Tag: UP Election

  • ಯುಪಿ ಚುನಾವಣೆಯಲ್ಲಿ ಟಿಕೆಟ್ ಮಾರಾಟ ಮಾಡಲಾಗಿದೆ: ಮಸೂದ್ ಅಹ್ಮದ್ ಆರೋಪ

    ಯುಪಿ ಚುನಾವಣೆಯಲ್ಲಿ ಟಿಕೆಟ್ ಮಾರಾಟ ಮಾಡಲಾಗಿದೆ: ಮಸೂದ್ ಅಹ್ಮದ್ ಆರೋಪ

    ಲಕ್ನೋ: ಉತ್ತರ ಪ್ರದೇಶದ ರಾಷ್ಟ್ರೀಯ ಲೋಕದಳ (ಆರ್‌ಎಲ್‍ಡಿ) ಅಧ್ಯಕ್ಷ ಸ್ಥಾನಕ್ಕೆ ಮಸೂದ್ ಅಹ್ಮದ್ ರಾಜೀನಾಮೆ ನೀಡಿದ್ದು, ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು  ಆರೋಪಿಸಿದರು.

    ಈ ಬಗ್ಗೆ ಆರ್‌ಎಲ್‍ಡಿ ಮುಖ್ಯಸ್ಥ ಜಯಂತ್ ಚೌಧರಿಗೆ ಪತ್ರ ಬರೆದಿರುವ ಅವರು, ದಲಿತರು ಹಾಗೂ ಅಲ್ಪ ಸಂಖ್ಯಾತರ ಸಮಸ್ಯೆಗಳನ್ನು ನಿರ್ಲಕ್ಷಿಸುವುದರ ಜೊತೆಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷದ ಟಿಕೆಟ್‍ಗಳನ್ನು ಅನರ್ಹ ಅಭ್ಯರ್ಥಿಗಳಿಗೆ ಮಾರಾಟ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಮೈತ್ರಿ ಪಕ್ಷಗಳಾದ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳ ಪಕ್ಷಗಳು ಈ ವಿಷಯಗಳನ್ನು ನೋಡಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ಅವರು ಭವಿಷ್ಯದಲ್ಲಿ ಉತ್ತರ ಪ್ರದೇಶದಲ್ಲಿ ಸರ್ಕಾರವನ್ನು ರಚಿಸಬಹುದು. ಎಸ್‍ಪಿ-ಆರ್‌ಎಲ್‍ಡಿ ಮೈತ್ರಿಕೂಟದ ಎಲ್ಲಾ ಕಾರ್ಯಕರ್ತರು ಬಿಜೆಪಿ ವಿರುದ್ಧ ಹೋರಾಡುವ ಬದಲು ಸೀಟುಗಳಿಗಾಗಿ ತಮ್ಮತಮ್ಮಲ್ಲೇ ಜಗಳವಾಡುತ್ತಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಒಬ್ಬನನ್ನು ರಕ್ಷಿಸಲು ಹೋಗಿ 6 ಯುವಕರು ನೀರುಪಾಲು – ಮೂವರ ಮೃತದೇಹಕ್ಕಾಗಿ ಹುಡುಕಾಟ

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆರ್‌ಎಲ್‍ಡಿ ಮತ್ತು ಸಮಾಜವಾದಿ ಪಕ್ಷ ಮಿತ್ರಪಕ್ಷಗಳಾಗಿ ಸ್ಪರ್ಧಿಸಿದ್ದವು. ಈ ತಿಂಗಳ ಆರಂಭದಲ್ಲಿ ಪ್ರಕಟವಾದ ಫಲಿತಾಂಶಗಳಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸತತ ಎರಡನೇ ಅವಧಿಗೆ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ. ಇದನ್ನೂ ಓದಿ: 40 ಅಡಿ ಆಳದ ಬಾವಿಗೆ ಬಿದ್ದ ಹೋರಿ – ರಕ್ಷಿಸಲು ಹರಸಾಹಸ ಪಟ್ಟ ಅಗ್ನಿ ಶಾಮಕ ದಳ

  • ಕಡಿಮೆ ಅಂತರದಲ್ಲಿ ಸೋಲು – ಬೂತ್‌ ಮಟ್ಟದಲ್ಲಿ ವಿಶ್ಲೇಷಣೆಗೆ ಮುಂದಾದ ಯುಪಿ ಬಿಜೆಪಿ

    ಕಡಿಮೆ ಅಂತರದಲ್ಲಿ ಸೋಲು – ಬೂತ್‌ ಮಟ್ಟದಲ್ಲಿ ವಿಶ್ಲೇಷಣೆಗೆ ಮುಂದಾದ ಯುಪಿ ಬಿಜೆಪಿ

    ಲಕ್ನೋ: ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಈಗ ಕಡಿಮೆ ಅಂತರದಲ್ಲಿ ಸೋತ ಮತ್ತು ಜಯಗಳಿಸಿದ ಕ್ಷೇತ್ರಗಳನ್ನು ಅಧ್ಯಯನ ಮಾಡಲು ಮುಂದಾಗಿದೆ.

    ಉತ್ತರ ಪ್ರದೇಶ ಸರ್ಕಾರ ರಚನೆ ಮತ್ತು ಎಂಎಲ್‌ಸಿ ಚುನಾವಣೆ ಮುಕ್ತಾಯವಾದ ಬಳಿಕ ಬಿಜೆಪಿ ಸೋಲಿನ ವಿಶ್ಲೇಷಣೆ ನಡೆಸಲಿದೆ.

    2017ರ ಚುನಾವಣೆ ನಡೆದ ಬಳಿಕ ಕಡಿಮೆ ಅಂತರದಲ್ಲಿ ಸೋತ ಮತ್ತು ಗೆದ್ದ ಕ್ಷೇತ್ರಗಳ ಚುನಾವಣೆ ನಡೆಸಿತ್ತು. ಈ ಕ್ಷೇತ್ರಗಳಿಗೆ ವಿಶೇಷ ಗಮನ ನೀಡಲಾಗಿತ್ತು. ಈಗಲೂ ನಾವು ಇದನ್ನು ಮುಂದುವರೆಸುತ್ತೇವೆ ಎಂದು ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ವಿಜಯ್‌ ಬಹದ್ದೂರ್‌ ತಿಳಿಸಿದ್ದಾರೆ.

     

    ಈ ವಿಶ್ಲೇಷಣೆಯಿಂದ ಕಳೆದ ಬಾರಿ ಸೋತಿದ್ದ 72 ಕ್ಷೇತ್ರಗಳ ಪೈಕಿ 26ರಲ್ಲಿ ಜಯಗಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ 18 ಬಿಜೆಪಿ ಅಭ್ಯರ್ಥಿಗಳು 5 ಸಾವಿರ ಮತಗಳ ಅಂತರದಿಂದ ಸೋತಿದ್ದರೆ 6 ಅಭ್ಯರ್ಥಿಗಳು 1 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ: ಒಮರ್ ಅಬ್ದುಲ್ಲಾ

    ಕಾಂಗ್ರೆಸ್‌ ಪಕ್ಷದಂತೆ ರಾಜ್ಯದ ಅಧ್ಯಕ್ಷರ ಮೇಲೆ ಹೊಣೆ ಹೊರಿಸಿ ಅವರಿಂದ ರಾಜೀನಾಮೆ ಪಡೆಯುವುದಿಲ್ಲ. ನಾವು ಬೂತ್‌ ಮಟ್ಟಕ್ಕೆ ಹೋಗಿ ಸೋಲಿಗೆ ಕಾರಣ ಹುಡುಕುತ್ತೇವೆ. ಹಿನ್ನೆಡೆಗೆ ಕಾರಣರದವರನ್ನು ಸೋಲಿಗೆ ಉತ್ತರದಾಯಿಗಳನ್ನಾಗಿ ಮಾಡುತ್ತೇವೆ ಬಳಿಕ ಬದಲಾವಣೆ ಮಾಡಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.

    ಈ ಚುನಾವಣೆಯಲ್ಲಿ ಪೂರ್ವಾಂಚಲ ಭಾಗದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. 2017ರ ಚುನಾವಣೆಯಲ್ಲಿ ಈ ಭಾಗದ 107ರ ಪೈಕಿ 80 ಕ್ಷೇತ್ರಗಳನ್ನು ಬಿಜೆಪಿ ಮತ್ತು ಮಿತ್ರ ಪಕ್ಷಗಳು ಜಯಿಸಿದ್ದವು. ಆದರೆ ಈ ಬಾರಿ ಇದು 63ಕ್ಕೆ ಇಳಿದಿದೆ. ಇದನ್ನೂ ಓದಿ: ಹಳೆಯ ಘಟನೆ ರಿವೀಲ್ – ಬೆಂಗಳೂರಿನಲ್ಲಿ ಕಾಶ್ಮೀರ ಭವನಕ್ಕೆ ಬೆಂಕಿ ಹಚ್ಚಿ ಅಡ್ಡಿ

    ಪೂರ್ವ ಭಾಗದಲ್ಲಿರುವ ಪೂರ್ವಾಂಚಲ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ. ನಾವು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ತೋರಿಸಲು ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯನ್ನು ಬಿಜೆಪಿ ತೋರಿಸಿತ್ತು. ಆದರೆ ಈ ಎಕ್ಸ್‌ಪ್ರೆಸ್‌ವೇ ಸಂಚರಿಸುವ 8 ಜಿಲ್ಲೆಗಳ ಪೈಕಿ 4 ರಲ್ಲಿ ಸಮಾಜವಾದಿ ಪಕ್ಷ ಜಯಗಳಿಸಿದೆ. ಇದು ಬಿಜೆಪಿಗೆ ಭಾರೀ ತಲೆನೋವು ತಂದಿದೆ.

  • ಮೋದಿ ಕ್ರಿಯಾಶೀಲತೆಯ ವ್ಯಕ್ತಿ: ಕಾಂಗ್ರೆಸ್ ನಾಯಕ ಶಶಿ ತರೂರ್

    ಮೋದಿ ಕ್ರಿಯಾಶೀಲತೆಯ ವ್ಯಕ್ತಿ: ಕಾಂಗ್ರೆಸ್ ನಾಯಕ ಶಶಿ ತರೂರ್

    ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಂಡ ಚೈತನ್ಯ ಹಾಗೂ ಕ್ರಿಯಾಶೀಲತೆಯ ವ್ಯಕ್ತಿಯಾಗಿದ್ದಾರೆ. ವಿಶೇಷವಾಗಿ ರಾಜಕೀಯವಾಗಿ ಪ್ರಭಾವಶಾಲಿ ಕೆಲವು ಕೆಲಸಗಳನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಶ್ಲಾಘಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮುಕ್ತಾಯಗೊಂಡ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು. ಬಿಜೆಪಿಯು ಇಷ್ಟು ಅಂತರದಿಂದ ಗೆಲ್ಲುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆದರೆ ಅವರು ಗೆಲುವು ಸಾಧಿಸಿದ್ದಾರೆ ಎಂದರು.

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿದ ಅವರು, ಭಾರತೀಯ ಮತದಾರರು ಅಚ್ಚರಿಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಮುಂದೊಂದು ದಿನ ಬಿಜೆಪಿಯನ್ನು ಅಚ್ಚರಿಗೊಳಿಸುತ್ತಾರೆ. ಆದರೆ ಇಂದು ಜನರು ಬಿಜೆಪಿಗೆ ಬಯಸಿದ್ದನ್ನು ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

    ಪ್ರಧಾನಿ ನರೇಂದ್ರ ಮೋದಿ ಅವರು ಕೋಮು ಮತ್ತು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಶಕ್ತಿಗಳನ್ನು ಸಮಾಜದಲ್ಲಿ ಬಿಚ್ಚಿಟ್ಟಿದ್ದಾರೆ. ಇದು ದುರಾದೃಷ್ಟಕರ ವಿಷಯವಾಗಿದೆ ಎಂದು ಕಿಡಿಕಾರಿದರು.

    ಎಕ್ಸಿಟ್ ಪೋಲ್‍ಗಳು ಹೊರಬರುವವರೆಗೂ ನನ್ನ ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಇರಲಿಲ್ಲ. ಹೆಚ್ಚಿನ ಜನರು ಬಹಳ ನಿಕಟ ಹೋರಾಟವನ್ನು ನಿರೀಕ್ಷಿಸುತ್ತಿದ್ದರು. ಕೆಲವರು ಸಮಾಜವಾದಿ ಪಕ್ಷವು ಮುಂದಿದೆ ಎಂದು ಹೇಳಿದ್ದರು ಎಂದು ಹೇಳಿದರು. ಇದನ್ನೂ ಓದಿ: ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

  • ಯೋಗಿ ಸಿಎಂ ಆಗುವವರೆಗೆ ಗಡ್ಡ ತೆಗಿಯಲ್ಲ ಎಂದು ಶಪಥ ಮಾಡಿದಾತನ ಕಥೆಯಿದು!

    ಯೋಗಿ ಸಿಎಂ ಆಗುವವರೆಗೆ ಗಡ್ಡ ತೆಗಿಯಲ್ಲ ಎಂದು ಶಪಥ ಮಾಡಿದಾತನ ಕಥೆಯಿದು!

    ಲಕ್ನೋ: ಉತ್ತರ ಪ್ರದೇಶದ ಮಾಜಿ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗುವವರೆಗೆ ನಾನು ಗಡ್ಡ, ತಲೆ ಕೂದಲು ತೆಗಿಯಲ್ಲ ಎಂದು ಅಭಿಮಾನಿಯೊಬ್ಬರು ಶಪಥ ಮಾಡಿ ಗೆದ್ದಿರುವ ಪ್ರಸಂಗ ಶಹಜಹಾನ್‍ಪುರದಲ್ಲಿ ನಡೆದಿದೆ.

    ಉತ್ತರಪ್ರದೇಶದ ಶಹಜಹಾನ್‍ಪುರ ಜಿಲ್ಲೆಯ ಸದರ್ ಬಜಾರ್ ಪ್ರದೇಶದ ಮೊಹಲ್ಲಾ ಝಂಡಾ ಕಲಾನ್ ನಿವಾಸಿ ರಾಜಾರಾಂ ಯೋಗಿ ಮುಖ್ಯಮಂತ್ರಿ ಆಗುವವರೆಗೆ ನಾನು ಗಡ್ಡ, ತಲೆ ಕೂದಲನ್ನು ಕತ್ತರಿಸುವುದಿಲ್ಲ ಎಂದು ಶಪಥ ಮಾಡಿರುವವರು. ಇದೀಗ ರಾಜಾರಾಂ ಶಪಥ ಫಲಪ್ರದವಾಗಿದೆ. ಯೋಗಿ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಹೊಸ್ತಿಲ್ಲಲಿದ್ದಾರೆ. ಹಾಗಾಗಿ ರಾಜಾರಾಂ, ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮ ಗಡ್ಡ ಕತ್ತರಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ – 29 ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ

    ರಾಜಾರಾಂ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಶ್ರಮಜೀವಿ. ಯೋಗಿ ಮುಖ್ಯಮಂತ್ರಿಯಾದರೆ ರಾಜ್ಯ ಮತ್ತಷ್ಟು ಅಭಿವೃದ್ಧಿ ಸಾಧಿಸುತ್ತದೆ. ಸರ್ಕಾರ ವಸತಿ, ಪಿಂಚಣಿ ಮತ್ತಿತರ ಸೌಲಭ್ಯ ಕಲ್ಪಿಸಲಿದೆ ಎಂಬ ಭರವಸೆಯನ್ನು ಅವರು ಹೊಂದಿದ್ದಾರೆ. ರಾಜಾರಾಂ ಚಮ್ಮಾರ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಅವರ ಪತ್ನಿ ಮರಣಹೊಂದಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದು, ಅವರಲ್ಲಿ ಹಿರಿಯ ಮಗ ವಿಕಲಚೇತನನಾಗಿದ್ದು, ಆತನಿಗೂ ರಾಜಾರಾಂ ಆಸರೆಯಾಗಿದ್ದಾರೆ.

    ರಾಜಾರಾಂ ಕಿರಿಯ ಮಗ ಪಂಜಾಬ್‍ನಲ್ಲಿ ಉದ್ಯೋಗದಲ್ಲಿದ್ದು, ಆತನ ನೆರವಿನಿಂದಾಗಿ ಕುಟುಂಬ ನಿರ್ವಹಣೆ ಆಗುತ್ತಿದೆ. ಇಷ್ಟೆಲ್ಲ ಕಷ್ಟಗಲಿದ್ದರೂ ಕೂಡ ರಾಜಾರಾಂ ಮಾತ್ರ ಸರ್ಕಾರದ ಯಾವುದೇ ಯೋಜನೆಗಳಿಗೆ ಆಸೆ ಪಟ್ಟವರಲ್ಲ. ಲೋಕ ಹಿತ ಬಯಸುವ ರಾಜಾರಾಂ, ಯೋಗಿ ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ರಾಜ್ಯ ಅಭಿವೃದ್ಧಿ ಹೊಂದುತ್ತದೆ ಬಡವರಿಗೆ ಸಹಾಯ ಆಗುತ್ತದೆ ಎಂಬ ಒಂದೇ ಕಾರಣಕ್ಕೆ ರಾಜಾರಾಂ ಶಪಧ ಮಾಡಿದ್ದರು ಇದೀಗ ಅವರ ಶಪಧ ಈಡೇರಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ ಹೀನಾಯ ಸೋಲು – ಬಿಜೆಪಿಗಿಂತಲೂ, ಕಾಂಗ್ರೆಸ್‍ಗೆ ಡೇಂಜರ್ ಆ ಪಕ್ಷ!

    ರಾಜಾರಾಂ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾದ ಬಳಿಕ ನಾನು ಗಡ್ಡ, ತಲೆ ಕೂದಲಿಗೆ ಕತ್ತರಿ ಹಾಕುತ್ತೇನೆ ಎಂದಿದ್ದರು. ನಂತರ ಮೋದಿ ಎರಡನೇ ಬಾರಿ ಪ್ರಧಾನಿ ಆದ ಸಂದರ್ಭದಲ್ಲಿ ತಮ್ಮ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದರು. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್ ಸೋಲಿನ ಅಸಲಿಯತ್ತು ಬಹಿರಂಗ

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 255 ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿ ಸತತ 2ನೇ ಬಾರಿ ಗದ್ದುಗೆ ಏರಲು ತಯಾರಿ ನಡೆಸುತ್ತಿದೆ. ನಿನ್ನೆ ರಾಜಭವನದಲ್ಲಿ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಭೇಟಿ ಮಾಡಿದ ಯೋಗಿ, ರಾಜೀನಾಮೆ ಪತ್ರ ನೀಡಿದ್ದಾರೆ. ಮೊದಲ ಅವಧಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗಿ, ಈಗ ಹೊಸ ಸಂಪುಟ ರಚಿಸಲು ಮುಂದಾಗಿದ್ದು, ಆದಷ್ಟು ಬೇಗಾ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಪಟ್ಟವೇರಲು ತಯಾರಿಯಲ್ಲಿದ್ದಾರೆ.

  • EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ

    EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ

    ಲಕ್ನೋ: ಉತ್ತರಪ್ರದೇಶದ ವಾರಣಾಸಿಯಲ್ಲಿ ಇವಿಎಂನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಅಖಿಲೇಶ್ ಯಾದವ್ ಅವರ ಆರೋಪದ ನಂತರ ಅಧಿಕಾರಿಯೊಬ್ಬರು ಲೋಪ ಮಾಡಿರುವುದಾಗಿ ಒಪ್ಪಿಕೊಂಡಿರುವ ವೀಡಿಯೋವೊಂದನ್ನು ಅವರ ಸಮಾಜವಾದಿ ಪಕ್ಷದ ನಾಯಕರು ಟ್ವೀಟ್ ಮಾಡಿದ್ದಾರೆ.

    ವಾರಣಾಸಿಯ ಕಮಿಷನರ್ ದೀಪಕ್ ಅಗರ್ವಾಲ್ ಮಾತನಾಡಿ, ನೀವು ಇವಿಎಂಗಳ ಚಲನೆಯ ಪ್ರೋಟೋಕಾಲ್ ಬಗ್ಗೆ ಮಾತನಾಡಿದರೆ, ಪ್ರೋಟೋಕಾಲ್‍ನಲ್ಲಿ ಲೋಪವಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಮತದಾನದಲ್ಲಿ ಬಳಸುವ ಯಂತ್ರಗಳನ್ನು ತೆಗೆದುಕೊಂಡು ಹೋಗುವುದು ಅಸಾಧ್ಯ ಎಂದು ತಿಳಿಸಿದ್ದಾರೆ.

    ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಭದ್ರತಾ ಸಿಬ್ಬಂದಿ ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳು ಇದ್ದರು. ರಾಜಕೀಯ ಪಕ್ಷದ ಕಾರ್ಯಕರ್ತರು ಕಣ್ಣಿಡಲು ಕೇಂದ್ರಗಳ ಹೊರಗೆ ಕುಳಿತುಕೊಳ್ಳಬಹುದು ಎಂದರು. ಇದನ್ನೂ ಓದಿ: ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

    ಈ ಬಗ್ಗೆ ಸಮಾಜವಾದಿ ಪಕ್ಷವು ಟ್ವಿಟ್ಟರ್‌ನಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದು, ಪ್ರೋಟೋಕಾಲ್ ಅನ್ನು ಅನುಸರಿಸಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ – ಮೋದಿಗೆ ಧನ್ಯವಾದ ತಿಳಿಸಿದ ಹಸೀನಾ

    ವಿವಿಧ ಜಿಲ್ಲೆಗಳ ಇವಿಎಂಗಳಲ್ಲಿ ಉಲ್ಲಂಘನೆಯ ಮಾಹಿತಿ ಇದೆ. ಯಾರ ಆದೇಶದ ಮೇರೆಗೆ ಇದು ನಡೆಯುತ್ತಿದೆ?, ಅಧಿಕಾರಿಗಳು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯ ಒತ್ತಡಕ್ಕೆ ಒಳಗಾಗಿದ್ದಾರೆಯೇ? ಇವೆಲ್ಲವನ್ನು ಚುನಾವಣಾ ಆಯೋಗವು ಸ್ಪಷ್ಟಪಡಿಸಬೇಕು ಎಂದು ಸಮಾಜವಾದಿ ಪಕ್ಷ ಒತ್ತಾಯಿಸಿದೆ.

    ನಿನ್ನೆ ಮತ ಎಣಿಕೆ ಕೇಂದ್ರದಿಂದ ಇವಿಎಂ ತೆಗೆದುಕೊಂಡು ಹೋಗಿರುವ ಸಂಬಂಧ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, ವಾರಣಾಸಿಯ ಡಿಎಂ ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಮತಗಟ್ಟೆಗಳಿಂದ ಇವಿಎಂ ಸಾಗಿಸುತ್ತಿದ್ದಾರೆ. ಇದನ್ನು ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು.

  • ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

    ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಎರಡು ದಿನ ಬಾಕಿ ಇರುವಾಗಲೇ ವಾರಣಾಸಿಯ ಮತ ಎಣಿಕೆ ಕೇಂದ್ರದಿಂದ ಇವಿಎಂಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಸಾಗಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಗಂಭೀರ ಆರೋಪ ಮಾಡಿದ್ದಾರೆ.

    ಮತ ಎಣಿಕೆ ಕೇಂದ್ರದಿಂದ ಇವಿಎಂ ತೆಗೆದುಕೊಂಡು ಹೋಗಿರುವ ಸಂಬಂಧ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್‌ ಯಾದವ್‌, ವಾರಣಾಸಿಯ ಡಿಎಂ ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಮತಗಟ್ಟೆಗಳಿಂದ ಇವಿಎಂ ಸಾಗಿಸುತ್ತಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೈಲಾದಷ್ಟು ಹೋರಾಡಿದ್ದೇವೆ, ಫಲಿತಾಂಶವನ್ನು ಕಾದು ನೋಡುತ್ತೇವೆ: ಪ್ರಿಯಾಂಕಾ ಗಾಂಧಿ

    ಇವಿಎಂಗಳನ್ನು ಈ ರೀತಿ ಸಾಗಿಸುತ್ತಿದ್ದರೆ ನಾವು ಎಚ್ಚರದಿಂದಿರಬೇಕು. ಇದು ಕಳ್ಳತನ. ನಮ್ಮ ಮತಗಳನ್ನು ಉಳಿಸಬೇಕು. ನಾವು ಇಂತಹ ಘಟನೆಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ಅದಕ್ಕೂ ಮೊದಲು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಜನರಲ್ಲಿ ಮನವಿ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷ ಗೆಲ್ಲುತ್ತದೆ. ಹೀಗಾಗಿ ಬಿಜೆಪಿಗೆ ಭಯವಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಇವಿಎಂಗಳನ್ನು ಟ್ಯಾಂಪರಿಂಗ್‌ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

    ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲ್ಲುತ್ತದೆ ಎಂಬ ಗ್ರಹಿಕೆಯನ್ನು ಸೃಷ್ಟಿಸಲು ಬಯಸುತ್ತವೆ. ಇದು ಪ್ರಜಾಪ್ರಭುತ್ವದ ಹೋರಾಟವಾಗಿದೆ. ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಇವಿಎಂ ಸಾಗಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ತಮ್ಮ ಶಕ್ತಿಯಿಂದ ಸಮಾಜವನ್ನು ಪರಿವರ್ತಿಸಬಲ್ಲರು: ರಾಹುಲ್

    ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆದಿದೆ. ಮಾ.7ರಂದು ಕೊನೆಯ ಹಂತದ ಮತದಾನ ನಡೆಯಿತು. ಮಾ.10 ರಂದು ಚುನಾವಣೆ ಫಲಿತಾಂಶ ಹೊರಬೀಳಲಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಮಾಜವಾದಿ ಪಕ್ಷ ಪ್ರಬಲ ಎದುರಾಳಿಯಾಗಿದೆ.

  • ಕೆಂಪು ಟೋಪಿ ವಿರುದ್ಧ ಅಪಪ್ರಚಾರ, ಬೇರೆ ಬಣ್ಣದ ಟೋಪಿ ಧರಿಸಲು ಜನರಿಗೆ ಒತ್ತಾಯ: ಅಖಿಲೇಶ್

    ಕೆಂಪು ಟೋಪಿ ವಿರುದ್ಧ ಅಪಪ್ರಚಾರ, ಬೇರೆ ಬಣ್ಣದ ಟೋಪಿ ಧರಿಸಲು ಜನರಿಗೆ ಒತ್ತಾಯ: ಅಖಿಲೇಶ್

    ಲಕ್ನೋ: ಸಮಾಜವಾದಿ ಪಕ್ಷದ ಕೆಂಪು ಟೋಪಿಯನ್ನು ಅವಮಾನಿಸುವವರು ವಿಭಿನ್ನ ಬಣ್ಣದ ಟೋಪಿಯನ್ನು ಜನರಿಗೆ ಧರಿಸಲು ಒತ್ತಾಯಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರಣಾಸಿಯ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಅವರು ಕೇಸರಿ ಟೋಪಿಯನ್ನು ಧರಿಸಿದ್ದನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.

    ನಮ್ಮ ಪಕ್ಷದ ಟೋಪಿಯನ್ನು ಅವಮಾನಿಸಿದವರು ಈಗ ಉತ್ತರಪ್ರದೇಶದ ಜನರಿಗೆ ಬೇರೆ ಟೋಪಿಯನ್ನು ಧರಿಸಲು ಒತ್ತಾಯಿಸುತ್ತಿದ್ದಾರೆ. ಜೊತೆಗೆ ತಮ್ಮ ಟೋಪಿಯ ಬಣ್ಣವನ್ನು ಬದಲಾಯಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಮಾತನಾಡಿ, ಸಮಾಜವಾದಿ ಪಕ್ಷದ ಚಿಹ್ನೆ ಕೆಂಪು ಟೋಪಿಯಾಗಿದೆ. ಕೆಂಪು ಅಪಾಯಕಾರಿ. ಇದರಿಂದಾಗಿ ಎಚ್ಚರಿಕೆಯಿಂದ ಇರಿ ಎಂದು ತಿಳಿಸಿದ್ದರು.

    ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಲಕ್ಕಿ ಯಾದವ್ ಪರವಾಗಿ ಮಲ್ಹಾನಿ ಕ್ಷೇತ್ರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದರು. ಇದು 2022ರ ವಿಧಾನಸಭೆ ಚುನಾವಣೆಗೆ ಕೊನೆಯ ಹಂತದ ಚುನಾವಣಾ ರ‍್ಯಾಲಿಯಾಗಿದೆ. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

    ಶನಿವಾರ ಸಂಜೆ ಉತ್ತರ ಪ್ರದೇಶದಲ್ಲಿ 2 ತಿಂಗಳ ಕಾಲ ನಡೆದ ಪ್ರಚಾರ ಅಂತ್ಯಗೊಂಡಿತು. ಮಾರ್ಚ್ 7ರಂದು ಉತ್ತರಪ್ರದೇಶದಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಬಿಎಸ್ ಯಡಿಯೂರಪ್ಪಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ

  • ನಿಮ್ಮ ಒಂದು ಮತದಿಂದ ಯುಪಿ ದೇಶದ ನಂ.1 ಆರ್ಥಿಕತೆ ರಾಜ್ಯವಾಗುತ್ತೆ: ಯೋಗಿ ಆದಿತ್ಯನಾಥ್‌

    ನಿಮ್ಮ ಒಂದು ಮತದಿಂದ ಯುಪಿ ದೇಶದ ನಂ.1 ಆರ್ಥಿಕತೆ ರಾಜ್ಯವಾಗುತ್ತೆ: ಯೋಗಿ ಆದಿತ್ಯನಾಥ್‌

    ಲಕ್ನೋ: ನಿಮ್ಮ ಒಂದು ಮತವು ಉತ್ತರ ಪ್ರದೇಶ ರಾಜ್ಯವನ್ನು ದೇಶದ ನಂ.1 ಆರ್ಥಿಕತೆ ರಾಜ್ಯವನ್ನಾಗಿಸುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಶಯ ವ್ಯಕ್ತಪಡಿಸಿದ್ದಾರೆ.

    ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಇಂದು 6ನೇ ಹಂತದ ಮತದಾನ ನಡೆಯುತ್ತಿದೆ. ಗೋರಖ್‌ಪುರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಯೋಗಿ ಆದಿತ್ಯನಾಥ್‌ ಮತ ಚಲಾಯಿಸಿದರು. ಇದನ್ನೂ ಓದಿ: 25 ವರ್ಷಗಳಿಂದ ನಾವೇ ಆಹಾರ ನೀಡಿದ ಹಾವು, ಈಗ ನಮ್ಮನ್ನೇ ಕುಕ್ಕುತ್ತಿದೆ: ಉದ್ಧವ್ ಠಾಕ್ರೆ

    ಅಪಾರ ಸಂಖ್ಯೆಯಲ್ಲಿ ಜನತೆ ಮತ ಚಲಾಯಿಸುತ್ತಾರೆ ಎಂಬ ಭರವಸೆ ನನಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ದಾಖಲೆಯ ಮತ್ತು ಬಹುಮತದೊಂದಿಗೆ ಗೆಲುವು ಸಾಧಿಸಲಿದೆ. ನಾವು ಶೇ.80 ಸ್ಥಾನಗಳನ್ನು ಗೆಲ್ಲಲಿದ್ದೇವೆ. ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಿಜೆಪಿಗೆ ಮತ ಹಾಕಿ ಎಂದು ಯೋಗಿ ಆದಿತ್ಯನಾಥ್‌ ಕರೆ ನೀಡಿದ್ದಾರೆ.

    ನಮ್ಮ ಆಡಳಿತಾವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರಗಳ ಬದಲಿಗೆ, ಯುಪಿ ಈಗ ಕ್ಷಿಪಣಿಗಳನ್ನು ತಯಾರಿಸುತ್ತಿದೆ: ಅಮಿತ್ ಶಾ

    ಉತ್ತರ ಪ್ರದೇಶದಲ್ಲಿ ಇಂದು 6ನೇ ಹಂತದ ಮತದಾನ ನಡೆಯುತ್ತಿದೆ. 10 ಜಿಲ್ಲೆಗಳ 57 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನವಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಒಟ್ಟು 676 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

  • ಸ್ಮಾರ್ಟ್‍ಫೋನ್, ಟ್ಯಾಬ್ ವಿತರಿಸಲು ಎಸ್‍ಪಿಯಿಂದ ತಡೆ: ಯೋಗಿ ಕಿಡಿ

    ಸ್ಮಾರ್ಟ್‍ಫೋನ್, ಟ್ಯಾಬ್ ವಿತರಿಸಲು ಎಸ್‍ಪಿಯಿಂದ ತಡೆ: ಯೋಗಿ ಕಿಡಿ

    ಲಕ್ನೋ: ವಿದ್ಯಾರ್ಥಿಗಳಿಗೆ ಸ್ಮಾರ್ಟ್‍ಫೋನ್ ಹಾಗೂ ಟ್ಯಾಬ್‍ಗಳನ್ನು ವಿತರಿಸುವ ಸರ್ಕಾರದ ಯೋಜನೆಗೆ ಸಮಾಜವಾದಿ ಪಕ್ಷ ಅಡ್ಡಿಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದರು.

    ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಬಡವರ ಏಳಿಗೆಯನ್ನು ಬಯಸದ ಸಮಾಜವಾದಿ ಪಕ್ಷ ಟ್ಯಾಬ್ ಮತ್ತು ಸ್ಮಾರ್ಟ್‍ಫೋನ್‍ಗಳನ್ನು ವಿತರಿಸದಂತೆ ಚುನಾವಣಾ ಆಯೋಗಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಕೋರಿದೆ. ಇಂತಹ ಹಸ್ತಕ್ಷೇಪದಿಂದ ಬಿಜೆಪಿಗೆ ಹಿನ್ನಡೆಯಾಗದು. ಬಿಜೆಪಿ ಸರ್ಕಾರವು ಬಡವರ ಪರವಾಗಿದ್ದು, ಬಡವರ ಏಳಿಗೆಗಾಗಿ ಶ್ರಮಿಸುತ್ತದೆ ಎಂದ ಅವರು, ಮಾರ್ಚ್ 10 ರಿಂದ ಯುವಕರಿಗೆ 2 ಕೋಟಿ ಟ್ಯಾಬ್ ಮತ್ತು ಸ್ಮಾರ್ಟ್ ಫೋನ್ ವಿತರಿಸುತ್ತೇವೆ ಎಂದು ಘೋಷಿಸಿದರು.

    ಈ ಹಿಂದೆ ಎಸ್‍ಪಿ ಹಾಗೂ ಬಿಎಸ್‍ಪಿ ಪಕ್ಷಗಳು ಅಧಿಕಾರದಲ್ಲಿದ್ದಾಗ ಜನರಿಗೆ ಭದ್ರತೆಯನ್ನು ನೀಡಲು ವಿಫಲವಾಗಿತ್ತು. ಆದರೆ ಬಿಜೆಪಿಯೂ ಅಧಿಕಾರಕ್ಕೆ ಬಂದ ನಂತರದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕಿ ಜನರಿಗೆ ಸುರಕ್ಷಿತವಾದ ಆಡಳಿತ ನೀಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ: ಯೂರೋಪ್‌ ನಾಯಕರಿಗೆ ಉಕ್ರೇನ್‌ ಅಧ್ಯಕ್ಷ ಕರೆ

    ಬಿಜೆಪಿಯೂ ಪುನಃ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಒಬ್ಬರಿಗೂ ಉದ್ಯೋಗವನ್ನು ನೀಡುತ್ತೇವೆ. ಮುಂದಿನ 5 ವರ್ಷಗಳಲ್ಲಿ ಬಿಜೆಪಿಯೂ ಈ ಯೋಜನೆಯನ್ನು ಸಕಾರಗೊಳಿಸಲು ಶ್ರಮಿಸುತ್ತದೆ. ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ, ಸ್ವಂತ ಉದ್ಯೋಗ ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ಕೇಂದ್ರ ಸಚಿವ ಭಗವಂತ ಖೂಬಾ ವಾಹನದ ಮೇಲೆ ಕಲ್ಲು ತೂರಾಟ

  • ಉದ್ಯೋಗ ನೀಡಲು ಸಮಾಜವಾದಿ ಪಕ್ಷ ಬದ್ಧ : ಅಖಿಲೇಶ್ ಯಾದವ್

    ಉದ್ಯೋಗ ನೀಡಲು ಸಮಾಜವಾದಿ ಪಕ್ಷ ಬದ್ಧ : ಅಖಿಲೇಶ್ ಯಾದವ್

    ಲಕ್ನೋ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಪುನಃ ಉದ್ಯೋಗವನ್ನು ಒದಗಿಸಲು ಬದ್ಧವಾಗಿದೆ ಎಂದು ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಭರವಸೆ ನೀಡಿದರು.

    ಸಿದ್ಧಾರ್ಥನಗರ, ಬಸ್ತಿ ಮತ್ತು ಸಂತ ಕಬೀರ್ ನಗರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಸಮಾಜವಾದ ಪಕ್ಷ ಸರ್ಕಾರ ರಚಿಸಿದರೆ ಪೊಲೀಸ್ ಮತ್ತು ಸೇನೆಯಲ್ಲಿ ನೇಮಕಾತಿ ಹೆಚ್ಚಿಸುವುದರ ಜೊತೆಗೆ 300 ಯೂನಿಟ್ ವಿದ್ಯುತ್‍ನ್ನು ಉಚಿತವಾಗಿ ಪೂರೈಕೆ ಮಾಡಲಾಗುವುದು ಎಂದರು.

    ಯೋಗಿ ಆದಿತ್ಯನಾಥ್ ಅವರ ವಿರುದ್ಧ ಕಿಡಿಕಾರಿದ ಅವರು, ಇತ್ತೀಚೆಗೆ ಬಾಬಾ ಸಿಎಂ ಮುಖ ನೋಡಿದ್ದೀರಾ? ಅವನು ಬೆಚ್ಚಿಬೀಳುತ್ತಿದ್ದಾರೆ. ಹಿಂದೊಮ್ಮೆ ಅವರೇ ಮಧ್ಯಾಹ್ನ 12 ಗಂಟೆಗೆ ಏಳುತ್ತೇನೆ ಎಂದು ಹೇಳಿದ್ದರು. ಅಂದಿನಿಂದ, ನಾವು ಅವರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಕ್ರೇನ್‍ನಿಂದ ಬಂದವರಿಗೆ ಕೋವಿಡ್-19 ರೂಲ್ಸ್ ನಿಂದ ವಿನಾಯಿತಿ

    ಬಿಜೆಪಿಯವರು ಸಾರ್ವಜನಿಕರಿಗೆ ಸುಳ್ಳು ಹೇಳುತ್ತಿದ್ದಾರೆ. ಸಣ್ಣ ನಾಯಕರು ಸಣ್ಣ ಸುಳ್ಳನ್ನು ಹೇಳುತ್ತಾರೆ. ದೊಡ್ಡ ನಾಯಕರು ದೊಡ್ಡ ಸುಳ್ಳನ್ನು ಹೇಳುತ್ತಾರೆ. ಹಾಗೇ ಅವರು ವಿಮಾನಗಳು, ವಿಮಾನ ನಿಲ್ದಾಣಗಳು, ಹಡಗು, ಬಂದರು, ರೈಲು ಹಾಗೂ ರೈಲು ನಿಲ್ದಾಣಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸಿದ ಶಿಮುಲ್