನ್ನು ಅನುಭವಿಸಿದವರು ರಾಜ್ಯ ಸರ್ಕಾರದ ಎಲ್ಲಾ ಉತ್ತಮ ಕಾರ್ಯಗಳನ್ನು ಬೆಂಬಲಿಸುವ ಜನರು ಎಂದರು.  ಇದನ್ನೂ ಓದಿ: ಒಡಹುಟ್ಟಿದವರೇ ಕಾಂಗ್ರೆಸ್‌ ನಾಶ ಮಾಡ್ತಾರೆ, ಚಿಂತಿಸಬೇಡಿ: ಯೋಗಿ ಆದಿತ್ಯನಾಥ್‌

    20%ರಷ್ಟು ಜನರು ಯಾವಾಗಲೂ ವಿರೋಧಿಸಲು ಬಯಸುವವರನ್ನು ಒಳಗೊಂಡಿದೆ. ಅವರು ಮೊದಲು ವಿರೋಧಿಸುತ್ತಿದ್ದರು ಮತ್ತು ಈಗಲೂ ವಿರೋಧಿಸುತ್ತಿದ್ದಾರೆ. ಅವರು ನಕಾರಾತ್ಮಕ ಮನಸ್ಥಿತಿಯನ್ನು ಹೊಂದಿದ್ದಾರೆ. ಮಾಫಿಯಾ ಮತ್ತು ಅಪರಾಧಿಗಳನ್ನು ಬೆಂಬಲಿಸುತ್ತಾರೆ ಎಂದು ವಿವರಿಸಿದರು. ಇದನ್ನೂ ಓದಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ – ಪ್ರಮುಖ ಆರೋಪಿ ಆಶಿಶ್ ಮಿಶ್ರಾ ನಾಳೆ ಬಿಡುಗಡೆ

    ಪಶ್ಚಿಮ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಯೋಗಿ ಆದಿತ್ಯನಾಥ್ 80% ವರ್ಸಸ್ 20% ಹೇಳಿಕೆ ನೀಡಿದ್ದರು. 80% ಹಿಂದೂಗಳು 20% ಅಲ್ಪ ಅಂಖ್ಯಾತರ ನಡುವಿನ ಹೋರಾಟದ ಹೇಳಿಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು. ಜಾಟ್, ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಈ ಪ್ರದೇಶದಲ್ಲಿ ಹಿಂದೂ ಮತಗಳ ಕ್ರೋಢೀಕರಣಕ್ಕೆ ಯೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

  • ಒಡಹುಟ್ಟಿದವರೇ ಕಾಂಗ್ರೆಸ್‌ ನಾಶ ಮಾಡ್ತಾರೆ, ಚಿಂತಿಸಬೇಡಿ: ಯೋಗಿ ಆದಿತ್ಯನಾಥ್‌

    ಒಡಹುಟ್ಟಿದವರೇ ಕಾಂಗ್ರೆಸ್‌ ನಾಶ ಮಾಡ್ತಾರೆ, ಚಿಂತಿಸಬೇಡಿ: ಯೋಗಿ ಆದಿತ್ಯನಾಥ್‌

    ಲಕ್ನೋ: ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ಯೋಗಿ ಆದಿತ್ಯನಾಥ್‌ ಟೀಕಾಪ್ರಹಾರ ನಡೆಸಿದ್ದಾರೆ. ಒಡಹುಟ್ಟಿದವರು ಕಾಂಗ್ರೆಸ್‌ನ್ನು ನಾಶ ಮಾಡುತ್ತಾರೆ, ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿಕೆ ನೀಡಿದ್ದಾರೆ.

    ನಾನು ಉತ್ತರಾಖಂಡಕ್ಕೆ ಹೋಗಿ ಹೇಳಿದ್ದೇನೆ. ಕಾಂಗ್ರೆಸ್‌ ಅನ್ನು ಕೊನೆಗೊಳಿಸಲು ಬೇರೆ ಯಾರೂ ಕೆಲಸ ಮಾಡಬೇಕಾಗಿಲ್ಲ. ಈ ಇಬ್ಬರು ಸಹೋದರರೇ ಅದನ್ನು ಮಾಡುತ್ತಾರೆ. ಉತ್ತರಾಖಂಡದ ಜನತೆಗೆ ಕಾಂಗ್ರೆಸ್‌ ಬೇಡವಾಗಿದೆ ಎಂದು ಯೋಗಿ ಆದಿತ್ಯನಾಥ್‌ ಕುಟುಕಿದ್ದಾರೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಪ್ರಜಾಪ್ರಭುತ್ವದ ಹಬ್ಬ ಮಾಡಿ: ಮೋದಿ

    ಅಸ್ತಿತ್ವ ಕಡಿಮೆ ಇರುವಲ್ಲಿ ಕಾಂಗ್ರೆಸ್‌ನ ಒಡಹುಟ್ಟಿದವರು ಶತಪ್ರಯತ್ನ ನಡೆಸುವುದು ಸಾಕು. ಅದರ ಅದೃಷ್ಟಕ್ಕೆ ಅದನ್ನು ಬಿಟ್ಟುಬಿಡಿ ಎಂದು ಟಾಂಗ್‌ ನೀಡಿದ್ದಾರೆ.

    ರಾಜ್ಯದಲ್ಲಿ 80 ವರ್ಸಸ್‌ 20 ಅಂತರ ಪೈಪೋಟಿ ಇದಾಗಿದೆ ಎಂದು ಯೋಗಿ ಆದಿತ್ಯನಾಥ್‌ ಈಚೆಗೆ ಹೇಳಿಕೆ ನೀಡಿದ್ದರು. ಇಲ್ಲಿ ಹಿಂದೂ-ಮುಸ್ಲಿಂ ಜನಸಂಖ್ಯೆ ಆಧಾರಿತವಾಗಿ ಯೋಗಿ ಅವರು ಚುನಾವಣೆ ಲೆಕ್ಕಾಚಾರ ಮಾಡಿದ್ದಾರೆ ಎಂದು ಚರ್ಚಿಸಲಾಗಿದೆ. ಇದನ್ನೂ ಓದಿ: ಅಗತ್ಯ ಬಿದ್ದರೆ ಬೊಗಳುತ್ತೇನೆ, ಇಲ್ಲವೇ ಕಚ್ಚುತ್ತೇನೆ: ಹರೀಶ್ ರಾವತ್

    ಉತ್ತರ ಪ್ರದೇಶದಲ್ಲಿ ಫೆ.10ರಿಂದ ಚುನಾವಣೆ ಆರಂಭವಾಗಿದ್ದು, 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್‌ 10 ರಂದು ಫಲಿತಾಂಶ ಹೊರಬೀಳಲಿದೆ.

  • ಹಿಜಬ್ ಮುಟ್ಟಲು ಬಂದರೆ ಅವರ ಕೈ ಕತ್ತರಿಸುವೆ: ಎಸ್‌ಪಿ ನಾಯಕಿ ರುಬೀನಾ

    ಹಿಜಬ್ ಮುಟ್ಟಲು ಬಂದರೆ ಅವರ ಕೈ ಕತ್ತರಿಸುವೆ: ಎಸ್‌ಪಿ ನಾಯಕಿ ರುಬೀನಾ

    ಲಕ್ನೋ: ಯಾರೇ ಆದರೂ ಹಿಜಬ್ ಮುಟ್ಟಲು ಬಂದರೆ ಅವರ ಕೈಯನ್ನು ಕತ್ತರಿಸುವುದಾಗಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕಿ ರುಬೀನಾ ಖಾನಮ್ ಎಚ್ಚರಿಸಿದರು.

    ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಬ್ ಧರಿಸಲು ನಿರಾಕರಿಸಿರುವುದನ್ನು ವಿರೋಧಿಸಿದ ಅವರು, ಹೆಣ್ಣುಮಕ್ಕಳ ಘನತೆಯೊಂದಿಗೆ ಆಟ ಆಡಲು ಬಂದರೆ ಅವರು ಝಾನ್ಸಿ ರಾಣಿ, ರಜಿಯಾ ಸುಲ್ತಾನ್‍ರಂತೆ ಹಿಜಬ್ ಮುಟ್ಟಲು ಬಂದ ಕೈಗಳನ್ನು ಕತ್ತರಿಸಲಾಗುವುದು. ಯಾವುದೇ ಸರ್ಕಾರ ಅಧಿಕಾರದಲ್ಲಿ ಇರಲಿ ಮಹಿಳೆಯರನ್ನು ದುರ್ಬಲರು ಎಂದು ಭಾವಿಸಬಾರದು ಎಂದರು.

    ಭಾರತವು ವೈವಿಧ್ಯತೆಯಿಂದ ಕೂಡಿದ ದೇಶವಾಗಿದೆ. ಇಲ್ಲಿ ಒಬ್ಬ ವ್ಯಕ್ತಿಯು ಹಣೆಯ ಮೇಲೆ ತಿಲಕವನ್ನು ಹೊಂದಿದ್ದಾನೆಯೇ ಅಥವಾ ಟೋಪಿ ಧರಿಸಿದ್ದಾರೆಯೇ ಅಥವಾ ಹಿಜಬ್ ಧರಿಸಿದ್ದಾರೆಯೆ ಎನ್ನುವುದು ಮುಖ್ಯವಲ್ಲ. ಎಲ್ಲಾ ಧರ್ಮದವರ ಸಂಪ್ರದಾಯವನ್ನು ಗೌರವಿಸಬೇಕು ಎಂದ ಅವರು, ಘುಂಘಾಟ್ ಮತ್ತು ಹಿಜಬ್ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗಗಳು. ಈ ವಿಷಯಗಳಲ್ಲಿ ರಾಜಕೀಯ ಮಾಡುವ ಮೂಲಕ ವಿವಾದ ಸೃಷ್ಟಿಸುವುದು ಭಯಾನಕವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂವಿಧಾನದ ಆಶಯದಲ್ಲಿ ದೇಶ ಮುನ್ನಡೆಸಲಾಗ್ತಿದೆ, ಷರಿಯಾ ಕಾನೂನಿನಿಂದಲ್ಲ: ಹಿಜಬ್‌ ಕುರಿತು ಯೋಗಿ ಪ್ರತಿಕ್ರಿಯೆ

     

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ 7ಹಂತದಲ್ಲಿ ನಡೆಯಲಿದ್ದು, ಮಾರ್ಚ್ 7ರಂದು ಮುಕ್ತಾಯಗೊಳ್ಳಲಿದೆ. ಮಾರ್ಚ್ 10ರಂದು ಮತಗಳ ಎಣಿಕೆ ನಡೆಯಲಿದೆ. ಈಗಾಗಲೇ ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ಪ್ರಬಲ ಪೈಪೋಟಿಯಲ್ಲಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದಕ್ಕೆ ಸಂಬಂಧಿಸಿ ಈಗಾಗಲೇ ಅನೇಕ ರಾಜಕೀಯ ನಾಯಕರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಣ್‍ಜಿತ್ ಸಿಂಗ್ ಚನ್ನಿ

  • ಸಂವಿಧಾನದ ಆಶಯದಲ್ಲಿ ದೇಶ ಮುನ್ನಡೆಸಲಾಗ್ತಿದೆ, ಷರಿಯಾ ಕಾನೂನಿನಿಂದಲ್ಲ: ಹಿಜಬ್‌ ಕುರಿತು ಯೋಗಿ ಪ್ರತಿಕ್ರಿಯೆ

    ಸಂವಿಧಾನದ ಆಶಯದಲ್ಲಿ ದೇಶ ಮುನ್ನಡೆಸಲಾಗ್ತಿದೆ, ಷರಿಯಾ ಕಾನೂನಿನಿಂದಲ್ಲ: ಹಿಜಬ್‌ ಕುರಿತು ಯೋಗಿ ಪ್ರತಿಕ್ರಿಯೆ

    ಲಕ್ನೋ: ಸಂವಿಧಾನದ ಆಶಯದಲ್ಲಿ ದೇಶವನ್ನು ಮುನ್ನಡೆಸಲಾಗುತ್ತದೆಯೇ ಹೊರತು ಷರಿಯಾ ಕಾನೂನಿನ ರೀತಿಯಲ್ಲಿ ಅಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.

    ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಹಿಜಬ್ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಸಂವಿಧಾನದ ಆಧಾರವಾಗಿ ಮಾಡಬೇಕು. ಪ್ರತಿಯೊಂದು ಸಂಸ್ಥೆಗೂ ವಸ್ತ್ರಸಂಹಿತೆಯನ್ನು ನಡೆಸುವ ಹಕ್ಕಿದೆ. ಆದರೆ ಅದು ಸಂವಿಧಾನದ ಅನ್ವಯ ನಡೆಯಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರ ಕಡ್ಡಾಯವಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಷರಿಯತ್ ನಡೆಸುವ ಯಾವುದೇ ಪ್ರಯತ್ನವು ದೇಶದ ಹಿತಾಸಕ್ತಿಗೆ ಒಳ್ಳೆಯದಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 4 ಬಾರಿ ಕಾರ್ಡಿಯಾಕ್‌ ಅರೆಸ್ಟ್‌ಗೆ ಒಳಗಾಗಿದ್ದ ಮಹಿಳೆ ವೆಂಟಿಲೇಟರ್‌ ಸಪೋರ್ಟ್‌ ಇಲ್ಲದೇ ಸೇಫ್‌!

    ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು 7 ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಈಗಾಗಲೇ ಕೊನೆಗೊಂಡಿದೆ. ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ಪ್ರಬಲ ಪೈಪೋಟಿಯಲ್ಲಿದೆ. ಇದನ್ನೂ ಓದಿ: ಬಿಜೆಪಿ ಸುಳ್ಳುಗಾರರ ಪಕ್ಷ: ಅಖಿಲೇಶ್ ಯಾದವ್

  • ಉತ್ತರಪ್ರದೇಶ ಕೇರಳವಾದರೆ ಧರ್ಮದ ಹೆಸರಲ್ಲಿ ಹತ್ಯೆ ನಡೆಯಲ್ಲ: ಯೋಗಿ ಆದಿತ್ಯನಾಥ್‍ಗೆ ಪಿಣರಾಯಿ ತಿರುಗೇಟು

    ಉತ್ತರಪ್ರದೇಶ ಕೇರಳವಾದರೆ ಧರ್ಮದ ಹೆಸರಲ್ಲಿ ಹತ್ಯೆ ನಡೆಯಲ್ಲ: ಯೋಗಿ ಆದಿತ್ಯನಾಥ್‍ಗೆ ಪಿಣರಾಯಿ ತಿರುಗೇಟು

    ನವದೆಹಲಿ: ಮತದಾರರು ತಪ್ಪು ಮಾಡಿದರೆ ಯುಪಿ ಕಾಶ್ಮೀರ, ಕೇರಳವಾಗಬಹುದು ಎಂದು ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿ ಇತರೆ ಪಕ್ಷದ ಮುಖಂಡರು ಟೀಕಿಸಿದ್ದಾರೆ.

    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಯಪಡುವಂತೆ ಉತ್ತರಪ್ರದೇಶವು ಕೇರಳವಾಗಿ ಬದಲಾದರೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡದ ಸಾಮರಸ್ಯದ ಸಮಾಜವಾಗಿ ಬದಲಾಗುತ್ತದೆ. ಅತ್ಯುತ್ತಮ ಶಿಕ್ಷಣ, ಆರೋಗ್ಯ ಸೇವೆಗಳು, ಸಮಾಜ ಕಲ್ಯಾಣ, ಉತ್ತಮ ಜೀವನಮಟ್ಟ ದೊರೆಯುತ್ತಿದೆ ಎಂದು ತೀರುಗೇಟು ನೀಡಿದರು.

    ಈ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಉತ್ತರಪ್ರದೇಶವು ಕಾಶ್ಮೀರ, ಬಂಗಾಳ ಅಥವಾ ಕೇರಳವಾಗಿ ಬದಲಾಗುತ್ತದೆ ಎಂದು ಮತದಾರರಿಗೆ ಯೋಗಿ ಆದಿತ್ಯನಾಥ್ ಹೇಳುತ್ತಾರೆ. ಇದನ್ನೂ ಓದಿ: ಮತದಾರರು ತಪ್ಪು ಮಾಡಿದರೆ ಯುಪಿ ಕಾಶ್ಮೀರ, ಕೇರಳವಾಗಬಹುದು: ಯೋಗಿ ಆದಿತ್ಯನಾಥ್

    ಇದಕ್ಕೆ ಉತ್ತರಪ್ರದೇಶದ ಜನರು ಅದೃಷ್ಟವಂತರಾಗಿರಬೇಕು. ಕಾಶ್ಮೀರದ ಸೌಂದರ್ಯ, ಬಂಗಾಳದ ಸಂಸ್ಕೃತಿ ಮತ್ತು ಕೇರಳದ ಶಿಕ್ಷಣವು ಈ ಸ್ಥಳಕ್ಕೆ ದೊರೆತರೆ ಅನೇಕ ಅದ್ಭುತಗಳನ್ನು ಮಾಡುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ