Tag: Unmarried

  • ಅವಿವಾಹಿತರಿಗೆ ಶೀಘ್ರವೇ ಪಿಂಚಣಿ ಜಾರಿಗೆ- ಹರಿಯಾಣ ಸಿಎಂ ಘೋಷಣೆ

    ಅವಿವಾಹಿತರಿಗೆ ಶೀಘ್ರವೇ ಪಿಂಚಣಿ ಜಾರಿಗೆ- ಹರಿಯಾಣ ಸಿಎಂ ಘೋಷಣೆ

    ಚಂಡೀಗಢ: 45 ರಿಂದ 60 ವರ್ಷದೊಳಗಿನ ಅವಿವಾಹಿತರಿಗೆ (Unmarried) ಶೀಘ್ರವೇ ಪಿಂಚಣಿ ಕಾರ್ಯಕ್ರಮವನ್ನು ಪರಿಚಯಿಸಲಾಗುವುದು ಎಂದು ಹರಿಯಾಣದ (Haryana) ಸಿಎಂ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಭಾನುವಾರ ಘೋಷಿಸಿದ್ದಾರೆ.

    ಕರ್ನಾಲ್‌ನ ಕಲಂಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮನೋಹರ್ ಲಾಲ್ ಖಟ್ಟರ್, 60 ವರ್ಷದ ಅವಿವಾಹಿತ ವ್ಯಕ್ತಿಯೊಬ್ಬರ ಪಿಂಚಣಿ (Pension) ಬೇಡಿಕೆಗೆ ಸ್ಪಂದಿಸಿ, ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಒಂದು ತಿಂಗಳೊಳಗೆ ಯೋಜನೆಯ ಬಗ್ಗೆ ಸರ್ಕಾರ ಘೋಷಣೆ ಮಾಡಲಿದೆ ಎಂದು ಭರವಸೆ ನೀಡಿದರು.

    ಮಾತ್ರವಲ್ಲದೇ ಹೆಚ್ಚುವರಿಯಾಗಿ ಮುಂದಿನ 6 ತಿಂಗಳಲ್ಲಿ ರಾಜ್ಯದ ಹಳೆಯ ಪಿಂಚಣಿ ತಿಂಗಳಿಗೆ 3,000 ರೂ.ಗೆ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 20 ಬಾಕ್ಸ್ ಟೊಮೆಟೋ 58 ಸಾವಿರಕ್ಕೆ ಮಾರಾಟ- ರೈತ ಫುಲ್ ಖುಷ್

    ಜಿಲ್ಲೆಯ ಗ್ರಾಮಗಳನ್ನು ಆನ್‌ಲೈನ್ ಜಗತ್ತಿಗೆ ಜೋಡಿಸಲು ಮುಖ್ಯಮಂತ್ರಿಗಳು ಕರ್ನಾಲ್ ಉಪ ಆಯುಕ್ತರಿಗೆ ಸೂಚನೆಗಳನ್ನು ನೀಡಿದರು. ಇಂದು 70 ರಿಂದ 80% ರಷ್ಟು ಕೆಲಸವು ಆನ್‌ಲೈನ್‌ನಲ್ಲಿ ಪೂರ್ಣಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕದ ಉಪಸ್ಥಿತಿಯ ಅಗತ್ಯವಿದೆ. ಕರ್ನಾಲ್ ಪ್ರತಿ ಕುಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಇಂಟರ್ನೆಟ್ ಪಡೆಯುವ ಮೊದಲ ಜಿಲ್ಲೆಯಾಗಿದೆ ಎಂದು ಖಟ್ಟರ್ ಹೇಳಿದರು. ಇದನ್ನೂ ಓದಿ: Odisha Train Tragedy: ದುರಂತಕ್ಕೆ ಸಿಕ್ತು ಅಸಲಿ ಕಾರಣ – ಸುರಕ್ಷತೆಗೆ ಹೊಸ ಟೆಕ್ನಾಲಜಿ ಬಳಸುವ ಪ್ರಯತ್ನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅವಿವಾಹಿತೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

    ಅವಿವಾಹಿತೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

    ನವದೆಹಲಿ: ಒಮ್ಮತದ ಸಂಬಂಧದಿಂದ ಅವಿವಾಹಿತೆ ಗರ್ಭಧರಿಸಿದ್ದರೆ, ಆಕೆ ಇಚ್ಛಿಸಿದರೆ ಗರ್ಭಪಾತಕ್ಕೆ ಅವಕಾಶ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪೊಂದನ್ನು ಹೊರಡಿಸಿದೆ.

    ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು, ಅವಿವಾಹಿತೆ ಪರೀಕ್ಷಿಸಲು ಇಬ್ಬರು ವೈದ್ಯರ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲು ಏಮ್ಸ್‌ ನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಎಂಟಿಪಿ ಕಾಯ್ದೆಯ ಸೆಕ್ಷನ್ 3(2)(ಡಿ) ಅಡಿಯಲ್ಲಿ ಮಂಡಳಿ ರಚಿಸಬೇಕು. ಆಕೆಯ ಜೀವಕ್ಕೆ ಅಪಾಯ ಆಗದಂತೆ ಗರ್ಭಪಾತ ಮಾಡಬೇಕು ಎಂದು ಆದೇಶಿಸಿತು. ಇದನ್ನೂ ಓದಿ: ಆಗಸ್ಟ್ 13 ರಿಂದ 15ರವರೆಗೆ ನಿಮ್ಮ ಮನೆಮುಂದೆ ತ್ರಿವರ್ಣ ಧ್ವಜವನ್ನು ಹಾರಿಸಿ: ಮೋದಿ ಕರೆ

    SUPREME COURT

    ವೈದ್ಯಕೀಯ ಗರ್ಭಪಾತ ಕಾಯ್ದೆಗೆ 2021ರಲ್ಲಿ ತಂದಿರುವ ತಿದ್ದುಪಡಿಯು ಅವಿವಾಹಿತೆಯೂ ಒಳಗೊಳ್ಳುವಂತೆ ಪತಿಗೆ ಬದಲಾಗಿ ʼಪಾರ್ಟ್ನರ್‌ʼ ಎಂಬ ಪದ ಬಳಸಿದೆ ಎಂದು ಪೀಠವು ಹೇಳಿದೆ.

    ಒಮ್ಮತದ ಸಂಬಂಧದಿಂದ ಗರ್ಭಧರಿಸಿದ್ದ 25 ವರ್ಷದ ಅವಿವಾಹಿತೆಯೊಬ್ಬರು ದೆಹಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತನಗೆ ಬೇಡವಾದ 24 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಜು.16 ಅನುಮತಿ ನಿರಾಕರಿಸಿ ಕೋರ್ಟ್‌ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅವಿವಾಹಿತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಇದನ್ನೂ ಓದಿ: ವಿಮಾನದಲ್ಲಿ ಪ್ರಯಾಣಿಸಲು ಬಂದ ಪೋಷಕರಿಗೆ ಸರ್‌ಪ್ರೈಸ್‌ ಕೊಟ್ಟ ಪೈಲಟ್

    ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, 20-24 ವಾರಗಳ ಭ್ರೂಣದ ಗರ್ಭಪಾತಕ್ಕೆ ವಿಧವೆ ಅಥವಾ ವಿಚ್ಛೇದಿತ ಮಹಿಳೆಗೂ ಅನುಮತಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಅನಪೇಕ್ಷಿತ ದೃಷ್ಟಿಕೋನ ಹೊಂದಿದೆ ಎಂದು ಕೋರ್ಟ್‌ ಹೇಳಿತು. ಅಲ್ಲದೇ ಈ ಕಾನೂನು ನಿಯಮಗಳ ವ್ಯಾಖ್ಯಾನ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್ ಜಾರಿ ಮಾಡಿತು.

    Live Tv
    [brid partner=56869869 player=32851 video=960834 autoplay=true]

  • ಸಮ್ಮತಿಯ ಸೆಕ್ಸ್‌ನಿಂದ ಅವಿವಾಹಿತೆ ಗರ್ಭಧಾರಣೆ – 20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ: ಹೈಕೋರ್ಟ್

    ಸಮ್ಮತಿಯ ಸೆಕ್ಸ್‌ನಿಂದ ಅವಿವಾಹಿತೆ ಗರ್ಭಧಾರಣೆ – 20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ: ಹೈಕೋರ್ಟ್

    ನವದೆಹಲಿ: 23 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ 25 ವರ್ಷದ ಅವಿವಾಹಿತ ಯುವತಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.

    ಸಮ್ಮತಿಯ ಸೆಕ್ಸ್‍ನಿಂದ ಗರ್ಭವತಿಯಾಗಿ 20 ವಾರಗಳು ಮೀರಿದ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ. ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಸತೀಶ್ ಚಂದ್ರಶರ್ಮಾ ನೇತೃತ್ವದ ವಿಭಾಗೀಯ ಪೀಠವು, ಒಪ್ಪಿಗೆಯ ಲೈಂಗಿಕ ಸಂಬಂಧದಿಂದ ಮಗುವನ್ನು ಹೆರುವ ಅವಿವಾಹಿತ ಮಹಿಳೆಗೆ ವೈದ್ಯಕೀಯ ಗರ್ಭಪಾತದ ನಿಯಮಗಳ ಪ್ರಕಾರ 20 ವಾರಗಳು ಮೀರಿದ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು(2003 MTP ನಿಯಮಗಳು ಪ್ರಕಾರ) ಅನುಮತಿ ಇಲ್ಲ ಎಂದು ಹೇಳಿದೆ. ಇದನ್ನೂ ಓದಿ: ಬಿಸಾಡಿದ ಮಚ್ಚು ತೋರಿಸುತ್ತೇನೆಂದು ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗೆ ಗುಂಡೇಟು 

    ಅವಿವಾಹಿತ ಮಹಿಳೆಯಾಗಿರುವ ಮತ್ತು ಸಮ್ಮತಿಯಿಂದ ಗರ್ಭ ಧರಿಸಿರುವ ಅರ್ಜಿದಾರರು, ವೈದ್ಯಕೀಯ ಮುಕ್ತಾಯದ ನಿಯಮಗಳು 2003ರ ಅಡಿಯಲ್ಲಿ ಯಾವುದೇ ಷರತ್ತುಗಳನ್ನು ಸ್ಪಷ್ಟವಾಗಿ ಒಳಗೊಂಡಿರುವುದಿಲ್ಲ. ಆದ್ದರಿಂದ, ಸೆಕ್ಷನ್ 3(2)(ಬಿ) ಈ ಪ್ರಕರಣದ ಸತ್ಯಾಸತ್ಯತೆಗಳಿಗೆ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

    ಎಂಟಿಪಿ ನಿಯಮಗಳ 3ಬಿ ಪ್ರಕಾರ 20 ವಾರಗಳ ನಂತರ ಅವಿವಾಹಿತ ಮಹಿಳೆಯ ಗರ್ಭಧಾರಣೆಯನ್ನು ಮುಕ್ತಾಯಗೊಳಿಸಲು ಅನುಮತಿಸುವುದಿಲ್ಲ. ಆದ್ದರಿಂದ, ನ್ಯಾಯಾಲಯವು ಈಗಿರುವ ಶಾಸನವನ್ನು ಮೀರಿ ಹೋಗುವಂತಿಲ್ಲ ಎಂದು ತನ್ನ ಆದೇಶದಲ್ಲಿ ಸೇರಿಸಿದೆ.

    ನ್ಯಾಯಾಲಯವು ಅರ್ಜಿಯನ್ನು ಬಾಕಿ ಉಳಿಸಿಕೊಂಡಿದೆ. ಆಗಸ್ಟ್ 26ರೊಳಗೆ ಅರ್ಜಿಯ ಬಗ್ಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ದೆಹಲಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದೆ.

    ನಿಯಮಗಳ ಪ್ರಕಾರ, ಅತ್ಯಾಚಾರದ ಸಂತ್ರಸ್ತರು, ಅಪ್ರಾಪ್ತ ವಯಸ್ಕರು, ಗರ್ಭಾವಸ್ಥೆಯಲ್ಲಿ ವೈವಾಹಿಕ ಸ್ಥಿತಿ ಬದಲಾದ ಮಹಿಳೆಯರು, ಮಾನಸಿಕ ಅಸ್ವಸ್ಥ ಮಹಿಳೆಯರು ಅಥವಾ ಭ್ರೂಣದ ವಿರೂಪತೆ ಹೊಂದಿರುವ ಮಹಿಳೆಯರು ಮಾತ್ರ 24 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿಸಲಾಗಿದೆ. ಇದನ್ನೂ ಓದಿ:  ಸರ್ಕಾರಿ ನೌಕರರು 2ನೇ ಮದುವೆಯಾಗಲು ಬೇಕು ಇಲಾಖೆ ಅನುಮತಿ – ಇಲ್ಲವಾದ್ರೆ ಸರ್ಕಾರಿ ಸೌಲಭ್ಯವಿಲ್ಲ 

    ಶುಕ್ರವಾರ ಇದೇ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಗರ್ಭಪಾತವು ಮಗುವನ್ನು ಕೊಲ್ಲುವುದಕ್ಕೆ ಸಮಾನವಾಗಿರುತ್ತದೆ. ಮಗುವನ್ನು ಹೆತ್ತು, ದತ್ತು ಸ್ವೀಕಾರಕ್ಕೆ ಬಿಟ್ಟುಕೊಡಬಹುದು ಎಂದು ಪೀಠ ಸೂಚಿಸಿತ್ತು. ಮಗುವನ್ನು ಏಕೆ ಕೊಲ್ಲುತ್ತಿದ್ದೀರಿ? ಮಕ್ಕಳ ದತ್ತು ಪಡೆಯಲು ದೊಡ್ಡ ಸರತಿ ಸಾಲು ಇದೆ. ಮಗುವನ್ನು ಬೆಳೆಸಲು ಮಹಿಳೆಯನ್ನು ಒತ್ತಾಯಿಸುವುದಿಲ್ಲ. ಎಲ್ಲವನ್ನೂ ಸರ್ಕಾರ ಅಥವಾ ಆಸ್ಪತ್ರೆ ನೋಡಿಕೊಳ್ಳುತ್ತದೆ ಎಂದು ಸೂಚಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]