Tag: University of Colchester Essex

  • ಪದವಿ ಪ್ರಧಾನ ಸಮಾರಂಭದಲ್ಲಿ ಪ್ರಪೋಸ್ – ವೇದಿಕೆಯಲ್ಲೇ ಚುಂಬನ

    ಪದವಿ ಪ್ರಧಾನ ಸಮಾರಂಭದಲ್ಲಿ ಪ್ರಪೋಸ್ – ವೇದಿಕೆಯಲ್ಲೇ ಚುಂಬನ

    ಲಂಡನ್/ಕಾಲ್ಚೆಸ್ಟರ್: ಪದವಿ ಸಮಾರಂಭದಲ್ಲಿಯೇ ವಿದ್ಯಾರ್ಥಿನಿಗೆ ಗೆಳೆಯನೋರ್ವ ತನ್ನ ಪ್ರೇಮ ನಿವೇದನೆಯನ್ನು ಸಲ್ಲಿಸಿದ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪರ, ವಿರೋಧ ವ್ಯಕ್ತವಾಗಿವೆ.

    25 ವರ್ಷದ ಆಗ್ನೆ ಬಾನುಸ್ಕೆವಿಸಿಯುಟ್ ವಿದ್ಯಾರ್ಥಿನಿ ವೇದಿಕೆಯ ಮೇಲೆ ಪದವಿ ಪಡೆಯುತ್ತಿದ್ದ ವೇಳೆ ಆಕೆಯ ಬಾಲ್ಯದ ಗೆಳೆಯ ಎಡ್ಗರಸ್ ಅವೆರ್ಬುಚಾಸ್ (27) ತನ್ನ ಪ್ರೇಮ ನಿವೇದನೆ ಸಲ್ಲಿಸಿದ್ದಾನೆ. ಕಾಲ್ಚೆಸ್ಟರ್ ನ ಎಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರಧಾನ ಸಮಾರಂಭದ ಕಾರ್ಯಕ್ರಮ ನಡೆಯುತ್ತಿತ್ತು. ವಿದ್ಯಾರ್ಥಿಗಳು ಸಹ ಸರತಿ ಸಾಲಿನಲ್ಲಿ ಬಂದು ಕುಲಪತಿಗಳಿಂದ ಪದವಿ ಸ್ವೀಕರಿಸುತ್ತಿದ್ದರು.

    ಆಗ್ನೆ ಸಹ ತನ್ನ ಪದವಿ ಪಡೆಯಲು ವೇದಿಕೆ ಮೇಲೆ ಬಂದಿದ್ದಳು. ಪದವಿ ಪಡೆದ ಕೂಡಲೇ ವೇದಿಕೆಯತ್ತ ಬಂದ ಎಡ್ಗರಸ್ ಬಂದು ಮೊಣಕಾಲೂರಿ ಉಂಗುರು ಹಿಡಿದು ಮದುವೆ ಆಗುವಂತೆ ಮನವಿ ಮಾಡಿಕೊಂಡಿದ್ದಾನೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಜನ ಒಂದು ಕ್ಷಣ ಗಲಿಬಿಲಿಗೊಂಡು ಕೊನೆಗೆ ಚಪ್ಪಾಳೆ ಮೂಲಕ ಶುಭ ಹಾರೈಸಿದ್ದಾರೆ.

    ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಸಿಬ್ಬಂದಿ ಸಮ್ಮುಖದಲ್ಲಿಯೇ ಉಂಗುರು ತೊಡಿಸಿದ ಎಡ್ಗರಸ್ ವೇದಿಕೆಯಲ್ಲಿಯೇ ಚುಂಬಿಸಿದ್ದಾನೆ. ಈ ಪ್ರೇಮ ನಿವೇದನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಪರ, ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.