Tag: Unlock

  • ನಾಳೆಯಿಂದ ಅನ್‍ಲಾಕ್ – ಗಂಟು, ಮೂಟೆ ಹೊತ್ತು ಕುಟುಂಬ ಸಮೇತ ಬೆಂಗಳೂರಿನತ್ತ ಜನ

    ನಾಳೆಯಿಂದ ಅನ್‍ಲಾಕ್ – ಗಂಟು, ಮೂಟೆ ಹೊತ್ತು ಕುಟುಂಬ ಸಮೇತ ಬೆಂಗಳೂರಿನತ್ತ ಜನ

    ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ಲಾಕ್‍ಡೌನ್ ತೆರವು ಹಿನ್ನೆಲೆ ರಾಜ್ಯದ ಗಡಿ ಅತ್ತಿಬೆಲೆ ಮೂಲಕ ಸಾಲು-ಸಾಲು ವಾಹನಗಳ ಮೂಲಕ ಜನರು ಬೆಂಗಳೂರಿನತ್ತ ಬರುತ್ತಿದ್ದಾರೆ.

    ನಾಳೆಯಿಂದ ಅನ್‍ಲಾಕ್ ಆಗಿರುವುದರಿಂದ ವಲಸೆ ಹೋಗಿದ್ದ ಕಾರ್ಮಿಕರು ಕರ್ನಾಟಕ- ತಮಿಳುನಾಡು ಗಡಿ ಅತ್ತಿಬೆಲೆಯಲ್ಲಿ ವಾಹನಗಳ ಮೂಲಕ ಮತ್ತೆ ಮರಳಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಜನರು ಕಾರುಗಳಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ತಮ್ಮ ಕುಟುಂಬ ಸಮೇತರಾಗಿ ಲಗೇಜುಗಳೊಂದಿಗೆ ಒಂದುವರೆ ತಿಂಗಳ ಬಳಿಕ ತಮ್ಮ ನಿವಾಸಗಳಿಗೆ ಆಗಮಿಸುತ್ತಿದ್ದಾರೆ.

    ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಪೇದೆಯೊಬ್ಬರು ಹಾಗೂ ನಾಲ್ಕು ಜನ ಹೋಂ ಗಾರ್ಡ್‍ಗಳು, ಶಿಕ್ಷಕರು ಬೆಂಗಳೂರಿಗೆ ಬರುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಇದನ್ನು ಹೊರತುಪಡಿಸಿ ಚೆಕ್ ಪೋಸ್ಟ್ ಗೆ ನೇಮಕ ಮಾಡಿದ್ದ ರೆವಿನ್ಯೂ ಇಲಾಖೆ ಅಧಿಕಾರಿಗಳು ಸೇರಿದಂತೆ ಕೆಲ ಇಲಾಖೆಯ ಅಧಿಕಾರಿಗಳು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ, ಡ್ಯೂಟಿ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.  ಇದನ್ನೂ ಓದಿ: ನಾಳೆಯಿಂದ ದೆಹಲಿಯಲ್ಲಿ ಅನ್‍ಲಾಕ್ – ಹೋಟೆಲ್‍ಗಳಲ್ಲಿ ಶೇ.50, ಮಾಲ್ ಫುಲ್ ಓಪನ್

    ಬೆಳಗ್ಗೆಯಿಂದ ಸಂಜೆಯವರೆಗೂ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಸರಿಯಾದ ಮಾರ್ಗಸೂಚಿ ನೀಡದ ಹಾಗೂ ಬೆರಳೆಣಿಕೆಯಷ್ಟು ಸಿಬ್ಬಂದಿಗಳ ನಿಯೋಜನೆಯಿಂದ ಯಾವುದೇ ಕಟ್ಟುನಿಟ್ಟಿನ ತಪಾಸಣೆ ಮಾಡದೇ ಇರುವುದು ಕಂಡು ಬಂತು. ಒಟ್ಟಿನಲ್ಲಿ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಬೆಂಗಳೂರು ತೊರೆದಿದ್ದ ವಲಸೆ ಕಾರ್ಮಿಕರು ಮತ್ತೆ ಬೆಂಗಳೂರಿನತ್ತ ಮರಳಿ ಮುಖ ಮಾಡಿದ್ದು, ಮತ್ತಷ್ಟು ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಪ್ರಯತ್ನ- ಹುಬ್ಬಳ್ಳಿಯಲ್ಲಿ 2 ರೂ.ಗೆ ಸಿಗುತ್ತೆ ಸರ್ಜಿಕಲ್ ಮಾಸ್ಕ್!

  • ನಾಳೆಯಿಂದ ದೆಹಲಿಯಲ್ಲಿ ಅನ್‍ಲಾಕ್ – ಹೋಟೆಲ್‍ಗಳಲ್ಲಿ ಶೇ.50, ಮಾಲ್ ಫುಲ್ ಓಪನ್

    ನಾಳೆಯಿಂದ ದೆಹಲಿಯಲ್ಲಿ ಅನ್‍ಲಾಕ್ – ಹೋಟೆಲ್‍ಗಳಲ್ಲಿ ಶೇ.50, ಮಾಲ್ ಫುಲ್ ಓಪನ್

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ದೆಹಲಿ ಲಾಕ್‍ಡೌನ್ ನಿರ್ಬಂಧವನ್ನು ತೆರವುಗೊಳಿಸಿ ಮತ್ತೆ ಸಹಜ ರೀತಿಯಲ್ಲಿ ಎಲ್ಲವನ್ನೂ ಪುನಾರಂಭಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

    ನಾಳೆಯಿಂದ ಅಂಗಡಿಗಳು, ಮಾರುಕಟ್ಟೆ ಮತ್ತು ಮಾಲ್‍ಗಳನ್ನು ಸಂಪೂರ್ಣವಾಗಿ ತೆರೆಯಬಹುದಾಗಿದೆ. ಅಲ್ಲದೇ ಹೋಟೆಲ್‍ಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಅನುಮತಿ ಸಿಕ್ಕಿದೆ.

    ನಾಳೆ ಬೆಳಗ್ಗೆ 5 ಗಂಟೆಯ ನಂತರ ಕೆಲವು ಚಟುವಟಿಕೆಗಳಿಗೆ ನಿಯಮಗಳ ಅನುಸಾರವಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದು, ಉಳಿದ ಚಟುವಟಿಕೆಗಳನ್ನು ನಿಷೇಧಿಸಿರುವುದಾಗಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

    ಮಾರುಕಟ್ಟೆ ಮತ್ತು ಮಾಲ್‍ಗಳನ್ನು ಒಂದು ವಾರ ಸಂಪೂರ್ಣವಾಗಿ ತೆರೆದು ನಂತರ ಪರಿಶೀಲಿಸಿ, ಕೊರೊನಾ ಪ್ರಕರಣಗಳು ಹೆಚ್ಚಾದರೆ ಈ ಹಿಂದೆ ಇದ್ದ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುತ್ತೇವೆ. ಕಡಿಮೆ ಪ್ರಕರಣ ದಾಖಲಾದರೆ ಈ ಅನ್‍ಲಾಕ್ ನಿಯಮಗಳೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ಸೋನು ಸೂದ್

  • ಅನ್‍ಲಾಕ್‍ಗೂ ಮೊದಲೇ ಕೋವಿಡ್ ನಿಯಮ ಉಲ್ಲಂಘನೆ- ಸೋಂಕು ಹರಡುವ ಭೀತಿ

    ಅನ್‍ಲಾಕ್‍ಗೂ ಮೊದಲೇ ಕೋವಿಡ್ ನಿಯಮ ಉಲ್ಲಂಘನೆ- ಸೋಂಕು ಹರಡುವ ಭೀತಿ

    ಬೀದರ್: ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 19 ಜಿಲ್ಲೆಗಳನ್ನು ಅನ್‍ಲಾಕ್ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಆದರೆ ಅನ್‍ಲಾಕ್‍ಗೂ ಮೊದಲೇ ಕೊರೊನಾ ನಿಯಮ ಉಲ್ಲಂಘನೆಯಾಗುತ್ತಿದೆ.

    ಗಡಿ ಜಿಲ್ಲೆ ಬೀದರ್‌ನಲ್ಲಿ ಜನರು ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿ ತೂರಿ ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿದ್ದಾರೆ. ನಗರದ ಗಾಂಧಿಗಂಜ್‍ನ ದಿನಸಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾಡಲು ಜನ ಮುಗಿ ಬಿದ್ದಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕಿಕೊಳ್ಳದೆ ಸಂಪೂರ್ಣವಾಗಿ ಕೊವೀಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾ ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಅನ್‍ಲಾಕ್‍ನಿಂದ ಸೋಂಕು ಹೆಚ್ಚಳ ಆದ್ರೆ ಕಠಿಣ ಕ್ರಮ: ಸುಧಾಕರ್

    ಜೂನ್ 14 ರ ಬಳಿಕ ಕೊರೊನಾ ಸೋಂಕು ಅತಿ ಕಡಿಮೆಯಾಗುತ್ತಿರುವ ಗಡಿ ಜಿಲ್ಲೆ ಬೀದರ್‌ನಲ್ಲೂ ರಾಜ್ಯ ಸರ್ಕಾರ ಅನ್‍ಲಾಕ್ ಮಾಡಲು ಮುಂದಾಗಿದೆ. ಈ ಸಮಯದಲ್ಲಿ ಕೊವೀಡ್ ನಿಯಮಗಳ ಉಲ್ಲಂಘನೆ ಮಾಡುತ್ತಿರುವುದು ಬೀದರ್‍ಗೆ ಕಂಟಕವಾಗುವುದು ಪಕ್ಕಾ ಎನ್ನಲಾಗುತ್ತಿದೆ. ಇದನ್ನೂ ಓದಿ: ರೋಮಾಂಚನಕಾರಿ ಕಾರ್ಯಾಚರಣೆ ನಡೆಸಿ ಹಾಸನದಲ್ಲಿ ಪುಂಡಾನೆಗಳ ಸೆರೆ

    ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಕೆಯ ಹಾದಿ ಮುಂದುವರೆದಿದ್ದು, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯಾವಾದ 24 ಗಂಟೆಗಳ ಅವಧಿಯಲ್ಲಿ 91,702 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3,403 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,92,74,823ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,63,079ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,21,671ಕ್ಕೆ ಇಳಿಕೆಯಾಗಿದೆ.

  • ಅನ್‍ಲಾಕ್‍ನಿಂದ ಸೋಂಕು ಹೆಚ್ಚಳ ಆದ್ರೆ ಕಠಿಣ ಕ್ರಮ: ಸುಧಾಕರ್

    ಅನ್‍ಲಾಕ್‍ನಿಂದ ಸೋಂಕು ಹೆಚ್ಚಳ ಆದ್ರೆ ಕಠಿಣ ಕ್ರಮ: ಸುಧಾಕರ್

    ಬೆಂಗಳೂರು: ಸೋಮವಾರದಿಂದ ಕೆಲ ಜಿಲ್ಲೆಗಳು ಹಾಗೂ ಕೆಲ ವಲಯಗಳಿಗೆ ಅನ್ ಲಾಕ್ ಘೋಷಣೆ ಮಾಡಿರುವ ಸರ್ಕಾರ ಒಂದು ವೇಳೆ ಅನ್ ಲಾಕ್ ನಿಂದ ಸೋಂಕು ಹೆಚ್ಚಳ ಆದ್ರೆ ಮತ್ತೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಅಂತ ಎಚ್ಚರಿಕೆ ಕೊಟ್ಟಿದೆ. ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ರಾಜ್ಯದಲ್ಲಿ ಅನ್ ಲಾಕ್ ನಿಂದ ಸೋಂಕು ಹೆಚ್ಚಾದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳೋದು ಅನಿವಾರ್ಯ ಅಂತ ಎಚ್ಚರಿಕೆ ನೀಡಿದ್ದಾರೆ.

    ಅನ್ ಲಾಕ್ ಮಾಡಿದರು ಜನರು ಎಚ್ಚರಿಕೆಯಿಂದ ಇರಬೇಕು. ಎರಡು ಡೋಸ್ ಲಸಿಕೆ ಪಡೆಯೋವರೆಗೂ ಜನ ಎಚ್ಚರವಾಗಿ ಇರಬೇಕು. ರಾಜ್ಯದಲ್ಲಿ ಕನಿಷ್ಟ ಶೇ.70 ಜನರಿಗೆ ಲಸಿಕೆ ಕಂಪ್ಲೀಟ್ ಆದ ಮೇಲೆ ನಾವು ಮೊದಲಿನಂತೆ ಆರಾಮಾಗಿ ಇರಬಹುದು. ಲಸಿಕೆ ಹಾಕಿಸಿಕೊಳ್ಳೋವರೆಗೂ ಯಾರೂ ಮೈ ಮರೆಯಬೇಡಿ ಅಂತ ಮನವಿ ಮಾಡಿದ್ರು.

    ರಾಜ್ಯದಲ್ಲಿ ಆರ್ಥಿಕ ನಷ್ಟ ಆಗಿದೆ. ಹೀಗಾಗಿ ಕೆಲ ವಿನಾಯ್ತಿ ಕೊಡಲಾಗಿದೆ. ಅಳೆದು ತೂಗಿ ನಿರ್ಧಾರ ಮಾಡಿದ್ದೇವೆ. ಒಂದು ವೇಳೆ ರಿಯಾಯ್ತಿಯಿಂದ ಸೋಂಕು ಹೆಚ್ಚಳ ಆದ್ರೆ ಮತ್ತೆ ಕಠಿಣ ಕ್ರಮ ಗ್ಯಾರಂಟಿ ತೆಗೆದುಕೊಳ್ತೀವಿ ಅಂತ ಎಚ್ಚರಿಕೆ ಕೊಟ್ರು. ಶೇ.10ಕ್ಕಿಂತ ಹೆಚ್ಚು ಸೋಂಕು ಇರೋ ಜಿಲ್ಲೆಗಳು ಗಂಭೀರವಾಗಿ ಪರಿಗಣಿಸಬೇಕು. ಶೇ.5 ಒಳಗೆ ಸೋಂಕು ಇರೋ ಜಿಲ್ಲೆಗಳು ಎಚ್ಚರ ತಪ್ಪಬಾರದು. ಹೆಚ್ಚು ಹೆಚ್ಚು ಟೆಸ್ಟ್ ಗಳನ್ನು ಮಾಡಲು ಕ್ರಮವಹಿಸಬೇಕು. ಅಂತರ್ ರಾಜ್ಯ, ಹೊರ ದೇಶದಿಂದ ಬರೋರಿಗೆ ಚೆಕ್ ಪಾಯಿಂಟ್ ಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಆಗಬೇಕು ಅಂತ ತಿಳಿಸಿದ್ರು.

    ಗ್ರಾಮೀಣ ಭಾಗದಲ್ಲಿ ಎಚ್ಚರವಹಿಸಬೇಕು. ಒಂದು ಗ್ರಾಮದಲ್ಲಿ 5 ಸೋಂಕಿತರು ಕಂಡು ಬಂದರೇ ಅ ಗ್ರಾಮವನ್ನೆ ಸೀಲ್ ಡೌನ್ ಮಾಡಬೇಕು. ಗ್ರಾಮ ಭಾಗದಲ್ಲಿ ಸೋಂಕು ಬಂದ ವ್ಯಕ್ತಿಯನ್ನ ಕೂಡಲೇ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಬೇಕು ಅಂತ ಮನವಿ ಮಾಡಿದ್ರು. ಇದನ್ನೂ ಓದಿ: ಕೋವಿನ್ ಪೋರ್ಟಲ್ ಹ್ಯಾಕ್ ಆಗಿಲ್ಲ, ಸುಳ್ಳು ಸುದ್ದಿ- ಕೇಂದ್ರ ಸರ್ಕಾರ ಸ್ಪಷ್ಟನೆ

    ನಗರ ಭಾಗದಲ್ಲಿ ಜನ ಅನಗತ್ಯವಾಗಿ ಓಡಾಡಬಾರದು. ಬೆಂಗಳೂರು ನೋಡಿದ್ರೆ ನನಗೂ ಭಯ ಆಗುತ್ತೆ. ಸ್ವಲ್ಪ ಎಚ್ಚರ ತಪ್ಪಿದ್ರು ಆಪಾಯ ಗ್ಯಾರಂಟಿ. ಜನರು ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ನಿಯಮ ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಅಂತ ಮನವಿ ಮಾಡಿದ್ರು. 3-4 ತಿಂಗಳಲ್ಲಿ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಸಿಗುತ್ತೆ. ಅಲ್ಲಿಯವರೆಗೂ ಎಲ್ಲರೂ ಎಚ್ಚರವಾಗಿ ನಿಯಮ ಪಾಲನೆ ಮಾಡಬೇಕು ಅಂತ ಮನವಿ ಮಾಡಿದ್ರು.

    ಸರ್ಕಾರ ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ:
    ರಾಜ್ಯದಲ್ಲಿ ಸಾವಿನ ಸಂಖ್ಯೆಯನ್ನ ಸರ್ಕಾರ ಮುಚ್ಚಿಟ್ಟಿಲ್ಲ ಅಂತ ಆರೋಗ್ಯ ಸಚಿವ ಸುಧಾಕರ್ ಇದೇ ವೇಳೆ ಸ್ಪಷ್ಟಪಡಿಸಿದರು. ಸರ್ಕಾರ ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ. ಇದನ್ನ ಪದೇ ಪದೇ ಹೇಳುತ್ತಿದ್ದೇನೆ. ನಮ್ಮ ರಾಜ್ಯವನ್ನ ಬಿಹಾರಕ್ಕೆ ಹೋಲಿಸಬೇಡಿ. ಕರ್ನಾಟಕಕ್ಕೂ ಬಿಹಾರಕ್ಕೂ ಹೋಲಿಕೆ ಮಾಡೋದು ಸರಿಯಲ್ಲ. ಯಾವುದೇ ಮಾಹಿತಿ ನಾವು ಮುಚ್ಚಿಟ್ಟಿಲ್ಲ. ಅಂತಹ ಅವಕಾಶವೇ ಇಲ್ಲ ಅಂತ ಸಚಿವ ಸುಧಾಕರ್ ಸ್ಪಷ್ಟಪಡಿಸಿದರು.

  • ರಾಜ್ಯ ಅನ್‍ಲಾಕ್ ಆದ್ರೂ ದೇಗುಲ ತಕ್ಷಣ ತೆರೆಯಲ್ಲ: ಕೋಟ ಶ್ರೀನಿವಾಸ ಪೂಜಾರಿ

    ರಾಜ್ಯ ಅನ್‍ಲಾಕ್ ಆದ್ರೂ ದೇಗುಲ ತಕ್ಷಣ ತೆರೆಯಲ್ಲ: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಜೂನ್ 14ರ ನಂತರ ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆಗಳು ಆರಂಭವಾಗುತ್ತದೆ. ಜನಜಂಗುಳಿ ಆಗುವ ಕಾರಣ ದೇಗುಲಗಳು ತಕ್ಷಣ ತೆರೆಯಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಮಾಡಿ ಬಳಿಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಕೆಲವೇ ದಿನಗಳಲ್ಲಿ ಲಾಕ್ ಡೌನ್ ತೆರವಾಗುತ್ತದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್​​ಡೌನ್ ಸಡಿಲಿಕೆ: ಸುಧಾಕರ್

    ಶೇಕಡಾ ಐದಕ್ಕಿಂತ ಕಡಿಮೆ ಪಾಸಿಟಿವಿಟಿ ಇದ್ರೆ ಬೇಗ ಅನ್ಲಾಕ್ ಆಗುತ್ತದೆ. ಏಕಾಏಕಿ ದೇವಸ್ಥಾನಗಳು ತೆರೆದರೆ ಸಮಸ್ಯೆ ಆಗುತ್ತದೆ. ಜನಜಂಗುಳಿ ಜಾಸ್ತಿಯಾಗುವ ಸಾಧ್ಯತೆಯಿದೆ. ಸ್ವಲ್ಪ ದಿನ ಬಿಟ್ಟು ದೇವಾಲಯ ತೆರೆಯುವ ಬಗ್ಗೆ ಚಿಂತನೆ ಇದೆ. ಆದಷ್ಟು ಬೇಗ ದೇವಸ್ಥಾನ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಯಾವತ್ತು ಮತ್ತು ಯಾವ ರೀತಿ ದೇವಸ್ಥಾನ ತೆರೆಯಬೇಕು ಎಂಬ ಬಗ್ಗೆ ಶೀಘ್ರ ನಿರ್ಧಾರ ಮಾಡುತ್ತೇವೆ ಎಂದರು.

  • ತಜ್ಞರ ಸಲಹೆ ಆಧರಿಸಿ ಅನ್‍ಲಾಕ್ ಸ್ವರೂಪ ನಿರ್ಧಾರ: ಡಾ.ಕೆ.ಸುಧಾಕರ್

    ತಜ್ಞರ ಸಲಹೆ ಆಧರಿಸಿ ಅನ್‍ಲಾಕ್ ಸ್ವರೂಪ ನಿರ್ಧಾರ: ಡಾ.ಕೆ.ಸುಧಾಕರ್

    ಬೆಂಗಳೂರು: ಒಂದೇ ಬಾರಿಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಬಹುದು. ಅನ್‍ಲಾಕ್ ಸ್ವರೂಪದ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಚಟುವಟಿಕೆಗೆ ನಿಬರ್ಂಧ ಹೇರಿ, ಇನ್ನೂ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು. ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಚರ್ಚಿಸಿ ಅನ್ ಲಾಕ್ ಯಾವ ರೀತಿ ಇರಬೇಕೆಂದು ತೀರ್ಮಾನ ಮಾಡುತ್ತಾರೆ. ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆ, 5 ಸಾವಿರಕ್ಕಿಂತ ಕಡಿಮೆ ಪ್ರಕರಣ ಇದ್ದರೆ ಅನ್ ಲಾಕ್ ಮಾಡಬಹುದೆಂಬ ಅಭಿಪ್ರಾಯ ಇದೆ ಎಂದರು.

    ಅನ್ ಲಾಕ್ ಬಗ್ಗೆ ಯಾವುದೇ ಗೊಂದಲ ಇಲ್ಲ. ಮಹಾರಾಷ್ಟ್ರದಲ್ಲಿ ಪ್ರಕರಣ ಇಳಿಕೆಯಾದ ಬಳಿಕ ಅನ್ ಲಾಕ್ ಕಡೆಗೆ ಹೋಗಿದ್ದಾರೆ. ಆ ರಾಜ್ಯಕ್ಕಿಂತ ಬಹಳ ಬೇಗ ನಮ್ಮಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ. ಕೆಲ ದೇಶಗಳಲ್ಲಿ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿಲ್ಲ. ಅನೇಕ ಮಕ್ಕಳಿಗೆ ಮನೆ ಆರೈಕೆ ಮಾಡಲಾಗಿದೆ ಎಂದು ಏಮ್ಸ್ ನಿರ್ದೇಶಕರು ಹೇಳಿದ್ದಾರೆ. ಆದರೂ ರಾಜ್ಯದಲ್ಲಿ ಮಕ್ಕಳ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ನುಡಿದರು.

    ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ 2,281 ಪ್ರಕರಣಗಳಿದ್ದು, 1,948 ಮಂದಿಗೆ ಚಿಕಿತ್ಸೆ ನೀಡುತ್ತಿದ್ದು, 102 ಮಂದಿ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನು ಓದಿ: ಪಾಸಿಟಿವಿಟಿ ರೇಟ್ ಶೇ.6.68ಕ್ಕೆ ಇಳಿಕೆ, 20,246 ಡಿಸ್ಚಾರ್ಜ್- 10,959 ಹೊಸ ಕೊರೊನಾ ಕೇಸ್, 192 ಸಾವು

    ತಪ್ಪಿತಸ್ಥರ ರಕ್ಷಣೆ ಇಲ್ಲ: ಇತ್ತೀಚೆಗೆ ಹುಬ್ಬಳ್ಳಿ ಕಿಮ್ಸ್‌ಗೆ ಭೇಟಿ ನೀಡಿದ್ದಾಗ ಬೇರೆ ಸಚಿವರು ದೂರು ನೀಡಿದ್ದರು. ಆಗ ಸ್ಥಳದಲ್ಲೇ ತನಿಖೆಗೆ ಆದೇಶಿಸಿ ವರದಿ ನೀಡಲು ಸೂಚಿಸಲಾಗಿತ್ತು. ವರದಿ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ನನ್ನ ಬಳಿ ವರದಿ ಬಂದ ಕೂಡಲೇ ಕ್ರಮ ವಹಿಸುತ್ತೇನೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

    ವೈದ್ಯರು ಆಸ್ಪತ್ರೆಯಿಂದ ಹೊರಗೆ 100 ಮೀಟರ್ ದೂರ ಹೋದ ಕೂಡಲೇ ಗೊತ್ತಾಗುವಂತೆ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಅಳವಡಿಸಲಾಗುವುದು. ಪ್ರತಿ ಆಸ್ಪತ್ರೆಯ ವಾರ್ಡ್, ಐಸಿಯುನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಒಂದೇ ಕಡೆ ನಿರ್ವಹಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

    ಆಕ್ಸಿಜನ್ ಸಾಂದ್ರಕ ಕೊಡುಗೆ: ಹರ್ಬಲೈಫ್ ನ್ಯೂಟ್ರೀಶಿಯನ್ ಕಂಪನಿಯು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ 150 ಆಕ್ಸಿಜನ್ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದೆ. ಸಪ್ತ ಸಚಿವರ ನಿವಾಸದಲ್ಲಿ ಸಚಿವರನ್ನು ಭೇಟಿಯಾದ ಕಂಪನಿಯ ಪ್ರತಿನಿಧಿಗಳು ಕಾನ್ಸಂಟ್ರೇಟರ್‌ಗಳನ್ನು ಹಸ್ತಾಂತರಿಸಿದರು. ಇದನ್ನು ಓದಿ: ಕೋವಿಡ್ ನಡುವೆ ಕೊಡಗಿನಲ್ಲಿ ಮತ್ತೆ ಪ್ರವಾಹದ ಭೀತಿ

  • ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಅನ್‍ಲಾಕ್ ಘೋಷಣೆ?

    ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಅನ್‍ಲಾಕ್ ಘೋಷಣೆ?

    ಬೆಂಗಳೂರು: ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಯಡಿಯೂರಪ್ಪ ಅನ್ ಲಾಕ್ ಘೋಷಣೆ ಮಾಡುತ್ತಾರಾ ಅಥವಾ ಜಿಲ್ಲಾ ಪ್ರವಾಸದ ಬಳಿಕ ಶನಿವಾರ ಘೋಷಣೆ ಮಾಡುತ್ತಾರಾ ಎಂಬ ಕುತೂಹಲ ಈಗ ಎದ್ದಿದೆ.

    ಶುಕ್ರವಾರ ಸಿಎಂ ಹಾಸನ, ಚಿಕ್ಕಮಗಳೂರು ಪ್ರವಾಸ ಕೈಗೊಳ್ಳಲ್ಲಿದ್ದಾರೆ. ಹೀಗಾಗಿ ಗುರುವಾರ ಅಥವಾ ಶನಿವಾರ ರಾಜ್ಯ ಸರ್ಕಾರ ಅಧಿಕೃತವಾಗಿ ಅನ್‍ಲಾಕ್ ಘೋಷಣೆ ಮಾಡುವ ಸಾಧ್ಯತೆಯಿದೆ.

    ಬುಧವಾರ ಸಂಜೆ ಕೋವಿಡ್ ಸಂಬಂಧಿತ ಸಚಿವರ ಜೊತೆ ಸಿಎಂ ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ. ಸ್ಟೇಜ್ ಬೈ ಸ್ಟೇಜ್ ಅನ್ ಲಾಕ್ ಮಾಡುವ ಬಗ್ಗೆ ಸರ್ಕಾರ ಮುಂದಾಗಿದ್ದು, ಅನ್ ಲಾಕ್ ಬ್ಲೂ ಪ್ರಿಂಟ್ ತರಲು ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.

    ಪ್ಲ್ಯಾನ್ ಏನು?
    ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಅನ್‍ಲಾಕ್ ವಿನಾಯಿತಿ ನೀಡದೇ ಇರಲು ಸರ್ಕಾರ ಮುಂದಾಗಿದೆ. ಪಾಸಿಟಿವಿಟಿ ರೇಟ್ ಶೇ.5ಕ್ಕೆ ಇಳಿಯವವರೆಗೆ ಅನ್ ಲಾಕ್ ಬೇಡವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಶುಕ್ರವಾರದ ತನಕವೂ ಪಾಸಿಟಿವಿಟಿ ರೇಟ್ ಕಾದು ನೋಡುವ ಸಾಧ್ಯತೆಯಿದೆ. ಅನ್ ಲಾಕ್ ಇರದ ಜಿಲ್ಲೆಗಳಿಗೆ ಎಂಟ್ರಿ ಎಕ್ಸಿಟ್ ಬಗ್ಗೆಯೂ ಹೆಚ್ಚಿನ ನಿಗಾ ಇಡುವ ಸಾಧ್ಯತೆಯಿದೆ. ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್- ಇಂಟರ್ನೆಟ್‌ಗಾಗಿ ಗುಡ್ಡ ಹತ್ತಿ ಟೆಂಟ್ ಹಾಕಿದ ಯುವತಿ

  • ಸಿಎಂ ಬದಲಾವಣೆ ಚರ್ಚೆಯಿಂದ ಸರ್ಕಾರದ ಇಮೇಜ್‌ಗೆ ಧಕ್ಕೆ ಬರಲಿದೆ: ಶೆಟ್ಟರ್

    ಸಿಎಂ ಬದಲಾವಣೆ ಚರ್ಚೆಯಿಂದ ಸರ್ಕಾರದ ಇಮೇಜ್‌ಗೆ ಧಕ್ಕೆ ಬರಲಿದೆ: ಶೆಟ್ಟರ್

    – ಜೂನ್ 14ರ ನಂತ್ರ ಹಂತ ಹಂತವಾಗಿ ಅನ್ ಲಾಕ್

    ಹುಬ್ಬಳ್ಳಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ನಾಯಕತ್ವ ಬದಲಾವಣೆ ಚರ್ಚೆಯಿಂದ ಸಿಎಂ ಬಿಎಸ್ ಯಡಿಯೂರಪ್ಪ ಮನಸ್ಸಿಗೆ ಬೇಸರವಾಗಿದೆ. ಅಲ್ಲದೇ ಪದೇ ಪದೇ ನಾಯಕತ್ವ ಬದಲಾವಣೆ ಚರ್ಚೆ ನಡೆಯುವುದರಿಂದ ಸರ್ಕಾರದ ಇಮೇಜ್‌ಗೆ ಧಕ್ಕೆ ಬರಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪರಿಗೆ ವಯಸ್ಸಾದ್ರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಕ್ಕೆ ವಯಸ್ಸು ಅಡ್ಡಿ ಬಂದಿಲ್ಲ. ಹೈಕಮಾಂಡ್ ಮಟ್ಟದಲ್ಲೂ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬಂದಿಲ್ಲ. ಹೀಗಾಗಿ ಪದೇ ಪದೇ ನಾಯಕತ್ವ ಬದಲಾವಣೆ ಪ್ರಶ್ನೆ ಕೇಳಿ ಬರುತ್ತಾ ಇರುವುದರಿಂದ ಬಿಎಸ್‍ವೈ ನಿನ್ನೆ ಆ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ರೀತಿಯ ಬದಲಾವಣೆ ಇಲ್ಲವೆಂದರು.

    ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಎಲ್ಲಿಂದ ಶುರುವಾಗಿದೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಶಾಸಕರ ಸಹಿ ಸಂಗ್ರಹ ವಿಚಾರ ಸಹ ಕೇವಲ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಆದರೆ ಆ ರೀತಿಯ ಯಾವುದೇ ಬದಲಾವಣೆಗಳು ನಡೆದಿಲ್ಲವೆಂದು ಶೆಟ್ಟರ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜೀನಾಮೆಗೆ ಸಿದ್ಧ, ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ

    ಹಂತಹಂತವಾಗಿ ಅನ್ ಲಾಕ್..!:
    ಜೂನ್ 14 ರಂದು ರಾಜ್ಯದಲ್ಲಿ ಲಾಕಡೌನ್ ಮುಕ್ತಾಯವಾಗಲಿದೆ. ಆದರೆ ಶೇ.5ಕ್ಕಿಂತ ಕಡಿಮೆ ಪಾಸಿಟಿವ್ ರೇಟ್ ಬರೋ ಮುನ್ನ ಅನ್ ಲಾಕ್ ಮಾಡೋದು ಅಸಾಧ್ಯವಾಗುತ್ತೆ. ಹೀಗಾಗಿ ಹಂತಹಂತವಾಗಿ ಅನಲಾಕ್ ಮಾಡಲಾಗುವುದೆಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ತಜ್ಞರು ಮೂರನೇ ಅಲೆ ಬರೋ ಎಚ್ಚರಿಕೆ ನೀಡಿದ್ದಾರೆ. ಆದರೆ ಮೂರನೇ ಅಲೆ ಬರುತ್ತೋ ಇಲ್ವೋ ಗೊತ್ತಿಲ್ಲ. ಏಕಾಏಕಿ ಅನ್‍ಲಾಕ್ ಮಾಡಿದ್ರೆ ಮತ್ತೆ ಕೊರೊನಾ ಹರಡುವ ಸಾಧ್ಯತೆಗಳು ಹೆಚ್ಚಿದೆ. ಹೀಗಾಗಿ ಹಂತಹಂತವಾಗಿ ಅನ್‍ಲಾಕ್ ಮಾಡುವ ಯೋಜನೆ ಇದೆ ಎಂದರು. ಇದನ್ನೂ ಓದಿ: ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ, ಬಿಎಸ್‍ವೈ ಸಿಎಂ ಆಗಿರೋದು ಅಷ್ಟೇ ಸತ್ಯ: ರೇಣುಕಾಚಾರ್ಯ

  • ಕರ್ನಾಟಕದಲ್ಲಿ ಮೂರು ರೀತಿಯಲ್ಲಿ ಅನ್‍ಲಾಕ್ – ಸರ್ಕಾರದ ಪ್ಲಾನ್ ಏನು?

    ಕರ್ನಾಟಕದಲ್ಲಿ ಮೂರು ರೀತಿಯಲ್ಲಿ ಅನ್‍ಲಾಕ್ – ಸರ್ಕಾರದ ಪ್ಲಾನ್ ಏನು?

    ಬೆಂಗಳೂರು: ರಾಜ್ಯದಲ್ಲಿ ಜೂನ್ 14ಕ್ಕೂ ಮೊದಲೇ ಅನ್‍ಲಾಕ್ ಮಾಡುವುದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸುಳಿವು ಕೊಟ್ಟಿದ್ದು ಹಂತ ಹಂತವಾಗಿ ವಾಣಿಜ್ಯ ಚಟುವಟಿಕೆಗಳು ಮತ್ತೆ ತೆರೆದುಕೊಳ್ಳಲಿದೆ.

    ಜೂನ್ 7ರ ಲಾಕ್‍ಡೌನ್ ಅನ್ನು ಜೂನ್ 14ಕ್ಕೆ ಮೂರು ದಿನಗಳ ಹಿಂದೆಯಷ್ಟೇ ಸಿಎಂ ವಿಸ್ತರಿಸಿದ್ದರು. ಈಗ ದೆಹಲಿ ಮತ್ತು ನೆರೆಯ ಮಹಾರಾಷ್ಟ್ರಗಳು ನಿಧಾನವಾಗಿ ಅನ್‍ಲಾಕ್ ಆಗುತ್ತಿವೆ. ಜೊತೆಗೆ, ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ರೇಟ್ ಶೇ.10ಕ್ಕಿಂತ ಕೆಳಗಿಳಿದಿದೆ. ಈ ನಿಟ್ಟಿನಲ್ಲಿ, 4-5 ದಿನಗಳಲ್ಲಿ ಸಚಿವರು, ಅಧಿಕಾರಿಗಳ ಜೊತೆಗೆ ಚರ್ಚೆ ಮಾಡುತ್ತೇನೆ. ಕಡಿಮೆ ಸೋಂಕಿರುವ ಕಡೆ ಅನ್‍ಲಾಕ್ ಮಾಡುವ ಬಗ್ಗೆ ಸಮಾಲೋಚನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

    ಅನ್‍ಲಾಕ್ ಸಂಬಂಧ ಸೋಮವಾರ ಮಧ್ಯಾಹ್ನ 2:30ಕ್ಕೆ ಕೊವಿಡ್ ಟಾಸ್ಕ್ ಫೋರ್ಸ್ ಸಭೆ ಕರೆದಿದ್ದಾರೆ. ಜಿಲ್ಲಾವಾರು ಹಂತ ಹಂತವಾಗಿ ಅನ್‍ಲಾಕ್ ಮಾಡುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಆದರೆ ಆರೋಗ್ಯ ಸಚಿವ ಸುಧಾಕರ್ ಮಾತ್ರ, ದಿನಕ್ಕೆ 5 ಸಾವಿರಕ್ಕಿಂತ ಕಡಿಮೆ ಕೇಸ್ ಬಂದರಷ್ಟೇ ಅನ್‍ಲಾಕ್. ಜೂನ್ 14ರ ಬಳಿಕ ಅನ್‍ಲಾಕ್ ಬಗ್ಗೆ ಯೋಚನೆ ಮಾಡೋಣ ಎಂದಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್ ಇಬ್ಬರೂ ವರ್ಗಾವಣೆ- ಸರ್ಕಾರದಿಂದ ಆದೇಶ

    ಸರ್ಕಾರದ ಪ್ಲಾನ್ ಏನು?
    ಕೆಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆ ಇದ್ದರೆ ಕೆಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಜಾಸ್ತಿಯಿದೆ. ಹೀಗಾಗಿ ಸರ್ಕಾರದ ಬಳಿ ಮೂರು ಅನ್‍ಲಾಕ್ ಪ್ಲಾನ್ ಇದೆ. ಬೆಂಗಳೂರಿಗೆ ಪ್ರತ್ಯೇಕವಾದ ಅನ್‍ಲಾಕ್ ಮಾಡಿದರೆ ಸೋಂಕು ಕಡಿಮೆ ಇರುವ ಜಿಲ್ಲೆಗಳಿಗೆ ಪ್ರತ್ಯೇಕ ಅನ್‍ಲಾಕ್ ಮಾಡಲು ಮುಂದಾಗಿದೆ. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಷರತ್ತುಬದ್ಧ ಅನ್‍ಲಾಕ್ ಮಾಡುವ ಸಾಧ್ಯತೆಯಿದೆ.

    ಅನ್‍ಲಾಕ್ ಹೇಗೆ?
    ಬೆಂಗಳೂರಲ್ಲಿ ಶೇ.3, ರಾಜ್ಯದಲ್ಲಿ ಶೇ.6ಕ್ಕೆ ಪಾಸಿಟಿವಿಟಿ ಇಳಿದರೆ ಅನ್‍ಲಾಕ್ ಆಗಲಿದೆ. ಸದ್ಯ ಬೆಂಗಳೂರಿನಲ್ಲಿ ಶೇ.4.96, ಕೆಲ ಜಿಲ್ಲೆಗಳಲ್ಲಿ ಶೇ.39ರಷ್ಟು ಪಾಸಿಟಿವಿಟಿ ರೇಟ್ ಇದೆ. ನಾಲ್ಕೈದು ದಿನಗಳಲ್ಲಿ ಪಾಸಿಟಿವಿಟಿ ರೇಟ್ ಮತ್ತಷ್ಟು ಇಳಿಯುವ ಸಾಧ್ಯತೆಯಿದ್ದು ಪ್ರತಿ ಹಂತಕ್ಕೂ 3 ವಾರಗಳ ಅಂತರದಲ್ಲಿ 3 ಹಂತಗಳ ಅನ್‍ಲಾಕ್‍ಗೆ ತಜ್ಞರ ಸಲಹೆ ನೀಡಿದ್ದಾರೆ. ಸಕ್ರಿಯ ಕೇಸ್, ಕ್ವಾರಂಟೈನ್ ಡೇಟಾ ನೋಡಿ ಅನ್‍ಲಾಕ್ ಶುರು ಮಾಡುವುದು ಉತ್ತಮ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ.

    ಯಾವ ಹಂತದಲ್ಲಿ ಏನು?
    ಹಂತ 1: ದಿನಸಿ ಅಂಗಡಿ, ಕೈಗಾರಿಕೆಗಳು, ಗಾರ್ಮೆಂಟ್ಸ್, ಫ್ಯಾಕ್ಟರಿಗಳು ಓಪನ್
    ಹಂತ 2: ಹೋಟೆಲ್, ಆಟೋ, ಕ್ಯಾಬ್ ಸಂಚಾರ. ಪಾಸಿಟಿವಿಟಿ ರೇಟ್ ಆಧರಿಸಿ ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರ
    ಹಂತ 3: ಬಾರ್ ರೆಸ್ಟೋರೆಂಟ್, ಕ್ಲಬ್‍ಗೆ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ

    ಕಡಿಮೆ ಸೋಂಕು:
    ರಾಜ್ಯದಲ್ಲಿ ಸೋಂಕಿನ ಪ್ರಮಾಣ ತಗ್ಗುತ್ತಿದ್ದು ಪಾಸಿಟಿವಿಟಿ ರೇಟ್ ಶೇ.9.69ಕ್ಕೆ ಇಳಿದೆ. ಏಪ್ರಿಲ್ 15ರ ಬಳಿಕ ನಿನ್ನೆಗೆ(ಶನಿವಾರ) ಇದು ಶೇ.10ಕ್ಕೆ ಇಳಿದಿದೆ. ಬಹುತೇಕ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಗಣನೀಯವಾಗಿ ಇಳಿಕೆ ಆಗುತ್ತಿದೆ.   ಬೀದರ್ ಶೇ.1, ಕಲಬುರಗಿ ಶೇ.3, ಬೆಂಗಳೂರಿನಲ್ಲಿ ಶೇ.4.95 ಪಾಸಿಟಿವಿಟಿ ರೇಟ್ ಇದೆ.

  • ಅನ್‍ಲಾಕ್ ಸುಳಿವು ನೀಡಿದ್ರು ಸಿಎಂ ಯಡಿಯೂರಪ್ಪ

    ಅನ್‍ಲಾಕ್ ಸುಳಿವು ನೀಡಿದ್ರು ಸಿಎಂ ಯಡಿಯೂರಪ್ಪ

    ಬೆಂಗಳೂರು: ನಾಲ್ಕೈದು ಲಾಕ್‍ಡೌನ್ ಸಡಿಲಿಕೆಯ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.

    ಪಾಸಿಟಿವಿಟಿ ರೇಟ್ ಶೇಕಡಾ 5ಕ್ಕಿಂತ ಕಡಿಮೆ ಬರುವ ಜಿಲ್ಲೆಗಳಿಗೆ ಏನು ಸಡಿಲಿಕೆ ನೀಡಬೇಕು ಎಂಬುದರ ಕುರಿತು ಅಧಿಕಾರಿಗಳು ಮತ್ತು ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗುವುದು ಎಂದು ಜೂನ್ 14ರ ಮುಂಚೆಯೇ ಅನ್‍ಲಾಕ್ ಮಾಡುವ ಕುರಿತು ಸುಳಿವು ನೀಡಿದರು.

    ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ರಾಜಧಾನಿಯಲ್ಲಿ ಐದು ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗಿವೆ. ಇನ್ನು ರಾಜಧಾನಿಯಲ್ಲಿ ಶುಕ್ರವಾರ ಪಾಸಿಟಿವಿಟಿ ರೇಟ್ ಶೇ.4.94 ಗೆ ಬಂದಿದೆ. ಅಂದರೆ ಬೆಂಗಳೂರಿನಲ್ಲಿ 100 ಜನರಿಗೆ ಟೆಸ್ಟ್ ಮಾಡಿದ್ರೆ 4 ಜನರಿಗೆ ಮಾತ್ರ ಪಾಸಿಟಿವಿ ಆಗಿದೆ.

    ಇಂದು ಬೆಂಗಳೂರಿನಲ್ಲಿ ಕಡಿಮೆ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿ ಸೇರಿ 2,724 ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಮೂರು ತಿಂಗಳ ನಂತರ ಮೂರು ಸಾವಿರಕ್ಕಿಂತ ಒಳಗಡೆ ಕೇಸ್ ದಾಖಲಾಗ್ತಿದೆ. ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲೂ 500 ಕ್ಕಿಂತ ಕಡಿಮೆ ಕೇಸ್ ದಾಖಲಾಗಿದೆ.