Tag: Unsuitable Boy

  • ಶಾರುಖ್ ಖಾನ್ ಜೊತೆ ತಮಗೆ ಸಂಬಂಧವಿದೆ ಎಂದಾಗ ತುಂಬಾ ನೋವು ಮಾಡಿಕೊಂಡಿದ್ದರಂತೆ ಕರಣ್ ಜೋಹಾರ್

    ಶಾರುಖ್ ಖಾನ್ ಜೊತೆ ತಮಗೆ ಸಂಬಂಧವಿದೆ ಎಂದಾಗ ತುಂಬಾ ನೋವು ಮಾಡಿಕೊಂಡಿದ್ದರಂತೆ ಕರಣ್ ಜೋಹಾರ್

    ಬಾಲಿವುಡ್ ನಟ ಶಾರುಖ್ ಖಾನ್ ವೃತ್ತಿ ಬದುಕಿನಲ್ಲಿ ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹಾರ್ ಪಾಲು ದೊಡ್ಡದಿದೆ. ಶಾರುಖ್ ಖಾನ್ ನಟನೆಯ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ಇದೇ ಕರಣ್. ಹಾಗಾಗಿ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಹಾಗಾಗಿ ಎಲ್ಲ ಕಡೆಯೂ ಇಬ್ಬರೂ ಓಡಾಡುತ್ತಿದ್ದರು. ಒಟ್ಟೊಟ್ಟಿಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಇಂತಹ ವೇಳೆಯಲ್ಲಿ ಬಾಲಿವುಡ್ ಆಡಿದ ಆ ಮಾತು ಕರಣ್ ಅವರಿಗೆ ತುಂಬಾ ನೋವನ್ನುಂಟು ಮಾಡಿತ್ತಂತೆ.

    ಬಾಲಿವುಡ್ ನಲ್ಲಿ ಡೇಟಿಂಗ್ ಮಾಡುವುದು ಕಾಮನ್ ಎನ್ನುವಂತಾಗಿದೆ. ಆದರೆ, ಹುಡುಗ ಹುಡುಗರ ಜೊತೆಯೇ ಡೇಟಿಂಗ್ ಸ್ವಲ್ಪ ಅರಗಿಸಿಕೊಳ್ಳುವುದು ಮತ್ತು ಒಪ್ಪಿಕೊಳ್ಳುವುದು ಕಷ್ಟ. ಇಂತಹ ವೇಳೆಯಲ್ಲಿ ಶಾರುಖ್ ಖಾನ್ ಜೊತೆ ಕರಣ್ ಜೋಹಾರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತಂತೆ. ಶಾರುಖ್ ಖಾನ್ ಜೊತೆಗೆ ಈ ರೀತಿ ಹೋಲಿಸಿ ಮಾತನಾಡುತ್ತಿರುವುದು ತಮಗೆ ತುಂಬಾ ನೋವು ಮತ್ತು ದುಃಖ ತಂದಿತ್ತು ಎಂದು ಕರಣ್ ಜೋಹಾರ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.  ಇದನ್ನೂ ಓದಿ:ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್

    ಕರಣ್ ಜೋಹಾರ್ ‘ಅನ್ ಸೂಟಬಲ್ ಬಾಯ್’ ಹೆಸರಿನಲ್ಲಿ ಆತ್ಮಚರಿತ್ರೆ ಬರೆದುಕೊಂಡಿದ್ದು, ಈ ಪುಸ್ತಕದಲ್ಲಿ ಅನೇಕ ಸಂಗತಿಗಳನ್ನು ಬರೆದಿದ್ದಾರೆ. ಅಲ್ಲದೇ, ಶಾರುಖ್ ಖಾನ್ ನನ್ನ ತಂದೆ ಸಮಾನರು ಎಂದು ಅವರು ಗೌರವ ಸೂಚಿಸಿದ್ದಾರೆ. ಸಲ್ಲದ ಮಾತುಗಳಿಂದ ಅವರು ಎಷ್ಟೊಂದು ಸಂಕಟಗಳನ್ನು ಅನುಭವಿಸಿದರು ಎನ್ನುವುದನ್ನೂ ಅವರು ಬರೆದಿದ್ದಾರೆ. ಅಲ್ಲಿಗೆ ಶಾರುಖ್ ಖಾನ್ ಜೊತೆಗಿನ ಗಾಸಿಪ್ ಗೆ ತೆರೆ ಎಳೆದಿದ್ದಾರೆ.

    Live Tv