Tag: unlock raghava film

  • ಅನ್‌ಲಾಕ್ ರಾಘವನ ಬಗ್ಗೆ ರೆಚೆಲ್ ಡೇವಿಡ್ ಹೇಳಿದ್ದಿಷ್ಟು!

    ಅನ್‌ಲಾಕ್ ರಾಘವನ ಬಗ್ಗೆ ರೆಚೆಲ್ ಡೇವಿಡ್ ಹೇಳಿದ್ದಿಷ್ಟು!

    ದೀಪಕ್ ಮಧುವನಹಳ್ಳಿ ನಿರ್ದೇಶನದ ‘ಅನ್‌ಲಾಕ್ ರಾಘವ’ (Unlock Raghava) ಚಿತ್ರವೀಗ ಬಿಡುಗಡೆಗೊಂಡಿದೆ. ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ. ಕಾಮಿಡಿ, ಮನೋರಂಜನೆಯೊಂದಿಗೆ ಪ್ರೇಮ ಕಥಾನಕದ ಮೂಲಕವೂ ಈ ಸಿನಿಮಾ ನೋಡುಗರನ್ನು ಸೆಳೆಯುತ್ತಿದೆ. ಹೀಗೆ ಹಲವು ಕೊಂಬೆ ಕೋವೆಗಳನ್ನು ಹೊಂದಿರುವ ಈ ಕಥನಕ್ಕೆ ಗ್ಲಾಮರ್ ಟಚ್ ಕೊಟ್ಟಿರುವವರು ನಾಯಕಿ ರೆಚೆಲ್ ಡೇವಿಡ್ (Rechel David).

    ಮೂಲತಃ ಕೇರಳದವರಾದರೂ, ಕನ್ನಡ ಕಲಿತು ಮಾತಾಡುವಷ್ಟು ಪ್ರೀತಿ ಹೊಂದಿರೋ ರೆಚೆಲ್, ಅನ್‌ಲಾಕ್ ರಾಘವನ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಭದ್ರವಾದ ನೆಲೆ ಕಂಡುಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ. ಇದನ್ನೂ ಓದಿ: ನಾಳೆ ನಿಮ್ಮೆದುರು ಬರ್‍ತಾನೆ ಅನ್ ಲಾಕ್ ರಾಘವ!

    ರೆಚೆಲ್ ಡೇವಿಡ್ ಇಲ್ಲಿ ಜಾನಕಿ ಎಂಬ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ಈಗ್ಗೆ ಎರಡ್ಮೂರು ವರ್ಷಗಳ ಹಿಂದೆಯೇ ನಿರ್ದೇಶಕರು ರೆಚೆಲ್‌ಗೆ ಕಥೆ ಹೇಳಿ, ಅವರ ಪಾತ್ರದ ಬಗ್ಗೆ ವಿವರಿಸಿದ್ದರಂತೆ. ಆ ಕ್ಷಣವೇ ಇದೊಂದು ಅಪರೂಪದ ಕಥೆ ಎಂಬ ಸುಳಿವು ಸಿಕ್ಕಿದ್ದೇ ರೆಚೆಲ್ ಒಪ್ಪಿಗೆ ಸೂಚಿಸಿದ್ದರಂತೆ. ಹೀಗೆ ಈ ಸಿನಿಮಾ ಭಾಗವಾಗಿದ್ದ ರೆಚೆಲ್ ಚಿತ್ರೀಕರಣದ ಪ್ರತೀ ಹಂತವನ್ನೂ ಸಂಭ್ರಮಿಸಿದ್ದಾರೆ. ಹೊಸ ಕಲಿಕೆಯ ಜೊತೆಗೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದೀಗ ಪ್ರೇಕ್ಷಕರೂ ಕೂಡಾ ಜಾನಕಿ ಎಂಬ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಇಂಥಾ ಸಕಾರಾತ್ಮಕ ವಾತಾವರಣ ತನ್ನ ಮುಂದಿನ ಹೆಜ್ಜೆಗಳನ್ನು ಸುಗಮಗೊಳಿಸುತ್ತದೆ ಎಂಬ ನಂಬಿಕೆ ರೆಚೆಲ್‌ಗಿದೆ.

    ಮಾಡೆಲಿಂಗ್ ಕ್ಷೇತ್ರಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಎಂಟ್ರಿ ಕೊಟ್ಟು ಆನಂತರ ಚಿತ್ರರಂಗದತ್ತ ಹೊರಳಿಕೊಂಡಿದ್ದವರು ರೆಚೆಲ್. ಬಾಂಬೆಯಲ್ಲಿ ಅನುಪಮ್ ಖೇರ್ ಆಕ್ಟಿಂಗ್ ಸ್ಕೂಲಿನಲ್ಲಿ ಪಳಗಿಕೊಂಡಿದ್ದ ಈಕೆ ಆ ನಂತರ ಮಲೆಯಾಳಂನ ಚಿತ್ರವೊಂದರ ನಾಯಕಿಯಾಗಿದ್ದರು. ಹಾಗೆ ಮಲೆಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ರೆಚೆಲ್ ಕನ್ನಡಕ್ಕೆ ಆಗಮಿಸಿದ್ದದ್ದು ಲವ್ ಮಾಕ್ಟೈಲ್ ಸಿನಿಮಾ ಮೂಲಕ. ಆ ನಂತರದಲ್ಲಿ ಒಂದಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಅನ್‌ಲಾಕ್ ರಾಘವ ಚಿತ್ರದ ಬೆನ್ನಲ್ಲಿಯೇ ರೆಚೆಲ್ ನಾಯಕಿಯಾಗಿರೋ ಮತ್ತೊಂದು ಚಿತ್ರವೂ ಬಿಡುಗಡೆಗೆ ತಯಾರಾಗಿದೆ. ಇದನ್ನೂ ಓದಿ: ಅನ್ ಲಾಕ್ ರಾಘವನ ಬಗ್ಗೆ ನಿರ್ಮಾಪಕ ಮಂಜುನಾಥ್ ಹೇಳಿದ್ದಿಷ್ಟು!

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲವಿತ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ, ಅನೂಪ್ ಸಿಳೀನ್ ಸಂಗೀತ, ಅಜಯ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಇದರೊಂದಿಗೆ ಹೊಸ ಪ್ರತಿಭೆ ಮಿಲಿಂದ್ ಗೌತಮ್ ನಾಯಕನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳು ದಟ್ಟವಾಗಿಯೇ ಕಾಣಿಸುತ್ತಿವೆ. ಮಿಲಿಂದ್ ಮತ್ತು ರೆಚೆಲ್ ಜೋಡಿ ಮೆಲ್ಲಗೆ ಕ್ರೇಜ್ ಮೂಡಿಸುತ್ತಿದೆ.

  • ನಾಳೆ ನಿಮ್ಮೆದುರು ಬರ್‍ತಾನೆ ಅನ್ ಲಾಕ್ ರಾಘವ!

    ನಾಳೆ ನಿಮ್ಮೆದುರು ಬರ್‍ತಾನೆ ಅನ್ ಲಾಕ್ ರಾಘವ!

    ಮಿಲಿಂದ್ ಗೌತಮ್ ಹಾಗೂ ರೆಚೆಲ್ ಡೇವಿಡ್ ಜೋಡಿಯಾಗಿ ನಟಿಸಿರುವ ‘ಅನ್ ಲಾಕ್ ರಾಘವ’ ಚಿತ್ರ ಈ ಶುಕ್ರವಾರ ಅಂದರೆ, ಫೆ.7ರಂದು ರಿಲೀಸ್‌ ಆಗುತ್ತಿದೆ. ಈ ವರ್ಷಾರಂಭದಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಹೊಸತನ ಗಾಳಿ ಮತ್ತಷ್ಟು ಆವೇಗದಿಂದ ಬೀಸಲಾರಂಭಿಸಿದೆ. ಯುವ ಆವೇಗದ ತಂಡಗಳು, ಅದಕ್ಕೆ ತಕ್ಕುದಾದ ಕಥನಗಳಿಂದ ತಯಾರಾಗಿರುವ ಸಿನಿಮಾಗಳು ಒಂದರ ಬೆನ್ನಿಗೊಂದರಂತೆ ರಿಲೀಸ್‌ಗೆ ಸಿದ್ಧವಾಗಿದೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಚಿತ್ರ ಅನ್ ಲಾಕ್ ರಾಘವ. ಈಗಾಗಲೇ ಟ್ರೈಲರ್ ಸೇರಿದಂತೆ ಒಂದಷ್ಟು ಬಗೆಯಲ್ಲಿ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ಈ ಚಿತ್ರವನ್ನು ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:ಅನ್ ಲಾಕ್ ರಾಘವನ ಬಗ್ಗೆ ನಿರ್ಮಾಪಕ ಮಂಜುನಾಥ್ ಹೇಳಿದ್ದಿಷ್ಟು!

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ದಾಸೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಐಫ್ಲೆಕ್ಸ್ ಬ್ಯಾನರ್ ಮೂಲಕ ಗಿರೀಶ್ ಕುಮಾರ್ ನಿರ್ಮಾಣ ಕಾರ್ಯದಲ್ಲಿ ಸಾಥ್ ಕೊಟ್ಟಿದ್ದಾರೆ. ‘ಅನ್ ಲಾಕ್ ರಾಘವ’ ಅನ್ನೋ ಟೈಟಲ್ ಕೇಳಿದಾಕ್ಷಣವೇ ಒಂದಷ್ಟು ಬಗೆಯ ಕಲ್ಪನೆ ಸಹಜವಾಗಿಯೇ ಮೂಡಿಕೊಳ್ಳುತ್ತೆ. ಅಷ್ಟಕ್ಕೂ ಇಲ್ಲಿ ಅನ್ ಲಾಕ್ ಮಾಡೋದು ಏನನ್ನು? ಇಲ್ಲಿನ ಕಥೆ ನಿಜಕ್ಕೂ ಹೇಗಿದೆ ಅಂತೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಚಿತ್ರತಂಡ ಮಾತ್ರ ಟ್ರೈಲರ್‌ನಲ್ಲಿಯೂ ಅದರ ಬಗ್ಗೆ ಸೂಚನೆ ಬಿಟ್ಟುಕೊಡದೆ ಗೌಪ್ಯತೆ ಕಾಪಾಡಿಕೊಂಡಿದೆ. ಆದರೆ, ಇಲ್ಲಿ ಯುವ ಸಮುದಾಯ ಸೇರಿದಂತೆ ಎಲ್ಲ ವಯೋಮಾನದವರನ್ನು, ಎಲ್ಲಾ ಅಭಿರುಚಿಯ ಪ್ರೇಕ್ಷಕ ವರ್ಗವನ್ನು ಚಕಿತಗೊಳಿಸಬಲ್ಲ ಅಂಶಗಳಿವೆ ಅನ್ನೋದು ಚಿತ್ರತಂಡದ ಭರವಸೆ.

    ಈಗಾಗಲೇ ಒಂದು ಸಿನಿಮಾದಲ್ಲಿ ನಟಿಸಿ, ನಟನಾಗಲು ಬೇಕಾದ ಎಲ್ಲ ತರಬೇತಿಯನ್ನೂ ಪಡೆದುಕೊಂಡಿರುವ ಮಿಲಿಂದ್ ಗೌತಮ್ ಈ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಒಟ್ಟಾರೆ ಸಿನಿಮಾದಲ್ಲಿ ಮೈ ನವಿರೇಳಿಸುವ ಸಾಹಸ ಸನ್ನಿವೇಶಗಳು, ಎಲ್ಲರ ಮನಸಿಗಿಳಿಯ ಬಲ್ಲ ನವಿರು ಪ್ರೇಮ ಕಥನ ಹಾಗೂ ಹೆಜ್ಜೆ ಹೆಜ್ಜೆಯಲ್ಲೂ ಮುದ ನೀಡೋ ಭರ್ಜರಿ ಮನರಂಜನೆ ಇದೆ ಎಂಬ ವಿಚಾರವನ್ನು ಚಿತ್ರತಂಡ ಖಚಿತಪಡಿಸಿದೆ. ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ.

    ಶೋಭರಾಜ್, ಸಾಧು ಕೋಕಿಲಾ, ಕಡೂರು ಧರ್ಮಣ್ಣ, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಸುಂದರ್, ವೀಣಾ ಸುಂದರ್ ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ. ರೆಚೆಲ್ (Rachel David) ನಾಯಕಿಯಾಗಿ ಮಿಲಿಂದ್‌ಗೆ ಸಾಥ್ ಕೊಟ್ಟಿದ್ದಾರೆ. ಲವಿತ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ, ಅನೂಪ್ ಸಿಳೀನ್ ಸಂಗೀತ, ಅಜಯ್ ಮತ್ತು ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ.

  • ಅನ್ ಲಾಕ್ ರಾಘವನ ಬಗ್ಗೆ ನಿರ್ಮಾಪಕ ಮಂಜುನಾಥ್ ಹೇಳಿದ್ದಿಷ್ಟು!

    ಅನ್ ಲಾಕ್ ರಾಘವನ ಬಗ್ಗೆ ನಿರ್ಮಾಪಕ ಮಂಜುನಾಥ್ ಹೇಳಿದ್ದಿಷ್ಟು!

    ಮಿಲಿಂದ್ ಗೌತಮ್ (Milind Gautham) ನಾಯಕನಾಗಿ ನಟಿಸಿರುವ ‘ಅನ್ ಲಾಕ್ ರಾಘವ’ ಚಿತ್ರ ಫೆಬ್ರವರಿ 7ರಂದು ಅದ್ದೂರಿಯಾಗಿ ರಿಲೀಸ್‌ ಆಗಲಿದೆ. ಕಾಮಿಡಿ ಕಮ್ ಆಕ್ಷನ್ ಬಗೆಯ ಈ ಸಿನಿಮಾ ಈಗಾಗಲೇ ಟ್ರೈಲರ್ ಸೇರಿದಂತೆ ಒಂದಷ್ಟು ವಿಚಾರಗಳಿಂದಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇದರೊಂದಿಗೆ ವರ್ಷಾರಂಭದ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿಯೂ ಸ್ಥಾನ ಪಡೆದುಕೊಂಡಿದೆ. ಹೊಸತನದೊಂದಿಗೆ ಪ್ರೇಕ್ಷಕರಲ್ಲೊಂದು ಬೆರಗು ಮೂಡಿಸಬೇಕೆಂಬ ತುಡಿತ ಹೊಂದಿರೋ ಅಪ್ಪಟ ಸಿನಿಮಾ ಮೋಹಿಗಳ ತಂಡ ಅನ್ ಲಾಕ್ ರಾಘವನ ಹಿಂದಿದೆ. ಅದೆಲ್ಲದರ ಪ್ರೇರಕ ಶಕ್ತಿಯಂತಿರುವವರು ಈ ಸಿನಿಮಾದ ನಿರ್ಮಾಪಕ ಮಂಜುನಾಥ್ ದಾಸೇಗೌಡ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ದಾಸೇಗೌಡ (Manjunath Dasegowda) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಐಪ್ಲೆಕ್ಸ್ ಬ್ಯಾನರ್ ಮೂಲಕ ಗಿರೀಶ್ ಕುಮಾರ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ದೃಶ್ಯರೂಪ ಪಡೆಯೋ ಮುಂಚಿನ ವಿದ್ಯಮಾನಗಳು ಆಸಕ್ತಿಕರವಾಗಿರುತ್ತವೆ. ಆ ಹಾದಿಯಲ್ಲಿ ತೀವ್ರವಾದ ಕನಸು, ಹುಮ್ಮಸ್ಸುಗಳ ಒಡ್ಡೋಲಗವೂ ಇರುತ್ತದೆ. ಅದಾಗಲೇ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿ, ಮತ್ತೊಂದು ಸಿನಿಮಾದತ್ತ ಹೊರಳಿಕೊಂಡಿದ್ದ ಮಂಜುನಾಥ್ ಅವರ ಪಾಲಿನ ನಾಲಕ್ಕನೇ ಚಿತ್ರ ಅನ್ ಲಾಕ್ ರಾಘವ. ಮಂಜುನಾಥ್ ನಿರ್ದೇಶಕ ಸತ್ಯಪ್ರಕಾಶ್ ಸಿದ್ಧಪಡಿಸಿದ್ದ ಕಥೆ ಕೇಳಿ ಆರಂಭಿಕವಾಗಿಯೇ ಫಿದಾ ಆಗಿದ್ದರು. ಆರಂಭದಲ್ಲಿ ಈ ಕಥೆ ಸ್ಟಾರ್ ನಟರೊಬ್ಬರಿಗೆಂದೇ ರೆಡಿಯಾಗಿತ್ತು.

    ಆದರೆ, ಆ ಸ್ಟಾರ್ ನಟರ ಕಾಲ್ ಶೀಟ್ ಎರಡು ವರ್ಷದೊಳಗೆ ಸಿಗಲಾರದೆಂಬ ವಿಚಾರ ಮಂಜುನಾಥ್ ದಾಸೇಗೌಡ ಹಾಗೂ ನಿರ್ದೇಶಕ ದೀಪಕ್ ಪಾಲಿಗೆ ಕೊಂಚ ನಿರಾಸೆ ಮೂಡಿಸಿದ್ದದ್ದು ನಿಜ. ಆದರೆ, ಅಷ್ಟು ದೀರ್ಘಾವಧಿಯ ಕಾಲ ಕಾದು ಫ್ರೆಶ್ ಆದ ಕಥೆಯನ್ನು ಮುಗ್ಗಲು ಹಿಡಿಸಲು ಅವರು ತಯಾರಿರಲಿಲ್ಲ. ಆದರೆ, ತಕ್ಷಣವೇ ಸಿನಿಮಾ ಶುರುವಾಗಬೇಕೆಂಬ ನಿರ್ಧಾರಕ್ಕೆ ಬಂದಾಗ ಹೀರೋ ಯಾರೆಂಬ ಪ್ರಶ್ನೆ ಕಾಡಿತ್ತು. ಆಗ ಎಲ್ಲ ರೀತಿಯಿಂದಲೂ ತಯಾರಾಗಿ ನಿಂತಿದ್ದ ಹುಡುಗ ಮಿಲಿಂದ್ ಗೌತಮ್ ಸೂಕ್ತ ಎಂಬ ನಿರ್ಧಾರಕ್ಕೆ ನಿರ್ಮಾಪಕರು ಮತ್ತು ನಿರ್ದೇಶಕರು ಬಂದಿದ್ದರು. ಅದಾದ ಕೂಡಲೇ ‘ಅನ್ ಲಾಕ್ ರಾಘವ’ನಿಗೆ ವಿದ್ಯುಕ್ತ ಚಾಲನೆ ಸಿಕ್ಕಿತ್ತು. ಇದನ್ನೂ ಓದಿ:ಸುದೀಪ್ ಅಳಿಯ ಸಂಚಿತ್ ಚೊಚ್ಚಲ ಚಿತ್ರದ ಟೈಟಲ್ ರಿವೀಲ್

    ಶಿವಮೊಗ್ಗ ಮೂಲದವರಾದ ಮಂಜುನಾಥ್ ದಾಸೇಗೌಡ ಬೆಂಗಳೂರಿನಲ್ಲಿ ಬ್ಯುಸಿನೆಸ್ ನಡೆಸುತ್ತಿರುವವರು. ವ್ಯವಹಾರದ ನಡುವಲ್ಲಿಯೇ ಸಿನಿಮಾ ವ್ಯಾಮೋಹ ಹೊಂದಿದ್ದ ಅವರಿಗೆ ಒಂದಷ್ಟು ಸಿನಿಮಾ ಜಗತ್ತಿನ ಮಂದಿಯ ಪರಿಚಯವಿತ್ತು. ಈ ನಡುವೆ ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಉದ್ಘರ್ಷ ಎಂಬ ಕಥೆ ರೆಡಿ ಮಾಡಿಕೊಂಡಿದ್ದರು. ಅದನ್ನು ನಿರ್ಮಾಣ ಮಾಡುವಂತೆ ಮಂಜುನಾಥ್‌ರನ್ನು ಉತ್ತೇಜಿಸಿದ್ದರು. ಅವರ ಒತ್ತಾಸೆಯಿಂದಾಗಿ ಉದ್ಘರ್ಷ ಚಿತ್ರವನ್ನು ನಿರ್ಮಾಣ ಮಾಡಿದ್ದ ಮಂಜುನಾಥ್ ಅವರ ಪಾಲಿಗೆ ಅಗಾಧ ಅನುಉಭವ ದಕ್ಕಿತ್ತು. ಅದಾದ ಬಳಿಕ ವೀಕೆಂಡ್, ಮ್ಯಾನ್‌ ಆಫ್‌ ದ ಮ್ಯಾಚ್ ಎಂಬೆರಡು ಸಿನಿಮಾಗಳನ್ನೂ ನಿರ್ಮಾಣ ಮಾಡಿದ್ದರು.

    4ನೇ ಚಿತ್ರವನ್ನು ಸ್ಟಾರ್ ನಟನನ್ನು ಹಾಕಿಕೊಂಡು ಮಾಡಬೇಕೆಂಬ ಇರಾದೆ ಮಂಜುನಾಥ್, ಗಿರೀಶ್ ಮತ್ತು ನಿರ್ದೇಶಕರ ದೀಪಕ್ ಅವರಿಗಿತ್ತಂತೆ. ಅದು ಸಾಧ್ಯವಾಗದಿದ್ದರೂ ನಿರಾಸೆಗೊಳ್ಳದೆ ಅದೇ ಸ್ಕ್ರಿಪ್ಟ್ ಅನ್ನಿಟ್ಟುಕೊಂಡು, ಹೊಸಾ ಹುಡುಗ ಮಿಲಿಂದ್ ಗೌತಮ್‌ರನ್ನು ಹೀರೋ ಆಗಿಸಿದ್ದಾರೆ. ನಟನೆ ಸೇರಿದಂತೆ ಎಲ್ಲದ್ರಲ್ಲಿಯೂ ಪಳಗಿಕೊಂಡಿದ್ದ ಮಿಲಿಂದ್ ಆ ಪಾತ್ರವನ್ನು ಚೆಂದಗೆ ನಿಭಾಯಿಸಿದ್ದಾರೆ. ನಿರ್ದೇಶಕರು ಊಹೆಯನ್ನೂ ಮೀರಿ ಈ ಚಿತ್ರವನ್ನು ರೂಪಿಸಿದ್ದಾರೆಂಬ ತುಂಬು ಮೆಚ್ಚುಗೆ ಮಂಜುನಾಥ್ ದಾಸೇಗೌಡರಲ್ಲಿದೆ.

    ಈಗಾಗಲೇ ಟ್ರೈಲರ್ ನೋಡಿದ ಮಂದಿ ಥ್ರಿಲ್ ಆಗಿದ್ದಾರೆ. ಅದರ ಬೆನ್ನಲ್ಲಿಯೇ ಸೆನ್ಸಾರ್ ಅಧಿಕಾರಿಗಳು ಆಡಿರುವ ಮೆಚ್ಚುಗೆಯ ಮಾತುಗಳು ಅವರೊಳಗಿನ ಭರವಸೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಕಾಮಿಡಿ, ಆಕ್ಷನ್, ಲವ್ ಜೊತೆಗೆ ಕಮರ್ಶಿಯಲ್ ಅಂಶಗಳೊಂದಿಗೆ ಮೂಡಿ ಬಂದಿರೋ ಅನ್ ಲಾಕ್ ರಾಘವ ವಿಭಿನ್ನ ಕಥೆಯನ್ನೊಳಗೊಂಡಿದೆ. ಅದು ಖಂಡಿತಾ ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ತುಂಬು ನಂಬಿಕೆ ಮಂಜುನಾಥ್ ದಾಸೇಗೌಡರಲ್ಲಿದೆ. ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಶೋಭರಾಜ್, ಸಾಧು ಕೋಕಿಲಾ, ಕಡೂರು ಧರ್ಮಣ್ಣ, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಸುಂದರ್, ವೀಣಾ ಸುಂದರ್ ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ. ರೆಚೆಲ್ ನಾಯಕಿಯಾಗಿ ಮಿಲಿಂದ್ ಅವರಿಗೆ ಸಾಥ್ ಕೊಟ್ಟಿದ್ದಾರೆ. ಲವಿತ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ, ಅನೂಪ್ ಸಿಳೀನ್ ಸಂಗೀತ, ಅಜಯ್ ಮತ್ತು ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ.

  • ಮಿಲಿಂದ್ ಗೌತಮ್ ಈಗ ಅನ್ ಲಾಕ್ ರಾಘವ!

    ಮಿಲಿಂದ್ ಗೌತಮ್ ಈಗ ಅನ್ ಲಾಕ್ ರಾಘವ!

    ಹೊಸ ವರ್ಷದ ಆರಂಭದಲ್ಲಿಯೇ ಹೊಸತನದ ಒಂದಷ್ಟು ಸಿನಿಮಾಗಳು ತೆರೆಗಾಣುವ ಸನ್ನಾಹದಲ್ಲಿದೆ. ಈ ವಾರ ಅಂದರೆ, ಫೆಬ್ರವರಿ 7ರಂದು ಬಿಡುಗಡೆಗೆ ಸಜ್ಜಾಗಿರುವ ‘ಅನ್ ಲಾಕ್ ರಾಘವ’ (Unlock Raghava) ಚಿತ್ರ ಕೂಡ ಅಂಥಾ ಭರವಸೆ ಮೂಡಿಸಿರೋ ಸಿನಿಮಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್‌ನೊಂದಿಗೆ ಗಮನ ಸೆಳೆದಿರೋ ಈ ಸಿನಿಮಾ ಮೂಲಕ ಮಿಲಿಂದ್ ಗೌತಮ್ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸದರಿ ಟ್ರೈಲರ್‌ನಲ್ಲಿ ಮಿಲಿಂದ್ ಪಾತ್ರದ ಒಂದಷ್ಟು ಝಲಕ್‌ಗಳು ಜಾಹೀರಾಗಿವೆ. ನಟನೆ, ಸಾಹಸ ಸೇರಿದಂತೆ ಎಲ್ಲದರಲ್ಲಿಯೂ ತರಬೇತಿ ಪಡೆದು, ಪಳಗಿಕೊಂಡಿರುವ ಮಿಲಿಂದ್ ಗೌತಮ್ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ.

    ಮೂಲತಃ ತೀರ್ಥಹಳ್ಳಿಯವರಾದ ಮಿಲಿಂದ್ ಗೌತಮ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಅದರ ಪರಿಧಿಯಲ್ಲಿಯೇ ಬದುಕು ಕಟ್ಟಿಕೊಳ್ಳುವ ವಿಪುಲ ಅವಕಾಶಗಳಿದ್ದರೂ ಬಣ್ಣದ ಜಗತ್ತೆಂಬುದು ಆರಂಭದಿಂದಲೂ ಅವರನ್ನು ಸೆಳೆಯುತ್ತಾ ಬಂದಿತ್ತು. ಹಾಗಂತ ನಟನಾಗಿಯೇ ಬಿಡಬೇಕೆಂಬ ತೀವ್ರವಾದ ಆಕಾಂಕ್ಷೆಯೇನೂ ಇರಲಿಲ್ಲ. ಇಂಥಾ ಮಿಲಿಂದ್ ಗೌತಮ್ ಚಿತ್ರರಂಗಕ್ಕೆ ನಟನಾಗಿ ಪಾದಾರ್ಪಣೆ ಮಾಡಿದ್ದೇ ಅಚಾನಕ್ಕಾಗಿ. 2019ರ ಸುಮಾರಿಗೆ ‘ವೀಕೆಂಡ್’ ಎಂಬ ಚಿತ್ರ ಶುರುವಾಗಿತ್ತು. ಅದೊಂದು ದಿನ ಆ ಸಿನಿಮಾ ನಿರ್ದೇಶಕರು ಪುಟ್ಟ ಪಾತ್ರವೊಂದರಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರಂತೆ. ಆ ಮೂಲಕ ಕ್ಯಾಮೆರಾ ಮುಂದೆ ನಿಂತಿದ್ದ ಮಿಲಿಂದ್ ಪಾಲಿಗೆ ಅದಾಗಲೇ ಇದ್ದ ನಟನೆಯ ಆಸಕ್ತಿ ತೀವ್ರಗೊಂಡಿತ್ತು. ಇದನ್ನೂ ಓದಿ:ಬೆಂಗಳೂರಿನಲ್ಲಿ ಯಶ್‌ ಜೊತೆ ನಯನತಾರಾ ‘ಟಾಕ್ಸಿಕ್‌’ ಶೂಟಿಂಗ್‌ ಶುರು

    ಅದಾದ ನಂತರ ವಿನಾಯಕ್ ಅವರ ಗರಡಿಯಲ್ಲಿ ನಟನೆ, ಸಾಹಸ, ಡ್ಯಾನ್ಸ್ ಮುಂತಾದವುಗಳಲ್ಲಿ ತರಬೇತಿ ಪಡೆದುಕೊಂಡಿದ್ದರು. ಅದೆಲ್ಲ ಆಗುತ್ತಲೇ ಮಂಜುನಾಥ್ ಡಿ ಅವರು ‘ಅನ್‌ಲಾಕ್ ರಾಘವ’ ಚಿತ್ರವನ್ನು ನಿರ್ಮಾಣ ಮಾಡಲು ತಯಾರಾಗಿದ್ದರು. ದೀಪಕ್ ಮಧುವನಹಳ್ಳಿ ಚೆಂದದ ಕಥೆ ಸಿದ್ಧಪಡಿಸಿಕೊಂಡು ಅದಾಗಲೇ ಪರಿಚಿತರಿದ್ದ ಮಿಲಿಂದ್ ಗೌತಮ್‌ಗೆ ನಾಯಕನಾಗೋ ಅವಕಾಶ ಕಲ್ಪಿಸಿದ್ದರು. ಆ ಹಂತದಲ್ಲಿಯೇ ಕಥೆ, ಡಿಸ್ಕಷನ್ನು, ತಯಾರಿಗಳೆಲ್ಲವೂ ಮುಗಿದು ಮಿಲಿಂದ್ ನಾಯಕ ನಟನಾಗಿದ್ದರು. ಹೀಗೆ ಆರಂಭಿಕ ಹೆಜ್ಜೆಯಲ್ಲಿಯೇ ಒಂದೊಳ್ಳೆ ಪಾತ್ರ, ಭಿನ್ನವಾದ ಕಥೆ ಮತ್ತು ಪ್ರತಿಭಾನ್ವಿತ ತಂಡದ ಸಾಥ್ ಸಿಕ್ಕ ಖುಷಿ ಅವರಲ್ಲಿದೆ.

    ಇದು ಕಾಮಿಡಿ ಥ್ರಿಲ್ಲರ್ ಬಗೆಯ ಸಿನಿಮಾ. ಸತ್ಯಪ್ರಕಾಶ್ ಇದಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪಕ್ಕಾ ಕಮರ್ಶಿಯಲ್ ಜಾಡಿನಲ್ಲಿ ರೂಪುಗೊಂಡಿರೋ ‘ಅನ್‌ಲಾಕ್ ರಾಘವ’ ಚಿತ್ರದಲ್ಲಿ ಶೋಭರಾಜ್, ಸಾಧು ಕೋಕಿಲಾ, ಕಡೂರು ಧರ್ಮಣ್ಣ, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಸುಂದರ್, ವೀಣಾ ಸುಂದರ್ ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ. ರೆಚೆಲ್ ನಾಯಕಿಯಾಗಿ ಮಿಲಿಂದ್ ಅವರಿಗೆ ಸಾಥ್ ಕೊಟ್ಟಿದ್ದಾರೆ. ಮಯೂರ ಮೋಷನ್ ಪಿಕ್ಚರ್ಸ್ ಹಾಗೂ ಐಪ್ಲೆಕ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲವಿತ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ, ಅನೂಪ್ ಸಿಳೀನ್ ಸಂಗೀತ, ಅಜಯ್ ಮತ್ತು ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ. ಇದರೊಂದಿಗೆ ಹೊಸ ಪ್ರತಿಭೆ ಮಿಲಿಂದ್ ಗೌತಮ್ ನಾಯಕನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳು ದಟ್ಟವಾಗಿಯೇ ಕಾಣಿಸುತ್ತಿವೆ.