Tag: unmanned fighter aircraft

  • ಚಿತ್ರದುರ್ಗದಲ್ಲಿ ಹಾರಾಡಿದ ಮಾನವರಹಿತ ಯುದ್ಧ ವಿಮಾನ – DRDO ಪರೀಕ್ಷೆ ಯಶಸ್ವಿ

    ಚಿತ್ರದುರ್ಗದಲ್ಲಿ ಹಾರಾಡಿದ ಮಾನವರಹಿತ ಯುದ್ಧ ವಿಮಾನ – DRDO ಪರೀಕ್ಷೆ ಯಶಸ್ವಿ

    ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ ಎಂದು ಶುಕ್ರವಾರ ತಿಳಿಸಿದೆ. ವಿಮಾನ ಹಾರಾಟ ಪರೀಕ್ಷೆಯನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ನಡೆಸಲಾಗಿದ್ದು, ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ.

    ಸಂಪೂರ್ಣ ಸ್ವಾಯತ್ತ ಮೋಡ್‌ನಲ್ಲಿ ಕಾರ್ಯನಿರ್ವಹಿಸುವ ವಿಮಾನ ಟೇಕ್ ಆಫ್, ವೇ ಪಾಯಿಂಟ್ ನ್ಯಾವಿಗೇಷನ್, ಮೃದು ಹಾರಾಟ ಒಳಗೊಂಡಂತೆ ಅತ್ಯುತ್ತಮ ಫಲಿತಾಂಶ ನೀಡಿದೆ. ಮಾನವರಹಿತ ವಿಮಾನ ಹಾರಾಟ ಪರೀಕ್ಷೆ ಭವಿಷ್ಯದ ವಿಮಾನ ತಂತ್ರಜ್ಞಾನ ಅಭಿವೃದ್ಧಿಗೆ ಮೈಲಿಗಲ್ಲಾಗಿದೆ. ಅಲ್ಲದೇ ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯತ್ತದ ಮಹತ್ವದ ಹೆಜ್ಜೆಯಾಗಿದೆ. ಇದನ್ನೂ ಓದಿ: ಮೋದಿ-ರಾಮದಾಸ್ ಇಬ್ರೂ ಬ್ಯಾಚುಲರ್ಸು, ತಬ್ಬಾಡಿದ್ರು: KPCC ವಕ್ತಾರ ಎಂ.ಲಕ್ಷ್ಮಣ್‌ ವ್ಯಂಗ್ಯ

    ಏನಿದರ ವಿಶೇಷತೆ?
    ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್(ಎಡಿಇ) ಡಿಆರ್‌ಡಿಒ ಅಡಿಯಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಿರುವ ಮಾನವ ರಹಿತ ವಿಮಾನ ಸಣ್ಣ ಟರ್ಬೋಫ್ಯಾನ್ ಎಂಜಿನ್‌ನಿಂದ ಚಾಲಿತವಾಗುತ್ತದೆ. ವಿಮಾನದ ಏರ್‌ಫ್ರೇಮ್, ಅಂಡರ್ ಕ್ಯಾರೇಜ್, ಫಲೈಟ್ ಕಂಟ್ರೋಲ್‌ಗಳು ಹಾಗೂ ಏವಿಯಾನಿಕ್ಸ್ ವ್ಯವಸ್ಥೆಗಳನ್ನು ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಇದನ್ನೂ ಓದಿ: ಬೈಲಾ ಪ್ರಕಾರ ಫಿಲ್ಮ್ ಚೇಂಬರ್ ಚುನಾವಣೆ ನಡೆಸದ ಆರೋಪ : ಮಧ್ಯಂತರ ಆದೇಶ

    ಡಿಆರ್‌ಡಿಒ ಸಾಧನೆಗೆ ಅಭಿನಂದನೆ ಸಲ್ಲಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚಿತ್ರದುರ್ಗ ಎಟಿಆರ್‌ನಿಂದ ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಯಶಸ್ವಿ ಚೊಚ್ಚಲ ಹಾರಾಟಕ್ಕಾಗಿ ಅಭಿನಂದನೆಗಳು. ಇದು ಸ್ವಾಯತ್ತ ವಿಮಾನಗಳ ತಯಾರಿಕೆಯ ಕಡೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಮಿಲಿಟರಿ ವ್ಯವಸ್ಥೆಗಳ ವಿಷಯದಲ್ಲಿ ಆತ್ಮನಿರ್ಭರ್ ಭಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

    Live Tv