Tag: UP By Election

  • Uttar Pradesh | ಮತದಾರರಿಗೆ ಬೆದರಿಕೆ ಆರೋಪ – 7 ಜನ ಪೊಲೀಸರ ಅಮಾನತು

    Uttar Pradesh | ಮತದಾರರಿಗೆ ಬೆದರಿಕೆ ಆರೋಪ – 7 ಜನ ಪೊಲೀಸರ ಅಮಾನತು

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಉಪಚುನಾವಣೆಯಲ್ಲಿ (UP By Election) ಮತದಾರರ ಗುರುತಿನ ಚೀಟಿ ಪರೀಕ್ಷಿಸಿ ಮತ್ತು ಮತದಾನ ಮಾಡದಂತೆ ತಡೆದ ಆರೋಪದ ಮೇಲೆ 7 ಜನ ಪೊಲೀಸರ (Police) ಅಮಾನತು ಅಮಾನತು ಮಾಡಲಾಗಿದೆ.

    ಉತ್ತರ ಪ್ರದೇಶದ 9 ಸ್ಥಾನಗಳಿಗಾಗಿ ನಡೆದ ಉಪಚುನಾವಣೆಯಲ್ಲಿ ಹಲವು ಸ್ಥಳಗಳಲ್ಲಿ ಪೊಲೀಸರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಈ ಸಂಬಂಧ ದೂರಿನ ಅಡಿ ಚುನಾವಣಾ ಆಯೋಗವು (Election Commission) 7 ಪೊಲೀಸರನ್ನು ಅಮಾನತುಗೊಳಿಸಿದೆ.

    ಸಿಸಾಮಾವ್‌ನಲ್ಲಿ ಇಬ್ಬರು ಇನ್ಸ್‌ಪೆಕ್ಟರ್‌ಗಳಾದ ಅರುಣ್ ಸಿಂಗ್ ಮತ್ತು ರಾಕೇಶ್ ನಾಡರ್ ಅವರನ್ನು ಮತದಾರರೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.

    ಕಾನ್ಪುರದಲ್ಲಿ ಐವರು ಪೊಲೀಸರ ಅಮಾನತು
    ಕಾನ್ಪುರ ಪೊಲೀಸ್ ಕಮಿಷನರ್ ಅಖಿಲ್ ಕುಮಾರ್ ಮಾಹಿತಿ ನೀಡಿ, ಕೆಲವು ಪೊಲೀಸರು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂಬ ಮಾಹಿತಿ ನಮಗೆ ಬಂದಿದೆ. ಈ ಸಂಬಂಧ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಚುನಾವಣೆ ರದ್ದಿಗೆ ಎಸ್‌ಪಿ ಆಗ್ರಹ
    ಇದೇ ವೇಳೆ, ಎಸ್‌ಪಿ ಅಭ್ಯರ್ಥಿ ಹಾಜಿ ರಿಜ್ವಾನ್ ಕೂಡ ಕುಂದರ್ಕಿ ಉಪಚುನಾವಣೆ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ಚುನಾವಣೆ ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.

  • Uttar Pradesh | ಚೀಲದಲ್ಲಿ ದಲಿತ ಮಹಿಳೆಯ ಶವ ಪತ್ತೆ – ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಹತ್ಯೆ ಆರೋಪ

    Uttar Pradesh | ಚೀಲದಲ್ಲಿ ದಲಿತ ಮಹಿಳೆಯ ಶವ ಪತ್ತೆ – ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಹತ್ಯೆ ಆರೋಪ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಕರ್ಹಾಲ್ ಕ್ಷೇತ್ರದಲ್ಲಿ ಗೋಣಿಚೀಲದಲ್ಲಿ 23 ವರ್ಷದ ದಲಿತ ಮಹಿಳೆಯ ಶವ ಪತ್ತೆಯಾಗಿದೆ. ಯುವತಿ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲು ಬಯಸಿದ್ದರಿಂದ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

    ಉಪಚುನಾವಣೆಯಲ್ಲಿ (UP By Election)  ಬಿಜೆಪಿಗೆ (BJP) ಮತ ಹಾಕದಂತೆ ಸ್ಥಳೀಯ ಸಮಾಜವಾದಿ ಪಕ್ಷದ ಕಾರ್ಯಕರ್ತನೊಬ್ಬ ಒತ್ತಡ ಹೇರುತ್ತಿದ್ದ. ಮೂರು ದಿನಗಳ ಹಿಂದೆ ಪ್ರಶಾಂತ್ ಯಾದವ್ ಎಂಬಾತ ತಮ್ಮ ಮನೆಗೆ ಬಂದು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ ಎಂದು ಕೇಳಿದ್ದ. ತಮ್ಮ ಕುಟುಂಬಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಸಿಕ್ಕಿರುವುದರಿಂದ ಬಿಜೆಪಿಗೆ ಮತ ಹಾಕುವುದಾಗಿ ನಮ್ಮ ಕುಟುಂಬ ಉತ್ತರಿಸಿತ್ತು. ನಂತರ ಯಾದವ್ ಬೆದರಿಕೆ ಹಾಕಿದ್ದ ಮತ್ತು ಸಮಾಜವಾದಿ ಪಕ್ಷಕ್ಕೆ ಮತ ಹಾಕುವಂತೆ ಕೇಳಿದ್ದ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.

    ಈ ಸಂಬಂಧ ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಶಾಂತ್ ಯಾದವ್ ಮತ್ತು ಮೋಹನ್ ಕಥೇರಿಯಾ ಎಂಬವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯ ಸಾವಿನ ವಿಚಾರವಾಗಿ ಸಮಾಜವಾದಿ ಪಕ್ಷದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಇನ್ನೂ ರಾಜ್ಯದ 9 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷದ ನಡುವಿನ ಭಾರೀ ಆರೋಪದ ನಡುವೆ ಮಹಿಳೆಯ ಹತ್ಯೆ ನಡೆದಿರುವುದು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.