Tag: United States

  • ಟ್ರಂಪ್ ಮತ್ತೆ ತೆರೆಯಲು ಮುಂದಾಗಿರೋ ಅಲ್ಕಾಟ್ರಾಜ್ ಜೈಲು ಅದೆಷ್ಟು ಭಯಾನಕ ಗೊತ್ತಾ?

    ಟ್ರಂಪ್ ಮತ್ತೆ ತೆರೆಯಲು ಮುಂದಾಗಿರೋ ಅಲ್ಕಾಟ್ರಾಜ್ ಜೈಲು ಅದೆಷ್ಟು ಭಯಾನಕ ಗೊತ್ತಾ?

    ಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬಳಿಯ ದ್ವೀಪವೊಂದರಲ್ಲಿ 60 ವರ್ಷಗಳ (1963) ಹಿಂದೆ ಮುಚ್ಚಲ್ಪಟ್ಟ ಅಲ್ಕಾಟ್ರಾಜ್ ಜೈಲನ್ನು (Alcatraz Jail) ತೆರೆಯಲು ಅಮೆರಿಕ (United States) ಅಧ್ಯಕ್ಷ ಟ್ರಂಪ್‌ (Donald Trump) ಮತ್ತೆ ಮುಂದಾಗಿದ್ದಾರೆ. ಈ ಜೈಲನ್ನು ಮತ್ತೆ ತೆರೆಯುವುದು ಕಾನೂನು, ಸುವ್ಯವಸ್ಥೆ ಮತ್ತು ನ್ಯಾಯದ ಸಂಕೇತ ಎಂದು ಅವರು ಹೇಳಿಕೊಂಡಿದ್ದಾರೆ.

    ಸ್ಯಾನ್ ಫ್ರಾನ್ಸಿಸ್ಕೋ ನಗರದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಅಲ್ಕಾಟ್ರಾಜ್ ಜೈಲನ್ನು ಆ ಕಾಲಘಟ್ಟದಲ್ಲಿ ಅತ್ಯಂತ ಕಠಿಣ ಜೈಲುಗಳಲ್ಲಿ ಒಂದಾಗಿತ್ತು ಎಂದು ಪರಿಗಣಿಸಲಾಗಿತ್ತು. ಈ ಜೈಲು ಮೂಲತಃ ಅಲ್ಕಾಟ್ರಾಜ್ ದ್ವೀಪದ ರಕ್ಷಣಾ ಕೋಟೆಯಾಗಿತ್ತು. ಅಂತರ್ಯುದ್ಧದ ಸಮಯದಲ್ಲಿ, ಇದನ್ನು ಮಿಲಿಟರಿ ಜೈಲಾಗಿ ಪರಿವರ್ತಿಸಲಾಯಿತು. ಇದು ಸುಮಾರು 22 ಎಕರೆ ವಿಸ್ತೀರ್ಣ ಹೊಂದಿದ್ದು, ಅಮೆರಿಕದ ಕುಖ್ಯಾತ ದರೋಡೆಕೋರ ಅಲ್ ಕಾಪೋನ್ ಸೇರಿದಂತೆ ಕೆಲವು ಕುಖ್ಯಾತ ಅಪರಾಧಿಗಳನ್ನು ಇಲ್ಲಿ ಇರಿಸಲಾಗಿತ್ತು.

    ಈ ಜೈಲು ಅದೆಷ್ಟು ಭದ್ರವಾಗಿತ್ತು ಎಂದರೆ, ವಿಶ್ವದ ಅಪಾಯಕಾರಿ ಕೈದಿಗಳು ಸಹ ಇಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಯಾಕಂದ್ರೆ ಈ ಜೈಲಿನಲ್ಲಿದ್ದ ಕೈದಿಗಳಿಗೆ ಕೋಲು ಹಿಡಿದು ಕಾಯುವ ಪೊಲೀಸರು ಇರಲಿಲ್ಲ, ಬದಲಿಗೆ ಶಾರ್ಕ್ ಮೀನುಗಳೇ ಈ ಜೈಲಿನ ಕಾವಲು ಕಾಯುತ್ತಿದ್ದವು. ಇಂತಹ ಜೈಲು 3 ಬಾರಿ ಪ್ರವಾಹಕ್ಕೆ ತುತ್ತಾಗಿದ್ದರಿಂದ ಗೋಡೆಗಳೆಲ್ಲ ಹಾನಿಗೊಳಗಾಗಿತ್ತು. ಅಲ್ಲದೇ ನಿರ್ವಹಣಾ ವೆಚ್ಚ ಹೆಚ್ಚಾದ ಕಾರಣದಿಂದ 1963ರಲ್ಲಿ ಈ ಜೈಲನ್ನು ಬಂದ್‌ ಮಾಡಲಾಗಿತ್ತು.

    ಇದೀಗ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಟ್ರಂಪ್‌ ಈ ಜೈಲನ್ನು ಮತ್ತೆ ತೆರೆಯಲು ಪ್ಲ್ಯಾನ್‌ ಮಾಡಿದ್ದಾರೆ. ಈಗ ಪ್ರವಾಸಿ ತಾಣವಾಗಿರುವ ಈ ಕೋಟೆಯನ್ನು ಮತ್ತೆ ಜೈಲನ್ನಾಗಿ ಮಾಡಿ, ಮತ್ತಷ್ಟು ವಿಸ್ತರಿಸಲು ಅವರು ಆದೇಶಿಸಿದ್ದಾರೆ. ಈ ಜೈಲನ್ನು ಅತ್ಯಂತ ಕ್ರೂರಿಗಳನ್ನು ಇರಿಸುವುದಾಕ್ಕಾಗಿ ಮತ್ತೆ ತೆರೆಯಲಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

    ಟ್ರಂಪ್‌ ಅಲ್ಕಾಟ್ರಾಜ್ ರೀ ಓಪನ್‌ ಬಗ್ಗೆ ಹೇಳಿದ್ದೇನು?
    ಅಲ್ಕಾಟ್ರಾಜ್ ಜೈಲಿನಲ್ಲಿ ಅತ್ಯಂತ ಕ್ರೂರಿಗಳನ್ನು ಇರಿಸಲಾಗುತ್ತದೆ. ಕೆಲಸಕ್ಕಾಗಿ ಹಾಗೂ ನಮ್ಮ ದೇಶಕ್ಕೆ ಅಕ್ರಮವಾಗಿ ಬಂದ ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳಲು ನಮಗೆ ಅವಕಾಶವಿದೆ. ಗೂಂಡಾಗಳಿಗೆ ನಾವಿನ್ನು ಮುಂದೆ ಹೆದರುವುದಿಲ್ಲ. ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ.

    ಬಹಳ ಸಮಯದಿಂದ, ಅಮೆರಿಕವು ಕ್ರೂರ, ಹಿಂಸಾತ್ಮಕ ಮತ್ತು ಪುನರಾವರ್ತಿತ ಅಪರಾಧಿಗಳಿಂದ ಬಳಲುತ್ತಿದೆ. ಅಂತಹ ಕ್ರಿಮಿನಲ್‌ಗಳು ಸಮಾಜದ ಕಸ, ಅವರು ಸಮಾಜಕ್ಕೆ ದುಃಖವನ್ನು ಹೊರತುಪಡಿಸಿ ಬೇರೆ ಏನನ್ನೂ ನೀಡುವುದಿಲ್ಲ. ಅದಕ್ಕಾಗಿ ಈ ಜೈಲು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಅಲ್ಕಾಟ್ರಾಜ್ ಕೋಟೆ ಜೈಲಾಗಿದ್ದು ಹೇಗೆ?
    ಅಲ್ಕಾಟ್ರಾಜ್ ಜೈಲು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ಕರಾವಳಿಯಲ್ಲಿದೆ. ಒಂದು ಕಾಲದಲ್ಲಿ ಕೋಟೆಯಾಗಿದ್ದ ಇದನ್ನು 1912ರಲ್ಲಿ ಯುಎಸ್ ಸೈನ್ಯದ ಮಿಲಿಟರಿ ಜೈಲಾಗಿ ಪರಿವರ್ತಿಸಲಾಯಿತು.

    ಅಲ್ಕಾಟ್ರಾಜ್ ಯಾಕಿಷ್ಟು ಭದ್ರ ಗೊತ್ತಾ?
    ಮೂರು ಅಂತಸ್ತಿನ ಈ ಜೈಲು ಅಮೆರಿಕದಿಂದ ಬೌಗಳಿಕ ಪ್ರದೇಶದ ಸಂಪರ್ಕವಿಲ್ಲದೇ ಪ್ರತ್ಯೇಕವಾಗಿದೆ. ಸುತ್ತ ಸಮುದ್ರ ವ್ಯಾಪಿಸಿದ್ದು, ಭಾರೀ ಅಲೆಗಳು ಮತ್ತು ಶಾರ್ಕ್‌ ಮೀನುಗಳ ಹಾವಳಿಯಿಂದ ಈ ಜೈಲಿನಿಂದ ಕೈದಿಗಳು ತಪ್ಪಿಸಿಕೊಳ್ಳವುದು ಅಸಾಧ್ಯವಾಗಿತ್ತು. ಅಕಸ್ಮಾತ್‌ ತಪ್ಪಿಕೊಂಡ್ರೆ ಅಪರಾಧಿಗಳು ಶಾರ್ಕ್‌ಗಳಿಗೆ ಊಟವಾಗಬೇಕಿತ್ತು!

    ಈ ಜೈಲು ನಾಲ್ಕು ಸೆಲ್ ಬ್ಲಾಕ್‌ಗಳು, ವಾರ್ಡನ್ ಕಚೇರಿ, ಸಂದರ್ಶಕರ ಕೊಠಡಿ, ಗ್ರಂಥಾಲಯ ಮತ್ತು ಕ್ಷೌರಿಕರ ಕೊಠಡಿಯನ್ನು ಒಳಗೊಂಡಿತ್ತು. ಅತ್ಯಂತ ಅಪಾಯಕಾರಿ ಕೈದಿಗಳನ್ನು ಡಿ-ಬ್ಲಾಕ್‌ನಲ್ಲಿ ಇರಿಸಲಾಗುತ್ತಿತ್ತು. 1934ರಲ್ಲಿ ಜೈಲು ಕಟ್ಟಡವನ್ನು ನವೀಕರಿಸಿದಾಗ ಅದರ ಕಬ್ಬಿಣದ ಮೆಟ್ಟಿಲುಗಳು, ಗನ್‌ ಇಡಲು ಗ್ರಾನೈಟ್ ಬ್ಲಾಕ್‌ಗಳನ್ನು ನಿರ್ಮಿಸಲಾಗಿತ್ತು. ಈ ಜೈಲಿನಲ್ಲಿದ್ದ ರಾಬರ್ಟ್ ಫ್ರಾಂಕ್ಲಿನ್ ಎಂಬ ಅಪರಾಧಿ ಜೈಲು ಸಿಬ್ಬಂದಿಯನ್ನೇ ಹತ್ಯೆಗೈದಿದ್ದ.

    ಜೈಲಿನ ನಿವಹಣಾ ವೆಚ್ಚ ಹೆಚ್ಚಾಗಿದ್ದರಿಂದ ಈ ಜೈಲನ್ನು 1963ರಲ್ಲಿ ಮುಚ್ಚಲಾಯಿತು. ಬಳಿಕ ಯುಎಸ್ ಸರ್ಕಾರವು 1972ರಲ್ಲಿ ಈ ದ್ವೀಪವನ್ನು ರಾಷ್ಟ್ರೀಯ ಉದ್ಯಾನವನ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿತು. ಬಳಿಕ ಇದು ಗೋಲ್ಡನ್ ಗೇಟ್ ಎಂಬ ಹೆಸರಿನ ಪ್ರವಾಸಿ ಸ್ಥಳವಾಗಿ ಹೆಸರಾಯಿತು.

    36 ಕೈದಿಗಳಿಂದ ತಪ್ಪಿಸಿಕೊಳ್ಳೋಕೆ ಯತ್ನ!
    ಇಂತಹ ಭದ್ರ ಜೈಲಿಂದ 36 ಕೈದಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಅದರಲ್ಲಿ ಹೆಚ್ಚಿನ ಕೈದಿಗಳನ್ನು ಸೆರೆಹಿಡಿಯಲಾಗಿತ್ತು. ಅದರಲ್ಲಿ ಕೆಲವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 1962 ರಲ್ಲಿ ಫ್ರಾಂಕ್ ಮೋರಿಸ್ ಮತ್ತು ಆಂಗ್ಲಿನ್ ಸಹೋದರರು ಅಲ್ಲಿಂದ ತಪ್ಪಿಸಿಕೊಂಡಿದ್ದರು. ಆ ಇಬ್ಬರೂ ಏನಾದರೂ ಎಂಬುದು ಇಂದಿಗೂ ತಿಳಿದು ಬಂದಿಲ್ಲ.

  • ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

    ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

    ವಾಷಿಂಗ್ಟನ್‌: ಅಮೆರಿಕಕ್ಕೆ (USA) ಆಮದು ಮಾಡಿಕೊಳ್ಳುವ ಎಲ್ಲಾ ವಿದೇಶಿ ಕಾರು ಹಾಗೂ ಇತರೇ ವಾಹನಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಘೋಷಣೆ ಮಾಡಿದ್ದಾರೆ. ಅಲ್ಲದೇ ಈ ಸುಂಕ ನಿರ್ಧಾರ ಶಾಶ್ವತವಾಗಿರಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

    ಓವಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್‌, ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಕಾರು, ವಾಹನಗಳ ಮೇಲೆ 25% ಸುಂಕ (25 per cent Tariff) ವಿಧಿಸಲಾಗುತ್ತದೆ. ಅಮೆರಿಕದಲ್ಲೇ ತಯಾರು ಮಾಡಿದ್ರೆ ಅದಕ್ಕೆ ಯಾವುದೇ ಸುಂಕ ವಿಧಿಸುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕ ಆಮದು ಮೇಲಿನ ಸುಂಕ ಕಡಿತ – ಭಾರತದಿಂದ ಮೊದಲ ಹಂತದ ವ್ಯಾಪಾರ ಒಪ್ಪಂದ

    ಏಪ್ರಿಲ್‌ 2ರಿಂದ ಸುಂಕ ನೀತಿ ಜಾರಿಯಾಗಲಿದ್ದು, ಏಪ್ರಿಲ್‌ 3ರಿಂದ ಸಂಗ್ರಹ ಪ್ರಾರಂಭವಾಗಲಿದೆ. ಅಮೆರಿಕದ ಈ ನೀತಿಯು ದೇಶಿಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಜೊತೆಗೆ ವಾಹನ ತಯಾರಕರ ಪೂರೈಕೆ ಸರಪಳಿ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಹೇಳಿದ್ದಾರೆ. ಆದ್ರೆ ಟ್ರಂಪ್‌ ಅವರ ಈ ನಿರ್ಧಾರದಿಂದ ಅಮೆರಿಕದ ಗ್ರಾಹಕರು ಹಣದುಬ್ಬರ ಎದುರಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದ 16 ವಯಸ್ಸಿನ ಟಿಕ್‌ಟಾಕ್‌ ಸ್ಟಾರ್‌ ಸಾವು

    ಟ್ರಂಪ್ ನಿರ್ಧಾರದಲ್ಲಿ ಮಸ್ಕ್ ಪಾತ್ರ ಇದೆಯೇ?
    ಟ್ರಂಪ್‌ ಅವರ ಈ ನಿರ್ಧಾರದ ಹಿಂದೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್ (Elon Musk) ಪಾತ್ರ ಇದೆಯೇ ಎನ್ನುವ ವದಂತಿ ಕೇಳಿಬರುತ್ತಿದ್ದಂತೆ, ಆ ರೀತಿ ಯಾವುದೇ ಪಾತ್ರ ಇಲ್ಲ ಎಂದು ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ. ಸುಂಕದ ಬಗ್ಗೆ ಮಸ್ಕ್ ಯಾವುದೇ ಸಲಹೆ ನೀಡಿಲ್ಲ ಎಂದು ಹೇಳಿದ್ದಾರೆ.

    ಈ ನೀತಿಯನ್ನು ಪ್ರಮುಖ ವಾಹನ ತಯಾರಕರೊಂದಿಗೆ ಚರ್ಚಿಸಿದ್ದೇನೆ ಮತ್ತು ಈ ಸುಂಕಗಳು ಒಟ್ಟಾರೆಯಾಗಿ ಸಮತೋಲಿತವಾಗಿರುತ್ತವೆ. ಟೆಸ್ಲಾಗೂ ಇದು ಪ್ರಯೋಜನಕಾರಿಯಾಗಬಹುದು ಎಂದಿದ್ದಾರೆ. ಇದನ್ನೂ ಓದಿ: ಭಾರತಕ್ಕಿಂತಲೂ ನಾವು ಹಿಂದಿದ್ದೇವೆ – ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾದ ಟ್ರಂಪ್‌

  • ಅಮೆರಿಕದ ಏಳ್ಗೆಗಾಗಿ ವಿದೇಶಗಳಿಗೆ ತೆರಿಗೆ, ಫೆಡರಲ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ರದ್ದು; ಮಹತ್ವದ ಆದೇಶಗಳಿಗೆ ಟ್ರಂಪ್‌ ಸಹಿ

    ಅಮೆರಿಕದ ಏಳ್ಗೆಗಾಗಿ ವಿದೇಶಗಳಿಗೆ ತೆರಿಗೆ, ಫೆಡರಲ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ರದ್ದು; ಮಹತ್ವದ ಆದೇಶಗಳಿಗೆ ಟ್ರಂಪ್‌ ಸಹಿ

    ವಾಷಿಂಗ್ಟನ್‌: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ (Donald Trump) ಅಧಿಕಾರ ಸ್ವೀಕರಿಸಿದ್ದಾರೆ. ಇದೇ ವೇಳೆ ಅಮೆರಿಕನ್ನರ ಏಳಿಗೆಗಾಗಿ ವಿದೇಶಗಳಿಗೆ ತೆರಿಗೆ ವಿಧಿಸುವ ಮಹತ್ವದ ಘೋಷಣೆ ಮಾಡಿರುವ ಟ್ರಂಪ್‌ 80 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಅಲ್ಲದೇ ಶ್ವೇತಭವನ ತಲುಪಿದ ಬಳಿಕ ಇನ್ನಷ್ಟು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಲಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡ ಟ್ರಂಪ್‌, ವಿಶೇಷ ಅಧಿಕಾರ ಬಳಸಿ 2021ರಲ್ಲಿ ನಡೆದ ವಾಷಿಂಗ್ಟನ್‌ ಗಲಭೆ ಪ್ರಕರಣದ ಆರೋಪಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಮಹತ್ವದ ಆದೇಶಗಳಿಗೆ ಸಹಿ ಹಾಕುವ ಮುನ್ನವೇ ಜೋ ಬೈಡನ್‌ ಅವರ ಅವಧಿಯಲ್ಲಿ ತೆಗೆದುಕೊಳ್ಳಲಾದ 80 ವಿನಾಶಕಾರಿ ಕ್ರಮಗಳನ್ನು ಹಿಂಪಡೆಯುವುದಾಗಿ ಟ್ರಂಪ್‌ ಗುಡುಗಿದ್ದಾರೆ. ಇದನ್ನೂ ಓದಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಸ್ವೀಕಾರ – ಮೋದಿ ವಿಶ್‌

    ಪ್ರಮುಖ ಆದೇಶಗಳೇನು?
    ಅಮೆರಿಕದ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು. ಮೆಕ್ಸಿಕೋ ಗಡಿಗೆ ಸೇನೆ ಕಳುಹಿಸುವುದು ನಮ್ಮ ಆದ್ಯತೆ ಆಗಿದೆ. ಅಲ್ಲದೇ ಅಮೆರಿಕ ಪ್ರವೇಶಿಸುತ್ತಿರುವ ಅಕ್ರಮ ವಲಸಿಗರನ್ನು ಸಂಪೂರ್ಣವಾಗಿ ತಡೆಯುವುದು. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನ ದೇಶದಿಂದ ಹೊರಹಾಕುವುದು ಆದ್ಯತೆಯಾಗಿದೆ. ಅಲ್ಲದೇ ಅಮೆರಿಕ ಗಡಿಯುದ್ಧಕ್ಕೂ ಸೇನೆ ನಿಯೋಜಿಸಲು ತಕ್ಷಣ ಆದೇಶ ಹೊರಡಿಸುತ್ತೇನೆ ಎಂಬುದಾಗಿಯೂ ಟ್ರಂಪ್‌ ಘೋಷಿಸಿದ್ದಾರೆ.

    ಅಷ್ಟೇ ಅಲ್ಲದೇ ಪಳೆಯುಳಿಕೆ ಇಂಧನ ಉತ್ಪಾದನೆಯನ್ನು ಹೆಚ್ಚಿಸುವುದು, ಪರಿಸರ ನಿಯಮಗಳನ್ನು 2021ರ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಹಿಂತೆಗೆದುಕೊಳ್ಳುವ ಪ್ರಮುಖ ಆದೇಶಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕದನ ವಿರಾಮದ ಮೊದಲ ಹೆಜ್ಜೆ ಯಶಸ್ವಿ: ಹಮಾಸ್‌ನಿಂದ ಮೂವರು ಒತ್ತೆಯಾಳು ಬಿಡುಗಡೆ

    ವರ್ಕ್‌ಫ್ರಮ್‌ ಹೋಮ್‌ ರದ್ದು:
    ಫೆಡರಲ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಕೊನೆಗೊಳಿಸುವ ಆದೇಶವನ್ನು ಟ್ರಂಪ್‌ ಮೊದಲು ಪ್ರಕಟಿಸಿದ್ದಾರೆ. ಸರ್ಕಾರದ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಏಜೆನ್ಸಿ ಮುಖ್ಯಸ್ಥರು, ವಿಭಾಗಗಳು ಆದಷ್ಟು ಬೇಗ ವರ್ಕ್‌ ಫ್ರಮ್‌ ಹೋಮ್‌ ನಿಯಮವನ್ನು ಹಿಂತೆಗೆದುಕೊಳ್ಳಬೇಕು. ಅಗತ್ಯಬಿದ್ದಲ್ಲಿ ಆಯಾ ಏಜೆನ್ಸಿ, ಇಲಾಖೆ ಮುಖ್ಯಸ್ಥರು ವಿನಾಯಿತಿ ನೀಡಲಿದ್ದಾರೆ ಎಂದು ಟ್ರಂಪ್‌ ಕಾರ್ಯಾದೇಶದಲ್ಲಿ ತಿಳಿಸಿದ್ದಾರೆ.

    ಟ್ರಂಪ್‌ ಆದೇಶದ ಪ್ರಮುಖ ಅಂಶಗಳು:
    * ವಾಘ್‌ ಸ್ವಾತಂತ್ರ್ಯ ಮರುಸ್ಥಾಪಿಸುವುದು ಮತ್ತು ಫೆಡರಲ್‌ ಸೆನ್ಸಾರ್‌ಶಿಪ್‌ ಕೊನೆಗೊಳಿಸುವುದು
    * ಗಲ್ಫ್‌ ಆಫ್‌ ಮೆಕ್ಸಿಕೊವನ್ನು ಗಲ್ಫ್‌ ಆಫ್‌ ಅಮೆರಿಕ ಎಂದು ಮರುನಾಮಕರಣ ಮಾಡುವುದು
    * ಚೀನಾ ನಿರ್ವಹಣೆ ಮಾಡುತ್ತಿರುವ ಪನಾಮ ಕಾಲುವೆಯನ್ನು ಮರಳಿ ಪಡೆಯುವುದು
    * ಅಮೆರಿಕದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಸ್ಥಗಿತಗೊಂಡಿದ್ದ ಟಿಕ್‌ಟಾಕ್‌ ಸೇವೆಯನ್ನು ಮುಂದಿನ 24 ಗಂಟೆಯಲ್ಲಿ ಪ್ರಾರಂಭಿಸುವುದು ಎಂಬಿತ್ಯಾದಿ ಅದೇಶಗಳಿಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

    ಅಮೆರಿಕದಲ್ಲಿರೋದು ಎರಡೇ ಲಿಂಗ:
    ತೃತೀಯ ಲಿಂಗಿಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಟ್ರಂಪ್‌, ಇನ್ಮುಂದೆ ಅಮೆರಿಕದಲ್ಲಿ 2 ಲಿಂಗಗಳಷ್ಟೇ ಇರುತ್ತವೆ ಎಂದು ಘೋಷಿಸಿದ್ದಾರೆ. ಅಲ್ಲದೇ ಮಹಿಳೆಯರ ಕ್ರೀಡೆಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ನೀಡುವುದನ್ನು ನಿಷೇಧಿಸುತ್ತೇನೆ ಎಂಬುದಾಗಿಯೂ ಟ್ರಂಪ್‌ ಘೋಷಿಸಿದ್ದಾರೆ.

  • ಪನಾಮ ಕಾಲುವೆ ಸ್ವಾಧೀನ – ಟ್ರಂಪ್‌ ಬೆದರಿಕೆ ಯಾಕೆ?

    ಪನಾಮ ಕಾಲುವೆ ಸ್ವಾಧೀನ – ಟ್ರಂಪ್‌ ಬೆದರಿಕೆ ಯಾಕೆ?

    ನಾಮ ಕಾಲುವೆ, ಒಂದು ಪ್ರಮುಖ ಜಾಗತಿಕ ಹಡಗು ಮಾರ್ಗ, ಶತಮಾನಗಳಿಂದ ಐತಿಹಾಸಿಕ ಉದ್ವಿಗ್ನತೆ ಮತ್ತು ಭೌಗೋಳಿಕ ರಾಜಕೀಯ ವಿವಾದಗಳ ಕೇಂದ್ರವಾಗಿದೆ. ಇತ್ತೀಚೆಗೆ, ಯುಎಸ್ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದರ ಮೇಲೆ ಯುಎಸ್ ನಿಯಂತ್ರಣವನ್ನು ಪುನಃ ಹೇರುವುದಾಗಿ ಬೆದರಿಕೆ ಹಾಕಿದ್ದಾರೆ. ಲ್ಯಾಟಿನ್ ಅಮೇರಿಕನ್ ನಾಯಕರು, ವಿಶೇಷವಾಗಿ ಪನಾಮದಿಂದ ಪ್ರತಿಭಟನೆಯ ಅಲೆಯನ್ನು ಹುಟ್ಟುಹಾಕಿದ ನಂತರ ಈ ಕಾಲುವೆಯು ಅಂತರರಾಷ್ಟ್ರೀಯ ಚರ್ಚೆಗಳಲ್ಲಿ ಮತ್ತೆ ಹುಟ್ಟಿಕೊಂಡಿದೆ.

    ಪನಾಮ ಕಾಲುವೆ ಎಂದರೇನು?
    ಪನಾಮ ಕಾಲುವೆಯು ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳನ್ನು ಸಂಪರ್ಕಿಸುವ 82-ಕಿ.ಮೀ (51-ಮೈಲಿ) ಕೃತಕ ಜಲಮಾರ್ಗವಾಗಿದೆ. ಈ ಮಾರ್ಗದ ಪ್ರಯಾಣವು ದಕ್ಷಿಣ ಅಮೆರಿಕಾದ ದಕ್ಷಿಣ ತುದಿಯಲ್ಲಿ ಸಾವಿರಾರು ಮೈಲುಗಳು ಮತ್ತು ವಾರಗಳ ಪ್ರಯಾಣವನ್ನು ಉಳಿಸುತ್ತದೆ. ಹಡಗು ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಉದಾಹರಣೆಗೆ ಲಾಸ್ ಏಂಜಲೀಸ್‌ನಿಂದ ನ್ಯೂಯಾರ್ಕ್ಗೆ ಪ್ರಯಾಣಿಸುವ ಹಡಗುಗಳು ದಕ್ಷಿಣ ಅಮೆರಿಕಾದ ಮೆಗೆಲ್ಲನ್ ಜಲಸಂಧಿಯ ದೀರ್ಘ ಮಾರ್ಗದ ಬದಲು ಕಾಲುವೆಯನ್ನು ಬಳಸುವ ಮೂಲಕ ಸುಮಾರು 8,000 ಮೈಲುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮೂಲಕ ಸುಮಾರು 22 ದಿನಗಳ ಪ್ರಯಾಣವನ್ನು ಉಳಿಸಬಹುದು.

    ಈ ಕಾಲುವೆಯು ಸಮುದ್ರ ಮಟ್ಟದಿಂದ 26 ಮೀ (85 ಅಡಿ) ಎತ್ತರದಲ್ಲಿರುವ ಗಾಟುನ್ ಸರೋವರದಾದ್ಯಂತ ಹಡಗುಗಳನ್ನು ಸಾಗಿಸುವ ಲಾಕ್‌ಗಳ ಸರಣಿಯ ಮೂಲಕ ಕಾರ್ಯನಿರ್ವಹಿಸುತ್ತದೆ. ಸಾಗಣೆಯಾಗುವ ಪ್ರತಿಯೊಂದು ಹಡಗಿಗೆ ಸರಿಸುಮಾರು 200 ಮಿಲಿಯನ್ ಲೀಟರ್ (53 ಮಿಲಿಯನ್ ಗ್ಯಾಲನ್) ತಾಜಾ ನೀರು ಬೇಕಾಗುತ್ತದೆ. ಇದರ ಕಾರ್ಯಾಚರಣೆಯು ಶಿಪ್ಪಿಂಗ್‌ಗೆ ಮಾತ್ರವಲ್ಲದೆ ಪನಾಮಕ್ಕೆ ಪ್ರಮುಖ ಆದಾಯ ಉತ್ಪಾದಕವಾಗಿಯೂ ಕಾರ್ಯನಿರ್ವಹಿಸುತ್ತದೆ.

    ಪನಾಮ ಇತಿಹಾಸ:
    ಅಟ್ಲಾಂಟಿಕ್‌ಅನ್ನು ಪೆಸಿಫಿಕ್‌ಗೆ ಸಂಪರ್ಕಿಸಲು ಮಾನವ ನಿರ್ಮಿತ ಮಾರ್ಗವಾದ ಪನಾಮ ಕಾಲುವೆಯನ್ನು 1881ರಲ್ಲಿ ಫ್ರಾನ್ಸ್ ದೇಶವು ಪ್ರಾರಂಭಿಸಿತು. ಆದರೆ ಈ ಸಾಹಸವು 1890ರ ವೇಳೆಗೆ ವಿಫಲವಾಯಿತು. 1904 ಮತ್ತು 1914ರ ನಡುವೆ, ಯುನೈಟೆಡ್ ಸ್ಟೇಟ್ಸ್ ನಿರ್ಮಾಣವನ್ನು ಪೂರ್ಣಗೊಳಿಸಿತು.

    1903ರಲ್ಲಿ, ಕೊಲಂಬಿಯಾ ಕಾಲುವೆ ನಿರ್ಮಾಣದ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ, ಯುನೈಟೆಡ್ ಸ್ಟೇಟ್ಸ್ ಪನಾಮದ ಸ್ವಾತಂತ್ರ‍್ಯದ ಘೋಷಣೆಯನ್ನು ಬೆಂಬಲಿಸಿತು. ಮೂರು ದಿನಗಳ ನಂತರ, ವಾಷಿಂಗ್ಟನ್‌ಗೆ ಪನಾಮದ ಹೊಸ ರಾಯಭಾರಿ ಕಾಲುವೆಯನ್ನು ನಿರ್ಮಿಸಲು ಮತ್ತು ನಿಯಂತ್ರಿಸಲು ಹಕ್ಕುಗಳನ್ನು ನೀಡುವ ಒಪ್ಪಂದಕ್ಕೆ ಸಹಿ ಹಾಕಿದರು. ಯುಎಸ್ ಆರಂಭದಲ್ಲಿ ಪನಾಮಕ್ಕೆ $10 ಮಿಲಿಯನ್ ಪಾವತಿಸಿತು. $250,000 ವಾರ್ಷಿಕ ಪಾವತಿಗೆ ಒಪ್ಪಿಕೊಂಡಿತು. ಈ ವ್ಯವಸ್ಥೆಯನ್ನು ಅನೇಕ ಪನಾಮನಿಯನ್ನರು ತಮ್ಮ ಸಾರ್ವಭೌಮತ್ವದ ಉಲ್ಲಂಘನೆಯಾಗಿ ನೋಡಿದರು.

    ಯುಎಸ್ ಇಂಜಿನಿಯರ್‌ಗಳು, ಹೆಚ್ಚಾಗಿ ಆಫ್ರೋ-ಪನಾಮಾನಿಯನ್ ಮತ್ತು ಕೆರಿಬಿಯನ್ ಕಾರ್ಮಿಕರನ್ನು ಒಳಗೊಂಡಿರುವ ಕಾರ್ಯಪಡೆಯೊಂದಿಗೆ, 1914ರಲ್ಲಿ ಕಾಲುವೆಯನ್ನು ಪೂರ್ಣಗೊಳಿಸಿದರು. ಆದಾಗ್ಯೂ ಅದರ ನಿರ್ಮಾಣದ ಸಮಯದಲ್ಲಿ 5,000ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದರು. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳ ನಡುವೆ ಹಡಗುಗಳ ನಿರ್ಣಾಯಕ ಚಲನೆಯನ್ನು ಸುಗಮಗೊಳಿಸಿದಾಗ, ವಿಶೇಷವಾಗಿ 2ನೇ ಜಾಗತಿಕ ಮಹಾಯುದ್ಧದ ಸಮಯದಲ್ಲಿ ಕಾಲುವೆಯು ಶೀಘ್ರವಾಗಿ ಕಾರ್ಯತಂತ್ರದ ಮಿಲಿಟರಿ ಮತ್ತು ವ್ಯಾಪಾರ ಆಸ್ತಿಯಾಯಿತು.

    ಕಾಲುವೆಯ ಹಸ್ತಾಂತರ
    20ನೇ ಶತಮಾನದ ಬಹುಪಾಲು, ಕಾಲುವೆಯು ಪನಾಮ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಬೆಳೆಯುತ್ತಿರುವ ಉದ್ವಿಗ್ನತೆಯ ಮೂಲವಾಗಿತ್ತು. ವಿಶೇಷವಾಗಿ 1956ರ ಸೂಯೆಜ್ ಕಾಲುವೆ ಬಿಕ್ಕಟ್ಟಿನ ನಂತರ, ಇದು ಪ್ರಮುಖ ಹಡಗು ಮಾರ್ಗಗಳ ಮೇಲಿನ ನಿಯಂತ್ರಣದ ಭೌಗೋಳಿಕ ರಾಜಕೀಯ ಶಕ್ತಿಯನ್ನು ಎತ್ತಿ ತೋರಿಸಲು ಪ್ರಾರಂಭಿಸಿತ್ತು. ಕಾಲುವೆಯ ಮೇಲಿನ ಯುಎಸ್ ನಿಯಂತ್ರಣವು ಪನಾಮದಲ್ಲಿ ಹೆಚ್ಚು ಜನಪ್ರಿಯವಾಗಲಿಲ್ಲ, ಇದು ಪ್ರತಿಭಟನೆ ಮತ್ತು ಹೆಚ್ಚಿನ ಸಾರ್ವಭೌಮತ್ವಕ್ಕಾಗಿ ಬೇಡಿಕೆಗಳಿಗೆ ಕಾರಣವಾಯಿತು.

    1977ರಲ್ಲಿ, ಅಧ್ಯಕ್ಷ ಜಿಮ್ಮಿ ಕಾರ್ಟರ್ ಪನಾಮನಿಯನ್ ನಾಯಕ ಓಮರ್ ಟೊರಿಜೋಸ್ ಅವರೊಂದಿಗೆ ಟೊರಿಜೋಸ್-ಕಾರ್ಟರ್ ಒಪ್ಪಂದಗಳಿಗೆ ಸಹಿ ಹಾಕಿದರು. ಈ ಒಪ್ಪಂದಗಳು ಪನಾಮಕ್ಕೆ ಕಾಲುವೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡಿತು. ಅಗತ್ಯವಿದ್ದರೆ ಯುಎಸ್ ಅದನ್ನು ರಕ್ಷಿಸಲು ಮುಂದುವರಿಯುತ್ತದೆ ಎಂದು ಷರತ್ತು ವಿಧಿಸಿತು. ಡಿ.31, 1999 ರಂದು, ಪನಾಮ ಸಂಪೂರ್ಣವಾಗಿ ಕಾಲುವೆಯ ನಿಯಂತ್ರಣವನ್ನು ವಹಿಸಿಕೊಂಡು, ಪನಾಮ ಕಾಲುವೆ ಪ್ರಾಧಿಕಾರದಿಂದ ನಿರ್ವಹಿಸಲು ಪ್ರಾರಂಭಿಸಿತು.

    ಟ್ರಂಪ್ ಬೆದರಿಕೆ:
    ಇತ್ತೀಚಿನ ವರ್ಷಗಳಲ್ಲಿ, ಕಳೆದುಹೋದ ಆದಾಯವನ್ನು ಸರಿದೂಗಿಸಲು ಮತ್ತು ಜಾಗತಿಕ ವ್ಯಾಪಾರದಿಂದ ಹೆಚ್ಚಿದ ಬೇಡಿಕೆಯನ್ನು ನಿರ್ವಹಿಸಲು ಕಾಲುವೆಯ ಪ್ರಾಧಿಕಾರವು ಸಾರಿಗೆ ಶುಲ್ಕವನ್ನು ಹೆಚ್ಚಿಸಬೇಕಾಗಿತ್ತು.

    ಈ ಶುಲ್ಕಗಳು ಮತ್ತು ಕಾಲುವೆಯ ಬಳಿ ಹೆಚ್ಚುತ್ತಿರುವ ಚೀನೀ ಪ್ರಭಾವದ ಬಗ್ಗೆ ಕಾಳಜಿಯು ಡೊನಾಲ್ಡ್ ಟ್ರಂಪ್ ಇತ್ತೀಚಿನ ಕಾಮೆಂಟ್‌ಗಳಿಗೆ ಕಾರಣವಾಯಿತು. ಪನಾಮ ಕಾಲುವೆಯ ಮೇಲಿನ ನಿಯಂತ್ರಣವನ್ನು ಯುನೈಟೆಡ್ ಸ್ಟೇಟ್ಸ್ ಮರುಪಡೆಯಬಹುದು ಎಂದು ಟ್ರಂಪ್ ಸೂಚಿಸಿದರು. ಕಾಲುವೆ ಬಳಕೆಗೆ ಪನಾಮವು ಹೆಚ್ಚಿನ ಶುಲ್ಕವನ್ನು ವಿಧಿಸುತ್ತಿದೆ ಎಂದು ಆರೋಪಿಸಿದರು.

    ಟ್ರಂಪ್ ಹೇಳಿಕೆಯು ಕಾಲುವೆಯ ಹಿಂದಿನ ಯುಎಸ್ ಹಕ್ಕುಗಳೊಂದಿಗೆ ಪ್ರತಿಧ್ವನಿಸಿತು. ಫೀನಿಕ್ಸ್ನಲ್ಲಿ ನಡೆದ ಸಂಪ್ರದಾಯವಾದಿ ಸಭೆಯೊಂದರಲ್ಲಿ ಅವರು ಹೇಳಿದಂತೆ, ಪನಾಮ ಒಪ್ಪಂದಗಳ ಆತ್ಮವನ್ನು ಗೌರವಿಸದಿದ್ದರೆ, ಯುಎಸ್ ಕಾಲುವೆಯನ್ನು ಯುನೈಟೆಡ್ ಸ್ಟೇಟ್ಸ್ಗೆ ಹಿಂತಿರುಗಿಸಬೇಕು ಎಂದು ಒತ್ತಾಯಿಸಬಹುದು. ಅವರ ಕಾಮೆಂಟ್‌ಗಳು ಪನಾಮದಿಂದ ತಕ್ಷಣದ ಹಿನ್ನಡೆಗೆ ಕಾರಣವಾಯಿತು, ಅಧ್ಯಕ್ಷ ಜೋಸ್ ರೌಲ್ ಮುಲಿನೊ ಬೆದರಿಕೆಯನ್ನು ದೃಢವಾಗಿ ತಿರಸ್ಕರಿಸಿದರು.

    1999ರಲ್ಲಿ ಪನಾಮ ಕಾಲುವೆಯ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದ ನಂತರ, ಇದು ಜಾಗತಿಕ ವ್ಯಾಪಾರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದನ್ನು ಮುಂದುವರೆಸಿದೆ. 2007ರಲ್ಲಿ, ಪನಾಮ ದೊಡ್ಡ ಹಡಗುಗಳಿಗೆ ಸ್ಥಳಾವಕಾಶ ಕಲ್ಪಿಸಲು ಬೃಹತ್ ವಿಸ್ತರಣೆ ಯೋಜನೆಯನ್ನು ಪ್ರಾರಂಭಿಸಿತು. ಇದು 2016 ರಲ್ಲಿ ಪೂರ್ಣಗೊಂಡಿತು. ಅಂತರಾಷ್ಟ್ರೀಯ ವಾಣಿಜ್ಯದಲ್ಲಿ ಅದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತು.

    ಪನಾಮ ಕಾಲುವೆಯು ಬಹುಕಾಲದಿಂದ ಭೌಗೋಳಿಕ ರಾಜಕೀಯ ಒತ್ತಡ ಮತ್ತು ಜಾಗತಿಕ ವ್ಯಾಪಾರದಲ್ಲಿ ಮೂಲಸೌಕರ್ಯದ ಶಕ್ತಿ ಎರಡರ ಸಂಕೇತವಾಗಿದೆ. ಅದರ ವಸಾಹತುಶಾಹಿ-ಯುಗದ ಮೂಲದಿಂದ ಯುಎಸ್ ವಿದೇಶಾಂಗ ನೀತಿಯ ಕೇಂದ್ರ ಬಿಂದುವಾಗಿ ಮತ್ತು ಈಗ ಪನಾಮದ ಆಸ್ತಿಯಾಗಿ ಕಾಲುವೆಯು ಜಾಗತಿಕ ಶಕ್ತಿಗಳ ಪ್ರಾಮುಖ್ಯತೆಗೆ ಹಕ್ಕು ಸಾಧಿಸಿದೆ. ಡೊನಾಲ್ಡ್ ಟ್ರಂಪ್ ಅವರ ನಿಯಂತ್ರಣವನ್ನು ಪುನಃ ಪಡೆದುಕೊಳ್ಳುವ ಬೆದರಿಕೆ, ಅದರ ಮೇಲೆ ಕ್ರಮ ಕೈಗೊಳ್ಳಲು ಅಸಂಭವವಾಗಿದ್ದರೂ, ಜಾಗತಿಕ ವಾಣಿಜ್ಯದಲ್ಲಿ ಈ ಜಲಮಾರ್ಗದ ಮಹತ್ವವನ್ನು ಎತ್ತಿ ತೋರಿಸುತ್ತದೆ.

  • ಅದಾನಿ ವಿರುದ್ಧದ ಪ್ರಕರಣ: ಷೇರುಪೇಟೆಯಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತ

    ಅದಾನಿ ವಿರುದ್ಧದ ಪ್ರಕರಣ: ಷೇರುಪೇಟೆಯಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತ

    – ಒಂದೇ ಹೊಡೆತಕ್ಕೆ 2.25 ಲಕ್ಷ ಕೋಟಿ ಕಳೆದುಕೊಂಡ ಗೌತಮ್‌ ಅದಾನಿ

    ನವದೆಹಲಿ: ಶತಕೋಟಿ ಡಾಲರ್ ಲಂಚ ಮತ್ತು ವಂಚನೆ ಪ್ರಕರಣದಲ್ಲಿ ಗೌತಮ್ ಅದಾನಿ (Gautam Adani) ವಿರುದ್ಧ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ನ್ಯಾಯಾಲಯ ಬಂಧನ ವಾರೆಂಟ್‌ ಹೊರಡಿಸುತ್ತಿದ್ದಂತೆ, ಅದಾನಿ ಗ್ರೂಪ್ (Adani Group) ಕಂಪನಿಗಳ ಷೇರುಗಳ ಮೌಲ್ಯದಲ್ಲಿ ತೀವ್ರ ಕುಸಿತ ಕಂಡಿದೆ.

    ಷೇರು ಬೆಲೆಗಳು 20% ರಷ್ಟು ತೀವ್ರವಾಗಿ ಕುಸಿದಿವೆ. ಸೌರ ವಿದ್ಯುತ್‌ ಗುತ್ತಿಗೆ ಪಡೆದುಕೊಳ್ಳಲು ಭಾರತೀಯ ಅಧಿಕಾರಿಗಳಿಗೆ ಅದಾನಿ ಗ್ರೂಪ್‌ ಲಂಚ ನೀಡಿದೆ ಎಂದು ಯುಎಸ್ ಅಧಿಕಾರಿಗಳು ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. 2023 ರ ಆರಂಭದಲ್ಲಿ ಹಿಂಡೆನ್‌ಬರ್ಗ್ ಆರೋಪದ ನಂತರ ಅದಾನಿ ಷೇರುಗಳು ಅತಿ ದೊಡ್ಡ ನಷ್ಟ ಅನುಭವಿಸಿವೆ. ಇದನ್ನೂ ಓದಿ: ಗುತ್ತಿಗೆ ಪಡೆಯಲು ಭಾರತದಲ್ಲಿ 2,200 ಕೋಟಿ ಲಂಚ – ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್‌

    ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ತನ್ನ ಷೇರು ಮೌಲ್ಯದಲ್ಲಿ 20% ರಷ್ಟು ತೀವ್ರ ಕುಸಿತವನ್ನು ಕಂಡಿತು. ಆದರೆ ಅದಾನಿ ಎನರ್ಜಿ ಸೊಲ್ಯೂಷನ್ಸ್ ಒಂದೇ ರೀತಿಯ ಕುಸಿತವನ್ನು ಅನುಭವಿಸಿತು. ಅದಾನಿ ಗ್ರೀನ್ ಎನರ್ಜಿ 19.17%, ಅದಾನಿ ಟೋಟಲ್ ಗ್ಯಾಸ್ 18.14%, ಅದಾನಿ ಪವರ್ 17.79%, ಮತ್ತು ಅದಾನಿ ಪೋರ್ಟ್ಸ್ 15% ನಷ್ಟು ಇಳಿಕೆ ಕಂಡಿದೆ.

    ಅಂಬುಜಾ ಸಿಮೆಂಟ್ಸ್ 14.99% ರಷ್ಟು ಗಮನಾರ್ಹ ಕುಸಿತವನ್ನು ದಾಖಲಿಸಿದೆ. ಆದರೆ ACC ಷೇರುಗಳು 14.54% ರಷ್ಟು ಕುಸಿಯಿತು. NDTV ಷೇರುಗಳು 14.37% ರಷ್ಟು ಕುಸಿದವು. ಅದಾನಿ ವಿಲ್ಮರ್ ಅದರ ಮೌಲ್ಯದಲ್ಲಿ 10% ಇಳಿಕೆಗೆ ಕಾರಣವಾಗಿದೆ. ಇದನ್ನೂ ಓದಿ: ಅಮೆರಿಕದ ಆರೋಪ ಆಧಾರರಹಿತ: ಅದಾನಿ ಸಮೂಹ

  • ಅಮೆರಿಕದಲ್ಲಿ 10 ಶತಕೋಟಿ ಡಾಲರ್‌ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ

    ಅಮೆರಿಕದಲ್ಲಿ 10 ಶತಕೋಟಿ ಡಾಲರ್‌ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ

    ನವದೆಹಲಿ: ಅಮೆರಿಕದ ಇಂಧನ ಭದ್ರತೆ (US energy security) ಮತ್ತು ಸ್ಥಿತಿಸ್ಥಾಪಕತ್ವ ಮೂಲ ಸೌಕರ್ಯಗಳ (Resilient Infrastructure) ಯೋಜನೆಗೆ 10 ಶತಕೋಟಿ ಡಾಲರ್‌ ಹೂಡಿಕೆ ಮಾಡುವ ಉದ್ದೇಶವನ್ನು ಅದಾನಿ ಸಮೂಹ ಹೊಂದಿದೆ. ಈ ಮೂಲಕ 15,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದು ಅಧ್ಯಕ್ಷ ಗೌತಮ್‌ ಅದಾನಿ (Gautam Adani) ಹೇಳಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ 2ನೇ ಬಾರಿಗೆ ಗೆಲುವು ಸಾಧಿಸಿದ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಭಿನಂದನೆ ಸಲ್ಲಿಸಿರುವ ಅದಾನಿ, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುವ ವಿಶ್ವಾಸ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅದಾನಿ ಸಮೂಹ ತನ್ನ ಜಾಗತೀಕ ಪರಿಣತಿ ಬಳಸಿಕೊಂಡು ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. 10 ಶತಕೋಟಿ ಡಾಲರ್‌ ಹೂಡಿಕೆಗೆ ಅದಾನಿ ಬದ್ಧವಾಗಿದ್ದು, 15,000 ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದೆ ಎಂದು ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

    ಬಿಲಿಯನೇರ್ ಉದ್ಯಮಿಯೂ ಆಗಿರುವ ಡೊನಾಲ್ಡ್ ಟ್ರಂಪ್ (DonaldTrump) ಅವರು ಇತ್ತೀಚೆಗೆ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್‌ ಪಕ್ಷದ ಕಮಲಾ ಹ್ಯಾರಿಸ್ ಅವರನ್ನ ಸೋಲಿಸಿದರು. ಟ್ರಂಪ್‌ ಅವರ ಈ ಗೆಲುವು ಅಮೆರಿಕ ಮತ್ತು ಭಾರತದ (USA And India) ನಡುವಿನ ಸಂಬಂಧ ಉತ್ತಮಗೊಳಿಸುತ್ತದೆ ಎಂದು ಹೇಳಲಾಗಿದೆ. ಈ ಬೆಳವಣಿಗೆಯ ನಡುವೆ ಅದಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಸದ್ಯ ಅಮೆರಿಕದಲ್ಲಿ ಇಂಧನ ಭದ್ರತೆ ಮತ್ತು ಮೂಲ ಸೌಕರ್ಯಗಳಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದರೂ, ನಿರ್ದಿಷ್ಟ ಯೋಜನೆಯ ಟೈಮ್‌ಲೈನ್‌ಗಳ ಬಗ್ಗೆ ಸ್ಪಷ್ಟಪಡಿಸಿಲ್ಲ ಎಂದು ವರದಿಗಳು ಹೇಳಿವೆ.

    ಒಂದು ದಿನದ ಹಿಂದೆಯಷ್ಟೇ ಯೂರೋಪಿಯನ್‌ ಯೂನಿಯನ್‌, ಜರ್ಮನಿ, ಡೆನ್ಮಾರ್ಕ್‌ ಮತ್ತು ಬೆಲ್ಜಿಯಂ ರಾಯಭಾರಿಗಳು ಅದಾನಿ ಸಮೂಹ ನೇತೃತ್ವದ ಗುಜರಾತ್‌ನ ಖಾವ್ಡಾದಲ್ಲಿರುವ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಎನರ್ಜಿ ಪಾರ್ಕ್ ಹಾಗೂ ಮುಂದ್ರಾದಲ್ಲಿರುವ ಬಂದರು ಹಾಗೂ ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಸಂಕೀರ್ಣಕ್ಕೆ ಭೇಟಿ ನೀಡಿದ್ದರು.

    ಈ ವೇಳೆ ಭಾರತದಲ್ಲಿ ಶಕ್ತಿ ಪರಿವರ್ತನೆಯನ್ನು ಹೆಚ್ಚಿಸುವುದು, ಹೈಡ್ರೋಜನ್‌ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಇದರೊಂದಿಗೆ ಜಾಗತಿಕವಾಗಿ ಪಾಲುದಾರಿಕೆಯನ್ನು ಬಲಪಡಿಸುವ ವಿಷಯಗಳ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹೇಳಿದ್ದರು.

  • ಪ್ರೆಗ್ನೆಂಟ್ ಅಂತ ತಿಳಿದ 48 ಗಂಟೆಯಲ್ಲೇ ಮಗುವನ್ನು ಹೆತ್ತ ತಾಯಿ

    ಪ್ರೆಗ್ನೆಂಟ್ ಅಂತ ತಿಳಿದ 48 ಗಂಟೆಯಲ್ಲೇ ಮಗುವನ್ನು ಹೆತ್ತ ತಾಯಿ

    ವಾಷಿಂಗ್ಟನ್: ಅಮೇರಿಕಾದ (United States) ದಂಪತಿಯೊಬ್ಬರಿಗೆ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಇದಾದ 48 ಗಂಟೆಗಳಲ್ಲಿಯೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

    23 ವರ್ಷದ ಪೇಟನ್ ಸ್ಟೋವರ್ ಅವರು ಒಮಾಹಾದಲ್ಲಿ (Omaha) ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೊದಲಿಗೆ ಕೆಲಸದ ಒತ್ತಡದಿಂದ ಯಾವಾಗಲೂ ಆಯಾಸವಾಗುತ್ತದೆ ಎಂದು ಭಾವಿಸಿದ್ದರು. ಆದರೆ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಲು ಪ್ರಾರಂಭಿಸಿದಾಗ, ಅವರ ಕಾಲುಗಳಲ್ಲಿ ಊತವುಂಟಾಗುತ್ತಿದ್ದರಿಂದ ವೈದ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ವೈದ್ಯರು ನೀವು ಗರ್ಭಿಣಿಯಾಗಿದ್ದೀರಾ ಎಂದು ತಿಳಿಸಿದ್ದಾರೆ.

    ಇದರಿಂದ ಅನುಮಾನಗೊಂಡ ಮಹಿಳೆಯ ಪತಿ, ಮತ್ತೊಮ್ಮೆ ಟೆಸ್ಟ್ ಮಾಡಿಸಿಕೊಂಡಗಲೂ ಗರ್ಭಿಣಿಯಾಗಿರುವುದು ದೃಢವಾಗಿದೆ. ಅಲ್ಲದೇ ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ಮಗು ಇರುವುದನ್ನು ನೋಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ನನ್ನನ್ನು ಪ್ಯಾಕೇಜ್ ಸ್ಟಾರ್ ಅನ್ನೋರಿಗೆ ಚಪ್ಪಲೀಲಿ ಹೊಡೀತೀನಿ: ಪವನ್ ಕಲ್ಯಾಣ್ ಆನ್ ಫೈಯರ್

    ಪೇಟನ್ ಸ್ಟೋವರ್ ತನ್ನ ಮೂತ್ರಪಿಂಡಗಳು ಮತ್ತು ಯಕೃತ್ (ಲಿವರ್) ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ಹೇಳಿದಾಗ ವೈದ್ಯರು ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದರು. ಆದರೆ ಗರ್ಭಿಣಿಯಾಗಿರುವ ಬಗ್ಗೆ ಮಾಹಿತಿ ನೀಡಿದ ಅದೇ ರಾತ್ರಿ ಮಹಿಳೆ ಮಗುವಿಗೆ ಜನ್ಮ ನೀಡಿರುವುದಾಗಿ ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಿಂದ ಶ್ರೀಲಂಕಾಗೆ ಶ್ರೀರಾಮ ನಡೆದದ್ದಕ್ಕಿಂತ ಹೆಚ್ಚು ರಾಹುಲ್‌ ಗಾಂಧಿ ಪಾದಯಾತ್ರೆ ಮಾಡ್ತಿದ್ದಾರೆ – ಕಾಂಗ್ರೆಸ್‌ ನಾಯಕ

    ದಂಪತಿ ತಮಗೊಂದು ಮಗು ಬೇಕು ಅಂದುಕೊಂಡಿದ್ದರು. ಆದರೆ ಅವರು ಅಂದುಕೊಂಡಿದ್ದಕ್ಕಿಂತ ಬೇಗನೇ ಮಗು ಜನಿಸಿದ್ದು, ಈ ವಿಚಾರವಾಗಿ ಸಖತ್ ಥ್ರಿಲ್ ಆಗಿದ್ದಾರೆ. ನಾನು ಅವನನ್ನು ಎತ್ತಿಕೊಂಡಿದ್ದೆ. ಅವನಿಗೆ ಹಾಲುಣಿಸಿದೆ. ನಿಜಕ್ಕೂ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಪೇಟನ್ ಸ್ಟೋವರ್ ಸಂತಸ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು ರಸ್ತೆ ಒಂದೇ ಜಾಗದಲ್ಲಿ 30 ಗುಂಡಿಗಳು : ಸರಕಾರಕ್ಕೆ ಛೀಮಾರಿ ಹಾಕಿದ ಸಿನಿ ಸಿಲೆಬ್ರಿಟಿಗಳು

    ಬೆಂಗಳೂರು ರಸ್ತೆ ಒಂದೇ ಜಾಗದಲ್ಲಿ 30 ಗುಂಡಿಗಳು : ಸರಕಾರಕ್ಕೆ ಛೀಮಾರಿ ಹಾಕಿದ ಸಿನಿ ಸಿಲೆಬ್ರಿಟಿಗಳು

    ಬೆಂಗಳೂರು ರಸ್ತೆಗಳು ಬೆಂಗಳೂರಿನ ಮರ್ಯಾದೆಯನ್ನೇ ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕುತ್ತಿವೆ ಎನ್ನುವ ಸುದ್ದಿಯನ್ನು ನಿನ್ನೆಯಿಂದ ಪಬ್ಲಿಕ್ ಟಿವಿ ಬಿತ್ತರಿಸುತ್ತಿದೆ. ಅದರಲ್ಲೂ ಬೆಂಗಳೂರು ಮೈಸೂರು ರಸ್ತೆಯ ಒಂದೇ ಜಾಗದಲ್ಲಿ ಸುಮಾರು 30ಕ್ಕೂ ಅಧಿಕ ಗುಂಡಿಗಳು ಬಿದ್ದಿರುವ ಕುರಿತು ಸತತವಾಗಿ ಪಬ್ಲಿಕ್ ಟಿವಿ ವರದಿ ಮಾಡುತ್ತಿದೆ. ಇದನ್ನೂ ಓದಿ : ನಯನತಾರಾ ಮದುವೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಜರ್?

    ರಸ್ತೆಯ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಿ ಎನ್ನುವ ಪಬ್ಲಿಕ್ ಟಿವಿಯ ಕಳಕಳಿಗೆ ಸ್ಯಾಂಡಲ್ ವುಡ್ ನಟರಾದ ಡಾ.ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ, ನಟಿಯರಾದ ಸಂಯುಕ್ತ ಹೊರನಾಡು, ಮಯೂರಿ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸರಕಾರ ಕೂಡಲೇ ರಸ್ತೆಗಳನ್ನು ಸರಿ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸನ್ನಿ ಲಿಯೋನ್ ಫುಲ್ ಗರಂ: ಓರ್ವ ವ್ಯಕ್ತಿಗೆ ಸನ್ನಿ ಕೊಟ್ರು ಚಪ್ಪಲಿ ಏಟು

    ಒಂದೇ ಜಾಗದಲ್ಲಿ 30 ಗುಂಡಿಗಳನ್ನು ಕಂಡ ಖ್ಯಾತ ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್ ಕೂಡ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ತಗೊಳ್ಳೊ ಪ್ರತೀ ವಾಹನದ ಮೇಲೆ ಡಿಸೈನ್ ಡಿಸೈನ್ ಟ್ಯಾಕ್ಸ್ . ಪೆಟ್ರೋಲ್ ಡಿಸೇಲ್ ಮೇಲಂತು ಮೂಲಬೆಲೆಗೂ ಮೂರುಪಟ್ಟು ಟ್ಯಾಕ್ಸ್, ಹೆಲ್ಮೆಟ್ ಹಾಕದಿದ್ರೆ ಇಷ್ಟು , ಇನ್ಶೂರೆನ್ ಇಲ್ಲಾಂದ್ರೆ ಅಷ್ಟು , ಬೆಲ್ಟ್ ಹಾಕದಿದ್ರೆ ಇಷ್ಟು ಇತ್ಯಾದಿ ಇತ್ಯಾದಿ ಫೈನ್ ಗಳನ್ನು ರಸ್ತೇಲಿ ಅಡ್ಡಗಟ್ಟಿ ವಸೂಲಿ ಮಾಡಲಾಗುತ್ತೆ.  ಇಷ್ಟೆಲ್ಲಾ ಕಿತ್ತು ತಿಂದ ಮೇಲೆ ನಮಗೆ ಕನಿಷ್ಠ ಮೂಲಭೂತ ಸೌಲಭ್ಯ ಕೊಡದ ಆಳುವವರ ಮೇಲೆ ನಾವು ಯಾವ ದಂಡ ವಿಧಿಸಬೇಕು ? ಎಷ್ಟು ದಂಡ ವಿಧಿಸಬೇಕು ಹಾಗಾದರೆ ?  ರಸ್ತೆ ಗುಂಡಿಗೆ ಬಿದ್ದು ಮೂಳೆ ಮುರಿದು ಕೊಳ್ಳುವವರೆಷ್ಟೋ? ಪ್ರಾಣ ತೆತ್ತವರೆಷ್ಟೋ? ಅದರ ಹೊಣೆಯೆಲ್ಲಾ ಹೊರುವವರು ಯಾರು?  ಎಂದು ಕೇಳಿದ್ದಾರೆ.

    ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಈಗಾಗಲೇ ವ್ಯಾಪಾಕವಾಗಿ ಟೀಕೆ ವ್ಯಕ್ತವಾಗುತ್ತಿದ್ದು, ಸರಕಾರಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ. ಈ ಕುರಿತು ಕೂಡಲೇ ಕ್ರಮ ತಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಗುಂಡಿಗೆ ಬಿದ್ದ ರಸ್ತೆಗಳನ್ನು ಟ್ರೋಲ್ ಮಾಡಲಾಗುತ್ತಿದೆ.

  • ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ವಾಷಿಂಗ್ಟನ್: ತಪ್ಪಾಗಿ ಭಾವಿಸಿ 16 ವರ್ಷದ ಮಗಳನ್ನು ತಂದೆಯೇ ಗುಂಡಿಕ್ಕಿ ಕೊಂದ ಘಟನೆ ಓಹಿಯೋದಲ್ಲಿ ನಡೆದಿದೆ.

    ಓಹಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ 16 ವರ್ಷದ ಮಗಳು ಜಾನೆ ಹೇರ್‍ಸ್ಟನ್ ಅನುಮತಿ ಇಲ್ಲದೇ ಮನೆಗೆ ನುಗ್ಗಿದಳು ಎಂದು ತಪ್ಪಾಗಿ ಭಾವಿಸಿ ಗುಂಡಿಕ್ಕಿ ಕೊಂದಿದ್ದಾನೆ. ನಂತರ ಅದು ತನ್ನ ಮಗಳು ಎಂದು ತಿಳಿದು ತಂದೆ ಫುಲ್ ಶಾಕ್ ಆಗಿದ್ದಾರೆ. ತಕ್ಷಣ ಜಾನೆ ಹೇರ್‍ಸ್ಟನ್ ತಾಯಿ ತುರ್ತು ಸೇವೆಗೆ ಕರೆ ಮಾಡಿದ್ದಾಳೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಸ್ಥಳಕ್ಕೆ ಬಂದ ಆಂಬುಲೆನ್ಸ್ ಮೂಲಕ ಹೇರ್‍ಸ್ಟನ್‍ಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.

    ಮಗಳು ಮೃತಪಟ್ಟಿರುವ ಸುದ್ದಿ ತಿಳಿದ ತಕ್ಷಣ ಪೋಷಕರು ದುಃಖದಲ್ಲಿ ಮುಳುಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ವರದಿಗಳ ಪ್ರಕಾರ, ಹೇರ್‍ಸ್ಟನ್ ತಮ್ಮ ಮನೆಗೆ ಹೋಗಿದ್ದಾಳೆ. ಈ ವೇಳೆ ಯಾರೋ ಅನುಮತಿ ಇಲ್ಲದೇ ನಮ್ಮ ಮನೆಗೆ ಬರುತ್ತಿದ್ದಾರೆ ಎಂದು ತಪ್ಪು ಭಾವಿಸಿದ ತಂದೆ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಇದು ನಮ್ಮ ಮಗಳೇ ಎಂದು ಅರಿತ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದೇ ಹೇರ್‍ಸ್ಟನ್ ಮೃತ ಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾಯಿಗಾಗಿ ಜಡೆ ಜಗಳ – ಯುವತಿಯನ್ನ ಕಚ್ಚಿದ ಮಹಿಳೆ!

    ಈ ವರ್ಷ ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಂದೂಕು ದಾಳಿಯಿಂದ ಹಲವು ಜನರು ಮೃತಪಟ್ಟಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಂದೂಕು ಹಿಂಸಾಚಾರ ತೀವ್ರವಾಗಿ ಏರಿದೆ. ಹೀಗಾಗಿ ಬಂದೂಕು ಹೊಂದುವ ಹಕ್ಕುಗಳು ಬೇಕಾ ಎಂಬ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ.

  • ತಂದೆ, ತಾಯಿ ನಂತ್ರ ನಟಿ ಸಂಯುಕ್ತಾ ಹೆಗಡೆಗೆ ಕೊರೊನಾ

    ತಂದೆ, ತಾಯಿ ನಂತ್ರ ನಟಿ ಸಂಯುಕ್ತಾ ಹೆಗಡೆಗೆ ಕೊರೊನಾ

    ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆಗೆ ಕೊರೊನಾ ಸೋಂಕಾಗಿದೆ. ಕೋವಿಡ್ ಪಾಸಿಟಿವ್ ಬಂದಿರುವ ಕುರಿತಾಗಿ ಸಂಯುಕ್ತಾ ತಮ್ಮ ಇನ್‍ಸ್ಟಾಗ್ರಾಂ ಸ್ಟೋರೀಸ್‍ನಲ್ಲಿ ಬರೆದುಕೊಂಡಿದ್ದಾರೆ.

    ಮನೆಯಲ್ಲಿ ಅಪ್ಪ-ಅಮ್ಮನ ನಂತರ ಈಗ ನಟಿ ಸಂಯುಕ್ತಾ ಹೆಗಡೆ ಅವರಿಗೂ ಸೋಂಕಾಗಿದೆ. ಮೊದಲು ಸಂಯುಕ್ತಾ ಅವರ ಅಪ್ಪನಿಗೆ ನಂತರ ಅಮ್ಮನಿಗೆ ಕೊರೊನಾ ಸೋಂಕಾಗಿತ್ತು. ತಮಗೆ ಪಾಸಿಟಿವ್ ಆಗಿರುವ ಕುರಿತು ಸಂಯುಕ್ತಾ ಹೆಗಡೆ ತಮ್ಮ ಇನ್‍ಸ್ಟಾಗ್ರಾಂ ಸ್ಟೋರೀಸ್‍ನಲ್ಲಿ ಪೋಸ್ಟ್ ಮಾಡಿದ್ದರು.

     

    View this post on Instagram

     

    A post shared by Samyuktha Hegde (@samyuktha_hegde)

    25 ದಿನಗಳ ಹಿಂದೆ ಅಪ್ಪ-ಅಮ್ಮನಿಗೆ ಕೊರೊನಾ ಸೋಂಕಾದಾಗ ಬಿಬಿಎಂಪಿ ಅವರು 11 ದಿನಗಳ ನಂತರ ಕರೆ ಮಾಡಿದ್ದರು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ನನಗೆ ಪಾಸಿಟಿವ್ ರಿಪೋರ್ಟ್ ಬಂದ ಒಂದು ಗಂಟೆಯ ನಂತರವೇ ಬಿಬಿಎಂಪಿ ಅವರಿಂದ ಕರೆ ಬಂದಿದೆ. ಜೊತೆಗೆ ವೈದ್ಯರ ಸಲಹೆಯಂತೆ ಮನೆಯಲ್ಲೇ ಕ್ವಾರಂಟೈನ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ತಂದೆ, ತಾಯಿ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.

    ನಿತ್ಯ ಚಿಕ್ಕ-ಪುಟ್ಟ ವ್ಯಾಯಾಮ ಮಾಡುತ್ತಿರುವುದಾಗಿಯೂ ವೀಡಿಯೋ ಹಂಚಿಕೊಂಡಿದ್ದಾರೆ. ಸಂಯುಕ್ತಾ ಹೆಗಡೆ ಆರೋಗ್ಯ ಆದಷ್ಟು ಬೇಗ ಚೇತರಿಕೆಯಾಗಲಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.